ಮೈಸೂರು: ಈಗಾಗಲೇ 12ಡಿ ಅಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಏ.29ರಿಂದ ಮೇ 6ರವರೆಗೆ ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು. ಮೈಸೂರು ವಿಶ್ವ ವಿದ್ಯಾಲಯದ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ಸೆಕ್ಟರ್ ಅಧಿಕಾರಿಗಳು ಹಾಗೂ ಮತದಾನ ಪ್ರಕ್ರಿಯೆಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ”ಈಗಾಗಲೇ 12ಡಿ ಅಡಿ ಅರ್ಜಿ ಸಲ್ಲಿಸಿರುವವರ ಮನೆ ಮನೆಗೆ ತೆರಳಿ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸುವರು. ಈ ಸಂದರ್ಭದಲ್ಲಿಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಆರ್.ಒ.ಗಳು ರೂಟ್ ಮ್ಯಾಪ್ ಹಾಗೂ ನಿಗದಿತ ಸಮಯ ಹಾಗೂ ದಿನಾಂಕವನ್ನು ನೀಡುವರು ಅ ಸಮಯದಲ್ಲಿ ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‌ನಲ್ಲಿಪಡೆಯಬೇಕು” ಎಂದು ತಿಳಿಸಿದರು. ”ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯಲ್ಲಿತೊಡಗಿರುವ ಅಧಿಕಾರಿಗಳಿಗೆ ರೂಟ್ ಮ್ಯಾಪ್…
Author: Prajatv Kannada
ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ(Shivamogga Central Jail) ಕೊಲೆ ಕೇಸ್ ಕುರಿತು ವಿಚಾರಣೆ ಎದುರಿಸುತ್ತಿದ್ದ ಕರುಣಾಕರ ದೇವಾಡಿಗ (23) ಎಂಬ ವ್ಯಕ್ತಿಯು ಜೈಲಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಸೆಂಟ್ರಲ್ ಜೈಲಿನಲ್ಲಿ ಎಲ್ಲವೂ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮೊನ್ನೆಯಷ್ಟೇ ಓರ್ವ ವಿಚಾರಣಾಧೀನ ಖೈದಿ ಮೇಲೆ ಹಲ್ಲೆ ನಡೆದಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಇದರ ಬೆನ್ನಲ್ಲೆ ಇದೀಗ ಸೆಂಟ್ರಲ್ ಜೈಲ್ನಲ್ಲಿ ಖೈದಿಯು ನೇಣಿಗೆ ಶರಣಾಗಿದ್ದು ಮಾತ್ರ ಅಚ್ಚರಿ ಮೂಡಿಸಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಭದ್ರಾವತಿ ನಗರದ ದೇವಸ್ಥಾನದ ಬಳಿ ಅನಾಥ ಅಜ್ಜಿಯ ಬಳಿ ಇದ್ದ ಹಣ ದೋಚಿ, ಬಳಿಕ ಅಜ್ಜಿಯನ್ನು ಮರ್ಡರ್ ಮಾಡಿ ಕರುಣಾಕರ್ ಎಸ್ಕೇಪ್ ಆಗಿದ್ದನು. ಬಳಿಕ ಇತನನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಯಶಸ್ವಿಯಾಗಿದ್ದರು. ಕೊಲೆ ಪ್ರಕರಣ ಎದುರಿಸುತ್ತಿದ್ದ ಕರುಣಾಕರ್ ಈಗಾಗಲೇ ಲವ್ ಮಾಡಿ ಮದುವೆಯಾಗಿದ್ದು, ಬಳಿಕ ಚಿಕ್ಕಮಗಳೂರಿನ ತರಿಕೇರಿಯಲ್ಲಿ ಸಪ್ಲೈಯರ್ ಕೆಲಸ ಮಾಡಿಕೊಂಡಿದ್ದನು. ಇಂತಹ ವ್ಯಕ್ತಿಯು ಕೊಲೆ ಕೇಸ್ ನಲ್ಲಿ ಅಂದರ್ ಆಗಿ ಇದೀಗ ಜೀವವನ್ನೇ…
ಬೀದರ್: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿದ್ದಾರೆ ರಾಜ್ಯ ಪ್ರವಾಸದ ವೇಳಾಪಟ್ಟಿ ಪ್ರಕಾರ ವಿಜಯಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರಿಗೆ ವಿಶೇಷ ಉಡುಗೊರೆ ನೀಡಲು ಜಿಲ್ಲಾ ಬಿಜೆಪಿ ಮುಖಂಡರು ಸಿದ್ದತೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಮತ್ತು ಅವರು ಬರೆದಿದ್ದ “ಅಂತಿಮ ಅಭಿವಂದನ ಪತ್ರ” ವಿಲ್ ಪ್ರತಿಯನ್ನು ನೀಡಲಿದ್ದಾರೆ. ಈ ಹಿಂದೆ ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಿದ್ದೇಶ್ವರ ಶ್ರೀಗಳು ಪ್ರಶಂಸನೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಲ್ ಪ್ರತಿ ಭಾವಚಿತ್ರ ನೀಡಲಾಗುತ್ತಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಬೀದರ್: ಬಸವನಾಡಿನಿಂದಲೇ ಪ್ರಧಾನಿ ಮೋದಿ (Narendra Modi) ರಾಜ್ಯದ ಸಾರ್ವತ್ರಿಕ ಚುನಾವಣೆಯ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಹಂತವಾಗಿ ಬಸವಣ್ಣನ ಕರ್ಮಭೂಮಿ ಬೀದರ್‌ನಿಂದ ಚುನಾವಣೆಗೆ ಮೋದಿ ಕೇಸರಿ ರಣ ಕಹಳೆ ಮೊಳಗಿಸಲಿದ್ದಾರೆ. ಕಲ್ಯಾಣದ ಅನುಭವ ಮಂಟಪವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಲಿಂಗಾಯತರ ಒಲೈಕೆ ಹಾಗೂ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿರುವ ಮೋದಿ ಶತಾಯಗತಾಯ 25+ ಸೀಟು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್‌ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. 10:20ಕ್ಕೆ ಬೀದರ್ ಏರಬೇಸ್‌ಗೆ ಆಗಮಿಸಲಿದ್ದಾರೆ. 10:25ಕ್ಕೆ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ಬೆಳಗ್ಗೆ 11ಕ್ಕೆ ಬೃಹತ್ ಬಹಿರಂಗ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಮ್ನಾಬಾದ್‌ನಿಂದ ವಿಜಯಪುರಕ್ಕೆ ತೆರಳಲಿದ್ದಾರೆ. ವಿಜಯಪುರ ನಗರದ ಸೈನಿಕ್ ಶಾಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿ ಆಗಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8 ಮತಕ್ಷೇತ್ರಗಳಿದ್ದು, ಅದರಲ್ಲಿ ಬಹುತೇಕ ಧರ್ಮ ಆಧಾರಿತ ಚುನಾವಣೆ ನಡೆಯಲಿದೆ. ಅದೇ ಕಾರಣಕ್ಕೆ…
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ( Union Home Minister Amit Shah ) ಅವರು ಏಪ್ರಿಲ್ 29ರ ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಟೌನ್, ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಕಟಪಾಡಿ ಟೌನ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ 10,000 ಕ್ಕೂ ಹೆಚ್ಚು ಜನರು ಮತ್ತು ದಕ್ಷಿಣ ಕನ್ನಡದಲ್ಲಿ ಇನ್ನೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿ ಸರಣಿ ರೋಡ್ ಶೋಗಳನ್ನು ಆಯೋಜಿಸಲಾಗಿದೆ. ಏ.29ರ ಇಂದು ಉಡುಪಿಗೆ ಆಗಮಿಸಲಿರುವ ಅಮಿತ್ ಶಾ, ಕಾಪು ಕ್ಷೇತ್ರದ ಕಟಪಾಡಿಗೆ ತೆರಳಿ, ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಪಟ್ಟಣಕ್ಕೆ ರೋಡ್ ಶೋ ನಡೆಸುವ ಮುನ್ನ ಅಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ರಿಂದ 7 ರವರೆಗೆ ರೋಡ್…
ಬಾಗಲಕೋಟೆ: ನಾವು ನಿಮ್ಮನ್ನು ಕಳೆದುಕೊಳ್ಳುವುದಿಲ್ಲ, ಭ್ರಷ್ಟಾಚಾರ ಮುಕ್ತ ಮಾಡುವ ಪಕ್ಷ ಅದು ಆಮ್ ಆದ್ಮಿ ಪಕ್ಷ. ತೇರದಾಳ ಮತಕ್ಷೇತ್ರದ ಮತದಾರರು ಪ್ರಭುದ್ಧರಿದ್ದಾರೆ. ಈ ಬಾರಿ ನಮ್ಮನ್ನು ಗೆಲ್ಲಿಸುತ್ತಾರೆಂದು ಆತ್ಮವಿಶ್ವಾಸ ನಮಗಿದೆ ಎಂದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ಆಮ್ ಆದ್ಮಿ ಪಕ್ಷದಿಂದ ಭರ್ಜರಿ ರೋಡ್ ಶೋ ಮತ್ತು ಮತಯಾಚನೆ ಕಾರ್ಯಕ್ರಮ ನಡೆಯಿತು. ದಿನದಿಂದ ದಿನಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ ಮತ್ತು ಬಿಜೆಪಿ ದುರಾಡಳಿತ ಕಂಡು ಸ್ವಯಂ ಪ್ರೇರಿತ ವಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಈ ಬಾರಿ ನನ್ನ ಗೆಲವು ಶತಸಿದ್ಧ ಎಂದು ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಹೇಳಿದರು.ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಗಿರೀಶ ಮಾಲಾಪುರ. ಸಿದ್ದಪ್ಪಣ್ಣ ಮೇಟಿ. ಶಂಕರ ಹುಕ್ಕೇರಿ. ಮಹಾಂತೇಶ ಹಲಸಪ್ಪಗೋಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಕಾಶ ಕುಂಬಾರ ಬಾಗಲಕೋಟೆ
ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರ್ ಪಾಟೀಲ ಮುನೇನಕೊಪ ಪರ ಕೇಂದ್ರ ಸಚಿವ ಅಮಿತ್ ಷಾ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಯಸ್ಸಾದ ಬಿಜೆಪಿ ಕಾರ್ಯಕರ್ತೆಯೊಬ್ಬರು ಚಿತ್ರಗೀತೆಗೆ ಸಕತ್ತಾಗಿ ಸ್ಟೆಪ್ಸ್ ಹಾಕಿರುವ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. Video Player 00:00 00:36 ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ಇವರು ಕಾರ್ಯಕ್ರಮದ ಮಧ್ಯಮಧ್ಯಕ್ಕೂ ನವಲಗುಂದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಜಯವಾಗಲಿ ಎಂಬ ಜಯ ಘೋಷಗಳು ಅಜ್ಜಿಯ ಧ್ವನಿಯಿಂದ ಕೇಳಿ ಬಂದವು. ಒಟ್ಟಾರೆಯಾಗಿ ಅಜ್ಜಿ ಹಾಕಿದ ಸ್ಟೆಪ್ ಗೆ ನೂರಾರು ಕಾರ್ಯಕರ್ತರು ಸಿಳ್ಳೆ ಹೊಡೆದು ಹುರಿದುಂಬಿಸಿದರು.
ಹುಬ್ಬಳ್ಳಿ: ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಪಕ್ಷವನ್ನು ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಶೆಟ್ಟರ್‌ನ 27 ಬೆಂಬಲಿಗರನ್ನು (Jagadish Shettar Supporters) ಬಿಜೆಪಿ 6 ವರ್ಷಗಳ ಕಾಲ ಉಚ್ಚಾಟಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಜಗದೀಶ್ ಶೆಟ್ಟರ್ ಅವರ 27 ಬೆಂಬಲಿಗರಿಗೆ ಬಿಜೆಪಿ ಗೇಟ್ ಪಾಸ್ ನೀಡಿದೆ. ಬಿಜೆಪಿ ಶಿಸ್ತು ಸಮಿತಿ ಆದೇಶದ ಮೇರೆಗೆ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಚೌಹಾಣ್ 27 ಜನರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ (Expel) ಮಾಡಿ ಆದೇಶ ಹೊರಡಿಸಿದ್ದಾರೆ. ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಮಲ್ಲಿಕಾರ್ಜುನ್ ಸಾಹುಕಾರ, ವಿರುಪಾಕ್ಷ ರಾಯನಗೌಡರ್, ವಿಜಯಲಕ್ಷ್ಮಿ ತಿಮ್ಮೋಲೆ, ಭಾರತಿ ಟಪಾಲ್, ಇಮ್ತಿಯಾಜ್ ಮುಲ್ಲಾ ಸೇರಿದಂತೆ 27 ಜನರು ಬಿಜೆಪಿಯಿಂದ ಉಚ್ಚಾಟಿತರಾಗಿದ್ದಾರೆ.
ಶಿವಮೊಗ್ಗ: ತನ್ನ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ ಊರಿಗೆ ತೆರಳುವಾಗ ಲಾಡ್ಜ್ (Lodge) ಮಾಡಿದ್ದು, ಪತಿ ಬಾತ್ ರೂಮಿಗೆ ಹೋದ ವೇಳೆ ರೂಮ್(Room) ಗೆ ಲಾಕ್ ಹಾಕಿಕೊಂಡು ಪತ್ನಿ ಎಸ್ಕೇಪ್ ಆಗಿದ್ದಾಳೆ. ಇದೀಗ ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇಂಥದೊಂದು ವಿಲಕ್ಷಣ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಹಾವೇರಿ ಜಿಲ್ಲೆಯ ಶ್ರೀಕಾಂತ್ (SRIKANTH)ಎಂಬಾತ ತನ್ನ ಪತ್ನಿ ತೇಜಸ್ವಿನಿ ಜೊತೆ ಲಕ್ಕವಳ್ಳಿಯಲ್ಲಿನ ಮಾವನ ಮನೆಗೆ ಬಂದಿದ್ದರು. ವಾಪಸ್ ಊರಿಗೆ ಹೋಗುವಾಗ ಪತ್ನಿ ಶಿವಮೊಗ್ಗದ ಲಾಡ್ಜ್ ನಲ್ಲಿ ರೂಮ್ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಮಣಿದ ಶ್ರೀಕಾಂತ್ ರೂಮ್ ಮಾಡಿದ್ದಾರೆ. ಸಂಜೆ ಶ್ರೀಕಾಂತ್ ಬಾತ್ರೂಮಿಗೆ ಹೋದಾಗ ಆತನ ಪತ್ನಿ ತೇಜಸ್ವಿನಿ ಮೊಬೈಲ್ ಫೋನ್, ಪರ್ಸ್, ಬ್ಯಾಗ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ. ಜೊತೆಗೆ ಹೋಗುವ ಮುನ್ನ ರೂಮಿಗೆ ಹೊರಗಿನಿಂದ ಲಾಕ್ ಮಾಡಿದ್ದಾರೆ. ರೂಮ್ ಬಾಯ್ ಸಹಾಯದಿಂದ ಬಾಗಿಲು ತೆಗೆಸಿ ಹೊರಬಂದ ಶ್ರೀಕಾಂತ್, ಇದೀಗ ಪತ್ನಿಯನ್ನು ಹುಡುಕಿ ಕೊಡುವಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿ: ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತರ ಮಾಡಿದರು ಎಂದು ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್(Jagdish Shetter) ಹೇಳಿದರು. ಲಿಂಗಾಯತ ನಾಯಕತ್ವವಿಲ್ಲದೆ ಸರ್ಕಾರ ರಚಿಸಿದ್ದನ್ನು ತೋರಿಸಬೇಕಿತ್ತು. ಆ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದ ಜಗದೀಶ್ ಶೆಟ್ಟರ್, (Jagdish Shetter)ಶೆಟ್ಟರ್ ನಾಯಕತ್ವ ಕ್ಲೋಸ್ ಮಾಡಲು ಷಡ್ಯಂತ್ರ ನಡೆಯುತ್ತಿತ್ತು. ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತಾ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಬಿ.ಎಲ್.ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ಇದೆಲ್ಲ ಆಗುತ್ತಿದೆ. ಇಡೀ ದೇಶದಲ್ಲಿ ಬಿ.ಎಲ್.ಸಂತೋಷ್ ವಿರುದ್ಧ ಮಾತಾಡಿದ್ದು ನಾನೇ, ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ಗೂ ಆಗಿದೆ. ತೇಜಸ್ವಿನಿಗೂ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವ ಮುಗಿಸುವ ಉದ್ದೇಶವಿತ್ತು ಎಂದರು.