Author: Prajatv Kannada

ಮುಂಡರಗಿ: ಪಟ್ಟಣದಲ್ಲಿ ಬಿಜೆಪಿ ಸಂಸ್ಥಾಪನ ದಿನಾಚರಣೆಯನ್ನು ಬೂತ್ ನಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಮುಂಡರಗಿ ಮಂಡಲದ ಎಲ್ಲಾ ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿ ಗುರುವಾರ ಸಂಸ್ಥಾಪನ ದಿನಾಚರಣೆಯನ್ನು ಆಚರಣೆ ಮಾಡಿದರು ನಂತರ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜವನ್ನು ಹಾರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಮುಂಡರಗಿ ಮಂಡಲದ ಅಧ್ಯಕ್ಷರಾದ ಹೇಮಗಿರೀಶ್ ಹಾವಿನಾಳ್ ಈ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ಧರಾಗೋಣ ಜಗತ್ತಿನಲ್ಲಿ ದೇಶ ಮೊದಲು ಎನ್ನುವ ಸಿದ್ದಾಂತ ಹೊಂದಿರುವ ಪಕ್ಷ ಬಿಜೆಪಿ ಎಂದು ತಿಳಿಸಿದರು ಇದೇ ವೇಳೆ ಬಿಜೆಪಿ ಗೆಲ್ಲಿಸುವ ವಿಜಯ ಕಂಕಣವನ್ನು ಕಾರ್ಯಕರ್ತರ ಕೈಗೆ ಕಟ್ಟಿ ಪ್ರತಿಜ್ಞಾವಿಧಿಯನ್ನು ಕಾರ್ಯಕರ್ತರಿಗೆ ಬೋಧಿಸಲಾಯಿತು ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಹೊಸಮನಿ ದೇವಪ್ಪ ಇಟಗಿ ಮಂಜುನಾಥ್ ಮುಧೋಳ್ ನಾಗರಾಜ್ ಮುರುಡಿ ಮಾರುತಿ ನಾಗರಹಳ್ಳಿ ಉಪಸ್ಥಿತರಿದ್ದರು

Read More

ಕುಂದಗೋಳ: ಪಟ್ಟಣದ ಶಂಬೋಲಿಂಗೇಶ್ವರ ದೇವಸ್ಥಾನದಲ್ಲಿ ಭಾರತಿ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಜಯ ಸಂಕಲ್ಪ ಕಂಕಣ ಹಾಗೂ ಸಂಕಲ್ಪ ಪ್ರಮಾಣ ಪತ್ರವನ್ನು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಪ್ರಭಾರಿ ಷಣ್ಮುಖ ಗುರಿಕಾರ ಗುರುವಾರ ಭೋದನೆ ಮಾಡಿದರು. ಪಕ್ಷದ ಟಿಕೆಟಿಗಾಗಿ ಟಿಕೇಟಿನ ಆಕಾಕ್ಷಿಗಳಾದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಎಮ್ ಆರ್ ಪಾಟೀಲ ಪರಸ್ಪರವಾಗಿ ಕಾರ್ಯಕರ್ತರ ಎದುರೆ ಕಂಕಣ ಕಟ್ಟಿಸಿ ಇಬ್ಬರು ಮುಖಂಡರಿಂದ ದೇವರ ಮುಂದೆ ಸಂಕಲ್ಪ ಮಾಡಿ ಪಕ್ಷದ ಏಳ್ಗೆಗೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇವೆ ಎಂಬ ಸಂಕಲ್ಪವನ್ನು ಷಣ್ಮುಖ ಗುರಿಕಾರರವರು ಭೋದಿಸಿದರು. ನಂತರ ಪಪಂ ಸದಸ್ಯ ವಾಗೇಶ ಗಂಗಾಯಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಾಷಣ ವೀಕ್ಷಣೆ ಮಾಡಿದರು. ನಂತರ ಭೂತ ಅಧ್ಯಕ್ಷರ ಮನೆಯ ಮೇಲೆ ಪಕ್ಷದ ಧ್ವಜಾರೋಹಣ ನರೆವೆರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ರವಿಗೌಡ ಪಾಟೀಲ,ಪಪಂ ಅಧ್ಯಕ್ಷ ಗಣೇಶ ಕೋಕಾಟೆ,ಉಪಾಧ್ಯಕ್ಷ ಹನುಮಂತ ರಣತೂರ,ಮುಖಂಡರಾದ ಈಶ್ವರ ಗಂಗಾಯಿ,ಮಾಲತೇಶ ಶ್ಯಾಗೋಟಿ,ಬಸವರಾಜ ಕೊಪ್ಪದ,ಬಿ…

Read More

ಬೆಳಗಾವಿ: ಕಾಂಗ್ರೆಸ್ ಟಿಕೆಟ್ (Congress Ticket) ಮಿಸ್ ಆಗಿದ್ದಕ್ಕೆ ಪುತ್ರನನ್ನು ಅಪ್ಪಿಕೊಂಡು ತಾಯಿ ಕಣ್ಣೀರಿಟ್ಟಿರುವ ಘಟನೆ ನಡೆದಿದ್ದು ತಾಯಿ-ಮಗನ ಭಾವುಕ ದೃಶ್ಯ ಮಮ್ಮಲ ಮರಗುವಂತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭೆ ಕ್ಷೇತ್ರ (Savadatti Assembly Constituency) ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಸೌರಭ್ ಛೋಪ್ರಾ ಬದಲು ಈ ಸಲವೂ ವಿಶ್ವಾಸ ವೈದ್ಯಗೆ ಕಾಂಗ್ರೆಸ್ ಹೈಕಮಾಂಡ್ (Congress HighCommand) ಟಿಕೆಟ್ ನೀಡಿದೆ. ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ ಪುತ್ರ ಸೌರಭ್ ನನ್ನು ಅಪ್ಪಿಕೊಂಡು ತಾಯಿ ಕಾಂತಾದೇವಿ ಕಣ್ಣೀರಿಟ್ಟಿದ್ದಾರೆ. ಪತಿ ದಿ.ಆನಂದ ಛೋಪ್ರಾ ಭಾವಚಿತ್ರ ಎದುರು ಕುಳಿತು ಸೌರಭ್ ಅಪ್ಪಿಕೊಂಡು ಕಾಂತಾದೇವಿ ಕಣ್ಣೀರು ಹಾಕಿದ್ದಾರೆ. ಇತ್ತೀಚೆಗೆ ಚುನಾವಣೆ ತಂತ್ರಗಾರ ಪ್ರಶಾಂತ ಕಿಶೋರ ಅವರನ್ನ ಸೌರಭ್ ಛೋಪ್ರಾ ಭೇಟಿಯಾಗಿ ಚರ್ಚೆ ನಡೆಸಿ ಬಂದಿದ್ದರು. ಈಗಾಗಲೇ ಆನಂದ ರಥ ಹೆಸರಿನಲ್ಲಿ ಸವದತ್ತಿ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತಿರುವ ಸೌರಭ್ ಟಿಕೆಟ್ ಮಿಸ್ ಆಗ್ತಿದ್ದಂತೆಯೇ ಸವದತ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಆ ಸಭೆಯಲ್ಲೂ ಸೌರಭ ಛೋಪ್ರಾ ಬೆಂಬಲಿಗರೊಬ್ಬರು ಕಣ್ಣೀರಿಟ್ಟಿದ್ದಾರೆ.

Read More

ಬೀದರ್: ತನ್ನ ಒಡಹುಟ್ಟಿದ ಸಹೋದರನ (Brother) ಸಾವಿನ ದು:ಖದ ಮಧ್ಯೆಯೂ ಸಹೋದರಿಯೊಬ್ಬಳು (Sister) ಪರೀಕ್ಷೆ ಬರೆದಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ (Chitguppa) ತಾಲೂಕಿನ ತಾಳಮಡಗಿ ಗ್ರಾಮದ ನಡೆದಿದೆ. ತನ್ನ 9 ವರ್ಷದ ಕಿರಿಯ ಸಹೋದರ ಕಿಡ್ನಿ ವೈಫಲ್ಯದಿಂದ (Kidney Failure) ಬಳಲುತ್ತಿದ್ದು ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ತಿಳಿದ ಹಿರಿಯಕ್ಕ ಕೀರ್ತನಾ ಮೊದಲು ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಆದರೂ ಕೊನೆಗೆ ವಿದ್ಯಾರ್ಥಿನಿ ಕೀರ್ತನಾ ಪ್ರಶಾಂತ ಊರಿನ ಸರ್ಕಾರಿ ಪ್ರೌಢಶಾಲೆ ಕೇಂದ್ರದಲ್ಲಿ ಗುರುವಾರ ಎಸ್ಎಸ್ಎಲ್ಸಿ (SSLC Exam 2023) ಇಂಗ್ಲಿಷ್ ಪರೀಕ್ಷೆ ಬರೆದಿದ್ದಾಳೆ. ಏಕೈಕ ಸಹೋದರ 7ನೇ ತರಗತಿ ಪರೀಕ್ಷೆ ಬರೆದಿದ್ದ ಕಾರ್ತಿಕ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಗುರುವಾರ ಅಂತ್ಯಕ್ರಿಯೆ (Last Rites) ನೆರವೇರಿತು. ಇದೆಲ್ಲದರ ಮಧ್ಯೆ, ತಮ್ಮನ ಸಾವಿನ ದುಃಖದಲ್ಲಿದ್ದ ಈಕೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಳು. ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುರೇಶ ಕಟ್ಟಿಮನಿ, ಕಸ್ಟೋಡಿಯನ್ ಮಲ್ಲಪ್ಪ ಜಿಗಜೀವಣಿ ಬಾಲಕಿಯ ತಂದೆ ಸೇರಿ ಸಂಬಂಧಿಕರು ಮನವೊಲಿಸಿದ್ದರ ಫಲವಾಗಿ…

Read More

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಗೆ ವರುಣಾ ಟಿಕೆಟ್ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ವಿಜಯೇಂದ್ರ ಕೂಡ ವರುಣಾ (Varuna Constituency) ದಿಂದಲೇ ಸ್ಪರ್ಧಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ವಿಜಯೇಂದ್ರ ಸ್ಪರ್ಧೆಗೆ ಯಡಿಯೂರಪ್ಪ (BS Yediyurappa) ರೆಡ್ ಸಿಗ್ನಲ್ ಕೊಟ್ಟರು. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದರು. ಇದರ ಹಿಂದೆ ನಾನಾ ಲೆಕ್ಕಾಚಾರಗಳು ಇದ್ಯಾ ಅನ್ನೋ ಮಾತುಗಳು ಶುರುವಾಗಿದೆ. ವರುಣಾಕ್ಕೆ ವಿಜಯೇಂದ್ರ ಬಿಟ್ಟು ಕಾರ್ಯರ್ತರ ಹೆಸರನ್ನಷ್ಟೇ ಹೈಕಮಾಂಡ್‍ಗೆ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. ಪ್ರತಾಪ್, ಸದಾನಂದ, ಕಾ.ಪು.ಸಿದ್ದಲಿಂಗಸ್ವಾಮಿ ಹೆಸರುಗಳು ಶಿಫಾರಸು ಮಾಡಲಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಿದ್ದರ ಅಸಲಿಯತ್ತೇನು..? ಯಡಿಯೂರಪ್ಪಗೆ ಬೆದರಿ ಶಿಫಾರಸ್ಸೋ..? ಅನ್ನೋ ಪ್ರಶ್ನೆಗಳು ಶುರುವಾಗಿದೆ. ಹೈಕಮಾಂಡ್ ಹೇಳಿದ್ರೆ ಮಾತ್ರ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದ್ರು. ಹಾಗಾದ್ರೆ ಶಿಕಾರಿಪುರದ ಜೊತೆಗೆ ವರುಣಾ ಕ್ಷೇತ್ರ ಕೊಟ್ಟರೆ ಎರಡು ಕಡೆ ಸ್ಪರ್ಧೆ ಎಂಬ ಸಂದೇಶ ರವಾನಿಸಿದ್ರಾ..? ಅನ್ನೋ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ…

Read More

ಕಿಚ್ಚ ಸುದೀಪ್ (Sudeep) ಚುನಾವಣಾ ಅಖಾಡಕ್ಕೆ ಇಳಿದ ಬೆನ್ನಲ್ಲೇ ಅವರ ನಟನೆಯ ಸಿನಿಮಾ, ಜಾಹೀರಾತು, ಪೋಸ್ಟರ್ ಹಾಗೂ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರು ಹಾಗೂ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮುಖ್ಯ ಚುನಾವಣಾ (Election) ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ‘ಖ್ಯಾತ ಚಲನಚಿತ್ರ ನಟರಾದ ಕಿಚ್ಚ (Kiccha) ಸುದೀಪ್ ಅವರು ಪ್ರಸ್ತುತ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿಯುವುದು ಮತ್ತು ಇವರ ಭಾವಚಿತ್ರವಿರುವ ಪೋಸ್ಟರ್ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದಿದೆ. ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ವಕೀಲರೊಬ್ಬರು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಸುದೀಪ್ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಾಗಿ ತಿಳಿಸಿದ್ದರಿಂದ, ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು.…

Read More

ಬೆಂಗಳೂರು: ಪತಿ ಚಾಕ್ಲೇಟ್ (Chocklate) ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ. ನಂದಿನಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆರು ವರ್ಷದ ಹಿಂದೆ ನಂದಿನಿ ಮದುವೆಯಾಗಿದ್ದಳು. ಈಕೆಯ ಪತಿ ಸಲೂನ್ ನಲ್ಲಿ ಕೆಲಸ ಮಾಡಿಕೊಂಡಿದ್ರು. ಗುರುವಾರ ಬೆಳಗ್ಗೆ ಪತಿ ಕೆಲಸಕ್ಕೆ ಹೊರಟಿದ್ದರು. ಈ ವೇಳೆ ಚಾಕ್ಲೇಟ್ ತಂದು ಕೊಡುವಂತೆ ಪತ್ನಿ ನಂದಿನಿ ಹೇಳಿದ್ದಳು. ಇತ್ತ ಮಧ್ಯಾಹ್ನವಾದರು ಪತಿ ಚಾಕ್ಲೇಟ್ ತಂದುಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಪತ್ನಿ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಂದಿನಂತೆ ಸಂಜೆ ಕೆಲಸ ಮುಗಿಸಿ ಹೊರಡುವಾಗ ಪತಿ ನಂದಿನಿಗೆ ಕರೆ ಮಾಡಿದ್ದಾರೆ. ಈ ವೇಳೆ ಪತ್ನಿ ಕರೆ ಸ್ವೀಕರಿಸಲಿಲ್ಲ. ಮನೆಗೆ ಬಂದು ನೋಡಿದಾಗ ನೇಣು ಹಾಕಿಕೊಂಡಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆ (Hennuru Police Station) ಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಅಮುಲ್ ನಲ್ಲಿ (Amul), ಕೆಎಂಎಫ್ (KMF) ಹಾಲು ಒಕ್ಕೂಟ ವಿಲೀನ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯ ಬಿಜೆಪಿ ಸರ್ಕಾರ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದರೂ, ಪ್ರತಿಪಕ್ಷಗಳು ಚುನಾವಣೆ ಹೊತ್ತಿಲಿನಲ್ಲಿ ಪ್ರತಿರೋಧದ ದಾಳವಾಗಿ ಬಳಸಿಕೊಳ್ಳುತ್ತವೆ. ಹೌದು ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah) ಟ್ವೀಟ್ ಮಾಡಿ ರಾಜ್ಯ ಸರ್ಕಾರ (Karnataka Government), ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಅವರ ವಿರುದ್ಧ ಹರಿಹಾಯ್ದಿದ್ದಾರೆ. “ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ…!!” ಎಂದು ಟ್ವೀಟ್ ಮಾಡಿದ್ದಾರೆ. “ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇದೀಗ ದಿಲ್ಲಿಗೆ ತಲುಪಿದೆ. 224 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಾಜ್ಯ ಚುನಾವಣಾ ಸಮಿತಿ ಸಿದ್ಧಪಡಿಸಿದ್ದು, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆದ ಬಳಿಕ ಪಟ್ಟಿ ಅಂತಿಮಗೊಳ್ಳಲಿದೆ. ಆದರೆ ಈ ಬಾರಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಟಿಕೆಟ್ ಕೈತಪ್ಪುವುದು ಖಚಿತವಾಗಿದೆ. ಅದೇ ರೀತಿ ಪಿಎಸ್‌ಐ ಹಗರಣದಲ್ಲಿ ಲಂಚ ಆರೋಪವನ್ನು ಎದುರಿಸುತ್ತಿರುವ ಕನಕಗಿರಿ ಕ್ಷೇತ್ರದ ಬಸವರಾಜ ದಡೇಸಗೂರು ಅವರಿಗೆ ಟಿಕೆಟ್ ಕೊಡ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಇನ್ನು, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕುಂದಾಪುರದಿಂದ ಈ ಬಾರಿ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬದಲಾಗಿ ಪುತ್ರ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುವುದನ್ನು ಖಚಿತಗೊಳಿಸಿದ್ದಾರೆ. ಇನ್ನು, ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಅವರಿಗೆ…

Read More

ವಿಧಾನಸಭೆ ಚುನಾವಣೆ (Assembly Election 2023) ಗೆ ಕೌಂಟ್‍ಡೌನ್ ಶುರುವಾಗಿದೆ. 2ನೇ ಲಿಸ್ಟ್ ರಿಲೀಸ್ ಮಾಡಿದ ಕಾಂಗ್ರೆಸ್‍ಗೆ ಇದೀಗ ಅಸಮಾಧಾನದ ಶಾಕ್ ಎದುರಾಗಿದೆ. ಪಕ್ಷದ ವಿರುದ್ಧವೇ ಟಿಕೆಟ್ ವಂಚಿತರು ಸಿಡಿದೆದ್ದಿದ್ದಾರೆ. ಮತ್ತೆ ಪಕ್ಷಾಂತರ ಪರ್ವ ಆರಂಭವಾಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ. ಕಲಘಟಗಿ ಕಾಂಗ್ರೆಸ್ ಟಿಕೆಟ್ (Kalaghatagi Congress Ticket) ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿಗೆ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಟಿಕೆಟ್ ಮಿಸ್ ಆಗಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಸಂತೋಷ್ ಲಾಡ್‍ (Santhosh Lad) ಗೆ ಟಿಕೆಟ್ ನೀಡಲಾಗಿದೆ. ಇದು ನಾಗರಾಜ್ ಛಬ್ಬಿ ಹಾಗೂ ಬೆಂಬಲಿತ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ರಘು ಆಚಾರ್ (Raghu Achar) ಗೆ ಟಿಕೆಟ್ ಕೈತಪ್ಪಿದ್ದು, ಭಿನ್ನಮತ ಭುಗಿಲೆದ್ದಿದೆ. ಸಿದ್ದರಾಮಯ್ಯನವರೇ ನನಗೆ ಸ್ಪರ್ಧಿಸುವಂತೆ ಹೇಳಿದ್ರು. ಈಗ ತಂದು ಅರ್ಧದಾರಿಯಲ್ಲೇ ಕತ್ತು ಕೊಯ್ದಿದ್ದಾರೆ ಅಂತ ಕೈ ನಾಯಕರ…

Read More