Author: Prajatv Kannada

ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿಯ ನಟಿ ಬೆಡಗಿ ಅಕ್ಷತಾ ಕುಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಜೋಡಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ಈ ವರ್ಷ ಮಾರ್ಚ್ ಅಂತ್ಯದಲ್ಲಿ ಅಕ್ಷತಾ ಹುಟ್ಟೂರು ಬೆಳಗಾವಿಯಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಅವಿನಾಶ್ ಅರೆಂಜ್ ಮ್ಯಾರೇಜ್ ಆಗಿದ್ದರು. ಇದೀಗ ಅಕ್ಷತಾ ಕುಕಿ ಅವರು ಮದುವೆಯಾಗಿ ಅಮೆರಿಕಾಗೆ ತೆರಳಿದ್ದಾರೆ. ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಅವಿನಾಶ್ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪತ್ನಿ ಅಕ್ಷತಾ ಕೂಡ ವಿದೇಶಕ್ಕೆ ತೆರಳಿದ್ದಾರೆ. ಈಗ ಅಕ್ಷತಾ ಅವರು ಅಮೆರಿಕದಲ್ಲಿನ ಹೊಸ ಮನೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಹೊಸ ಮನೆಗೆ ಅಕ್ಷತಾ ಅವರನ್ನು ಸ್ವಾಗತಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನವ ಜೋಡಿ ತಮ್ಮ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

Read More

ಟಾಲಿವುಡ್ ಬ್ಯೂಟಿ ನಟಿ ಸಮಂತಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆಯ ನಟನೆ ಹಾಗೂ ಸೌಂದರ್ಯಕ್ಕೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಇದೀಗ ನೆಚ್ಚಿನ ನಟಿ ಸಮಂತಾಗಾಗಿ ತನ್ನ ಮನೆಯಲ್ಲಿಯೇ ದೇವಸ್ಥಾನ ಕಟ್ಟಿಸಿ ಹರಕೆ ಹೊತ್ತು ಸಮಂತಾ ಅಭಿಮಾನಿಯೊಬ್ಬ ಯಾತ್ರೆಗೆ ಹೊರಟಿದ್ದಾರೆ. ಆಂಧ್ರ ಪ್ರದೇಶದ ಬಾಪಟ್ಟಿ ಜಿಲ್ಲೆಯ ಆಲಪಾಡಿ ಮೂಲದ ಸಂದೀಪ್ ನಟಿ ಸಮಂತಾ ಅಪ್ಪಟ ಅಭಿಮಾನಿ. ಈ ವರ್ಷ ಸಮಂತಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಗಿಫ್ಟ್ ನೀಡಬೇಕು ಎಂದು ತಮ್ಮ ಮನೆಯ ಕಾಂಪೌಂಡ್‌ನಲ್ಲೇ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ. ಕೆಲವೊಂದು ಕಡೆ ನಟ, ನಟಿಯರನ್ನು ದೇವರ ರೀತಿಯಲ್ಲಿ ಪೂಜಿಸುತ್ತಾರೆ. ಈಗಾಗಲೇ ಅದೆಷ್ಟೋ ನಟ ನಟಿಯರಿಗೆ ದೇವಸ್ಥಾನ ಕಟ್ಟಿಸಿದ್ದಾರೆ. ಇದೀಗ ನಟಿ ಸಮಂತಾಗಾಗಿ ಅಭಿಮಾನಿಯೊಬ್ಬ ಮನೆಯಲ್ಲಿಯೇ ದೇವಸ್ಥಾನ ನಿರ್ಮಿಸಿದ್ದಾರೆ. ಆಂಧ್ರದ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿ ನೆಚ್ಚಿನ ನಟಿಗಾಗಿ ದೇವಸ್ಥಾನ ಕಟ್ಟಿಸುತ್ತಿದ್ಧಾರೆ. ಈಗಾಗಲೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸ್ಯಾಮ್ ಮೂರ್ತಿ ಕೂಡ ಸಿದ್ದವಾಗಿದೆ. ಇದೇ ಶುಕ್ರವಾರ ದೇವಸ್ಥಾನ ಉದ್ಘಾಟನೆ ಕಾರ್ಯ ನಡೆಯಲಿದೆ. ಏಪ್ರಿಲ್ 28ರಂದು ಸಮಂತಾ ಹುಟ್ಟುಹಬ್ಬ. ಹಾಗಾಗಿ ನೆಚ್ಚಿನ…

Read More

ಟಾಲಿವುಡ್ ಬ್ಯೂಟಿ ನಟಿ ಸಮಂತಾ ಹಾಗೂ ನಿರ್ಮಾಪಕ ಚಿಟ್ಟಿಬಾಬು ನಡುವಿನ ಟ್ವೀಟ್ ವಾರ್ ಸದ್ಯಕ್ಕೆ ಮುಗಿಯುವ  ಲಕ್ಷಣಗಳು ಕಾಣುತ್ತಿಲ್ಲ. ಸಮಂತಾ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿರುವ ಚಿಟ್ಟಿಬಾಬು ಇದೀಗ ಮತ್ತೆ ನಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಮಂತಾ ‘ನನ್ನ ವಿರುದ್ಧ ಹಾಕುತ್ತಿರುವ ಪೋಸ್ಟ್ ನಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿಲ್ಲ. ಧೈರ್ಯವಿದ್ದರೆ ಹೆಸರು ಹಾಕಲಿ, ಆಮೇಲೆ ನೋಡೋಣ. ನಾನು ಸತ್ಯಗಳನ್ನು ಬಾಯ್ಬಿಟ್ಟರೆ ಅವುಗಳನ್ನು ಎದುರಿಸುವ ಶಕ್ತಿ ಆ ನಟಿಗಿಲ್ಲ’ ಎಂದಿದ್ದಾರೆ. ‘ನಾನೇನಾದರೂ ಮಾತಾಡಿದರೆ ಸಮಂತಾ ಕಥೆ ಅಷ್ಟೆ’ ಎಂದು ಚಿಟ್ಟಿಬಾಬು ಕಿಡಿಕಾರಿದ್ದಾರೆ. ಕೆಲ ದಿನಗಳ ಹಿಂದೆ ನಿರ್ಮಾಪಕ ಚಿಟ್ಟಿಬಾಬು ಸಮಂತಾ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ‘ಸಮಂತಾ ಮುಖ ಕಿತ್ತು ಹೋಗಿದೆ. ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ’ ಎಂದು ಕಾಮೆಂಟ್ ಮಾಡಿದ್ದರು. ಮುಂದುವರೆದು ಮಾತನಾಡಿದ್ದ ಅವರು ‘ಸಮಂತಾಗೆ ಇದೀಗ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ…

Read More

ಈ ಬೇಸಿಗೆಯಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗುವುದರೊಂದಿಗೆ ಪ್ರತಿಯೊಬ್ಬರೂ ಆಯಾಸ, ಬೆವರುವಿಕೆಯಿಂದ ಬಳಲುತ್ತಾರೆ. ಈ ವೇಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ. ಈ ಸಮಯ ಕೇವಲ ನೀರು ಏಕೆ? ನಾಲಿಗೆಗೆ ವಿವಿಧ ರೀತಿಯ ರುಚಿಯನ್ನು ನೀಡುವ ಮೂಲಕವೂ ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬಹುದು. ನಾವಿಂದು ಹೇಳಿಕೊಡುವ ರೆಸಿಪಿ ನಿಮ್ಮ ನಾಲಿಗೆಗೆ ಹೊಸ ರುಚಿಯನ್ನು ನೀಡುವುದಲ್ಲದೇ ರಿಫ್ರೆಶಿಂಗ್ ಅನುಭವ ನೀಡುತ್ತದೆ. ಹಾಗಿದ್ದರೆ ಈ ಕೂಡಲೇ ಮ್ಯಾಂಗೋ ಚಿಲ್ಲಿ ಸೋಡಾ (Mango Chilli Soda) ಮಾಡೋದು ಹೇಗೆಂದು ನೋಡೋಣ. ಬೇಕಾಗುವ ಪದಾರ್ಥಗಳು: ಹಸಿರು ಮೆಣಸಿನಕಾಯಿ – 2 ಮಾವಿನ ಹಣ್ಣಿನ ರಸ – 1 ಕಪ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್ ಸೋಡಾ – 2 ಕಪ್ ಕಲ್ಲುಪ್ಪು – ಕಾಲು ಟೀಸ್ಪೂನ್ ಮಾಡುವ ವಿಧಾನ: * ಮೊದಲಿಗೆ ಹಸಿರು ಮೆಣಸಿನಕಾಯಿಗಳನ್ನು ಸೀಳಿ. * ಒಂದು ಗ್ಲಾಸ್‌ಗೆ ಮಾವಿನ ಹಣ್ಣಿನ ರಸವನ್ನು ಹಾಕಿ, ಅದಕ್ಕೆ ಚಿಲ್ಲಿ ಫ್ಲೇಕ್ಸ್ ಹಾಗೂ ಕಲ್ಲುಪ್ಪನ್ನು…

Read More

ಅಮೇರಿಕಾ: ಹಿಂದಿನ ಕಾಲದಲ್ಲೆಲ್ಲಾ ಮಕ್ಕಳ ಆಟದಲ್ಲಿ ಮೋಜಿರುತ್ತಿತ್ತು. ಅಷ್ಟೇ ಅಲ್ಲ ಶಿಸ್ತು ಸಹ ಇರುತ್ತಿತ್ತು. ಆಟವನ್ನು ಆಟದಂತೆ ನೋಡಿ ಖುಷಿಯಿಂದ ಕಾಲ ಕಳೆಯುತ್ತಿದ್ರು. ಆದ್ರೆ ಇವತ್ತಿನ  ಕಾಲದ ಮಕ್ಕಳೋ ಆಟವನ್ನು ಸಹ ಚಾಲೆಂಜಿಂಗ್ ಆಗಿ ನೋಡ್ತಾರೆ. ಡೇಂಜರಸ್‌ ಆಟಗಳನ್ನು ನೋಡ್ತಾರೆ. ಸವಾಲ್‌ಗಳನ್ನು ಹಾಕಿ ಗದ್ದೇ ಗೆಲ್ಲಬೇಕು ಅನ್ನೋ ಷರತ್ತನ್ನೊಡ್ಡಿ ಆಟವಾಡ್ತಾರೆ. ಹೀಗೆ ಟಿಕ್ ಟಾಕ್‌ ಸವಾಲು ಸ್ವೀಕರಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿರುವುದು ವರದಿಯಾಗಿದೆ.ಸೋಷಿಯಲ್ ಮೀಡಿಯಾ ಬಂದ್ಮೇಲೆ ಎಲ್ಲವೂ ಬದಲಾಗಿದೆ. ಜನರು ತಮಗರಿವಿಲ್ಲದೆಯೇ ಹಲವು ಅಪಾಯಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ವೀಡಿಯೋ ವೈರಲ್ ಮಾಡುವುದು, ಟ್ರೆಂಡ್ ಮಾಡುವುದು, ಚಾಲೆಂಜ್ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಒಬ್ಬರು ಚಾಲೆಂಜ್‌ ಹಾಕಿದರೆ, ಇನ್ನೊಬ್ಬರು ಆ ಚಾಲೆಂಜ್‌ನ್ನು ಸ್ವೀಕರಿಸಿ ಗೆಲ್ಲಲು ಸೂಚಿಸಲಾಗುತ್ತದೆ. ಹಾಗೆಯೇ ಟಿಕ್‌ ಟಾಕ್‌ ನ ಸವಾಲ್ ಸ್ವೀಕರಿಸಲು ಹೋದ ಬಾಲಕ (Boy) ಮೃತಪಟ್ಟಿದ್ದಾನೆ. ಜಾಕೋಬ್ ಸ್ಟೀವನ್ಸ್ (13) ಎನ್ನುವ ಬಾಲಕ ಹೀಗೆ ಸವಾಲನ್ನು (Challenge) ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಜಾಕೋಬ್ ಸ್ಟೀವನ್ಸ್ ಇತ್ತೀಚೆಗೆ…

Read More

ಪನಾಮಾ ಸಿಟಿ: ‘ಭಾರತದ ವಿರುದ್ಧ ಗಡಿಯಾಚೆ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಬಹಳ ಕಷ್ಟ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ( Minister S. Jaishankar)ಹೇಳಿದ್ದಾರೆ. ಪನಾಮಾದ ವಿದೇಶಾಂಗ ಸಚಿವೆ ಜನೈನ ತೆವಾನೇ ಮೆನ್ಕೋಮೋ ಅವರೊಡನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈ ಶಂಕರ್, ‘ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ (Talks with Pakistan)ನಡೆಸುವುದು ಬಹಳ ಕಷ್ಟ. ಗಡಿಯಾಚೆಗಿನ ಭಯೋತ್ಪಾದನೆ ಚಟುವಟಿಕೆಯನ್ನು ಪ್ರೋತ್ಸಾಹಿಸುವುದು, ಪ್ರಾಯೋಜಿಸುವುದು ಮತ್ತು ನಡೆಸುವುದನ್ನು ಅವರು ನಿಲ್ಲಿಸಬೇಕೆಂದು ನಾವು ಯಾವಾಗಲೂ ಹೇಳುತ್ತೇವೆ. ಮುಂದೊಂದು ದಿನ ಪಾಕಿಸ್ತಾನವು ಇಂಥ ಚಟುವಟಿಕೆಗಳನ್ನು ನಿಲ್ಲಿಸುತ್ತದೆ ಎಂದು ನಾವು ಆಶಿಸುತ್ತೇವೆ ಎಂದು ಹೇಳಿದರು. ಅಂತೆಯೇ ಪಾಕಿಸ್ತಾನದೊಂದಿಗೆ ನಾವು ಉತ್ತಮ ನೆರೆಯ ಸಂಬಂಧ ಬಯಸುತ್ತೇವೆ. ಆದರೆ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ್ದಾಗಿದೆ ಎಂದು ಭಾರತ ಯಾವಾಗಲೂ ಹೇಳುತ್ತಾ ಬಂದಿದೆ.  ನಾವಿಬ್ಬರೂ (ಭಾರತ ಮತ್ತು ಪಾಕಿಸ್ತಾನ) ಎಸ್‌ಸಿಒದ ಸದಸ್ಯ ರಾಷ್ಟ್ರಗಳು. ಆದ್ದರಿಂದ ಸಭೆಗಳಿಗೆ ನಾವು ಸಾಮಾನ್ಯವಾಗಿ ಹಾಜರಾಗುತ್ತೇವೆ. ಈ…

Read More

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ನಾಲ್ಕು ಬಾಲಕಿಯರ ವಸತಿ ಶಾಲೆಗಳಲ್ಲಿ(Jharkhand girls’ school)ನಡೆಸಿದ ಪರೀಕ್ಷೆಯಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ (COVID-19)ತಗುಲಿರುವುದು ದೃಢಪಟ್ಟಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  69 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಆಗಿದೆ. ನಂತರ ಜಿಲ್ಲೆಯ ಎಲ್ಲಾ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಶಾಲೆಗಳಲ್ಲಿ ಕೋವಿಡ್-19 ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ವಿಜಯ ಜಾಧವ್ ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಿವಿಲ್ ಸರ್ಜನ್ ಡಾ. ಜುಝಾರ್ ಮಜ್ಹಿ ನೇತೃತ್ವದಲ್ಲಿ ಜಿಲ್ಲೆಯ ದುಮಾರಿಯಾ, ಪೊಟ್ಕಾ ಮತ್ತು ಜಮ್‌ಶೆಡ್‌ಪುರ ಬ್ಲಾಕ್‌ಗಳ ಇತರ ಮೂರು ಕೆಜಿಬಿವಿ ಶಾಲೆಗಳಲ್ಲಿ ವೈದ್ಯರು ಕೋವಿಡ್ ಪರೀಕ್ಷೆಯನ್ನು ನಡೆಸಿದರು. ಈ ವೇಳೆ ಇನ್ನೂ 79 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿದೆ. ದುಮಾರಿಯಾದ ಕೆಜಿಬಿವಿಯಲ್ಲಿ 14 ಪ್ರಕರಣಗಳು ದಾಖಲಾಗಿದ್ದರೆ, ಪೊಟ್ಕಾದ ಕೆಜಿಬಿವಿಯಲ್ಲಿ 10 ಮತ್ತು ಜಮ್‌ಶೆಡ್‌ಪುರದ ಕೆಜಿಬಿವಿ ಶಾಲೆಯಲ್ಲಿ 55 ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕೊರೊನಾವೈರಸ್ ನಿಯಮಾವಳಿಗಳ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ ಮತ್ತು ಶಾಲೆಯ ಆವರಣವನ್ನು…

Read More

ಲಕ್ನೋ: ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಉತ್ತರ ಪ್ರದೇಶದ(Uttar Pradesh) ಇಬ್ಬರು ಮಾಜಿ ಶಾಸಕರು 50ರ ಹರೆಯದಲ್ಲೂ 12ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ(Class 12 Board Exam) ಉತ್ತೀರ್ಣರಾಗಿದ್ದಾರೆ. ಅಲ್ಲದೇ ಪದವಿ ಕೋರ್ಸ್‌ ತೆಗೆದುಕೊಳ್ಳುವ ಗುರಿಯನ್ನೂ ಹೊಂದಿದ್ದಾರೆ. ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ (Former MLA Rajesh Mishra) 500ಕ್ಕೆ 263 ಅಂಕಗಳನ್ನು ಪಡೆದರೆ, ಹಸ್ತಿನಾಪುರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ (Forme MLA Prabhudayal Valmiki)ಅವರು ಸಹ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ (Former MLA Rajesh Mishra)ಅವರು 55ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 500ರಲ್ಲಿ 263 ಅಂಕಗಳನ್ನು ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ. 2017 ರಿಂದ 2022 ರವರೆಗೆ ಅಸೆಂಬ್ಲಿಯಲ್ಲಿ ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ್ ಸ್ಥಾನವನ್ನು ಪ್ರತಿನಿಧಿಸಿದ್ದ ಮಿಶ್ರಾ, ಈಗ ಬಡವರಿಗೆ ಸಹಾಯ ಮಾಡಲು ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ…

Read More

‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿರುವಾಗಲೇ ಶಾರುಖ್ ಖಾನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಿನಿಮಾ ಸಕ್ಸಸ್ ಕಾಣದೇ ಬೆಸತ್ತ ಶಾರುಖ್‌ಗೆ ‘ಪಠಾಣ್’ ಸಿನಿಮಾದಿಂದ ಮರುಜೀವ ಸಿಕ್ಕಿದೆ. ಇದೀಗ ‘ಜವಾನ್’ (Jawan) ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು…

Read More

ತಿರುವನಂತಪುರ: ಕೇರಳದ ಮೊದಲ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡುತ್ತಿದ್ದಂತೆ ಶೋರ್ನೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರೈಲಿಗೆ ಸ್ಥಳೀಯ ಪಾಲಕ್ಕಾಡ್‌ ಸಂಸದ ಶ್ರೀಕಂಠನ್‌ ಅವರ ಭಾವಚಿತ್ರಗಳ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ. ಶೋರನೂರಿನಲ್ಲಿ ವಂದೇ ಭಾರತ್‌ಗೆ ನಿಲುಗಡೆಯ ಅವಕಾಶ ನೀಡಬೇಕು. ಇಲ್ಲದಿದ್ದರೆ ರೈಲಿಗೆ ಕೆಂಪು ಬಾವುಟ ತೋರಿ ತೀವ್ರ ಪ್ರತಿಭಟನೆ ನಡೆಸಿ ರೈಲನ್ನು ನಿಲ್ಲಿಸಲಾಗುವುದು ಎಂದು ಶ್ರೀಕಂಠನ್‌ ಹೇಳಿದ್ದರು. ಇದರ ಬೆನ್ನಲ್ಲೇ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿದ್ದಾರೆ. ಈ ಕೃತ್ಯ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹಸಿರು ನಿಶಾನೆ ತೋರಿದ ಸೆಮಿ ಹೈಸ್ಪೀಡ್ ರೈಲು ಶೋರನೂರ್ ಜಂಕ್ಷನ್‌ಗೆ ಆಗಮಿಸಿದಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಾಂಗ್ರೆಸ್ ಸಂಸದ ವಿ.ಕೆ ಶ್ರೀಕಂದನ್ ಅವರನ್ನು ಹೊಗಳಿದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜ್ಯದ ರಾಜಧಾನಿ ತಿರುವನಂತಪುರವನ್ನು ಉತ್ತರದ ತುದಿಯಲ್ಲಿರುವ ಕಾಸರಗೋಡಿನೊಂದಿಗೆ ಸಂಪರ್ಕಿಸುತ್ತದೆ. ಇದು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಶೋರನೂರ್ ಜಂಕ್ಷನ್, ಕೋಯಿಕ್ಕೋಡ್,…

Read More