ಬೆಂಗಳೂರಿನ ಪೊಲೀಸ್ ಕಮಿಷನರ್ಗೆ ಅನಗತ್ಯವಾಗಿ ಬೆಳ್ಳಿ, ಚಿನ್ನ, ಡೈಮಂಡ್ ಆಭರಣಗಳನ್ನು ವಶಕ್ಕೆ ಪಡೆಯಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಚಿನ್ನಾಭರಣ ಸಂಘದ ಅಧ್ಯಕ್ಷರೂ ಆಗಿರುವ ಟಿ ಎ ಶರವಣ ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳು ಚಿನ್ನದ ವ್ಯಾಪಾರಿಗಳಿಗೆ ಶುಭ ಗಳಿಗೆ ಆಗಿರುತ್ತದೆ. ಈ ಎರಡು ತಿಂಗಳಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಗ್ರಾಹಕರು ಅತಿ ಹೆಚ್ಚು ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸುತ್ತಾರೆ. ಏಪ್ರಿಲ್ 23ರಂದು ಅಕ್ಷಯ ತೃತೀಯ ಕೂಡ ಇದೆ. ಅಕ್ಷಯ ತೃತೀಯ ದಿನದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ ಅಂಗಡಿಗಳಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು, ವಿತರಕರು, ಹಂಚಿಕೆದಾರರು ದೇಶದ ಹಲವು ರಾಜ್ಯಗಳಿಂದ ಕರ್ನಾಟಕಕ್ಕೆ ಚಿನ್ನ, ಬೆಳ್ಳಿ ಆಭರಣಗಳನ್ನು ರಫ್ತು ಮಾಡಲಾಗುತ್ತದೆ. ಹೊರ ರಾಜ್ಯದಿಂದ ಬರುವ ಚಿನ್ನ, ಬೆಳ್ಳಿಯನ್ನು ಜಿಲ್ಲೆ, ಜಿಲ್ಲೆಗೂ ವಿತರಿಲಾಗುತ್ತದೆ. ಹೀಗಾಗಿ ಮುಂಬರು ವಿಧಾನಸಭಾ ಚುನಾವಣಾ ನಿಮಿತ್ತ ಪೊಲೀಸರು ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ…
Author: Prajatv Kannada
ಬೆಂಗಳೂರು: ಮತದಾರರಿಗೆ ಹಂಚಲು ತಂದಿದ್ದ 1.47 ಕೋಟಿ ರೂ. ಮೌಲ್ಯದ ಚಿನ್ನದ ಲೇಪನದ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಹಲಸೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಮೂವರನ್ನು ಅರೆಸ್ಟ್ ಮಾಡಲಾಗಿದ್ದು, ಪಂಕಜ್ ಗೌಡ, ಭಗವಾನ್ ಸಿಂಗ್, ವಡಿವೇಲು ಬಂಧಿತರು ಎಂದು ಹೇಳಲಾಗಿದೆ. ಚುನಾವಣಾಧಿಕಾರಿ ಮುನಿಯ ನಾಯಕ ದೂರಿನ ಮೇರೆಗೆ ದಾಳಿ ನಡೆಸಿ ಚಿನ್ನದ ಲೇಪನದ ಆಭರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸಿ.ವಿ.ರಾಮನ್ನಗರ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಗೋಲ್ಡ್ ಕೋಟೆಡ್ ಸರ, ಉಂಗುರ, ಕಿವಿಯೋಲೆ, ಬ್ರೇಸ್ ಲೇಟ್, ಬಳೆಗಳು ಸೇರಿದಂತೆ 8 ಕೆಜಿಗೂ ಅಧಿಕ ತೂಕದ ಚಿನ್ನದ ಲೇಪನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಎಸಿಪಿbe ರಾಮಚಂದ್ರ, ಇನ್ಸ್‌ಪೆಕ್ಟರ್ ಹರೀಶ್ ಬಾಬು, ಸಬ್ ಇನ್ಸ್‌ಪೆಕ್ಟರ್ ಮಧು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರಿದೆ. ಹೀಗಾಗಲೇ ಚುನಾವಣೆ ಆಯೋಗ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಕಳೆದ 6 ದಿನಗಳಲ್ಲಿ ಚುನಾವಣಾಧಿಕಾರಿಗಳು, ಪೊಲೀಸರು ಹಾಗೂ ಐಟಿ ಟೀಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗದು ಸೇರಿದಂತೆ ಬರೋಬ್ಬರಿ 47 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದ 6 ದಿನಗಳಲ್ಲಿ ನಗದು, ಡ್ರಗ್ಸ್, ಚಿನ್ನ ಸೇರಿದಂತೆ 47 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿದಾಗಿನಿಂದ ಫ್ಲೈಯಿಂಗ್ ಸ್ಕ್ವಾಡ್‌ಗಳು, ಎಸ್‌ಎಸ್‌ಟಿಗಳು, ಪೊಲೀಸ್ ಮತ್ತು ಐಟಿ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ, ದಾಖಲೆಗಳಿಲ್ಲದ 12,82,94,000 ರೂಪಾಯಿ ನಗದು ವಶ, 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ ವಶ, 41 ಲಕ್ಷ ಮೌಲ್ಯದ 79.44 ಕೆ.ಜಿ. ಮಾದಕ ವಸ್ತುಗಳ ವಶ, 6 ಕೋಟಿ 72 ಲಕ್ಷ ಮೌಲ್ಯದ 13.…
ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೊರಿದ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ ಹಾಗೂ ಆರ್‌ಸಿಬಿ ಮಾಜಿ ನಾಯಕ ಬ್ಯಾಟಿಂಗ್‌ಗೆ ಬಂದಾಗ ನನ್ನ ಮಕ್ಕಳನ್ನು ಬಡಿದೆಬ್ಬಿಸುತ್ತೇನೆಂದು ಹೇಳಿದ್ದಾರೆ. ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದಗ್ದ 172 ರನ್ ಗುರಿ ಹಿಂಬಾಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ್ದರು ಹಾಗೂ ಫಾಫ್ ಡು ಪ್ಲೆಸಿಸ್ ಜೊತೆ 148 ರನ್ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಆರ್‌ಸಿಬಿ ತಂಡಡ 8 ವಿಕೆಟ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಈ ಪಂದ್ಯದ ಗೆಲುವಿನ ಮೂಲಕ ಆರ್‌ಸಿಬಿ ತಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕ್ರಿಕ್‌ಬಝ್ ಜೊತೆ ಮಾತನಾಡಿದ ಮೈಕಲ್ ವಾನ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ತುಂಬಾ ಖುಷಿಯಾಗುತ್ತದೆ. ಕೊಹ್ಲಿ ಬ್ಯಾಟಿಂಗ್…
ಬೆಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟ್ಸ್‌ಮನ್‌ಗೆ ನೀಡುವ ಆರೇಂಜ್ ಕ್ಯಾಪ್ ರೇಸ್‌ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (2015, 2017, 2019) ಅಗ್ರಸ್ಥಾನದಲ್ಲಿದ್ದಾರೆ. ಸ್ವಘೋಷಿತ ಯೂರ್ನಿವರ್ಸ್ ಬಾಸ್ ಕ್ರಿಸ್ ಗೇಲ್ (2011, 2012) ನಂತರದ ಸ್ಥಾನದಲ್ಲಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 863 ರನ್ ಸಿಡಿಸಿ ಆರೇಂಜ್ ಕ್ಯಾಪ್ ಗೆದ್ದಿದ್ದರು. ಐಪಿಎಲ್ 2023 ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಬಟ್ಲರ್, 22 ಎಸೆತಗಳಲ್ಲಿ 7 ಮನಮೋಹಕ ಬೌಂಡರಿ, 3 ಸ್ಫೋಟಕ ಸಿಕ್ಸರ್ ಸಿಡಿಸಿ 54 ರನ್ ಚಚ್ಚುವ ಮೂಲಕ ಪಂದ್ಯ ಶ್ರೇಷ್ಠರಾಗಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ಮಾದರಿ ರನ್ ಹೊಳೆ ಹರಿಸಿ ಗೇಲ್ ನಂತರ ಸತತ 2ನೇ ಬಾರಿ ಆರೇಂಜ್ ಕ್ಯಾಪ್ ಗೆಲ್ಲಲು ಬಟ್ಲರ್ ಎದುರು ನೋಡುತ್ತಿದ್ದಾರೆ. ಆದರೆ ಡ್ಯಾಷಿಂಗ್ ಓಪನರ್ ಖ್ಯಾತಿಯ…
ಹೊಟ್ಟೆ (Stomach) ನೋವು (Pain) ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಮಕ್ಕಳು ಆಗಾಗ ಹೊಟ್ಟೆ ನೋವಿನಿಂದ ಬಳಲ್ತಿರುತ್ತಾರೆ. ಮಕ್ಕಳಿಗೆ ಮಾತ್ರವಲ್ಲ ಮಹಿಳೆಯರಿಗೂ ಅನೇಕ ಕಾರಣಗಳಿಂದ ಹೊಟ್ಟೆ ನೋವು ಬರುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಬರುವುದು ಸಾಮಾನ್ಯ. ಪುರುಷರಿಗಿಂತ ಮಹಿಳೆ (woman) ಯರು ಹೆಚ್ಚು ಹೊಟ್ಟೆ ನೋವಿನಿಂದ ಬಳಲುತ್ತಾರೆ. ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಇದರಲ್ಲಿ ಕೆಲವೊಮ್ಮೆ ಸೌಮ್ಯವಾದ ನೋವು ಮತ್ತು ಕೆಲವೊಮ್ಮೆ ತೀವ್ರವಾದ ನೋವು ಉಂಟಾಗುತ್ತದೆ. ಗ್ಯಾಸ್, ಹೊಟ್ಟೆ ಉಬ್ಬರ, ಅತಿಯಾಗಿ ತಿನ್ನುವುದು, ಅತಿಸಾರ, ಹೊಟ್ಟೆಯಲ್ಲಿ ಸುಡುವ ಅನುಭವ ಇತ್ಯಾದಿಗಳಿಂದ ಸೌಮ್ಯವಾದ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಇದು ತಾನಾಗಿಯೇ ಗುಣವಾಗುತ್ತದೆ. ಮತ್ತೆ ಅನೇಕ ಬಾರಿ ಮನೆ ಮದ್ದಿನಿಂದ ಕಡಿಮೆಯಾಗುತ್ತದೆ. ಆದ್ರೆ ಕೆಲವೊಮ್ಮೆ ತೀವ್ರವಾದ ಹೊಟ್ಟೆ ನೋವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ. ಯಾವುದೇ ಮನೆ ಮದ್ದು ಇದಕ್ಕೆ ನಾಟುವುದಿಲ್ಲ. ಹೊಟ್ಟೆ ನೋವು ತಡೆಯಲಾರದೆ ಬಿದ್ದು ಉಳ್ಳಾಡುವವರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿಯಾಗುವುದು ಅನಿವಾರ್ಯವಾಗುತ್ತದೆ. ಇದಲ್ಲೆ ಮುಟ್ಟಿನ ಸಮಸ್ಯೆ, ಗರ್ಭಾವಸ್ಥೆ, ಅಂಡಾಶಯದಲ್ಲಿನ…
ಬೀಜಿಂಗ್: ಚೀನಾ ದೇಶ ಮತ್ತೆ ಭಾರತದ ವಿರುದ್ಧವಾಗಿ ನಿಂತಿದೆ. ಚೀನಾ ಅರುಣಾಚಲ ಪ್ರದೇಶದಲ್ಲಿ ಹಕ್ಕು ಸಾಧಿಸುವ ಉದ್ದೇಶದಿಂದ ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಾಯಿಸಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೂರನೇ ಹಂತದಲ್ಲಿ ಹೆಸರುಗಳನ್ನು ಬದಲಿಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ 2017ರಲ್ಲಿ ಹಾಗೂ 15 ಸ್ಥಳಗಳಿಗೆ 2021ರಲ್ಲಿ ಚೀನಾ ಮರುನಾಮಕರಣ ಮಾಡಿತ್ತು. ಚೀನಾದ ಈ ನಡೆಯನ್ನು ಭಾರತವು ಈ ಹಿಂದೆಯೇ ತಳ್ಳಿಹಾಕಿದ್ದು ಇದೀಗ ಮತ್ತೆ 11 ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಭಾರತವು ಇತ್ತೀಚೆಗೆ ಗಡಿ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ G20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಚೀನಾ ಗೈರಾಗಿದ್ದು, ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಪರೋಕ್ಷ ಅಸಮಾಧಾನ ಹೊಂದಿದ್ದ ಚೀನಾ ಇದೀಗ ಚೀನಾದ ಪ್ರಮಾಣೀಕೃತ ಹೆಸರುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ 11…
ಕೇಪ್‌ಟೌನ್: ಪೂರ್ವ ಆಫ್ರಿಕಾದ ಬುರುಂಡಿಯಲ್ಲಿ ಚಿನ್ನದ ಗಣಿ ಕುಸಿದು ಹದಿನೈದು ಕಾರ್ಮಿಕರು ಮೃತಪಟ್ಟಿರುವ ಘಟನೆ ಸಿಬಿಟೋಕ್ ಪ್ರಾಂತ್ಯದ ಮಾಬಾಯಿ ಕಮ್ಯೂನ್‌ನಲ್ಲಿ ನಡೆದಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಚಿನ್ನದ ಗಣಿಯಲ್ಲಿ ಸಾಕಷ್ಟು ನೀರು ತುಂಬಿಕೊಂಡಿತ್ತು. ಈ ವೇಳೆ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗಣಿ ಕುಸಿದು ಪ್ರವಾಹ ಉಂಟಾಗಿ 15 ಮಂದಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಮಳೆಯ ಕಾರಣದಿಂದಾಗಿ ರುಗೊಗೊ ನದಿ ಉಕ್ಕಿ ಹರಿದು ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿದ್ದು, ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಹೊಂಡಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹೊರ ಕರೆತರಲು ರಕ್ಷಣಾ ತಂಡಕ್ಕೆ ಸಾಧ್ಯವಾಗದೆ, ಕಾರ್ಮಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುರುಂಡಿಯ ವಾಯುವ್ಯ ಮತ್ತು ಈಶಾನ್ಯದಲ್ಲಿ ಆಗಾಗ್ಗೆ ಇಂತಹ ಗಣಿಗಾರಿಕೆ ದುರಂತಗಳು ನಡೆಯುತ್ತಲೆ ಇರುತ್ತದೆ. ಅಲ್ಲಿ ಗಣಿಗಾರಿಕೆ ಮಾಡುವ ಜನರು ಅಧಿಕಾರಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಿದ್ದು,…
ಯಶ್ ನಟನೆಯ ರಾಜಾಹುಲಿ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದ ಹರ್ಷ ತಮಗೆ ಅಸಭ್ಯವಾಗಿ ಸಂದೇಶ ಕಳಿಸಿದ್ದಾರೆ ಎಂದು ಪೆಂಟಗನ್ ಸಿನಿಮಾದ ನಟಿ ತನಿಷಾ ಕುಪ್ಪಂಡ ಆರೋಪಿಸಿದ್ದಾರೆ. ತಾವು ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಬರೆದುಕೊಂಡಿದ್ದೆ. ಅದಕ್ಕೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು ಸ್ಮೈಲಿ ಇಮೇಜಿನೊಂದಿಗೆ ಸಂದೇಶ ಕಳಿಸಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಪೆಂಟಗನ್ ಸಿನಿಮಾದ ಸಂದರ್ಶನಕ್ಕೆಂದು ಬಂದ ಯೂಟ್ಯೂಬರ್ ತನಿಷಾ ಅವರಿಗೆ ನೀವು ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಸಿದ್ದರಿದ್ದೀರಾ ಎಂದು ಅಸಭ್ಯ ಪ್ರಶ್ನೆ ಕೇಳಿದ್ದರು. ಇದನ್ನು ಪ್ರತಿಭಟಿಸಿದ್ದ ನಟಿ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದು, ಆ ವಿಷಯವಾಗಿ ಮಾತನಾಡಲು ನಟಿ ಸುದ್ದಿಗೋಷ್ಠಿ ಕರೆದಿದ್ದರು. ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ. ಯಾರು ಹಾಗೆ ಮೆಸೇಜ್…
ನ್ಯೂಯಾರ್ಕ್: ಬೋಸ್ಟನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿಯಾಗಿ ಪರಿಣಾಮ 47 ವರ್ಷದ ಭಾರತೀಯ-ಅಮೆರಿಕನ್ ಡೇಟಾ ವಿಶ್ಲೇಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ 47 ವರ್ಷದ ವಿಶ್ವಚಂದ್ ಕೊಲ್ಲಾ ಮೃತ ದುರ್ದೈವಿ. ವಿಶ್ವಚಂದ್ ಇಲ್ಲಿನ ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ವರದಿಯ ಪ್ರಕಾರ, ವಿಶ್ವಚಂದ್ ಕೊಲ್ಲಾ ತಮ್ಮ ಸ್ನೇಹಿತನನ್ನು ಕರೆದುಕೊಂಡು ಹೋಗಲು ಬಂದಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕೊಲ್ಲಾ ಟಕೆಡಾ ಕಂಪನಿಯ ಜಾಗತಿಕ ಆಂಕೊಲಾಜಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿಶ್ವಚಂದ್ ನಿಧನಕ್ಕೆ ಟಕೆಡಾ ಇಂಡಸ್ಟ್ರೀಸ್ ಇಮೇಲ್‌ನಲ್ಲಿ ವಿಷಾದ ವ್ಯಕ್ತಪಡಿಸಿದೆ. ಏತನ್ಮಧ್ಯೆ, ಕೊಲ್ಲಾ ಅವರ ಸಂಬಂಧಿಕರು ಅವರ ಕುಟುಂಬಕ್ಕೆ ಸಹಾಯ ಮಾಡಲು US $ 750,000 ಸಂಗ್ರಹಿಸುವ ಗುರಿಯೊಂದಿಗೆ ‘ಗೋ ಫಂಡ್ ಮಿ’ ಪುಟವನ್ನು ಸ್ಥಾಪಿಸಿದ್ದು ಇದುವರೆಗೆ US $ 406,151 ಸಂಗ್ರಹಿಸಿದ್ದಾರೆ.