Author: Prajatv Kannada

ಮಹದೇವಪುರ:  ಮಹದೇವಪುರ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿವಿಧ ಯೋಜನೆಗಳಡಿ 114 ಹೆಚ್ಚುವರಿ ಕೊಠಡಿಗಳನ್ನು  ಶಾಸಕರಾದ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು. ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ,ಅಶ್ವಥ್ ನಗರ,ಎಇಸಿಎಸ್ ಬಡಾವಣೆ, ಕುಂದಲಹಳ್ಳಿ ಕಾಲೋನಿ, ಲಕ್ಷ್ಮೀನಾರಾಯಣಪುರ, ಚಿನ್ನಪ್ಪನಹಳ್ಳಿ,ದೊಡ್ಡನೆಕ್ಕುಂದಿ  ಸೇರಿದಂತೆ ವಿವಿಧೆಡೆ  ಪ್ರಚಾರ ನಡೆಸಿದರು.ಜೊತೆಗೆ ಅಂಗಡಿ ಮುಗ್ಗಟ್ಟು, ಹೋಟೆಲ್, ಬಸ್ ನಿಲ್ದಾಣ ಗಳಲ್ಲಿದ್ದ ಸಾರ್ವಜನಿಕರಿಗೆ ಕರ ಪತ್ರಗಳನ್ನ ನೀಡಿ ತಮ್ಮನ್ನ ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ, ಶಿಕ್ಷಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ,ಕಂಪ್ಯೂಟರ್ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನಮ್ಮ ಕ್ಷೇತ್ರದಲ್ಲೆ ಎರಡು ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನ ನಿರ್ಮಾಣ ಮಾಡಲಾಗಿದೆ. ಹಲವು ಶಾಲಾ ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿಗಳನ್ನ  ಒದಗಿಸಲಾಗಿದೆ ಎಂದು ವಿವರಿಸಿದರು.…

Read More

ಬಿ ಎಂ ಆರ್ ಸಿಎಲ್ ಅಧಿಕಾರಿಗಳು, ಬೆಂಗಳೂರು ಮೆಟ್ರೋ (Bangalore Metro) ಅಭಿವೃದ್ಧಿಗೆ ಆಸ್ತಿ ಖರೀದಿಸಲು ಬರೋಬ್ಬರಿ 1,754 ಕೋಟಿ ರೂ ಖರ್ಚು ಮಾಡಿದ್ದಾರೆ. ಹಾಗೂ ವಿದ್ಯುತ್ ಸೌಲಭ್ಯಗಳ ಅಗತ್ಯ ಸ್ಥಳಾಂತರಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 82.89 ಕೋಟಿ ಖರ್ಚು ಮಾಡಿದ್ದಾರೆ. ಮೆಟ್ರೋ ಕಾರಿಡಾರ್‌ಗಳು, ನಿಲ್ದಾಣಗಳು ಮತ್ತು ಇತರ ಅಗತ್ಯ ಮೂಲ ಸೌಕರ್ಯಗಳನ್ನು ನಿರ್ಮಿಸಲು ಅಗತ್ಯವಾದ ಮಾರ್ಗವನ್ನು ಪಡೆಯಲು ರಸ್ತೆಗಳ ಅಗಲೀಕರಣ ಮತ್ತು ವಿದ್ಯುತ್ ಉಪಯುಕ್ತತೆಗಳ ಸ್ಥಳಾಂತರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 82.89 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. “ಹಂತ I ಮತ್ತು II ರಸ್ತೆಗಳನ್ನು ಈಗಾಗಲೇ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ, ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯನ್ನು ಸಂಪೂರ್ಣವಾಗಿ ರಸ್ತೆ ರಚನೆಗೆ ಬಳಸಿರುವುದರಿಂದ ಇದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Read More

ಬೆಂಗಳೂರು: ಟೋಲ್ ನಲ್ಲಿ 5 ರೂ. ಹೆಚ್ಚುವರಿ ವಸೂಲಿ ಮಾಡಿದ ಹಿನ್ನೆಲೆ 8000 ರೂ. ಪರಿಹಾರ ನೀಡಲು ಬೆಂಗಳೂರಿನ ಗ್ರಾಹಕ ಕೋರ್ಟ್ ಆದೇಶ (Bangalore Consumer Court order)ಹೊರಡಿಸಿದೆ. ಜೆಎಎಸ್ ಟೋಲ್ ಕಂಪನಿ 5 ರೂಪಾಯಿ ಹೆಚ್ಚುವರಿ ಟೋಲ್ ಶುಲ್ಕ ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿದಾರರಿಗೆ 5000 ರೂ. ಪರಿಹಾರ, 3,000 ರೂ. ವ್ಯಾಜ್ಯ ವೆಚ್ಚ ಸೇರಿ 8000 ರೂ. ಪರಿಹಾರ ನೀಡಲು ಆದೇಶ ನೀಡಿದೆ. ಬೆಂಗಳೂರಿನ ಗಾಂಧಿನಗರದ ಎಂ.ಬಿ. ಸಂತೋಷ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ ಮತ್ತು ಸದಸ್ಯರಾದ ಎನ್. ಜ್ಯೋತಿ, ಎಸ್.ಎಂ. ಶರಾವತಿ ಅವರನ್ನು ಒಳಗೊಂಡ ಪೀಠ ಆದೇಶ ನೀಡಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಸಂಗ್ರಹಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೆಎಎಸ್ ಟೋಲ್ ಕಂಪನಿ ಕ್ರಮಕ್ಕೆ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ (BS Yediyurappa) ಬಿಜೆಪಿ ನಾಯಕರು ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಹೊಸ ಬಾಂಬ್ ಸಿಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ (BJP) ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸಲು ಲಿಂಗಾಯತರನ್ನೇ ಬಳಸುತ್ತಿದ್ದಾರೆ. ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲೂ ಬಲಿಯಾದರು, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ. ಬಿಜೆಪಿ ಸವದಿಗೆ ಟಿಕೆಟ್ ಭರವಸೆ ಕೊಟ್ಟಿತ್ತು. ಆದರೂ ಅವರಿಗೆ ಟಿಕೆಟ್‍ನ್ನೇ ಕೊಡಲಿಲ್ಲ, ಟಿಕೆಟ್ ತಪ್ಪಿಸಿದರು. ಲಿಂಗಾಯತ ಸಮುದಾಯವನ್ನು ಉಪಯೋಗಿಸಿ ಕೈಬಿಟ್ಟಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾ ವರ್ಕೌಟ್ ಆಗಿದೆ. ಹಾಗಾಗಿ ಈ ಬಾರಿ ಲಿಂಗಾಯತರು ಕಾಂಗ್ರೆಸ್ ಪರ ಬರುತ್ತಾರೆ. ಮರಳಿ ಮನೆಗೆ ಅಂತ ವಾಪಸ್ಸು ಬರುತ್ತಾರೆ. ಬಿಜೆಪಿ…

Read More

ರಾಣೇಬೆನ್ನೂರ ಎನ್ ಸಿ ಪಿ ಅಭ್ಯರ್ಥಿ ಆರ್ ಶಂಕರ ಇಂದು ರಾಣೇಬೆನ್ನೂರು ತಾಲೂಕಿನ ಎಣ್ಣಿಹೊಸಳ್ಳಿ,ಚಳಗೇರಿ,ತೆರದಹಳ್ಳಿ,ಮಣಕೂರ,ನಂದಿಹಳ್ಳಿ,ಅಂತರವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡಸಿದರು‌. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಾನು ಸಚಿವನಾಗಿದ್ದಾಗ ಸಾಕಷ್ಟು ಅಭೀವೃದ್ದಿ ಮಾಡಿದ್ದೇನೆ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿದ್ದೇನೆ ಹೀಗಾಗಿ ನನಗೆ ಮತ ನೀಡಿ ನನ್ನನ್ನು ಆಯ್ಕೆಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಹಿಂದಿನ ಶಾಸಕರು ಯಾವದೇ ಅಭಿವೃದ್ದಿ ಮಾಡಿಲ್ಲಾ ಬರಿ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರುಣಕುಮಾರ ಪುಜಾರ ವಿರುದ್ದಾ ವಾಗ್ದಾಳಿ ಮಾಡಿದರು.

Read More

ಬೆಂಗಳೂರು: ಮೋದಿ ಜೊತೆ ಇರುವುದು ಲಂಚಕ್ಕೊಬ್ಬ, ಮಂಚಕ್ಕೊಬ್ಬ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Sivakumar) ಅವರು ಗುಡುಗಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಮೋದಿ ಜೊತೆ ಇರುವುದು ಲಂಚಕ್ಕೊಬ್ಬ, ಮಂಚಕ್ಕೊಬ್ಬ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಇವರ ಸರ್ಕಾರದಲ್ಲಿರುವ ಭ್ರಷ್ಟ ಮಂತ್ರಿಗಳ (corrupt ministers)ಬಗ್ಗೆ ದೇಶ, ರಾಜ್ಯ ನೋಡುತ್ತಿದೆ. ಭ್ರಷ್ಟ ಸರ್ಕಾರ, ಮಂತ್ರಿಗಳ ಜೊತೆಯೇ ಮೋದಿ ಇರುವುದು. ಅಂತಹವರಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡಿರುವುದು ಎಂದು ಗುಡುಗಿದರು. ಸವದಿ, ಜಗದೀಶ್ ಶೆಟ್ಟರ್ ವಿರುದ್ಧ ಭ್ರಷ್ಟಾಚಾರದ ಆರೋಪ ಇತ್ತಾ? ಆದರೂ ಯಾಕೆ ಟಿಕೆಟ್ ಕೊಡಲಿಲ್ಲ? ಪಕ್ಷದಿಂದ ಹೊರ ಹೋಗುವಂತೆ ಯಾಕೆ ಮಾಡಿದ್ರು? ನಮ್ಮ ಜೊತೆ ಇರುವವರ ಮೇಲೆ ಯಾವುದೇ ಆರೋಪಗಳು ಇಲ್ಲ. ಭ್ರಷ್ಟಾಚಾರ ನಡೆಸಿರುವ ಮಂತ್ರಿಗಳ ಪರವಾಗಿಯೇ ಪ್ರಧಾನಿ ಮೋದಿ ರ್ಯಾಲಿ ನಡೆಸಿ, ಪ್ರಚಾರ ನಡೆಸುತಿದ್ದಾರೆ ಎಂದು ತಿರುಗೇಟು…

Read More

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ (Amit shah in Bangalore) ಅವರು ಬೆಂಗಳೂರಿನ ಮೂರು ಕಡೆಗಳಲ್ಲಿ ಇಂದು ರೋಡ್ ಶೋ ನಡೆಸಲಿದ್ದಾರೆ.ಕಳೆದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಬೆನ್ನಲ್ಲೇ  ಇಂದು ಬೆಂಗಳೂರಿಗೆ(Amit shah in Bangalore) ಆಗಮಿಸಲಿರುವ ಅಮಿತ್ ಶಾ ಅವರು, ಇಂದು ಸಂಜೆ 4.50 ರಿಂದ 5.40 ರವರೆಗೆ ಮೊದಲನೇ ರೋಡ್ ಶೋ ನಡೆಸುವರು. ಆಡುಗೋಡಿ ಸಿಗ್ನಲ್​ನಿಂದ ಮಡಿವಾಳದ ಟೋಟಲ್ ಮಾಲ್​ವರೆಗೂ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಸಂಜೆ 5.50 ರಿಂದ 6.40 ರವರೆಗೆ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಜಯನಗರದ ಶಾಲಿನಿ ಮೈದಾನದವರೆಗೆ ಎರಡನೇ ರೋಡ್ ಶೋ ನಡೆಸುವರು.  ಬಿಟಿಎಂ ಲೇಔಟ್ ಹಾಗು ಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಮತ ತಪ್ಪಬಾರದೆಂದು ಬಿಜೆಪಿ ಪಣ ತೊಟ್ಟಿದ್ದು ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಸಂಜೆ 7.00-7.50 ರವರೆಗೆ ಬಸವೇಶ್ವರ ನಗರ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ  ಬಿಎಂಟಿಸಿಯ ಪ್ರೀಮಿಯಂ ಬಸ್ ಸೇವೆಯ ವಜ್ರ ಬಸ್ಸುಗಳು(Diamond bus) ಭಾರೀ ನಷ್ಟದಲ್ಲಿದೆ. ಬೆಂಗಳೂರಿನ ಅತಿದೊಡ್ಡ ಸಾರ್ವಜನಿಕ ಸಾರಿಗೆ ಪೂರೈಕೆದಾರ ವಜ್ರ ಈಗ ತನ್ನ ಪೂರ್ವ ಕೋವಿಡ್  ಸೇವೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿದೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಬೆಲೆ ಕಡಿತಗೊಳಿಸಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಿಲ್ಲ ಎಂದು ಬಿಎಂಟಿಸಿ ಹೇಳಿದೆ. ತನ್ನ ಫ್ಲೀಟ್‌ನಲ್ಲಿರುವ 800 ವೋಲ್ವೋ ಬಸ್‌ಗಳಲ್ಲಿ, ಬಿಎಂಟಿಸಿ 600 ಕ್ಕೂ ಹೆಚ್ಚು ವಜ್ರದಲ್ಲಿ ಮತ್ತು 100 ಕ್ಕೂ ಹೆಚ್ಚು ವಾಯು ವಜ್ರದಲ್ಲಿ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ನಿಯೋಜಿಸಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆಯಿಂದಾಗಿ ವಾಯು ವಜ್ರ ರೈಡರ್‌ಶಿಪ್ ಚೇತರಿಸಿಕೊಳ್ಳುತ್ತಿದೆ ಆದರೆ ವಜ್ರ ಪ್ರಯಾಣಿಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕೋವಿಡ್‌ಗೆ ಮುನ್ನ, 600 ಕ್ಕೂ ಹೆಚ್ಚು ವಜ್ರ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದವು, BMTC ಯ ದೈನಂದಿನ ಆದಾಯ ಸುಮಾರು 4 ಕೋಟಿಗೆ ರೂಪಾಯಿಗಳಷ್ಟಿದೆ ಅದರಲ್ಲಿ ವಜ್ರದ ಪಾಲು 50 ಲಕ್ಷವಿತ್ತು. ಮೂರು ವರ್ಷಗಳ ನಂತರ, ಬಿಎಂಟಿಸಿ ಈಗ…

Read More

ಬೆಂಗಳೂರು: ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಗೆ(Yeshavantpur Police Station, Bangalore) ಸಚಿವ ಮುನಿರತ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ (Kusuma Hanumantarayappa)ಅವರು ದೂರು ನೀಡಿದ್ದಾರೆ. ಆರ್​​ಆರ್​ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ  ಎದುರಾಳಿ ಬಿಜೆಪಿ ಅಭ್ಯರ್ಥಿ ಸಚಿವ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ(Yeshavantpur Police Station) ದೂರು ಸಹ ದಾಖಲಿಸಿದ್ದಾರೆ. ಸಚಿವ ಮುನಿರತ್ನ ಅವರು ತಮ್ಮ ಬೆಂಬಲಿಗನನ್ನೇ ಚುನಾವಣೆ ಕಣಕ್ಕೆ ಇಳಿಸಿ ತಮ್ಮ ವಿರುದ್ಧ ಷಡ್ಯಂತ್ರ ರಚನೆ ಮಾಡಿದ್ದಾರೆ ಎಂದು ಕುಸುಮಾ ಹೆಚ್. ಆರೋಪಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕುಸುಮಾ ಅವರು ಬರೆದುಕೊಂಡಿದ್ದಾರೆ. ಆರ್​​ಆರ್​ ನಗರ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿರುವ ಯಾರಬ್ಎಂಬವರು ಸಚಿವ ಬೆಂಬಲಿಗ. ಆದ್ರೆ ಕ್ಷೇತ್ರದಲ್ಲಿ ತಾನೋರ್ವ ಕಾಂಗ್ರೆಸ್ ಬೆಂಬಲಿತನಾಗಿದ್ದು ಎಂದು ಹೇಳಿಕೊಂಡು ಪಾಕಿಸ್ತಾನ ಧ್ವಜ ಇರೋ ಕರಪತ್ರ ಮುದ್ರಿಸಿ ಹಂಚುತ್ತಿದ್ದಾರೆ ಎಂದು ಕುಸುಮಾ ಆರೋಪ ಮಾಡಿದ್ದಾರೆ. ಪಾಕಿಸ್ತಾನ ಧ್ವಜ ಮುದ್ರಣದ ಕರಪತ್ರ ಹಂಚಿ…

Read More

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆ ಹಾಲಿ‌ ಶಾಸಕಿಗೆ ಸಂಬಂಧಿಸಿದಂತೆ ಆಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಜಿಎಫ್ ಕ್ಷೇತ್ರದ ಹಾಲಿ‌ ಶಾಸಕಿಗೆ ಸಂಬಂಧಿಸಿರುವ ಆಡಿಯೋ ಇದಾಗಿದ್ದು, ಈ ಆಡಿಯೋದಲ್ಲಿ ಶಾಸಕಿಯ ಪತಿ ಮಾತನಾಡಿದ್ದಾರೆ ಎನ್ನಲಾಗಿದ್ದು ಅದರಲ್ಲಿ ಸಂಸಾರ ಉಳಿಸಿಕೊಳ್ಳಲು ಅಂಗಲಾಚುವ ವಿಚಾರ ಉಲ್ಲೇಖವಾಗಿದೆ.  ಈ ಆಡಿಯೋದಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಜತೆ ರೂಪಕಲಾಗೆ ಸಂಬಂಧ ಕಲ್ಪಿಸಲಾಗಿದ್ದು ಈ ಬಗ್ಗೆ ದೂರು ದಾಖಲಾಗಿದೆ. ಈ ಆಡಿಯೋ ದಲ್ಲಿ ” 2018ರಲ್ಲಿ ನನ್ನ ಮನೆ ಬಾಗಿಲಿಗೆ ಬಂದು ನನ್ನ ಕನ್ನಿನ್ಸ್ ಮಾಡಿ ಅವಳನ್ನು ಕರೆದುಕೊಂಡು ಹೋದಿರಿ. ಬಾಲಹಳ್ಳಿ, ಗೋವಿಂದೇಗೌಡನ ಜೊತೆ ಸೇರಿಕೊಂಡು ಮಕ್ಕಳನ್ನು ಮಡಿಕೇರಿಗೆ ಹಾಕಿದ್ದಾಳೆ. ಗೋವಿಂದೇಗೌಡರ ವಿಚಾರ ಎತ್ತಿದರೆ ಸಾಕು ಊಟಕೆ ವಿಷ ಹಾಕಿ ಸಾಯಿಸಿಬಿಡ್ತೀನಿ ಅಂತಾರೆ. ನಿಮ್ಮನ್ನ ಕೈ ಮುಗಿತೀನಿ ರೆಡ್ಡಿಯವರೇ ಅವಳನ್ನು ಸೋಲಿಸಿ ಮನೆಗೆ ಕಳುಹಿಸಿಬಿಡಿ. ನಾನು ಹೆಂಗೋ ನನ್ನ ಸಂಸಾರ ಉಳಿಸಿಕೊಳ್ಳಿನಿ” ಎಂಬ ಸಂಭಾಷಣೆ ಕೇಳಿಬಂದಿದೆ. ಈ ಬಗ್ಗೆ…

Read More