ಶಿಡ್ಲಘಟ್ಟ: ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಅಂತ ನಂಬಿದ್ದೆವು, ಆದರೆ ಕಾಂಗ್ರೆಸ್ ಹಣವಂತರ ಪಕ್ಷ ಎಂದು ಗೊತ್ತಾಗಿದೆ. ಹಂಬಲದಿಂದ ಚುನಾವಣೆ ಗೆಲ್ಲಲು ಸಾದ್ಯವಿಲ್ಲ, ಮತದಾರರ ಪ್ರೀತಿಯಿಂದ ಮಾತ್ರ ಮತ ಪಡೆಯಲು ಸಾದ್ಯ, ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಸ್ವತಂತ್ರ ಅಭ್ಯರ್ಥಿ ಆಂಜಿನಪ್ಪ (ಪುಟ್ಟು) ಮನವಿ ಮಾಡಿದರು. ತಾಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಆಯೋಜಿಸಿದ್ದ ಸ್ವಾಭಿಮಾನಿ ಜನತಾ ಸಮಾವೇಶ ಕಾರ್ಯಕ್ರಮದಲ್ಲಿ ಸಾವಿರಾರು ಜನ ಮತದಾರರು ಹಾಗು ಆಂಜಿನಪ್ಪ ನವರ ಅಭಿಮಾನಿಗಳು ಸಮಾವೇಶ ಗೊಂಡಿದ್ದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಕೈ ತಪ್ಪಿದ್ದರಿಂದ ಸ್ವತಂತ್ರ ವಾಗಿ ಸ್ಪರ್ಧಿಸಿದ್ದು, ಕ್ಷೇತ್ರದಾದ್ಯಂತ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ವೇದಿಕೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಚುನಾವಣೆಗಾಗಿ ಎಲ್ಲಿಂದಲೋ ಬಂದವನಲ್ಲ, ಇಲ್ಲೇ ಇದ್ದು ಹತ್ತು ವರ್ಷಗಳಿಂದ ನಿಮ್ಮ ಸೇವೆ ಮಾಡಿಕೊಂಡು ಬಂದವನು. ಕಳೆದ ಬಾರಿ ಸ್ಪರ್ದಿಸಿದ್ದಾಗ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಭರವಸೆ ಕೊಟ್ಟಿದ್ದಿರಿ, ಕಳೆದ ಹತ್ತು ವರ್ಷಗಳಲ್ಲಿ ನಾನು ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿದ್ದರೆ ಈಗ ನನಗೆ ಮತ ಕೊಟ್ಟು, ಆ ಮೂಲಕ ನಿಮ್ಮ ಮಾತು ಉಳಿಸಿಕೊಳ್ಳಿ ಎಂದರು. ಪ್ರಾಮಾಣಿಕ ಸೇವೆ ಮಾಡಿರುವ ನನ್ನನ್ನು ಉಳಿಸಿಕೊಳ್ಳುವುದು ಬಿಡುವುದು ನಿಮ್ಮ ಕೈಯಲ್ಲಿದೆ ಯೋಚಿಸಿ ನಿರ್ದಾರ ತೆಗೆದುಕೊಳ್ಳಿ, ಕ್ಷೇತ್ರವು ಅಭಿವೃದ್ದಿ ಯಲ್ಲಿ 30 ವರ್ಷಗಳಷ್ಟು ಹಿಂದೆ ಬಿದ್ದದ್ದು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳಲ್ಲಿ ಉತ್ತಮ ಶಿಕ್ಷಣ ಹಾಗು ಆರೋಗ್ಯ ಸಿಗುವುದಾದರು ಯಾವಾಗ? ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಬಡವರ ಹಾಗು ರೈತರ ಕೆಲಸಗಳು ಸಕಾಲಕ್ಕೆ ಆಗಿವಿಯೇ ಎಂದು ಪ್ರಶ್ನಿಸಿದರು. ಶಾಸಕರಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಅಧಿಕಾರ ಇಲ್ಲದಿದ್ದರೂ ನಿಮ್ಮ ಸೇವೆ ಮಾಡುವ ಹಾಗು ಅಭಿವೃದ್ಧಿ ಬೆಂಬಲಿಸುವ ನನಗೆ ಮತ ಕೊಡಿ ಎಂದು ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಬೆಳ್ಳೂಟಿ ಸಂತೋಷ್, ಅಶ್ವಥ್ ನಾರಾಯಣರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.
Author: Prajatv Kannada
ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಇಂದು ಕೇಂದ್ರ ಗ್ರಹ ಸಚಿವ ಅಮಿತ್ ಷಾ (Minister Amit Shah) ಭೇಟಿ ನೀಡಿ ರೋಡ್ ಶೋ ನಡೆಸಲಿದ್ದಾರೆ ರೋಡ್ ಶೋ ಶಿವಪ್ಪ ನಾಯಕ ವೃತ್ತದಿಂದ ಪ್ರಾರಂಭವಾಗಿ ನೆಹರು ರಸ್ತೆ, ಗೋಪಿ ವೃತ್ತ ಸಾಗಿ ಲಕ್ಷ್ಮೀ ಟಾಕೀಸ್ ವೃತ್ತದಲ್ಲಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮೂರರಿಂದ ಸಂಜೆ 7.30 ರವರೆಗೆ ಬಿಹೆಚ್ ರಸ್ತೆಯ ಕರ್ನಾಟಕ ಸಂಘ ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ ಗೋಪಿ ವೃತ್ತ, ಲಕ್ಷ್ಮಿ ಟಾಕೀಸ್ ವರೆಗೆ ಜೀರೋ ಟ್ರಾಫಿಕ್ ಆಗಿ ಘೋಷಿಸಲಾಗಿದೆ .ಈ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಕೋರಿದೆ. ರೋಡ್ ಶೋನಲ್ಲಿ ಭಾಗವಿಸುವ ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮೈದಾನ, ಎನ್ಇಎಸ್ ಮೈದಾನ ಮತ್ತು ಸೈನ್ಸ್ ಕಾಲೇಜು ಮೈದಾನಗಳಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ
ತುಮಕೂರು: ತಿಪಟೂರು ಕ್ಷೇತ್ರದ ಶಾಸಕರೂ ಆಗಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರು ಪಕ್ಕಾ ಆರ್ಎಸ್ಎಸ್. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ಇವರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ತಿಪಟೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಇತಿಹಾಸ ತಿರುಚುವುದು, ಸಮಾಜ ಹೊಡೆಯುವುದು, ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟುವುದು ಬಿಟ್ಟರೆ ಬೇರೆ ಏನ್ ಕೆಲಸ ಇಲ್ಲ. ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಕ್ಕಳಿಗೆ ನೈಜ ಚರಿತ್ರೆಯನ್ನ ತಿಳಿಸಬೇಕು. ಇತಿಹಾಸ ಮರೆಯುವವರು ಮುಂದೆ ಬರಲ್ಲ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಮನುಷ್ಯ ನಾಗೇಶ್ ಇದ್ದಾನಲ್ಲಾ ಇತಿಹಾಸವನ್ನೇ ತಿರುಚಿಬಿಡ್ತಾರೆ. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ನಾಗೇಶ್. ಇವರು ಕರ್ನಾಟಕದ ಅಭಿವೃದ್ಧಿ ಮಾಡಲು ಸಾಧ್ಯನಾ? ಇಂತವರು ಸೋಲೇಬೇಕು. ಯಾವ ಕಾರಣಕ್ಕೂ ಗೆಲ್ಲಬಾರದು ಎಂದರು. ಕೊಬ್ಬರಿ ಬೆಲೆ ಬಿದ್ದೋಯ್ತು, ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಬ್ಬರಿ ಬೆಲೆ…
ಶಿವಮೊಗ್ಗ: ನಗರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) , ಬಿಜೆಪಿ ಖಜಾನೆ ತುಂಬಿದೆ. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಅನ್ನುತ್ತಾರೆ. ಬಿಜೆಪಿಯಿಂದ ಕರ್ನಾಟಕಕ್ಕೆ ಕೊಡುಗೆ ಏನು? ಕರ್ನಾಟಕಕ್ಕೆ ಏನಾದರೂ ದೊಡ್ಡ ಕಾರ್ಖಾನೆ ಮಾಡಿಕೊಟ್ಟಿದ್ದೀರಾ? ದೊಡ್ಡ ಹೂಡಿಕೆ ಏನಾದರೂ ಮಾಡಿದ್ದೀರಾ? ಏನು ಮಾಡಿದ್ದರೂ ಕೂಡಾ ಮೈಸೂರು ಮಹಾರಾಜರ ಕಾಲದಲ್ಲಿ, ಜವಹರ್ ಲಾಲ್ ನೆಹರು ಕಾಲದಲ್ಲಿ ಆಗಿರುವುದು ಎಂದರು. ಪ್ರತಿಯೊಬ್ಬರಿಗೆ 10 ಕೆಜಿ ಸಣ್ಣ ಕ್ಕಿ ಕೊಡುತ್ತೇವೆ, 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ, ಉಚಿತ ಬಸ್ ಪಾಸ್ ಕೊಡುತ್ತೇವೆ, ಇದೆಲ್ಲಾ ನಮ್ಮ ಗ್ಯಾರೆಂಟಿ ಯೋಜನೆ. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ ಎಂದರು.
ರಾಮನಗರ: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (Devegowda) ಹೇಳಿದರು. ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಬರಲು ಆಗಿಲ್ಲ. ಅವರ ಪರವಾಗಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಮೇ 10ರಂದು ಕುಮಾರಸ್ವಾಮಿ ಗೆಲ್ಲಿಸಿ, 13ಕ್ಕೆ ಅವರು ಮುಖ್ಯಮಂತ್ರಿ ಆಗುತ್ತಾರೆ. ಹಾಗಾಗಿ ಎಲ್ಲರೂ ಹೆಚ್.ಡಿ.ಕುಮಾರಸ್ವಾಮಿ ಪರ ಕೆಲಸ ಮಾಡಿ ಎಂದರು.
ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪ್ರಚಾರಾರ್ಥ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ. ಈ ತೀರ್ಮಾನ ಪ್ರಕಟಿಸುತ್ತೇವೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ. ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಅನ್ನೋದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ರಾಹುಲ್ ಗಾಂಧಿ, ಮೋದಿ ಮತ್ತು ಅಮಿತ್ ಶಾ ಮುಂದೆ ನಿಲ್ಲುವುದಕ್ಕೆ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು.
ಹಾಸನ: ಪ್ರಿಯಾಂಕಾ -ರಾಹುಲ್ ಗಾಂಧಿ ಬಿಜೆಪಿಗೆ (BJP) ಅಡಿಷನಲ್ ಸ್ಟಾರ್ ಪ್ರಚಾರಕರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ (Narendra Modi) ಹೋದ ಕಡೆಯಲ್ಲಾ ಬಿಜೆಪಿ ಗೆಲ್ಲುತ್ತದೆ. ಅದೇ ರೀತಿ ಪ್ರಿಯಾಂಕಾ – ರಾಹುಲ್ ಗಾಂಧಿ (Rahul Gandhi) ಹೋದಲೆಲ್ಲ ಕಾಂಗ್ರೆಸ್ ಸೋಲುತ್ತದೆ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ (Congress) ಸೋಲುತ್ತೆ. ಮೋದಿ ಹೋದಲ್ಲೆಲ್ಲಾ ಬಿಜೆಪಿ ಗೆಲ್ಲುತ್ತೆ, ಹಿಂದಿನ ಫಲಿತಾಂಶ ನೋಡಿದಾಗ ಗೊತ್ತಾಗುತ್ತದೆ ಎಂದು ಹೇಳಿದರು. ಮೋದಿ ಮೊದಲ ಬಾರಿ ಹಾಸನ ಜಿಲ್ಲೆಗೆ ಬಂದಿದ್ದಾರೆ. ಈ ಬಾರಿ ಹಾಸನ (Hassan) ಜಿಲ್ಲೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಹಾಸನ, ಬೇಲೂರು, ಅರಸೀಕೆರೆ, ಸಕಲೇಶಪುರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಮೋದಿ ಆಗಮನ ಹಾಸನ ಜಿಲ್ಲೆಗೆ ಒಂದು ಸಂಚಲನ ಮೂಡಿಸಿದೆ ಎಂದು ತಿಳಿಸಿದರು.
ರಾಮನಗರ: ಜೆಡಿಎಸ್‌ಗೆ (JDS) ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್‌ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರಗಳ ನಾಟಕ ನೋಡಿದ್ದೀರಿ. ಕೇವಲ ಲೂಟಿ ಮಾಡಲು ಜಗಳಗಳಾಗಿವೆ ಹೊರತು ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು. ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾಗಿದೆ. ಹೊರಗಿನ ನೋಟಕ್ಕಷ್ಟೇ ಎರಡು, ಒಳಗಡೆ ಎರಡೂ ಒಂದೇ ಆಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತವೆ. ಜೆಡಿಎಸ್ ಅಂತೂ 15-20 ಸೀಟ್ ಸಿಕ್ಕರೂ ಕಿಂಗ್ ಮೇಕರ್ ಆಗುತ್ತೇವೆ ಎಂಬ ಕನಸು ಕಾಣುತ್ತದೆ. ಜೆಡಿಎಸ್ ಗೆದ್ದರೆ ಒಂದೇ ಕುಟುಂಬ ಉದ್ಧಾರ ಆಗುತ್ತದೆ. ಆದರೆ ಕರ್ನಾಟಕದ ಲಕ್ಷಾಂತರ ಕುಟುಂಬಕ್ಕೆ ನಷ್ಟವಾಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಬರಲಿದೆ ಎಂದರು. ನರೇಂದ್ರ ಮೋದಿ ಭಾಷಣ ಆರಂಭದಲ್ಲಿ, ತ್ರಿವಿಧ…
ರಾಮನಗರ: ನಮ್ಮ ಜೊತೆ ಮೋದಿ (Narendra Modi) ಇದ್ದಾರೆ, ಅದೇ ರೀತಿ ಕಾಂಗ್ರೆಸ್ ಜೊತೆ ಭ್ರಷ್ಟರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ಚನ್ನಪಟ್ಟಣದಲ್ಲಿ ನಡೆದ ಬಿಜೆಪಿ (BJP) ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು (Congress) ಪದೇ ಪದೇ ಮೋದಿಯವರನ್ನೇ ಯಾಕೆ ಕರೆಸ್ತೀರಿ ಅಂತಾ ಕೇಳ್ತಾರೆ. ಅದಕ್ಕೆ ನಾವು ಅವರಿಗೆ ಉತ್ತರ, ನಮ್ಮ ಜೊತೆ ಮೋದಿ ಇದ್ದಾರೆ ಎಂದಿದ್ದೇವೆ. ಆದರೆ ನಿಮ್ಮ ಜೊತೆ ಯಾರಿದ್ದಾರೆ? ನಿಮ್ಮ ಜೊತೆ ಭ್ರಷ್ಟಾಚಾರಿಗಳು ಮಾತ್ರ ಇದ್ದಾರೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮೇಲೆ 65 ಕೇಸ್ ಇದೆ. ಆದರೆ ಬೊಮ್ಮಾಯಿ ಮೇಲೆ ಒಂದೇ ಒಂದು ಕೇಸ್ ಇಲ್ಲ. ಆದರೂ ಬೊಮ್ಮಾಯಿ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ದೇಶ ಲೂಟಿ ಮಾಡಿದ್ದಾರೆ. ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರು: ರಾಮಮಂದಿರ (Ram Mandira) ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಆ ಶುಭ ಕಾರ್ಯಕ್ಕೆ ನಿಮಗೆ ಕರೆಯಲು ನಾನು ಬಂದಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದರು. ಬಿಜೆಪಿ (BJP) ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಯಚೂರಿನಲ್ಲಿ (Raichur) ಮತಬೇಟೆ ನಡೆಸಿದರು. ನಗರದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ಮತಶಿಕಾರಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ. ರಾಮಮಂದಿರ ನಿರ್ಮಾಣ ಕಾರ್ಯವು 2024ರ ಜನವರಿಯಲ್ಲಿ ಮುಗಿಯುತ್ತದೆ. ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ರಾಮನೇ ಇಲ್ಲವೆಂದು ಹೇಳುವವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.