ಲಂಡನ್: ಗುಡ್ ಫ್ರೈಡೇಯ ಶಾಂತಿ ಒಪ್ಪಂದದ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತರ ಐರ್ಲೆಂಡ್‌ಗೆ ತೆರಳಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಲಿದ್ದಾರೆ. ಮಂಗಳವಾರದಂದು ಬೈಡನ್ ಆಗಮಿಸಲಿದ್ದು, ಅಮೆರಿಕ ಅಧ್ಯಕ್ಷರಾಗಿ ಇಲ್ಲಿಗೆ ಅವರ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಐರಿಷ್ ರಿಪಬ್ಲಿಕ್‌ನಲ್ಲಿ ತಮ್ಮ ಪೂರ್ವಜನರ ಮನೆಗಳಿಗೂ ಬೈಡನ್ ಭೇಟಿ ನೀಡಲಿದ್ದಾರೆ. 1998 ಏಪ್ರಿಲ್ 10ರಂದು ಗುಡ್ ಫ್ರೈಡೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರೊಂದಿಗೆ ಉತ್ತರ ಐರ್ಲೆಂಡ್‌ನಲ್ಲಿ 1960ರ ದಶಕದ ಬಳಿಕ ಉಂಟಾದ ರಾಜಕೀಯ ಸಂಘರ್ಷ, ಹಿಂಸಾಚಾರಕ್ಕೆ ವಿರಾಮ ಬಿದ್ದಿತ್ತು.
Author: Prajatv Kannada
ಮೋರ್ಗನ್‌ಟೌನ್: ಅಮೆರಿಕದಾದ್ಯಂತ ಆಸ್ಪತ್ರೆಗಳಲ್ಲಿರುವ ರೋಗಿಗಳು ‘ಕ್ಯಾಂಡಿಡಾ ಔರಿಸ್’ ಎಂಬ ಹೆಸರಿನ ಶಿಲೀಂಧ್ರ ಸೋಂಕಿನ ಅಲರ್ಜಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದು, ಈ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಆದ್ದರಿಂದ ಎಚ್ಚರದಿಂದ ಇರಬೇಕೆಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ. ಇತ್ತೀಚೆಗೆ ಪತ್ತೆಯಾದ ಈ ರೋಗಕಾರಕ ಫಂಗಸ್ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುತ್ತಿದ್ದು ಮುಖ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅಲರ್ಜಿ ಉಂಟುಮಾಡಿ ಅವರ ಸಾವಿಗೆ ಕಾರಣವಾಗಿರುವುದು, ಅಮೆರಿಕದ ಜನತೆಗೆ ಆತಂಕವನ್ನುಂಟು ಮಾಡಿದೆ. ಕ್ಯಾಂಡಿಡಾ ಔರಿಸ್ ಮೊದಲ ಬಾರಿಗೆ 2009ರಲ್ಲಿ ಕಂಡುಬಂದಿದ್ದು ಇದು ಏಕಕೋಶ ಶಿಲೀಂಧ್ರವಾಗಿದ್ದು, 2019ರಿಂದ ಅಮೆರಿಕದಲ್ಲಿ ಈ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳಕಂಡುಬರುತ್ತಿದೆ. ಮನುಷ್ಯನ ಜೀವಕ್ಕೇ ಅಪಾಯ ತಂಡೊಡ್ಡುವ ಕ್ಯಾಂಡಿಡಾ, ಸದ್ಯಕ್ಕಿರುವ ಫಂಗಸ್ ನಿರೋಧಕ ಔಷಧಗಳ ವಿರುದ್ಧ ಪ್ರತಿರೋಧಿಸುವ ಸಾಮರ್ಥ್ಯ ಹೊಂದಿದೆ.
ನವದೆಹಲಿ: ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ಎಮಿನಿ ಝಪರೋವಾ ಅವರು ಇಂದಿನಿಂದ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವರ್ಷ ಉಕ್ರೇನ್ ಮೇಲೆ ರಷ್ಯಾವು ಯುದ್ಧ ಸಾರಿತ್ತು. ಈ ಬೆಳವಣಿಗೆ ನಡುವೆ ಎಮಿನಿ ಝಪರೋವಾ ಇದೇ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಎಮಿನಿ ಅವರು ಪ್ರವಾಸದ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಸಂಜಯ್ ವರ್ಮಾ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಕ್ರೇನ್‌ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುವ ನಿರೀಕ್ಷೆಯೂ ಇದೆ. ‘ಎಮಿನಿ ಅವರು ಇಂದಿನಿಂದ 12ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ದಿಸೆಯಲ್ಲಿ ಹಾಗೂ ಉಕ್ರೇನ್‌ನ ಸದ್ಯದ ಪರಿಸ್ಥಿತಿ ಕುರಿತು ಅವರು ಸಂಜಯ್ ವರ್ಮಾ ಜೊತೆ ಚರ್ಚೆ ನಡೆಸಲಿದ್ದಾರೆ.
ತೆಹ್ರಾನ್: ಕಡ್ಡಾಯ ವಸ್ತ್ರ ಸಂಹಿತೆ ಅನ್ನು ಧಿಕ್ಕರಿಸುವ ಮಹಿಳೆಯರ ಸಂಖ್ಯೆಯನ್ನು ನಿಯಂತ್ರಿಸುವ ಮತ್ತಷ್ಟು ಪ್ರಯತ್ನ ಮಾಡಿರುವ ಇರಾನ್ ಅಧಿಕಾರಿಗಳು, ವಸ್ತ್ರ ಸಂಹಿತೆ ಪಾಲಿಸದ ಮಹಿಳೆಯರನ್ನು ಗುರುತಿಸಲು ಮತ್ತು ದಂಡ ವಿಧಿಸಲು ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ ಎಂದು ಇರಾನ್ ಪೊಲೀಸರು ತಿಳಿಸಿದ್ದಾರೆ. ವಸ್ತ್ರ ಸಂಹಿತೆಯನ್ನು ಪಾಲಿಸದ ಮಹಿಳೆಯರಿಗೆ ಅವುಗಳ ‘ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು’ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ‘ತಮ್ಮ ಸಂಸ್ಥೆಯಲ್ಲಿ ಸಾಮಾಜಿಕ ನಿಯಮಗಳ ಅನುಸರಣೆಯನ್ನು ಗಂಭೀರವಾಗಿ ಮೇಲ್ವಿಚಾರಣೆ ಮಾಡುವಂತೆ’ ಸಂಸ್ಥೆಗಳ ಮುಖ್ಯಸ್ಥರಿಗೆ ಪೊಲೀಸರು ಸೂಚಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಹಿಜಾಬ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು. ಪೊಲೀಸರ ವಶದಲ್ಲಿದ್ದಾಗಲೇ ಅವರು ಮೃತಪಟ್ಟಿದ್ದರು. ಇದಾದ ಬಳಿಕೆ ಹಿಜಬ್ ವಿರುದ್ಧ ಇರಾನ್ ಮಹಿಳೆಯರ ಆಕ್ರೋಶ ಭುಗಿಲೆದ್ದಿದೆ. ಆ ಬಳಿಕ ಇರಾನ್ ನಲ್ಲಿ ಸಾಕಷ್ಟು ಮಹಿಳೆಯರು ಹಿಜಾಬ್ ಅನ್ನು ವಿರೋಧಿಸುತ್ತಿದ್ದು ಅವುಗಳನ್ನು ಧರಿಸದಿರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ದೆಹಲಿ :ಕರ್ನಾಟಕವಿಧಾನಸಭೆಚುನಾವಣೆಹಿನ್ನೆಲೆಯಲ್ಲಿಬಿಜೆಪಿಅಭ್ಯರ್ಥಿಗಳಆಯ್ಕೆಗಾಗಿದೆಹಲಿಗೆಹೋಗಿರುವಸಿಎಂಬೊಮ್ಮಾಯಿ, ಇದೀಗಸೋಮವಾರಬಿಜೆಪಿಅಭ್ಯರ್ಥಿಗಳಮೊದಲಪಟ್ಟಿಬಿಡುಗಡೆಮಾಡುವುದಾಗಿಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆದಿದ್ದು, ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ಆಗಿದೆ. ಕೆಲ ಕ್ಷೇತ್ರಗಳ ಬಗ್ಗೆ ಇನ್ನೂ 2 ಗಂಟೆಗಳ ಕಾಲ ಚರ್ಚೆ ಅಗತ್ಯವಿದೆ. ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಹಾಗೂ ಸರ್ವೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಇದಾದ ಬಳಿಕ ಬಿಜೆಪಿ ಸಂಸದೀಯ ಮಂಡಳಿಗೆ ಪಟ್ಟಿ ರವಾನಿಸಲಾಗುತ್ತದೆ ಎಂದರು. ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವುದು ಕೇವಲ ಊಹಾಪೋಹ, ಎರಡು ಸಲ ನಡೆದ ಚರ್ಚೆ ಫಲಶ್ರುತಿ ಇಂದು ಗೊತ್ತಾಗಲಿದೆ. ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಕೋವಿಡ್-19 (Covid-19) ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇದೀಗ ಹಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ (Mask) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಭೆಯನ್ನು ನಡೆಸಿದ್ದು, ಕೋವಿಡ್-19 ಕೇಸ್‌ಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಾಗರೂಕರಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಏಪ್ರಿಲ್ 10 ಹಾಗೂ 11 ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಅಣುಕು ಡ್ರಿಲ್ ನಡೆಸುವಂತೆ ಆರೋಗ್ಯ ಮಂತ್ರಿಗಳನ್ನು ಕೇಳಿಕೊಂಡಿದ್ದಾರೆ. ಮಾತ್ರವಲ್ಲದೇ ಕೋವಿಡ್ ಟೆಸ್ಟ್‌ಗಳನ್ನು ಹೆಚ್ಚಿಸುವಂತೆ ಮತ್ತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿದ್ದಾರೆ. ಇದೀಗ ಕೋವಿಡ್ ಕೇಸ್‌ಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಹಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹರ್ಯಾಣ (Haryana) ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದ ಆರೋಗ್ಯ ಇಲಾಖೆಯು ಕೋವಿಡ್ ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ. ಇದನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತ…
ಚೆನ್ನೈ: ಎರಡು ದಿನಗಳ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್‌ನ ಮೊದಲ ಹಂತದ ಕಟ್ಟಡವನ್ನು ಉದ್ಘಾಟಿಸಿದರು. ಅತ್ಯಾಕರ್ಷಕವಾಗಿ ನಿರ್ಮಿಸಲಾಗಿರುವ ಈ ಇಂಟಿಗ್ರೇಟೆಡ್ ಟರ್ಮಿನಲ್‌ನ ಮೊದಲ ಹಂತಕ್ಕೆ 1,250 ಕೋಟಿ ರೂ ವೆಚ್ಚವಾಗಿದೆ. “ಇದು ಚೆನ್ನೈನ ಮೂಲಸೌಕರ್ಯಕ್ಕೆ ಮಹತ್ವವಾದ ಸೇರ್ಪಡೆಯಾಗಿದೆ. ಇದು ಸಂಪರ್ಕವನ್ನು ವೃದ್ಧಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಕೂಡ ಅನುಕೂಲ ಮಾಡಿಕೊಡಲಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಟಿ-2 (ಎರಡನೇ ಹಂತ) ಕಟ್ಟಡವು ವಿಮಾನ ನಿಲ್ದಾಣದ ಪ್ರಯಾಣಿಕರ ಸಾಮರ್ಥ್ಯವನ್ನು ವರ್ಷಕ್ಕೆ 23 ಮಿಲಿಯನ್‌ನಿಂದ 30 ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆ ಇದೆ. ಇದರಲ್ಲಿ 100 ಚೆಕ್ ಇನ್ ಕೌಂಟರ್‌ಗಳು, 108 ವಲಸೆ ಕೌಂಟರ್‌ಗಳು, 17 ಎಸ್ಕಲೇಟರ್‌ಗಳು ಮತ್ತು 17 ಎಲಿವೇಟರ್‌ಗಳಿವೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಸುಮಾರು 2.20 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ವಾಯು ಸಂಚಾರ ದಟ್ಟಣೆ ನಿರ್ವಹಿಸಲು…
ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕಿಂತ ಪೂರ್ವದಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವ, ಸಾಗಾಟ ಮಾಡುವ, ಸಂಗ್ರಹಿಸುವ, ಮಾರಾಟ ಮಾಡುವ ಸಾಧ್ಯತೆಗಳಿರುವುದರಿಂದ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅಧಿಕಾರಿ ಕೆ.ಪ್ರಶಾಂತಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 1 ರಿಂದ ಎಪ್ರಿಲ್ 5 ರವರೆಗೆ ಜಿಲ್ಲೆಯಾದ್ಯಂತ ಕಾರ್ಯಕಾರಿ ಅಧಿಕಾರಿಗಳು ಒಟ್ಟು 32 ಘೋರ ಪ್ರಕರಣಗಳು, 17 ಸನ್ನದು ಷರತ್ತು ಉಲ್ಲಂಘನೆ ಪ್ರಕರಣಗಳು ಹಾಗೂ ಕಲಂ.15ಎ ಅಡಿಯಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಮಾಂಸಾಹಾರಿ ಖಾನಾವಳಿ, ಗೂಡು ಅಂಗಡಿ, ಇತ್ಯಾದಿಗಳ ಮೇಲೆ 65 ಪ್ರಕರಣಗಳು ಸೇರಿ 114 ಪ್ರಕರಣಗಳು ದಾಖಲಿಸಿದ್ದು ಒಟ್ಟು 589.710 ಲೀಟರ್ ಮದ್ಯ, 11.600 ಲೀಟರ್ ಗೋವಾ ಮದ್ಯ, 53 ಲೀಟರ್ ಬೀಯರ್, 12 ದ್ವಿಚಕ್ರ ವಾಹನ ಹಾಗೂ 2 ಮಾರುತಿ ಓಮಿನಿ …
ಧಾರವಾಡ: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯೊಬ್ಬಳು ಇಂದು ಅಸುನೀಗಿದ್ದು, ಸಾವಿನಲ್ಲೂ ಯುವತಿ ಸಾರ್ಥಕತೆ ಮೆರೆದಿದ್ದಾಳೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಕ್ಷತಾ ಅಶೋಕ ದೊಡವಾಡ (21) ಎಂಬ ಯುವತಿಗೆ ನಿನ್ನೆ ಅಪಘಾತವಾಗಿತ್ತು. ಗೋಶಾಲೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಉಪ್ಪಿನ ಬೆಟಗೇರಿಯ ಬೈಲಹೊಂಗಲ ರಸ್ತೆಯಲ್ಲಿ ಬೈಕ್‌ಗಳ ಮಧ್ಯೆ ಅಪಘಾತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಅಕ್ಷತಾಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅಕ್ಷತಾ ಇಂದು ಅಸುನೀಗಿದ್ದಾಳೆ. ಅಕ್ಷತಾ ಸಾವಿನ ದುಃಖದ ಮಧ್ಯೆಯೂ ಆಕೆಯ ಕುಟುಂಬಸ್ಥರು ಅಕ್ಷತಾಳ ಕಣ್ಣು, ಕಿಡ್ನಿ ಸೇರಿದಂತೆ ಇತ್ಯಾದಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಬಂಡೀಪುರದಲ್ಲಿ ಸಫಾರಿ ಡ್ರೆಸ್ನಲ್ಲಿ ಹೆಲಿಕಾಪ್ಟರ್ ಇಳಿದ PM ಮೋದಿ ಸ್ಟೈಲ್ ನೋಡಿ ಬಂಡೀಪುರದಲ್ಲಿ ನರೇಂದ್ರ ಮೋದಿ ಸಫಾರಿ ಹುಲಿ ಯೋಜನೆ (Project Tiger) ಘೋಷಣೆಯಾಗಿ ಇಂದಿಗೆ 50 ವರ್ಷ