ಹುಬ್ಬಳ್ಳಿ: ಯಾವುದೇ ಸಮಯದಲ್ಲಿ ನಿವೃತ್ತಿ ಘೋಷಣೆ ಮಾಡಲು ಸಿದ್ಧ. ಆದರೆ ಅದು ಗೌರವಯುತವಾಗಿ ಆಗಬೇಕು. ಈ ರೀತಿಯಲ್ಲಿ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( Jagadish Shettar) ಹೇಳಿದರು. ದೆಹಲಿಗೆ (Delhi) ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಆಕ್ಸಿಡೆಂಟ್ ಆಗಿ ರಾಜಕೀಯಕ್ಕೆ ಬಂದವನು. ಯಾವುದೇ ಸಮಯದಲ್ಲಿ ನಿವೃತ್ತಿ ಆಗಲು ಸಿದ್ಧನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ಪಾಸಿಟಿವ್ ಹೋಪ್‍ನಲ್ಲಿ ನಾನಿದ್ದೇನೆ ಎಂದು ತಿಳಿಸಿದರು. ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗುತ್ತಿದ್ದೇನೆ. ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿಯಾಗಬೇಕಿತ್ತು. ಆದರೆ ವಿಮಾನಕ್ಕೆ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್‍ವೈ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದರು. ಯಾವುದೇ ಸ್ಥಾನಮಾನ ಇಲ್ಲದೇ…
Author: Prajatv Kannada
ಹಾವೇರಿ: ವಿಧಾನ ಪರಿಷತ್ ಸದಸ್ಯತ್ವ (MLC) ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಜಿ ಸಚಿವ ಆರ್.ಶಂಕರ್ (R Shankar) ನಿರ್ಧರಿಸಿದ್ದಾರೆ. ರಾಣೆಬೆನ್ನೂರು ಬಿಜೆಪಿ ಟಿಕೆಟ್ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬುಧವಾರ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅತ್ತ ಕಾಂಗ್ರೆಸ್ ಟಿಕೆಟ್‍ಗೂ ಪ್ರಯತ್ನ ಪಟ್ಟು ನಿರಾಸೆಯಾಗಿದೆ. ಇತ್ತ ಬಿಜೆಪಿ ಟಿಕೆಟ್ ಕೂಡಾ ಮಿಸ್ ಆಗಿದೆ. ಹೀಗಾಗಿ ಶಂಕರ್ ಬೇಸರಗೊಂಡಿದ್ದಾರೆ ಎಂದು ಅವರು ಆಪ್ತ ಮೂಲಗಳು ಮಾಹಿತಿ ನೀಡಿವೆ. ಆರ್ ಶಂಕರ್ ಅವರು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಅದೀಕೃತವಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ನಾಳೆ ಬೆಂಗಳೂರಿನಿಂದ ರಾಣೇಬೆನ್ನೂರಿಗೆ ವಾಪಸ್ ಆಗಲಿದ್ದಾರೆ.
ಹುಬ್ಬಳ್ಳಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ದೆಹಲಿಗೆ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಗದೀಶ್ ಶೆಟ್ಟರ್ ದೆಹಲಿಗೆ ಪ್ರಯಾಣ ಬೆಳೆಸಿದರು. ಮೊದಲ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಅವರ ಹೆಸರು ಇರದ ಕಾರಣ ಸಾಕಷ್ಟು ಅವರ ಅಭಿಮಾನಿಗಳು ಶೆಟ್ಟರ್ ನಿವಾಸಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದರು ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಜೆ ಫೋನ್ ಮಾಡಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಶೆಟ್ಟರ್ ದೂರವಾಣಿಯಲ್ಲಿಯೇ ನಿನ್ನೆ ನಡ್ಡಾ ಜೊತೆಗೆ ಮಾತನಾಡಿದ್ದು ಅವರ ಸ್ಟ್ಯಾಂಡ್ ನಾನು ತಿಳಿಸಿದ್ದರು ಎನ್ನಲಾಗಿದೆ .ನನಗೆ ಟಿಕೆಟ್ ಸಿಗೋ ಹೋಪ್ಸ್ ಇಟ್ಟುಕೊಂಡು ದೆಹಲಿಗೆ ಹೊರಟಿದ್ದಾರೆ. ದೆಹಲಿಗೆ ಹೋಗುವ ಮುನ್ನ ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರೀಯ ನಾಯಕರು ದೆಹಲಿಗೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಯಡಿಯೂರಪ್ಪ ಅವರನ್ನ ಭೇಟಿಯಾಗಬೇಕಿತ್ತು. ಆದ್ರೆ ಬೇಗ ಹೋಗಬೇಕಾಗಿರುವ ಕಾರಣ ಬೆಂಗಳೂರ ಏರ್ಪೋರ್ಟ್…
ನವದೆಹಲಿ/ಮೈಸೂರು: ವಸತಿ ಸಚಿವ ವಿ. ಸೋಮಣ್ಣ (V Somanna) ಅವರಿಗೆ ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆ ಎರಡೂ ಕ್ಷೇತ್ರಗಳಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿ. ಸೋಮಣ್ಣ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿತ್ತು. ಆದರೆ, ಬಿ.ಎಸ್ ಯಡಿಯೂರಪ್ಪ ಅವರು ವಿಜಯೇಂದ್ರ (BY Vijayendra)) ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದರು. ನಂತರ ಪ್ರಬಲ ಎದುರಾಳಿಯನ್ನ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಹೈಕಮಾಂಡ್ ವಿ. ಸೋಮಣ್ಣ ಅವರನ್ನ ಆಯ್ಕೆ ಮಾಡಿದೆ. ವಿ. ಸೋಮಣ್ಣ ಅವರು ಪ್ರಸ್ತುತ ಪ್ರತಿನಿಧಿಸಿರುವ ಗೋವಿಂದರಾಜನಗರ ಕ್ಷೇತ್ರ ಹಾಗೂ ಚಾಮರಾಜನಗರದಿಂದ (Chamarajanagar) ಟಿಕೆಟ್ ಕೇಳಿದ್ದರು. ಆದರೆ ಸೋಮಣ್ಣ ಬಯಸಿದಂತೆ ಚಾಮರಾಜನಗರದಿಂದ ಟಿಕೆಟ್ ನೀಡಿದ್ದು, ಗೋವಿಂದರಾಜನಗರಕ್ಕೆ ಬದಲಾಗಿ ವರುಣಾ ಕ್ಷೇತ್ರದಿಂದ…
ಹಾಸನ: ಟಿಕೆಟ್ ವಿಚಾರದಲ್ಲಿ ನಮ್ಮ ಸರ್ವೋಚ್ಛ ನಾಯಕರಾದ ಹೆಚ್.ಡಿ. ದೇವೇಗೌಡರ (HD Deve Gowda) ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಹೇಳಿದರು. ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕುಟುಂಬ ಸಮೇತವಾಗಿ ಆನೆಕೆರೆಯಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವ ಇದೆ. ಅವರ ನಿರ್ಧಾರವೇ ಅಂತಿಮ. ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ ಎಂದರು. ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಟಾಂಗ್ ನೀಡಿದ ಅವರು, ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು, ಪಕ್ಷದಿಂದ ಏನೂ ಫಲಾನುಭವ ಪಡೆಯದವನು, ಸಾಮಾನ್ಯ ಕಾರ್ಯಕರ್ತ ಎನ್ನುವ ಮೂಲಕ ಪರೋಕ್ಷವಾಗಿ ಸ್ವರೂಪ್ ಸಾಮಾನ್ಯ ಕಾರ್ಯಕರ್ತ…
ಬೆಳಗಾವಿ: ರಾಜ್ಯದ ಕೆಎಂಎಫ್ (KMF) ನಷ್ಟದಲ್ಲಿಲ್ಲ, ಈ ವರ್ಷ 200 ಕೋಟಿ ರೂ. ಲಾಭದಲ್ಲಿದೆ. ಹೀಗಾಗಿ ಅಮುಲ್ ಜೊತೆಗೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಆಗಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಗೂ ರಾಜ್ಯದ 15 ಒಕ್ಕೂಟಗಳು ಈ ವರ್ಷ 22 ಸಾವಿರ ಕೋಟಿ ರೂ. ವಹಿವಾಟು ನಡೆಸಿವೆ. ಅದರಲ್ಲಿ ಕೆಎಂಎಫ್‌ಗೆ 100 ಕೋಟಿ ರೂ. ಹಾಗೂ ಇತರೇ 15 ಒಕ್ಕೂಟಗಳ ಲಾಭ 100 ಕೋಟಿ ರೂ. ಸೇರಿ 200 ಕೋಟಿ ಲಾಭದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಂದಿನಿ-ಅಮುಲ್ (Amul) ವಿಲೀನ ಆಗಲ್ಲ. ಬೇಕಾದಷ್ಟು ಕಂಪನಿಗಳು ಬಂದರೂ ನಂದಿನಿಗೆ (Nandini) ಯಾರೂ ಕಾಂಪಿಟೇಷನ್ ಕೊಡಲು ಆಗಲ್ಲ. 10 ಅಮುಲ್ ನಂಥ ಕಂಪನಿಗಳು ಬಂದರೂ ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ನಾವು ಸಿದ್ಧರಿದ್ದೇವೆ. ರಾಜಕೀಯ (Politics) ಕಾರಣಕ್ಕೆ ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ರೀತಿ ಮಾಡುತ್ತಿವೆ. ನಮ್ಮ ಗ್ರಾಹಕರು,…
ಮೈಸೂರು: ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಸದ್ದು ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರದ (Chamundeshwari Constituency) ಉಪ ಚುನಾವಣೆಯ ಬಹು ಮುಖ್ಯ ಸ್ವಾರಸ್ಯ ವಿಚಾರವಿದು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಾಮಧೇಯ ರೂಪದ ಪಕ್ಷೇತರ ಅಭ್ಯರ್ಥಿಗೆ ಬಂದ ಅನಿರೀಕ್ಷಿತ ಮತಗಳೇ ಸಿದ್ದರಾಮಯ್ಯ (Siddaramaiah) ಪಾಲಿಗೆ ವರದಾನವಾಗಿತ್ತು. ಅದು ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾಲ. ಹೆಚ್‌ಡಿ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಪರಿಣಾಮ 2006 ಡಿಸೆಂಬರ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಲಾಗಿತ್ತು. ಜೆಡಿಎಸ್‌ನವರು ಹೋದೆಡೆಯೆಲ್ಲಾ ಮೊದಲನೇ ಗುಂಡಿ ಒತ್ತಿ ಎಂದು ಪ್ರಚಾರ ಮಾಡಿದ್ದರು. ಏಕೆಂದರೆ ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಅವರ ಹೆಸರು ಮತಯಂತ್ರದಲ್ಲಿ ಮೊದಲಿತ್ತು. ಅದರಂತೆ ಮತದಾರರು ಮೊದಲ ಗುಂಡಿ ಒತ್ತಿದರು. ಮತಯಂತ್ರದ ಮೇಲಿನಿಂದ ಮೊದಲ ಗುಂಡಿಯೋ ಅಥವಾ ಮತಯಂತ್ರದ ಕೆಳಗಿನಿಂದ ಮೊದಲ ಗುಂಡಿಯೋ ಎಂದು ಹೇಳಿರಲಿಲ್ಲ. ಇದರಿಂದ ದೊಡ್ಡ ಯಡವಟ್ಟಾಗಿ ಹೋಗಿತ್ತು. ಮತಯಂತ್ರದ ಮೇಲ್ಬಾಗದ ಮೊದಲ ಗುಂಡಿ ಒತ್ತಿದ್ದರಿಂದ ಶಿವಬಸಪ್ಪ…
ಬಿಜೆಪಿ ಟಿಕೆಟ್ ಹಂಚಿಕೆ ಇದೀಗ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದ ಒಳಗಾದ್ರೂ ಟಿಕೆಟ್ ಹಂಚಿಕೆ ಆಗಲಿ ಅಂತಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾತೊರೆಯುತ್ತಿದ್ದಾರೆ. ಹಲವು ಸುತ್ತಿನ ಮಾತುಕತೆಗಳು, ಸಂಧಾನ, ಚರ್ಚೆ ಎಲ್ಲವೂ ನಡೆಯುತ್ತಲೇ ಇವೆ. ಇಡೀ ರಾಜ್ಯದ ಟಿಕೆಟ್ ಹಂಚಿಕೆಯ ತಲೆ ನೋವು ಒಂದು ಕಡೆಯಾದ್ರೆ, ಬೆಳಗಾವಿಯಲ್ಲಿ ಟಿಕೆಟ್ ಹಂಚಿಕೆ ಮಾಡೋದೆ ಬಿಜೆಪಿಗೆ ಸವಾಲಾಗಿಬಿಟ್ಟಿದೆ. ಯಾಕಂದ್ರೆ, ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರಿಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋದೇ ಪ್ರತಿಷ್ಠೆಯ ವಿಷಯ! ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಈ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಅಂತಿಮ ಮಾಡೋದೇ ಪಕ್ಷದ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಕಾರ್ಯ ವಿಧಾನವೇ ಅತಂತ್ರ ಸ್ಥಿತಿ ತಲುಪಿದೆ. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಹಾಗೂ ಅವರ 22 ಸದಸ್ಯರ ಕೋರ್ ಕಮಿಟಿ ಮೇಲಿಂದ ಮೇಲೆ ಸಭೆಗಳನ್ನ ನಡೆಸಿದೆ. ಆದ್ರೂ ಕೂಡಾ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಬಗೆಹರಿದಿಲ್ಲ. ಇದಕ್ಕೆ ಪ್ರಮುಖ ಕಾರಣ, ರಮೇಶ್…
ಶಿವಮೊಗ್ಗ: ಯಾರ ಒತ್ತಡಕ್ಕೆ ಮಣಿಯದೇ ನಾನು ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ (Election Politics) ನಿವೃತ್ತಿ ಹೇಳಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಈಶ್ವರಪ್ಪ ಮಾತನಾಡಿದರು. ಕರ್ನಾಟಕದಲ್ಲಿ (Karnataka) ಬಿಜೆಪಿಗೆ ಪೂರ್ಣ ಬಹುಮತ ಇಲ್ಲಿಯವರೆಗೆ ಸಿಕ್ಕಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ (BJP) ಪೂರ್ಣ ಬಹುಮತ ಸಿಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷಾಂತರ ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಮತ್ತೆ ಪಕ್ಷ ಸಂಘಟನೆಯತ್ತ ಹೋಗುತ್ತೇನೆ. ರಾಜ್ಯದಲ್ಲಿ ಪೂರ್ಣ ಬಹುಮತ ತರುವುದರ ಜೊತೆಗೆ ಮತ್ತೆ 2024ರಲ್ಲಿ ನರೇಂದ್ರ ಮೋದಿ (Narendra Modi) ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು. ಈ ಬಾರಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಏಪ್ರಿಲ್ 6, 7 ರಂದು ರಾಜ್ಯದ ಚುನಾವಣಾ ಸಮಿತಿ ನಡೆಸಿದ ಸಭೆಯಲ್ಲಿ ಕೇಂದ್ರ ನಾಯಕರ ಬಳಿ…
ಬೆಂಗಳೂರು: ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದು, ನಗರದಲ್ಲಿ ಈವರೆಗೆ 53.83 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು, ನಗದು ಹಣ, ಉಡುಗೊರೆಗಳು ಜಪ್ತಿಯಾಗಿವೆ. ಚುನಾವಣೆ ಅಕ್ರಮಗಳ ಬಗ್ಗೆ ಬರೋಬ್ಬರಿ 1187 ಎಫ್‌ಐಆರ್ ದಾಖಲಾಗಿವೆ. ನಗದು ಹಣ 8.26 ಕೋಟಿ, ಮದ್ಯ 22.16 ಕೋಟಿ ಮೌಲ್ಯ, ಡ್ರಗ್ಸ್ 9.51 ಕೋಟಿ ಮೌಲ್ಯ, ಗೃಹೋಪಯೋಗಿ ವಸ್ತುಗಳು 4.73 ಕೋಟಿ, ಉಡುಗೊರೆ 4.87 ಕೋಟಿ, ವಾಹನಗಳು 4.27 ಕೋಟಿ ಮೌಲ್ಯದ್ದಾಗಿವೆ. ಈ ಬಗ್ಗೆ 1187 ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ಇಟ್ಟಿರುವ ಎಂಸಿಸಿ ಸ್ವ್ಕಾಡ್ ಮತ್ತು ಪೊಲೀಸರು ಮಾರ್ಚ್ 29ರಿಂದ ಈವರೆಗೆ ದಾಖಲೆ ಪ್ರಮಾಣದ ಹಣ, ಮದ್ಯ, ಉಡುಗೊರೆ, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಇನ್ನಷ್ಟು ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.29ರಿಂದ ಈವರೆಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ನಗದು ಸೇರಿ ವಿವಿಧ ವಸ್ತುಗಳ ಮೌಲ್ಯ…