ಬೆಂಗಳೂರು: ಮೋದಿ ಸಫಾರಿ ಕುರಿತು ವರದಿಯೊಂದನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಗಿ ಟ್ವೀಟ್ (Tweet) ಮಾಡಿದ್ದಾರೆ. ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾನುವಾರ ಬಂಡೀಪುರಕ್ಕೆ (Bandipur) ಆಗಮಿಸಿದ್ದಾರೆ. ಈ ವೇಳೆ 22 ಕಿಲೋಮೀಟರ್ ಸಫಾರಿ (Safari) ನಡೆಸಿ ಬಂಡೀಪುರದ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆ ಮಾಡಿದರು. ಮೋದಿ ಸಫಾರಿ ವೇಳೆ ಹುಲಿ ಗೋಚರಿಸಲಿಲ್ಲ ಎಂದು ತಿಳಿಸುವ ಮಾಧ್ಯಮ ವರದಿಯನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ. ಹಿಡಿದು ಮಾರಿಬಿಡುತ್ತಾರೆ ಎನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ ಅಯ್ಯೋ ಪಾಪ. ಇನ್ನು ಕೆಲವೇ ದಿನಗಳಲ್ಲಿ ಬಂಡೀಪುರ ಉಳಿಸಿ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಎಂದು ಬರೆದು ನರೇಂದ್ರ ಮೋದಿಯವರಿಗೆ ಟ್ಯಾಗ್ (Tag) ಮಾಡಿದ್ದಾರೆ.
Author: Prajatv Kannada
ಬೆಂಗಳೂರು: ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸಿದೆ ಎನ್ನುವುದು ವಿರೋಧಿಗಳ ಆರೋಪವಷ್ಟೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸಿದೆ ಎನ್ನುವುದು ವಿರೋಧಿಗಳ ಆರೋಪವಷ್ಟೇ. ಜನತೆ ಅದಕ್ಕೆ ಸೊಪ್ಪು ಹಾಕಬಾರದು. ಕಾಂಗ್ರೆಸ್ ಒಗ್ಗಟ್ಟಿನಿಂದ ಕೂಡಿದ್ದು, ಈ ಸಲ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಇದು ನನ್ನ ಕೊನೆಯ ಚುನಾವಣೆಯಾಗಿದೆ. ಅಲ್ಲದೇ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಹೊರತು ರಾಜಕೀಯದಿಂದ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಮೀಸಲಾತಿ ಮರುವಿಂಗಡಣೆ ಸಾಂವಿಧಾನಿಕವಲ್ಲ. ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿಯನ್ನು ಹೆಚ್ಚಿಸಲು ನಮ್ಮ ವಿರೋಧವಿಲ್ಲ. ಆದರೆ, ಮುಸ್ಲಿಮರ ಮೀಸಲಾತಿಯನ್ನು ಏಕೆ ರದ್ದುಗೊಳಿಸಿದ್ದು, ಎಂದು ಪ್ರಶ್ನಿಸಿದ ಅವರು, ಇದು ದ್ವೇಷದ ರಾಜಕಾರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ಅವರು ಹರಿಹಾಯ್ದರು.
ದೊಡ್ಡಬಳ್ಳಾಪುರ: ಚುನಾವಣೆಯ ದಿನಾಂಕ ನಿಗದಿಯಾದ ಬೆನ್ನಲ್ಲೆ ತಾಲೂಕಿನಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದೆ..ಕೊನ್ನಘಟ್ಟ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ವಿಜಯಶಾಲಿಯಾಗಿದ್ದಾ ಅಂಚರಹಳ್ಳಿ ಬಸವರಾಜ್,ಸೊಣ್ಣಪ್ಪನಹಳ್ಳಿ ಗ್ರಾಮದ ಎಪಿಎಂಸಿ ಅದ್ಯಕ್ಷ ನಾಗರಾಜ್ ಮತ್ತು ಮುಖಂಡ ನಾಗರಾಜ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು..ಬಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟ, ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು ಮಾಡಿರುವ ಸಮಾಜ ಸೇವೆ,ಸಾಮಾಜಿಕ ಕಾರ್ಯಗಳು ಮತ್ತು ಬಿಜೆಪಿ ತತ್ವ ಸಿದ್ದಾಂತಗಳನ್ನು ಮೆಚ್ಚಿ ಗ್ರಾಮಸ್ಥರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಇದೆ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಕ್ತಾರೆ ಪುಷ್ಪ ಶಿವ ಶಂಕರ್ ,ಕೊನ್ನಘಟ್ಟ ಪಂಚಾಯ್ತಿಯ ಹಿರಿಯ ನಾಯಕ ಆಂಜಿನಪ್ಪ, ರಾಜಘಟ್ಟ ಗ್ರಾಮದ ಮುಖಂಡ ನರಸಿಂಹ ಮೂರ್ತಿ,ಪಂಚಾಯ್ತಿ ಸದಸ್ಯ ಪ್ರಭಾಕರ್ ಸೇರಿದಂತೆ ಪಕ್ಷದ ಪಧಾದಿಕಾರಿಗಳು,ಮುಖಂಡರು, ಯುವಕರು ಭಾಗಿಯಾಗಿದ್ದರು.
ಬೆಂಗಳೂರು: ಅಮುಲ್-ನಂದಿನಿ ವಿಲೀನದ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್ ಬಲಿಷ್ಠ, ಕೆಎಂಎಫ್ ಗೆ ಭದ್ರ ಬುನಾದಿಯಿದೆ. ಯಾವುದೇ ಸ್ಪರ್ಧೆಯನ್ನು ಎದುರಿಸುವಂತಹ ಸಾಮರ್ಥ್ಯ ಹೊಂದಿದೆ. ಗುಜರಾತ್ ನ ಅಮುಲ್ ನಲ್ಲಿ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ನಂದಿನಿ ಉತ್ಪನ್ನಗಳು ದೇಶ, ವಿದೇಶದಲ್ಲಿ ಮಾರಾಟವಾಗುತ್ತಿದೆ. ತಿರುಮಲ ಲಾಡಿಗೆ ನಂದಿನಿ ತುಪ್ಪ, ಗುಜರಾತ್ ಗೆ ತುಪ್ಪ, ಚೀಜ್ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು. ಚುನಾವಣಾ ರಾಜಕಾರಣಕ್ಕೆ ಜನರ ದಿಕ್ಕು ತಪ್ಪಿಸಲು ಹುನ್ನಾರ ಹೂಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾರುಕಟ್ಟೆ ವಿಸ್ತರಣೆಗೆ ಸಲಹೆ- ಸೂಚನೆ ನೀಡಿದ್ದಾರೆ. ಬೇಸಿಗೆಯಲ್ಲಿ ಹಸಿ ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಕಡಿಮೆಯಾಗುವುದು ಸಹಜ. ಕೃತಕ ಅಭಾವ ಸೃಷ್ಟಿಸುವ ಪ್ರಮೇಯ ಉದ್ಭವಿಸದು ಎಂದರು. ಆನ್ ಲೈನ್ ನಲ್ಲಿ ವ್ಯಾಪಾರ ಹಾಲು, ಮೊಸರು ಮತ್ತದರ ಉತ್ಪನ್ನಗಳ ವಹಿವಾಟು ನಡೆಯುತ್ತದೆ. ಅಮುಲ್ ಹಾಲು ಲೀಟರ್ ಗೆ 57…
ಬೆಂಗಳೂರು: ಅಮಿತ್ ಶಾ ಅವರು ಅಮುಲ್ ಜೊತೆ ಕೆಎಂಎಫ್ ವಿಲೀನದ ಪ್ರಸ್ತಾವ ಮಾಡಿದ ದಿನದಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ.ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್ ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಮತ್ತು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ ಎಂದು ಪ್ರಶ್ನಿಸಿದ್ದಾರೆ. ಭರವಸೆ ನೀಡಿದಂತೆ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಲಿಲ್ಲ, ಬದಲಿಗೆ ನಮ್ಮ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳಲ್ಲಿನ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಂಡಾಯಿತು. ಈಗ ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ ಮೋದಿಯವರೇ ಎಂದು ಕೇಳಿದ್ದಾರೆ. ಹಾಲು ಹೆಚ್ಚಾಯಿತು ಎಂದು ನಾವು ಖರೀದಿ ಕಡಿಮೆ ಮಾಡಿರಲಿಲ್ಲ. ಹೆಚ್ಚುವರಿ ಹಾಲನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಇದು ಗೋಸಂಪತ್ತು, ರೈತ
ಬೆಂಗಳೂರು: ಕಾಡಿಗೆ ಸಫಾರಿಗೆಂದು (Safari) ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್‌ನಲ್ಲಿ ಇರಬೇಕು. ಆದರೆ ಕುಮಾರಸ್ವಾಮಿ (H.D.Kumaraswamy) ಅವರಿಗೆ ಅದು ಎರಡೂ ಹಾಕಲು ಬರುವುದಿಲ್ಲವಲ್ಲ, ಏನುಮಾಡುವುದು ಎಂದು ಮೋದಿ (Narendra Modi) ಬಂಡೀಪುರ (Bandipur) ಅರಣ್ಯ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನರಿಗೆ ನಾಯಕ ಅವರು. ಅಂತಹ ರೋಲ್ ಮಾಡೆಲ್‌ಗೆ (Roll Model) ರೋಲ್ ಮಾಡೆಲ್ ತರಹ ಇರಬೇಡಿ ಸ್ವಾಮಿ ಎಂದು ಹೇಳಲಾಗುವುದಿಲ್ಲ ಎಂದರು. ಕೋವಿಡ್ (Covid) ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು? ಕಾಂಗ್ರೆಸ್‌ನವರು (Congress) ಲಸಿಕೆ ತೆಗೆದುಕೊಳ್ಳಬೇಡಿ ಎಂದಿದ್ದರು. ಇಡೀ ವಿಶ್ವದಲ್ಲಿ ಭಾರತ ಮಾದರಿಯಾಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ಮನೆ ಪಾಪ ಏನೋ ಹೇಳಬೇಕು ಎಂದು…
ಸ್ಯಾಂಡಲ್‌ವುಡ್‌ನ (Sandalwood) ಸದ್ಯ ಲೇಟೆಸ್ಟ್ ಸುದ್ದಿ ಸಮಾಚಾರ ಅಂದರೆ ಕಿಚ್ಚ ಸುದೀಪ್‌ಗೆ (Kiccha Sudeep) ಬೆದರಿಕೆ ಪತ್ರ ಬಂದಿರೋದು. ಖಾಸಗಿ ವೀಡಿಯೋ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮತ್ತು ಮ್ಯಾನೇಜರ್ ಜಾಕ್ ಮಂಜು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಸಿಸಿಬಿ ತನಿಖೆ ಕೂಡ ಶುರುವಾಗಿದ್ದು, ಈ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (Central Crime Branc) ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು…
ಬೆಂಗಳೂರು: ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಗುಜರಾತಿನ ಅಮುಲ್ ನಡೆ ವಿರುದ್ಧ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ”ಸುಮಾರು ಅರ್ಧ ಶತಮಾನಗಳಷ್ಟು ಕಾಲ ರಾಜ್ಯದ ಮನ ಗೆದ್ದಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮತ (ಕೆಎಂಎಫ್)ವನ್ನು ಗುಜರಾತ್‌ನ ಅಮುಲ್‌ನೊಂದಿಗೆ ವಿಲೀನಗೊಳಿಸುವ ಹುನ್ನಾರದ ಮೊದಲ ಹೆಜ್ಜೆ ಇದು,” ಎಂದೇ ಬಹುತೇಕರ ಅನುಮಾನ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಹಾಲು ಮತ್ತು ಮೊಸರು ಮಾರಾಟ ಆರಂಭಿಸಲು ಅಮುಲ್ ಸಂಸ್ಥೆ ಮುಂದಾಗಿರುವುದು ರಾಜ್ಯದ ಜನರನ್ನು ಕೆರಳಿಸಿದೆ. ಐಸ್‌ಕ್ರೀಮ್ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಅಮುಲ್‌ಗೆ ಇದು ಬೇಕಿರಲಿಲ್ಲ ಎಂದೇ ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಡಿಸೆಂಬರ್‌ನಲ್ಲಿ ಮಂಡ್ಯ ಜಿಲ್ಲೆ ಗೆಜ್ಜಲಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನು ಸೂಕ್ಷ್ಮವಾಗಿ ಮುಂದಿಟ್ಟಿದ್ದರು. ಇದಕ್ಕೆ ಆಗಲೂ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಮೂರು ತಿಂಗಳಲ್ಲಿ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲು,…
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏ.9) ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ (Bandipur National Park) ಸಫಾರಿ ನಡೆಸಿದ್ದು, ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಇವತ್ತು ಸಫಾರಿ (PM Modi in Safari) ಹಾಕೊಂಡು, ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ವೋಟು ಒತ್ತಿ ಬಿಡುತ್ತಾರಾ? ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಅವರು ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ, ಆದರೆ ಮಾನವರ ರಕ್ಷಣೆಯನ್ನೂ ಮಾಡಬೇಕಲ್ವ? ವನ್ಯಜೀವಿಗಳಿಂದ ಎಷ್ಟು ದಾಳಿಯಾಗಿದೆ, ಎಷ್ಟು ಜೀವ ಹಾನಿಯಾಗಿದೆ. ಯಾವುದಾದರೂ ಒಂದು ಕುಟುಂಬಕ್ಕೆ ಭೇಟಿ ಕೊಟ್ಟಿದ್ದಾರಾ? ವನ್ಯಜೀವಿ ದಾಳಿಗೆ ಒಳಗಾದ ಕುಟುಂಬ ಪರಿಸ್ಥಿತಿ ಏನಾಗಿದೆ ಎಂದು ನೋಡಿದ್ದಾರಾ? ಕೂಲಿಂಗ್ ಗ್ಲಾಸ್, ಸೂಟು ಬೂಟು ಹಾಕೊಂಡು ಬಂದ್ರೆ ಆಗುತ್ತಾ? ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ,…
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಲಕ್ನೋ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯವನ್ನು ಆಡಲಿದೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸಲು ಸಾವಿರ ಸಂಖ್ಯೆಯಲ್ಲಿ ಸ್ಟೇಡಿಯಂನತ್ತ ಬರಲಿದ್ದಾರೆ. ಇದರ ಮಧ್ಯೆಯೇ IPL ಕ್ರಿಕೆಟ್ ಪಂದ್ಯದಲ್ಲಿ ನಕಲಿ ಟಿಕೆಟ್ ದಂಧೆ ಪ್ರಕರಣ ಕಂಡು ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ. ನಕಲಿ ಟಿಕೆಟ್ ಆಟಕ್ಕೆ ಬ್ರೇಕ್ ಹಾಕಲು ಪೊಲೀಸರ ಪ್ಲಾನ್ ಮಾಡಿದ್ದು, ನಾಳೆಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ ಪಂದ್ಯಕ್ಕೆ ಮಫ್ತಿಯಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ನಾಳೆ ಮಫ್ತಿಯಲ್ಲಿ ಪೊಲೀಸರು ಇರಲಿದ್ದಾರೆ. ನಾಳೆಯ ಪಂದ್ಯಕ್ಕೆ ಸುಮಾರು 300 ಮಫ್ತಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಮಫ್ತಿ ಪೊಲೀಸರು ಯಾರೇ ಟಿಕೆಟ್ ಮಾರಾಟ ಮಾಡಲು ಬಂದರೂ ಕೂಡಲೇ ವಶಕ್ಕೆ ಪಡೆಯಲಿದ್ದಾರೆ. ಪೊಲೀಸರು ಟಿಕೆಟ್ ಮಾರಾಟ ಮಾಡೋರು ಅಷ್ಟೆ ಅಲ್ಲ ಬ್ಲಾಕ್ ನಲ್ಲಿ ಟಿಕೆಟ್ ತಗೋಳೋರಿಗೂ ಬಿಸಿ ಮುಟ್ಟಿಸಲಿದ್ದಾರೆ. ಹಿಂದೆ ನಡೆದ ಮುಂಬೈ ಹಾಗೂ…