ಕೋಲ್ಕತ್ತ: ಬೆಂಗಾಳಿ ಚಿತ್ರರಂಗದ ಖ್ಯಾತ ನಟಿ ಸ್ವಸ್ತಿಕಾ ಮುಖರ್ಜಿ ತಮ್ಮ ಮುಂದಿನ ಸಿನಿಮಾ ‘ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಸಂದೀಪ್ ಸರ್ಕಾರ್ ಹಾಗೂ ಆತನ ಸಹವರ್ತಿಗಳು ಇ–ಮೇಲ್‌ಗಳಲ್ಲಿ ಬೆದರಿಕೆ ಹಾಕುತ್ತಿದ್ದು, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಜೊತೆ ಸಹಕರಿಸಬೇಕು ಎಂದು ಒತ್ತಾಯಿಸಿ ‘ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಸಂದೀಪ್ ಸರ್ಕಾರ್ ಹಾಗೂ ಆತನ ಸಹವರ್ತಿಗಳು ಮೇಲ್‌ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದಾಗಿ ಸ್ವಸ್ತಿಕಾ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು. ಇಲ್ಲಿನ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಹಕರಿಸದಿದ್ದರೆ ನಿಮ್ಮ ಬೆತ್ತಲೆ ಚಿತ್ರ ಹಾಗೂ ವಿಡಿಯೊಗಳನ್ನು ಪೋರ್ನ್ ವೆಬ್‌ಸೈಟುಗಳಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಸಹನಿರ್ಮಾಪಕ ಹೇಳಿದ್ದಾಗಿ ಸ್ವಸ್ತಿಕಾ ಆರೋಪಿಸಿದ್ದಾರೆ. ಸ್ವಸ್ಥಿಕಾ ಮಾಡಿರುವ ಆರೋಪದ ಕುರಿತು ಇದುವರೆಗೂ ಸಂದೀಪ್ ಸರ್ಕಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮ್ಮೊಟ್ಟಿಗೆ ಶಿಬ್ತುರ್ ಸಿನಿಮಾದ ಮತ್ತೊಬ್ಬ ಸಹ ನಿರ್ಮಾಪಕ ಅಜಂತಾ ಸಿನ್ಹಾ ರಾಯ್ ಅವರೇ ಸಂಪರ್ಕ ಮಾಡುತ್ತಿದ್ದರು. ಆದರೆ ಸಿನಿಮಾದ ಶೂಟಿಂಗ್ ಎಲ್ಲ…
Author: Prajatv Kannada
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ನಟ ಕಿಚ್ಚ ಸುದೀಪ್ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದು ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಸಿನಿಮಾ, ಟಿ.ವಿ.ಶೋ ಹಾಗೂ ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ಹಿಡಿಯಬೇಕೆಂದು ಶಿವಮೊಗ್ಗದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಶಿವಮಮೊಗ್ಗ ಜಿಲ್ಲೆಯ ವಕೀಲ ಕೆ.ಪಿ ಶ್ರೀಪಾಲ ಎಂಬುವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ “ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ ಶೋಗಳು ಪ್ರಸಾರವಾಗದಂತೆ ಮತ್ತು ನಟಿಸಿರುವ ಜಾಹಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು’ ಎಂದು ತಿಳಿಸಿದ್ದಾರೆ. ಸುದೀಪ್ ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನಚಿತ್ರಗಳು, ಟಿ.ವಿ ಶೋಗಳು ಹಾಗೂ…
ಸಾಕಷ್ಟು ವರ್ಷಗಳ ಬಳಿಕ ನಟಿ ರಮ್ಯಾ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ತಮ್ಮದೇ ಆ್ಯಪಲ್ ಬಾಕ್ಸ್ ಸಿನಿಮಾದ ಮೂಲಕ ಮತ್ತೆ ಎಂಟ್ರಿಕೊಟ್ಟಿದ್ದು ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಈ ಮಧ್ಯೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಟೈಟಲ್ ತಮ್ಮದೆಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ತೀರ್ಪು ನಟಿ ರಮ್ಯಾ ಪರವಾಗಿ ಬಂದಿದೆ. ತಾವು ಇದೇ ಹೆಸರಿನ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿದ್ದು ಮತ್ತು ಈ ಶೀರ್ಷಿಕೆಯನ್ನು ಬೇರೆಯೊಬ್ಬರು ಬಳಸುತ್ತಿದ್ದಾರೆ. ಅದನ್ನು ತಡೆಯಬೇಕು ಎಂದು ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ್ದು, ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಆ ಟೈಟಲ್ ಬಗ್ಗೆ ಪರಿಶೀಲಿಸಿದಾಗ ಅಸಲಿಯಾಗಿ ಅದು ರಾಜೇಂದ್ರ ಸಿಂಗ್ ಬಾಬು ಅವರ ಹೆಸರಿನಲ್ಲಿ ಇರಲಿಲ್ಲ ಎನ್ನುವುದು…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಶ್ವ ವಿಖ್ಯಾತ ಕರಗ ಶಕ್ತ್ಯುತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರ್ಪೂರ ಪೂಜೆ ವೇಳೆ ರಸ್ತೆ ಬದಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಗಾಹುತಿಯಾಗಿದೆ. ಇಂದು ರಾತ್ರಿ ಕರಗೋತ್ಸವ (Karaga Utsav) ಹಿನ್ನೆಲೆಯಲ್ಲಿ ಪೂಜೆ, ವಿಧಿ-ವಿಧಾನಗಳು ಆರಂಭಗೊಂಡಿದೆ. ಎನ್ ಆರ್ ಸಿಂಗ್ನಲ್ ನಿಂದ ಧರ್ಮರಾಯ ದೇವಸ್ಥಾನದವರೆಗೂ ಕರ್ಪೂರ ಹಚ್ಚಿ ಸೇವೆ ಸಲ್ಲಿಸಲಾಗುತ್ತಿದೆ. ಸುಮಾರು 700 ಮೀಟರ್ ದಾರಿಯುದ್ದಕ್ಕೂ ಕರ್ಪೂರದ ಪೂಜೆ ನಡೆದಿದೆ. ಈ ವೇಳೆ ಅವಘಡ ಸಂಭವಿಸಿದೆ ಮಾರ್ಚ್ 29 ರಿಂದ ಆರಂಭವಾದ ಕರಗ ಉತ್ಸವದಲ್ಲಿ ಇಂದು ದೌಪದಿಗ ಹೂವಿನ ಕರಗವನ್ನ ಕರಗ ಪೂಜಾರಿ ಜ್ಞಾನೇಂದ್ರ ಹೊತ್ತುಕೊಂಡು ಕರಗ ಬೀದಿಗಳಲ್ಲಿ ಮೆರವಣಿಗೆ ಮಾಡಲಿದ್ದಾರೆ. ಇಂದು ರಾತ್ರಿ 12:30ಕ್ಕೆ ಕರಗ ಶಕ್ತೋತ್ಸವ ಆರಂಭವಾಗಲಿದ್ದು, ಕರಗ ಸಾಗುವ ಮಾರ್ಗದ್ದುದ್ದಕ್ಕೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಕರಗದ ದರ್ಶನ ಪಡೆಯಲಿದ್ದಾರೆ. ಕರಗ ಮಹೋತ್ಸವವು ಮಾರ್ಚ್ 29ರಿಂದ ಪ್ರಾರಂಭವಾಗಿದೆ. ಒಟ್ಟು 11 ದಿನಗಳ ಕಾಲ ಈ ಕರಗ ನಡೆಯುತ್ತದೆ. ರಾತ್ರಿ 12ರಿಂದ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ…
ಬೆಂಗಳೂರು: ಇಂದು ಕಾಂಗ್ರೆಸ್ 42 ಕ್ಷೇತ್ರದ ಅಭ್ಯರ್ಥಿಗಳ (Congress Second list) ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಾಸನ, ಚನ್ನಪಟ್ಟಣ, ಕೋಲಾರ, ಪುಲಕೇಶಿ ನಗರ ಸೇರಿದಂತೆ ಕೆಲವು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮಾತ್ರ ಇನ್ನು ಸಸ್ಪೆನ್ಸ್ ಆಗಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸ್ಪರ್ಧೆ ವದಂತಿ ಇನ್ನುಸಸ್ಪೆನ್ಸ್ ಆಗಿಯೇ ಉಳಿದಿದೆ. ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (Former PM HD Deve Gowda) ಮಾನಸ ಪುತ್ರ ಎಂದು ಬಿಂಬಿತವಾಗಿದ್ದ ವೈಎಸ್ವಿ ದತ್ತಾ (YSV Datta) ಅವರಿಗೆ ನಿರಾಸೆಯಾಗಿದೆ. ವೈಎಸ್ವಿ ದತ್ತಾ ಕಡೂರು ವಿಧಾನಸಭಾ ಕ್ಷೇತ್ರದ (Kaduru) ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಕುರುಬ ಸಮುದಾಯದ ನಾಯಕನಿಗೆ ಮಣೆ ಹಾಕಿರುವ ಕಾಂಗ್ರೆಸ್ ಆನಂದ್ ಕೆಎಸ್ (Anand KS) ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ವೈಎಸ್ವಿ ದತ್ತಾ ಅವರ ಮುಂದಿನ ನಡೆ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ವೈಎಸ್ವಿ ದತ್ತಾ ಟಿಕೆಟ್ಗಾಗಿ ಬಾರಿ ಕಸರತ್ತು…
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿರುವ ನಟ ಕಿಚ್ಚ ಸುದೀಪ್ ಅವರ ವಿರುದ್ಧ ಬುಧವಾರ ತಡರಾತ್ರಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ನೀತಿ ಸಂಹಿತೆ ಅನುಸಾರ ಮಾನ್ಯ ಕಿಚ್ವ ಸುದೀಪ್ ಇವರ ಚಲನಚಿತ್ರಗಳನ್ನು , ಟಿ.ವಿ.ಶೋಗಳನ್ನು ಮತ್ತು ಅವರು ಇರುವ ಜಾಹಿರಾತುಗಳನ್ನು ಚುನಾವಣೆ ಮುಗಿಯುವ ವರೆಗೂ ತಡೆ ಹಿಡಿಯುವಂತೆ ದೂರು ನೀಡಿದವರು ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗದ ವಕೀಲ ಕೆ.ಪಿ ಶ್ರೀಪಾಲ ಎಂಬುವವರು ಕಿಚ್ಚ ಸುದೀಪ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಒಂದು ಪ್ರತಿ ಸೇರಿದಂತೆ ರಾಜ್ಯ ಚುನಾವಣಾ ಅಧಿಕಾರಿಗೆ ಈ ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಸದ್ಯ ದೂರು ಕುರಿತು ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಚ್ಚ ವಿರುದ್ಧ ಚುನಾವಣಾ ಆಯೋಗಕ್ಕೆ ಕೊಟ್ಟ ದೂರಿನಲ್ಲಿ ಏನಿದೆ? ಕನ್ನಡದ ಚಲನಚಿತ್ರ ನಟ ಮಾನ್ಯ ಕಿಚ್ಚ ಸುದೀಪ್ ರವರು ಭಾರತೀಯ ಜನತಾ…
ಕಲಬುರಗಿ: ಜೆಡಿಎಸ್ (JDS) ರಾಜ್ಯ ಕಾರ್ಯದರ್ಶಿಯಾಗಿದ್ದ, ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ (Kedarlingayya Hiremath) ಮಾಜಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಶಾಸಕ ಡಾ.ಅಜಯಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬುಧವಾರ ಕಾಂಗ್ರೆಸ್ (Congress) ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ (Ramalinga Reddy) ಅವರು ಕೇದಾರಲಿಂಗಯ್ಯ ಅವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ನಾಲ್ಕು ಬಾರಿಯೂ ಮತಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕೇದಾರಲಿಂಗಯ್ಯ ಹಿರೇಮಠ ಅವರು ಜೇವರ್ಗಿ ಕ್ಷೇತ್ರದಲ್ಲಿ ಐದನೇ ಬಾರಿಗೆ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಅವರು ಪ್ರಕಟಿಸಿದ್ದ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇದಾರಲಿಂಗಯ್ಯ ಅವರ ಹೆಸರು ಇರಲಿಲ್ಲ. ಹೀಗಾಗಿ ಅಂದಿನಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಕೇದಾರಲಿಂಗಯ್ಯ ಜೊತೆ ಅವರ ಕಾರ್ಯಕರ್ತರು, ಅಭಿಮಾನಿಗಳು ಸೇರಿ…
ಕೋಲ್ಕತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಗುರುವಾರ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 9ನೇ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸುತ್ತಿವೆ. ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ ಮೊದಲನೇ ಪಂದ್ಯದಲ್ಲಿ ಆರ್ಸಿಬಿ ತವರು ಅಭಿಮಾನಿಗಳ ಎದುರು ಅದ್ಭುತ ಪ್ರದರ್ಶನವನ್ನು ತೋರಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿ 8 ವಿಕೆಟ್ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಹದಿನಾರನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಬೌಲಿಂಗ್ನಲ್ಲಿ ಕರಣ್ ಶರ್ಮಾ 3 ವಿಕೆಟ್ ಪಡೆದು ಮಿಂಚಿದ್ದರೆ, ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅರ್ಧಶತಕಗಳನ್ನು ಸಿಡಿಸುವ ಮೂಲಕ ಆರ್ಸಿಬಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಇದೀಗ ಲಯವನ್ನು ಕೋಲ್ಕತಾದಲ್ಲಿ ಮುಂದುವರಿಸಲು ಬೆಂಗಳೂರು ತಂಡ ಎದುರು ನೋಡುತ್ತಿದೆ. ಇನ್ನು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ…
ಒಂದೊಂದು ಸೀಸನ್ ನಲ್ಲಿ ಒಂದೊಂದು ಬಗೆಯ ಹಣ್ಣುಗಳು ಮಾರುಕಟ್ಟೆಗೆ ಹೆಚ್ಚಾಗಿ ಬರುವುದನ್ನು ನಾವು ಗಮನಿಸಿದ್ದೇವೆ. ಈಗ ದ್ರಾಕ್ಷಿ ಹಣ್ಣು, ಕಲ್ಲಂಗಡಿ ಹಣ್ಣು ಮತ್ತು ಕರ್ಬುಜ ಹಣ್ಣುಗಳ ಕಾಲ. ಹಾಗಾಗಿ ಇವುಗಳ ಬೆಲೆಯೂ ಕಡಿಮೆ, ಡಿಮ್ಯಾಂಡ್ ಕೂಡ ಜಾಸ್ತಿ. ಜನರು ಬೇಸಿಗೆ ಕಾಲದಲ್ಲಿ ಈ ಹಣ್ಣುಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಕರ್ಬುಜ ಹಣ್ಣು ಜ್ಯೂಸ್ ಮಾಡುವ ಸಲುವಾಗಿ ಎಲ್ಲರ ಮನೆ ಮಾತಾಗಿದೆ. ಕರ್ಬುಜ ಹಣ್ಣಿನ ವಿವಿಧ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಲು ಮುಂದಾದರೆ ದೇಹ ತಂಪಾದಷ್ಟು ಮನಸ್ಸು ಖುಷಿಯಾಗುತ್ತದೆ. ಹಾಗಿದ್ದರೆ ಬನ್ನಿ ಕರ್ಬೂಜ ಹಣ್ಣಿನ ಬಗ್ಗೆ ಡಾಕ್ಟರ್ ದೀಪ್ಶಿಕಾ ಏನು ಹೇಳುತ್ತಾರೆ ಕೇಳೋಣ…. ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಕರ್ಬುಜ ಹಣ್ಣಿನಲ್ಲಿ ನಿಮ್ಮ ದೇಹದ ತೂಕವನ್ನು ಹೆಚ್ಚು ಮಾಡುವ ಯಾವುದೇ ಅಂಶಗಳಿಲ್ಲ. ಜೊತೆಗೆ ಕ್ಯಾಲೋರಿ ಗಳು ಸಹ ಕಡಿಮೆ ಇರುವುದರಿಂದ ನಿಮ್ಮ ದೇಹದ ತೂಕ ನಿಯಂತ್ರಣ ದಲ್ಲಿ ನೀವು ಇದನ್ನು ನಂಬಬಹುದು. ಅಷ್ಟೇ ಅಲ್ಲದೆ ಇದು ತನ್ನಲಿನ ಹೆಚ್ಚಿನ ಪ್ರಮಾಣದ ನೀರಿನ ಅಂಶದ ಕಾರಣದಿಂದ…
ಇಸ್ಲಾಮಾಬಾದ್: ಕಳೆದ ಕೆಲ ಸಮಯದಿಂದ ಪಾಕಿಸ್ತಾನದಲ್ಲಿ ಜನ ತುತ್ತು ಕೂಳಿಗೂ ಪರದಾಡುತ್ತಿದ್ದಾರೆ. ಈಗಾಗಲೇ ಉಚಿತ ಆಹಾರ ವಿತರಣೆ ವೇಳೆ ಸಾಕಷ್ಟು ಮಂದಿ ಬಲಿಯಾಗಿದ್ದು ಜನ ಕಂಗಾಲಾಗಿದ್ದಾರೆ. ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಪಾಕ್ ಗೆ ಇತರ ಯಾವ ರಾಷ್ಟ್ರಗಳಿಂದಲೂ ನಿರೀಕ್ಷಿತ ನೆರವು ಸಿಗುತ್ತಿಲ್ಲ. ಈ ಮಧ್ಯೆ ಪಾಕ್ ಗೆ ಮತ್ತೊಂದು ಆಘಾತ ಎದುರಾಗಿದೆ. ಪಾಕ್ ನ ಮಿತ್ರ ರಾಷ್ಟ್ರ ಎಂದು ಹೇಳಿಕೊಳ್ಳುವ ಚೀನಾ ಇದೀಗ ಪಾಕ್ ಅನ್ನು ನಡುನೀರಿನಲ್ಲಿ ಕೈಬಿಟ್ಟಂತೆ ಇದೆ. ದಿವಾಳಿಯ ಹಂತದಲ್ಲಿ ಇರುವ ರಾಷ್ಟ್ರದಲ್ಲಿ ಮೂವತ್ತು ಮೊಬೈಲ್ ಫೋನ್ ತಯಾರಿಕಾ ಘಟಕಗಳು ಬಾಗಿಲು ಮುಚ್ಚಿವೆ. ಪಾಕಿಸ್ತಾನ ಸರ್ಕಾರದ ಬಳಿ ವಿದೇಶಿ ವಿನಿಮಯ ಪ್ರಮಾಣವೂ ಕುಸಿತಗೊಂಡಿರುವುದರಿಂದ ಮೊಬೈಲ್ ತಯಾರಿಕೆಗೆ ಬೇಕಾಗುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಉತ್ಪಾದನೆ ಮಾಡುವ ಘಟಕಗಳ ಒಕ್ಕೂಟ ಅನಿವಾರ್ಯವಾಗಿ ಉತ್ಪಾದನೆ ಸ್ಥಗಿತಗೊಳಿಸಲೇಬೇಕಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದೆ. ಜತೆಗೆ ಈ ಘಟಕಗಳಲ್ಲಿ ಇರುವ ಶೇ.90ರಷ್ಟು ಮಂದಿ ಚೀನ ಪರಿಣಿತರು ಕೂಡ ಸ್ವದೇಶಕ್ಕೆ ವಾಪಸಾಗಿದ್ದಾರೆ.…