Author: Prajatv Kannada

ಬೆಂಗಳೂರು: ಬೆಂಗಳೂರು(Bangalore) ದಕ್ಷಿಣ ಕ್ಷೇತ್ರದಲ್ಲಿ ಅನ್ಯ ಪಕ್ಷದ ಹಲವು ಮುಖಂಡರು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಕೆ.ರಮೇಶ್‌ ರಾಜು ಸೇರಿದಂತೆ ಹಲವು ಪಕ್ಷಗಳ ಕಾರ್ಯಕರ್ತರು ಬಿಜೆಪಿ ಯುವ ಮುಖಂಡ ಪರಮೇಶ್‌ ಸಮ್ಮುಖದಲ್ಲಿ ಕಮಲ ಪಕ್ಷ ಸೇರಿದರು. ಈ ಮಧ್ಯೆ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡಿನ ಅಕ್ಷಯನಗರದಲ್ಲಿ ಡಿಎಲ್‌ಎಫ್ ಅಪಾರ್ಟ್‌ಮೆಂಟ್‌ ನಿವಾಸಿಗಳ ಜತೆಗೆ ಶಾಸಕ ಎಂ.ಕೃಷ್ಣಪ್ಪ ಸಮಾಲೋಚನೆ ನಡೆಸಿದರು. ಹಾಗೆಯೇ ನಾಗರಿಕರ ಕುಂದು ಕೊರತೆಗಳನ್ನು ಆಲಿಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಪಾಲಿಕೆ ಮಾಜಿ ಸದಸ್ಯ ಕೆ. ಸೋಮಶೇಖರ್‌, ಮುಖಂಡರಾದ ಕೆಂಬತ್ತಹಳ್ಳಿ ವೆಂಕಟೇಶ್‌, ಪದಾಧಿಕಾರಿಗಳಾದ ಶ್ರೀಧರ್‌ ಮೂರ್ತಿ, ಲಕ್ಷ್ಮಮ್ಮ ಮತ್ತಿತರರಿದ್ದರು. ಈ ವೇಳೆ ಮಾತನಾಡಿದ ಶಾಸಕ ಎಂ.ಕೃಷ್ಣಪ್ಪ, ಕ್ಷೇತ್ರವ್ಯಾಪ್ತಿಯಲ್ಲಿ 110 ಹಳ್ಳಿಗಳು ಸೇರಿದ್ದು ಕಾವೇರಿ ನೀರಿನ ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿಗೆ ಪಣತೊಡಲಾಗಿದ್ದು, ಹೀಗಾಗಿ ಕ್ಷೇತ್ರದ ಜನರು ಮತ್ತೆ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಂಕಿ ಅವಘಡ (Fire accident in Bangalore)ಸಂಭವಿಸಿದೆ. ಕೆಂಗೇರಿ ಉಪನಗದರ ನಾಡಕಚೇರಿ ಆವರಣದ ಪ್ರವೇಶ ದ್ವಾರದ ಬಳಿಯೇ ಬೆಂಕಿ ಕಾಣಿಸಿಕೊಂಡು ನಂತರ ಇಡೀ ಕಚೇರಿಗೆ ಆವರಿಸಿದೆ. ಬೆಂಕಿ ತೀವ್ರವಾಗಿ ವ್ಯಾಪಿಸಿದ ಹಿನ್ನೆಲೆಯಲ್ಲಿ ನೂರಾರು ದಾಖಲೆಗಳು ಸುಟ್ಟು ಕರಕಲಾಗಿವೆ. ಘಟನೆ ನಂತರ ಸಂಬಂಧಿಸಿದಂತೆ ನಾಡಕಚೇರಿ ಸಿಬ್ಬಂದಿ ದೂರು ನೀಡಿದ್ದು, ಕೆಂಗೇರಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ ತನಿಖೆ ಕೈಗೊಂಡಿದ್ದಾರೆ. ಕಂಪ್ಯೂಟರ್ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಮುಖ ದಾಖಲೆಗಳನ್ನು ನಾಶಪಡಿಸುವ ಉದ್ದೇಶದಿಂದ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

Read More

ಬೆಂಗಳೂರು : ಮಧ್ಯರಾತ್ರಿ ಮಹಿಳೆ ಮತ್ತು ಮಕ್ಕಳಿದ್ದ ಮೆನೆಗೆ ನುಗ್ಗಿದ ಆರೋಪದಡಿ ಇನ್ಸ್ಪೆಕ್ಟರ್ ವಿರುದ್ದ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ (Subramanya Nagar Station Inspector)ಶರಣಗೌಡ ವಿರುದ್ದ  ನಗರ ಪೊಲೀಸ್ ಆಯುಕ್ತ  ಪ್ರತಾಪ್ ರೆಡ್ಡಿಗೆ ( Police Commissioner Pratap Reddy)ದೂರು ಕೊಡಲಾಗಿದೆ. ರಾಜಕುಮಾರ್ ಎಂಬುವರ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಹೆಂಡತಿ ಹಾಗೂ ಮಗಳ ಜೊತೆ ಪೊಲೀಸರು ಅಸಭ್ಯ ವರ್ತನೆ ಮಾಡಿದ ಆರೋಪವಿದೆ.  ಇದನ್ನ ಪ್ರಶ್ನೆ ಮಾಡಲು ರಾಜಕುಮಾರ್ ಇನ್ಸ್ಪೆಕ್ಟರ್ ಗೆ ಕರೆ ಮಾಡಿದ್ದ. ಈ ವೇಳೆ ರಾಜಕುಮಾರ್ ಗೆ ಯಾವುದರ ಬಗ್ಗೆ ಕಪ್ಲೆಂಟ್ ಆಗಿದೆ ಎಂದು ಇನ್ಸ್ಪೆಕ್ಟರ್ ಮಾಹಿತಿ ನೀಡಿಲ್ಲ. ಮಾತ್ರವಲ್ಲ ಯಾರಿಗೆ ಬೇಕಾದ್ರು ದೂರು ಕೊಡು ಎಂದು ಅವಾಜ್ ಹಾಕಿದ್ದ. ಇದೀಗ ಇನ್ಸ್ಪೆಕ್ಟರ್ ಶರಣಗೌಡ ಹಾಗೂ ರಾಜಕುಮಾರ್ ನಡುವಿನ ಸಂಭಾಷಣೆ ವೈರಲ್ ಆಗಿದೆ.

Read More

ರಿಯಾದ್: ಆಪರೇಷನ್ ಕಾವೇರಿಯಡಿಯಲ್ಲಿ (Operation Kaveri) ಸುಡಾನ್‌ನಿಂದ (Sudan) ಭಾರತೀಯರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, 229 ಭಾರತೀಯರು ಭಾನುವಾರ ಜೆಡ್ಡಾದಿಂದ (Jeddah) ಬೆಂಗಳೂರಿಗೆ (Bengaluru) ತೆರಳುವ ವಿಮಾನದಲ್ಲಿ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of External Affairs) ತಿಳಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi)  ತಮ್ಮ ಟ್ವಿಟ್ಟರ್‌ (Twitter) ಖಾತೆಯಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಪರೇಷನ್ ಕಾವೇರಿ ನಾಗರಿಕರನ್ನು ಮರಳಿ ಮನೆಗೆ ಕರೆತರುತ್ತಿದೆ. 229 ಪ್ರಯಾಣಿಕರನ್ನು ಹೊತ್ತ 7ನೇ ವಿಮಾನವು ಇದಾಗಿದ್ದು, ಜೆಡ್ಡಾದಿಂದ ಬೆಂಗಳೂರಿಗೆ ತೆರಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಸುಡಾನ್‌ನಲ್ಲಿ ಕದನ ವಿರಾಮವನ್ನು ಘೋಷಿಸಿರುವುದರಿಂದ, ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸಂಘರ್ಷ-ಪೀಡಿತ ರಾಷ್ಟ್ರದಿಂದ ಸ್ಥಳಾಂತಿರಸಲು ಪ್ರಯತ್ನಿಸುತ್ತಿವೆ. ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯ ಹಡಗು, ಐಎನ್‌ಎಸ್ ಟೆಗ್ (INS Teg), ಶನಿವಾರ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 288 ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ…

Read More

ಮಂಡ್ಯ: ಎರಡು ರಾಷ್ಟ್ರೀಯ  ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ (BJP) ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ. ಆದಿಚುಂಚನಗಿರಿಯಲ್ಲಿ (Adichunchanagiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕರು ಕೂಡ ಇಲ್ಲಿಯೇ ಇದ್ದಾರೆ. ಆದರೆ ಕರ್ನಾಟಕದ ದುರಾದೃಷ್ಟವೇನೆಂದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಇಬ್ಬರೂ ಹೇಳುತ್ತಿಲ್ಲ. ಪ್ರಧಾನ ಮಂತ್ರಿಗಳು ಕೇವಲ ಅವರನ್ನು ನಿಂದಿಸಿದ ಬಗ್ಗೆ ಹೇಳುತ್ತಾರೆ. ಕಾಂಗ್ರೆಸ್‌ನವರು (Congress) ಅವರನ್ನು ವಿಷಸರ್ಪ ಎಂದು ಮಾತನಾಡುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಳಗಾವಿಯ (Belagavi) ಗಡಿ ವಿಚಾರದ ಬಗ್ಗೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ನಾಡಿನ ಜನರ ಬದುಕಿನ ಬಗ್ಗೆ ಎರಡೂ ಪಕ್ಷಗಳು ಸಂದೇಶ ನೀಡುತ್ತಿಲ್ಲ. ಕಾಂಗ್ರೆಸ್ ಎರಡು ಸಾವಿರ ಗ್ಯಾರಂಟಿ ಸೇರಿ ಇನ್ನೂ ನಾಲ್ಕು ಭರವಸೆಯನ್ನು ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ…

Read More

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ( Bangalore University)ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು(Student of Engineering College) ಮೇ 1ರಿಂದ ಹೊರ ಹಾಕುವಂತೆ ಬೆಂಗಳೂರು ವಿಶ್ವವಿದ್ಯಾಲಯ ಸುತ್ತೋಲೆ(Bangalore University Circular) ಹೊರಡಿಸಿದ್ದು, ವಿಶ್ವವಿದ್ಯಾಲಯದ ಈ ಸೂಚನೆಗೆ ವಿದ್ಯಾರ್ಥಿಗಳ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರು ವಿವಿಯ ಮಲತಾಯಿ ಧೋರಣೆಯನ್ನ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಇನ್ನೂ ವಿವಿ ನಡೆ ದುರಹಂಕಾರದ ಪರಮಾವಧಿ ಅಂತ ಸ್ಟೂಡೆಂಟ್ಸ್ ಗರಂ ಆಗಿದ್ದಾರೆ. UVCE ಕಾಲೇಜಿನ  ಸ್ವಾಯತ್ತ ನೆಪವೊಡ್ಡಿ ಹಾಸ್ಟೆಲ್ ಇಂದ ವಿದ್ಯಾರ್ಥಿಗಳ ಹೊರ ಹಾಕಲು ವಿವಿ ಕುತಂತ್ರ ನಡೆಸಿದೆ. ಇನ್ನೊಂದು  ದಿನದಲ್ಲಿ ಹಾಸ್ಟೆಲ್ ಖಾಲಿ ಮಾಡುವಂತೆ  (Like vacating the hostel)ಆದೇಶ ಹೊರಡಿಸಲಾಗಿದೆ. ವಿವಿಯ ಆದೇಶದಿಂದ UVCE ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವಿವಿ ನಡೆಗೆ ವಿದ್ಯಾರ್ಥಿ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೊಂದು ವರ್ಷ ಬೆಂಗಳೂರು ವಿವಿ ( Bangalore University)ಯುವಿಸಿಇ ಸಂಪೂರ್ಣ ಖರ್ಚು ನೋಡಿ ಕೊಳ್ಳಬೇಕು ಎಂಬ ಸರ್ಕಾರದ ಅಧಿಕೃತ ಆದೇಶವಿದ್ದರೂ ಬೆಂಗಳೂರು ವಿವಿ ಅಸಡ್ಡೆ…

Read More

ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಂಬಂಧ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಾದ್ಯಂತ ಹಮ್ಮಿಕೊಂಡಿರುವ ‘ನಮ್ಮ ನಡೆ ಮತಗಟ್ಟೆಯ ಕಡೆ’ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮುಖ್ಯ ಚುನಾವಣಾಧಿ ಕಾರಿಯಾದ ಮನೋಜ್ ಕುಮಾರ್ ಮೀನಾ (Manoj Kumar Meena)ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ರ(Tushar Girinath)ವರು ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ವೃತ್ತದಲ್ಲಿ ಚಾಲನೆ ನೀಡಿದರು. ‘ನಮ್ಮ ನಡೆ ಮತಗಟ್ಟೆಯ ಕಡೆ’ ಜಾಥ ಸಾಗಿದ ಹಾದಿ: ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ನಿಂದ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶ್ರೀ ರಾಮ ವಿದ್ಯಾಲಯ, ಜಕ್ಕೂರು ವೃತ್ತದ ಮೂಲಕ ಸಾಗಿ ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯವರೆಗು ಸಾಗಿ ಮತಗಟ್ಟೆಯ ಆವರಣದಲ್ಲಿ “ಪ್ರಜಾಪ್ರಭುತ್ವದ ಹಬ್ಬ – ಮೇ 10 ಮತದಾನ” ಎಂಬ ದ್ಯೇಯ ಒಳಗೊಂಡಿರುವ ಬಾವುಟವನ್ನು ದ್ವಜಾರೋಹಣ ಮಾಡಲಾಯಿತು. ಪಾಲಿಕೆಯ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗ,…

Read More

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (Information Commissioner) ಆಯುಕ್ತರಾಗಿ 2010ರ ಬ್ಯಾಚ್​ನ ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಆರ್ (Vinoth Priya R) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಿಯಾ ಪ್ರಸ್ತುತ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಈ ಹಿಂದೆ ಆಯುಕ್ತರಾಗಿ ನೇಮಕಗೊಂಡಿದ್ದ ಐಪಿಎಸ್​ ಡಾ. ಪಿಎಸ್​ ಹರ್ಷ ಅವರು ವ್ಯಾಸಂಗ ರಜೆಯಲ್ಲಿದ್ದು, ಹುದ್ದೆ ಖಾಲಿ ಇತ್ತು. ಈಗ ಐಎಎಸ್ ಪ್ರಿಯಾ ಅವರು ಡಿಐಪಿಆರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್ ಕೂಡ ಏಪ್ರಿಲ್ 29 ರಂದು ನಿವೃತ್ತರಾದರು.

Read More

ಸೂರ್ಯೋದಯ: 06.00 AM, ಸೂರ್ಯಾಸ್ತ : 06.34 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣ ತಿಥಿ: ಇವತ್ತು ದಶಮಿ 08:28 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಮಖ 03:30 PM ತನಕ ನಂತರ ಪುಬ್ಬಾ ಯೋಗ: ಇವತ್ತು ವೃದ್ಧಿ11:17 AM ತನಕ ನಂತರ ಧ್ರುವ ಕರಣ: ಇವತ್ತು ತೈತಲೆ 07:27 AM ತನಕ ನಂತರ ಗರಜ 08:28 PM ತನಕ ನಂತರ ವಣಿಜ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 12.50 PM to 02.37 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:38 ವರೆಗೂ ಮೇಷ ರಾಶಿ: ರಾಜಕೀಯದಲ್ಲಿ ಪಾದರ್ಪಣೆ ಮಾಡುವಿರಿ, ಉನ್ನತ ಪದವಿ ಸ್ಥಾನ ಸಿಗಲಿದೆ,ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ. ಸಂಸಾರದಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಸೂಕ್ತ ಸಲಹೆಗಳು ಕಾರ್ಯಾನುಕೂಲಕ್ಕೆ…

Read More

ಪ್ರಸ್ತುತ ನಡೆಯುತ್ತಿರುವ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಸಿಹಿ-ಕಹಿ ಫಲಿತಾಂಶ ಕಂಡಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಾಕಿ ಇರುವ 6 ಪಂದ್ಯಗಳು ಅತ್ಯಂತ ನಿರ್ಣಾಯಕವಾಗಲಿವೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಇನ್ನುಳಿದ 6ರ ಪೈಕಿ 4ರಲ್ಲಿ ಆರ್‌ಸಿಬಿ ಕಡ್ಡಾಯವಾಗಿ ಗೆಲ್ಲಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅವಧಿಯ ಪಂದ್ಯಗಳಲ್ಲಿ ಆರ್‌ಸಿಬಿ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳ ಪೈಕಿ ಆರ್‌ಸಿಬಿ 4ರಲ್ಲಿ ಗೆದ್ದು, ಅಷ್ಟೇ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ 4 ಪಂದ್ಯಗಳ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯವೇ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಸೋಮವಾರ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮಧ್ಯಮ ಕ್ರಮಾಂಕವನ್ನು ಬಲಿಷ್ಠ ಮಾಡಿಕೊಳ್ಳುವ ಸಲುವಾಗಿ ತನ್ನ ಪ್ಲೇಯಿಂಗ್‌ XIನಲ್ಲಿ ಅಗತ್ಯ 5 ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. 1ನೇ ಬದಲಾವಣೆ: ಶಹಬಾಝ್‌ ಜಾಗಕ್ಕೆ ಅನುಜ್‌ ರಾವತ್‌ ಮೂರನೇ…

Read More