Author: Prajatv Kannada

ಉಡುಪಿ: ಕುಂದಾಪುರ ವಾಜಪೇಯಿ ಎಂದೇ ಖ್ಯಾತರಾಗಿರುವ ಉಡುಪಿ ಜಿಲ್ಲೆ ಕುಂದಾಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ಕಣಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಕುಂದಾಪುರ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿರುವ ಅವರ ಈ ನಿರ್ಧಾರ ಅವರ ಅಪಾರ ಅಭಿಮಾನಿ ಬಳಗಕ್ಕೆ ಅಚ್ಚರಿಯನ್ನುಂಟು ಮಾಡಿದೆ. ಸೋಮವಾರ ಸಂಜೆ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಕುಂದಾಪುರ ಕ್ಷೇತ್ರದ ಜನ ನನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಗ್ರಾಮೀಣ ಭಾಗ ಹೆಚ್ಚಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ಸಿಕ್ಕಿದೆ. ಕುಂದಾಪುರ ಕ್ಷೇತ್ರದ ಶಾಸಕನಾಗಿ ನಿಷ್ಠೆಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಈ ಬಾರಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಕ್ಷೇತ್ರದ ಜನತೆ ನನ್ನನ್ನು ಐದು ಬಾರಿ ದಾಖಲೆಯ ಮತಗಳಿಂದ ಗೆಲ್ಲಿಸಿದ್ದಕ್ಕೆ ಧನ್ಯವಾದಗಳು. ಅಧಿಕಾರಿ ವರ್ಗ, ಕುಂದಾಪುರ ಜನತೆ, ಮಾಧ್ಯಮಗಳಿಗಳಿಗೂ ಧನ್ಯವಾದಗಳು. ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ ಅಭಿಮಾನಿಗಳಿಗೆ ನಾನು ಚಿರಋಣಿ. ನಾಲ್ಕು ಬಾರಿ ಕುಂದಾಪುರದ ಟಿಕೆಟ್ ನೀಡಿದ ಬಿಜೆಪಿಗೂ ಧನ್ಯವಾದಗಳು.…

Read More

ಶಿವಮೊಗ್ಗ: ಶಿಕಾರಿಪುರದಿಂದ ಸ್ಪರ್ಧೆಗೆ ತಂದೆ ಬಿಎಸ್​ವೈ ಸೂಚನೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರನೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಮಾತನಾಡಿದ ಅವರು, ಶಿಕಾರಿಪುರ ಮಾಜಿ ಸಿಎಂ ಯಡಿಯೂರಪ್ಪ ಸ್ಪರ್ಧಿಸುತ್ತಿದ್ದ ಕ್ಷೇತ್ರವಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ಯಡಿಯೂರಪ್ಪ ದೊಡ್ಡ ಕೊಡುಗೆ ನೀಡಿದ್ದಾರೆ. ವರಿಷ್ಠರು ಟಿಕೆಟ್ ಘೋಷಣೆ ಮಾಡಬೇಕಿದೆ. ಶಿಕಾರಿಪುರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಶಿಕಾರಿಪುರ ಮಾತ್ರವಲ್ಲ ರಾಜ್ಯದಲ್ಲೂ ಪಕ್ಷ ಸಂಘಟನೆ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

Read More

ಮಂಡ್ಯ: ಬಹಳ ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಆದಾಗಿಂದಲೂ ಇದೆಲ್ಲ ನಡೆಯುತ್ತಲೇ ಇದೆ. ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರೆಂದು ತಿಳಿಯುತ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಒಳಒಪ್ಪಂದ ಮಾಡಿಕೊಂಡರು. ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡು JDS ಸೋಲಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕುತಂತ್ರ ರಾಜಕಾರಣಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ವಿರುದ್ಧ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಂದ ಕುತಂತ್ರ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘ ಒಗ್ಗೂಡಿ ಜಿಲ್ಲೆಯ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಕುರಿತು ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಏನಾಗಿದೆ ಅಂತಾ ಈಗ ನೋಡುತ್ತಿದ್ದೀರಿ ಅಲ್ವಾ? ಎಲ್ಲಾ ಕ್ಷೇತ್ರದಲ್ಲೂ ಹೆಸರಿಗಾಗಿ ಬಹಿರಂಗವಾಗಿ ಜೆಡಿಎಸ್​ ಬಗ್ಗೆ ಮಾತಾಡ್ತಾರೆ. ಲೋಕಸಭಾ ಚುನಾವಣೆ ಸೋಲಿನ ಸೇಡನ್ನು ನಾವು ತೀರಿಸಿಕೊಳ್ಳುತ್ತೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ…

Read More

ದಾವಣಗೆರೆ: ನನ್ನ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದು ನಿಂತರು ನಾನು ಗೆಲ್ಲುವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಸ್​ಎಸ್ ಮಲ್ಲಿಕಾರ್ಜುನ (SS Mallikarjun) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕಳೆದ ಚುನಾವಣೆಯಲ್ಲಿ ಸ್ವಲ್ಪ ಜಾಸ್ತಿ ಹುಮ್ಮಸಿನಲ್ಲಿದ್ದ ಹಿನ್ನೆಲೆ ಸೋಲಾಗಿದೆ. ಈ ಸಲ ಹಾಗೇ ಆಗಲು ಸಾಧ್ಯವಿಲ್ಲ. ನಾವು ತಂದ ಕಾಮಗಾರಿಗಳೇ ಈಗ ನಡೆಯುತ್ತಿವೆ. ರಾಜ್ಯದಲ್ಲಿ ಹೇಗೆ 40 ಪರ್ಸೆಂಟ್ ಸರ್ಕಾರ ಇದೆ. ದಾವಣಗೆರೆಯಲ್ಲಿ ಸಹ ಇದೆ. ಇದರಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ರೀತಿ ನಡೆಸಲಾಗುತ್ತಿದೆ. ದಾವಣಗೆರೆ ಇನ್ನೂ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕು ನಾನು ನನ್ನ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಇತ್ತೀಚೆಗೆ ಹಾವೇರಿಯಲ್ಲಿ ಸ್ಟಷ್ಟಣೆ ನೀಡಿದ್ದರು. ಆ ಮೂಲಕ ಸಿಎಂ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ…

Read More

ಮಂಗಳೂರು: ಇಡೀ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬಿಜೆಪಿ (BJP) ಆವರಿಸಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನ್ನು (Congress) ಮಣಿಸಲು ಕಮಲ ಪಾಳಯಕ್ಕೆ ಸಾಧ್ಯವಾಗಿಲ್ಲ. 2013ರ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರ ಹೊರತುಪಡಿಸಿ ದಕ್ಷಿಣ ಕನ್ನಡದಲ್ಲಿ 7 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಆದರೆ 2018ರಲ್ಲಿ ಯು.ಟಿ. ಖಾದರ್ (UT Khader) ಉಳಿಸಿಕೊಂಡಿದ್ದ ಮಂಗಳೂರು ಕ್ಷೇತ್ರವನ್ನು ಹೊರತುಪಡಿಸಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. 1957ರಿಂದ 2008ರವರೆಗೆ, ಇಂದಿನ ಮಂಗಳೂರು ಕ್ಷೇತ್ರವನ್ನು ಉಳ್ಳಾಲ (Ullala) ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.1957ರಿಂದ ಮಂಗಳೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಏಕೆಂದರೆ ಈ ಅವಧಿಯಲ್ಲಿ ನಡೆದ 15 ಚುನಾವಣೆಗಳಲ್ಲಿ ಪಕ್ಷವು 12 ಬಾರಿ ಗೆದ್ದಿದೆ ಮತ್ತು 1994ರಲ್ಲಿ ಬಿಜೆಪಿಯ ಜಯರಾಮ ಶೆಟ್ಟಿ 24,412 ಮತಗಳನ್ನು ಪಡೆದು ಸ್ಥಾನವನ್ನು ಗೆದ್ದಿದ್ದರು. ಯು. ಟಿ. ಖಾದರ್ 2007ರಿಂದ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಇದೀಗ 2023ರ ಚುನಾವಣೆಯಲ್ಲಿ 5ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ.…

Read More

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡಬೇಕು? ಈ ವಿಚಾರ ಕಳೆದ 2 ತಿಂಗಳಿಂದ ಗೊಂದಲದ ಗೂಡಾಗಿದೆ. ಭವಾನಿ ಅವರಿಗೇ ಟಿಕೆಟ್ ಕೊಡಿ ಅಂತಾ ರೇವಣ್ಣ ಪಟ್ಟು ಹಿಡಿದಿದ್ದರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಅವರಿಗೇ ಟಿಕೆಟ್ ಸಿಗಬೇಕು ಅಂತಾ ಹೇಳ್ತಿದ್ದಾರೆ. ಅಂತಿಮವಾಗಿ ಈ ವಿಚಾರ ದೇವೇಗೌಡರ ಅಂಗಳ ತಲುಪಿದೆ. ಆದ್ರೆ, ದೇವೇಗೌಡರೇ ಮಧ್ಯ ಪ್ರವೇಶ ಮಾಡಿದ್ರೂ ಈ ವಿವಾದ ಬಗೆಹರಿದಿಲ್ಲ! ಅಂತಾದ್ದೇನಾಯ್ತು? ಈ ಗೊಂದಲ ಬಗೆಹರಿಯೋದಾದ್ರೂ ಹೇಗೆ? ಭವಾನಿಗೆ ಸಿಗದ ಟಿಕೆಟ್ ಸ್ವರೂಪ್‌ಗೂ ಸಿಗಲ್ಲ? ಏಪ್ರಿಲ್ 2 ಭಾನುವಾರ ರಾತ್ರಿ ದೇವೇಗೌಡರ ಮನೆಯಲ್ಲಿ ಕಾವೇರಿದ ಚರ್ಚೆ.. ವಾದ – ಪ್ರತಿವಾದ. ಇವೆಲ್ಲ ನಡೆದದ್ದು, ಕೇವಲ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ.. ಭವಾನಿ ಅವರಿಗೇ ಹಾಸನ ಕ್ಷೇತ್ರದ ಟಿಕೆಟ್ ಕೊಡಬೇಕು ಅನ್ನೋದು ರೇವಣ್ಣ ಆಗ್ರಹ. ಆದ್ರೆ, ಪಕ್ಷಕ್ಕಾಗಿ ದುಡಿದಿರುವ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ಸಿಗಬೇಕು ಅನ್ನೋದು ಕುಮಾರಸ್ವಾಮಿ ನಿಲುವು.. ಅಂತಿಮವಾಗಿ ದೇವೇಗೌಡರೂ ಕೂಡಾ ಸ್ವರೂಪ್ ಪರ ವಾಲುತ್ತಿದ್ದಂತೆಯೇ ರೇವಣ್ಣ…

Read More

ಮಹಾವೀರ ಜಯಂತಿ ಸೂರ್ಯೋದಯ: 06.14 AM, ಸೂರ್ಯಾಸ್ತ : 06.31 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ತ್ರಯೋದಶಿ 08:05 AM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಪುಬ್ಬಾ 09:36 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಗಂಡ 03:41 AM ತನಕ ನಂತರ ವೃದ್ಧಿ ಕರಣ: ಇವತ್ತು ತೈತಲೆ 08:05 AM ತನಕ ನಂತರ ಗರಜ 08:45 PM ತನಕ ನಂತರ ವಣಿಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ:09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 02.37 AM to 04.22 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:43 ವರೆಗೂ ಮೇಷ ರಾಶಿ: ದಂಪತಿಗಳಿಗೆ ಸಂತಾನ ಭಾಗ್ಯ,ಸಿದ್ಧ ಉಡುಪು ಮಾಲಕರಿಗೆ ಹಾಗೂ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ, ಕ್ಲಾಸ್ ವನ್ ಕಾಂಟ್ರಾಕ್ಟರ್ ಗೆ…

Read More

ಬೆಳಗಾವಿ: ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮಹೇಶ ಕುಮಟಳ್ಳಿ (Mahesh Kumathalli) ಬೆಳಗಾವಿಯಲ್ಲಿ (Belagavi) ಹೇಳಿದರು. ಅಥಣಿ (Athani) ಬಿಜೆಪಿ (BJP) ಟಿಕೆಟ್‍ಗಾಗಿ ಲಕ್ಷ್ಮಣ ಸವದಿ (Laxman Savadi) ಹಾಗೂ ಮಹೇಶ ಕುಮಟಳ್ಳಿ ನಡುವೆ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಲಕ್ಷ್ಮಣ ಸವದಿ ಅಥಣಿ ಟಿಕೆಟ್ ಕೇಳಿದ್ದಾರೆ ಎಂಬ ವರದಿಯನ್ನು ನಾನೂ ಗಮನಿಸಿದ್ದೇನೆ. ಆದರೆ ಅಥಣಿ ಟಿಕೆಟ್ ಬೇಕು ಎಂದು ಲಕ್ಷ್ಮಣ ಸವದಿ ಮಾಧ್ಯಮದ ಎದುರು ಹೇಳಿಲ್ಲ. ಲಕ್ಷ್ಮಣ ಸವದಿ ಟಿಕೆಟ್ ಕೇಳಿರುವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ ಎಂದರು. ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಜಾತಿವಾರು ಅಭಿಪ್ರಾಯ ಸಂಗ್ರಹ ವಿಚಾರವಾಗಿ, ಬಿಜೆಪಿ ಚಿಹ್ನೆ ಮೇಲೆಯೇ ಲಕ್ಷ್ಮಣ ಸವದಿ ಸಭೆ ಮಾಡುತ್ತಿದ್ದಾರೆ. ಅಥಣಿಯಲ್ಲಿ ಬಿಜೆಪಿ ಸಂಘಟನೆಗಾಗಿ ಲಕ್ಷ್ಮಣ ಸವದಿ ಶ್ರಮಿಸುತ್ತಿದ್ದಾರೆ. ನಾನೂ…

Read More

ಬೆಂಗಳೂರು: ಬಿಜೆಪಿ 40% ಸರ್ಕಾರ ಎನ್ನುವ ಕಾಂಗ್ರೆಸ್ ವಿರುದ್ಧ ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯವನ್ನೇ ಲೂಟಿ ಮಾಡಿದ್ದೇವೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಹೇಳುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ಆಧಾರವಿಲ್ಲದೆ ಈ ರೀತಿ ಮಾತನಾಡುತ್ತಾರೆ. ಹಾಗಾದರೆ ದೇಶದಲ್ಲಿ ಚುನಾವಣಾ ಆಯೋಗ, ಲೋಕಾಯುಕ್ತ ಹಾಗೂ ಯಾವುದೇ ಕೋರ್ಟ್​ನಲ್ಲಿ ದೂರು ಕೊಡಬೇಕಿತ್ತು. ಇವರ ಯೋಗ್ಯತೆಗೆ ಕೊಡೋಕೆ‌ ಆಗಿದೆಯಾ ಎಂದು ಪ್ರಶ್ನಿಸಿದರು. ಆಧಾರವಿಲ್ಲದೆ ಆರೋಪ ಮಾಡುವುದು ತಪ್ಪು. ನಾವು ನಿಮ್ಮ ಮೇಲೆ ಸಾಕಷ್ಟು ಆರೋಪ ಮಾಡಬಹುದು. ಇನ್ಮುಂದೆ ನೀವು ಏನೇ ಮಾತನಾಡಿದರೂ ಆಧಾರ ಕೊಡಬೇಕು. ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸ್ಪಷ್ಟ ಭರವಸೆ ಇಲ್ಲ. ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ. ಜೆಡಿಎಸ್​​ನವರು ಎಲ್ಲಿ ಬಿಜೆಪಿ ಜೊತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜೊತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ. ಹೀಗಾಗಿ ಪದೇ ಪದೆ ನಮ್ಮನ್ನ ಕೆಣಕುತ್ತಾರೆ. ನಾನು ಈ ಬಾರಿ 123 ಗುರಿಯಿಟ್ಟು ಹೊರಟಿದ್ದೇವೆ. ಇದು ನಿಮಗೆ ಹಾಸ್ಯವಾಗಿ ಲಘುವಾಗಿ ಕಾಣಬಹದು. ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಮೂಲಕ ತಲುಪಿದ್ದೇನೆ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ ಇರುವ ಬಗ್ಗೆ ಸಂಶಯ ಇಟ್ಟುಕೊಳ್ಳಬೇಡಿ. ಯಾರು ಮೈತ್ರಿ ಸರ್ಕಾರ ಕೆಡವಲು ಹಣ ಹೂಡಿಕೆ ಮಾಡಿದವರಿಗೆ, ಎರಡು ಪಕ್ಷದವರು ರಕ್ಷಣೆ ಕೊಡುತ್ತಿದ್ದಾರೆ. ಇದಕ್ಕಿಂತಲೂ ಉದಾಹರಣೆ ಬೇಕಾ?. ಮದ್ದೂರಿನಲ್ಲಿ ಕಾಂಗ್ರೆಸ್ ಗೆ…

Read More