ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿದೆ. ಇದಕ್ಕೆಲ್ಲ ಕಾರಣ ಆಗಿರೋದು ಲಾರೆನ್ಸ್ ಬಿಷ್ಣೋಯ್. ಈತ ಸಲ್ಮಾನ್ ಖಾನ್ನ ಕೊಲೆ ಮಾಡೋದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇದ್ದ. ಈ ಪ್ರಕರಣವನ್ನು ಸೆಟಲ್ಮೆಂಟ್ ಮಾಡಿಸೋದಾಗಿ ವ್ಯಕ್ತಿಯೋರ್ವ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದ. ಇದಕ್ಕಾಗಿ ಆತ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈಗ ಈ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ಮಿಸ್ ಆಗಿ ಮೆಸೇಜ್ ಹೋಯ್ತು’ ಎಂದಿದ್ದಾನೆ. ‘ಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು. ಇದಾದ ಬಳಿಕ ಪ್ರಕರಣ ಸೆಟಲ್ ಮಾಡಲು ಐದು ಕೋಟಿ ರೂಪಾಯಿ ಕೇಳಿದ್ದ. ಈಗ ಇದೇ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ನನ್ನ ಸಂದೇಶ ಮಿಸ್ ಆಗಿ ಹೋಗಿದೆ. ಈ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಆತ ಈಗ ಸಂದೇಶ ಕಳುಹಿಸಿದ್ದಾನೆ.…
Author: Prajatv Kannada
ಬಳ್ಳಾರಿ:- ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ i ಇಂದು ಕುಟುಂಬಸ್ಥರು ಆಗಮಿಸಲಿದ್ದಾರೆ. https://youtu.be/iPZT5SOBOJ4?si=DlzTBIoLgdx9UE-_ ಇಂದು ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಕುಟುಂಬಸ್ಥರು ಬರಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ವಿಜಿಟರ್ಸ್ ಸಮಯಕ್ಕೆ ಕುಟುಂಬಸ್ಥರು ಬರಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ಸುಶಾಂತ್ ನಾಯ್ಡು ಇಂದು ಸಂಜೆಗೆ ಆಗಮಿಸಲಿದ್ದಾರೆ. ಸಂಜೆ ವಿಜಿಟರ್ಸ್ ಸಮಯದಲ್ಲಿ ಕುಟುಂಬಸ್ಥರು ಭೇಟಿ ನೀಡಲಿದ್ದಾರೆ
ಹಾಸನ:- ಡಿಸಿಆರ್‌ಬಿ ಪೊಲೀಸರ ಕಾರ್ಯಚರಣೆ ನಡೆಸಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ. https://youtu.be/1qmxeifuzQk?si=XBnu_ep3nlxhwJ2z = ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂದು ಗುರುತಿಸಲಾಗಿದೆ. ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವನ ಮನೆಯಲ್ಲಿ ಈ ಮೂವರು ವಾಸವಿದ್ದರು. ಜುಬೇರ್ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಮೂವರು ಪಶ್ಚಿಮಬಂಗಾಳದ ವಿಳಾಸವಿರುವ ನಕಲಿ ಆಧಾರ್‌ಕಾರ್ಡ್ ಹೊಂದಿದ್ದರು. ನುಸುಳುಕೋರರನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಯಲಹಂಕ:-ಬೆಂಗಳೂರು ನಗರದ ಯಲಹಂಕ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿದ್ದು, ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯಲಹಂಕ ತಗ್ಗುಪ್ರದೇಶ ಜಲಾವೃತ ಆಗಿದೆ. https://youtu.be/1qR5SkJJC28?si=cJtStGWdJPImdey_ ಯಲಹಂಕ ಕೆರೆಕೋಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲದಿಗ್ಭಂಧನ ಆಗಿದ್ದು, ಯಲಹಂಕ ರೈತರ ಸಂತೆ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ. ಮುಖ್ಯವಾಗಿ ಜಕ್ಕೂರು ರಸ್ತೆ ಕೆರೆಯಂತಾಗಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೈಕ್, ಕಾರು, ಟ್ಯಾಕ್ಸಿ ಕೆಟ್ಟು ನಿಂತು ಸಮಸ್ಯೆ ಎದುರಿಸುವಂತಾಗಿದೆ. ಕೆಟ್ಟುನಿಂತ ಬೈಕ್ಗಳನ್ನ ಕೆರೆಯಂತಾದ ರಸ್ತೆಯಲ್ಲೆ ವಾಹನ ಸವಾರರು ತಳ್ಳಿದ್ದಾರೆ. ಇನ್ನೂ ಭಾರಿ ಮಳೆಯಿಂದ ಸಂಭವಿಸಿದ ಅವಾಂತರದಿಂದ ಜನರ ಪರದಾಟ ಕೇಳುವವರಿಲ್ಲ ಎಂಬಂತಾಗಿದೆ. ಒಂದು ಗಂಟೆಕಾಲ ಯಲಹಂಕ ಜಕ್ಕೂರು ರಸ್ತೆಯಲ್ಲೇ ನೀರು ನಿಂತಿದೆ. ಜೋರು ಮಳೆ ನೀರಿಂದ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡು ಸಮಸ್ಯೆ ಎದುರಾಗಿದೆ. ಜಕ್ಕೂರು ರಸ್ತೆಯ ಸೆಂಚುರಿ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಉಕ್ಕಿಹರಿದು ತೀವ್ರ ಸಮಸ್ಯೆ ಎದುರಾಗಿದೆ. ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ ಗೆ ನೀರು ನುಗ್ಗಿ ತೊಂದರೆ ಆಗಿದೆ. ಸುರಭಿ…
ದಾಸರಹಳ್ಳಿ: ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಬ್ಬಿಗೆರೆ ಕೆರೆ ಕೋಡಿ ರಸ್ತೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. https://youtu.be/iF4LCe_BgII?si=UbAphNEHo9mhXZs4 ಭಾರೀ ಮಳೆ ಹಿನ್ನೆಲೆ, ಎರಡು ಲೇಔಟ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಆಗಿದ್ದು, ಅಬ್ಬಿಗೆರೆ ರಸ್ತೆ ಹಾಗೂ ನಿಸರ್ಗ ಲೇಔಟ್ ನಡುವೆ ರಸ್ತೆ ಸಂಪರ್ಕ ಕಡಿತ ಮಾಡಲಾಗಿದೆ. ಕೆರೆ ಕೊಡಿ ಬಿದ್ದ ಹಿನಲ್ಲೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಸ್ಥಳಕ್ಕೆ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಿಬಿಎಂಪಿ ವಲಯ ಆಯುಕ್ತ ಗೀರೀಶ್ ಭೇಟಿ ನೀಡಿದ್ದು, ಕೂಡಲೇ ರಸ್ತೆ ಸರಿ ಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ
ಧಾರವಾಡ: ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಹಂತದ ಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. https://youtu.be/qhet4slNmJQ?si=q7tRTdGz_eZo7ZlT ಜಿಲ್ಲಾ ಪಂಚಾಯತಿ ಮೊದಲ ಮಹಡಿಯಲ್ಲಿ ಸಮಸ್ಯೆಗಳ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಎರಡನೇ ಮಹಡಿಯಲ್ಲಿರುವ ಸಭಾಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರು ಸಮಸ್ಯೆಗಳಿರುವ ಅರ್ಜಿ ಸಲ್ಲಿಸಿದವರನ್ನು ಕರೆಯಿಸಿ ಅವರ ಅಹವಾಲು ಆಲಿಸಿ ಸ್ಥಳದಲ್ಲೇ ಕೆಲವೊಂದಿಷ್ಟು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರು. ತಮ್ಮೂರಿನಲ್ಲಿ ರಸ್ತೆ, ಬೀದಿ ದೀಪ, ಶಾಲೆಗೆ ಬೇಕಾದ ಮೂಲ ಸೌಕರ್ಯ, ಅನುಕಂಪದ ಆಧಾರದ ಮೇಲೆ ಕೆಲಸ, ವರ್ಗಾವಣೆ, ಪಾಲಿಕೆಯಿಂದ ಆಗಬೇಕಾದ ಕೆಲಸ ಸೇರಿದಂತೆ ಇತ್ಯಾದಿ ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಸರಮಾಲೆಯೇ ಸಚಿವರಿಗೆ ದರ್ಶನವಾಯಿತು. ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ…
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದುಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ ಸುಧಾಕರ್. ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ. https://youtu.be/ZTkROI9iS6g?si=A5aO0RZs2Jd76rNL ಬುಧವಾರ ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಂತೆ, ಸೋಮವಾರ ಪೆರೇಸಂದ್ರದಲ್ಲಿ ಸಂತೆ. ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು. ಅಂದಹಾಗೆ ಚಿಕ್ಕಬಳ್ಳಾಪುರದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿದ್ದಾರೆ. ಕ್ರಷರ್ ಟಿಪ್ಪರ್ ಗಳಿಗೆ ಕಡಿವಾಣ ಹಾಕಲು ಸಾಧ್ಯ ಆಗ್ತಿಲ್ಲವಂತೆ ಹಾಗಾಗಿ ಕೈಗೆ ಬಳೆ ತೊಟ್ಟುಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ. ಜಾತಿ ಜನಗಣತಿ ಬಿಡುಗಡೆ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಇತಿಹಾಸದಲ್ಲಿ ಖಳ ನಾಯಕ ಆಗ್ತಾರೆ. ಯಾರೊ ರಾಜಕೀಯ ನಾಯಕರ ಆಣತಿಯಂತೆ ಜಾತಿ ಲೆಕ್ಕಾಚಾರ ಬರೆಸಲಾಗಿದೆರಾಜ್ಯದಲ್ಲಿ ಯಾರ ಮನೆಗೆ ಹೋಗಿ ಸರ್ವೆ ಮಾಡಲಾಗಿದೆ ಹೇಳಿ? ನನ್ನ ಮನೆಗೆ ಬಂದು ಗಣತಿ ಮಾಡಿಲ್ಲ. ಕೆಳಜಾತಿ ಮೇಲ್ಜಾತಿ ಮಧ್ಯೆ…
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸುವುದಕ್ಕಾಗಿ ನೈಋತ್ಯ ರೈಲ್ವೆರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. https://youtu.be/iF4LCe_BgII?si=dHNnzRR5IE-gW63d ರೈಲುಸಂಖ್ಯೆ 07311: ನವೆಂಬರ್ 2 ರಂದು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು, ಮರುದಿನ ದಿನ ಬೆಳಗ್ಗೆ 11.25ಕ್ಕೆ ಮಂಗಳೂರು ಜಂಕ್ಷೆನ್ ತಲುಪಲಿದೆ. ರೈಲುಸಂಖ್ಯೆ 07312: ನವೆಂಬರ್ 3 ರಂದು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ನವೆಂಬರ್ 4 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ. ಈ ರೈಲು ಎರಡೂ ದಿಕ್ಕುಗಳಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ…
ಬೆಂಗಳೂರು: ಚನ್ನಪಟ್ಟಣದಲ್ಲಿ ಡಿ.ಕೆ ಸುರೇಶ್ ಸ್ಪರ್ಧೆಗೆ ಒತ್ತಡ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್ಚುಕಡಿಮೆ ಎಲ್ಲಾ ಫೈನಲ್ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ ಅವರು ನೋಡಿಕೊಳ್ತಾರೆ. https://youtu.be/1qmxeifuzQk?si=vzmUvQDrSPAERhsa ನಮ್ಮ ಪ್ರಸ್ತಾವನೆಯನ್ನ ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.ಸಚಿವರ ಸಭೆಯಲ್ಲೇ ಆಲ್‌ಮೋಸ್ಟ್ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದೇವೆ. ನಮ್ಮ ಸಚಿವರ ಅಭಿಪ್ರಾಯ ಕೇಳಿ, ಅವರಿಗೂ ಜವಾಬ್ದಾರಿ ಕೊಟ್ಟಿದ್ದೇವೆ. ಎಲೆಕ್ಷನ್ ಕಮೀಟಿ ಸಭೆ ಕರೆಯೋ ಬದಲು. ಕ್ಯಾಬಿನೆಟ್ ಮಿನಿಸ್ಟರ್ಸ್ ಹಾಗೂ ಯಾರಿಗೆ ಜವಾಬ್ದಾರಿ ವಹಿಸಿದ್ವಿ ಅವರನ್ನೆಲ್ಲ ಕೇಳಿದ್ದೇವೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳಿಸಿಕೊಡುತ್ತೇವೆ. ಹೈಕಮಾಂಡ್ ನಾಯಕರು ಬೇರೆಯವರೊಂದಿಗೂ ವೈಯಕ್ತಿಕವಾಗಿ ಮಾತನಾಡುತ್ತಾರೆ. ಮಾತನಾಡಿ ತಿರ್ಮಾನ ಮಾಡುತ್ತಾರೆ. ಎಷ್ಟು ಅರ್ಜಿ ಬಂದಿದ್ದಾವೆ ಎಂಬುದನ್ನ ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗೀಸ್ ಬಳಸುತ್ತಾರೆ. ಅದರಲ್ಲೂ ಚಳಿಗಾಲ ಆರಂಭವಾಗಿದ್ದು, ಹೆಚ್ಚಾಗಿ ಬಿಸಿ ನೀರನ್ನು ಬಳಸುತ್ತಾರೆ. ಗೀಸರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಮಳೆಗಾಲ, ಚಳಿಗಾಲ ಸೀಸನ್ ಯಾವುದೇ ಇರಲಿ ಸ್ನಾನ ಮಾತ್ರ ಕಡ್ಡಾಯವಾಗಿ ಮಾಡಲೇಬೇಕು. ಬಹುತೇಕ ಮಂದಿ ಸ್ನಾನ ಮಾಡಲು ಬಿಸಿ ನೀರನ್ನು ಬಳಸುತ್ತಾರೆ. ಹಾಗಾಗಿ ಮನೆಯಲ್ಲಿ ಗೀಸರ್ ಉಪಯೋಗಿಸುತ್ತಾರೆ. ಆದರೆ ಗೀಸರ್ ಬಳಸುವಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳದಿದ್ದರೆ, ಅದು ಸ್ಫೋಟಗೊಳ್ಳಬಹುದು. ತಣ್ಣೀರಿನಿಂದ ಸ್ನಾನ ಮಾಡುವುದು ಚಳಿಗಾಲದಲ್ಲಿ ಸ್ವಲ್ಪ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ನೀವು ಗೀಸರ್ ಖರೀದಿಸಲು ಅಥವಾ ಬಳಸಲು ಯೋಚಿಸುತ್ತಿದ್ದರೆ, ಗೀಸರ್‌ನಿಂದ ಉಂಟಾಗುವ ಅಪಘಾತಗಳನ್ನು ತಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು. ಹೆಚ್ಚು ಹೊತ್ತು ಆನ್ ಇಡಬೇಡಿ: ಗೀಸರ್ ಅನ್ನು ನಿರಂತರವಾಗಿ ಓಡಿಸುವುದು ಅಥವಾ ಅದನ್ನು ಆಫ್ ಮಾಡಲು ಮರೆಯುವುದು ತುಂಬಾ ಅಪಾಯಕಾರಿ. ಇದು ಅಧಿಕ ತಾಪಕ್ಕೆ ತಿರುಗುತ್ತದೆ. ಬಳಿಕ ಇದು ಸ್ಫೋಟಕ್ಕೆ ಕಾರಣವಾಗಬಹುದು. ಗೀಸರ್ ಥರ್ಮೋಸ್ಟಾಟ್ ಸರಿಯಾಗಿ ಕೆಲಸ ಮಾಡಬೇಕು. ಇದು ನೀರಿನ ತಾಪಮಾನವನ್ನು ನಿಯಂತ್ರಣದಲ್ಲಿಡುತ್ತದೆ. ಸುರಕ್ಷತಾ ಕವಾಟದ…