Author: Prajatv Kannada

ದಾವಣಗೆರೆ: ಗುಂಡು ಹಾರಿಸಿಕೊಂಡು ದಾವಣಗೆರೆ ಮೂಲದ ಯೋಧ (soldier) ಆತ್ಮಹತ್ಯೆ ಮಾಡಿಕೊಂಡಿರುವಂತಹ ದುರಂತ ನಡೆದಿದೆ. ತಾಲೂಕಿನ ಹದಡಿ ಗ್ರಾಮದ ನಾಗರಾಜ್(32) ಆತ್ಮ‌ಹತ್ಯೆಗೆ ಶರಣಾದ ಯೋಧ. ಕರ್ತವ್ಯದಲ್ಲಿದ್ದಾಗ ನಿನ್ನೆ ಬೆಳಗ್ಗೆ 4ಗಂಟೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಎನ್ನಲಾಗುತ್ತಿದೆ. ಪಂಜಾಬ್, ಹರಿಯಾಣ ಸೆಕ್ರೆಟರಿಯೇಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರು. ದಾವಣಗೆರೆ ಮೂಲದ ಶಿಲ್ಪಾ ಎಂಬುವರನ್ನ ಮದುವೆ ಆಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ನಾಗರಾಜ್​ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸ್ವಗ್ರಾಮ ಹದಡಿಗೆ ತರಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ ರಿಷ್ಯಂತ ತಿಳಿಸಿದ್ದಾರೆ.

Read More

ಹಾಸನ: ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿವೆ. ಆದರೆ ಚೆನ್ನಕೇಶವನಾ ಆಶೀರ್ವಾದ ಮತ್ತು ದೇವೇಗೌಡರು ಇರುವ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ. ಮೊದಲು ನಮ್ಮ ಪ್ರಚಾರಕ್ಕೆ ಜಾಹೀರಾತು ನೀಡಬೇಕಿತ್ತು. ಆದರೆ, ಈಗ ಪ್ರತಿನಿತ್ಯ ನಮ್ಮದೇ ಎಲ್ಲಾ ಚಾನೆಲ್ನಲ್ಲೂ ಬೆಳಗ್ಗೆಯಿಂದ ಸಂಜೆ ತನಕ ಪ್ರಚಾರ ಕೊಡ್ತಾ ಇದ್ದೀರಿ ನಿಮ್ಮ ಟಿವಿ ಮಾಧ್ಯಮದ ಮಾಲೀಕರಿಗೆ ಒಳ್ಳೆಯದಾಗಲಿ ಅಂತ ಮಾಧ್ಯಮವನ್ನು ಇದೇ ವೇಳೆ ಟೀಕಿಸಿದವರು. ಶಾಸಕ ಲಿಂಗೇಶ್‌ ಪಾಪದ ಮನುಷ್ಯ ಬೇಲೂರಿನ ಶಾಸಕ ಕೆ ಎಸ್ ಲಿಂಗೇಶ್ 750 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್‌ ಡಿ ರೇವಣ್ಣ, “ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ಶಾಸಕನನ್ನ ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಶಾಸಕರು ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ. ದೇವೇಗೌಡರಿಗೆ ಮೋಸ ಮಾಡಿದವರಿಗೆ ಚನ್ನಕೇಶವ ಶಿಕ್ಷೆ ಕೊಡ್ತಾನೆ ದೇವೇಗೌಡರಿಗೆ ಮೋಸ…

Read More

ರಾಮನಗರ: ನನ್ನ ನಾಮಪತ್ರದ ಬಗ್ಗೆ ನಮ್ಮ ಕುಟುಂಬದಲ್ಲಿ ಇನ್ನೂ ಚರ್ಚೆಯಾಗಿಲ್ಲ. ತಾತನವರಾದ ದೇವೇಗೌಡರ ಜೊತೆಗೆ ಚರ್ಚಿಸಿ ಆನಂತರ ನನ್ನ ನಾಮಪತ್ರ ಸಲ್ಲಿಕೆಯ ದಿನಾಂಕವನ್ನು ನಿಗದಿ ಮಾಡುತ್ತೇವೆ. ದೇವೇಗೌಡರು ಹೇಳಿದ ದಿನಾಂಕದಂದೇ ನಾನು ನನ್ನ ನಾಮಪತ್ರ ಸಲ್ಲಿಸುತ್ತೇನೆ’’ ಎಂದು ಜೆಡಿಎಸ್ ಪಕ್ಷದ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಮನಗರದಲ್ಲಿ ಹೇಳಿಕೆ. ಕುಮಾರಸ್ವಾಮಿ ಅವರು ಹೇಳಿದ ಮೇಲೆ ನನಗೆ ನಾಮಪತ್ರ ಸಲ್ಲಿಕೆ ವಿಚಾರ ಗೊತ್ತಾಗಿದ್ದು. ದೇವೇಗೌಡರ ಬಳಿ‌ ಚರ್ಚೆ ಮಾಡಿ ಸೂಕ್ತವಾದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಅವರು ಹೇಳಿದರು. ಇನ್ನು, ನಾಮಪತ್ರ ಸಲ್ಲಿಸುವಾಗ ದೇವೇಗೌಡರು ನಿಮ್ಮೊಂದಿಗೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಮಪತ್ರ ಸಲ್ಲಿಕೆ ದಿನ ದೇವೇಗೌಡರು ಬರುವ ಬಗ್ಗೆ ಚರ್ಚೆ ಆಗಿಲ್ಲ. ದೇವೆಗೌಡರಿಗೆ ವಯಸ್ಸಿನ ಕಾರಣ ಆರೋಗ್ಯದಲ್ಲಿ ಏರುಪೇರಿದೆ. ಅವರಿಗೆ ಈ ಸಮಯದಲ್ಲಿ ಒತ್ತಡ ಏರುವಂತಹದ್ದು ಸರಿಯಲ್ಲ. ಆದರೆ, ನಾನು ಇತ್ತೀಚೆಗೆ ಭೇಟಿಯಾಗಿದ್ದಾಗ ಅವರು, “ರಾಮನಗರ ತಂದೆ ತಾಯಿಯರ ಆಶೀರ್ವಾದಕ್ಕಾಗಿ…

Read More

ಬೆಂಗಳೂರು: ಕಾಂಗ್ರೆಸ್‌ನವರು (Congress) ಕಳ್ಳತನ ಮಾಡಿದ್ದಾರೆ. ಅದಕ್ಕೆ ಐಟಿಗೆ (IT) ಭಯ ಬೀಳುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ವಿರುದ್ದ ಸೋಲುವ ಭಯದಲ್ಲಿ ಬಿಜೆಪಿ (BJP) ಐಟಿ ದಾಳಿ ಮಾಡಿಸಲು ಸಿದ್ಧವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ವಿಶ್ವಾಸವಿದೆ. ಕಳ್ಳನ ಜೀವ ಉಳ್ಳುಳ್ಳಗೆ ಅಂತಾರಲ್ಲ. ಹಾಗೇ ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದು ಕಿಡಿಕಾರಿದರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು. ಚುನಾವಣೆ ಆಯೋಗದ ಅಧೀನದಲ್ಲಿ ಎಲ್ಲವೂ ನಡೆಯುತ್ತವೆ. ಅವರೇ ಎಲ್ಲವೂ ಮಾನಿಟರ್ ಮಾಡುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐಟಿ ಅಧಿಕಾರಿಗಳು ಪ್ರತೀ ಜಿಲ್ಲೆಯಲ್ಲಿ ಇದ್ದಾರೆ. ಚುನಾವಣಾ ಆಯೋಗ ಕೂಡಾ ದಾಳಿ ಮಾಡುತ್ತಿದೆ. ಎಲ್ಲಾ ಪಕ್ಷಗಳ ವಸ್ತುಗಳನ್ನು ಸೀಜ್ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಒಂದು ಸ್ವಾಯತ್ತತೆ…

Read More

ಕಿಚ್ಚ (Kiccha) ಸುದೀಪ್ (Sudeep) ಇಂದು ಬಿಜೆಪಿಗೆ (BJP) ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರ ರಾಜಕೀಯದ ಪಡಸಾಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಈ ಕುರಿತು ಸುದೀಪ್ ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ, ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ  ಕಿಚ್ಚ ಬಿಜೆಪಿಗೆ ಬರುವುದು ಕನ್ಫರ್ಮ್. ಆದರೆ, ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರಾ ಅಥವಾ ಅಧಿಕೃತವಾಗಿ ಪಕ್ಷವನ್ನು ಸೇರುತ್ತಿದ್ದಾರೆ ಎನ್ನುವ ಗೊಂದಲವಿದೆ. ಈ ಗೊಂದಲಕ್ಕೆ ಮಧ್ಯಾಹ್ನ ತೆರೆಬೀಳಲಿದೆ ಈ ಹಿಂದೆ ರಮ್ಯಾ ಮೂಲಕ ಕಾಂಗ್ರೆಸ್‍ ಗೆ ಕರೆತರುವ ಪ್ರಯತ್ನ ಕೂಡ ನಡೆದಿತ್ತು. ಸುದೀಪ್ ಮನೆಗೆ ಸ್ವತಃ ಡಿ.ಕೆ. ಶಿವಕುಮಾರ್ (D.K. Shivakumar)  ಭೇಟಿ ನೀಡಿ ಚರ್ಚೆ ನಡೆಸಿದ್ದರು. ಅಲ್ಲದೇ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಕಾಂಟ್ಯಾಕ್ಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ…

Read More

ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಇಂದು (ಏಪ್ರಿಲ್ 5) ಮಧ್ಯಾಹ್ನ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಎರಡು ಬೆದರಿಕೆ ಪತ್ರ ಬಂದಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪತ್ರ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟ ನಡೆಯುತ್ತಿದೆ. ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದೆ ಎನ್ನಲಾಗಿದೆ. ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಆಗಿದೆ. ಸುದೀಪ್ ಅವರ ಖಾಸಗಿ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಸುದೀಪ್ಗೆ ಮಾನಸಿಕ ಕಿರುಕುಳ ಆಗಿದೆ. ‘ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು’ ಎಂದು ಮಂಜು ಅವರು ದೂರಿದ್ದಾರೆ.…

Read More

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ಆರೋಪ ಕೇಳಿಬಂದಿದೆ. ಚುನಾವಣಾ ರಾಜಕೀಯದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ (Yediyurappa) ಹಾಗೂ ಸಿದ್ದರಾಮಯ್ಯ (Siddaramaiah) ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು (H.D.Deve Gowda) ಹೊಸ ಬಾಂಬ್ ಸಿಡಿಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು, ಬಿಎಸ್‌ವೈ ನಡುವೆ ಒಳ ಒಪ್ಪಂದ ಇದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಮ್ಯಾಚ್ ಫಿಕ್ಸಿಂಗ್ ಸಂಶಯ ಹುಟ್ಟು ಹಾಕಿದ್ದಾರೆ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಕಾಂಗ್ರೆಸ್‌ನ ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇಕೆ? ಇದು ಏನನ್ನು ಸೂಚಿಸುತ್ತದೆ? ಇಬ್ಬರು ಮಾಜಿ ಸಿಎಂಗಳು ತಂತ್ರಗಾರಿಕೆಯ ತಿಳುವಳಿಕೆ ಹೊಂದಿದ್ದಾರೆ ಎಂಬುದು ಇದರ ಅರ್ಥ. ರಾಜ್ಯದಲ್ಲಿ ಹೀಗಾಗಲು ಬಿಜೆಪಿ ವರಿಷ್ಠರು ಹೇಗೆ ಅವಕಾಶ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್‌…

Read More

ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಬಿಜೆಪಿ ಪಕ್ಷಕ್ಕೆ ಬಂದರೆ ಲಾಭ ಆಗುತ್ತೆ ಎಂದು ಸಚಿವ ಶ್ರೀರಾಮುಲು (B. Sriramulu) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಪಕ್ಷಕ್ಕೆ ಬರ್ತಾರೆ ಅನ್ನೋದು ಗೊತ್ತಿಲ್ಲ. ನಾನೂ ಮಾಧ್ಯಮಗಳಲ್ಲಿ ನೋಡಿದ್ದು, ಇದನ್ನು ತಿಳಿದುಕೊಂಡು ಮಾತಾಡ್ತೇನೆ. ಸುದೀಪ್ ಬಂದ್ರೆ ಪಕ್ಷಕ್ಕೆ ಲಾಭ ಆಗುತ್ತೆ. ಸುದೀಪ್ ಪಕ್ಷಕ್ಕೆ ಬಂದ್ರೆ ಸ್ವಾಗತಿಸುತ್ತೇನೆ ಎಂದರು. ಕಿಚ್ಚ ಸುದೀಪ್ ಇಂದು ಬಿಜೆಪಿ (BJP) ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರ ರಾಜಕೀಯದ ಪಡಸಾಲೆಯಲ್ಲಿ ಗಿರಕಿ ಹೊಡೆಯುತ್ತಿದೆ. ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಈ ಕುರಿತು ಸುದೀಪ್ ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ, ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ ಕಿಚ್ಚ ಬಿಜೆಪಿಗೆ ಬರುವುದು ಕನ್ಫರ್ಮ್. ಆದರೆ, ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರಾ ಅಥವಾ ಅಧಿಕೃತವಾಗಿ ಪಕ್ಷವನ್ನು ಸೇರುತ್ತಿದ್ದಾರೆ ಎನ್ನುವ…

Read More

ಸೂರ್ಯೋದಯ: 06.14 AM, ಸೂರ್ಯಾಸ್ತ : 06.31 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಮಾಸ, ಉತ್ತರಾಯಣ ತಿಥಿ: ಇವತ್ತು ಚತುರ್ದಶಿ 09:19 AM ತನಕ ನಂತರ ಹುಣ್ಣಿಮೆ ನಕ್ಷತ್ರ: ಇವತ್ತು ಉತ್ತರ ಫಾಲ್ಗುಣಿ 11:23 AM ತನಕ ನಂತರ ಹಸ್ತ ಯೋಗ: ಇವತ್ತು ವೃದ್ಧಿ 03:40 AM ತನಕ ನಂತರ ಧ್ರುವ ಕರಣ: ಇವತ್ತು ವಣಿಜ 09:19 AM ತನಕ ನಂತರ ವಿಷ್ಟಿ 09:45 PM ತನಕ ನಂತರ ಬವ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 03.39 AM to 05.22 AM ಅಭಿಜಿತ್ ಮುಹುರ್ತ: ಇಲ್ಲ ಮೇಷ ರಾಶಿ: ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ,…

Read More

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು (Rowdy Sheeter) ಬಂಧಿಸುವಲ್ಲಿ ಬೆಂಗಳೂರು (Bengaluru) ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಖತಾರ್ನಾಕ್ ರೌಡಿಶೀಟರ್‌ಗಳಾದ ಮಹಮ್ಮದ್ ಜಬೀವುದ್ದೀನ್, ಮಹಮ್ಮದ್ ಮೆಹತಾಬ್ ಹಾಗೂ ದಿನೇಶ್ ಬಂಧಿತ ರೌಡಿಗಳು. ಈ ಮೂವರ ಮೇಲೆ ಬರೋಬ್ಬರಿ ಅರವತ್ತಕ್ಕೂ ಹೆಚ್ಚು ಕೇಸ್‌ಗಳಿದ್ದು, ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದರು. ಇಂತಹವರನ್ನೇ ಟಾರ್ಗೆಟ್ ಮಾಡಿ ಹುಡುಕಾಟ ನಡೆಸಿದ ಸಿಸಿಬಿ (CCB) ಕೊನೆಗೂ ಮೂವರನ್ನು ಖೆಡ್ಡಗೆ ಬೀಳಿಸಿಕೊಂಡಿದೆ. ರಾಜ್ಯದಲ್ಲಿ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ಬೆಂಗಳೂರು ಸಿಸಿಬಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಗರದಲ್ಲಿ ಆ್ಯಕ್ಟಿವ್ ಆಗಿರುವ ರೌಡಿಶೀಟರ್‌ಗಳು, ವಾರೆಂಟ್ ಇದ್ದರೂ ಕೂಡ ಕೋರ್ಟ್‌ಗೆ ಹಾಜರಾಗದೆ ನಾಪತ್ತೆಯಾಗಿರುವ ರೌಡಿಶೀಟರ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು, ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ.

Read More