ಬಾಗಲಕೋಟೆ: ನೇಕಾರ ಕ್ಷೇತ್ರಕ್ಕೆ ಸುಮಾರು ನೂರಾರು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿದ್ದು ಯಾರಾದರೂ ಇದ್ದರೆ ಅದು ಮಾಜಿ ಸಚಿವೆ ಉಮಾಶ್ರೀ ಮಾತ್ರ.ತೇರದಾಳ ಮತಕ್ಷೇತ್ರದ ಮಾಜಿ ಸಚಿವೆ ಉಮಾಶ್ರೀ ಯವರ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಅದು ಸತ್ಯಕ್ಕೆ ದೂರವಾದ್ದದು ಎಂದು ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ. ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ. ದಾಖಲೆ ಸಮೇತ ಬಿಡುಗಡೆಗೊಳ್ಳಿಸಿ ಮಾತನಾಡಿ ತೇರದಾಳ ಮತಕ್ಷೇತ್ರದ ಶಾಸಕರು ಹಾಗೂ ಸಚಿವೆಯಾಗಿದ ಉಮಾಶ್ರೀ ಯವರು ನೇಕಾರ ಕ್ಷೇತ್ರಕ್ಕೆ ನೂರಾರು ಯೋಜನೆಗಳನ್ನು ತಂದಿದ್ದಾರೆ. 1.25 ವಿದ್ಯುತ್ ಸಬ್ಸಿಡಿ. ಬನಹಟ್ಟಿ ನೂಲಿನ ಗಿರಣಿಗೆ 2015 ರಲ್ಲಿ 3.45 ಕೋಟಿ ರೂ.ಉಳಿದಿರುವ ಬಾಕಿ ಮೊತ್ತ ಬಿಡುಗಡೆ. ನೇಕಾರರಿಗೆ ಸಾಲ ಮತ್ತು ಬಡ್ಡಿ ಮನ್ನಾದ ಉಳಿದಿರುವ ಮೊತ್ತ ಹೀಗೇ ಅನೇಕ ಯೋಜನೆಗಳನ್ನು ತಂದಿದ್ದಾರೆ. ಅವರ ಮೇಲೆ ಇಲ್ಲದ -ಸಲ್ಲದ ಆರೋಪ ಮಾಡುವದು ಸರಿಯಲ್ಲ ಸುಳ್ಳು ಆರೋಪ ಮಾಡುವವರ ವಿರುದ್ಧ ಮುಂದಿನ…
Author: Prajatv Kannada
ಕುಂದಗೋಳ : ಬುದ್ಧ, ಬಸವ, ಗಾಂಧಿ ಜೊತೆಗೆ ‘ಮಹಾವೀರರ’ ಹೆಸರೂ ಕೇಳಿಬರುವಂತಾಗಲಿ ಎಂದು ದಿಗಂಬರ ಜೈನ ಸಮಾಜದ ಯುವ ಮುಖಂಡ ಬಸವರಾಜ ಯೋಗಪ್ಪನವರ ಆಶಯ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಆವರಣದಲ್ಲಿ ನಡೆದ ಮಹಾವೀರ ಜಯಂತಿಯಲ್ಲಿ ಅವರು ಪಾಲ್ಗೊಂಡು ಮಾತನಾಡಿ ಪ್ರಥಮವಾಗಿ ಅಹಿಂಸೆ ಬಗ್ಗೆ ಪ್ರತಿಪಾದಿಸಿದವರು ಮಹಾವೀರರು, ಇಂದು ಅವರನ್ನು ಎಲ್ಲರೂ ಮರೆತು ಮಾತನಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುತ್ತ ‘ಮಹಾವೀರ ಜಯಂತಿ’ಯನ್ನು ರಾಜ್ಯದ್ಯಂತ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಾಗಬೇಕು, ಆದರೆ ಬೆರಳೆಣಿಕೆಯಷ್ಟು ಕಚೇರಿಯಲ್ಲಿ ಮಾತ್ರ ಈ ಜಯಂತಿ ಆಚರಿಸಲಾಗುತ್ತಿದೆ. ಇದಕ್ಕೆ ಸರ್ಕಾರವೇ ಆದೇಶ ನೀಡಿ ಜಯಂತಿ ಆಚರಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನರಸಪ್ಪನವರ, ಸೌದಾಗಾರ, ಕಚುಸಾಪ ತಾಲ್ಲೂಕು ಅಧ್ಯಕ್ಷ ವೈ. ಡಿ. ಹೊಸೂರ, ಬಾಹುಬಲಿ ನಾಗರಳ್ಳಿ ಹಾಗೂ ಜೈನ ಸಮಾಜ ಬಾಂಧವರು ಇದ್ದರು.
ಬಾಗಲಕೋಟೆ: 2008. 2013. ಹಾಗೂ 2019 2023 ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿರುವ ಸಮಸ್ತ ಲಕ್ಷಾಂತರ ನೇಕಾರರಿಗೆ ಸಾಮಾಜಿಕ ನ್ಯಾಯ ಸಿಕ್ಕಿರುವುದು ಸೂರ್ಯ ಚಂದ್ರನಂತೆ ಸತ್ಯ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ತೇರದಾಳ ಮತಕ್ಷೇತ್ರದ ನೇಕಾರರಿಂದ ಸುದ್ದಿ-ಗೋಷ್ಠಿ ನಡೆಯಿತು. ಕಳೆದ 50 ವರ್ಷಗಳಲ್ಲಿ ನೇಕಾರರಿಗೆ ಸಿಗದಿರುವ ಯೋಜನೆಗಳು ಇತ್ತೀಚನ 10 ವರ್ಷಗಳಲ್ಲಿ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರೈತ ಹಾಗೂ ನೇಕಾರರು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದಾರೆ ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ 1970 ರಲ್ಲಿ ಇಂದಿರಾಗಾಂಧಿ ಅವರು ಸ್ಥಾಪಿಸಿದ್ದು ಅವಸಾನದಂಚಿನಲ್ಲಿತ್ತು. ಮಾಜಿ ಸಿಎಂ ಯಡಿಯೂರಪ್ಪ ನಿಗಮಕ್ಕೆ ಆರ್ಥಿಕ ನೆರವು ನೀಡಿ ಅಲ್ಲಿರುವ ಸಾವಿರಾರು ಕೈಮಗ್ಗ ನೇಕಾರರಿಗೆ ಶಾಶ್ವತ ಉದ್ಯೋಗ ಮಾಡಲು ನೆರವಾದರು. ರೈತರಂತೆ ನೈಕಾರರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಸಹಕಾರಿ ಸಂಘಗಳ ಮುಖಾಂತರ ಸಾಲ ದೊರೆಯಲು ಆದೇಶವನ್ನು ಮಾಡಿದರು. ಸಂಕಷ್ಟ…
ಗದಗ : ಪ್ರಜಾಪ್ರಭುತ್ವವು ಜನರಿಂದ ಮತ್ತು ಜನರಿಗಾಗಿ ನಡೆಸುವ ಸರ್ಕಾರವಾಗಿದೆ. ಹಾಗಾಗಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ನಮ್ಮ ಕರ್ತವ್ಯವೂ ಕೂಡಾ ಆಗಿದೆ ಅಂತಾ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ್ ಅಡವಿಮಠ ಹೇಳಿದರು. ಗದಗ ತಾಲೂಕಿನ ಲಕ್ಕುಂಡಿ ಗ್ರಾಪಂ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಜಲ ಸಂಜೀವಿನಿ ತತ್ವದಡಿಯ ಸಮುದಾಯ ಬದು ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಕೇಲವು ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ. ಚುನಾವಣೆ ಯನ್ನು ಅರ್ಥ ಪೂರ್ಣಗೊಳಿಸುವಲ್ಲಿ ಎಚ್ಚರಿಕೆಯ ಮತ್ತು ಜಾಗೃತ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆಡಳಿತ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು ಎಂದರು. ವಿಶ್ವದ…
ಬೆಂಗಳೂರು: ಒಂದು ತಿಂಗಳು ಕಳೆದರೆ ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election 2023) ನಡೆಯುತ್ತೆ. ಪ್ರಮುಖ ಮೂರು ಪಕ್ಷಗಳು ಅಖಾಡಕ್ಕೆ ಸಿದ್ದವಾಗಿವೆ. ಹಾಗೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಬ್ಯುಸಿಯಾಗಿವೆ. ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ (BJP) ಮಹತ್ತರವಾದ ಬೆಳವಣಿಗೆ ನಡೆದಿದೆ. ಚುನಾವಣೆ ಹೊಸ್ತಿಲಿನಲ್ಲಿ ನಟ ಕಿಚ್ಚ ಸುದೀಪ್ (Kichcha Sudeep), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೊಂದಿಗೆ (CM Basavaraj Bommai) ಜಂಟಿ ಸುದ್ದಿಗೋಷ್ಠಿ ನಡೆಸಿ, ನನ್ನ ಬೆಂಬಲ ಸಿಎಂ ಬೊಮ್ಮಾಯಿಯವರಿಗೆ ಎಂದಿದ್ದಾರೆ. ಇದು ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹೀಗಿರುವಾಗ ಸಿಎಂ ಬೊಮ್ಮಾಯಿ ಅವರಿಗೆ ನಟ ಸುದೀಪ್ ಬೆಂಬಲ ಘೋಷಿಸಿದ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress) ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ. “ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ…
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯ ನಡುವೆ ಚುನಾವಣಾ ಅಧಿಕಾರಿಗಳು, ಪೊಲೀಸರು ಮಾತ್ರವಲ್ಲ, ಇದೀಗ ಇಡಿ, ಐಟಿ ಕೂಡ ಎಂಟ್ರಿ ಕೊಟ್ಟಿದೆ. ನಾಳೆಯಿಂದ ಕರ್ನಾಟಕದಲ್ಲಿ ಇಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆಯಷ್ಟೇ (ಏಪ್ರಿಲ್ 4) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಏಪ್ರಿಲ್ 5) ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾಂಗ್ರೆಸ್ ಮುಖಂಡರೊಬ್ಬರ ಮನೆ ಬಾಗಿಲು ತಟ್ಟುವ ಮೂಲಕ ಐಟಿ ಶಾಕ್ (Income Tax Raid) ನೀಡಿದೆ. ಚುನಾವಣೆ ಸಮಯದಲ್ಲೇ ಬೆಂಗಳೂರು ನಗರದ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕಾಂಗ್ರೆಸ್ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು…
ಬೆಂಗಳೂರು: ನಟ ಸುದೀಪ್ (Kichcha Sudeepa) ಅವರು ಸಿಎಂ ಬೊಮ್ಮಾಯಿ (BasavarajBommai) ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಈ ರೀತಿ ಮಾಡಿಯೇ ಚುನಾವಣೆಯಲ್ಲಿ ಮತ ಪಡೆಯೋಕೆ ಮುಂದಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ಶಿಳ್ಳೆ ಹೊಡೆಯುತ್ತಾರೆ. ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ…
ಬೆಂಗಳೂರು: ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಸಿ. ಓಲೇಕಾರ್ಗೆ (MLA Nehru Olekar) ಹೈಕೋರ್ಟ್ ರಿಲೀಫ್ ನೀಡಿದೆ. 2 ವರ್ಷ ಶಿಕ್ಷೆ ವಿಧಿಸಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಅನರ್ಹಗೊಳ್ಳುವ ಭೀತಿಯಿಂದ ನೆಹರು ಓಲೆಕಾರ್ ಪಾರಾಗಿದ್ದಾರೆ. ದೋಷಿಯಾಗಿಸಿದ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾ. ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ನೆಹರು ಓಲೆಕಾರ್ ವಿರುದ್ದ ಶಿಕ್ಷೆ ಪ್ರಕಟವಾಗಿದ್ದಾಗ ಭ್ರಷ್ಟಾಚಾರ ಕೇಸ್ನಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ನೆಹರು ಓಲೆಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮುಖಂಡ ಸಂತೋಷ್ ರೆಡ್ಡಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಇತ್ತೀಚೆಗೆ ದೂರು ನೀಡಲಾಗಿತ್ತು. 2013ರಲ್ಲಿ ಹಾವೇರಿಯ ಶಶಿಧರ್ ಹಳ್ಳಿಕೇರಿ ಅವರು ಈ ಹಿಂದೆ ದೂರು ದಾಖಲಿಸಿ, 2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್ ಅವರು ಸರ್ಕಾರದ ಸಿವಿಲ್ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ…
ಬೆಂಗಳೂರು: ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಿಲ್ಲುತ್ತೇನೆ. ಅವರಿಗೆ ನನ್ನ ಬೆಂಬಲ ಇದೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಹೋಟೆಲ್ ಅಶೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೀತಿಯ ವ್ಯಕ್ತಿಯ ಪರವಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಲು ಬಂದಿದ್ದೇನೆ. ಸಿನಿಮಾಗೆ ಎಂಟ್ರಿ ಕೊಟ್ಟಾಗ ಯಾರೂ ಗಾಡ್ ಫಾದರ್ ಇರಲಿಲ್ಲ. ನಾನು ಸಿನಿಮಾ ಎಂಟ್ರಿ ಕೊಟ್ಟಾಗ ಬೊಮ್ಮಾಯಿ ರಾಜಕೀಯಕ್ಕೆ ಬಂದರು. ಆ ವ್ಯಕ್ತಿ ಪರವಾಗಿ ನಾನು ಬೆಂಬಲ ಕೊಡುತ್ತೇನೆ ಎಂದು ಹೇಳಿದರು. Breaking News: ಬಿಜೆಪಿ ಸೇರ್ಪಡೆ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ? ಇಲ್ಲಿ ರಾಜಕೀಯ ಬರುವುದಿಲ್ಲ, ಕಷ್ಟದ ದಿನಗಳಲ್ಲಿ ನಿಂತ ಕೆಲವರ ಪೈಕಿ ಬಸವರಾಜ ಬೊಮ್ಮಾಯಿ ಅವರು ಒಬ್ಬರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅದಲ್ಲದೇ, ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗಲ್ಲ. ಇಂತವರಿಗೆ ಬೆಂಬಲ ಕೊಡಿ ಎಂದು ಹೇಳಿದರೆ…
ಬೆಂಗಳೂರು : ನಟ ಸುದೀಪ್ ಗೆ ಬೆದರಿಕೆ ಪತ್ರದ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಹತಾಶೆ ಮನೋಭಾವ ಇರುವವರು ಈ ರೀತಿ ಮಾಡುತ್ತಾರೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತಾಶೆ ಮನೋಭಾವ ಇರುವವರ ನಟ ಸುದೀಪ್ ಗೆ ಬೆದರಿಕೆ ಪತ್ರ ಕಳಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದು, ಈಗ ಆರೋಪ ಮಾಡುತ್ತಿದ್ದಾರೆಂದರೆ ಏನರ್ಥ, ಪ್ರಕರಣದ ಬಗ್ಗೆ ಸರ್ಕಾರ ತನಿಖೆ ಮಾಡಲಿದೆ ಎಂದು ತಿಳಿಸಿದ್ದಾರೆ. ನಟ ಸುದೀಪ್ ಅವರು ಬಿಜೆಪಿ ಸೇರ್ಪಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸುಧಾಕರ್, ನಟ ಕಿಚ್ಚ ಸುದೀಪ್ ಪಕ್ಷ ಸೇರ್ಪಡೆ ವಿಚಾರ ಗೊತ್ತಿಲ್ಲ. ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷ ಸೇರ್ಪಡೆಯಾದ್ರೆ ಸ್ವಾಗತ ಮಾಡುತ್ತೇನೆ ಎಂದು ಎಂದು ಪ್ರತಿಕ್ರಿಯೆ ನೀಡಿದ್ದಾರೆ