ಚುನಾವಣೆಯಲ್ಲಿ (Election) ಗೆಲ್ಲುವುದಕ್ಕೆ ಜೆಡಿಎಸ್ ಅಭ್ಯರ್ಥಿ(JDS Candidate) ಅಡ್ಡದಾರಿ ಹಿಡಿದ್ರಾ? ಎಂಬ ಅನುಮಾನ ಕಾಡತೊಡಗಿದೆ. ಹೌದು ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಅಭ್ಯರ್ಥಿ ತನ್ನನ್ನೇ ತಾವೇ ಅಪಹರಣಕ್ಕೆ(Kidnap Plan) ಮಾಡಿಸಿಕೊಳ್ಳಲು ಮುಂದಾಗಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ(Munegowda, JDS Candidate) ಕಿಡ್ನ್ಯಾಪ್ ಸ್ಕೆಚ್ ಬಹಿರಂಗಗೊಂಡಿದೆ. ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುನೇಗೌಡ ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾಗಿದ್ದರು. ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ರಣಹದ್ದು ಡಿಕ್ಕಿ: ಗ್ಲಾಸ್ ಪುಡಿ ಪುಡಿ, ತಪ್ಪಿದ ಭಾರೀ ಅನಾಹುತ ತಾನು ಕಿಡ್ನ್ಯಾಪ್ ಆಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ (Vishwanath, BJP Candidate) ಮೇಲೆ ಹಾಕಿ ಯಲಹಂಕ ಕ್ಷೇತ್ರದಲ್ಲಿ ಗಲಾಟೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಪಕ್ಷದ ವಕ್ತಾರ ಚರಣ್ ಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಸ್ಕೆಚ್ ಮಾತುಕತೆ ಹಾಗೂ ಮೇ 5 ಅಥವಾ 6 ರಂದು ತಾವೇ ನೇಮಿಸಿಕೊಂಡ ಹುಡಗರಿಂದ ಅಪಹರಣ ಮಾಡಿಸಿಕೊಳ್ಳಲು ಮಾತುಕತೆಯ ವಿಡಿಯೋ ಲೀಕ್ ಆಗಿದೆ. ಇನ್ನೂ…
Author: Prajatv Kannada
ಬೆಂಗಳೂರು: ಕೊಡಗು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆಗಳಲ್ಲಿ ಅತ್ಯಧಿಕ (Bengaluru Rains) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ವರೆಗೂ ಹೆಚ್ಚಾಗುವ ಸಾಧ್ಯತೆ ಇದೆ. ಮಂಡ್ಯ ಕೆವಿಕೆ, ಮಾಲೂರು, ಸರಗೂರಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ, ಮುದಗಲ್, ಕೃಷ್ಣರಾಜಸಾಗರ, ಕನಕಪುರ, ಹರದನಹಳ್ಳಿ,(Krishnarajasagar, Kanakapura, Haradanahalli) ಗಬ್ಬೂರು, ಜಾಲಹಳ್ಳಿ, ರಾಯಚೂರು, ಸಾಲಿಗ್ರಾಮ, ಶ್ರೀರಂಗಪಟ್ಟಣ, ಬೆಂಗಳೂರು ಕೆಎಎಲ್, ಬಂಡೀಪುರ, ಕೊಳ್ಳೇಗಾಲ, ಚಾಮರಾಜನಗರ, ಮೈಸೂರು, ಹಲಬರ್ಗಾ, ಹುಲ್ಸೂರು, ಸಾಯಿಗಾಂವ್, ಭಾಲ್ಕಿ, ದೇವದುರ್ಗ, ಕೋಲಾರ, ಗೌರಿಬಿದನೂರು, ತೊಂಡೇಭಾವಿ(Kolar, Gauribidanur, Tondebhavi), ಜ್ಞಾನಭಾರತಿ ವಿವಿ ಕ್ಯಾಂಪಸ್, ಗೋಪಾಲ್ನಗರ, ಉತ್ತರಹಳ್ಳಿ, ಬೆಂಗಳೂರು ನಗರ, ಮಂಠಾಳ, ನಿಟ್ಟೂರು, ಔರಾದ್, ಕುರ್ಡಿ, ಮಸ್ಕಿ, ಮಾನ್ವಿ, ಕಕ್ಕೇರಿ, ರಾಮನಗರ, ಖಜೂರಿ, ಮುಡಬಿ, ಹೊಸಕೋಟೆ, ಮಂಡ್ಯ, ಬರಗೂರು, ಚಿಕ್ಕಬಳ್ಳಾಪುರ, ಮೂಡಿಗೆರೆಯಲ್ಲಿ ಮಳೆಯಾಗಿದೆ. ಮೋದಿ ಅವರ ಬಾಯಲ್ಲಿ ಇಂತಹ ಮಾತುಗಳನ್ನ…
ರಾಣೇಬೆನ್ನೂರ ಎನ್ ಸಿ ಪಿ ಅಭ್ಯರ್ಥಿ ಆರ್ ಶಂಕರ ಇಂದು ರಾಣೇಬೆನ್ನೂರು ಮತಕ್ಷೇತ್ರದ ಐರಾಣಿ,ಚಿಕ್ಕಕೂರವತ್ತಿ ಹಾಗೂ ನಗರದ ವಿವಿಧ ವಾರ್ಡಗಳಲ್ಲಿಅಬ್ಬರದ ಪ್ರಚಾರ ನಡಸಿದರು. ಈ ವೇಳೆ ಪ್ರಚಾರದ ಸಂಧರ್ಬದಲ್ಲಿ ಚಿಕ್ಕ ಬಾಲಕನೊಬ್ಬ ಆರ್ ಶಂಕರ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಆರ್ ಶಂಕರ ಅವರ ಮುಂದೆ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದನು. ಇನ್ನು ಈ ಸಂಧರ್ಬದಲ್ಲಿ ಮಾತನಾಡಿದ ಆರ್ ಶಂಕರ ಬಡ ಮಕ್ಕಳಿಗೆ ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಸಿಗಬೇಕು ಈ ನಿಟ್ಟಿನಲ್ಲಿ ಆರ್, ಶಂಕರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗುವದು ಎಂದರು.
ಬೆಂಗಳೂರು: ದೆಹಲಿ ಪೊಲೀಸರಿಂದ ಈ ಹಿಂದೆ ಒಮ್ಮೆ ಬಂಧಿತನಾಗಿದ್ದ ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಜುಬೇರ್, ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನ್‌ಲೈನ್ ಸುದ್ದಿಗಳ ಫ್ಯಾಕ್ಟ್ ಚೆಕ್ಕರ್ ಆಗಿರುವ ಆಲ್ಟ್ ನ್ಯೂಸ್‌ನ (alte news) ಮೊಹಮ್ಮದ್ ಜುಬೇರ್ (Mohammed Zubair) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂದಿ ಮಾಂಸದ ಫೋಟೋ ಕಳಿಸಿ ಬೆದರಿಕೆ ಹಾಕಲಾಗಿದೆಯಂತೆ. ʼʼ400 ಗ್ರಾಂ ಹಂದಿ ಮಾಂಸ ಆರ್ಡರ್ ಮಾಡಿ ಕಳಿಸಿದ್ದೇನೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆʼʼ ಎಂದು @Cyber_Huntss ಎಂಬ ಸಾಮಾಜಿಕ ಜಾಲತಾಣದಿಂದ ಯಾರೋ ಜುಬೇರ್‌ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. Canine Craving https://Caninecraving.com ಎಂಬ ಪ್ರಾಣಿಗಳಿಗೆ ಆಹಾರ ಬುಕ್ ಮಾಡುವ ವೆಬ್ ಸೈಟ್‌ನಿಂದ ಕಳಿಸಿರುವುದಾಗಿ ಪೋಸ್ಟ್ ತಿಳಿಸಿದೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ, ಎರಡು ಜನಾಂಗದವರ ಮಧ್ಯೆ ದ್ವೇಷವನ್ನುಂಟು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಮೊಹಮ್ಮದ್ ಜುಬೇರ್ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಐಪಿಸಿ ಸೆಕ್ಷನ್…
ಬೆಂಗಳೂರು: ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ, ಟೊಳ್ಳು ಭರವಸೆ ನೀಡುವುದಿಲ್ಲ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ನಾವು 165 ಭರವಸೆಗಳನ್ನು ನೀಡಿ 158 ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆ ಜಾರಿ ಮಾಡಲು ಪ್ರಾಮಾಣಿಕತೆ ತೋರಲಿಲ್ಲ. ಈಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿ ಮೂಲಕ ಪದವೀಧರರಿಗೆ 3000 ಹಾಗೂ ಡಿಫ್ಲೋಮಾ ಪದವೀಧರರಿಗೆ 1500 ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಹಾಗೂ ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ತುಂಬುತ್ತಿಲ್ಲ. ಹೀಗಾಗಿ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ ಎಂದರು. ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತಿದ್ದು, ನಿಮ್ಮ…
ಬೆಂಗಳೂರು: ರಾಜಧಾನಿ ಬೆಂಗಳೂರಿನ ರೇವಾ ಕಾಲೇಜಿನ (Reva College, Bangalore)ಫೆಸ್ಟಿವಲ್ ವೇಳೆ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾ ಗಿದ್ದಾರೆ. ಚಾಕು ಇರಿದಿದ್ದ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗ ಎಂಬಾತನನ್ನು ಬಂಧಿಸಲಾಗಿದೆ. ಕಳೆದ 28ರಂದು ರೇವಾ ಕಾಲೇಜಿನಲ್ಲಿ(Reva College, Bangalore) ಎರಡು ದಿನಗಳ ರೇವೋತ್ಸವ ಹೆಸರಲ್ಲಿ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು. ಎಲ್ಲರೂ ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾಗಲೇ, ಅಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದು ನೆತ್ತರು ಹರಿದಿತ್ತು. ಗಲಾಟೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಗುಜರಾತ್ ಮೂಲದ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ ಎಂಬಾತ ಹತ್ಯೆ ಆಗಿ ಹೋಗಿದ್ದ. ಪ್ರಕರಣ ಸಂಬಂಧ ಕಳೆದ ಭಾನುವಾರವೇ ಭರತೇಶ್‌ನನ್ನು ಬಂಧಿಸಲಾಗಿತ್ತು. ಕಾಲೇಜು ಕಾರ್ಯಕ್ರಮದಲ್ಲಿ ಆರೋಪಿ ಭರತೇಶ್ ಮತ್ತು ಮೃತ ಭಾಸ್ಕರ್ ಜೆಟ್ಟಿ ನಡುವೆ ಗಲಾಟೆ ನಡೆದಿತ್ತು. ಆದರೆ ಗಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಅನಿಲ್ ಜೋಶ್‌ನಲ್ಲಿ ಏಕಾಏಕಿ ನುಗ್ಗಿ…
ಬೆಂಗಳೂರು: ಬೆಂಗಳೂರು (Bnagalore) ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಲಘಟ್ಟಪುರ ನಿವಾಸಿ ರಘು ಅಲಿಯಾಸ್ ಪೆಪ್ಸಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇನ್ನೂ ಎಸ್ಕೇಪ್ ಆಗಿರುವ ಮೂವರು ಆರೋಪಿಗಳಾದ ಮಬಾರಕ್ ಅಲಿಯಾಸ್ ಬಾಬು, ನಾಗರಾಜ್, ಮುರುಗನ್ ಹುಡುಕಾಟದ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳು, ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ, ಚಿನ್ನಾಭರಣ, ಬೆಳ್ಳಿ ಜತೆಗೆ, ಬೈಕ್ ಗಳು, ಹಿತ್ತಾಳೆ ಸಾಮಾಗ್ರಿಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು. ವಿವಿಧ ಠಾಣೆಗಳ ಬರೋಬ್ಬರಿ 25 ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ತಲಘಟ್ಟಪುರ, ಹನುಮಂತನಗರ, ಸುಬ್ರಮಣ್ಯಪುರ, ಬಸವನಗುಡಿ, ಯಶವಂತಪುರ, ಚಾಮರಾಜಪೇಟೆ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಸೇರಿ ಹಲವೆಡೆ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಇನ್ನೂ ಬಂಧಿತ ಆರೋಪಿ ರಘು ಅಲಿಯಾಸ್ ಪೆಪ್ಸಿ ಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಬೈಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರು: ವಿಜಯನಗರ ಕ್ಷೇತ್ರದ ದೀಪಾಂಜಲಿ ನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ (Aswath Narayan)ಅವರು ವಾಗ್ದಾಳಿ ನಡೆಸಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧವಾಗಿದ್ದು, ಜನ ಸಮುದಾಯಗಳ ಪರವಾಗಿರುವ ಬಿಜೆಪಿಗೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಬೇಕು” ಎಂದು ಕರೆ ಕೊಟ್ಟರು. ಹೋದ ಬಾರಿ ಬಿಜೆಪಿಗೆ(BJP) ಸ್ವಲ್ಪದರಲ್ಲಿ ಸ್ಪಷ್ಟ ಬಹುಮತ ತಪ್ಪಿತು. ಕಾಂಗ್ರೆಸ್ ಮತ್ತು ಜೆಡಿಎಸ್ (jds)ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶವನ್ನೇ ಧಿಕ್ಕರಿಸಿದವು. ಆದರೆ, ಬಿಜೆಪಿ ತನಗೆ ಸಿಕ್ಕಿದ ಮೂರೂವರೆ ವರ್ಷಗಳ ಅವಕಾಶದಲ್ಲಿ ಕೋವಿಡ್, ಅತಿವೃಷ್ಟಿಯಂತಹ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಸೃಷ್ಟಿಯಾಗಿದೆ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ (Congress) ಮುಸ್ಲಿಮರ ಓಲೈಕೆಗಾಗಿ ಬಜರಂಗದಳ (Bajrang Dal) ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ (PFI) ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಟೀಕಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನೀಡಿರುವಂತಹ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಶರ್ಮಾ, ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ. ಈಗ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎನ್ನುವುದರಲ್ಲಿ ಏನು ಅರ್ಥ ಇದೆ? ಇದರ ಅರ್ಥ ಇಷ್ಟೇ. ಅವರು ಪಿಎಫ್‌ಐ ಬ್ಯಾನ್ ಮಾಡಿದ್ದಾರೆ, ನಾವು ಅದಕ್ಕೆ ಪರ್ಯಾಯವಾಗಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು.
ಬೆಂಗಳೂರು: ತಮ್ಮ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಗಾಂಧಿನಗರದ ಬಿನ್ನಿಪೇಟೆಯಲ್ಲಿ ಬಿಜೆಪಿ(BJP) ನಾಯಕರಿಂದ ಪ್ರತಿಭಟನೆ ನಡೆದಿದೆ. ಕಳೆದ ಕೆಲದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಕಾಂಗ್ರೆಸ್ ಪಕ್ಷದವರೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಈ ಹಲ್ಲೆ ಖಂಡಿಸಿ ಇಂದು ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ನೇತೃತ್ವದಲ್ಲಿ ಪ್ರತಿಭಟನೆ ಜರುಗಿದೆ. ಈ ವೇಳೆ ಸಪ್ತಗಿರಿ ಗೌಡ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು. ಇನ್ನೂ ಮೌನ ಮೆರವಣಿಗೆ ಮೂಲಕ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಅಧಿಕಾರಿಗಳು, ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.