ಬಿಜೆಪಿ (BJP) ಸೇರುವ ವಿಚಾರವಾಗಿ ಸುದೀಪ್ ((Sudeep) )ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಕೆಲವು ವಿಚಾರಗಳನ್ನು ಸದ್ಯ ಹೇಳುವುದು ಕಷ್ಟ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಗೆ ಆಹ್ವಾನಿಸಿದ್ದಾರೆ. ನಾನು ಹೋಗುತ್ತಿದ್ದೇನೆ. ಅಲ್ಲೇ ಹಲವು ವಿಚಾರಗಳನ್ನು ಮಾತನಾಡುತ್ತೇನೆ’ ಎಂದಿದ್ದಾರೆ ಸುದೀಪ್. ಈ ಸಂದರ್ಭದಲ್ಲಿ ಅವರು ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ಬಿಜೆಪಿ ಜೊತೆಗಿನ ಸಂಬಂಧವನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೇನೆ. ಆದರೆ, ಈ ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ (Election) ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ’ ಎಂದಿದ್ದಾರೆ ಸುದೀಪ್. Video Player 00:00 01:04 ಸುದೀಪ್ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರೈ ‘ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ…
Author: Prajatv Kannada
ಬೆಂಗಳೂರು: ಕನ್ನಡಿಗರ ತೀವ್ರ ವಿರೋಧ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತಾಗಿ ಏಪ್ರಿಲ್ 5ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು,ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಮಾತಿಗೆ ಕಿಮ್ಮತ್ತು ಕೊಟ್ಟಿಲ್ಲ ಎಂದು ಆರೋಪ ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ. ಆವೇಶ, ಬದ್ಧತೆ ತೋರಿಸುವ ಕಾಲ ಬಂದಿದೆ ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೆವು. ಅಲ್ಲಿಯವರೆಗೆ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದ್ದರು. ಆ ಆವೇಶ, ಬದ್ಧತೆಯನ್ನು ತೋರಿಸಬೇಕಾದ ಕಾಲ ಈಗ…
ದೆಹಲಿ: ಸಾಯ್ ಸುದರ್ಶನ್ (Sai Sudharsan) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಡೇವಿಡ್ ಮಿಲ್ಲರ್ (David Miller) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧಗುಜರಾತ್ ಟೈಟಾನ್ಸ್ (Gujarat Titans) 6 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ನಂತರ ಬ್ಯಾಟಿಂಗ್ ಮಾಡಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 18.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಹೊಡೆದು ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು. 54 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಸಾಯ್ ಸುದರ್ಶನ್ ಮತ್ತು ವಿಜಯ್ ಶಂಕರ್ (Vijay Shankar) ತಂಡಕ್ಕೆ ನೆರವಾದರು. ಇಬ್ಬರು 44 ಎಸೆತಗಳಲ್ಲಿ 53 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ವಿಜಯ್ ಶಂಕರ್ 29 ರನ್(23 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಮುರಿಯದ ಐದನೇ ವಿಕೆಟ್‌ಗೆ…
ನಟ ಕಿಚ್ಚ ಸುದೀಪ್ ಈ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಸಿದ್ದವಾಗಿದ್ದಾರೆ. ಆದರೆ ಈ ಮಧ್ಯೆ ಸುದೀಪ್ ಗೆ ಗೆ ಬೆದರಿಕೆ ಪತ್ರ ಬಂದಿದ್ದು, ಇದೀಗ ಈ ಕೇಸ್ ಸಿಸಿಬಿಗೆ ವರ್ಗಾವಣೆ ಆಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದು, ಪತ್ರಬರೆದ ಕಿಡಿಗೇಡಿಯನ್ನು ಹುಡುಕಲಾಗುತ್ತಿದೆ. ಸುದೀಪ್ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದ್ದು, ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ‘ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು’ ಎಂದು ಮಂಜು ದೂರಿದ್ದು, ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ. ಈ ಪ್ರಕರಣ ಈಗ ಸಿಸಿಬಿಗೆ ವರ್ಗಾವಣೆ ಆಗಿದೆ. ಸುದೀಪ್ ಬಿಜೆಪಿ…
ಗೀತರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ ನಿರ್ದೇಶನದ “ಮಾಜರ್” ಚಿತ್ರದ ಹಾಡುಗಳನ್ನು ಸಚಿವ ಕೆ.ಗೋಪಾಲಯ್ಯ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. A2 music ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ “ಮಾಜರ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿದೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ…
ಬೇಸಿಗೆಯ ಬಿರು ಬಿಸಿಲಿನಲ್ಲಿ ದೇಹಕ್ಕೆ ತಂಪು ಬೇಕೆನಿಸುತ್ತೆ. ಅದಕ್ಕಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಹೊರಗಡೆ ಸಿಗುವ ಜ್ಯೂಸ್ ಮಾದರಿಯ ಪಾನೀಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಆರೋಗ್ಯಕರ ಪಾನೀಯವನ್ನು ಮನೆಯಲ್ಲೇ ಮಾಡಿ ಸೇವಿಸುವುದು ಉತ್ತಮ. ಇವತ್ತು ದೇಹಕ್ಕೆ ರಿಫ್ರೆಶ್‌ಮೆಂಟ್ ಕೊಡುವ, ಆರೋಗ್ಯದಾಯಕ ಕೇರಳ ಸ್ಟೈಲ್ ಕುಲುಕ್ಕಿ ಶರ್ಬತ್ (Kulukki Sarbath) ಹೇಗೆ ಮಾಡುವುದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಬೇಕಾಗುವ ಸಾಮಗ್ರಿಗಳು: ಕಾಮಕಸ್ತೂರಿ ಬೀಜ- 1 ಚಮಚ ನಿಂಬೆ ಹಣ್ಣು-3 ಹಸಿಮೆಣಸು-3 ಸಕ್ಕರೆ ಪೌಡರ್-4 ಚಮಚ ಉಪ್ಪು (ಬ್ಲ್ಯಾಕ್ ಸಾಲ್ಟ್)- ಅರ್ಧ ಚಮಚ ಚಾಟ್ ಮಸಾಲ- ಕಾಲು ಚಮಚ ಐಸ್ ಕ್ಯೂಬ್-4 ತಂಪು ನೀರು- ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಮದುವೆಗೆ ಗಿಫ್ಟ್ ಆಗಿ ಬಂತು ಮೃತ್ಯು ಮ್ಯೂಸಿಕ್ ಸಿಸ್ಟಮ್ – ನವವಿವಾಹಿತ ಸೇರಿ ಇಬ್ಬರು ಸಾವು ಬೇಸಿಗೆಯ ಬಿರು ಬಿಸಿಲಿನಲ್ಲಿ ದೇಹಕ್ಕೆ ತಂಪು ಬೇಕೆನಿಸುತ್ತೆ. ಅದಕ್ಕಾಗಿ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಹೊರಗಡೆ ಸಿಗುವ ಜ್ಯೂಸ್…
ಇಸ್ಲಾಮಾಬಾದ್: ತಾಲಿಬಾನ್ ಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಆರು ಮಂದಿ ಐ.ಎಸ್ ಉಗ್ರರು ಮೃತಪಟ್ಟಿರುವ ಘಟನೆ ಅಫ್ಗಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ನಡೆದಿದ್ದು ಘಟನೆಯನ್ನು ತಾಲಿಬಾನ್ ವಕ್ತಾರರು ದೃಡಪಡಿಸಿದ್ದಾರೆ. ನಹ್ರಿ ಶಾಹಿ ಜಿಲ್ಲೆಯಲ್ಲಿ ಐ.ಎಸ್ ಅಡಗುತಾಣ ಗುರಿಯಾಗಿಸಿ ತಾಲಿಬಾನ್ ಸೈನಿಕರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಆರು ಐ.ಎಸ್ ಉಗ್ರರನ್ನು ಕೊಲ್ಲಲಾಯಿತು ಎಂದು ವಕ್ತಾರ ಮೊಹಮ್ಮದ್ ಆಸಿಫ್ ವಾಜಿರಿ ಹೇಳಿದರು. ತಾಲಿಬಾನಿ ಗಸ್ತು ಪಡೆಗಳು ಮತ್ತು ಅಫ್ಗಾನಿಸ್ತಾನದ ಶಿಯಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಐ.ಎಸ್ ಉಗ್ರರು ಇತ್ತೀಚೆಗೆ ದಾಳಿಗಳನ್ನು ಹೆಚ್ಚಿಸಿದ್ದು ಇದರಿಂದ ಈಗಾಗಲೇ ಸಾಕಷ್ಟು ಉಗ್ರರು ಮೃತಪಟ್ಟಿದ್ದಾರೆ.
ಹೆಚ್ಚಿನ ಸಂಖ್ಯೆಯ ಜನರು ತಮ್ಮ ಜೀವಿತಾವಧಿಯಲ್ಲಿ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO ಹೊಸ ವರದಿಯನ್ನು ಬಹಿರಂಗಪಡಿಸಿದೆ. ವಯಸ್ಕ ಜನಸಂಖ್ಯೆಯ ಸುಮಾರು 17.5% – ಪ್ರಪಂಚದಾದ್ಯಂತ ಸುಮಾರು 6 ರಲ್ಲಿ 1 – ಬಂಜೆತನವನ್ನು ಅನುಭವಿಸುತ್ತಾರೆ ಎಂದು ವರದಿ ನೀಡಿದೆ. ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಬಂಜೆತನವು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ನಿಯಮಿತ ಅಸುರಕ್ಷಿತ ಲೈಂಗಿಕ ಸಂಭೋಗದ ನಂತರ ಗರ್ಭಧಾರಣೆಯನ್ನು ಸಾಧಿಸಲು ವಿಫಲವಾಗುವ ಸಂತಾನೋತ್ಪತ್ತಿ ಸ್ಥಿತಿಯಾಗಿದೆ. ಡಬ್ಲ್ಯುಎಚ್‌ಒ 1990 ರಿಂದ 2021 ರವರೆಗೆ ಬಂಜೆತನದ ಬಗ್ಗೆ ಎಲ್ಲಾ ಸಂಬಂಧಿತ ಅಧ್ಯಯನಗಳನ್ನು ವಿಶ್ಲೇಷಿಸಿದೆ. ವಯಸ್ಕ ಜನಸಂಖ್ಯೆಯ 17.5 ಪ್ರತಿಶತದಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಬಂಜೆತನವನ್ನು ಅನುಭವಿಸುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಹೆಚ್ಚಿನ, ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಈ ದರಗಳು ‘ಹೋಲಿಸಬಹುದು’ ಎಂದು ಯುಎನ್ ಆರೋಗ್ಯ ಸಂಸ್ಥೆ ತಿಳಿಸಿದೆ.
ಲಂಡನ್: ‘ಭಾರತೀಯ ಪ್ರಜೆ ಮತ್ತು ಹಿಂದೂ ಆದ ಕಾರಣಕ್ಕೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸ್ಟೂಡೆಂಟ್ಸ್ ಯೂನಿಯನ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನನ್ನನ್ನು ಅನರ್ಹಗೊಳಿಸಲಾಗಿದೆ’ ಎಂದು ಭಾರತೀಯ ಮೂಲದ ಕಾನೂನು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆಯುತ್ತಿರುವ ಹರಿಯಾಣ ಮೂಲದ ಕರಣ್ ಕಠಾರಿಯಾ ಎಂಬ ವಿದ್ಯಾರ್ಥಿ ಇದೀಗ ಲಂಡನ್ ವಿವಿ ಕುರಿತು ಈ ಆರೋಪ ಮಾಡಿದ್ದಾರೆ. ‘ಸ್ಟೂಡೆಂಟ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ನನ್ನ ಗೆಳೆಯರ ಬೆಂಬಲ, ಹಾಗೂ ಪ್ರೋತ್ಸಾಹ ಇದೆ. ದುರದೃಷ್ಟಕರ ಸಂಗತಿ ಎಂದರೆ ಭಾರತೀಯ, ಹಿಂದೂ ವಿದ್ಯಾರ್ಥಿಯೊಬ್ಬ ವಿವಿಯ ವಿದ್ಯಾರ್ಥಿ ಸಂಘಟನೆ ಮುನ್ನಡೆಸುವುದನ್ನು ಕೆಲವರು ವೈಯಕ್ತಿಕವಾಗಿ ಸಹಿಸುವುದಿಲ್ಲ. ಹೀಗಾಗಿ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿಕವಾಗಿ ಕುಂದು ತರಲು ಯತ್ನಿಸಿದ್ದು, ವಿವಿಯು ನನ್ನ ಮೇಲೆ ಆಧಾರ ರಹಿತ ಆರೋಪಗಳನ್ನು ಹೊರಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಕಳೆದ ವಾರ ನನ್ನನ್ನು ಅನರ್ಹಗೊಳಿಸಿದೆ ಎಂದು ದೂರಿದ್ದಾರೆ. ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದಾಗ ನನ್ನ ಕನಸು ನನಸಾಗಿಸಿಕೊಂಡು, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಗುರಿ…
ವಾಷಿಂಗ್ಟನ್: ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟ ಸ್ಥಾಪಿಸುವ ವಿಚಾರದಲ್ಲಿ ಭಾರತದ ನಾಯಕತ್ವ ಮತ್ತು ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸರ್ಕಾರದ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದು, ಭಾರತವು ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಕಂಡಿದೆ ಮತ್ತು ಅಭಿವೃದ್ಧಿಯನ್ನೂ ಸಾಧಿಸಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಆಡಳಿತಾಧಿಕಾರಿ ಸಮಂತಾ ಪವಾರ್ ‘ಜಗತ್ತಿನಾದ್ಯಂತ ವಿಪತ್ತು ತಡೆಗೆ ಭಾರತ ಸ್ಥಿರವಾದ ಬದ್ಧತೆ ತೋರಿದೆ. ದೇಶದ ನಾಯಕತ್ವವು ಸಿಡಿಆರ್‌ಐ ಸ್ಥಾಪನೆಗೆ ನೆರವು ನೀಡಿದ್ದು, ಸರ್ಕಾರ ಮಾತ್ರವಲ್ಲದೆ ಜನರೂ ಇದರ ಅನುಷ್ಠಾನದಲ್ಲಿ ಭಾಗಿಯಾದಾಗ ಮಾತ್ರ ಇದು ಯಶಸ್ವಿಯಾಗಲಿದೆ’ ಎಂದರು. ‘ಜಗತ್ತಿನಾದ್ಯಂತ ಹವಾಮಾನ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಪ್ರದೇಶಗಳು ಮುಳುಗಡೆಯಾಗಿದೆ. ಪೂರ್ವ ಆಫ್ರಿಕಾದ ಹಲವು ಭಾಗಗಳು ತೀವ್ರ ಬರದಿಂದ ತತ್ತರಿಸಿವೆ. ಅಮೆರಿಕಾದ ಪಶ್ಚಿಮ ಭಾಗ ಮತ್ತು ಭಾರತವು ವಿನಾಶಕಾರಿ ಬಿಸಿ ಗಾಳಿ ಎದುರಿಸುತ್ತಿವೆ. ಇಂತಹ ವಿಪತ್ತುಗಳ ವಿರುದ್ಧ ಯಾವುದೇ ಸರ್ಕಾರ ಅಥವಾ…