ಬೆಂಗಳೂರು: ಬೆಂಗಳೂರಿನ ಹೆಚ್ಚಿನ ಜನ ತಮ್ಮ ಮೊಬೈಲ್ ಫೋನ್ ಗಳಿಂದ ಬೇರ್ಪಡಿಸಲಾಗದವರಾಗಿದ್ದಾರೆ, ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿಕ್ರಿಯಿಸಿದವರಲ್ಲಿ 91% ಜನರು ಮಲಗುವ ಮೊದಲು ಹಾಸಿಗೆಯಲ್ಲಿ ಫೋನ್ ಬಳಸುತ್ತಾರೆ ಎಂದು ಗೊತ್ತಾಗಿದೆ. ಶೇ. 38 ಜನ ಮಲಗಿರುವಾಗ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಿದರೆ, ಶೇ.29 ರಷ್ಟು ಜನರು ಕೆಲಸದಿಂದ ವಜಾಗೊಳಿಸಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂದು ಚಿಂತಿತರಾಗಿದ್ದಾರೆ. ಹಾಸಿಗೆ ತಯಾರಕ ವೇಕ್‌ಫಿಟ್‌ನಿಂದ ಫೆಬ್ರವರಿ 2022 ರಿಂದ ಮಾರ್ಚ್ 2023 ರವರೆಗೆ ಬೆಂಗಳೂರು ಮತ್ತು ದೇಶದ ಉಳಿದ ಭಾಗಗಳಲ್ಲಿ ನಡೆಸಿದ ‘ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್’ ಎಂಬ ಶೀರ್ಷಿಕೆಯ ನಿದ್ರೆಯ ಸಮೀಕ್ಷೆಯ ಅಂಕಿಅಂಶಗಳು ಇವಾಗಿವೆ. ಇದು 10,000 ಪ್ರತಿಸ್ಪಂದಕರನ್ನು ಒಳಗೊಂಡಿತ್ತು. ಸಮಗ್ರ ಸಮೀಕ್ಷೆಯ ಆರನೇ ಆವೃತ್ತಿ, ಬೆಂಗಳೂರಿನಲ್ಲಿ 4,000 ಪ್ರತಿಸ್ಪಂದಕರ ನಡುವೆ ವಯಸ್ಸಿನ ಗುಂಪುಗಳು ಮತ್ತು ವಿವಿಧ ಜನರ ಆಧಾರದಲ್ಲಿ ಸಮೀಕ್ಷೆ ನಡೆಸಲಾಯಿತು, ಇದು ಭಾರತದ ಸಿಲಿಕಾನ್ ವ್ಯಾಲಿಯಲ್ಲಿನ ಜನರ ನಿದ್ರೆಯ ಮಾದರಿಯನ್ನು ತೋರಿಸಿದೆ. ಶೇ. 26 ರಷ್ಟು ಜನರಿಗೆ ನಿದ್ರಾಹೀನತೆ 13 ತಿಂಗಳ ಸಮೀಕ್ಷೆಯು 61% ಪ್ರತಿಕ್ರಿಯಿಸಿದವರು ರಾತ್ರಿ…
Author: Prajatv Kannada
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಏಪ್ರಿಲ್ 3 ರಿಂದ ಚುನಾವಣಾ ಬಾಂಡ್‌ಗಳ (Electoral Bonds) ಮಾರಾಟ ಮಾಡಲು ಆರಂಭಿಸಿದೆ. ಏಪ್ರಿಲ್ 12ರ ವರೆಗೆ ಎಸ್ಬಿಐನ 29 ಶಾಖೆಗಳಲ್ಲಿ ಚುನಾವಣಾ ಬಾಂಡ್ಗಳು ಖರೀದಿಗೆ ಲಭ್ಯ ಇರಲಿವೆ. ಕೇಂದ್ರ ಹಣಕಾಸು ಸಚಿವಾಲಯವು ಮಾರ್ಚ್ 31ರಂದು ‘ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018’ ರ ಅಡಿಯಲ್ಲಿ ಚುನಾವಣಾ ಬಾಂಡ್‌ಗಳ 26ನೇ ಕಂತಿನ ಘೋಷಣೆ ಮಾಡಿತ್ತು. ಇದರಂತೆ, ಭಾರತೀಯ ನಾಗರಿಕರು, ಉದ್ಯಮಿಗಳು ಬಾಂಡ್ಗಳನ್ನು ಖರೀದಿಸಬಹುದಾಗಿದ್ದು, ರಾಜಕೀಯ ಪಕ್ಷಗಳು ತೆರೆದಿರುವ ಎಲೆಕ್ಟೋರಲ್ ಬಾಂಡ್ ಖಾತೆಗಳ ಮೂಲಕ ದೇಣಿಗೆ ನೀಡಬಹುದಾಗಿದೆ. ಬಾಂಡ್ಗಳು ಇಶ್ಯೂ ಮಾಡಿದ 15 ದಿನಗಳ ಅವಧಿಗೆ ಮಾನ್ಯತೆ ಹೊಂದಿರುತ್ತವೆ. ಈ ಅವಧಿಯ ಒಳಗಾಗಿ ರಾಜಕೀಯ ಪಕ್ಷಗಳು ಅವುಗಳನ್ನು ಪಡೆಯಬೇಕಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು, ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು ಘೋಷಿಸಿತ್ತು. ಈ ಹಿಂದಿನ ಮಾರಾಟದ ಅವಧಿಯಲ್ಲಿ, ಜನವರಿ ತಿಂಗಳಲ್ಲಿ ಎಸ್ಬಿಐ 308.76…
ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಗೊಂದಲದ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಕಾಂಗ್ರೆಸ್ ನಾಯಕತ್ವ ಮುಂದಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡಿದರೆ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಕಾಂಗ್ರೆಸ್ ನೋಟಿಸ್ ನಲ್ಲಿ ಏನಿದೆ? ಕರ್ನಾಟಕ ವಿಧಾನ ಸಭಾ ಚುನಾವಣೆ – 2023 ರ ಸಂಬಂಧಿಸಿದಂತೆ ಜಾಲತಾಣದಲ್ಲಿ (ಫೇಸುಕ್ ವಾಟ್ಸಾಪ್, ಇನ್ಸಾಗ್ರಾಂ, ಟ್ವಿಟರ್ ಮತ್ತು ಇನ್ನಿತರ ಮಾದ್ಯಮಗಳಲ್ಲಿ) ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡುವುದನ್ನು ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಗಂಭೀರವಾಗಿ ಪರಿಗಣಿಸಲಿದೆ. ಹಾಗೆ ಪೋಸ್ಟ್ ಮಾಡಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖ…
ವಿಶ್ವದ ಜನಪ್ರಿಯ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹೊರಹೊಮ್ಮಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಮೋದಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಹಾಗೂ ಅವರ ಜನಪ್ರಿಯತೆಯ ಮೂಲಕ ನಿರ್ಧಾರಿಸುವ ಜಾಗತಿಕ ನಿರ್ಧಾರ ಗುಪ್ತಚರ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅತ್ಯಂತ ಪ್ರೀತಿಸುವ ಮತ್ತು ಮೆಚ್ಚಿದ ನಾಯಕ ಎಂದು ಬರೆದುಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರಕಾರ, ಪ್ರಧಾನಿ ಮೋದಿ ಅವರು ಶೇಕಡಾ 76ರ ಅನುಮೋದನೆ ರೇಟಿಂ ಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನವನ್ನು ಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರೀತಿಪಾತ್ರ, ಮೆಚ್ಚುಗೆ ಮತ್ತು ವಿಶ್ವಾಸಾರ್ಹ ಜಾಗತಿಕ ನಾಯಕರಾಗಿ ಉಳಿದಿದ್ದಾರೆ ಎಂದು ಗೋಯಲ್ ತಮ್ಮ ಟ್ವೀಟ್‌ನಲ್ಲಿ ಸಮೀಕ್ಷೆಯನ್ನು ಹಂಚಿಕೊಂಡಿದ್ದಾರೆ.
ಕಾಲಿವುಡ್ ಸೂಪರ್ ಸ್ಟಾರ್ ನಯನತಾರ ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳನ್ನು ಪಡೆದಿದ್ದು ಇದೀಗ ಮಕ್ಕಳ ಸಂಪೂರ್ಣ ಹೆಸರನ್ನು ದಂಪತಿಗಳು ರಿವೀಲ್ ಮಾಡಿದ್ದಾರೆ. ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ದಂಪತಿಗಳು ನಾಮಕರಣ ಮಾಡಿದ್ದಾರೆ. ಆದರೆ ಮುದ್ದು ಮಕ್ಕಳ ಪೂರ್ತಿ ಹೆಸರು ಏನು ಎಂಬುದನ್ನು ಅವರು ಇಷ್ಟು ದಿನಗಳ ಕಾಲ ಬಹಿರಂಗಪಡಿಸಿರಲಿಲ್ಲ. ಈಗ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಕ್ಕಳ ಪೂರ್ಣ ಹೆಸರು ಏನು ಎಂಬುದನ್ನು ತಿಳಿಸಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಈ ವೇಳೆ ನಯನತಾರಾ ತಮ್ಮ ಮಕ್ಕಳ ಸಂಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದಾರೆ, ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್’ ಎಂದಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಜೋರಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ರಾಜಕೀಯಕ್ಕೆ ಕಲಾವಿದರ ಎಂಟ್ರಿಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಸುದೀಪ್ ರಾಜಕೀಯ ಎಂಟ್ರಿಯ ಕುರಿತು ಮಾಹಿತಿ ಹೊರ ಬಿದ್ದಿದೆ. ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಹಲವು ಪ್ರಮುಖ ಮುಖಂಡರ ಜೊತೆ ಒಡನಾಟ ಇದೆ. ಅವರನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ಕೂಡ ನಡೆದಿವೆ. ಮೂಲಗಳ ಪ್ರಕಾರ ಸುದೀಪ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ. ಸುದೀಪ್ ಅವರು ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರೋ ಅಥವಾ ಕೇವಲ ಬಿಜೆಪಿ ಪರವಾಗಿ ಪ್ರಚಾರ ರಾಯಭಾರಿ ಆಗುತ್ತಾರೋ ಎಂಬುದು ಏಪ್ರಿಲ್ 5ರಂದು ಬಹಿರಂಗ ಆಗಲಿದೆ. ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸುದೀಪ್ ಅವರಿಂದ ಬೆಂಬಲ ಪಡೆಯಬೇಕು ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿಯ ಉದ್ದೇಶ ಆಗಿತ್ತು. ಪಕ್ಷಕ್ಕೆ…
ಮಹದೇವಪುರ: ಏ.3-ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಕೈಕೊಂಡ ಜನೋಪಯೋಗಿ ಕಾರ್ಯಗಳನ್ನ ಮೆಚ್ಚಿ ಅನ್ಯ ಪಕ್ಷದ ಮುಖಂಡರು ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿರುವುದು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಲು ಉತ್ತೇಜನ ನೀಡುತ್ತಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು. ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ 100 ಕ್ಕೂ ಹೆಚ್ಚು ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಬಿಜೆಪಿ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಿಗಬೇಕಾದ ಎಲ್ಲಾ ಗೌರವ ಸಿಗುತ್ತದೆ ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ ನಾವೆಲ್ಲರೂ ಬಿಜೆಪಿಗರು, ಹೊಸಬರು ಹಳಬರು ಎಂದು ಭೇದಭಾವ ಇಲ್ಲದೇ ಪಕ್ಷ ಸಂಘಟನೆ ಮತ್ತು ಪಕ್ಷ ನೀಡುವ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸಬೇಕು ಎಂದರು. ನಮ್ಮ ಅಭಿವೃದ್ಧಿ ಮೆಚ್ಚಿ ಬಿದರಹಳ್ಳಿ ಪಂಚಾಯತಿ ಅಧ್ಯಕ್ಷ ಬಿ.ಜಿ.ರಾಜೇಶ್, ಕಣ್ಣೂರು ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್ ಹಾಗೂ ನಂಜುಂಡ ಅವರ ನೇತೃತ್ವದಲ್ಲಿ…
ಬೆಂಗಳೂರು: ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಕೆಲ ನಾಯಕರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2A ಮಿಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಹೋರಾಟದಲ್ಲಿ ಭಾಗಿಯಾಗಿದ್ದ ಕೆಲ ನಾಯಕರೇ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ಬಗ್ಗೆ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಯಾರು ಧಮ್ಕಿ ಹಾಕಿ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ನಮ್ಮ ಇಡೀ ಸಮುದಾಯಕ್ಕೆ ಗೊತ್ತಿದೆ. ಮತ್ತೆ ಧಮ್ಕಿ ಹಾಕಿದರೆ ಏನು ಮಾಡಬೇಕು ಎಂಬುದೂ ನಮಗೆ ಗೊತ್ತಿದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಲ್ಲ. ಇದು ಕಾಂಗ್ರೆಸ್ ನವರು ಮಾಡುತ್ತಿರುವ ಅಪಪ್ರಚಾರ ಎಂದು ಹೇಳಿದರು. ಹೋರಾಟದಲ್ಲಿ ಭಾಗಿಯಾಗಿದ್ದ ಕೆಲ ರಾಜಕೀಯ ನಾಯಕರೇ ಸ್ವಾಮೀಜಿಯವರಿಗೆ ಕರೆ ಮಾಡಿ ಈ ರೀತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ವಿಜಯಾನಂದ ಕಾಶಪ್ಪನವರ್ ಹಾಗೂ ವಿನಯ್ ಕುಲ್ಕರ್ಣಿ ವಿರುದ್ಧ ಬೆಲ್ಲದ್…
ಹುಬ್ಬಳ್ಳಿ: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಬಂಜಾರ ಸಮಾಜದ ಕೆಲವು ಕಿಡಗೇಡಿಗಳ ಮೂಲಕ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ನಾಯಕರಿಗೆ ನೈತಿಕತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ಧರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ಥನ ಇದ್ದರೆ ಮೀಸಲಾತಿ ಹೆಚ್ಚಳ ಮಾಡುವಂತೆ ಚಾಲೆಂಜ್ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಮೊದಲಿಗೆ ಕೇವಲ ಆರು ಜಾತಿಗಳಿದ್ದವು ಆದರೆ ಈಗ ಸುಮಾರು 101 ಜಾತಿಗಳಿವೆ ಈ ಜಾತಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಆದರೆ ಬಿಜೆಪಿ ಸರ್ಕಾರ ಅವರೆಲ್ಲರಿಗೂ ಅನ್ಯಾಯ ಮಾಡದಂತೆ ನ್ಯಾಯಯುತವಾಗಿ ಮೀಸಲಾತಿ ನೀಡಿದೆ ಎಂದರು. ಮೀಸಲಾತಿಗೆ ಮೊದಲು ವಿರೋಧ ಕೇಳಿ ಬಂದಿತ್ತು. ಆದರೆ ಈ ಮೀಸಲಾತಿ ವಿಚಾರ ಮನವರಿಕೆಯಾದ ಬೆನ್ನಲ್ಲೇ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಕೆಲ ಸಮುದಾಯವನ್ನು ಎತ್ತಿಕಟ್ಟಿ ದಾರಿ…
ಬಾಗಲಕೋಟೆ: ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ ಹಾಗು ಕ್ಷೇತ್ರಕ್ಕೆ ಬಾರದೆ ಸಚಿವರಿದ್ದಾಗಲೂ ಜನತೆಗೆ ಸಮರ್ಪಕವಾಗಿ ಸಹಕಾರ ನೀಡದ ಕಾರಣ ಕಳೆದ ಬಾರಿ ಸೋಲುಣಬೇಕಾಯಿತೆಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾಂವಿ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಗಂಭೀರವಾಗಿ ಆರೋಪಿಸಿದರು. ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೈದು ವರ್ಷಗಳಿಂದ ನಂತರ ನೆರೆ ಪ್ರವಾಹ, ಕೋವಿಡ್ ಸೇರಿದಂತೆ ಕಟ್ಟಕಡೆಯ ಜನರ ಸಂಕಷ್ಟಕ್ಕೆ ಬಾರದೆ ಪಕ್ಷವು ಹೀನಾಯ ಸ್ಥಿತಿ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಕ್ಷೇತ್ರದ ಜನತೆಗೆ ಸಹಾಯ-ಸಹಕಾರ ಮಾಡುವದರ ಜೊತೆಗೆ ಪಕ್ಷ ಬಲವರ್ಧನೆಗೆ ಸಾಕಷ್ಟು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಣ ಪಕ್ಷದ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡು ಸ್ಥಳೀಯ ಪ್ರಬಲ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಿದ್ದಲ್ಲಿ ಗೆಲುವು ನಿರಾಯಾಸವಾಗಲಿದೆ. ಇಲ್ಲವಾದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು ಸೊರಗಾಂವಿ ತಿಳಿಸಿದರು. ಪಕ್ಷದ ವರಿಷ್ಠರು ಅಳೆದು-ತೂಗಿ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತಿದ್ದರೂ ಸಿದ್ರಾಮಯ್ಯನವರಿಂದ ಟಿಕೆಟ್ ದೊರಕುವ ಸಾಧ್ಯತೆಯಿದ್ದು, ಒಬ್ಬರ ಓಲೈಕೆಗಾಗಿ ಕ್ಷೇತ್ರದ ಪ್ರಾಮಾಣಿಕ ಕಾರ್ಯಕರ್ತರ ಕೂಗನ್ನು ತಿರಸ್ಕರಿಸಬೇಡಿಯೆಂದರು. ಕಳೆದ ವಿಧಾನಸಭೆ…