Author: Prajatv Kannada

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಗೆ ಹೋಗಿರುವ ಸಿಎಂ ಬೊಮ್ಮಾಯಿ, ಇದೀಗಇಂದು  ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆದಿದ್ದು, ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ಆಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವುದು ಕೇವಲ ಊಹಾಪೋಹ, ಎರಡು ಸಲ ನಡೆದ ಚರ್ಚೆಯಿಂದ ಗೊತ್ತಾಗಿದೆ. ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನ ನಾಗರಬಾವಿಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ 6ನೇ ಶಾಖೆ ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ  ಶ್ರೀ ವಿನಯ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಟಿಎ ಶರವಣ, ಕನ್ನಡ ಚಲನ ಚಿತ್ರರಂಗದ ನಟಿಯರಾದ ಶ್ರೀಮತಿ ಅದಿತಿ ಪ್ರಭುದೇವ, ಕು. ರೂಪಿಕಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Read More

ಬೆಂಗಳೂರು: ಮಾರ್ಚ್ 9: ಇಂದು  ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ ವಿದುಷಿ ಶ್ರೀಮತಿ ನಿವೇದಿತಾ ಶರ್ಮ ಅವರ ಶಿಷ್ಯೆ ಹಾಗೂ ಶ್ರೀಮತಿ ಸರಸವಾಣಿ ಎಂ ಎಸ್ ಮತ್ತು ದಿ. ಪ್ರಕಾಶ್ ಅವರ ಪುತ್ರಿ ಕುಮಾರಿ ಸೌರಭ ನಾಡಿಗ್  ರಂಗಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ಕಾಲವಿದರು ಮತ್ತು scholar DR ವಿದ್ಯಾ ರಾವ್ , ಪ್ರೊಫೆಸರ್ MR ಹನುಮಂತರಾಯ ಮತ್ತು ವಿದುಷಿ ಶ್ರೀಮತಿ ನಾಗಶ್ರೀ ಕೆ ಎಸ್ ಕಾರ್ಯಕ್ರಮಕ್ಕೆ ಆಗಮಿಸಿ ಕುಮಾರಿ ಸೌರಭ ಅವರ ಮುಂದಿನ ಜೀವನಕ್ಕೆ ಹಾರೈಸಿ ಆಶೀರ್ವದಿಸಿದರು. ಸೌರಭ ರವರು ಶ್ರೀಮತಿ ಸರಸವಾಣಿ ಎಂ ಎಸ್ ಮತ್ತು ಲೇ ಪ್ರಕಾಶ್ ಎನ್ ವಿ ರವರ ಪುತ್ರಿಯಾಗಿದ್ದು, ಪತ್ರಕರ್ತ ಪವನ್  ನಾಡಿಗ್ ರವರ ಸಹೋದರಿಯಾಗಿದ್ದಾರೆ. ಸುಮಾರು 13 ವರ್ಷಗಳ ಹಿಂದೆ, ವಿದುಷಿ ಶ್ರೀಮತಿ. ನಿವೇದಿತಾ ಶರ್ಮಾ ನಾಡಿಗ್ ರವರ ಬಳಿ ಪುಟ್ಟ ವಿದ್ಯಾರ್ಥಿನಿಯಾಗಿ ಭರತನಾಟ್ಯವನ್ನು ಕಲಿಯಲು ಆರಂಬಿಸಿದ ಕುಮಾರಿ ಸೌರಭ, ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಂತೆ ಭರತನಾಟ್ಯವನ್ನು…

Read More

ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ (Karnataka Election) ಈ ಬಾರಿ ಬಿಜೆಪಿ (BJP) 20ಕ್ಕೂ ಹೆಚ್ಚು ಶಾಸಕರಿಗೆ ಕೊಕ್‌ ನೀಡಿ ಹೊಸಬರಿಗೆ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಹೌದು. ಈಗಾಗಲೇ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸರಣಿ ಸಭೆ ನಡೆಸುತ್ತಿದ್ದು ಇಂದು ಮಹತ್ವದ ಕೊನೆಯ ಸಭೆ ನಡೆಯಲಿದೆ. ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ಹೈಕಮಾಂಡ್‌ (BJP High Command) ನಾಯಕರು ಸರಣಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡುತ್ತಿದ್ದಾರೆ.  ಈ ಬಾರಿ ಎರಡು ಡಜನ್‌ಗೂ ಹೆಚ್ಚು ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದ್ದು,  ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಚಾರಿತ್ರ್ಯ ಕಾರಣದಿಂದ ಇಮೇಜ್ ಕಳೆದುಕೊಂಡ ನಾಯಕರಿಗೆ ಗೇಟ್ ಪಾಸ್ ನೀಡಲು ಸಭೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸರ್ವೆಯಲ್ಲಿ ಸೋಲುವ ಸಾಧ್ಯತೆ ಇರುವ ನಾಯಕರಿಗೂ ಟಿಕೆಟ್‌ ನೀಡುವುದು ಬೇಡ. ವಯಸ್ಸಿನ ಕಾರಣ, ವರ್ಚಸ್ಸು ಕಳೆದುಕೊಂಡ…

Read More

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಂಡಿಪುರ ಹುಲಿ ಸಂರಕ್ಷಣಾ ಅರಣ್ಯ ಸಫಾರಿಯಲ್ಲಿ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ‘ಹುಲಿ ಯೋಜನೆಯ 50ನೇ ವರ್ಷದ ಆಚರಣೆ’ ಕಾರ್ಯಕ್ರಮದ ನಿಮಿತ್ತ ಬಂಡಿಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬಹುದು. ಆದರೆ ವಾಸ್ತವ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. “50 ವರ್ಷಗಳ ಹಿಂದೆ ಬಂಡಿಪುರದಲ್ಲಿ ಆರಂಭಿಸಿದ ಹುಲಿ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಸಂಪೂರ್ಣ ಶ್ರೇಯಸ್ಸು ಪಡೆದುಕೊಳ್ಳಲಿದ್ದಾರೆ. ಅವರು ಅದ್ಭುತ ವೀಕ್ಷಣೆಯ ಅನುಭವ ಪಡೆದುಕೊಳ್ಳಲಿದ್ದಾರೆ. ಆದರೆ ಪರಿಸರ, ಅರಣ್ಯಗಳು, ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಜೀವಿಸುತ್ತಿರುವ ಮೂಲನಿವಾಸಿ ಜನರ ರಕ್ಷಣೆಗಾಗಿ ಮಾಡಿರುವ ಎಲ್ಲ ಕಾನೂನುಗಳನ್ನು ನಾಶಪಡಿಸುವ ಮೂಲಕ ಅವರು ಮತ್ತಷ್ಟು ತಮಾಷೆ ಮಾಡುತ್ತಿದ್ದಾರೆ. ಅವರು ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ವಾಸ್ತವಾಂಶವು ಸಂಪೂರ್ಣವಾಗಿ ತದ್ವಿರುದ್ಧವಾಗಿದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಸಫಾರಿಯ ಬಗ್ಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಕೂಡ ವ್ಯಂಗ್ಯವಾಡಿದೆ.…

Read More

ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದ ನಾಗರಾಜ ಛಬ್ಬಿ ಕಾಂಗ್ರೆಸ್ ಪಕ್ಷದಲ್ಲಿನ ಆಗು ಹೋಗುಗಳ ಬೆಳವಣಿಗೆ ಬಗ್ಗೆ ಮನನೊಂದು, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆಂದು ಪತ್ರದಲ್ಲಿ ಉಲ್ಲೇಖಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಲಘಟಗಿ ಕ್ಷೇತ್ರಕ್ಕೆ ಸಂತೋಷ ಲಾಡ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅದೇ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನಾಗರಾಜ ಛಬ್ಬಿಗೆ ಟಿಕೆಟ್ ನೀಡದ ಕಾರಣ ಮನನೊಂದು ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಬರೆದಿದ್ದಾರೆ. ದೆಹಲಿಯಲ್ಲಿಂದು ವಿಧಾನ ಪರಿಷತ್ ಮಾಜಿ ಸದಸ್ಯನಾಗರಾಜ ಛಬ್ಬಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

Read More

ಚಿಕ್ಕಮಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ (Congress) ಸೇರಿದ್ದ ಮಾಜಿ ಶಾಸಕ ವೈಎಸ್ವಿ ದತ್ತಾಗೆ (YSV Datta) ಕಡೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಇಂದು(ಏಪ್ರಿಲ್ 09) ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ತಮ್ಮ ಅಭಿಮಾನಿಗಳ ಜೊತೆ ಚರ್ಚಿಸಿದರು. ಅಭಿಮಾನಿಗಳ ಅಭಿಪ್ರಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಸ್ವಾಭಿಮಾನಿ ಕಹಳೆ ಮೊಳಗಿಸಿದ್ದಾರೆ. ಕಡೂರಿನ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಚುನಾವಣಾ ಸ್ಪರ್ಧೆ ಬಗ್ಗೆ ಅಭಿಮಾನಿಗಳ ಸಮ್ಮುಖದಲ್ಲಿ ಕಡೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಚುನಾವಣಾ ಖರ್ಚಿಗೆ ಹಣ ಸಂಗ್ರಹಕ್ಕೆ ಮುಂದಾಗಿದ್ದು, ಸಮಾವೇಶದಲ್ಲೇ ಟವಲ್ ಹಾಸಿ ಹಣ ಸಂಗ್ರಹಿಸಿದರು. ಈ ವೇಳೆ ಮಾತನಾಡಿದ ದತ್ತಾ, ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದು ಮುಗಿದ ಕಥೆ. ಹಣ ಮತ್ತು ಜಾತಿ ಮೇಲೆ ಅಭ್ಯರ್ಥಿ ಅಯ್ಕೆ…

Read More

ರಾಮನಗರ: ಜಾನುವಾರು ಸಾಗಾಟ ವೇಳೆ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ(Puneeth Kerehalli) ಸೇರಿದಂತೆ ಇತರೆ ನಾಲ್ಕು ಆರೋಪಿಗಳಿಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ಆದೇಶ ಹೊರಡಿಸಿದೆ. ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ನಾಲ್ವರು ಸಹಚರರನ್ನು ಇಂದು ಬೆಳಗ್ಗೆ ರಾಜಸ್ಥಾನದಿಂದ ರಾಮನಗರಕ್ಕೆ ಕರೆತಂದಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಕನಕಪುರ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಘಟನೆ ಹಿನ್ನೆಲೆ ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹವವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದಿದ್ದರು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಷ್…

Read More

ಕೋಲಾರ: ಮಾಲೂರು  ವಿಧಾ‌‌ನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 2 ನೇ ಬಾರಿಗೆ ಅಧಿಕಾರಕ್ಕೆ ಬಂದರೆ ನಾನು ಕ್ಷೇತ್ರವನ್ನು ಬಿಡುತ್ತೆನೆ   ಅಭಿವೃದ್ದಿ ಅಂದರೆ ಅವರು ಅಭಿವೃದ್ಧಿ ಆಗಿರುವುದು ಸಾಕಷ್ಟು ಹಣವನ್ನು ಮಾಡಿಕೊಂಡು ಇದ್ದಾರೆ ಅವರ ಸ್ವಂತ ಜಾಗಗಳಿಗೆ ಕೋಟ್ಯಾಂತರ ರೂ ಖರ್ಚು ಮಾಡಿ ರಸ್ತೆ  ಹಾಕಿಸಿಕೊಂಡಿದ್ದಾರೆ ಎಂದು ಮಾಲೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ ಇ ರಾಮೇಗೌಡ ಅವ್ರು ಹೇಳಿದರು. ಮಾಲೂರಿನ  ಮಾಸ್ತಿಯಲ್ಲಿ ಮನೆ ಮನೆ ಪ್ರಚಾರದ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ್ರು.ನಂಜೇಗೌಡರು ಅಭಿವೃದ್ಧಿಯಾಗಿದ್ದಾರೆ ಆದ್ರೆ ಕ್ಷೇತ್ರದಲ್ಲಿ ಬಡವರು ಅಭಿವೃದ್ಧಿ ಯಾಗಿಲ್ಲ ಶಾಸಕರಾದ ನಂಜೇಗೌಡ ಅವರು ಬಡವರಿಗೆ ಅಂತ ಏನಾದರು ಪ್ರೀಯಾಗಿ ಸೈಟ್ ಗಳನ್ನು ಕೊಟ್ಟಿದ್ದಾರೆ.ಆದ್ರೆ ನಾನು ಅಧಿಕಾರಕ್ಕೆ ಬಂದರೆ 5  ವರ್ಷದಲ್ಲಿ 10 ಸಾವಿರ ಪ್ರೀ ಸೈಟ್ ಗಳನ್ನು ಕೊಡುತ್ತೆನೆ ಒಂದು ವೇಳೆ 10 ಸಾವಿರ ಸೈಟ್ ಕೊಡದೆ ಇದ್ದರೆ‌ ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸವಾಲ್ ಹಾಕಿದರು. Video Player 00:00 02:47 ಮಾಲೂರು ಕ್ಷೇತ್ರದಲ್ಲಿ ಅಭಿವೃದ್ಧಿ…

Read More

ಚಿಕ್ಕಬಳ್ಳಾಪುರ :ಬೆಂಗಳೂರಿನಿಂದ ಬೆಂಗಳೂರಿನಿಂದ ಹೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದ ಹೊಸಳ್ಳಿ ಕೆರೆಯಲ್ಲಿ ಇಂದು ಬೆಳ್ಳಂಬೆಳಗ್ಗೆನೇ ಟೆಕ್ಕಿಗಳ ಕಲರವ ಕಂಡುಬಂತು .  ಬೆಂಗಳೂರಿನ ಕರ್ನಾಟಕ ಐಟಿಎಫ್ ಸಂಸ್ಥೆ ಆಯೋಜಿಸಿದ್ದ ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಯುವತಿಯರು ಯುವಕರು ಭಾಗವಹಿಸಿ ಸಕ್ಕತ್ ಎಂಜಾಯ್ ಮಾಡಿದರು. ವೀಕೆಂಡ್ ಭಾನುವಾರ ರಜೆ ಇದ್ದ ಕಾರಣ ಬೆಳ್ಳಂ ಬೆಳಗ್ಗೇನೆ ಐಟಿ ಬಿಟಿ ಉದ್ಯೋಗಿಗಳು ಸೇರಿದಂತೆ ನೂರಾರು ಜನ ಆಗಮಿಸಿ ಕೆರೆ ಅಂಗಳವನ್ನು ಸ್ವಿಮ್ಮಿಂಗ್‌ಪೂಲ್‍ ವಾತಾವರಣ ಸೃಷ್ಟಿ ಮಾಡಿದ್ದರು. ಈ ವೇಳೆ ಈಜು ಸ್ಪರ್ಧೆಯ ತರಬೇತಿಯನ್ನು ಸಹ ನೀಡಲಾಯಿತು. ಇನ್ನು ಟೆಕ್ಕಿಗಳ ಆಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಅಚ್ಚರಿಯಿಂದ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.. ವರದಿ :ಬಿ ಸುರೇಶ್ ಬಾಬು, ಚಿಕ್ಕಬಳ್ಳಾಪುರ

Read More