ದೊಡ್ಡಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ನಡೆಸಿ, ಮತಯಾಚಿಸಿದರು. ಬೆಳಗ್ಗೆ 11ಕ್ಕೆ ನಗರದ ಮುತ್ಯಾಲಮ್ಮ ದೇವಾಲಯದಿಂದ ಆರಂಭವಾದ ರೋಡ್ ಶೋ, ಶಾಂತಿನಗರ, ಇಸ್ಲಾಂಪುರ, ಕೊಂಗಾಡಿಯಪ್ಪ ಕಾಲೇಜು ರಸ್ತೆ ಮೂಲಕ ಸಾಗಿತು. ಅರಳುಮಲ್ಲಿಗೆ ಬಾಗಿಲು ಮೂಲಕ ಹಳೆ ಬಸ್ ನಿಲ್ದಾಣದವರೆಗೆ ಸುದೀಪ್ ರೋಡ್ ಶೋ ನಡೆಯಲಿದೆ. Video Player 00:00 00:55 ಕಿಚ್ಚ ಸುದೀಪ್ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು, ಬಿಜೆಪಿ ಹಿರಿಯ ಮುಖಂಡ ಟಿ.ವಿ.ಲಕ್ಷ್ಮಿನಾರಾಯಣ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮುದ್ದಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ನಾಗೇಶ್ ಇತರರು ಇದ್ದರು.
Author: Prajatv Kannada
ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ (Sudeep) ಗೆ ಬೆದರಿಕೆ ಪತ್ರ (Threat letter) ಬರೆದಿದ್ದ ವ್ಯಕ್ತಿಯ ಬಂಧನವಾಗಿದೆ. ಹಲವು ದಿನಗಳಿಂದ ಆರೋಪಿಯ ಬೆನ್ನು ಹತ್ತಿದ್ದ ಪೊಲೀಸರು ಕೊನೆಗೂ ಅರೆಸ್ಟ್ (Arrest) ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆದರಿಕೆ ಪತ್ರದ ಹಿಂದೆ ಡೈರೆಕ್ಟರ್ ಒಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಮೇಶ್ ಕಿಟ್ಟಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಸುದೀಪ್ ಅವರ ಆತ್ಮೀಯರಾಗಿದ್ದ ರಮೇಶ್ ಕಿಟ್ಟಿ (Ramesh Kitty), ಸುದೀಪ್ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದ್ದರು. ಸುದೀಪ್ ಮತ್ತು ರಮೇಶ್ ನಡುವಿನ ಹಣಕಾಸು ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಸುದೀಪ್ ಚಾರಿಟಬಲ್ ಟ್ರಸ್ಟ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಇನ್ವೆಸ್ಟ್ ಮಾಡಿದ್ದ ರಮೇಶ್ ಗೆ ಆನಂತರ ಸುದೀಪ್ ವಾಪಸ್ಸು ನೀಡಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯಾಗಿ ಪತ್ರ ಬರೆದಿದ್ದಾರೆಂದು ಹೇಳಲಾಗುತ್ತಿದೆ. ಹಣಕಾಸಿನ ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಸ್ವತಃ ರಮೇಶ್ ಕಿಟ್ಟಿನೇ ಒಪ್ಪಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಅಲ್ಲದೇ, ಈ ಪ್ರಕರಣದ ಹಿಂದೆ ಇನ್ನೂ…
ಹೊಸದಿಲ್ಲಿ : ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿರುವ ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ , ಹಿಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 18 ರನ್ ಗಳಿಂದ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 50ನೇ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ಕೈಕೊಟ್ಟರೂ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಕಮ್‌ಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ತೋರಿರುವ ಕ್ಯಾಪಿಟಲ್ಸ್ ತವರಿನಂಗಳ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು (ಮೇ 6) ಸಂಜೆ 7.30ಕ್ಕೆ ನಡೆಯಲಿರುವ ಡಬಲ್ ಹೆಡ್ಡರ್ನ ದ್ವಿತೀಯ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆರ್‌ಸಿಬಿಗೆ ಮಹತ್ವದ ಪಂದ್ಯ ಆರ್‌ಸಿಬಿ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇ-ಆಫ್ಸ್ ಹಂತಕ್ಕೆ ಕಾಲಿಡಬೇಕಾದರೆ ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿಗೆ ಕನಿಷ್ಠ 4 ಗೆಲುವಿನ…
ಸ್ಯಾಂಡಲ್ ವುಡ್ ನಟ ಹ್ಯಾಟ್ರೀಕ್ ಹೀರೋ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೇ ವಿಷಯವಾಗಿ ಅನೇಕರು ಶಿವಣ್ಣನ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಮೊನ್ನೆಯಷ್ಟೇ ಸಂಸದ ಪ್ರತಾಪ್ ಸಿಂಹ ತಮ್ಮದೇ ಆದ ರೀತಿಯಲ್ಲಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದರು. ಇದೀಗ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಕೂಡ ಶಿವಣ್ಣನ ಕುರಿತಾಗಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ. ಫೇಸ್ ಬುಕ್ ಪೇಜ್ ನಲ್ಲಿ ಶಿವರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿರುವ ಪ್ರಶಾಂತ್ ಸಂಬರ್ಗಿ. ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ…
ಸ್ಯಾಂಡಲ್ ವುಡ್ ನಟಿ ರಾಧಿಕ ಕುಮಾರಸ್ವಾಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೆಲ ಸಮಯದ ಬಳಿಕ ರಾಧಿಕ ಕುಮಾರಸ್ವಾಮಿ ಚಿತ್ರರಂಗದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಸದ್ಯ ರಾಧಿಕಾ ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ ಚಿತ್ರದ ಮುಹೂರ್ತ ಸಮಾರಂಭ ಮೇ 13 ರಂದು ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ. ಯುವ ನಿರ್ದೇಶಕ ಎಂ.ಶಶಿಧರ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ರವಿರಾಜ್ ಎಂಬುವವರು ನಿರ್ಮಿಸುತ್ತಿದ್ದು ಒಟ್ಟು ಏಳು ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಜೋಡಿಯಾಗಿ ಬಾಲಿವುಡ್ ನಟ ಶ್ರೇಯಸ್ ತಲಪಡೆ ಬಣ್ಣ ಹಚ್ಚುತ್ತಿದ್ದಾರೆ. ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಕಲಿತಿರುವ ನಿರ್ದೇಶಕ ಶಶಿಧರ್ ವಿ, ಎಫ್ ಎಕ್ಸ್ ನಲ್ಲೂ ಪರಿಣತಿ ಹೊಂದಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ ‘ಘಾರ್ಗ’ ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಅಜಾಗ್ರತ ಒಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲೆರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ…
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ನಟ ಅಮೀರ್ ಖಾನ್ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ಯ ಅಮೀರ್ ಸೂಪರ್ ಹಿಟ್ ‘ಗಜನಿ’ ಸೀಕ್ವೆಲ್ ಮಾಡಲು ಮುಂದಾಗಿದ್ದು, ಅಲ್ಲು ಅರವಿಂದ್ ಜೊತೆ ಅಮೀರ್ ಕೈ ಜೋಡಿಸುತ್ತಿದ್ದಾರೆ. 2005ರಲ್ಲಿ ಬಂದ ತಮಿಳಿನ ‘ಗಜನಿ’ ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ 2008ರಲ್ಲಿ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ ಸೂರ್ಯ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಇದೀಗ ಚಿತ್ರದ ಸೀಕ್ವೆಲ್ ಮಾಡಲು ಸಿದ್ಧತೆ ನಡೆದಿದೆ. ಆಮಿರ್ ಖಾನ್ ಅವರು ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದು, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳಿನ ‘ಗಜನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ ಸೇಲಮ್ ಚಂದ್ರಶೇಖರನ್ 2021ರಲ್ಲಿ ನಿಧನರಾಗಿದ್ದಾರೆ. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಮುಂದಾಗಿದ್ದಾರೆ. ಈ ವಿಷ್ಯವಾಗಿಯೇ ಅಮೀರ್ ಪದೇ ಪದೇ ಹೈದರಾಬಾದ್‌ಗೆ ಭೇಟಿ ಅಲ್ಲು ಅರವಿಂದ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕಥೆಯ…
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ನಟ ದರ್ಶನ್ ಭಾಗಿಯಾಗಿ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 52 ಅಂತರ್ಜಾತಿ ಜೋಡಿಗಳು, ಪರಿಶಿಷ್ಟ ಜಾತಿಗೆ ಸೇರಿದ 52 ಜೋಡಿಗಳು, ಕುರುಬ ಸಮುದಾಯಕ್ಕೆ ಸೇರಿದ ತಲಾ ಒಂಬತ್ತು ಜೋಡಿಗಳು ಮತ್ತು ವೀರಶೈವರು, ಪರಿಶಿಷ್ಟ ಪಂಗಡಕ್ಕೆ ಸೇರಿದ 11 ಜೋಡಿಗಳು ವಿವಾಹವಾದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ದರ್ಶನ್ ತಮ್ಮ ವಿವಾಹ ಕೂಡ ಧರ್ಮಸ್ಥಳದಲ್ಲಿ ನೆರವೇರಿತು ಎಂದು ನೆನಪು ಮಾಡಿಕೊಂಡರು. ದುಂದುವೆಚ್ಚಗಳನ್ನು ಮಾಡದೆ ಸರಳ ವಿವಾಹವಾಗುವುದು ಉತ್ತಮ ಎಂದ ದರ್ಶನ್ ಇದೇ ವೇಳೆ ತಮ್ಮ ಜೀವನದ ಮುಖ್ಯವಾದ ವಿಷಯವನ್ನು ಹೇಳಿಕೊಂಡರು. ಅದು ತಮ್ಮ ತಂದೆ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ನಿಧನ ಹೊಂದಿದ ಸಮಯ, ಮನೆಯಲ್ಲಿ ಆರ್ಥಿಕವಾಗಿ ಕಷ್ಟವಿತ್ತು. ನಾವು ಮಕ್ಕಳು ಚಿಕ್ಕವರು ಅಕ್ಕನ ಮದುವೆಯೂ ಆಗಿರಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ಧರ್ಮಸ್ಥಳಕ್ಕೆ…
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ‘777 ಚಾರ್ಲಿ’ ಚಿತ್ರ ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಚಿತ್ರೋತ್ಸವದಲ್ಲಿ ನಿರ್ದೇಶಕ ಕಿರಣ್‌ರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ದವಾಗಿದ್ದಾರೆ.. ಇದೇ ಜೂನ್ 10ಕ್ಕೆ ಕಿರಣ್‌ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣವಾಗಲಿದೆ. ವಾರ್ಷಿಕೋತ್ಸವವನ್ನು ಆಚರಿಸಲು ಚಿತ್ರತಂಡ ಸಿದ್ಧವಾಗಿದ್ದು, ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಚಾರ್ಲಿ ತಂಡ ನೀಡಿದೆ. ಅಂದಹಾಗೆಯೇ ಚಾರ್ಲಿ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಸಿನಿಮಾವಾಗಿದೆ. ಶ್ವಾನ ಮತ್ತ ಮನುಷ್ಯನ ನಡುವಿನ ಸಂಬಂಧವನ್ನು ಭಿನ್ನವಾಗಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾ ಪ್ರಾಣಿ ಪ್ರೀಯರಿಗೆ ಹೆಚ್ಚು ಇಷ್ಟವಾಗಿದೆ. ಈ ಸಿನಿಮಾ ಶೂಟಿಂಗ್ಗಾಗಿ ಚಿತ್ರತಂಡ ಸಾಕಷ್ಟು ಸರ್ಕಸ್ ಮಾಡಿದೆ. ಬಾಲ್ಯದಲ್ಲೇ ಹೆತ್ತವರು, ತಂಗಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದ ಧರ್ಮನ ಬಾಳಿಗೆ ಬಂದ ಶ್ವಾನ ಚಾರ್ಲಿ ಆತನಲ್ಲಿ ಜೀವನದಲ್ಲಿ ತೀರಾ ಬದಲಾವಣೆಯನ್ನು ಮಾಡುತ್ತದೆ. ಇದನ್ನು ನಿರ್ದೇಶಕ ಕಿರಣ್ ರಾಜ್…
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡ್ತಿದ್ದಾರೆ. ಈ ಮೂಲಕ ಅಜ್ಜನಿಗೆ ವಿಶೇಷ ಉಡುಗೊರೆ ನೀಡಲು ಅವಿನಾಶ್ ದಿವಾಕರ್ ಮುಂದಾಗಿದ್ದಾರೆ. ‘ಜುಗಾರಿ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ ಅವಿನಾಶ್ ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಜುಲೈ 24ಕ್ಕೆ ನರಸಿಂಹರಾಜು ಅವರು ಹುಟ್ಟಿ 100 ವರ್ಷ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಿನಾಶ್ ಹೊಸ ಹೆಜ್ಜೆ ಇಡುತ್ತಿದ್ದು ಅಂದು ತಮ್ಮ ಸಿನಿಮಾದ ಕುರಿತು ಮಾಹಿತಿ ನೀಡಲಿದ್ದಾರೆ. ಅವಿನಾಶ್ ದಿವಾಕರ್ ಸಿನಿಮಾರಂಗಕ್ಕೆ ಎಂಟ್ರಿಕಪೊಟ್ಟು 10 ವರ್ಷಗಳು ಕಳೆದಿವೆ. ಕಲಾ ನಿರ್ದೇಶಕನಾಗಿ, ನಾಯಕ ನಟನಾಗಿ ಹೀಗೆ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿರೋ ಅವಿನಾಶ್ ಇದೀಗ ನಿರ್ದೇಶಕನ ಕ್ಯಾಪ್ ತೊಡೋಕೆ ರೆಡಿಯಾಗಿದ್ದಾರೆ. ಅವಿನಾಶ್ ನಿರ್ದೇಶನದ ಚಿತ್ರಕ್ಕೆ ‘ರುದ್ರಾಂಕುಶ’ ಅಂತ ಹೆಸರಿಡಲಾಗಿದೆ. ಈ ಚಿತ್ರದ ಒಂದು ಝಲಕ್ ಈಗಾಗಲೇ ರಿವೀಲ್ ಮಾಡಲಾಗಿದ್ದು 24ರಂದು ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ದಾಂಪತ್ಯದಲ್ಲಿ ಶಾರೀರಿಕ ಸಂಬಂಧ ಬಹಳ ಮುಖ್ಯ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಕೆ ಅತ್ಯಗತ್ಯ. ಸಂಭೋಗದ ವೇಳೆ ಸುರಕ್ಷತೆ ಬಹಳ ಮುಖ್ಯ. ಸೇಫ್ಟಿ ಬಯಸುವವರು ಕಾಂಡೋಮ್ ಗೆ ಆದ್ಯತೆ ನೀಡ್ತಾರೆ. ಬಹುತೇಕ ಜೋಡಿಗಳು ಪ್ರೆಗ್ನೆನ್ಸಿ ಅವಾಯ್ಡ್ ಮಾಡಬೇಕೆಂದರೆ ಕಾಂಡೋಮ್ ಮೊರೆ ಹೋಗುತ್ತಾರೆ. ಕಾಂಡೋಮ್ ಅನಗತ್ಯ ಗರ್ಭಧಾರಣೆ ತಡೆಗಟ್ಟಲು ಪ್ರಮುಖ ಪಾತ್ರವಹಿಸುತ್ತದೆ. ಲೈಂಗಿಕ ಚಟುವಟಿಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಾಂಡೋಮ್‌ಗಳನ್ನು ಬಳಸಲಾಗುತ್ತದೆ, ಅಂದರೆ, ಅನಗತ್ಯ ಗರ್ಭಧಾರಣೆ ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳ ಅಪಾಯವನ್ನು ತಡೆಗಟ್ಟಲು. ಪುರುಷರು ಮತ್ತು ಮಹಿಳೆಯರಿಗೆ ಕಾಂಡೋಮ್‌ಗಳು ಲಭ್ಯವಿದ್ದರೂ, ಪುರುಷ ಕಾಂಡೋಮ್‌ಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಿದ್ರೆ ಮಹಿಳೆಯರ ಕಾಂಡೋಮ್ ಬಳಸೋದು ಹೇಗೆ ? ಇದು ಪುರುಷರ ಕಾಂಡೋಮ್‌ಗಿಂತ ಹೇಗೆ ವಿಭಿನ್ನವಾಗಿರುತ್ತದೆ ಎಂಬುದನ್ನು ತಿಳಿಯೋಣ. ಸುರಕ್ಷಿತ ಸೆಕ್ಸ್‌ನ ವಿಷಯದ ಬಗ್ಗೆ ಗಪ್‌ಚುಪ್ ಆಗಿ ಚರ್ಚಿಸುವ ದಿನಗಳು ಕಳೆದುಹೋಗಿವೆ. ಎಲ್ಲರೂ ಈಗ ಲೈಂಗಿಕ ಜೀವನದ (Sex life) ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಸುರಕ್ಷಿತ ಲೈಂಗಿಕತೆಯ ವಿಷಯಕ್ಕೆ ಬಂದಾಗ, ಕಾಂಡೋಮ್‌ಗಳು ಹೆಚ್ಚಿನ…