ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ (Narendra Modi) ವಿಷ ಸರ್ಪ ಅಲ್ಲ (Venomous Snake), ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪ (King Cobra) ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (DR.K. Sudhakar) ಚಿಕ್ಕಬಳ್ಳಾಪುರದಲ್ಲಿ (Chikkaballapur) ಶನಿವಾರ ಹೇಳಿದ್ದಾರೆ. ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿ ಚೋಕಿದಾರ್ ಚೋರ್ ಅಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ವಿಷ ಸರ್ಪ ಎಂದಿದ್ದಾರೆ. ಆದರೆ ನರೇಂದ್ರ ಮೋದಿ ವಿಷ ಸರ್ಪ ಅಲ್ಲ, ದೇಶದ 140 ಕೋಟಿ ಜನರ ಖಜಾನೆ ರಕ್ಷಣೆ ಮಾಡುವ ಕಾಳಿಂಗ ಸರ್ಪ ಎಂದರು. ಪುರಾತನ ದೇವಸ್ಥಾನಗಳ ಖಜಾನೆಗಳನ್ನ ರಕ್ಷಣೆ ಮಾಡುವುದು ಕಾಳಿಂಗ ಸರ್ಪಗಳು. ಈಗ ದೇಶದ 140 ಕೋಟಿ ಜನರ ತೆರಿಗೆಯ ಹಣ ಖಜಾನೆಯನ್ನು ಕಾಪಾಡುತ್ತಿರುವುದು ನರೇಂದ್ರ ಮೋದಿ ಎಂಬ ಕಾಳಿಂಗ ಸರ್ಪವೇ ಹೊರತು, ವಿಷ ಸರ್ಪ ಅಲ್ಲ. 130 ಕೋಟಿ ಜನರಿಗೆ ಕೊರೊನಾ ಲಸಿಕೆ (COVID-19 vaccines) ಎಂಬ…
Author: Prajatv Kannada
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಡೆಸುತ್ತಿದ್ದ ರೋಡ್ ಶೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅರ್ಧಕ್ಕೆ ಮೊಟಕುಗೊಳಿಸಿ ಉಡುಪಿ ಜಿಲ್ಲೆಯ ಕಾಪುಗೆ ಹೊರಟ ಘಟನೆ ನಡೆದಿದೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಶನಿವಾರ ಬೆಳಗ್ಗೆಯಿಂದ ಅಮಿತ್ ಶಾ ಅವರ ಬರುವಿಕೆಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ಆದರೆ ಅಮಿತ್ ಶಾ (Amit Shah) ರೋಡ್ ಶೋವನ್ನು ಅರ್ಧಕ್ಕೆ ಮೊಟಕು ಗೊಳಿಸಿ ದಿಢೀರ್ ಎಂದು ತೆರಳಿರುವುದು ಬಿಜೆಪಿ (BJP) ಕಾರ್ಯಕರ್ತರಲ್ಲಿ ನಿರಾಶೆ ಉಂಟಾಗಿದೆ. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಅವರ ಪರವಾಗಿ ಚುನಾವಣಾ ಚಾಣಕ್ಯ ಜಿಲ್ಲೆಗೆ ಬಂದು ಒಂದಷ್ಟು ಕಮಾಲ್ ಮಾಡುತ್ತಾರೆ. ಈ ಬಾರಿಯು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾದಿದ್ದರು. ಅಲ್ಲದೇ ತಮ್ಮ ಕ್ಷೇತ್ರಗಳ ಅಭ್ಯರ್ಥಿ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಾರೆ ಎಂಬ ನೀರಿಕ್ಷೆ ಮಾಡಿದ್ದ ಕಾರ್ಯಕರ್ತರಿಗೆ ಅರ್ಧಕ್ಕೆ ರೋಡ್…
ಕಲಘಟಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಪಟ್ಟಣದ ಎಪಿಎಂಸಿ ಯಿಂದ ಆರಂಭವಾದ ರೋಡ್ ಶೋ ಬಮ್ಮಿಗಟ್ಟಿ ಕ್ರಾಸ್, ಆಂಜೆನೇಯ ವೃತ್ತ ಮೂಲಕ ಹುಬ್ಬಳ್ಳಿ ಕಾರವಾರ ರಾಷ್ಟ್ರಿಯ ಹೆದ್ದಾರಿಯಲ್ಲಿ ಸಾಗಿ ಯುವ ಶಕ್ತಿ ಸರ್ಕಲ್ ಅಂತ್ಯಗೊಂಡಿತು. Video Player 00:00 00:40 ರೋಡ್ ಶೋ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಬಿಜೆಪಿ ದ್ವಜ ಪ್ರದರ್ಶಿಸಿ ಜೈ ಮೋದಿ, ಜೈ ಬಿಜೆಪಿ ಎಂಬ ಜಯ ಘೋಷಣೆಗಳು ಮೊಳಗಿದವು. ನಂತರ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಜನರ ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲ್ಲೂಕ ಅಧ್ಯಕ್ಷ ಬಸವರಾಜ ಶೇರೆವಾಡ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.
ಬೀದರ್: ದೇಶದಲ್ಲೇ ಕರ್ನಾಟಕ ನಂಬರ್ 1 ಆಗಲು ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಘೋಷಿಸುವ ಮೂಲಕ ಮೋದಿ ಗಮನ ಸೆಳೆದರು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಮಾತನಾಡಿದರು. “ಜಗದ್ಗುರು ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಮೋದಿ ಭಾಷಣ ಆರಂಭಿಸಿದರು. ಬಸವೇಶ್ವರ ಅವರ ಆಶೀರ್ವಾದ ನಿಮ್ಮ ಕೆಲಸ ಮಾಡಲು ಶಕ್ತಿ ಕೊಡುತ್ತದೆ. ಕರ್ನಾಟಕದ ಕೀರಿಟ ಬೀದರ್‌ನಲ್ಲಿ ಮೊದಲ ಬಾರಿ ಪ್ರಧಾನಿಯಾದ ವೇಳೆ ಆಶೀರ್ವಾದ ಸಿಕ್ಕಿತ್ತು. ಅಂದಿನಿಂದ ಸಂಬಂಧ ಮುಂದುವರಿದಿದೆ. ದೊಡ್ಡ ಸಂಖ್ಯೆಯಲ್ಲಿ ಬಂದು ದೇಶಕ್ಕೆ ನೀವು ಸಂದೇಶ ನೀಡುತ್ತಿದ್ದೀರಾ. ಕರ್ನಾಟಕದಲ್ಲಿ ಬಹುಮತ ಬಿಜೆಪಿ ಸರ್ಕಾರದ ಬರಲಿದೆ ಎಂದು ಸಂದೇಶ ನೀಡಿದ್ದೀರಾ. ಇದು ಸರ್ಕಾರ ಮಾಡುವ ಚುನಾವಣೆ ಮಾತ್ರವಲ್ಲ. ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ. ಭಾರತದ…
ಕಂಪ್ಲಿ (ಬಳ್ಳಾರಿ): ಕಂಪ್ಲಿ ನಗರದಲ್ಲಿ ಸ್ನಾತಕೋತ್ತರ ಪದವಿ ಕಾಲೇಜ್ ತೆರೆಯುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಂಪ್ಲಿ ತಾಲೂಕು ಘಟಕದ ವತಿಯಿಂದ ಕಂಪ್ಲಿ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರರಾದ ರಮೇಶ್ ರವರ ಮುಖಾಂತರ ವಿ ಎಸ್ ಕೆ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು, ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷರಾದ ಸೈಯ್ಯದ್ ವಾರೀಶ್ ಎನ್ ರವರು ಜಿಲ್ಲೆಯ ಕಂಪ್ಲಿ ನಗರದಲ್ಲಿ ಸರ್ಕಾರಿ ಪದವಿ ಕಾಲೇಜ್ ಹಾಗೂ ಖಾಸಗಿ ಪದವಿ ಕಾಲೇಜ್‌ಗಳಿದ್ದು ಪ್ರತಿ ವರ್ಷ ಕಂಪ್ಲಿ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಿಂದ ಸುಮಾರು ವರ್ಷಕ್ಕೆ 150 ರಿಂದ 200 ಜನ ವಿಧ್ಯಾರ್ಥಿಗಳು ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ಸ್ನಾತಕೋತ್ತರ ಪದವಿ ಎಂಎ, ಎಂ.ಕಾಂ ವಿದ್ಯಾಭ್ಯಾಸಕ್ಕಾಗಿ ಕಂಪ್ಲಿ ನಗರದಿಂದ ದೂರದ ಬಳ್ಳಾರಿ ಮತ್ತು ಕೊಪ್ಪಳ, ಗಂಗಾವತಿಗೆ ತೆರಳಬೇಕಾಗಿರುತ್ತದೆ. ಅಲ್ಲದೆ ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳು ದೂರದ ಬಳ್ಳಾರಿ, ಕೊಪ್ಪಳ, ಗಂಗಾವತಿಗೆ ವಿದ್ಯಾಭ್ಯಾಸಕ್ಕೆ ತೆರಳಲು ಕಂಪ್ಲಿ ತಾಲೂಕಿನಲ್ಲಿನ ತಮ್ಮ ಸ್ವಗ್ರಾಮಗಳಿಂದ ಕಂಪ್ಲಿ ನಗರಕ್ಕೆ ಪ್ರಯಾಣಿಸಿ ನಂತರ…
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೇ ಇದೀಗ ಅವರನ್ನು ಬೆಂಬಲಿಸಿರುವ 27 ಮುಖಂಡರನ್ನು ಪಕ್ಷ ಉಚ್ಛಾಟಿಸಿದೆ. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕೆಲವರನ್ನೂ ಉಚ್ಛಾಟಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರನ್ನು ಬೆಂಬಲಿಸದ ಕಾರಣ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ (ಉಚ್ಚಾಟನೆಗೂ ಮೊದಲೇ ರಾಜೀನಾಮೆ ಕೊಟ್ಟಿದ್ದರು), ಪಾಲಿಕೆಯ ಮಾಜಿ ಸದಸ್ಯ ಮಹೇಶ ಬುರ್ಲಿ, ಶಂಕರ ಸುಂಕದ, ಮಂಜು ದಲಭಂಜನ, ವಿರೂಪಾಕ್ಷಿ ರಾಯನಗೌಡ ಸೇರಿದಂತೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಸೇರಿ 27 ಜನರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧಿಕಾರಕ್ಕೆ ಬಂದಾಗ 2 ವರ್ಷ 10 ಕೆಜಿ ಅಕ್ಕಿ ಕೊಟ್ಟರು, 13 ಲಕ್ಷ ಮನೆಗಳನ್ನ ಕರ್ನಾಟಕಕ್ಕೆ ಮಂಜೂರು ಮಾಡಿದರು. 3 ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಮೂಲಕ 54 ಲಕ್ಷ ರೈತರಿಗೆ ನೆರವು ನೀಡುವಂತೆ ಮಾಡಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮೋದಿ ಸಾಧನೆಯನ್ನ ಹಾಡಿಹೊಗಳಿದರು. ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರ ಬೀದರ್ ಜಿಲ್ಲೆಯ ಭಾಗಕ್ಕೆ ಜವಳಿ ಕಾರ್ಖಾನೆ ಸೇರಿದಂತೆ ಹಲವು ಯೋಜನೆಗಳ ಕೊಡುಗೆ ನೀಡಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (DK Shivakumar) ಲಿಂಗಾಯತ ಮುಖ್ಯಮಂತ್ರಿಗಳನ್ನ ಭ್ರಷ್ಟರು ಎನ್ನುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಮೋದಿ ಅವರ ಬಗ್ಗೆ ಖರ್ಗೆ ಅವರು ಕೇವಲವಾಗಿ ಮಾತನಾಡಿದ್ದಾರೆ.…
ಹುಮನಾಬಾದ್ (ಬೀದರ್): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕರ್ನಾಟಕಕ್ಕೆ ಭೇಟಿ ನೀಡಿದಾಗೆಲ್ಲ ಮಾಡುವಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಹುಮನಾಬಾದ್ ಚಿನಕೇರಾ ಕ್ರಾಸ್ (Chinkera Cross) ಬಳಿ ನಡೆದ ಬೃಹತ್ ಸಮಾವೇಶದಲ್ಲಿ ಮಾತಾಡಿದ ಪ್ರಧಾನಿ ಮೋದಿ, ಜಗದ್ಗುರು ಬಸವೇಶ್ವರ (Jagadguru Basaveshwara), ಶಿವಶರಣ ಮತ್ತು ಶರಣೆಯರ ನಾಡಿಗೆ ನನ್ನ ನಮಸ್ಕಾರಗಳು ಅಂತ ಹೇಳುತ್ತಾ ಮಾತು ಶುರು ಮಾಡಿದರು. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಬೀದರ್ ಜಿಲ್ಲೆಯಿಂದ ಪ್ರಾರಂಭಿಸುವ ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಭಗವಾನ್ ಬಸವೇಶ್ವರರ ಆಶೀರ್ವಾದ ಮತ್ತು ಜನ ತೋರುವ ಪ್ರೀತಿಯಿಂದ ಜನರಿಗಾಗಿ ಕೆಲಸ ಮಾಡಲು ತನಗೆ ಶಕ್ತಿ ಸಿಗುತ್ತದೆ ಎಂದು ಪ್ರಧಾನಿ ಹೇಳಿದರು
ಬೆಳಗಾವಿಯಲ್ಲಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ಪ್ರಚಾರ, ರೋಡ್ ಶೋ, ಸಭೆಗಳನ್ನು ನಡೆಸುತ್ತಿದ್ದಾರೆ. ಇಂದು ಬೆಳಗಾವಿಗೆ ಆಗಮಿಸುವ ಹಿನ್ನೆಲೆ ವಿಶೇಷ ಉಡುಗೊರೆ ಸಿದ್ದವಾಗಿದೆ. ಇಂದು ಪ್ರಧಾನಿ ಮೋದಿ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರಿಗೆ ವಿಭಿನ್ನ ಗಿಫ್ಟ್ ನೀಡಲು ಸ್ಥಳೀಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕುಡಚಿ ಭಾಗದಲ್ಲಿ ಬೆಲ್ಲ ಹೆಚ್ಚು ಉತ್ಪಾದನೆ ಹಿನ್ನೆಲೆ ರಾಯಬಾಗ ಮೂಲದ ಬಾಬುರಾವ್ ನಿಡೋಣಿ ಅವರು ಬೆಲ್ಲದಲ್ಲೇ ಸಿದ್ದಪಡಿಸಿರುವ ಪ್ರಧಾನಿ ಮೋದಿಯವರ ಭಾವಚಿತ್ರ ಬಿಡಿಸಿರುವುದನ್ನ ಕಾಣಿಕೆಯಾಗಿ ನೀಡಲು ಸಿದ್ಧತೆ ನಡೆದಿದೆ. Ballot Paper Voting: ಮೈಸೂರಲ್ಲಿ ಇಂದಿನಿಂದ ಹಿರಿಯ ನಾಗರಿಕರಿಗೆ ಬ್ಯಾಲೆಟ್ ಪೇಪರ್ ವೋಟಿಂಗ್ ಮತ್ತು ಪ್ರಧಾನಿ ಮೋದಿ ಜಾರಿಗೆ ತಂದ ರಾಷ್ಟ್ರೀಯ ಯೋಜನೆಗಳನ್ನ ಒಳಗೊಂಡ ಪೇಂಟಿಂಗ್ ಕಾಣಿಕೆ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದ ಮೋದಿಯವರಿಗೆ ಬಸವಣ್ಣನವರ ಫೋಟೋ…
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನರೇಂದ್ರ ಮೋದಿ ರೋಡ್ ಶೋಗೆ ಆಗಮಿಸಲಿದ್ದಾರೆ ಎಂದು ರಸ್ತೆಯನ್ನು ಬಂದ್ ಮಾಡಲಾಗಿದ್ದು, ತಾಳಿ ಕಟ್ಟಲು ಹೋಗುತ್ತಿದ್ದ ಮದುಮಗನ್ನು ಕಲ್ಯಾಣ ಮಂಟಪಕ್ಕೆ ಹೋಗಲು ಬಿಡದೇ ಪೊಲೀಸರು ಅಡ್ಡಗಟ್ಟಿದ ಘಟನೆ ಶನಿವಾರ ನಡೆದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ರಸ್ತೆಯಲ್ಲಿ ಬಹಿರಂಗ ಪ್ರಚಾರ (Road Show) ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಂಚಾರ ಮಾಡುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಆದರೆ, ಈ ರಸ್ತೆಯಲ್ಲಿ ಹೋಗುತ್ತಿದ್ದ ಮದುಮಗ ಸರ್ ತನ್ನ ಮದುವೆಯಿದ್ದು, ಚೌಟ್ರಿ ಹೋಗಬೇಕು ಬ್ಯಾರಿಕೇಡ್ ತೆರೆದು ನನ್ನನ್ನು ಹೋಗಲು ಬಿಡಿ ಎಂದರೂ ಬಿಡದೇ ಮದುಮಗನನ್ನು ಅಡ್ಡಗಟ್ಟಿದ ಪೊಲೀಸರು ಆತನನ್ನು ಸತಾಯಿಸುತ್ತಿರುವುದು ಕಂಡುಬಂದಿದೆ. ರಿಷಪ್ಷನ್‌ಗೆ ತಡವಾಗಿದೆ ಎಂದರೂ ಬಿಡದ ಪೊಲೀಸರು: ಇನ್ನು ಈ ಘಟನೆ ನಡೆದಿರುವುದು ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಚೌಟ್ರಿಯ ಬಳಿ ನಡೆದಿದೆ. ಇಂದು ಮತ್ತು ನಾಳೆ ಮದುವೆ ಕಾರ್ಯಕ್ರಮಗಳನ್ನು…