ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ನಟನ ಬಗೆಗಿನ ಹುಚ್ಚು ಅಭಿಮಾನ ಮೆರೆಯುತ್ತಿದ್ದಾರೆ. ಈ ಹಿಂದೆ ದರ್ಶನ್ ಗೆ ನೀಡಿದ್ದ ಖೈದಿ ನಂಬರ್ ಟ್ರೆಂಡ್ ಆಗಿತ್ತು. ಇದೀಗ ಬಳ್ಳಾರಿ ಜೈಲಿಗೆ ತೆರಳುವ ವೇಳೆ ದರ್ಶನ್ ಧರಿಸಿದ್ದ ಟೀ ಶರ್ಟ್ ಟ್ರೆಂಡ್ ಆಗಿದೆ. ಕೈದಿ ನಂಬರ್ ಆಯ್ತು. ಈಗ ದರ್ಶನ್ ಧರಿಸಿದ್ದ ಮಾದರಿಯ ಟೀ ಶರ್ಟ್ ಟ್ರೆಂಡ್ ಆಗಿದೆ. ದರ್ಶನ್ ಧರಿಸಿದ್ದ ಮಾದರಿಯ ಟೀ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಆರೋಪಿ ದರ್ಶನ್, ಪೂಮಾ ಟೀ ಶರ್ಟ್ ಧರಿಸಿದ್ದರು. ಅದೆ ಮಾದರಿಯ ಟಿ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿದ್ದಾರೆ. ಏಳು ಜನರ ತಂಡ ದರ್ಶನ್ ಧರಿಸಿದ ಕಪ್ಪು ಬಣ್ಣದ ಪೂಮಾ ಟೀ ಶರ್ಟ್ ಧರಿಸಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ…
Author: Prajatv Kannada
ಅನೇಕ ಜನರು ಬೆಳಿಗ್ಗೆ ಎದ್ದು ನಿಂಬೆ ರಸವನ್ನು ಕುಡಿಯುತ್ತಾರೆ. ನಿಂಬೆ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಕರುಳುಗಳು ಶುದ್ಧವಾಗುತ್ತವೆ ಮತ್ತು ಜೀರ್ಣಕ್ರಿಯೆ ಬಲವಾಗುತ್ತದೆ. ಅಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ. ನಿಂಬೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ. ಇದು ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ನಿಂಬೆಹಣ್ಣು ತಿನ್ನುವುದರಿಂದ ದೇಹ ಫ್ರೆಶ್ ಆಗಿರುತ್ತದೆ ಮತ್ತು ಕ್ಯಾನ್ಸರ್ ಬರದಂತೆ ನೋಡಿಕೊಳ್ಳುತ್ತದೆ. ದಿನಕ್ಕೆ ಎರಡು ಬಾರಿ ನಿಂಬೆ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ನೆಗಡಿ, ಕೆಮ್ಮು ಮತ್ತು ನೋಯುತ್ತಿರುವ ಗಂಟಲುಗಳಿಂದ ಪರಿಹಾರವನ್ನು ನೀಡುತ್ತದೆ. ಬೆಳಿಗ್ಗೆ ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುತ್ತದೆ. ನಿಂಬೆ ನೀರು ತೂಕ ನಷ್ಟಕ್ಕೆ ತುಂಬಾ ಸಹಾಯಕವಾಗಿದೆ ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಇದರ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಕಡಿಮೆ ಇದರ ಫೈಬರ್ ಕಾರ್ಬೋಹೈಡ್ರೇಟ್ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ ರಕ್ತದಲ್ಲಿನ ಸಕ್ಕರೆಯ…
ಫಾಫ್ ಡುಪ್ಲೆಸಿಸ್ ಬಳಿಕ ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ ಜೋರಾಗಿದೆ. ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ಗೆ ಈಗ 40 ವರ್ಷ. ಈ ಸೀಸನ್ ಆಡಿದ್ರೂ ಮುಂದಿನ 3 ವರ್ಷ ಫಾಫ್ ಆಡುವುದು ಕಷ್ಟ. ಹಾಗಾಗಿ ತನಗೆ ವಯಸ್ಸಾದ ಕಾರಣ ಫಾಫ್ ಐಪಿಎಲ್ಗೆ ನಿವೃತ್ತಿ ಘೋಷಿಸಲಿದ್ದಾರೆ. ಈ ಕಾರಣಕ್ಕೆ ಆರ್ಸಿಬಿ ತಂಡ ಹೊಸ ನಾಯಕನನ್ನು ಹುಡುಕಬೇಕಾಗಿದೆ. ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಆರ್ಸಿಬಿ ತಂಡದಲ್ಲಿರೋ ಕೊಹ್ಲಿ ಆಪ್ತ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಪಟ್ಟ ಕಟ್ಟಬಹುದು. ಇಲ್ಲದೆ ಹೋದಲ್ಲಿ ಕರ್ನಾಟಕದ ಹುಡುಗ ಲಕ್ನೋ ತಂಡದ ಕ್ಯಾಪ್ಟನ್ ಆಗಿರೋ ಕೆ.ಎಲ್ ರಾಹುಲ್ ಅವರನ್ನು ಆರ್ಸಿಬಿ ಕ್ಯಾಪ್ಟನ್ ಮಾಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಕಳೆದ ಸೀಸನ್ನಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಜೋರು ಗಲಾಟೆ ಆಗಿತ್ತು. ಕನ್ನಡಿಗ ರಾಹುಲ್ ಮುಂದಿನ ಸೀಸನ್ ವೇಳೆಗೆ ಲಕ್ನೋ ತೊರೆದು ಆರ್ಸಿಬಿಗೆ ಬರಲಿದ್ದಾರೆ ಎಂದು ವರದಿಯಾಗಿದೆ.
ವೆಸ್ಟ್ ಇಂಡೀಸ್‌ನ ಅನುಭವಿ ಆಟಗಾರ ಶಾನನ್ ಗೇಬ್ರಿಯಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈ ಬಾರಿಯ ಸಿಪಿಎಲ್ ಮುಕ್ತಾಯದೊಂದಿಗೆ ವೆಸ್ಟ್ ಇಂಡೀಸ್ ಟಿ20 ಲೀಗ್ಗೆ ವಿದಾಯ ಹೇಳುತ್ತಿರುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೊ ಕೆರಿಬಿಯನ್ ಪ್ರೀಮಿಯರ್ ಲೀಗ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಉತ್ತಮ ಪ್ರಯಾಣ. ಹಾಗೆಯೇ ಇದು ನನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಸೀಸನ್. ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದೊಂದಿಗೆ ನಾನು ಸಿಪಿಎಲ್ ಆರಂಭಿಸಿದ್ದೆ, ಇದೀಗ ಇದೇ ತಂಡದೊಂದಿಗೆ ವಿದಾಯ ಹೇಳುತ್ತಿರುವುದಾಗಿ ಡ್ವೇನ್ ಬ್ರಾವೊ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಡ್ವೇನ್ ಬ್ರಾವೊ ಟಿ20 ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ತವರಿಗೆ ಟಿ20 ಲೀಗ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಮುಂಬರುವ ದಿನಗಳಲ್ಲಿ ಇತರೆ ಲೀಗ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 104 ಪಂದ್ಯಗಳನ್ನಾಡಿರುವ ಬ್ರಾವೊ 74 ಇನಿಂಗ್ಸ್ಗಳಿಂದ ಒಟ್ಟು 1155…
ನಟಿಯರಿಗೆ ನೀಡಲಾಗುವ ಲೈಂಗಿಕ ಕಿರುಕುಳ ಕೇವಲ ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗಿಲ್ಲ, ಅದು ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟಿದೆ ಎಂದು ಖ್ಯಾತ ನಟಿ ರಾಧಿಕಾ ಶರತ್‌ಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ‘ನಾನೊಮ್ಮೆ ಕೇರಳದಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿ ಶೂಟಿಂಗ್ ಸೆಟ್‌ನಲ್ಲಿದ್ದ ಕೆಲವು ಹುಡುಗರು ಒಂದೆಡೆ ಕುಳಿತು ಮೊಬೈಲಲ್ಲಿ ಏನನ್ನೋ ನೋಡುತ್ತ ನಗುತ್ತಾ ಇದ್ದರು. ನನಗೆ ಏನೋ ಸಂಶಯ ಬಂದು ಅಲ್ಲೇ ಆ ಕಡೆಯಿಂದ ಈ ಕಡೆ ಹೋಗಿ ಮೊಬೈಲಲ್ಲಿ ಅದೇನು ನೋಡುತ್ತಿದ್ದಾರೆ ಎಂದು ನೋಡಿದರೆ ಅವರು ವಿಡಿಯೋ ಒಂದನ್ನು ನೋಡುತ್ತಿದ್ದರು. ಅದರ ಬಗ್ಗೆ ನಾನು ಒಬ್ಬರ ಬಳಿ ವಿಚಾರಿಸಿದೆ. ಅವರು ಹೇಳಿದ್ದು ಕೇಳಿ ನಾನು ಅಕ್ಷರಶಃ ದಂಗಾಗಿ ಹೋದೆ. ಕಾರಣ, ನಾವು ಮಹಿಳಾ ಕಲಾವಿದರು ಉಪಯೋಗಿಸುವ ವ್ಯಾನಿಟಿ ವ್ಯಾನ್‌ನಲ್ಲಿ ಅವರು ಹಿಡನ್ ಕ್ಯಾಮರಾ ಅಳವಡಿಸಿದ್ದಾರಂತೆ. ಆ ಸ್ಪೈ ಕ್ಯಾಮೆರಾ ಮೂಲಕ ಅವರು ನಾವೆಲ್ಲರೂ ಬಟ್ಟೆ ಬದಲಾಯಿಸುವುದನ್ನು ಹಾಗು ಖಾಸಗಿ ಕ್ಷಣಗಳ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂಬುದು ತಿಳಿಯಿತು. ಅಷ್ಟೇ ಅಲ್ಲ, ಅವರು ಅದನ್ನು…
ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸೆಕ್ಯುರಿಟೀಸ್ ಆಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿಯನ್ನು ಆನ್ಲೈನ್ ಮೂಲಕ ಹಾಕಬಹುದಾಗಿದೆ. ಅಭ್ಯರ್ಥಿಗಳು ಸೆಬಿ ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ, ಈ ಜಾಬ್ಗೆ ಟ್ರೈ ಮಾಡಬಹುದು. ಸೆಬಿಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ. ನಿಗದಿತ ಕೊನೆ ದಿನಾಂಕದ ಒಳಗೆ ಬರುವಂತ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತದೆ. ಆ ಮೇಲೆ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಇನ್ನು ಈ ಹುದ್ದೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ. ಅರ್ಹತೆ: ಅಭ್ಯರ್ಥಿ ಭಾರತೀಯ ನಾಗರಿಕನಾಗಿರಬೇಕು 30 ವರ್ಷದ ಒಳಗಿನವರಿಗೆ ಅವಕಾಶ ಇದೆ ತಿಂಗಳಿಗೆ ಸಂಬಳ- 70,000 ರೂ.ಗಳು ಅಭ್ಯರ್ಥಿಗೆ ಇರಬೇಕಾದ ಕೌಶಲ್ಯಗಳೇನು..? ಹಣಕಾಸಿನ ಮಾರುಕಟ್ಟೆ ಬಗ್ಗೆ ತಿಳುವಳಿಕೆ ಇರಬೇಕು ವಿಶ್ಲೇಷಣಾತ್ಮಕ ಸಾಮರ್ಥ್ಯ ಇರಬೇಕು ಮಾಹಿತಿ ತಂತ್ರಜ್ಞಾನದ ಪರಿಕರಗಳ ಜ್ಞಾನ ಇರಬೇಕು ಸಂಶೋಧನೆ ಬಗ್ಗೆ…
ಪಾಟ್ನಾ: ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರ ಪಕ್ಷದ ನಾಯಕ ಕೆ.ಸಿ.ತ್ಯಾಗಿ ಅವರು ಜೆಡಿಯು ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಜೆಡಿಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಅವರು ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ರಾಜೀವ್ ರಂಜನ್ ಪ್ರಸಾದ್ ಅವರನ್ನು ಸಿಎಂ ನಿತೀಶ್ ಕುಮಾರ್ ನೇಮಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪಕ್ಷ ತಿಳಿಸಿದೆ.
ಬಾಗಲಕೋಟೆ:- ಬಾದಾಮಿ ಕ್ಷೇತ್ರದ ಗುಳೆದಗುಡ್ಡ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮಚ್ಚಿನ ಸದ್ದು ಮಾಡಿದ ಘಟನೆ ಜರುಗಿದೆ.ಲಾಂಗು, ಮಚ್ಚು, ಕಟ್ಟಿಗೆ, ದೊಣ್ಣೆ, ಕಲ್ಲು ಸಮೇತ ಗುಂಪು ಬಂದಿದ್ದವು. ಪೊಲೀಸರ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ. 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಶಿವು ಕೊಡಬಾಗಿ, ಇಮಾಮ್ ಕಲಾಶಿ, ವಿಶ್ವನಾಥ ಅಂಬಿಗೇರ್, ಮೊಹಮ್ಮದ್ ಅಲಿ ಮಂಟೂರ್ ಬಂಧಿತರು. ಸಮೀರ್ ಮುಲ್ಲಾ, ವಿಲಾಸ್ ರಾಠೋಡ, ಇಮ್ರಾನ್ ಗಾಡಿ, ಸಮೀರ್ ಚಿಮ್ಮಲಗಿ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಘಟನೆ ಸಂಬಂಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಬೆಳಗಾವಿ:- ಕುಂದಾನಗರಿ ಬೆಳಗಾವಿಯಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಡ್ರಗ್ಸ್ ಮಾರಾಟ ಮಾಡುವುದನ್ನೇ ಬಿಜಿನೆಸ್ ಮಾಡಿಕೊಂಡಿರುವ ದುಷ್ಕರ್ಮಿಗಳು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಬೇರೆ ಬೇರೆ ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಗಾಂಜಾ ಮಾರಾಟ ಮಾಡುತ್ತಿರುವ ಸಂಶಯದಲ್ಲಿ ಬೆಳಗಾವಿ ನಗರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಮಾಳಮಾರುತಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ನು ಆರು ತಿಂಗಳ ಅವಧಿಯಲ್ಲಿ ಸುಮಾರು 110ಕೆಜಿ ಗಾಂಜಾ ಮತ್ತು 700ಗ್ರಾಂ ಬೇರೆ ಬೇರೆ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಗಾಂಜಾ, ಡ್ರಗ್ಸ್ ಹಾವಳಿ ನಡುವೆ ಬೆಳಗಾವಿಗೆ ಮತ್ತೊಂದು ಡೆಂಜರಸ್ ಡ್ರಗ್ಸ್ ಎಂಟ್ರಿಯಾಗಿದೆ. ಹೆರಾಯಿನ್ ಹೆಸರಿನ ಡ್ರಗ್ಸ್ ಇದೀಗ ಬೆಳಗಾವಿ ನಗರದಲ್ಲಿ ಸಪ್ಲೈ ಮಾಡಲಾಗುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಲ್ಲ ಠಾಣೆಗಳಿಗೆ ಸೂಚನೆ ನೀಡಿದ್ದರು. ಡ್ರಗ್ಸ್ ಹಾವಳಿ ಕಂಟ್ರೋಲ್ ಮಾಡುವುದಕ್ಕೆ…
ಬಳ್ಳಾರಿ:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲೂ ಕೂಡ ದರ್ಶನ್ ಗೆ ಸಂಕಷ್ಟ ತಪ್ಪುತ್ತಿಲ್ಲ. ದರ್ಶನ ವಿಚಾರಣೆಗೆ ಬೆಂಗಳೂರು ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ. ಈಗಾಗಲೇ ಕೋರ್ಟ್ನಿಂದ 25 ದಿನಗಳ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ನನ್ನು ಪೊಲೀಸರು ವಿಚಾರಣೆ ಮಾಡಲಿದ್ದಾರೆ. ಅಂತೆಯೇ ಇಂದು ಬೆಂಗಳೂರಿನ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ. ವಿಡಿಯೋ ಕಾಲ್, ಟೀ ಪಾರ್ಟಿ ಫೋಟೋ ವೈರಲ್ ಸಂಬಂಧ ದರ್ಶನ್ ಮೇಲೆ ಕೇಸ್ ದಾಖಲಾಗಿದೆ. ಫೋಟೋ, ವಿಡಿಯೋ ವೈರಲ್ ಕೇಸ್‌ಗಲ್ಲಿ ದರ್ಶನ ಮುಖ್ಯ ಆರೋಪಿ ಆಗಿದ್ದಾರೆ. ದರ್ಶನ್, ಕುಳ್ಳ ಸೀನ, ವಿಲ್ಸನ್ ಗಾರ್ಡನ್ ನಾಗ ಹಾಗೂ ನಾಗರಾಜ್ ಮೇಕೂ ಕೇಸ್ ದಾಖಲಾಗಿದೆ. ದರ್ಶನ ಹೇಳಿಕೆ ದಾಖಲಿಸಿಕೊಂಡು ನಾಗನ ವಿಚಾರಣೆ ಸಾಧ್ಯತೆ ಇದೆ. ದರ್ಶನ ವಿಚಾರಣೆಗಾಗಿ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ.