Author: Prajatv Kannada

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 145 ಕೋಟಿ ನಗದು, 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ (Size) ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮತದಾನಕ್ಕೆ (Polling) ಒಂದು ದಿನವಷ್ಟೇ ಬಾಕಿಯಿದೆ. ಚುನಾವಣಾ ಆಯೋಗದ (Election Commission) ಹದ್ದಿನ ಕಣ್ಣು ತಪ್ಪಿಸಿ ಅಕ್ರಮಗಳು ಸಾಕಷ್ಟು ನಡೆಯುತ್ತಿವೆ. ಆದರೂ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕಂತೆ ಕಂತೆ ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ಜೊತೆಗೆ ಮದ್ಯ, ಬೆಳ್ಳಿ, ಬಂಗಾರ, ಕುಕ್ಕರ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಈಗಾಗಲೇ ವಶಕ್ಕೆ ಪಡೆದುಕೊಂಡ ವಸ್ತುಗಳನ್ನು 2018ರ ಚುನಾವಣೆಗೆ ಹೋಲಿಸಿದರೇ ಈ ಬಾರಿ ಶೇ. 100ರಷ್ಟು ಹೆಚ್ಚಾಗಿದೆ. ಚುನಾವಣಾ ಆಯೋಗದ ರಣಬೇಟೆ: ನಗದು ಸೀಜ್ – 145.46 ಕೋಟಿ ರೂ. ಉಚಿತ ಕೊಡುಗೆಗಳ ಮೌಲ್ಯ – 24.21 ಕೋಟಿ ರೂ. ವಶಕ್ಕೆ ಪಡೆದ ಮದ್ಯದ ಮೌಲ್ಯ – 83.66 ಕೋಟಿ ರೂ. ವಶಕ್ಕೆ ಪಡೆದ ಡ್ರಗ್ಸ್ ಮೌಲ್ಯ – 33.66…

Read More

ಬೆಂಗಳೂರು: ನಾಳೆ ವಿಧಾನಸಭಾ ಚುನಾವಣೆಗೆ(Karnataka Assembly Election) ವೋಟ್ ಮಾಡಲು ಸಜ್ಜಾಗಿರುವ ಸಿಲಿಕಾನ್ ಸಿಟಿ ಜನರು ಒಂದು ದಿನ ಮುಂಚೆಯೇ ಬೆಂಗಳೂರು ಬಿಟ್ಟು ತಮ್ಮ, ತಮ್ಮ ಊರುಗಳಿಗೆ ಹೊರಟಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಬೆಂಗಳೂರಿನ(Bangalore) ಹಲವು ಬಸ್‌ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬೆಂಗಳೂರಿನ ಬಹುತೇಕ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಹಾಸನ, ತುಮಕೂರು, ಮಂಡ್ಯ, ಶಿರಾ, ಚಿತ್ರದುರ್ಗ, ಮೈಸೂರು, ರಾಮನಗರ ಭಾಗಕ್ಕೆ ತೆರಳುತ್ತಿದ್ದಾರೆ. ಬಸ್‌ಗಳು ನಿಲ್ದಾಣಕ್ಕೆ ಬಂದ ಕೂಡಲೇ ಕೆಲವೇ ಕ್ಷಣದಲ್ಲಿ ತುಂಬಿ ಹೋಗುತ್ತಿವೆ. ಕೆಲ ಊರುಗಳಿಗೆ ತೆರಳಲು ಬಸ್ ಸಿಕ್ಕಿದ್ರೆ, ಕೆಲವು ಭಾಗಗಳಿಗೆ ತೆರಳಲು ಜನರು ಬಸ್‌ಗಾಗಿ ಕಾದು ಕುಳಿತಿದ್ದಾರೆ. KSRTC ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸೀಟ್‌ ಹಿಡಿಯಲು ನಾ ಮುಂದು, ತಾ ಮುಂದು ಅಂತಾ ಮುಗಿಬಿದ್ದಿದ್ದಾರೆ. ನೂಕು ನುಗ್ಗಲಿನಲ್ಲೇ ಬಸ್ ಸೀಟ್ ಹಿಡಿದ ಮತದಾರರು ತಮ್ಮ ಊರಿನತ್ತ ತೆರಳುತ್ತಿದ್ದಾರೆ. ಎಷ್ಟೋ ಜನರಿಗೆ ಸೀಟ್‌ಗಳು ಸಿಗದೆ ಪರದಾಡುತ್ತಿದ್ದಾರೆ. ನಾಳೆ ಬೆಳಗ್ಗೆವರೆಗೂ ಬಸ್ ನಿಲ್ದಾಣಗಳಲ್ಲಿ…

Read More

ಬೆಂಗಳೂರು: ಶಾಲೆಯಲ್ಲಿ ಬಾಂಬ್ (Bomb) ಇರಿಸಿರುವುದಾಗಿ ಬೆದರಿಕೆ ಇ-ಮೇಲ್ (Mail) ಬಂದ ಪ್ರಕರಣ ಅನೇಕಲ್‍ನಲ್ಲಿ (Anekal) ಮಂಗಳವಾರ ನಡೆದಿದೆ.ತಾಲೂಕಿನ ಹೆಬ್ಬಗೋಡಿಯ (Hebbagodi) ಖಾಸಗಿ ಶಾಲೆಯೊಂದರ (Private School) ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಬಂದಿದೆ. ಆತಂಕಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಿರುವ ಹೆಬ್ಬಗೋಡಿ ಪೊಲೀಸರು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಬೆದರಿಕೆ ಇ-ಮೇಲ್ ಬಂದಿದೆ. ಕೂಡಲೇ ದಾಖಲಾತಿ ಪ್ರಕ್ರಿಯೆ ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಹ ಶಾಲೆಗೆ ಇಂತಹ ಬೆದರಿಕೆ ಇ-ಮೇಲ್ ಬಂದಿತ್ತು.

Read More

ಬೆಂಗಳೂರು: ಕರ್ನಾಟಕ ರಾಜ್ಯದ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ (BK Hariprasad) ಸಲಹೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ(Bangalore) ಟ್ವೀಟ್ ಮಾಡಿರುವ ಅವರು, ಪರಿಶಿಷ್ಟ ಪಂಗಡ ಸ್ಥಾನಮಾನ ಕುರಿತಂತೆ ಕೋರ್ಟ್‌ ಆದೇಶವೊಂದನ್ನು ವಿರೋಧಿಸಿ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಳೆದನಂತರ ಉಂಟಾಗಿರುವ ಗಲಭೆಗಳಿಂದ ಮಣಿಪುರ ನಲುಗಿ ಹೋಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕಿರುವ ಪ್ರಧಾನಿ ಮೋದಿ ಕೇವಲ ಚುನಾವಣೆಗಾಗಿ ಕರ್ನಾಟಕದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ.  ಮೈಸೂರಿನ ಗಜರಾಜನ ಸಾವಿಗೆ ಶೋಕ ಸಂತಾಪ ಹೇಳುವ ಪ್ರಧಾನಿಗಳೇ, ಕರ್ನಾಟಕ ರಾಜ್ಯದ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ’ ಎಂದು ಒತ್ತಾಯಿಸಿದ್ದಾರೆ. 55ಕ್ಕೂ ಹೆಚ್ಚು ಜನರ ಸಾವಾಗಿದೆ. ಹಿಂಸಾಚಾರದಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಕುಟುಂಬಗಳ ಅರಣ್ಯ ರೋಧನ ಮುಗಿಲು ಮುಟ್ಟಿದೆ.56ಇಂಚಿನ ಎದೆಯಲ್ಲಿ ಕಿಂಚಿತ್ತಾದರೂ ಮಾನವೀಯತೆ ಇರಬೇಕಲ್ವಾ ಪ್ರಧಾನಿಗಳೇ?” ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

Read More

ಬೆಂಗಳೂರು: ಪೊಲೀಸ್ ಇಲಾಖೆ(Police Department) ಹೆಸರಲ್ಲಿ ಅನಧಿಕೃತ ವೆಬ್ ಲಿಂಕ್ ಮೂಲಕನಕಲಿ ನೇಮಕಾತಿ ಪ್ರಕಟಣೆಯನ್ನ ದುಷ್ಕರ್ಮಿಗಳು ಹೊರಡಿಸಿದ್ದಾರೆ. ಹೌದು ksprecruitment.co.in ಹೆಸರಲ್ಲಿ ಅನಧಿಕೃತ ಲಿಂಕ್ ತೆರೆದಿದ್ದು, ಅದು ಅನಧಿಕೃತ ವೆಬ್ ಲಿಂಕ್ ಮೂಲಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ವೆಬ್ ಸೈಟ್ ಕನೆಕ್ಟ್ ಮಾಡಿದ್ದಾರೆ. ಅದರಲ್ಲಿ ಕೆಎಸ್​ಪಿ ರಿಕ್ರೂಟ್ಮೆಂಟ್ ಟೆಕ್ನಿಕಲ್ ಸ್ಟಾಪ್ ಎಂಬ ಪುಟ ತೆರೆದು, 25 ಟೆಕ್ನಿಕಲ್ ಸ್ಟಾಪ್ ನೇಮಕಾತಿ ಇದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಅರ್ಜಿ ಶುಲ್ಕ 2 ಸಾವಿರ ಇದ್ದು ಯುಪಿಐ ಮೂಲಕ ಹಣ ಪಾವತಿಸಲು ಸೂಚಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಧಿಕೃತ ವೆಬ್ ಲಿಂಕ್ ತೆರೆದ ದುಷ್ಕರ್ಮಿಗಳಿಗಾಗಿ ಶೋಧಕಾರ್ಯ ಆರಂಭವಾಗಿದೆ. 545 ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ; ಭಾಗಿಯಾದವರ ವಿರುದ್ದ ಕ್ರಮ ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್​ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ…

Read More

ಜೈಪುರ: ಐಪಿಎಲ್‌ನಲ್ಲಿ (IPL) ನೋಬಾಲ್‌ ವಿವಾದಗಳು (Noball Controversy) ಇದೇ ಮೊದಲೇನಲ್ಲಾ. ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ನೋಬಾಲ್‌ ಇದ್ದೇ ಇರುತ್ತವೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ಡೆತ್‌ ಓವರ್‌ಗಳಲ್ಲಿ ನೀಡುವ ನೋಬಾಲ್‌ ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿವೆ. ಭಾನುವಾರ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ಹಾಗೂ ಹೈದರಾಬಾದ್‌ (Sunrisers Hyderabad) ನಡುವಿನ ಪಂದ್ಯದಲ್ಲಿ ರಾಜಸ್ಥಾನ್‌ ಆಟಗಾರ ಸಂದೀಪ್‌ ಶರ್ಮಾ (Sandeep Sharma) ನೀಡಿದ ನೋಬಾಲ್‌ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದ ಸಂದೀಪ್‌ ಶರ್ಮಾ 19 ರನ್‌ ಬೇಕಿದ್ದಾಗ 14 ರನ್‌ ಚಚ್ಚಿಸಿಕೊಂಡಿದ್ದರು. ಕೊನೇ ಎಸೆತದಲ್ಲಿ 5 ರನ್‌ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಅಬ್ದುಲ್‌ ಸಮದ್‌ ಸಿಕ್ಸ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿದ್ದರು. ಆದ್ರೆ ಸಂದೀಪ್‌ ಶರ್ಮಾ ಕ್ರೀಸ್‌ನಲ್ಲಿ ನೋಬಾಲ್‌ ಕೊಟ್ಟಿದ್ದರು. ಇದರಿಂದ ರಾಜಸ್ಥಾನ್‌ ತಂಡಕ್ಕೆ ಪಂದ್ಯಗೆದ್ದ ಖುಷಿ ಮಿಂಚಿನಂತೆ ಮಾಯವಾಗಿ ಸೋಲಿನ ಕಹಿ ಅನುಭವಿಸುವಂತಾಯಿತು. ಇದಾದ ಬಳಿಕ…

Read More

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇವತ್ತೊಂದು ದಿನ ಮಾತ್ರವೇ ಭಾಕಿ ಇದೆ. ನಾಳೆ (ಮೇ 10) ನಡೆಯಲಿರುವ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ಮಾಡಲಾಗಿದ್ದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಮತದಾರರು ಕೂಡ ತಮ್ಮ ಮತ ಚಲಾಯಿಸಲು ಮುಂದಾಗಿದ್ದು ಉತ್ತಮ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಇವರ ಜೊತೆ ನಟ, ನಟಿಯರು ಕೂಡ ಸೇರಿದ್ದು ಯಾರ್ಯಾರು, ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ ಚಲಾಯಿಸಲಿರುವ ಕಲಾವಿದರು ಗಣೇಶ್: ಆರ್​​ಆರ್​ ನಗರ ಶಿಲ್ಪಾ ಗಣೇಶ್: ಆರ್​​ಆರ್​ ನಗರ ರಚಿತಾ ರಾಮ್: ಆರ್​​ಆರ್​ ನಗರ ಅಮೂಲ್ಯ: ಆರ್​​ಆರ್​ ನಗರ ದಿಗಂತ್: ಆರ್​​ಆರ್​ ನಗರ ಐಂದ್ರಿತಾ ರೇ: ಆರ್​​ಆರ್​ ನಗರ ಅವಿನಾಶ್: ಆರ್​​ಆರ್​ ನಗರ​ ಮಾಳವಿಕಾ ಅವಿನಾಶ್: ಆರ್​​ಆರ್​ ನಗರ ನೆನಪಿರಲಿ ಪ್ರೇಮ್: ಆರ್​​ಆರ್​ ನಗರ​ ವಸಿಷ್ಠ ಸಿಂಹ: ಆರ್​ಆರ್​ ನಗರ ಹರಿಪ್ರಿಯಾ: ಆರ್​​ಆರ್​ ನಗರ ಸದಾಶಿವನಗರದಲ್ಲಿ ಮತ ಚಲಾಯಿಸಲಿರುವ ನಟ, ನಟಿಯರು ರಾಘವೇಂದ್ರ ರಾಜ್​​ಕುಮಾರ್: ಸದಾಶಿವ…

Read More

‘ಆರ್‌ಆರ್‌ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಜ್ಯೂ.ಎನ್‌ಟಿಆರ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜ್ಯೂ ಎನ್ ಟಿ ಆರ್ ತೊಡಗಿಕೊಂಡಿದ್ದು ಈ ಮಧ್ಯೆ ಪ್ರಶಾಂತ್ ನೀಲ್ ನಿರ್ದೇಶನದ ತಾರಕ್ ಚಿತ್ರದ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ಜ್ಯೂ.ಎನ್‌ಟಿಆರ್ ಮಂದಿನ ಸಿನಿಮಾಗೆ ನಾಯಕಿ ಫೈನಲ್ ಆಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಬ್ಯುಸಿಯಾಗಿದ್ದಾರೆ. ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಕನ್ನಡದ ನಟಿ ಚೈತ್ರಾ ರೈ ಸೇರಿದಂತೆ ಹಲವರು ಶೂಟಿಂಗ್ ಭಾಗಿಯಾಗಿದ್ದು ಈ ಮಧ್ಯೆ ಚಿತ್ರತಂಡಕ್ಕೆ ನಾಯಕಿಯಾ ಆಯ್ಕೆಯಾಗಿದ್ದಾರೆ. ಕೆಜಿಎಫ್ 2 ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್, ಸಲಾರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಎನ್‌ಟಿಆರ್ 30 ಬಳಿಕ ತಾರಕ್, ಪ್ರಶಾಂತ್ ನೀಲ್ ಜೊತೆ ಕೈಜೋಡಿಸಲಿದ್ದಾರೆ. ಸಲಾರ್ ಬಳಿಕ ಜ್ಯೂ.ಎನ್‌ಟಿರ್ 31ನೇ ಚಿತ್ರಕ್ಕೆ ನೀಲ್ ನಿರ್ದೇಶನ ಮಾಡಲಿದ್ದಾರೆ. ತಾರಕ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಫೈನಲ್ ಆಗಿದ್ದಾರೆ. ಇದೇ ಮೊದಲ ಭಾರಿಗೆ ಶ್ರದ್ಧಾ ಹಾಗೂ…

Read More

ಇಂಡಿಯನ್ ಕ್ರಿಕೆಟರ್ ಶುಭಮನ್ ಗಿಲ್ ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿಯರ ವಿಷಯದಲ್ಲೂ ಆಗಾಗ ಸದ್ದು ಮಾಡುವ ಶುಭಮನ್ ಗಿಲ್ ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಣ್ಣದ ಲೋಕಕ್ಕೆ ಶುಭಮನ್ ಗಿಲ್ ಕಾಲಿಟ್ಟಿದ್ದು ಈ ಮೂಲಕ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕ್ರಿಕೆಟ್ ಕ್ಷೇತ್ರಕ್ಕೂ ಬಾಲಿವುಡ್‌ಗೂ ಸಾಕಷ್ಟು ನಂಟಿದೆ. ಇತ್ತೀಚೆಗೆ ಶುಭಮನ್ ಗಿಲ್ ಕ್ರಿಕೆಟ್‌ಗಿಂತ ಸಾರಾ ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸದ್ದು ಮಾಡಿದ್ದರು. ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯ ವಿಚಾರವಾಗಿಯೂ ಸದ್ದು ಮಾಡಿದ್ದರು. ಇದೀಗ ಶುಭಮನ್ ಗಿಲ್ ಅಕ್ರಾಸ್ ದಿ ಸ್ಪೈಡರ್ ವರ್ಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ- ಪಂಜಾಬಿ ವರ್ಷನ್‌ನಲ್ಲಿ ಮುಖ್ಯ ನಾಯಕನಿಗೆ ಶುಭಮನ್ ವಾಯ್ಸ್ ನೀಡಿದ್ದಾರೆ. ಈ ಅನಿಮೇಟೆಡ್ ಟ್ರೈಲರ್ ಜೂನ್ 2ರಂದು ರಿಲೀಸ್ ಆಗಲಿದೆ. ಕ್ರಿಕೆಟ್ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿದ ಶುಭಮನ್ ಗಿಲ್, ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಕಂಠದಾನ ಮಾಡುವ ಮೂಲಕ ಬಣ್ಣದ…

Read More

ಸದಾ ಚಿತ್ರ, ವಿಚಿತ್ರ ಬಟ್ಟೆಗಳನ್ನ ಧರಿಸಿ ಸುದ್ದಿಯಾಗುತ್ತಿದ್ದ ನಟಿ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟ ನಟಿಯರ ಮೇಲೆ ಗರಂ ಆಗ್ತಿದ್ದಾರೆ. ಮೊನ್ನೆಯಷ್ಟೇ ರಣಬೀರ್ ಕಪೂರ್ ಮೇಲೆ ಆರೋಪಗಳ ಸುರಿಮಳೆಗೈದಿದ್ದ ಉರ್ಫಿ ಇದೀಗ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದೇ ಸಮಯದಲ್ಲೇ ನಟಿ ಕಂಗನಾ ರಣಾವತ್ ಅವರನ್ನು ಹೊಗಳಿದ್ದಾರೆ. ಕಾರ್ಯಕ್ರಮವೊಂದಕ್ಕೆ ಉರ್ಫಿ ಅತಿಥಿಯಾಗಿ ಹೋಗಬೇಕಿತ್ತಂತೆ. ಆದರೆ ಮಾಧುರಿ ದೀಕ್ಷಿತ್ ಕಾರಣದಿಂದಾಗಿ ಹೋಗಲು ಆಗಲಿಲ್ಲವಂತೆ. ತಮಗೆ ಇದರಿಂದಾಗಿ ಅವಮಾನ ಆಗಿದೆ ಎಂದು ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ಬಗ್ಗೆ ಕಂಗನಾ ಆಗಾಗ್ಗೆ ಉರಿದು ಬೀಳುತ್ತಾರೆ. ಅವರು ಯಾಕೆ ಹಾಗೆ ಮಾಡುತ್ತಾರೆ ಎಂದು ನನಗೆ ಬೇಸರ ಅನಿಸುತ್ತಿತ್ತು. ಈಗೀಗ ನನಗೆ ಅರ್ಥವಾಗುತ್ತಿದೆ ಎಂದು ನಟಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉರ್ಫಿ, ‘ಕಾರ್ಯಕ್ರಮವೊಂದರ ಆಯೋಜಕರು ನನಗೆ ಕರೆ ಮಾಡಿ, ಅತಿಥಿಯಾಗಿ ಬರಬೇಕು ಎಂದು ಹೇಳಿದ್ದರು. ನಾನು ಕೂಡ ಒಪ್ಪಿಕೊಂಡಿದ್ದೆ. ನಿಗದಿ ಕೆಲಸಗಳನ್ನು ಮುಂದಕ್ಕೆ…

Read More