Author: Prajatv Kannada

ಬೀಜಿಂಗ್‌: ಚೀನಾ ದೇಶ ಮತ್ತೆ ಭಾರತದ ವಿರುದ್ಧವಾಗಿ ನಿಂತಿದೆ. ಚೀನಾ ಅರುಣಾಚಲ ಪ್ರದೇಶದಲ್ಲಿ ಹಕ್ಕು ಸಾಧಿಸುವ ಉದ್ದೇಶದಿಂದ ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಾಯಿಸಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೂರನೇ ಹಂತದಲ್ಲಿ ಹೆಸರುಗಳನ್ನು ಬದಲಿಸಿದೆ ಎಂದು ‘ಗ್ಲೋಬಲ್ ಟೈಮ್ಸ್‌’ ವರದಿ ಮಾಡಿದೆ. ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ 2017ರಲ್ಲಿ ಹಾಗೂ 15 ಸ್ಥಳಗಳಿಗೆ 2021ರಲ್ಲಿ ಚೀನಾ ಮರುನಾಮಕರಣ ಮಾಡಿತ್ತು. ಚೀನಾದ ಈ ನಡೆಯನ್ನು ಭಾರತವು ಈ ಹಿಂದೆಯೇ ತಳ್ಳಿಹಾಕಿದ್ದು ಇದೀಗ ಮತ್ತೆ 11 ಸ್ಥಳಗಳ ಹೆಸರನ್ನು ಬದಲಾಯಿಸಿದೆ. ಭಾರತವು ಇತ್ತೀಚೆಗೆ ಗಡಿ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ G20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಚೀನಾ ಗೈರಾಗಿದ್ದು, ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಪರೋಕ್ಷ ಅಸಮಾಧಾನ ಹೊಂದಿದ್ದ ಚೀನಾ ಇದೀಗ ಚೀನಾದ ಪ್ರಮಾಣೀಕೃತ ಹೆಸರುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ 11…

Read More

ಬಾಲಿವುಡ್ ನಟಿ ಜಾನ್ವಿ ಕಪೂರ್ ಹೆಸರು ಶಿಖರ್ ಪಹಾರಿಯಾ ಜೊತೆ ಕೇಳಿ ಬರುತ್ತಿದೆ. ಸಾಕಷ್ಟು ಸಮಯದಿಂದ ಈ ಜೋಡಿಗಳು ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಈ ಮಧ್ಯೆ ಇಬ್ಬರು ಒಟ್ಟಿಗೆ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಜಾನ್ವಿ ಹಾಗೂ ಶಿಖರ್ ದೂರ ದೂರು ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಹೊಂದಾಣಿಕೆ ಕಾರಣದಿಂದಾಗಿ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮತ್ತೆ ಈ ಜೋಡಿ ಒಂದಾಗಿದೆ. ಜಾನ್ವಿ ಕಪೂರ್ ಮತ್ತು ಶಿಖರ್ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಒಟ್ಟಿಗೆ ವಿದೇಶ ಪ್ರಯಾಣವನ್ನೂ ಮಾಡಿದ್ದ, ಅಂಬಾನಿ ಕುಟುಂಬದಲ್ಲಿ ನಡೆದ ಕಾರ್ಯಕ್ರಮದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ. ಬಾಯ್ ಫ್ರೆಂಡ್ ಜೊತೆ ಇಂದು ಬೆಳ್ಳಂಬೆಳಗ್ಗೆ ತಿರುಪತಿಗೆ ಬಂದಿದ್ದ ಜಾನ್ವಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಬ್ಬರೂ ತಿರುಪತಿಗೆ ಬಂದಿರುವ ಮತ್ತು ಪೂಜೆ ಸಲ್ಲಿಸಿರುವ ಫೋಟೋಗಳು ಸಾಮಾಜಿಕ…

Read More

ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಮಂಗಳವಾರ ಬೆಳಗ್ಗೆ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯ ಮಾಹಿತಿ ನೀಡಿದೆ.ಬೆಂಗಳೂರಿನಿಂದ ಹೊರಟಿದ್ದ ವಿಮಾನ ಸಂಖ್ಯೆ 6E897 ಇಂದು ಬೆಳಗ್ಗೆ 6.15ಕ್ಕೆ ತೆಲಂಗಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದಾಗ 137 ಪ್ರಯಾಣಿಕರಿದ್ದರು. ANI ವರದಿಗಳ ಪ್ರಕಾರ ಎಲ್ಲಾ 137 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು DGCA ಮಾಹಿತಿ ನೀಡಿದೆ.137 ಪ್ರಯಾಣಿಕರಿದ್ದ ಬೆಂಗಳೂರಿನಿಂದ ವಾರಾಣಸಿ ತೆರಳುತ್ತಿದ್ದ ಇಂಡಿಗೋ ವಿಮಾನ (6E897) ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ಬೆಳಗ್ಗೆ 6.15ಕ್ಕೆ ತೆಲಂಗಾಣದ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿಯಂತ್ರಕ ತಿಳಿಸಿದೆ.

Read More

ನವದೆಹಲಿ: ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಶ್ರಯ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುಡುಗಿದ್ದಾರೆ. ಮಾನಹಾನಿ ಪ್ರಕರಣದಲ್ಲಿ (Defamation Case) ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಸೂರತ್ ಜಿಲ್ಲಾ ನ್ಯಾಯಲಯದ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮೇಲ್ಮನವಿ ಅರ್ಜಿಯನ್ನು ಮೇ 3 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13ರ ವರೆಗೂ ಜಾಮೀನು ವಿಸ್ತರಿಸಿದೆ. ಜಾಮೀನು ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ʻಸತ್ಯವೇ ನನ್ನ ಅಸ್ತ್ರʼ ಎಂದು ಗುಡುಗಿದ್ದಾರೆ. ಅಲ್ಲದೇ ಇದು ʻಮಿತ್ರಕಾಲʼದ ವಿರುದ್ಧ ಪ್ರಜಾಪ್ರಭುತ್ವ ಉಳಿಸುವ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಶ್ರಯ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ…

Read More

ತೆಲುಗು ಚಿತ್ರರಂಗದ ನಟಿ ಹಾಗೂ ನಿರೂಪಕಿ ಅನಸೂಯ ಭಾರದ್ವಾಜ್ ಸದಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೆ ಇರುತ್ತಾರೆ. ಸೋಷಿಯಲ್ ಮೀಡಿಯಾದ ಸಖತ್ ಆಕ್ಟೀವ್ ಆಗಿರುವ ಅನಸೂಯ ಇದೀಗ ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನಸೂಯ ಭಾರದ್ವಾಜ್ ಪೋಸ್ಟ್ ಮಾಡುವ ಫೋಟೋಗಳಿಗೆ ಕೆಲ ದಿನಗಳಿಂದ ನೆಗೆಟಿವ್ ಕಾಮೆಂಟ್ ಬರುತ್ತಿವೆ. ಅದರಲ್ಲೂ ಕೆಲವರು ‘ಆಂಟಿ’ ನಟಿಯನ್ನು ಕರೆಯುತ್ತಿದ್ದಾರೆ. ತಮಗೆ ಆಂಟಿ ಎಂಬ ಪದ ಬಳಸಿದಕ್ಕೆ ಅನಸೂಯ ಭಾರದ್ವಾಜ್ ಗರಂ ಆಗಿದ್ದಾರೆ. ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಅವರು ಮಾತನಾಡಿದ್ದು, ಈ ರೀತಿಯಲ್ಲಿ ಕರೆದರೆ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ. ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಅನಸೂಯ…

Read More

ಭುವನೇಶ್ವರ್: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಜಗಳವಾಡಿದ ನಂತರ ತನ್ನ ಸ್ನೇಹಿತನ (Friend) ಗುಪ್ತಾಂಗವನ್ನು ಕತ್ತರಿಸಿದ ಘಟನೆ ಒಡಿಶಾದ (Odisha) ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ.ಭಗಬತ್ ದಾಸ್ (30) ಮತ್ತು ಆತನ ಸ್ನೇಹಿತ ಅಕ್ಷಯ್ ರೌತ್ (32) ಪೆಂಥಾ ಬೀಚ್‍ನಲ್ಲಿ (Beach) ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಕ್ಷಯ್ ಅಲ್ಲೇ ಇದ್ದ ಹರಿತವಾದ ಆಯುಧದಿಂದ ಭಗಬತ್ ದಾಸ್‍ನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾನೆ. ಅದಾದ ಬಳಿಕ ಅಕ್ಷಯ್ ಸ್ಥಳದಿಂದ ಓಡಿಹೋಗಿದ್ದಾನೆ. ಇಬ್ಬರು ಸ್ನೇಹಿತರು ಬೀಚ್‍ಗೆ ಹೋಗಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಪರಾರಿಯಾಗಿರುವ ಅಕ್ಷಯ್‍ಗಾಗಿ ಹುಡುಕಾಟ ನಡೆಸುತ್ತಿರುವಾಗ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಭಗಬತ್‍ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಘಟನೆಗೆ ಕುರಿತು ಪ್ರಕರಣ ದಾಖಲಾಗಿದೆ.

Read More

ನವದೆಹಲಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ, ಫ್ಯಾಷನ್‌ ತಾರೆ ಉರ್ಫಿ ಜಾವೇದ್ (Urfi Javed) ತನ್ನ ವಿಭಿನ್ನ ಉಡುಗೆಗಳಿಂದಲೇ ಫೇಮಸ್‌ ಆಗಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಯುವತಿಯೊಬ್ಬಳು ಬಿಕಿನಿ (Bikini) ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸಿರುವುದು ಕಂಡುಬಂದಿದೆ. ಎನ್‌ಸಿಎಂ ಇಂಡಿಯಾ ಕೌನ್ಸಿಲ್‌ ಫಾರ್‌ ಮೆನ್‌ ಅಫೇರ್ಸ್‌ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸಿರುವುದು ಕಂಡುಬಂದಿದೆ. ಯುವತಿ ದೆಹಲಿ ಮೆಟ್ರೋದಲ್ಲಿ (Delhi Metro Girl) ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್‌ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ತೊಟ್ಟಿರುವುದು ಕಂಡಿದೆ. ತಕ್ಷಣವೇ‌ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ನೆಟ್ಟಿಗರಿಂದ ಫುಲ್‌ ಕ್ಲಾಸ್‌: ದೆಹಲಿ ಯುವತಿಯ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದಾರೆ. ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಐಪಿಸಿ…

Read More

ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ, ರಾಜ್ಯಕ್ಕೆ ಮೋದಿ ಬರುವುದರಿಂದ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಚಾಮರಾಜನಗರ ವಿಧಾನಸಭಾ ಕ್ಚೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಟೀಕಾ ಪ್ರಹಾರ ನಡೆಸಿದರು.ಚುನಾವಣೆ ನೀತಿ ಸಂಹಿತೆ ಇರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಚುನಾವಣಾ ನೀತಿಸಂಹಿತೆ ಇರುವುದರಿಂದ ಅವರು ಬರುವ ಹಾಗಿಲ್ಲ. ಇದು ತಪ್ಪಾಗಿದೆ. ಅವರು ಹೇಗೆ ಬರುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಅಭಿವೃದ್ಧಿಗಾಗಿ ರಾಜ್ಯಕ್ಕೆ ಬರುವುದಿಲ್ಲ. ಅವರು ಬರುವುದು ಚುನಾವಣೆಗಾಗಿ ಮಾತ್ರ. ಮುಖ್ಯ ಮಂತ್ರಿಯವರು ಜಿಲ್ಲೆಗೆ ಎರಡು ಬಾರಿ ಬಂದು ಹೋದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೊಡಲಿಲ್ಲ. ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ಯಾಕೇಜ್ ಅನ್ನು ಘೋಷಣೆ ಮಾಡಿಲಿಲ್ಲ ಎಂದು ಹೇಳಿದರು.

Read More

ಮಂಡ್ಯ:ರೋಡ್​ಶೋ ವೇಳೆ ಕಲಾವಿದರತ್ತ ಡಿಕೆ ಶಿವಕುಮಾರ್ ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಮಾ.28ರಂದು ಮಂಡ್ಯದ ಬೇವಿನಹಳ್ಳಿಯಲ್ಲಿ ಡಿಕೆಶಿ ಹಣ ಎರಚಿದ್ದರಉ. ಚುನಾವಣಾ ಅಧಿಕಾರಿ JMFC ಕೋರ್ಟ್​​ನಲ್ಲಿ ದೂರು ದಾಖಲಿಸಿದ್ದರು. ದೂರು ಬಳಿಕ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಎನ್‌ಸಿ‌ಆರ್ ದಾಖಲಾಗಿತ್ತು. NCR ಬಳಿಕ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ನ್ಯಾಯಾಲಯದ ಆದೇಶದಂತೆ ನಿನ್ನೆ ಡಿಕೆಶಿ ವಿರುದ್ಧ FIR ದಾಖಲಾಗಿದೆ.

Read More

ಹುಬ್ಬಳ್ಳಿ: ಬೆಳಗಾವಿ (Belagavi) ರಾಜಕಾರಣ ಹುಬ್ಬಳ್ಳಿಗೆ (Hubballi) ಶಿಫ್ಟ್ ಆಗಿದ್ದು, ಒಂದೇ ಕಡೆ ಬಿಜೆಪಿ ಅತೃಪ್ತ ನಾಯಕರು ಕಾಣಿಸಿಕೊಂಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ಮತ್ತಿತರರ ಭೇಟಿ ಈಗ ತೀವ್ರ ಕುತೂಹಲ ಕೆರಳಿಸಿದೆ. ಮೊದಲಿಗೆ ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಬಿಜೆಪಿ ನಾಯಕರ ಸೀಕ್ರೆಟ್ ಮೀಟಿಂಗ್ ನಡೆಯಿತು‌. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹೇಶ್ ಕುಮಟಳ್ಳಿ ಟಿಕೆಟ್‌ಗಾಗಿ ಸಾಹುಕಾರ್ ರಮೇಶ ಜಾರಕಿಹೊಳಿ ಪಟ್ಟು ಹಿಡಿದರು. ಈ‌ ವೇಳೆ ಮಧ್ಯ ಪ್ರವೇಶ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಜಾರಕಿಹೊಳಿ,‌ ಸವದಿ ಮುನಿಸು ಅಂತ್ಯ ಮಾಡುವ ಪ್ರಯತ್ನ ಮಾಡಿದರು ಇಬ್ಬರ ನಡುವಿನ ಮುನಿಸು ಶಮನಕಾರಿ ಮಾಡುವಲ್ಲಿ ಯಶಸ್ವಿಯಾದ ಕೇಂದ್ರ ಸಚಿವ ಜೋಶಿ, ಮೀಟಿಂಗ್ ಮುಗಿಸಿ ಒಂದೇ ವಾಹನದಲ್ಲಿ ಜೋಶಿ, ಸಾಹುಕಾರ್, ಸವದಿ ವಿಮಾನ ನಿಲ್ದಾಣದಕ್ಕೆ ತೆರಳಿದ್ದು, ಮೂವರು ಒಟ್ಟಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಕರ್ನಾಟಕ…

Read More