Author: Prajatv Kannada

ಹಿಂದಿನ ಕಾಲದಲ್ಲೆಲ್ಲಾ ಮಡಕೆ ನೀರನ್ನು ಬಳಸುತ್ತಿದ್ದ ಬಗ್ಗೆ ನೀವು ಕೇಳಿರುವಿರಿ. ಈಗಿನ ಕಾಲದಲ್ಲೂ ಕೆಲವರು ಮಣ್ಣಿನ ಮಡಕೆಯ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಮಣ್ಣಿನ ಮಡಕೆಯಲ್ಲಿಟ್ಟ ನೀರು ಬಹಳ ತಂಪಾಗಿರುತ್ತದೆ, ಜೊತೆಗೆ ಉತ್ತಮ ರುಚಿಯನ್ನೂ ಹೊಂದಿರುತ್ತದೆ. ಇನ್ನು ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೂ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮಡಕೆಯ ನೀರು ನಿಮಗೆ ಉತ್ತಮ ಆಯ್ಕೆಯಾಗಿದೆ. ದೇಹದಿಂದ ವಿಷವನ್ನು ಹೊರಹಾಕುತ್ತದೆ​ ಮಾರುಕಟ್ಟೆಯಲ್ಲಿ ಸಿಗುವ ಬಾಟಲಿ ನೀರಿಗಿಂತ ಮಣ್ಣಿನ ಮಡಕೆಯಲ್ಲಿಟ್ಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನಲಾಗುತ್ತದೆ. ಗಂಟಲನ್ನು ಶುದ್ಧಗೊಳಿಸುವುದರ ಜೊತೆಗೆ, ಮಡಕೆ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ​ನೈಸರ್ಗಿಕ ತಂಪಾಗುವಿಕೆ​ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದು ನೀರಿನ ನೈಸರ್ಗಿಕ ತಂಪಾಗುವಿಕೆಗೆ ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಯು ಮೇಲ್ಮೈಯಲ್ಲಿ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ ಮತ್ತು ಈ ರಂಧ್ರಗಳ ಮೂಲಕ ನೀರು ತ್ವರಿತವಾಗಿ ಆವಿಯಾಗುತ್ತದೆ. ಆವಿಯಾಗುವಿಕೆಯ ಪ್ರಕ್ರಿಯೆಯು ಮಡಕೆಯೊಳಗಿನ ನೀರಿನ ಶಾಖವನ್ನು ಕಳೆದುಕೊಳ್ಳುವುದನ್ನು ಖಾತ್ರಿಗೊಳಿಸುತ್ತದೆ, ಇದು ನೀರಿನ ತಾಪಮಾನವನ್ನು ಕಡಿಮೆ ಮಾಡುತ್ತದೆ.…

Read More

ನ್ಯೂಯಾರ್ಕ್: ಲೂಯಿಸ್ ವ್ಯುಟನ್ ಸಿಇಒ ಮತ್ತು ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು ಒಂದೇ ದಿನದಲ್ಲಿ 200 ಶತಕೋಟಿ ಡಾಲರ್ ನಷ್ಟು ಹೆಚ್ಚಿದ್ದು ಈ ಮೂಲದ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇದುವರೆಗೆ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೆಸ್ಲಾದ ಸಿಇಒ ಎಲಾನ್ ಮಸ್ಕ್ 2ನೇ ಸ್ಥಾನಕ್ಕೆ ಹಾಗೂ ಅಮಝಾನ್ ನ ಸ್ಥಾಪಕ ಜೆಫ್ ಬೆಝೋಸ್ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಐಷಾರಾಮಿ ಬಳಕೆಯ ವಸ್ತುಗಳನ್ನು ಉತ್ಪಾದಿಸುವ ಎಲ್ವಿಎಂಎಚ್ ನ ಶೇರುಗಳ ಮೌಲ್ಯ 30%ರಷ್ಟು ಹೆಚ್ಚುವ ಮೂಲಕ ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತಿನ ಮೌಲ್ಯ 201 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ಬ್ಲೂಮ್ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಾಂಕವನ್ನು ಉಲ್ಲೇಖಿಸಿ `ದಿ ಗಾರ್ಡಿಯನ್’ ವರದಿ ಮಾಡಿದೆ.

Read More

ದುಬೈ: 2019 ರಲ್ಲಿ ದುಬೈನಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯ ವ್ಯಕ್ತಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿವೆ. 20 ವರ್ಷದ ಮುಹಮ್ಮದ್ ಬೇಗ್ ಮಿರ್ಜಾ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಒಮಾನ್‌ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಯಿತು. ಈ ವೇಳೆ ಬಸ್ ನಲ್ಲಿ ಒಟ್ಟು  31 ಪ್ರಯಾಣಿಕರಿದ್ದು ಅವರಲ್ಲಿ 12 ಭಾರತೀಯರು ಸೇರಿ 17 ಮಂದಿ ಮೃತಪಟ್ಟಿದ್ದರು. ದುಬೈನ್ ನ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನ ಪ್ರವೇಶ ದ್ವಾರದಲ್ಲಿ ಬಸ್ ಚಾಲಕ ಓವರ್‌ಹೆಡ್ ಹೈಟ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದ್ದು, ಬಸ್‌ನ ಮೇಲಿನ ಎಡ ಭಾಗವು ನಾಶವಾಗಿದೆ ಎಂದು ವರದಿ ತಿಳಿಸಿದೆ. ಬಸ್ ನ ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ. ಮಿರ್ಜಾ ಪರ ವಕೀಲರು ವಾದಿಸಿದ್ದು, ಆರಂಭದಲ್ಲಿ ನ್ಯಾಯಾಲಯವು ಆರಂಭದಲ್ಲಿ 1 ಮಿಲಿಯನ್ ಪರಿಹಾರ ನೀಡಲು ಒಪ್ಪಿಕೊಂಡಿತ್ತು.…

Read More

ಹುಬ್ಬಳ್ಳಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ವಿನಯ್ ಕುಲಕರ್ಣಿ 2013ರಲ್ಲಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆದಿದ್ದಲ್ಲದೇ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು. ಅದಕ್ಕೂ ಮುನ್ನ ಅವರು ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾಗಿದ್ದ ವಿನಯ್ ಅವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿದ್ದರು. ಇದೀಗ 2023ರ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ವಿನಯ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಇಮ್ಮಡಿಗೊಂಡಿದೆ. ಸದ್ಯ ವಿನಯ್ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅವರಿಗೆ ಜಿಲ್ಲಾ ಪ್ರವೇಶಕ್ಕೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿದ್ದು, ಒಂದು ವೇಳೆ ವಿನಯ್ ಬರದೇ ಹೋದರೂ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿಯನ್ನು ಕಾಂಗ್ರೆಸ್ ಕಾರ್ಯಕರ್ತರು…

Read More

ಕೋಲಾರ: ಕುರುಕ್ಷೇತ್ರದಲ್ಲಿ ಪಾಂಡವರಿಗೆ 14 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಇರುತ್ತದೆ. 15 ವರ್ಷ ಕೊನೆಯಾದ ನಂತರ ಅವರಿಗೆ ಅಧಿಕಾರ ಸಿಗುತ್ತದೆ. ಹಾಗೇಯೆ ಬಹುಶಃ ನನಗೂ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ. 15 ವರ್ಷಗಳಿಂದಲೂ ಅಧಿಕಾರ ಇಲ್ಲ. ಹಾಗಾಗಿ ಪಾಂಡವರು ವನವಾಸವನ್ನು ಅಂತ್ಯಗೊಳಿಸಿದಂತೆ ಮುಳಬಾಗಿಲು ಕ್ಷೇತ್ರದಲ್ಲೂ ಮೇ 10 ರಂದು ವಿಮುಕ್ತಿಗೊಳಿಸುವ  ಅವಕಾಶ ಬಂದಿದೆ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವ್ರು ಹೇಳಿದರು. ಬಲಶೆಟ್ಟಹಳ್ಳಿ ಗ್ರಾಮದಲ್ಲಿ ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾವ ನಂಬಿಕೆಯ ಇಟ್ಟುಕೊಂಡು ನನ್ನನ್ನು ಮುಳಬಾಗಿಲು ಕ್ಷೇತ್ರಕ್ಕೆ ಕಳುಹಿಸಿಕೊಟ್ಟರು ನನಗೆ ಗೊತ್ತಿಲ್ಲ . ಆದ್ರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಮೇಲೆ ನಾನು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬ್ಯುಸಿನೆಸ್ ನೋಡಿಕೊಳ್ಳಬೇಕಾ ಅಥವಾ ಮತಕೊಟ್ಟ ನಿಮ್ಮ ಜೊತೆ ಇರಬೇಕಾ ಎಂದು ಗೊಂದಲ ಉಂಟಾಯಿತು. ಬ್ಯುಸಿನೆಸ್ ನನಗೆ ಬೇಕಾಗಿಲ್ಲ, ನನಗೆ ಬೇಕಿರುವುದು ನೀವೆಂದು ನಾನು ಅವತ್ತೇ ತೀರ್ಮಾನ…

Read More

ಧಾರವಾಡ:ಧಾರವಾಡಗ್ರಾಮೀಣಕ್ಷೇತ್ರಕ್ಕೆಕಾಂಗ್ರೆಸ್ಅಭ್ಯರ್ಥಿಯಾಗಿವಿನಯ್ಕುಲಕರ್ಣಿಹೆಸರುಅಂತಿಮಗೊಳ್ಳುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ಅವರು ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಬಹಿರಂಗ ಸವಾಲಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಡುತ್ತಿದ್ದಾರೆ.  ಬಾರೋ ಅಂತ ಕರೆದವರು ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಶಾಸಕ ಅಮೃತ ದೇಸಾಯಿ, ಈಗಲೂ ಅವರಿಗೆ ಬಾರೋ ಅಂತಲೇ ಕರೆಯುತ್ತೇನೆ. ಅವರು ಬಂದಾದ್ರೂ ಬರಲಿ. ಕಾಂಗ್ರೆಸ್‌ನವರು ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಗೆಲ್ಲುವ ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರು ಬಂದು ಇಲ್ಲಿ ಚುನಾವಣೆಗೆ ನಿಂತರೂ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಅದಕ್ಕೆ ನಮ್ಮ ತಂಡ ಸಿದ್ಧವಿದೆ ಎಂದಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ನವರೂ ಪೋಸ್ಟ್ ಹಾಕುತ್ತಿರುತ್ತಾರೆ ಅದಕ್ಕೆ ನಮ್ಮವರೂ ಪ್ರತ್ಯುತ್ತರ ಕೊಡುತ್ತಿರುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮತ್ತೊಮ್ಮೆ ಕಮಲವನ್ನು ಅರಳಿಸಿಯೇ ತೀರುತ್ತೇವೆ ಎಂದರು.  

Read More

ಬೀದರ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಳ್ಳಿ (Silver) ಆಭರಣಗಳನ್ನು ಜಪ್ತಿ (Seize) ಮಾಡಲಾಗಿದೆ. ಮಹಾರಾಷ್ಟ್ರ (Maharastra) ಹಾಗೂ ಬೀದರ್ ಗಡಿ ಚೆಕ್ ಪೊಸ್ಟ್ (Bidar Border Check Post) ನಲ್ಲಿ ತಪಾಸಣೆ ವೇಳೆ 142 ಕೆ.ಜಿ ಬೆಳ್ಳಿಯ ಕಾಲು ಚೈನುಗಳು ಸೇರಿ 1 ಕೋಟಿ 5 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳ ಜೊತೆಗೆ ಕಾರು ಕೂಡ ಜಪ್ತಿ ಮಾಡಲಾಗಿದೆ. ಒಟ್ಟು 8 ಬ್ಯಾಗ್ ಗಳಲ್ಲಿ 142 ಕೆಜಿ ಬೆಳ್ಳಿಯ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗಜಾನನ ಎಂಬವರಿಗೆ ಸೇರಿದ ಕಾರಿನಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ಕಾಲು ಚೈನುಗಳು ಪತ್ತೆಯಾಗಿವೆ. ಕಾರಿನ ಮಾಲೀಕರು ನಿಖರವಾದ ದಾಖಲೆಗಳು ನೀಡದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು: ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ (R Dhruvanarayana) ಅವರ ಪತ್ನಿ ವೀಣಾ (Veena) ಶುಕ್ರವಾರ ನಿಧನರಾಗಿದ್ದಾರೆ. ಕ್ಯಾನ್ಸರ್ (Cancer) ಖಾಯಿಲೆಯಿಂದ ಬಳಲುತ್ತಿದ್ದ ಧ್ರುವನಾರಾಯಣ ಅವರ ಪತ್ನಿ ವೀಣಾ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳಷ್ಟೇ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕಳೆದ 2 ವರ್ಷಗಳಿಂದ ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇವರು 2 ಬಾರಿ ಶಾಸಕರಾಗಿ 1 ಬಾರಿ ಸಂಸದರಾಗಿದ್ದರು.

Read More

ಬಾಗಲಕೋಟೆ ಜಿಲ್ಲೆಯ 7 ಮತಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, 2ನೇ ಪಟ್ಟಿಯಲ್ಲಿ ಬಿಡುಗಡೆಯಾದ 5 ದರಲ್ಲಿ 4 ಕ್ಷೇತ್ರಗಳ ಅಭ್ಯರ್ಥಿ ಬಿಡುಗಡೆಯಾಗಿವೆ.  ಆದರೆ ಕೊನೆಯದಾಗಿ ಉಳಿದಿರುವ ತೇರದಾಳ ಕ್ಷೇತ್ರ ಇನ್ನೂ ಯಾರ `ಕೈ’ವಶವಾಗಲಿದೆ ಎಂಬುದೇ ಮರಿಚಿಕೆಯಾಗಿದೆ. ತೀವ್ರ ಕುತೂಹಲ ಮೂಡಿಸಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಟಿಕೆಟ್ ನೀಡುವಲ್ಲಿ ಹೈಕಮಾಂಡ್‌ಗೆ ತೀವ್ರ ತಲೆ ನೋವಾಗಿದ್ದು, ಈ ಬಾರಿ ಸ್ಥಳೀಯ ಮುಖಂಡರ ಒತ್ತಡ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಪಕ್ಷದ  ಕಿಸಾನ್ ಘಟಕದ ರಾಜ್ಯ ಸಂಚಾಲಕರುಗಳಾದ ಡಾ. ಪದ್ಮಜಿತ ನಾಡಗೌಡ ಪಾಟೀಲ, ಡಾ ಎ ಆರ್ ಬೆಳಗಲಿ ಸಿದ್ದು ಕೊಣ್ಣೂರ, ನೇಕಾರ ಮುಖಂಡ ಡಾ. ಎಂ.ಎಸ್. ದಡ್ಡೇನವರ ಹೀಗೆ ಸರದಿಯಲ್ಲಿ ಮುಖಂಡರ ಪ್ರಾಬಲ್ಯವು ಹೈಕಮಾಂಡ್‌ಗೆ ಸವಾಲಾಗುವಲ್ಲಿ ಕಾರಣವಾಗಿದೆ. ಅಳೆದು ತೂಗಿ 2 ನೇ ಪಟ್ಟಿ ಬಿಡುಗಡೆ ಮಾಡಿದರೂ ತೇರದಾಳ ಕ್ಷೇತ್ರದ ಅಭ್ಯರ್ಥಿ ಮಾತ್ರ ನಿಗೂಢವಾಗಿಯೇ ಉಳಿದಿದೆ. ಸ್ಥಳೀಯ ಕಾಂಗ್ರೆಸ್‌ನಲ್ಲಿ ಮಾತ್ರ ಅಷ್ಟೇ ಪ್ರಬಲವಾಗಿ ಹೋರಾಟ ನಡೆಸುತ್ತಿದ್ದು, ಈ ಬಾರಿ ನಮಗೇ ಟಿಕೆಟ್…

Read More

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಇದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ‌ಪಟ್ಟಿ ಬಿಡುಗಡೆಯಾಗಿದೆ. ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್‌ ಗೋಕಾಕ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ಧ ಹೊಸ ಮುಖವನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ಆಸೆಯಲ್ಲಿದ್ದ ಅಶೋಕ್‌ ಪೂಜಾರಿಗೆ ಟಿಕೆಟ್‌ ಕೈತಪ್ಪಿದೆ. ಗೋಕಾಕ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಡಾ ಮಹಾಂತೇಶ್‌ ಕಡಾಡಿ ಅವರಿಗೆ ಮಣೆ ಹಾಕಲಾಗಿದೆ. ಮಹಾಂತೇಶ್‌ ಅವರು ವೈದ್ಯರಾಗಿದ್ದು, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಮಹಾಂತೇಶ್‌ ಕಡಾಡಿ ಎಂಬ ಹೊಸ ಮುಖವನ್ನು ಕಣಕ್ಕಿಳಿಸುತ್ತಿರುವುದು ಬೆಳಗಾವಿ ಜಿಲ್ಲೆಯಲ್ಲಿ ಅಚ್ಚರಿಗೆ ಕಾರಣವಾಗಿದೆ. ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಅಶೋಕ ಪೂಜಾರಿ ತಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಟಿಕೆಟ್‌ ನೀಡುತ್ತೇವೆ ಎಂದೇ ಅಶೋಕ್‌ ಪೂಜಾರಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿತ್ತು ಎಂದು ಅವರೇ ಹೇಳಿಕೊಂಡಿದ್ದರು. ಆದರೆ, ಈಗ ಕಾಂಗ್ರೆಸ್‌ ವರಿಷ್ಠರು ಈ ಎಲ್ಲ ನಿರೀಕ್ಷೆಗಳನ್ನು ಹುಸಿಮಾಡಿ ಅಚ್ಚರಿಯ ರೀತಿಯಲ್ಲಿ ಮಹಾಂತೇಶ್‌ ಕಡಾಡಿ ಅವರಿಗೆ…

Read More