Author: Prajatv Kannada

ನ್ಯಾಷುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಬಾಕ್ಸಾಫೀಸ್ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ದಾಖಲೆ ಮೊತ್ತದ ಗಳಿಕೆ ಕಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ತೆರೆಗೆ ಬಂದ ದಸರಾ ವಿಶ್ವಾದ್ಯಂತ ಬರೋಬ್ಬರಿ 38 ಕೋಟಿಗೂ ಅಧಿಕ ಹಣ ದೋಚಿದೆ. ಇದುವರೆಗೂ ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಾನಿ ದಸರಾ ಸಿನಿಮಾದಲ್ಲಿ ಮೊದಲ ಬಾರಿಗೆ ಔಟ್ ಅಂಡ್ ಔಟ್ ಮಾಸ್ ಹಾಗೂ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ನಾನಿಯ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು ಥಿಯೇಟರ್ ಗೆ ಮುಗಿ ಬಿದ್ದು ಸಿನಿಮಾ ನೋಡ್ತಿದ್ದಾರೆ. ನಾನೀಸ್ ದಸರಾ ಸಿನಿಮಾ ವಿದೇಶದಲ್ಲಿಯೂ ಕಮಾಲ್ ಮಾಡಿದೆ. ಅಮೆರಿಕದಲ್ಲಿ ಭರ್ಜರಿ ಓಪನಿಂಗ್ ಕಂಡಿದೆ. ನಾನಿ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಮೈಲೇಜ್ ಸಿಕ್ಕಂತಾಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದೆ. ವೀಕೆಂಡ್ ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್…

Read More

ಇತ್ತೀಚೆಗಷ್ಟೇ ಕಿರುತೆರೆ ನಟಿ ಸ್ವಾತಿ ಎಚ್ ವಿ ಗುರು ಹಿರಿಯರು ನಿಶ್ಚಯಿಸಿದ ಹುಡುಗನೊಂದಿಗೆ ಹಸೆಮಣೆ ಏರಿದ್ದರು. ಆದರೆ ಇದು ಸ್ವಾತಿಗೆ ಎರಡನೆ ಮದುವೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ನಟಿ ಸ್ವಾತಿ ಸ್ವಷ್ಟನೆ ನೀಡಿದ್ದಾರೆ. ಗಟ್ಟಿಮೇಳ, ಗೀತಾ, ಬೆಟ್ಟದ ಹೂ, ಸೇರಿದಂತೆ ಹಲವು ಸೀರಿಯಲ್ ನಟಿಸಿರುವ ನಾಗಾರ್ಜುನ ರವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸ್ವಾತಿಗೆ ಇದು ಮೊದಲ ಮದುವೆಯಲ್ಲ, 2ನೇ ಮದುವೆ ಎಂಬ ಸುದ್ದಿ  ಚರ್ಚೆಗೆ ಗ್ರಾಸವಾಗಿತ್ತು. ಸಂದರ್ಶನವೊಂದರಲ್ಲಿ 2ನೇ ಮದುವೆ ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನ್ನ ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿದ್ದು, ನನ್ನ ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ಸ್ವಾತಿ ಹೇಳಿದ್ದಾರೆ. ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು, ಹುಡುಗಿಗೆ ಇದು ಎರಡನೇ ಮದುವೆ…

Read More

ಕರಾಚಿ: ಹಿಂದೂ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹ ಮಾಡುತ್ತಿರುವುದನ್ನು ಖಂಡಿಸಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ನಡೆದ ಪ್ರತಿಭಟನೆಯನ್ನು ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ (ಪಿಡಿಐ) ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಪಿಡಿಐ ನಾಯಕ “ಹಾಡಹಗಲೇ 12, 13 ವರ್ಷದ ಹಿಂದೂ ಬಾಲಕಿಯರನ್ನು ಅಪಹರಣ ಮಾಡಲಾಗುತ್ತಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಅನಂತರ ವಯಸ್ಸಾದ ಪುರುಷನೊಂದಿಗೆ ಮದುವೆ ಮಾಡಲಾಗುತ್ತದೆ. ಹಿಂದೂ ಬಾಲಕಿಯರು, ಮಹಿಳೆಯರ ರಕ್ಷಣೆಗೆ ಪಾಕ್‌ ಸರಕಾರ ಕಠಿನ ಕಾನೂನು ಜಾರಿಗೆ ತರಬೇಕು,’ ಎಂದು ಆಗ್ರಹಿಸಿದ್ದಾರೆ. ಕೆಲವು ತಿಂಗಳಿಂದ ಈಚೆಗೆ ಸಿಂಧ್‌ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಂಡಿವೆ. ಹಿಂದೂ ಯುವತಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹವನ್ನು ತಡೆಯಲು ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಭಿತ್ತಿಪತ್ರಗಳನ್ನು ಪ್ರತಿಭಟನಕಾರರು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Read More

ನೀಲಿ ಚಿತ್ರದ ನಟಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್ ತಮ್ಮ ಬಂಧನ ಖಚಿತ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಟ್ರಂಪ್ ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದು, ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದಾರೆ. ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್ ಹೇಳಿದ್ದು ತಮ್ಮ ಬಂಧನ ಖಚಿತ ಎಂಬಾರ್ಥದಲ್ಲಿ ಮಾತನಾಡಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವು ದಿನಗಳ ಮೊದಲು ವಯಸ್ಕ ಚಲನಚಿತ್ರ ತಾರೆ ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ಪಾವತಿ ಮಾಡಿದ ಕುರಿತು ಕ್ರಿಮಿನಲ್ ಆರೋಪಗಳನ್ನು ಎದುರಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಧ್ಯಾಹ್ನ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀಲಿ ಚಿತ್ರದ ನಟಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್…

Read More

ನವದೆಹಲಿ: ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್‍ನಲ್ಲಿದ್ದ  ಎ.ಟಿ ರಾಮಸ್ವಾಮಿ ಅವರು ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬೆನ್ನಲ್ಲೇ ಇಂದು ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ (Anurag Thakur) ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಬಿಜೆಪಿಯ ಅರಕಲಗೂಡು ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ರಾಮಸ್ವಾಮಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದ ಅತಿದೊಡ್ಡ ಪಕ್ಷವನ್ನು ಸೇರಿದ್ದಾರೆ. ಅವರ ಸೇರ್ಪಡೆಯಿಂದ ಬಿಜೆಪಿಗೂ ಶಕ್ತಿ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಹೆಚ್ಚು ಕೆಲಸ ಮಾಡಿದೆ ಎಂದು ಹೇಳಿದರು.

Read More

ನವದೆಹಲಿ : 34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಪಂಜಾಬ್ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು 10 ತಿಂಗಳ ನಂತರ ಇಂದು ಪಟಿಯಾಲ ಜೈಲಿನಿಂದ ಬಿಡುಗಡೆಯಾಗಿದ್ದಾರೆ.34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, 59 ವರ್ಷದ ನವಜೋತ್‌ ಸಿಂಗ್‌ ಸಿಧು ಒಂದು ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಇದೀಗ 10 ತಿಂಗಳ ಬಳಿಕ ಪಟಿಯಾಲ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 1988ರಲ್ಲಿ ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದ ಸಂದರ್ಭದಲ್ಲಿ, ಕೋಪದ ಭರದಲ್ಲಿ ಹಿರಿಯ ನಾಗರಿಕರೊಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆ ವ್ಯಕ್ತಿ, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಬಳಿಕ ಪೊಲೀಸರು ನವಜೋತ್‌ ಸಿಧು ಮತ್ತು ಅವರ ಸ್ನೇಹಿತರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

Read More

ಜೈಪುರ: ಬಿಜೆಪಿ ಹಾಗೂ ಆರ್‌ಎಸ್‍ಎಸ್ ಹಿಂದೂ ರಾಷ್ಟ್ರದ ಬಗ್ಗೆ ಪದೇ ಪದೇ ಉಲ್ಲೇಖಿಸುತ್ತಿರುವ ಹಿನ್ನೆಲೆಯಲ್ಲಿ ಅಮೃತಪಾಲ್ ಸಿಂಗ್ ಖಲಿಸ್ತಾನದ ಬಗ್ಗೆ ಮಾತನಾಡಲು ಧೈರ್ಯ ಮಾಡಿದ್ದಾನೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‍ನಲ್ಲಿ ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತ್‍ಪಾಲ್  ಎಂಬ ಹೊಸ ಹೆಸರು ಹುಟ್ಟಿಕೊಂಡಿದೆ. ಮೋಹನ್ ಭಾಗವತ್ ಹಾಗೂ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದರೆ, ನಾನು ಖಲಿಸ್ತಾನ್ ಬಗ್ಗೆ ಯಾಕೆ ಮಾತನಾಡಬಾರದು? ನಿಮ್ಮ ಮಾತನ್ನು ಕೇಳಿ ಧೈರ್ಯ ಬಂದಿದೆ ಎಂದು ಅಮೃತ್‍ಪಾಲ್ ಹೇಳಿದ್ದಾನೆ ಎಂದು ಕಿಡಿಕಾರಿದರು. ಬೆಂಕಿ ಹಚ್ಚುವುದು ಸುಲಭ. ಆದರೆ ಅದನ್ನು ನಂದಿಸಲು ಸಮಯ ಹಿಡಿಯುತ್ತದೆ. ಇದು ದೇಶದಲ್ಲಿ ಮೊದಲ ಬಾರಿಗೆ ಆಗುತ್ತಿಲ್ಲ. ಇದರಿಂದಲೇ ಇಂದಿರಾಗಾಂಧಿ ಅವರು ಹತ್ಯೆಯಾದರು. ಇಂದು ದೇಶದಲ್ಲಿ ಧರ್ಮ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಆದರೆ ದೇಶದ ಒಳಿತಿಗಾಗಿ ಎಲ್ಲ ಧರ್ಮ, ಜಾತಿಗೆ ಸೇರಿದವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ…

Read More

ನವದೆಹಲಿ: ಶಿವಸೇನಾ (Shiv Sena) ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಜೀವ ಬೆದರಿಕೆ ಸಂದೇಶಗಳು ಬಂದಿವೆ. ಈ ಬಗ್ಗೆ ಶುಕ್ರವಾರ ರಾತ್ರಿ ಮುಂಬೈ (Mumbai) ಪೊಲೀಸರಿಗೆ ತಿಳಿಸಿದ್ದೇನೆ ಎಂದು ರಾವತ್ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ರಾವತ್ ಪ್ರತಿಕ್ರಿಯಿಸಿ, ನನಗೆ ಈ ಹಿಂದೆ ಸಹ ಬೆದರಿಕೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿಪಕ್ಷ ನಾಯಕರ ಭದ್ರತೆಯ ಬಗ್ಗೆ ರಾಜ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದು, ಪ್ರಸ್ತುತ ಪಂಜಾಬ್ ಜೈಲಿನಲ್ಲಿದ್ದಾನೆ. ಆತನ ಮೇಲೆ ಗಾಯಕನ ತಂದೆ ಬಲ್ಕೌರ್ ಸಿಂಗ್ ಮತ್ತು ನಟ ಸಲ್ಮಾನ್ ಖಾನ್‍ಗೆ (Salman Khan) ಬೆದರಿಕೆ ಒಡ್ಡಿದ ಆರೋಪಗಳಿವೆ.

Read More

ನವದೆಹಲಿ: ಜನವರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ  ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ  ಅನ್ನು 21 ನೇ ಶತಮಾನದ ಕೌರವರು ಎಂದು ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಆರ್‌ಎಸ್‌ಎಸ್ ಸ್ವಯಂಸೇವಕ ಎಂದು ಹೇಳಿರುವ ಕಮಲ್ ಭಡೋರಿಯಾ ಅವರ ಪರವಾಗಿ ದೂರು ಸಲ್ಲಿಸಿರುವುದಾಗಿ ವಕೀಲ ಅರುಣ್ ಭಡೋರಿಯಾ ಹೇಳಿದ್ದಾರೆ. ನ್ಯಾಯಾಲಯವು ಏಪ್ರಿಲ್ 12 ರಂದು ದೂರನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು. ನಾವು ಭಾರತೀಯ ದಂಡ ಸಂಹಿತೆಯ (IPC) 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ. ಎರಡು ನಿಬಂಧನೆಗಳು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿವೆ ಮತ್ತು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ. ಈ ದೂರು ಜನವರಿಯಲ್ಲಿ ಕುರುಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದೆ ಎಂದು ಅರುಣ್ ಹೇಳಿದ್ದಾರೆ. ರಾಹುಲ್ ಗಾಂಧಿ ಆರ್‌ಎಸ್‌ಎಸ್ ಅನ್ನು 21 ನೇ ಶತಮಾನದ ಕೌರವರೊಂದಿಗೆ ಹೋಲಿಸಿದ್ದಾರೆ. ಅವರು(ಆರ್‌ಎಸ್‌ಎಸ್) ಈಗ ಖಾಕಿ ಹಾಫ್…

Read More

ನವದೆಹಲಿ: ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಪ್ರಯಾಣಿಕರು ಓಡಾಟುವ ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದಾನಲ್ಲದೇ ಶೌಚಾಲಯದ ಸುತ್ತ ಮಲ ವಿಸರ್ಜನೆ ಮಾಡಿ ಉಳಿದ ಪ್ರಯಾಣಿಕರಿಗೆ ತೀವ್ರ ಅಸಹ್ಯ ಮತ್ತು ಮುಜುಗರ ಉಂಟು ಮಾಡಿದ್ದಾನೆ. ಘಟನೆ ಕುರಿತು ಟ್ವೀಟರ್‌ನಲ್ಲಿ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಇತ್ತೀಚೆಗೆ ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರು ಪಾನಮತ್ತರಾಗಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಂತಹ ಅಸಹ್ಯಕರ ಘಟನೆಗಳನ್ನೇ ನೆನಪಿಸುವಂತಿದೆ. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಭಾಸ್ಕರ್‌ ದೇವ್‌ ಕೊನ್ವಾರ್‌ ಎಂಬುವವರು ಟ್ವೀಟರ್‌ನಲ್ಲಿ ಘಟನೆಯ ಫೋಟೊ ಹಂಚಿಕೊಂಡಿದ್ದು, ವಿಮಾನದ ಮಹಿಳಾ ಸಿಬ್ಬಂದಿಗಳು ಕೂಡಲೇ ಇದನ್ನು ಶುಚಿಗೊಳಿಸಿದರು. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಸೆಲ್ಯೂಟ್‌ ಗರ್ಲ್ಸ್ ಪವರ್‌ ಎಂದು ಬರೆದುಕೊಂಡಿದ್ದಾರೆ. ಸಿಬ್ಬಂದಿಗಳು ಕೈಕವಚ ಮತ್ತು ಮಾಸ್ಕ್‌ ಧರಿಸಿ ಪಾನಮತ್ತ ಮಾಡಿದ ವಾಂತಿಯನ್ನು ಶುಚಿಗೊಳಿಸಿ ಸ್ಪ್ರೇ ಮಾಡುತ್ತಿರುವ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ಮಾರ್ಚ್ 26 ರಂದು ಈ ಘಟನೆ ನಡೆದಿದೆ.

Read More