ಗುವಾಹಟಿ: ಪ್ರತಿಷ್ಠಿತ 16ನೇ ಐಪಿಎಲ್ (IPL 2023) ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಬ್ಯಾಟಿಂಗ್ ವೈಫಲ್ಯದ ಕೊರತೆಯಿಂದ ಸತತ 3 ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ. ಪ್ರತಿ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸುತ್ತಿರುವ ನಾಯಕ ಡೇವಿಡ್ ವಾರ್ನರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಹಿಂದಿನ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಕಾಂಗಿಯಾಗಿ ಹೋರಾಡಿ 65 ರನ್ ಗಳಿಸಿ, ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಮಾಡಿರುವುದಲ್ಲದೇ, ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದ್ದ ದಾಖಲೆಯನ್ನೂ ಉಡೀಸ್ ಮಾಡಿದ್ದಾರೆ. 6 ಸಾವಿರ ರನ್ ಪೂರೈಸಿದ 3ನೇ ಆಟಗಾರ: ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಹಾಗೂ ಐಪಿಎಲ್ ಕ್ರಿಕೆಟ್ ಜಗತ್ತಿನ 3ನೇ ಆಟಗಾರ ಎಂಬ ದಾಖಲೆ ಪಟ್ಟಿಗೆ ಈಗ ವಾರ್ನರ್ ಸೇರ್ಪಡೆಯಾಗಿದ್ದಾರೆ. ಡೇವಿಡ್ ವಾರ್ನರ್ 165 ಪಂದ್ಯಗಳಲ್ಲಿ ಅತಿ ವೇಗವಾಗಿ 6 ಸಾವಿರ ರನ್…
Author: Prajatv Kannada
ಅಹಮದಾಬಾದ್: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಸಿಡಿಸಿದ 5 ಭರ್ಜರಿ ಸಿಕ್ಸರ್ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್, ಹಾಲಿ ಚಾಂಪಿಯನ್ಸ್ ಗುಜರಾತ್ ಜೈಂಟ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಕೆಕೆಆರ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಉಮೇಶ್ ಯಾದವ್ ಮೊದಲ ಎಸೆತದಲ್ಲಿ 1 ರನ್ ತೆಗೆದುಕೊಂಡರು. ನಂತರ ಕ್ರೀಸ್‌ಗೆ ಬಂದ ರಿಂಕು ಸಿಂಗ್ ಸತತ 5 ಎಸೆತಗಳನ್ನೂ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಈ ಮೂಲಕ ಗೆಲುವಿನ ಹಾದಿಯಲ್ಲಿದ್ದ ಹಾಲಿ ಚಾಂಪಿಯನ್ಸ್ ಪಡೆಗೆ ಸೋಲುಣಿಸಿ ಕೆಕೆಆರ್ ತಂಡ ಸತತ 2ನೇ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. 205 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್ ನಿಗದಿತ…
ಹೊಸದಿಲ್ಲಿ:ಎಂಎಸ್ ಧೋನಿ ಜೊತೆ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜೊತೆಯಲ್ಲಿ ಹಾಗೂ ಎದುರಾಳಿಯಾಗಿ ಹಲವಾರು ಪಂದ್ಯಗಳಲ್ಲಿ ಆಡಿರುವ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪಇದೀಗ ಸಿಎಸ್‌ಕೆ ನಾಯಕನ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಎಂಎಸ್ ಧೋನಿ 2020ರ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಎಂಎಸ್ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಇವರ ನಾಯಕತ್ವದಲ್ಲಿ ಸಿಎಸ್‌ಕೆ, ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದಾದ ಬಳಿಕ ಕೆ.ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡದ ವಿರುದ್ಧ ತವರು ಅಂಗಣದಲ್ಲಿ ಈ ಋತುವಿನ ಮೊದಲ ಗೆಲುವು ತನ್ನದಾಗಿಸಿಕೊಂಡಿತ್ತು. ಲಖನೌ ವಿರುದ್ಧ ಮಾರ್ಕ್‌ವುಡ್ ಎಸೆತದಲ್ಲಿ ಎಂಎಸ್ ಧೋನಿ,ಸತತ…
ಬಾಲಿವುಡ್ ನ ಖ್ಯಾತ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಈ ಹಿಂದಿನಿಂದಲೂ ನೆಪೋಟಿಸಂನ ಬೆಂಬಲಿಸುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯಾರನ್ನಾದರೂ ಚಿತ್ರರಂಗದಿಂದ ಹೊರ ಹಾಕಬೇಕು, ಚಿತ್ರರಂಗದಲ್ಲಿ ತುಳಿಯಬೇಕು ಎಂದರೆ ಕರಣ್ ಜೋಹರ್ ಮುಂಚೂಣಿಯಲ್ಲಿರುತ್ತಾರೆ. ಇದೇ ಕಾರಣಕ್ಕೆ ಈ ಮೊದಲು ಕಾರ್ತಿಕ್ ಆರ್ಯನ್ ಹಾಗೂ ಕರಣ್ ಜೋಹರ್ ಮಧ್ಯೆ ಕಿತ್ತಾಟ ಆಗಿದೆ ಎನ್ನಲಾಗಿತ್ತು. ಆದರೆ ಇದೀಗ ಎಲ್ಲವೂ ಸರಿಯಾದಂತಿದ್ದು ಇಬ್ಬರು ಭೇಟಿ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹರ್ ನಿರ್ಮಾಣದಲ್ಲಿ 2019ರಲ್ಲಿ ‘ದೋಸ್ತಾನ 2’ ಘೋಷಣೆ ಮಾಡಿದ್ದು ಈ ಸಿನಿಮಾದಲ್ಲಿ ನಟ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಆದರೆ ಕರಣ್ ಬಿಹೇವಿಯರ್ ಸರಿ ಇಲ್ಲ ಎನ್ನುವ ಕಾರಣಕ್ಕೆ ಕಾರ್ತಿಕ್ ಈ ಚಿತ್ರದಿಂದ ಹೊರ ಬಂದರು. ಈ ವಿಚಾರದಲ್ಲಿ ಕರಣ್ ಜೋಹರ್ ಅವರ ಬಗ್ಗೆ ಸಾಕಷ್ಟು ಟೀಕೆ ಮಾಡಲಾಯಿತು. ಆದರೆ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಇಬ್ಬರೂ ಮತ್ತೆ ಭೇಟಿ ಆಗಿರೋದು ಅಚ್ಚರಿ ಮೂಡಿಸಿದೆ. ಕಾರ್ತಿಕ್ ಆರ್ಯನ್…
ತೆಲುಗು ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಖ್ಯಾತಿ ಘಳಿಸಿರುವ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಜನಸೈನಿಕರೆಂದು ಕರೆಯುತ್ತಾರೆ. ಇದೀಗ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಂಡಾಮಂಡಲರಾಗಿದ್ದಾರೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್, ರೇಣು ದೇಸಾಯಿ ಪುತ್ರ ಅಖಿರಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ಅಖಿರಾ ಫೋಟೋವನ್ನು ಶೇರ್ ಮಾಡುವಂತೆ ಅಭಿಮಾನಿಗಳು ರೇಣು ದೇಸಾಯಿ ಬಳಿ ಮನವಿ ಮಾಡಿದ್ದಾರೆ. ಇದರಿಂದ ಕೆರಳಿದ ರೇಣು ದೇಸಾಯಿ ಈ ದಿನವಾದರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡಿ. ಅಖಿರಾ ಪವನ್ ಕಲ್ಯಾಣ್ ಮಗನಲ್ಲ ಆತ ನನ್ನ ಮಗ ನಾನು ಆತನ ತಾಯಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ರೇಣು ದೇಸಾಯಿಯ ಈ ಉತ್ತರಕ್ಕೆ ಕೆರಳಿದ ಪವನ್ ಕಲ್ಯಾಣ್ರ ಕೆಲವು ಅಭಿಮಾನಿಗಳು ರೇಣು ದೇಸಾಯಿಗೆ ಕೆಟ್ಟದಾಗಿ ಕಮೆಂಟ್ ಹಾಕಲು ಆರಂಭಿಸಿದ್ದಾರೆ. ಇವಳನ್ನು ಬಿಟ್ಟು ಪವನ್ ಕಲ್ಯಾಣ್ ಒಳ್ಳೆಯದು…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಸಾಕಷ್ಟು ಸಮಯವೇ ಕಳೆದು ಹೋಗಿದೆ. ಆದರೆ ಇಂದಿಗೂ ಅಪ್ಪು ಪ್ರತಿಯೊಬ್ಬರ ಮನಸ್ಸಲ್ಲಿ ಅಜರಾಮರವಾಗಿದ್ದಾರೆ. ಇದೀಗ ಕ್ರಿಕೆಟರ್ ಕ್ರಿಸ್ ಗೇಲ್ ಪುನೀತ್ ರಾಜ್ ಕುಮರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್ 16ನೇ ಸೀಸನ್ ಆರಂಭವಾಗಿದ್ದು, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಕಮೆಂಟರಿ ಬಾಕ್ಸ್ ಮೂಲಕ ಆರ್ಸಿಬಿಗೆ ಬೆಂಬಲ ನೀಡುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆರ್ಸಿಬಿ ಅನ್ಬಾಕ್ಸಿಂಗ್ನಲ್ಲಿಯೂ ಈ ದಿಗ್ಗಜರು ಪಾಲ್ಗೊಂಡಿದ್ದರು. ಆರ್ಸಿಬಿಯ ಭಾಗವಾಗಿರುವ ಮಿಸ್ಟರ್ ನ್ಯಾಗ್ಸ್ ಕ್ರಿಸ್ ಗೇಲ್ ಸಂದರ್ಶನ ಮಾಡಿದ್ದು ಸಂದರ್ಶನದಲ್ಲಿ ಅಪ್ಪು ಅವರನ್ನು ಕ್ರಿಸ್ ಗೇಲ್ ನೆನಪು ಮಾಡಿಕೊಂಡಿದ್ದಾರೆ. ಮಿಸ್ಟರ್ ನಾಗ್ಸ್ ಅಲಿಯಾಸ್ ದಾನಿಶ್ ಸೇಠ್ ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಾ, ನಿಮ್ಮ ತವರು ಯಾವುದು ಅಥವಾ ನಿಮ್ಮ ಹೋಮ್ಟೌನ್ ಯಾವುದು ಎಂದಾಗ ನನಗೆ ಎರಡು ಹೋಮ್ ಟೌನ್ ಇದೆ. ಒಂದು ಕೆರೆಬಿಯನ್ ಮತ್ತೊಂದು ಕಲಬುರ್ಗಿ ಎಂದಿದ್ದಾರೆ. ಕಲಬುರ್ಗಿಗೆ ಭೇಟಿ ನೀಡಿರುವುದಾಗಿಯೂ ಹೇಳಿರುವ ಕ್ರಿಸ್ ಗೇಲ್, ಜೋಳದ ರೊಟ್ಟಿ, ಶೆಂಗ…
ಇತ್ತೀಚಿನ ಕೆಟ್ಟ ಜೀವನಶೈಲಿ, ಕೆಟ್ಟ ಆಹಾರ, ಮಾಲಿನ್ಯ, ಧೂಳು ಆರೋಗ್ಯ ಮತ್ತು ಚರ್ಮದ ಮೇಲೆ ಮಾತ್ರವಲ್ಲ ಕೂದಲ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕೂದಲಿನ ಸಮಸ್ಯೆಯೂ ಹೆಚ್ಚುತ್ತಿದೆ. ಪ್ರತಿಯೊಬ್ಬರಲ್ಲೂ ಕೂದಲು ಒಡೆಯುವಿಕೆ, ಉದುರುವಿಕೆ ಸಮಸ್ಯೆಯನ್ನು ಅನುಭವಿಸುತ್ತಾರೆ. ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಬೆವರುವುದರಿಂದ ಜಿಗುಟುತನ, ತಲೆಹೊಟ್ಟು, ತುರಿಕೆ ಸಮಸ್ಯೆಯೂ ಹೆಚ್ಚುತ್ತದೆ. ಈ ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು, ಜನರು ಹಲವಾರು ರೀತಿಯ ಶಾಂಪೂಗಳು ಮತ್ತು ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಕೂದಲ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ನೀವೂ ಕೂಡ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮೆಂತ್ಯ ನೀರು ನಿಮಗೆ ಉತ್ತಮವಾದ ಮನೆಮದ್ದಾಗಿದೆ. ಕೂದಲಿಗೆ ಮೆಂತ್ಯ ನೀರಿನ ಪ್ರಯೋಜನಗಳು ಹಚ್ಚುವುದರಿಂದ ಆಗುವ ಪ್ರಯೋಜನಗಳು ಮೆಂತ್ಯ ಬೀಜಗಳು ವಿಟಮಿನ್ ಎ, ಕೆ, ಸಿ , ಕ್ಯಾಲ್ಸಿಯಂ, ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿವೆ, ಕಬ್ಬಿಣದಂತಹ ಅನೇಕ ಪೋಷಕಾಂಶಗಳು ಮೆಂತ್ಯ ನೀರಿನಲ್ಲಿ ಕಂಡುಬರುತ್ತವೆ. ಇದು ಕೂದಲ ತುದಿ ಒಡೆಯುವುದನ್ನು ತಡೆಯುವುದಲ್ಲದೆ, ಕೂದಲು ದಪ್ಪವಾಗಿ ಬೆಳೆಯುವಂತೆ…
ಜೆರೂಸಲೇಂ: ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ಸಿರಿಯಾ ಕಡೆಯಿಂದ ನಡೆಸಲಾಗಿದ್ದ ಆರು ರಾಕೆಟ್ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇದೇ ಮೊದಲ ಬಾರಿಗೆ ಇಂಥ ದಾಳಿ ನಡೆದಿದ್ದು, ಒಟ್ಟು ಎರಡು ಹಂತದಲ್ಲಿ ತಲಾ ಮೂರು ರಾಕೆಟ್‌ಗಳು ದಾಳಿ ನಡೆಸಿವೆ. ಈ ದಾಳಿಯಿಂದ ಯಾವುದೇ ಸಾವು ನೋವು ಉಂಟಾಗಿಲ್ಲ. ಸಿರಿಯಾ ಕಡೆಯಿಂದ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಸಿರಿಯಾ ಸೇನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಫಿರಂಗಿ ದಾಳಿ ನಡೆಸಿದೆ. ಡಮಾಸ್ಕಸ್ ಮೂಲದ ಪ್ಯಾಲೆಸ್ತೀನಿ ಪ್ರತ್ಯೇಕತಾವಾದಿ ಸಂಘಟನೆ ಅಲ್-ಕುಡ್ಸ್ ಬ್ರಿಗೇಡ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದು, ಗಾಜಾ, ಲೆಬನಾನ್‌ಗಳಲ್ಲಿ ಕಳೆದ ಕೆಲದಿನಗಳಿಂದ ಉಂಟಾಗಿರುವ ಸಂಘರ್ಷ ಬಿಗಡಾಯಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಶನಿವಾರ ಸಿರಿಯಾ ಕಡೆಯಿಂದ ನಡೆಸಲಾಗಿದ್ದು ಮೊದಲ ಹಂತದಲ್ಲಿ ಒಂದು ರಾಕೆಟ್ ಇಸ್ರೇಲ್ ನಿಯಂತ್ರಣ ಇರುವ ಗೋಲನ್ ಹೈಟ್ಸ್ ಎಂಬ ಸ್ಥಳದಲ್ಲಿ ಬಿದ್ದಿದೆ. ಮತ್ತೊಂದನ್ನು ಮಧ್ಯದಲ್ಲೇ ಛೇದಿಸಲಾಗಿತ್ತು. ಹೀಗಾಗಿ, ಅದು ಸಿರಿಯಾ ಗಡಿಗೆ ಹೊಂದಿಕೊಂಡು ಇರುವ ಜೋರ್ಡನ್‌ನ ನೆಲದಲ್ಲಿ ಬಿದ್ದಿದೆ.
ವಾಷಿಂಗ್ಟನ್ : ಕೋವಿಡ್ ಸೋಕಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಬರೋಬ್ಬರಿ ಎರಡು ವರ್ಷಗಳ ಬಳಿಕ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆದುಕೊಂಡಿದ್ದಾರೆ. ಅಮೆರಿಕ ಮೂಲದ ಜೆನ್ನಿಫರ್ ಎಂಬ ಮಹಿಳೆ ಎರಡು ವರ್ಷ ದೀರ್ಘ ಕಾಲದ ಬಳಿಕ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆದಿದ್ದಾಳೆ. ಕ್ಲೆವೆಲ್ಯಾಂಡ್ ಕ್ಲಿನಿಕ್ನ ಇನ್ಸ್ಟಾಗ್ರಾಂನಲ್ಲಿ ಮಹಿಳೆ ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಒಂದು ಕಾಫಿ ಕಪ್ ಎತ್ತಿಕೊಂಡು ವಾಸನೆ ಗ್ರಹಿಸಿದ್ದಾಳೆ. ನಂತರ ನನಗೆ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ ಎಂದು ಗದ್ಗದಿತಳಾಗಿ ನುಡಿದಿದ್ದಾರೆ. ಎರಡು ವರ್ಷಗಳ ಕಾಲ ಆಹಾರ ನನಗೆ ರುಚಿಸುತ್ತಿರಲಿಲ್ಲ. ವಾಸನೆಯ ಅರಿವಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದು, ಸಾಮಾನ್ಯ ಚಿಕಿತ್ಸೆಗಾಗಿ ಬಳಸುವ ಸ್ಟೇಲೆಟ್ ಗ್ಯಾಂಗ್ಲಿಯಾನ್ ಬ್ಲಾಕ್ ಇಂಜೆಕ್ಷನ್ ನೀಡಿದ ಮೇಲೆ ಮಹಿಳೆ ಮೊದಲ ಬಾರಿಗೆ ವಾಸನೆ ಹಾಗೂ ರುಚಿಯನ್ನು ಗ್ರಹಿಸಿದ್ದಾರೆ.
ಸಿಂಗಾಪುರ: ಖ್ಯಾತ್ ಮಾಲ್ ನಿಂದ ಹಿಂದೂ ವ್ಯಕ್ತಿಯನ್ನು ತಳ್ಳಿ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಮೂಲದ ಥೇವಂದ್ರನ್ ಮೃತ ವ್ಯಕ್ತಿಯಾಗಿದ್ದು, ಪ್ರಕರಣದಲ್ಲಿ ಮಹಮ್ಮದ್ ಅಫಜಾರಿ ಅಬ್ದುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಬ್ದುಲ್ಲ ನನ್ನು ಈ ಹಿಂದೆ ಕೂಡ ಅಪರಾಧ ಪ್ರಕರಣದಲ್ಲಿ ಬಂದಿಸಲಾಗಿತ್ತು. ಈಗ ಅವನು ಜೈಲಿನಿಂದ ಹೊರ ಬಂದಿದ್ದನು. ಸದ್ಯ ಥೇವೇಂದ್ರನ ಹತ್ಯೆಯ ಪ್ರಕರಣದಲ್ಲಿ ೧೦ ವರ್ಷದ ಶಿಕ್ಷೆ ಆಗುವ ಸಾಧ್ಯತೆ ಇದೆ.