Author: Prajatv Kannada

ಬೆಂಗಳೂರು: ಸ್ಯಾಂಕಿ ಮೇಲ್ಸೇತುವೆ ಯೋಜನೆ ವಿಚಾರದಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸ್ಯಾಂಕಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಯೋಜನೆ ವಿಚಾರದಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ. ಆದರೂ, ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ. ಚಿತ್ತಾಪುರದ ರಾಜಕೀಯವನ್ನು ಮಲ್ಲೇಶ್ವರಗೆ ತರುವ ದುಸ್ಸಾಹಸ ಮಾಡುತ್ತಿದ್ದಾರೆ. ಈ ಯೋಜನೆ ವಿರುದ್ಧ ರ್ಯಾಲಿ ನಡೆಸಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿರುವುದಕ್ಕೂ ತಮಗೂ ಸಂಬಂಧವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ ಅವರು ತಮ್ಮ ಕರ್ತವ್ಯ ನಿರ್ವಹಿಸಿರುತ್ತಾರೆ. ಇಷ್ಟಕ್ಕೂ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೈಕೋರ್ಚ್‌ ಸ್ಪಷ್ಟಸೂಚನೆ ನೀಡಿರುವುದು ಇವರ ಗಮನಕ್ಕೆ ಬರದಿರುವುದು ದುರಂತ ಎಂದು ಅವರು ಟೀಕಿಸಿದ್ದಾರೆ. ಮೇಲ್ಸೇತುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್‌ಜಿಒಗಳ ಜತೆ ಮಾತನಾಡಿ ಅಭಿಪ್ರಾಯಗಳನ್ನು ಆಲಿಸಿದ್ದೇನೆ. ಅವರ ಸಲಹೆ ಪ್ರಕಾರ ಬಿಬಿಎಂಪಿಯು ಬಿಎಂಎಲ್‌ಟಿಎಗೆ ವಹಿಸಿದೆ. ಈ ಸತ್ಯ ಗೊತ್ತಿದ್ದರೂ ಮಲ್ಲೇಶ್ವರದಲ್ಲಿ…

Read More

ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣನವರಿಗೆ ಟಿಕೆಟ್ ನೀಡಬಾರದೆಂದು ಕುಮಾರಸ್ವಾಮಿ ಹಾಗೂ ಆ್ಯಂಡ್ ಟೀಂ ಜೆಡಿಎಸ್ ಬಳಗದಲ್ಲಿ ಪಟ್ಟುಹಿಡಿದಿದೆ. ಭವಾನಿ ರೇವಣ್ಣನವರ ಬದಲಿಗೆ, ಪಕ್ಷಕ್ಕಾಗಿ ದುಡಿದಿರುವ ಹಾಸನ ಕ್ಷೇತ್ರದ ಜೆಡಿಎಸ್ ನಾಯಕ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಬಣ ಕೇಳುತ್ತಿದೆ. ಇದೇ ವಿಚಾರಕ್ಕಾಗಿ ಏ. 2ರ ರಾತ್ರಿ ಬೆಂಗಳೂರಿನಲ್ಲಿರುವ ದೇವೇಗೌಡರ ನಿವಾಸದಲ್ಲಿ ಸಂಧಾನ ಸಭೆ ನಡೆಸಲಾಗಿದ್ದು, ಅದರಲ್ಲಿ ಕುಮಾರಸ್ವಾಮಿಯವರ ಹಠಕ್ಕೆ ರೇವಣ್ಣ ಪ್ರತಿ ಅಸ್ತ್ರವೊಂದನ್ನು ಬಿಟ್ಟಿದ್ದಾರೆ. ಸಂಧಾನಸಭೆಯಲ್ಲಿ ಷರತ್ತೊಂದನ್ನು ಇಟ್ಟ ರೇವಣ್ಣ, ‘ಒಂದು ವೇಳೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರೇವಣ್ಣನವರಿಗೆ ಟಿಕೆಟ್ ಕೊಡುವುದು ಬೇಡ ಎಂದಾದರೆ, ಕುಮಾರಸ್ವಾಮಿಯವರು ಆ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಬೇಕು ಎಂದು ಆಸೆ ಪಟ್ಟಿರುವ ಸ್ವರೂಪ್ ಪ್ರಕಾಶ್ ಅವರಿಗೂ ಟಿಕೆಟ್ ಕೊಡಕೂಡದು’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿಯವರೇಕೆ ಭವಾನಿಯವರನ್ನು ಬೆಂಬಲಿಸುತ್ತಿಲ್ಲ? ಮೂಲಗಳ ಪ್ರಕಾರ, ಭವಾನಿ ರೇವಣ್ಣನವರನ್ನು ಕುಮಾರಸ್ವಾಮಿ ಏಕೆ ಬೆಂಬಲಿಸುತ್ತಿಲ್ಲ ಎಂಬುದಕ್ಕೆ ಎರಡು ಕಾರಣಗಳಿವೆ. ಭವಾನಿ ಅವರು ಹಾಸನದಿಂದ ಸ್ಪರ್ಧೆ ಮಾಡಿದಲ್ಲಿ ಈಗಾಗಲೇ ಕುಟುಂಬ ರಾಜಕಾರಣದ…

Read More

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಹ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕನಕಪುರ ತಾಲೂಕು ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರ. ಸಹೋದರ ಡಿ. ಕೆ. ಸುರೇಶ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು. ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರೋ ಡಿಕೆ ಶಿವಕುಮಾರ್‌ ಎಲ್ಲಾ ಚುನಾವಣಾ ಸಂಕಷ್ಟಗಳಿಂದ ದೂರವಾಗಲು  ಗುರುಗಳಾದ ಶ್ರೀ ಹರೀಶ್ ಆರಾಧ್ಯ ಅವರ ಮಾರ್ಗ ಅರ್ಶದನದಂತೆ ಬೆಳಗಳಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ಆರತಿ ಪೂಜೆಯನ್ನು ಮಾಡಿಸಿದ್ದಾರೆ. ಇದಲ್ಲದೇ ಮಧ್ಯಪ್ರದೇಶದ ಶ್ರೀ ಮಹಾಕಾಲೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಸಹ ಸಲ್ಲಿಸಲಿದ್ದಾರೆ. ಸದ್ಯಕ್ಕೆ ಚುನಾವಣಾ ಬಿಸಿಯ ಮದ್ಯ ಡಿ.ಕೆ. ಶಿವಕುಮಾರ್‌ ಪೂಜೆಯನ್ನು ಸಲ್ಲಿಸುತ್ತಿರುವುದ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Read More

ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ಬೆಂಗಳೂರಿನಲ್ಲಿ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿವೆ. ಇದು ಕಳವಳಕಾರಿ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸರ್ಕಾರದಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಯುವುದು ಡೌಟು. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಲಿ ಎಂದರು. ಧರ್ಮ ರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿ ಬೆಳೆಸಿತ್ತು. ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆಯೇ ಸಾಕ್ಷಿ. ಹತ್ಯೆಯ ಹೊಣೆಯನ್ನು ಅಸಮರ್ಥ ಗೃಹ ಸಚಿವ ಆರಗರೇ ಹೊರಬೇಕು. ಅಸಮರ್ಥ‌, ಅದಕ್ಷ, ಬೇಜವಾಬ್ದಾರಿ ಗೃಹ‌ಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿಯಂತ್ರಣ‌ವೇ ಇಲ್ಲ. ಇಂಥ ಸಚಿವರಿಗೆ ರಾಜ್ಯದ ಶಾಂತಿ‌, ಸುವ್ಯವಸ್ಥೆಯನ್ನು‌ ನಿರ್ವಹಿಸಲು‌ ಸಾಧ್ಯವೇ? ಕೂಡಲೇ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ಕಿತ್ತುಹಾಕಲಿ. ಗೋರಕ್ಷಣೆಯ ಹೆಸರಲ್ಲಿ ನಡೆದ ಕೊಲೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗವಾಗಿರುವ ಸಾಧ್ಯತೆ ಇದೆ. ಹೀಗಾಗಿ…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್(JDS)​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್(Congress) ಮತ್ತು ಬಿಜೆಪಿಗೂ(BJP) ಮುನ್ನವೇ 93 ಹುರಿಯಾಳುಗಳನ್ನ ಕಣಕ್ಕಿಳಿಸಿರುವ ಜೆಡಿಎಸ್ ಇಂದು ಮಧ್ಯಾಹ್ನ ಜೆಡಿಎಸ್ ಅಭ್ಯರ್ಥಿಗಳ​ 2ನೇ ಪಟ್ಟಿ (JDS Candidate List)  ಬಿಡುಗಡೆಯಾಗಲಿದೆ. ಆದ್ರೆ, 2ನೇ ಲಿಸ್ಟ್​ನಲ್ಲೂ ಹಾಸನ ಟಿಕೆಟ್ ಅಭ್ಯರ್ಥಿ ಘೋಷಣೆಯಾಗುವುದು ಅನುಮಾನ. ಇದನ್ನ ಸ್ವತಃ ಹೆಚ್​ಡಿ ಕುಮಾರಸ್ವಾಮಿಯೇ(HD Kumaraswamy) ಸ್ಪಷ್ಟಪಡಿಸಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ಬಗೆಹರಿದಿಲ್ಲ ಎಂದು ಕುಮಾರಸ್ವಾಮಿಯೇ ಸ್ಪಷ್ಟಪಡಿಸಿದ್ದಾರೆ. ಪತ್ನಿ ಭವಾನಿಗೇ ಹಾಸನ ಟಿಕೆಟ್ (Hassan Ticket) ಕೊಡಿಸಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಪರವೇ ಬ್ಯಾಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ಫೈನಲ್ ಮಾಡಲಾಗುತ್ತಿಲ್ಲ. ಅಂತಿಮವಾಗಿ ಅಣ್ತಮಾಸ್ ಮುಸುಕಿನ ಗುದ್ದಾಟದ ಮಧ್ಯೆ ಹೆಚ್​ಡಿ ದೇವೇಗೌಡ (HD Devegowda) ಪ್ರವೇಶ ಮಾಡಿದ್ದಾರೆ.

Read More

ಕಾರ್ಮಿಕ ಮಹಿಳೆಯರಿಗೆ ಬಸ್​ ಪಾಸ್​ ವಿತರಣೆ ಮಾಡದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೊಮ್ಮಾಯಿ ಯಾವಾಗಲೂ ಫೂಲ್ ಮಾಡುವ ಕೆಲಸ ಮಾಡಿದ್ದಾರೆ. ಕೋಲಿ ಸಮುದಾಯಕ್ಕೆ ಎಸ್​ಟಿ ಮೀಸಲಾತಿಯ ಭರವಸೆ ಕೊಟ್ಟಿದ್ರು. ಆದ್ರೆ ರಾಜ್ಯ ಸರ್ಕಾರ ಕೋಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಲಿಂಗಾಯತರು, ಒಕ್ಕಲಿಗರು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದೆವು. ಅಲ್ಪಸಂಖ್ಯಾತರ ಮೀಸಲಾತಿ ತೆಗೆದು 2% ಹೆಚ್ಚಳ ಮಾಡಿದ್ದಾರೆ. ನಮಗೆ ಬೇರೆಯವರ ಮೀಸಲಾತಿ ಬೇಡ. ಬಿಜೆಪಿಗೆ ಬೆಂಬಲ ಕೊಟ್ಟ ಸಮುದಾಯ ದಂಗೆ ಏಳುತ್ತಿದೆ. ಬಿಜೆಪಿ ನಾಯಕರು ಎಲ್ಲರಿಗೂ ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದರು.

Read More

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಒತ್ತಡದ ನಡುವೆಯೂ ಐಪಿಎಲ್‌ ಮ್ಯಾಚ್‌ ವೀಕ್ಷಿಸುತ್ತಾ ಕಾಲ ಕಳೆದಿದ್ದಾರೆ.16ನೇ ಆವೃತ್ತಿಯ ಐಪಿಎಲ್‌ ಆರಂಭಗೊಂಡಿದ್ದು, ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಸೆಣಸಾಟ ನಡೆದಿತ್ತು. ಕ್ರೀಡಾಂಗಣದ ತುಂಬಾ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ಪಂದ್ಯ ವೀಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಆಪ್ತರೊಂದಿಗೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡ ಆರಂಭದಲ್ಲಿ ಅಮೋಘ ಯಶಸ್ಸು ಸಾಧಿಸಿದರೂ ಬಳಿಕ ರೋಹಿತ್‌ ಪಡೆಯಿಂದ ಅದ್ಭುತ ಹೋರಾಟ ವ್ಯಕ್ತವಾಯಿತು. ಹೀಗಾಗಿ ಆರ್‌ಸಿಬಿ ತಂಡಕ್ಕೆ ಗೆಲ್ಲಲು ಮುಂಬೈ ಇಂಡಿಯನ್ಸ್ ತಂಡ ಸವಾಲಿನ ಗುರಿ ನೀಡಿತು.  ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದರೂ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ…

Read More

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಸರ್ಕಸ್ ಮಾಡುತ್ತಿರುವ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಷ್ಠೆಯ ಫೈಟ್‍ಗೆ ಮಾಸ್ಟರ್‌ ಸ್ಟ್ರೋಕ್‌ ನೀಡಲು ಬಿಜೆಪಿ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಚುನಾವಣೆಯಲ್ಲಿ (Karnataka Election) ತಮ್ಮವರಿಗೆ ಟಿಕೆಟ್ ಕೊಡಿಸಬೇಕು ಎಂದು ಡಿಕೆಶಿ ಹಠಕ್ಕೆ ಬಿದ್ದಿರುವ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಗಳಿಗೆ ಬಿಜೆಪಿ ಹಾಗೂ ಜೆಡಿಎಸ್ (BJP, JDS) ಗಾಳ ಹಾಕಿದೆ  ಎನ್ನಲಾಗಿದೆ. ಟಿಕೆಟ್‍ಗಾಗಿ ಕಾಂಗ್ರೆಸ್‌ನಲ್ಲಿ ಪರದಾಡುವ ಬದಲು ನಮ್ಮಲ್ಲಿಗೆ ಬನ್ನಿ ಎಂದು ಎರಡು ಪಕ್ಷಗಳಿಂದ ಆಫರ್ ನೀಡಲಾಗಿದೆ. ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್‍ಗೆ (Santosh Lad) ಬಿಜೆಪಿ ಗಾಳ ಹಾಕಿದೆ.  ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯನ್ನು (Akhanda Srinivasa Murthy) ಕರೆತರಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Read More

ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಸುಲೋಚನಾ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಟೈರ್ ಸ್ಫೋಟಗೊಂಡು ಬೈಕ್‌ ಪಲ್ಟಿಯಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೈಕ್‌ನಲ್ಲಿ ತೆರಳುತ್ತಿದ್ದ ಆನಂದ್‌, ಸುಲೋಚನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳು ಯುವತಿ ಸುಲೋಚನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಾಲ್ಫ್ ಹೆಲ್ಮೆಟ್ ಧರಿಸಿದ್ದರಿಂದ ಸುಲೋಚನ ತಲೆಗೆ ಗಂಭೀರ ಗಾಯವಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಸುಲೋಚನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದ ಸುಲೋಚನ, ಆನಂದ್ ಅವರು, ನಿನ್ನೆ ಕೆಲಸ ಮುಗಿಸಿ ಕೋರಮಂಗಲದಿಂದ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ನಡೆದಿದ್ದ ಅವಘಡದಲ್ಲಿ ಕೊನೆಗೂ ಯುವತಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇಂದು ಬೆಳಗ್ಗೆ ಪಪುವಾ ನ್ಯೂ ಗಿನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಟಿಬೆಟ್‌ನ ಶಿಜಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಅಳತೆಯ ಭೂಕಂಪ ಸಂಭವಿಸಿದರೆ, ವಾಯುವ್ಯ ಪಪುವಾ ನ್ಯೂಗಿನಿಯಾದಲ್ಲಿ 7.0 ಅಳತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಥಳೀಯ ಕಾಲಮಾನ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭೂಕಂಪವು ಕರಾವಳಿ ಪಟ್ಟಣವಾದ ವೆವಾಕ್‌ನಿಂದ 97 ಕಿಲೋಮೀಟರ್ (60 ಮೈಲುಗಳು) 62 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಪಪುವಾ ನ್ಯೂ ಗಿನಿಯಾದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಅಲ್ಲಿ ವಾಸಿಸುವ ಜನರಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು USGS ಹೇಳುತ್ತದೆ. ದ್ರವೀಕರಣ ಎಂದು ಕರೆಯಲ್ಪಡುವ ನೆಲದ ಈ ಸಡಿಲಗೊಳಿಸುವಿಕೆಯು ಗಣನೀಯವಾಗಿ ನೆಲದ ಕುಸಿತಕ್ಕೆ ಕಾರಣವಾಗಬಹುದು ಎಂದು ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಕರಾವಳಿ ನಗರವಾದ ವೆವಾಕ್‌ನಿಂದ 97 ಕಿಮೀ ದೂರದಲ್ಲಿ 62 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು USGS…

Read More