ಬೆಳಗಾವಿ: ಅಥಣಿ ಕ್ಷೇತ್ರ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಜೊತೆಗೆ ಮಾತನಾಡಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ದ ಇರಬೇಕು ಅಂತಾ ಸೂಚಿಸಿದ್ದೇನೆ. ಬಹಿರಂಗವಾಗಿ ಯಾರೂ ಮಾತನಾಡಬೇಡಿ ಅಂತಾ ಹೇಳಿದ್ದೇನೆ. ಒಂದೇರಡು ಸಣ್ಣ ಪುಟ್ಟ ತೊಂದರೆಗಳಿವೆ ಅವು ಸರಿ ಮಾಡಿದ್ದೇನೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ನಾವು ಒಗ್ಗಟ್ಟು ಇಲ್ಲ ಎನ್ನುವ ಪ್ರಶ್ನೆ ಇಲ್ಲಾ ಎಂದರು. ಜಾರಕಿಹೊಳಿ ಸಹೋದರರ ಕ್ಷೇತ್ರ ಬದಲಾವಣೆ ಮಾಡಬೇಕೆನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಗುಪ್ತ ವಿಚಾರ ಅದನ್ನು ಪಾರ್ಟಿಯಲ್ಲಿ ಚರ್ಚೆ ಮಾಡುತ್ತೇವೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು. ಇನ್ನೂ ಜಿಲ್ಲೆಯ 18 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಚಿಂತಿಸಿದ್ದೇವೆ. ಜಿಲ್ಲೆಯ ಪ್ರತಿಯೊಬ್ಬರ ನಾಯಕರ ಜತೆ ಪ್ರತ್ಯೇಕವಾಗಿ ಚರ್ಚಿಸಿದ್ದೇನೆ ಎಂದು ಜೋಶಿ ಹೇಳಿದ್ದಾರೆ. ಏ.8 ಅಥವಾ 9ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಸನ್ನದ್ಧರಾಗಿ ಎಂದು ಜಿಲ್ಲಾ…
Author: Prajatv Kannada
ರಾಮನಗರ: ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಮಾವತ್ತೂರು ಗ್ರಾಮದ ಜನರು ಭಯ ಭಕ್ತಿ, ಶ್ರದ್ಧೆಯಿಂದ ಮಾವತ್ತೂರಮ್ಮ ದೇವಿಯನ್ನು (Mavatturamma Devi) ಪೂಜಿಸುತ್ತಾ ಬರುತ್ತಿದ್ದಾರೆ. ಆದರೆ ಇಂದು ಬೆಳಗ್ಗೆ ನಡೆಯಬಾರದ ಘಟನೆಯೊಂದು ನಡೆದೇ ಹೋಗಿದೆ. ದೇವಿಯ ಮೆರವಣಿಗೆ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಹೌದು, ಮಾವತ್ತೂರಮ್ಮ ದೇವಿಯ ಮೆರವಣಿಗೆ ವೇಳೆ ದೇವಿಯ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇದಕ್ಕೂ ಮುನ್ನ ಅಚ್ಚರಿಯ ಘಟನೆಯೊಂದು ಅಲ್ಲಿ ನಡೆದಿದೆ. ಅದೇನೆಂದರೆ, ಮಾವತ್ತೂರಮ್ಮ ದೇವಿಯ ಮೆರವಣಿಗೆ ನಡೆಯುತ್ತಿದ್ದಾಗ ಮಹಿಳೆಯ ವಿಚಿತ್ರ ಕುಣಿತ. Video Player 00:00 00:29 ಮಾವತ್ತೂರಮ್ಮ ದೇವಿಯ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮಹಿಳೆ ವಿಚಿತ್ರವಾಗಿ ಕುಣಿಯಲು ಆರಂಭಿಸಿದ್ದಾಳೆ. ಇದನ್ನ ನೋಡಿದ ಮಾವತ್ತೂರಮ್ಮ ದೇವಿಯ ಅರ್ಚಕ ನಾಗರಾಜು (55) ಮಹಿಳೆಗೆ ಬೆತ್ತದಿಂದ ಹೊಡೆಯುತ್ತಾರೆ. ಈ ವೇಳೆ ಮಹಿಳೆ ಅರ್ಚಕನ ಕಾಲಿಗೆ ಬೀಳುತ್ತಿದ್ದಂತೆ ಅರ್ಚಕ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ತಕ್ಷಣ ಅರ್ಚಕರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆ ನಾಗರಾಜು ಕೊನೆಯುಸಿರೆಳೆದಿದ್ದಾರೆ.
ಬೀದರ್: ಔರಾದ್ (Aurad) ಕ್ಷೇತ್ರದಲ್ಲಿ ಜೆಡಿಎಸ್ (JDS) ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದ್ದಾಗ ಪ್ರಭು ಚವ್ಹಾಣ್ (Prabhu Chauhan) ಬೆಂಬಲಿಗರು ಜೆಡಿಎಸ್ ಪಕ್ಷದ ಶಾಲು ಸುಟ್ಟು ಹಾಕಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಔರಾದ್ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜೈಸಿಂಗ್ ರಾಠೋಡ್ (Jaisingh Rathod) ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೀದರ್‌ನಲ್ಲಿ (Bidar) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ ಕ್ಷೇತ್ರದಲ್ಲಿ ಪಂಚರತ್ನ ಯೋಜನೆ ಜಾಗೃತಿ ಮೂಡಿಸುತ್ತಿದ್ದು, ಈ ವೇಳೆ ಮಾಳೆಗಾಂವ್ ತಾಂಡಕ್ಕೆ ಹೋದಾಗ ಪ್ರಭು ಚವ್ಹಾಣ್ ಬೆಂಬಲಿಗರು ಮೋದಿ ಮೋದಿ (Narendra Modi) ಎಂದು ಕೂಗಿದ್ದಾರೆ ಎಂದು ಹೇಳಿದರು. ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಲ್ಲೆ ಮಾಡಲು ಮುಂದಾದಾಗ ನಾವು ಅಲ್ಲಿಂದ ಬೇರೆ ಗ್ರಾಮಕ್ಕೆ ಹೋದೆವು. ನಾವು ಗ್ರಾಮದಿಂದ ಹೋದ ಬಳಿಕ ಬಿಜೆಪಿ (BJP) ಕಾರ್ಯಕರ್ತರು ಜೆಡಿಎಸ್ ಪಕ್ಷದ ಶಾಲುಗಳನ್ನು ಸುಟ್ಟು ಹಾಕಿದ್ದಾರೆ. ಅಲ್ಲದೇ ಜೆಡಿಎಸ್ ಶಾಲುಗಳನ್ನು ಸುಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದರು. ಈ ವೀಡಿಯೋಗಳನ್ನು ಚವ್ಹಾಣ್ ಬೆಂಬಲಿಗರು ನಮಗೂ…
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಪಕ್ಷದ ದೊಡ್ಡ ಬೆಂಬಲ ಇತ್ತು. ನನ್ನ ತಾಯಿ ಸಹ ಜಿಲ್ಲಾ ಪಂಚಾಯಿತಿಗೆ ಚುನಾವಣೆಗೆ ನಿಲ್ಲುವಾಗ ಕಾಂಗ್ರೆಸ್ನಿಂದ ನಿಲ್ಲುತ್ತೇನೆ ಎಂದಿದ್ದರು. ಅಂದು ಅವರನ್ನು ನಾನು ಮತ್ತು ನನ್ನ ಅಣ್ಣ ಸೇರಿ ಗೆಲ್ಲಿಸಿಕೊಂಡಿದ್ದೆವು. ನಾನು ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದೆ. 1997ರಲ್ಲಿ ನನಗೆ ಡಿಕೆಶಿ ಟಿಕೆಟ್ ಕೊಡಿಸಿದರು. ಅನಿವಾರ್ಯವಾಗಿ ಜಾತಿ ಲೆಕ್ಕಾಚಾರದ ಹಿನ್ನೆಲೆ 2013ರಲ್ಲಿ ನನ್ನನ್ನು ಸೋಲಿಸುವ ಕಾರ್ಯ ಆಯಿತು. ಕಾಂಗ್ರೆಸ್ ರಾಜ್ಯ ನಾಯಕರು ನನ್ನನ್ನು ಮನೆ ಬಾಗಿಲಿಗೆ ಕರೆಸಿ ಟಿಕೆಟ್ ಕೊಡಿಸಿದ್ದರು. ಕಾಂಗ್ರೆಸ್ ಎಲ್ಲಾ ರಾಜ್ಯ ನಾಯಕರ ಪ್ರೀತಿ ನನ್ನ ಮೇಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಉತ್ತಮ ಕನಸುಗಾರರು. ಡಿಕೆಶಿ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಲು ಶ್ರಮಿಸಿದ್ದಾರೆ. ನಾನು ಕಳೆದುಕೊಂಡಿದ್ದ ಜಾಗಕ್ಕೆ ವಾಪಸ್ ಬಂದು ಹುಡುಕಿ ಗೌರವ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ಇಡೀ ಚಿತ್ರದುರ್ಗ…
ಬೆಂಗಳೂರು: ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಗರಿಗೆದರಿದೆ. ಅಸಮಾಧಾನಗೊಂಡ ಶಾಸಕರು, ಮಾಜಿ ಶಾಸಕರು, ಬೇರೊಂದು ಪಕ್ಷಕ್ಕೆ ನೆಗೆಯುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಇದು ಪ್ರತಿನಿತ್ಯ ಕಂಡುಬರುತ್ತಿದೆ. ಕೂಡ್ಲಿಗೆ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ತಮ್ಮಅಪಾರ ಬೆಂಬಲಿಗರೊಂದಿಗೆ ಗೋಪಾಲಕೃಷ್ಣ ಕೈ ಹಿಡಿದರು. ಡಿಕೆ ಶಿವಕುಮಾರ್ ಅವರು ಪಕ್ಷದ ಧ್ವಜವನ್ನು ನೀಡಿ, ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ದಿನೇಶ್ ಗೂಳಿಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿ ಚಿತ್ರದುರ್ಗ ಮೊಳಕಾಲ್ಮುರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಬೆಂಬಲಿಗರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಜೈಕಾರ ಹಾಕಿ ಯೋಗೇಶ್ ಬಾಬುಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿವಕುಮಾರ್, ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ಆಗುತ್ತಿದೆ. ನಮ್ಮ ನಡೆ ಅಧಿಕಾರದ ಕಡೆಗೆ ಇದೆಎನ್ನೋದಕ್ಕೆ ಜನರುತೋರಿಸುತ್ತಿರುವ ಪ್ರೀತಿ, ಬಿಜೆಪಿ ತೊರೆದು ನಮ್ಮ ಪಕ್ಷದ ಬಾಗಿಲು ತಟ್ಟುತ್ತಿರುವ ಅನೇಕ ನಾಯಕರೇ ಇದಕ್ಕೆ ಸಾಕ್ಷಿ. ಎನ್ ವೈ ಗೋಪಾಲಕೃಷ್ಣ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮಲ್ಲಿಗೆ ಬಂದಿದ್ದಾರೆ. ಏ.9ರಂದು ತಾರೀಖು ಶಿವಲಿಂಗೇಗೌಡ ತಮ್ಮ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಸೇರುತ್ತಾರೆ. ದಲಿತ ಕವಿ ಸಿದ್ದಲಿಂಗಯ್ಯ ಮಾತು ನೆನಪಾಗ್ತದೆ: ಹೋರಾಟದ ಸಾಗರ ಸಾವಿರಾರು ನದಿಗಳು ಸಾಲು ಎಲ್ಲ ನದಿಗಳು ಸಮುದ್ರಕ್ಕೆ ತಲುಪುತ್ತದೆ. ಕಾಂಗ್ರೆಸ್ ಅಂದರೆ ಹೋರಾಟದ ಸಾಗರ, ಇದಕ್ಕೆ ನಾಯಕರು ಬಂದು ನದಿಗಳಂತೆ ಸೇರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ದ ಜನ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ನಾಲ್ಕು ಐದು ಬಾರಿ…
ಮಂಡ್ಯ: ಯಾರದ್ದೋ ಮೀಸಲಾತಿ ಕಿತ್ತು ಶೇ.2 ಮೀಸಲಾತಿ ಹೆಚ್ಚಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ ಕೊಟ್ಟಂತಾಗಿದೆ. ಒಕ್ಕಲಿಗರು (Okkaliga Reservation) ಬೇರೆಯವರ ಅನ್ನವನ್ನ ಕಿತ್ತು ತಿನ್ನುವವರಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ (Nanjavadhootha Swamiji) ಅಸಾಮಾಧಾನ ಹೊರಹಾಕಿದ್ದಾರೆ. ಒಕ್ಕಲಿಗರಿಗೆ ಶೇ.4 ರಿಂದ ಶೇ.6 ಗೆ ಮೀಸಲಾತಿ ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಒಕ್ಕಲಿಗರು ರಾಜ್ಯದ ಜನಸಂಖ್ಯೆಯಲ್ಲಿ ಶೇ.16 ಇದ್ದಾರೆ. ನಾವು ಕೇಳಿದ್ದು ಶೇ.4 ರಿಂದ ಶೇ.16 ಗೆ ಮೀಸಲಾತಿ ಹೆಚ್ಚಳ ಮಾಡಿ ಅಂತ. ಆದರೆ ಯಾರದ್ದೋ ಶೇ.2 ಕಿತ್ತು ಶೇ.6 ಗೆ ಮೀಸಲಾತಿ ಏರಿಕೆ ಮಾಡಿದ್ದಾರೆ. ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ನಾಡಿನ ಒಕ್ಕಲಿಗ ಮಕ್ಕಳು ತಾವು ದುಡಿದಿದ್ದನ್ನ ಹಂಚಿ, ಉಳಿದ್ರೆ ತಾವು ತಿನ್ನಬೇಕು ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ ಎಂದರು. ರಾಜ್ಯದಲ್ಲಿ ಶೇ.16 ಒಕ್ಕಲಿಗರಿದ್ದು 4 ಮೀಸಲಾತಿ ಕೊಟ್ಟಿದ್ರಿ. ಅದರಲ್ಲಿ ಹತ್ತಾರು ಸಮುದಾಯ ಸೇರಿಸಿದ್ದು, ಒಕ್ಕಲಿಗರಿಗೆ ಶೇ.1.5 ನಿಂದ ಶೇ.2 ಮೀಸಲಾತಿ…
ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ಪ್ರಕಟವಾಗಿದ್ದು, ಇದೇ ಮೇ.10ರಂದು ಮತದಾನ ನಡೆಯಲಿದೆ. ಇನ್ನು ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಏಪ್ರಿಲ್ 19ರಂದು ನಾಮಪತ್ರ (Nomination) ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ಹೌದು…ಇಂದು(ಏಪ್ರಿಲ್ 03) ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಏಪ್ರಿಲ್ 19ರಂದು ನಾನು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಹಾಗೇ ಏಪ್ರಿಲ್ 20 ಹಾಗೂ 21ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಚನ್ನಪಟ್ಟಣ ಕ್ಷೇತ್ರದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ. ರಾಮನಗರ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ನಿಮ್ಮ ಮನೆ ಮಗನನ್ನ ಬಿಟ್ಟು ಬೇರೆ ಯಾರೂ ಸಿಎಂ ಆಗುವುದಕ್ಕೆ ಆಗಲ್ಲ ಎಂದು ಹೇಳಿದರು. ಈಗಾಗಲೇ ರಾಜ್ಯದಲ್ಲಿ ಪಂಚರತ್ನ ರತಯಾತ್ರೆ ಯಶಸ್ವಿಯಾಗಿದ್ದು, ಎಲ್ಲಾ ಭಾಗದಲ್ಲೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಕೆಲ ಭಿನ್ನಾಭಿಪ್ರಾಯ…
ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರ (Karkala Vidhanasabha Contituency) ದಲ್ಲಿ ಬಿಜೆಪಿ (BJP) ಹಾಗೂ ಮುತಾಲಿಕ್ ನಡುವೆ ಮುಟ್ಟಾಳ ವಾರ್ ಶುರುವಾಗಿದೆ. ಚುನಾವಣೆ ಘೋಷಣೆಗೆ ಮುನ್ನ ಆರೋಪಗಳ ಸುರಿಮಳೆ ಮಾಡುತ್ತಿದ್ದ ಮುತಾಲಿಕ್‍ಗೆ ಬಿಜೆಪಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಸುನಿಲ್ ಕುಮಾರ್ (Sunil Kumar) ಗೆ ಮತ ಹಾಕಿ ಮುಟ್ಟಾಳ ರಾಗಬೇಡಿ ಎಂಬ ಮುತಾಲಿಕ್ (Pramod Muthalik) ಪೋಸ್ಟರ್ ವಿರುದ್ಧ ಕಮಲ ಪಡೆ ತಿರುಗಿಬಿದ್ದಿದೆ. ಹೌದು. ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರ ಟಾಕ್‍ಫೈಟ್ ಜೋರಾಗಿದೆ. ಈ ಮಧ್ಯೆ ಕಾರ್ಕಳ ಅಖಾಡದಲ್ಲಿ ಪೋಸ್ಟರ್ ವಾರ್ ತಾರಕಕ್ಕೇರಿದೆ. ಕಾರ್ಕಳದಲ್ಲೀಗ ಪ್ರಮೋದ್ ಮುತಾಲಿಕ್ ಹಾಗೂ ಸಚಿವ ಸುನೀಲ್ ಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ. ಹೀಗಂತಾ ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ. ನೂರಾರು…
ಬಾಗಲಕೋಟೆ: ಹಿಂದೆ ಕೆಲವರು ನನ್ನನ್ನು ಫುಟ್ಬಾಲ್ನಂತೆ ಬಳಸಿಕೊಂಡರು. ನನ್ನವರು ಅಂತ ನಂಬಿ ನೇರ ನಡೆನುಡಿ ರಾಜಕಾರಣ ಮಾಡಿದ್ದೇನೆ. ಅದನ್ನೇ ಕೆಲವರು ದುರುಪಯೋಗ ಮಾಡಿಕೊಂಡರು ಎಂದು ಕೆಆರ್ಪಿಪಿ ಪಕ್ಷದ ಸ್ಥಾಪಕ, ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhan Reddy) ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸಮಸ್ಯೆಯಲ್ಲಿ ಸಿಲುಕಿಸಲು ಕೆಲ ನಾಯಕರು ಯತ್ನಿಸುತ್ತಿದ್ದಾರೆ. ನನ್ನನ್ನು ಸಮಸ್ಯೆಗೆ ಸಿಲುಕಿಸಲು ಬರುವವರಿಗೆ ಜನ ಪಾಠ ಕಲಿಸುತ್ತಾರೆ. ಫುಟ್ಬಾಲ್ ಮಾದರಿಯಲ್ಲಿ ಆಡಿ ಮತದಾರರು ಪಾಠ ಕಲಿಸುತ್ತಾರೆ ಎಂದು ಹೇಳಿದರು. ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಹೆರಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ಹೇಮರೆಡ್ಡಿ ಮಲ್ಲಮ್ಮನ ದರ್ಶನ ಪಡೆದು ಬಳಿಕ ಮಾತನಾಡಿದ ಅವರು ರಾಜ್ಯದ ಜನರೇ ಅವರನ್ನು ಪುಟ್ ಬಾಲ್ ಆಡಿ. ನನ್ನ ಪುಟ್ ಬಾಲ್ ಚಿಹ್ನೆಗೆ ಮತ ಹಾಕಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮವರೇ ಅಂತಲ್ಲ ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ, ನಾನು ಒಂದು ಕಡೆ ಆದರೆ, ಎಲ್ಲರೂ ಒಂದು ಕಡೆ ಆಗಿ ಪುಟ್ವಾಲ್ ತರಹ ಆಡಿದರು ಎಂದರು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು…