ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ಬಿಕ್ಕಟ್ಟಿನ ಬಗ್ಗೆ ಯುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಮಿಟಿ ಇದೆ. ಅವರ ಸಲಹೆಗಳನ್ನು ಪರಿಗಣಿಸಿ ಅಂತಿಮವಾಗಿ ದೇವೇಗೌಡರೇ ಹಾಸನ ಟಿಕೆಟ್ ಫೈನಲ್ ಮಾಡ್ತಾರೆ. ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಭವಾನಿ ರೇವಣ್ಣ ಅವರು ಪಕ್ಷೇತರವಾಗಿ ಕಣಕ್ಕಿಳಿಯಲು ಚಿಂತಿಸುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಆ ಬಗ್ಗೆ ನನಗೇನು ಮಾಹಿತಿ ಇಲ್ಲ. ಕುಮಾರಣ್ಣನಿಗೆ ಕೇಳಬೇಕು ಇದನ್ನ, ಅವರೇ ಸೂಕ್ತ ಇದಕ್ಕೆಲ್ಲಾ ಉತ್ತರ ನೀಡೋಕೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ದಿವಂಗತ ಪ್ರಕಾಶಣ್ಣ ನಾಲ್ಕು ಬಾರಿ ಶಾಸಕರಾಗಿ ಜನ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬಕ್ಕೆ ಹಾಸನದಲ್ಲಿ ಒಳ್ಳೆಯ ಹೆಸರು ಇದೆ. ಸ್ವರೂಪ್ ಪ್ರಕಾಶ್ ಕೂಡ ಯುವಕರಿದ್ದಾರೆ. ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದ ನಿಖಿಲ್ ಸ್ವರೂಪ್ ಪ್ರಕಾಶ್ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ.
Author: Prajatv Kannada
ಬೆಂಗಳೂರು: ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಪರವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಅನೇಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆದರೆ ನಮಗೆ ಅವಕಾಶ ಕೊಡಲು ಸಾಧ್ಯವಾಗುತ್ತಿಲ್ಲ. ಕಷ್ಟ ಕಾಲದಲ್ಲಿ ಪಕ್ಷದ ಜತೆಗಿದ್ದ ಯೋಗೀಶ್ ಬಾಬು ಬಗ್ಗೆ ಗಮನದಲ್ಲಿದೆ ಎಂದರು. ಶಿವಲಿಂಗೇಗೌಡರು ರಾಜಿನಾಮೆ ಕೊಟ್ಟಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳಲು ಕೋರಿದ್ದಾರೆ. ಅವರಿಗೆ ಅರ್ಜಿ ಹಾಕಲು ಹೇಳಿದ್ದೇವೆ. ಭ್ರಷ್ಟಾಚಾರ ಬೆಲೆ ಏರಿಕೆ ವಿರುದ್ಧ ಜನರು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎನ್‌ವೈ ಹನುಮಂತಪ್ಪ ದಡ್ಡರಲ್ಲ. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ ಎಂದರು. ಇದೇ ವೇಳೆ ಸಾತನೂರಿನಲ್ಲಿ ಕಸಾಯಿಖಾನೆಗೆ ಹಸು ಸಾಗಾಣಿಕೆ ವೇಳೆ ವ್ಯಕ್ತಿ ಸಾವು ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದಲ್ಲಿ ನೈತಿಕ ಪೊಲೀಸ್ ಗಿರಿಗೆ ಒಂದು ಬಲಿಯಾಗಿದೆ. ಎಫ್ಐಆರ್ ದಾಖಲಾಗಿದ್ದು, ಬಿಜೆಪಿ ಜತೆ ಲಿಂಕ್ ಇರುವವರ ಮೇಲೆ ಪ್ರಕರಣ ದಾಖಲಾಗಿದೆ. ನೈತಿಕ ಪೊಲೀಸ್ ಗಿರಿಗೆ…
ಬೆಂಗಳೂರು: ಕುಡಿದು ಪಂಚಮಸಾಲಿ ಶ್ರೀ (Panchamsali Shree) ಗಳಿಗೆ ಕರೆ ಮಾಡಿ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್ (CC Patil) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ (BJP) ಯಿಂದ ಸಿಎಂ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕೊಟ್ಟಿದ್ದಕ್ಕೆ ಸಿಎಂ ಹಾಗೂ ಕೆಂದ್ರಕ್ಕೆ ಅಭಿನಂದನೆ ಸಲ್ಲಿಸ್ತೀವಿ. ಮೃತ್ಯುಂಜಯ ಸ್ವಾಮೀಜಿ (Jaya Mrityunjaya swamiji) 750 ಕಿ.ಮೀ ಪಾದಯಾತ್ರೆ ಮಾಡಿದ್ರು. ಹರಿಹರದಿಂದ ವಚನಾನಂದ ಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದರು. ಯಾವುದೇ ರಾಜಕಾರಣಕ್ಕೆ ಮೀಸಲಿರಿಸದೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸೋದಕ್ಕೆ ಹೋರಾಟ ಮಾಡಿದರು. ಸಮಾಜವನ್ನ ಒಗ್ಗೂಡಿಸಿದ ಕೀರ್ತಿ ಮೃತ್ಯುಂಜಯಸ್ವಾಮೀಜಿಗೆ ಸಲ್ಲುತ್ತದೆ ಎಂದರು. ಎರಡು ವರ್ಷ ಮೂರು ತಿಂಗಳು ಹಗಲು ರಾತ್ರಿ ಹೋರಾಟ ಮಾಡಿದ್ದಾರೆ. ನಮ್ಮಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕಾನೂನು ತಜ್ಞರು ಹಿಂದುಳಿದ ವರ್ಗದ ಸಮಿತಿಯಿಂದ ವರದಿ ಪಡೆದು ಒಕ್ಕಲಿಗ ಸಮುದಾಯಕ್ಕೆ 2 ಸಿ ಪಂಚಮಸಾಲಿಗೆ 2 ಡಿ ಕೊಟ್ಟಿದ್ದಾರೆ. ಈ ಹೋರಾಟವನ್ನ ಮಾಡಿ…
ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಟಿಕೆಟ್ ಗಲಾಟೆ ತೀವ್ರಗೊಂಡಿದೆ. ಕೆಪಿಸಿಸಿ ಕಚೇರಿ ಮುಂದೆ ಸೋಮವಾರ ಮಡಿವಾಳ ಸಮಾಜದವರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಆಕ್ರೋಶಗೊಂಡ ಕಾರ್ಯಕರ್ತರು ವಿಷ ಸೇವಿಸಲು ಪ್ರಯತ್ನ ನಡೆಸಿದ ಪ್ರಸಂಗವೂ ನಡೆಯಿತು. ಈ ವೇಳೆ ಪೊಲೀಸರು ಅವರನ್ನು ತಡೆದರು. ಮಂಗಳವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಗೋಪಿ ಕೃಷ್ಣ ಅವರ ಹೆಸರೂ ಇದ್ದೂ, ಹೀಗಿದ್ದರೂ ಪ್ರತಿಭಟನೆ ನಡೆಸುವ ಮೂಲಕ ಒತ್ತಡ ಹೇರುತ್ತಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಕೆಪಿಸಿಸಿಯಲ್ಲಿ ಮಡಿವಾಳ ಸಮಾಜದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಚೇರಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಎರಡನೇ ಪಟ್ಟಿ ಟಿಕೆಟ್ ಗೊಂದಲದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಇನ್ನು ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ತರೀಕೆರೆ ಟಿಕೆಟ್ ಯಾರಿಗೆ ಎಂಬುದು ಇನ್ನೂ…
ಬೆಂಗಳೂರು: ಕಾಂಗ್ರೆಸ್ ಅವರಿಗೆ ದಲಿತ ಸಮುದಾಯದವರ ಮೇಲೆ ಕಾಳಜಿ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಟ್ವೀಟ್ ಮಾಡಿ ಮೀಸಲಾತಿ ಸಂವಿಧಾನಬಾಹಿರ ಕಾನೂನು ಎಂದು ಹೇಳಿದ್ದಾರೆ. ಇದು ಆ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಕಾಂಗ್ರೆಸ್‍ನವರು ಕೆಳಮಟ್ಟದ ಪದ ಬಳಕೆ ಮಾಡಿದ್ದಾರೆ. ಕಾಂಗ್ರೆಸ್‍ನವರಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ. ಆ ಸಮುದಾಯದ ಮೇಲೆ ಕಾಳಜಿ ಇಲ್ಲ ಎಂದು ಟೀಕಿಸಿದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಂದ ತಕ್ಷಣ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಕಾಯಿದೆ ತಂದು ಜಾರಿ ಮಾಡಿದ್ದೇವೆ ಎಂದು ಹೇಳಿದರು. ವೋಟ್ ಬ್ಯಾಂಕ್ ಎಂದು ತಿಳಿದುಕೊಂಡು ಸದಾಕಾಲ ಮೋಸ ಮಾಡಿ ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಕಾಡುತ್ತಿದೆ. ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿಚಾರಗಳನ್ನು ವಿರೋಧ ಮಾಡುತ್ತಿದ್ದಾರೆ…
ಬೆಂಗಳೂರು: ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇವಿಎಂ, ಇಡಿ, ಸಿಬಿಐ, ಐಟಿ ದುರ್ಬಳಕೆ ಆಗಬಾರದು. ಇದನ್ನು ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ತಾರೀಖು ನಿಗದಿಯಾಗಿದೆ. ಮೇ 10 ಚುನಾವಣೆ ದಿನಾಂಕ ನಿಗದಿಯಾಗಿದೆ. ಮತ ಎಣಿಕೆಗೆ ಬಹಳ ಅಂತರ ಕೊಡದೇ ಒಂದೇ ಹಂತದಲ್ಲಿ ಮಾಡುವುದು ಒಳ್ಳೆಯ ನಿರ್ಣಯ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹಳಷ್ಟು ಅನುಕೂಲವಾಗಲಿದೆ. ಚಿಲುಮೆ ವೋಟಿಂಗ್ ಲಿಸ್ಟ್ನಲ್ಲಿ ಹೆಚ್ಚೂ ಕಡಿಮೆ ಆಗುವುದು ನೋಡ್ತಾ ಇದ್ದೇವೆ. ಬಿಜೆಪಿಯವರು ಹೆಚ್ಚಿನ ಅಂಶ ವೋಟರ್ ಡಿಲೀಟ್ ಮಾಡಿಸಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತು ಹಾಕ್ತೀವಿ ಅಂತ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಅಶೋಕ್ ತಮ್ಮ ಬುಡ ಗಟ್ಟಿ ಇದೆಯಾ ನೋಡಿಕೊಳ್ಳಲಿ. ಬಿಜೆಪಿಯವರಿಗೆ ಹಸು ಮೇಯಿಸೋಕೆ ಹುಲ್ಲು ಸಿಗದಂತಾಗಿದೆ ಎಂದು ಹೇಳಿದರು.
ಬೆಂಗಳೂರು: ಡಿ.ಕೆ ಶಿವಕುಮಾರ್ ಗೆ ಧಮ್, ತಾಕತ್ ಇದ್ರೆ ಮೀಸಲಾತಿ ತೆಗೆಯಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್ ಹಾಕಿದ್ದಾರೆ. ಅಧಿಕಾರಕ್ಕೆ ಬಂದ್ರೆ ಮುಸ್ಲಿಂರ ಮೀಸಲಾತಿ ಕೋಟಾ ಮರುಸ್ಥಾಪನೆ ಮಾಡುತ್ತೇವೆ’ ಎಂಬ ಡಿಕೆಶಿ ಹೇಳಿಕೆಗೆ ಯತ್ನಾಳ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ. ಲಿಂಗಾಯತರು, ಒಕ್ಕಲಿಗ ಸಮುದಾಯದ ದೊಡ್ಡ ಶಕ್ತಿ ಇದೆ, ಮೀಸಲಾತಿ ತೆಗೆದರೆ ಸರ್ವನಾಶ ಆಗುತ್ತಾರೆ. ಅವರ ಮುಸ್ಲಿಂ ಸೋದದರಿಗಾಗಿ ಈ ಹೇಳಿಕೆ ನೀಡಿದ್ದಾರೆ. ಈ ರೀತಿ ಮಾಡಿದ್ರೆ ಡಿಕೆಶಿ ಮೆಕ್ಕಾ ಮದೀನಾಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಬಾರಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಆಪರೇಷನ್ ಕಮಲ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಪಂಚಮಸಾಲಿಗೆ 2 ಡಿ ಮೀಸಲಾತಿ ಘೋಷಣೆ ಮಾಡಿ ಸಿಎಂ ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಮೋದಿ , ಅಮಿತ್ ಶಾ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ 75 ವರ್ಷ ಆದವರಿಗೆ, ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ, ಒಂದೇ ಕುಟುಂಬಕ್ಕೆ ಟಿಕೆಟ್ ಇಲ್ಲ. ಮೋದಿ, ಅಮಿತ್ ಶಾ…
ಶಿವರಾಜ್‌ಕುಮಾರ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್ ನ ’45’ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ನನ್ನರಸಿ ರಾಧೆ’ ಧಾರವಾಹಿ ಮೂಲಕ ಖ್ಯಾತಿ ಘಳಿಸಿರುವ ನಟಿ ಕೌಸ್ತುಭ ಮಣಿ. ಕಿರುತೆರೆಯಲ್ಲಿ ಕೌಸ್ತುಭ ಮಣಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಮೊದಲ ಭಾರಿಗೆ ಸ್ಟಾರ್ ನಟರ ಸಿನಿಮಾದಲ್ಲಿ ಕೌಸ್ತುಭ ಮಣಿ ನಟನೆ. 45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನ ಸಿನಿಮಾ. ಇದೇ ಮೊದಲ ಭಾರಿಗೆ ಮಲ್ಟಿ ಸ್ಟಾರರ್ ಸಿನಿಮಾಗೆ ಅರ್ಜನ್ ಜನ್ಯ ನಿರ್ದೇಶನ. ಆಡಿಷನ್ ಮೂಲಕ 45 ಸಿನಿಮಾಗೆ ಆಯ್ಕೆಯಾದ ಕೌಸ್ತುಭ ಮಣಿ. ಈ ಹಿಂದೆ ತೇಜ್ ನಟನೆಯ ರಾಮಾಚಾರಿ 2.0 ಸಿನಿಮಾದಲ್ಲಿ ಕೌಸ್ತುಭ ಮಣಿ ನಟನೆ.
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಆರೋಗ್ಯಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಸಲಹೆ ನೀಡಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು, ರಕ್ಷಣಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು. ಒಂದು ವೇಳೆ ಇವರು ಕೋವಿಡ್‍ಗೆ ತುತ್ತಾದರೆ ಹೆಚ್ಚಿನ ತೊಂದರೆ ಎದುರಿಸ ಬೇಕಾಗಬಹುದು ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್ ಡೋಸ್ ಸಾಕಾಗುತ್ತದೆ ಎಂಬ ಅಭಿಪ್ರಾಯವನ್ನು ಸಮಿತಿ ವ್ಯಕ್ತಪಡಿಸಿದೆ. ಕೋವಿಡ್ ಸೋಂಕುನಿಂದ ಕೊಂಚ ನೆಮ್ಮದಿಯಾಗಿದ್ದ ಜನತೆ ಇದೀಗ ಮತ್ತೆ ಚಿಂತೆ ಶುರುವಾಗಿದೆ. ಶನಿವಾರ 2994 ಪ್ರಕರಣಗಳು ದಾಖಲಾಗಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,354ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಬೂಸ್ಟರ್ ಡೋಸ್ ನೀಡುವಂತೆ ಎಚ್ಚರಿಕೆ ನೀಡಿದೆ.
ಜಕಾರ್ತ: ಫಿಶ್ ತಿನ್ನೋದು ಅಂದರೆ ಅದೆಷ್ಟೋ ಮಂದಿಗೆ ಇಷ್ಟ. ಆದರೆ ಇಲ್ಲೊಬ್ಬ ಮಹಿಳೆ ಫಿಶ್ ಸೇವಿಸಿಯೇ ಮೃತಪಟ್ಟಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ‘ಪಫರ್’ ಹೆಸರಿನ ಡೆಡ್ಲಿ ಮೀನನ್ನು ಸೇವಿಸಿ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಕೋಮಾ ಸ್ಥಿತಿ ತಲುಪಿದ್ದಾರೆ. ಮಲೇಷ್ಯಾದ ಜೊಹೋರ್ ನಿವಾಸಿ ಲಿಮ್ ಸಿವ್ ಗುವಾನ್ (83) ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಕೋಮಾ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸ್ಥಳೀಯ ಅಂಗಡಿಯಲ್ಲಿ ಪಫರ್ ಎಂಬ ಹೆಸರಿನ ಮೀನನ್ನು ಖರೀದಿಸಿ ಅಡುಗೆ ಮಾಡಿ ತಿಂದಿದ್ದರು. ಆದರೆ ಮೀನು ಸೇವಿಸಿ ಕೆಲ ಘಂಟೆಗಳಲ್ಲೇ ಮಹಿಳೆ ಮೃತಪಟ್ಟಿದ್ದು ಪತಿ ಗಂಭೀರವಾಗಿ ಆಸ್ಪತ್ರೆ ಸೇರಿದ್ದಾರೆ. ನನ್ನ ತಂದೆ-ತಾಯಿ ಹಲವು ವರ್ಷಗಳಿಂದ ಅದೇ ಮೀನು ವ್ಯಾಪಾರಿಯಿಂದ ಮೀನು ಖರೀದಿಸುತ್ತಿದ್ದಾರೆ. ಆದ್ದರಿಂದ ನನ್ನ ತಂದೆ ಆ ಮೀನಿನ ಬಗ್ಗೆ ಅಷ್ಟೇನು ಯೋಚಿಸಲಿಲ್ಲ ಎಂದು ಲಿಮ್ ದಂಪತಿ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಜೋಹೋರ್‌ನ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್…