Author: Prajatv Kannada

ರಾಯ್ಪುರ: ಮದುವೆಯಲ್ಲಿ ಉಡುಗೊರೆಯಾಗಿ ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡಿದ್ದು, ನವವಿವಾಹಿತ ಮತ್ತು ಆತನ ಹಿರಿಯ ಸಹೋದರ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ (Blast) ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ . ವರದಿಗಳ ಪ್ರಕಾರ ಮೃತ ನವವಿವಾಹಿತ ವ್ಯಕ್ತಿ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು ಎನ್ನಲಾಗಿದೆ. ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೇರಾವಿ ಸಹೋದರ ರಾಜ್‌ಕುಮಾರ್…

Read More

ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್ ಕುಮಾರ್(Bandi Sanjay Kumar) ಅವರನ್ನು ಮಂಗಳವಾರ ಮಧ್ಯರಾತ್ರಿಯ ಕರೀಂನಗರದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯಕ್ಕೆ ಭೇಟಿ ನೀಡುವುದಕ್ಕೆ ಮುಂಚಿತವಾಗಿ ಬಂಧಿಸಲಾಯಿತು. ವರದಿಯ ಪ್ರಕಾರ, ಪೊಲೀಸರ ತಂಡ ಕರೀಂನಗರದಲ್ಲಿರುವ ಸಂಸದರ ನಿವಾಸಕ್ಕೆ ತಲುಪಿ ಅವರನ್ನು ವಶಕ್ಕೆ ಪಡೆದರು. ಇದರಿಂದ ಬಂಡಿ ಸಂಜಯ್ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪೊಲೀಸರನ್ನು ತಡೆಯಲು ಯತ್ನಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅವರನ್ನು ನಲ್ಗೌಂಡ ಜಿಲ್ಲೆಯ ಬೊಮ್ಮಲ ರಾಮರಾಮ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಬೆಳಗ್ಗೆಯೇ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಿತ್ತು, ಬಂಡಿ ಸಂಜಯ್ ಎಲ್ಲಿಗೆ ಹೋಗುತ್ತಾರೆ? ಇದು ತೆಲಂಗಾಣದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಷ್ಟೇ ಉದ್ದೇಶ ಬೇರೇನೂ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ತಿಳಿಸಿದ್ದಾರೆ. ಮಧ್ಯರಾತ್ರಿ ಸಂಸದರೊಬ್ಬರ ವಿರುದ್ಧ ಈ ಕ್ರಮದ ಅಗತ್ಯ ಏನಿತ್ತು? ಅಪರಾಧ ಮತ್ತು ಪ್ರಕರಣಗಳೇನು? ಅವರು ನಮಗೆ ಏನನ್ನೂ ಹೇಳುತ್ತಿಲ್ಲ ಎಂದಿದ್ದಾರೆ.…

Read More

ಬೆಳಗಾವಿ: ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಚಿನ್ನ, ಬೆಳ್ಳಿ ಆಭರಣ ಕಾರಿನ ಮೇಲೆ ದಾಳಿ ನಡೆಸಿ 53 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ನಂದಗಡ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು ಚಿನ್ನ, ಬೆಳ್ಳಿ ಆಭರಣ ಸಾಗಿಸುತ್ತಿದ್ದ ಕಾರಿನ ಸಮೇತ 53.33 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ (Gold) ಹಾಗೂ 19,08,420 ರೂ ಮೌಲ್ಯದ 28.065 ಕೆ.ಜಿ ಬೆಳ್ಳಿ (Silver) ವಶಕ್ಕೆ ತೆಗೆದುಕೊಂಡಿದ್ದಾರೆ. ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೆ ಕಾರಿನಲ್ಲಿ ಆಭರಣಗಳ ಸಾಗಾಟ ಮಾಡುತ್ತಿದೆ ಆರೋಪದ ಮೇಲೆ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದಾಗ ಕಾರಿನಲ್ಲಿ ಚಿನ್ನ, ಬೆಳ್ಳಿ ಆಭರಣ ಜೊತೆಗೆ 13 ಲಕ್ಷ ರೂ. ಮೌಲ್ಯದ ಕಾರು ಸೇರಿ 53,33,724 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಕ್ಷೇತ್ರ (Khanapura Constituency) ದಲ್ಲಿ ತಪಾಸಣೆ ವೇಳೆ ವಸ್ತುಗಳು ಪತ್ತೆಯಾಗಿದ್ದು, ಹಳಿಯಾಳ ಮೂಲದ ಧರ್ಮರಾಜ್…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಬಸ್ಸಿನಲ್ಲಿ ಯುವತಿಯ ಜೊತೆ ಮಾತನಾಡಿದ್ದಕ್ಕೆ ಅನ್ಯಕೋಮಿನ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಜಿರೆ(Ujire) ಯಲ್ಲಿ ಈ ಘಟನೆ ನಡೆದಿದ್ದು, ಕಕ್ಕಿಂಜೆ ನಿವಾಸಿ ಝಾಹಿರ್ (22) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಝಾಹಿರ್, ಮಂಗಳವಾರ ಊರಿಗೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದನು. ಯುವತಿ ಬೆಳ್ತಂಗಡಿಯಲ್ಲಿ ಬಸ್‍ನಿಂದು ಇಳಿದು ಹೋಗಿದ್ದಾಳೆ. ಇತ್ತ ಯುವಕರ ತಂಡ ಝಾಹಿರ್‍ಗಾಗಿ ಉಜಿರೆಯಲ್ಲಿ ಕಾದು ಕುಳಿತು ಹಲ್ಲೆ ನಡೆಸಿದೆ. ಉಜಿರೆಯಲ್ಲಿ ಬಸ್ ನಿಂದ ಕಳಗಿಳಿಸಿ ಝಾಹಿರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.  ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read More

ಮೈಸೂರು: ವರುಣಾ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯನವರ ಎದುರಿಗೆ ಬಿಜೆಪಿ ವತಿಯಿಂದ ಯಾರು ನಿಲ್ತಾರೆ ಎಂಬುದು ಇನ್ನೂ ಕುತೂಹಲದ ಸಂಗತಿಯಾಗಿಯೇ ಉಳಿದಿದೆ. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರೇ ಸಿದ್ದರಾಮಯ್ಯನವರ ಎದುರು ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಖುದ್ದು ಯಡಿಯೂರಪ್ಪನವರೇ ಅದನ್ನು ನಿರಾಕರಿಸಿದ್ದಾರೆ. ಅಲ್ಲಿಗೆ, ವರುಣಾದಲ್ಲಿ ಬಿಜೆಪಿಯ ಹುರಿಯಾಳು ಯಾರು ಎಂಬುದು ಮತ್ತಷ್ಟು ನಿಗೂಢವಾಗಿದೆ. ಅದು ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರವಷ್ಟೇ ಗೊತ್ತಾಗಲಿದೆ. ಬಿಜೆಪಿಯ ಲಿಸ್ಟ್ ಏ. 8 ಅಥವಾ 9ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಿಎಂ ಬೊಮ್ಮಾಯಿ ಕೂಡ ಆ ಎರಡು ದಿನಗಳಲ್ಲೇ ಬಿಜೆಪಿ ಲಿಸ್ಟ್ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ. ಅದರ ನಡುವೆಯೇ, ಈಗ ಈ ಪ್ರಬಲ ವ್ಯಕ್ತಿಯೊಬ್ಬರನ್ನು ನಿಲ್ಲಿಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಅವರು ಯಾರು, ಅವರನ್ನು ಏಕೆ ಬಿಜೆಪಿ ಆರಿಸಲು ಚಿಂತನೆ ನಡೆಸುತ್ತಿದೆ ಎಂಬುದಕ್ಕೆ ಇಲ್ಲಿದೆ ಉತ್ತರ. ​ವರುಣಾದಲ್ಲಿ ಲಿಂಗಾಯತರೇ ನಿರ್ಣಾಯಕ ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ 55 ಸಾವಿರದಷ್ಟಿದೆ. ಅವರನ್ನು…

Read More

ತುಮಕೂರು: ಗುಬ್ಬಿ (Gubbi) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಎಸ್ ಪ್ರಸನ್ನಕುಮಾರ್ (G.S.Prasanna Kumar) ಅವರನ್ನು ಕಾಂಗ್ರೆಸ್ (Congress) ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡ (Chandrashekar Gowda) ಮಾಹಿತಿ ನೀಡಿದ್ದಾರೆ. ಪ್ರಸನ್ನಕುಮಾರ್ ಅವರು ಶಾಸಕ ಎಸ್‌ಆರ್ ಶ್ರೀನಿವಾಸ್ (S.R.Srinivas) ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಪ್ರಬಲವಾಗಿ ವಿರೋಧಿಸಿದ್ದರು. ಅಲ್ಲದೇ ತಾವೇ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದರು ಎಂದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಆರೋಪದಡಿಯಲ್ಲಿ, ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಹಾಗೂ ವರಿಷ್ಠರ ಅನುಮೋದನೆಯ ಮೇರೆಗೆ ಪ್ರಸನ್ನಕುಮಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Read More

ಕೋಲಾರ‌‌ ಜಿಲ್ಲೆಯ ಮಾಲೂರು ವಿಧಾ‌ನ ಸಭಾ ಕ್ಷೇತ್ರದಲ್ಲಿ‌ ಬಿಜೆಪಿ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿರುವ ವಿಚಾರ ಎಂದು  ಮಾಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಅವರು ಹೇಳಿದರು. ಮಾಲೂರಿನ‌ ತಮ್ಮ ನಿವಾಸದ ಬಳಿ‌ ಸುದ್ದಿಗಾರೊಂದಿಗೆ ಮಾತನಾಡಿದರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಯಾರಿಗೆ ಟಿಕೇಟ್ ನೀಡಬೇಕು ಯಾರು ಕೆಲಸ ಮಾಡುತ್ತಿದ್ದಾರೆ ನಿಷ್ಟಾವಂತ ಕಾರ್ಯಕರ್ತರು ಯಾರು ಎಂದು ತೀರ್ಮಾನ ಮಾಡುತ್ತಾರೆ. Video Player 00:00 00:53 ಎಲ್ಲರನ್ನು‌ ಒಟ್ಟಾಗಿ‌ ತೆಗೆದುಕೊಂಡು‌ ಹೋಗುವ ಕೆಲಸವನ್ನು ಹೈಕಮಾಂಡ್ ‌ಮಾಡುತ್ತದೆ. ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ‌ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಬಾವುಟ ಹಾರಿಸಬೇಕು ಆ ಒಂದು ಕೆಲಸವನ್ನು ಮಾಡಬೇಕು ಹಾಗಾಗಿ‌‌ ಎಲ್ಲರು ಒಟ್ಟಾಗಿ ಬಿಜೆಪಿ ಪಕ್ಷವನ್ನು‌‌ ಗೆಲ್ಲಿಸುವ ಕೆಲಸವನ್ನು ಮಾಡುತ್ತೆವೆ ಎಂದು ತಿಳಿಸಿದರು.

Read More

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಅದರ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ ಎಂದು ವಿಧಾನ ಪರಿಷತ್ ಸದಸ್ಯ ವೈ ಎ. ನಾರಾಯಣಸ್ವಾಮಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವ್ರು, ಸಿದ್ದರಾಮಯ್ಯ ಕೋಲಾರದಿಂದ ಸ್ಲರ್ದೇ ವಿಚಾರಕ್ಕೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವರುಣಾದಲ್ಲಿ ಸ್ಪರ್ಧೆ ಮಾಡಬೇಕು ಎಂದು ಟಿಕೇಟ್ ಘೋಷಣೆ ಮಾಡಿದ್ದಾರೆ ಅಲ್ಲದೆ ಅವರ ಮನೆಯವರನ್ನು ಕೇಳಿ ಚುನಾವಣೆಯಲ್ಲಿ ನಿಲ್ಲುತ್ತೇನೆ ಅಂತ ಹೇಳಿದ್ದಾರೆ. ಅದು ಒಂದು ದುರಂತ ಸಮೀಕ್ಷೆ ಆದರಿಸಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಮತ್ತೊಂದು ದುರುಂತ ಸಮೀಕ್ಷೆ ಆದರಿಸಿ ಚುನಾವಣೆಗೆ ನಿಲ್ಲುವ ಮಟ್ಟಕ್ಕೆ ಇಳಿದಿದ್ದು ಸಿದ್ದರಾಮಯ್ಯ ನವರ ವ್ಯಕ್ತಿತ್ವಕ್ಕೆ ಗೌರವ ತರೋದಿಲ್ಲ ರಾಜ್ಯದ 5 ವರ್ಷ ಮುಖ್ಯಮಂತ್ರಿಯಾಗಿದ್ದವರು ವಿರೋಧ ಪಕ್ಷದ ನಾಯಕರಾಗಿದ್ದವರು. Video Player 00:00 01:36 ವಿವಿಧ ಭಾಗ್ಯಗಳನ್ನು ಕೊಟ್ಟವರು ಸಿದ್ದರಾಮಯ್ಯ ಆದರೆ ಸಮೀಕ್ಷೆ ಆಧರಿಸಿ ಚುನಾವಣೆಗೆ ನಿಲ್ತುತ್ತೇನೆ…

Read More

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಬಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದ ಘಟನೆ ನಡೆದಿದೆ. ಅಳ್ಳಗಿ ಗ್ರಾಮದ ಶರಣಪ್ಪ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೊತ್ತಿ ಉರಿದ ಜೆಸ್ಕಾಂ ಪವರ್ ಸ್ಟೇಷನ್: 25 ಗ್ರಾಮಗಳಿಗೆ ವಿದ್ಯುತ್​ ಸ್ಥಗಿತ ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿನ ಜೆಸ್ಕಾಂ ಪವರ್ ಸ್ಟೇಷನ್ ಹೊತ್ತಿ ಉರಿದಿದೆ. ನಿನ್ನೆ (ಏ.2) ರಂದು ಸಾಯಂಕಾಲ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ವಿದ್ಯುತ್​ ಸರಬರಾಜನ್ನು ಬಂದ್​ ಮಾಡಲಾಗಿದೆ. ಈ ಹಿನ್ನೆಲೆ ​​​ಸೇಡಂ ತಾಲೂಕಿನ 25 ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇನ್ನು ಬಿಸಿಲಿನ ತಾಪಮಾನ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಸೇಡಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ…

Read More

ಬೆಳಗಾವಿ: ಬೆಳ್ಳಂಬೆಳಗ್ಗೆ ಬೆಳಗಾವಿ (Belagavi) ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿರೇಬಾಗೇವಾಡಿ (Hirebagewadi) ಟೋಲ್ (Toll) ಬಳಿ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ಕಂತೆ ಕಂತೆ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ (Mumbai) ಮಂಗಳೂರು (Mangaluru) ಕಡೆಗೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸುವ ಸಂದರ್ಭದಲ್ಲಿ ಹಣದ (Money) ಬ್ಯಾಗ್ ಪತ್ತೆಯಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಆದಾಯ ತೆರಿಗೆ (Income Tax) ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು (Election Officer) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More