ಬೆಂಗಳೂರು: BJP vs BJP ಧಾರಾವಾಹಿಯ ಹೊಸ ಹೊಸ ಎಪಿಸೋಡ್‌ಗಳು ಹೊರಬರುತ್ತಲೇ ಇವೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, BJPvsBJP ಧಾರಾವಾಹಿಯ ಹೊಸ ಹೊಸ ಎಪಿಸೋಡ್‌ಗಳು ಹೊರಬರುತ್ತಲೇ ಇವೆ! ಸದಾ ದ್ವೇಷ ಕಾರುವ ಬಿಜೆಪಿಯ ಹರಕು ಬಾಯಿಯವರನ್ನು ಕಂಡು ಸ್ವತಃ ಬಿಜೆಪಿಯವರಿಗೆ ಅಸಹ್ಯ ಹುಟ್ಟಿದೆ. BSY ವಿರುದ್ಧದ ಸಂತೋಷ ಕೂಟದ ಅಸ್ತ್ರವಾಗಿರುವ ಈಶ್ವರಪ್ಪರಿಗೆ BSY ಅವರು ಆಯನೂರು ಅಸ್ತ್ರ ಬಿಟ್ಟಿದ್ದಾರೆಯೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟ್ ನಲ್ಲಿ ಪ್ರಶ್ನಿಸಿದೆ. ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳದ ಕುರಿತು ಹಿಂದೆ ಅಬ್ಬರಿಸಿ ಬೊಬ್ಬಿರಿದಿದ್ದ ಒಳಗೊಳಗೇ ದ್ರೋಹದ ಚೂರಿ ಹಾಕಿದೆ. ಮೀಸಲಾತಿ ಹೆಚ್ಚಳದ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸದೆ ಕಿವಿ ಮೇಲೆ ಹೂವಿಟ್ಟಿದೆ ಬಿಜೆಪಿ. ಜನರನ್ನು ಮೋಸಗೊಳಿಸುವುದರಲ್ಲಿ ಬಿಜೆಪಿ ಪಿಹೆಚ್‌ಡಿ ಮಾಡಿರುವಂತಿದೆ ಎಂದು ವ್ಯಂಗ್ಯವಾಡಿದೆ.
Author: Prajatv Kannada
ಬೆಂಗಳೂರು: ಕರ್ನಾಟಕ 2023 ರ ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಚೆಕ್ಪೋಸ್ಟ್ ನಿರ್ಮಿಸುವ ಮೂಲಕ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಅದರಂತೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಳ್ಳಿ, ಹಣವನ್ನ ಜಪ್ತಿ ಮಾಡಲಾಗಿದ್ದು, ಇದೀಗ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೆಕ್ಕವಿಲ್ಲದ 30 ಲಕ್ಷ ಹಣ ಪತ್ತೆಯಾಗಿದೆ. ಲಾಲ್ ಭಾಗ್ ದಕ್ಷಿಣ ಗೇಟ್ ಬಳಿ ಹಣ ಪತ್ತೆ ಆಗಿದ್ದು, ಅನಧಿಕೃತವಾಗಿ ಯಾವುದೇ ದಾಖಲಾತಿಗಳಿಲ್ಲದೆ ಹಣ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಕುಂದನ್ ಗುಜರ್, ರತನ್ ಗುಪ್ತಾ ಬಂಧಿತರು ಎಂದು ಗುರುತಿಸಲಾಗಿದೆ. ಇನ್ನೂ ಬಂಧಿತರಿಂದ 30 ಲಕ್ಷ ಹಣ ವಶಕ್ಕೆ ಪಡೆದ ಸಿದ್ದಾಪುರ ಪೊಲೀಸರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಲಮಂಗಲ: ರಾಜ್ಯ ಸಾರ್ವತ್ರಿಕ ಚುನಾವಣೆ (Karnataka Assembly Election) ದಿನಾಂಕ ಘೋಷಣೆಯಾಗಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳು ಅಖಾಡದಲ್ಲಿ ಗುದ್ದಾಡಲು ಸಿದ್ಧವಾಗಿವೆ. ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಬಿಜೆಪಿ (BJP) ವಿಭಿನ್ನವಾಗಿದ್ದು, ಹಾಲಿ, ಮಾಜಿ ಶಾಸಕರ ಮತ್ತು ಕ್ಷೇತ್ರಗಳಲ್ಲಿನ ಮುಖಂಡರ, ಪರವಾಗಿ ಅಲೆ ಹೇಗಿದೆ ಎಂದು ಪರೀಕ್ಷಿಸಿ ಕೊನೆಗೆ ಟಿಕೆಟ್ ಫೈನಲ್ ಮಾಡಲಿದೆ. ಈ ಸಂಬಂಧ ನಿನ್ನೆ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖಂಡರ ಅಗ್ನಿಪರೀಕ್ಷೆ ನಡೆದಿದ್ದು, ಕಾರ್ಯರ್ತರು, ಸ್ಥಳೀಯ ನಾಯಕರು, ತಮ್ಮ ನೆಚ್ಚಿನ ನಾಯಕರಿಗೆ ಗೌಪ್ಯ ಮತದಾನ ಮಾಡಿ ಇವರಿಗೆ ಟಿಕೆಟ್ ನೀಡಿ ಎಂದಿದ್ದಾರೆ. ಇನ್ನು ಮತಪೆಟ್ಟಿಗೆ ರಾಜ್ಯ ನಾಯಕರ ಕೈ ತಲುಪಿದ್ದು, ಬೆಂಗಳೂರು ಉತ್ತರ ತಾಲೂಕಿನ ಆಲೂರಿನಲ್ಲಿ ಇಂದು ಮತ್ತು ನಾಳೆ (ಏ.1 ಮತ್ತು 2) ಎರಡು ದಿನ ಕಾಲ ನಡೆಯುತ್ತಿರುವ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿ ಕೇಂದ್ರ ನಾಯಕರ ಕೈ…
ಬೆಂಗಳೂರು: ಜೆಡಿಎಸ್ನವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ರು ಎಂಬ ಎ.ಟಿ.ರಾಮಸ್ವಾಮಿ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ನಾನು ಅವರನ್ನು ಹೊರಗೆ ಹಾಕಿಲ್ಲ. ಹಾಸನಕ್ಕೆ ಸಂಬಂಧಿಸಿದ ನಿರ್ಣಯ ನಾನು ಮಾಡಿಲ್ಲ. ಕಳೆದ ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಅಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ. ರಾಮಸ್ವಾಮಿ ಹಾಗೇ ಹೇಳಿರಬೇಕು. ಗುಬ್ಬಿ ಶ್ರೀನಿವಾಸ್ ಕೂಡಾ ಅದೇ ಹೇಳಿದ್ದು ಅಲ್ಲವೇ?. ಘಟನೆಗೆ ಏನಾದರು ಕಾರಣ ಹೇಳಬೇಕು ಅದಕ್ಕೆ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಏನಾಗಿದೆ ಅಂತ ಗೊತ್ತಿದೆ” ಎಂದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ರಮ್ಯಾ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ”ಯಾರೇ ಸ್ಪರ್ಧೆ ಮಾಡಿದ್ರು ನನಗೇನು ಆತಂಕ ಇಲ್ಲ. ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದು ನನಗೆ ಮುಖ್ಯ ಅಲ್ಲ. ಈಗಾಗಲೇ ನಾನು ಚನ್ನಪಟ್ಟಣದಿಂದ ನಿಲ್ಲಬೇಕು ಅಂತ ಆಗಿದೆ. ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ.…
ಬೆಂಗಳೂರು: ಚುನಾವಣೆಗೆ ಕಣಕ್ಕಿಳಿಯಲಿರುವ ಜೆಡಿಎಸ್ ಹುರಿಯಾಳುಗಳ 2ನೇ ಪಟ್ಟಿಯು ಸಿದ್ಧಗೊಂಡಿದ್ದು, ಏ.. 1ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ ನಲ್ಲಿ, ಜೆಡಿಎಸ್ ಸುಮಾರು 90 ಕ್ಷೇತ್ರಗಳಿಗಾಗಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ 35ರಿಂದ 40 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು 2ನೇ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿದ್ದು ಪಟ್ಟಿಯು ಏ. 1ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ, ಇದರಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯ ಹೆಸರು ಇರುತ್ತದಾ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಇತ್ತೀಚೆಗೆ, ಭವಾನಿ ರೇವಣ್ಣ ಅವರು ಹಾಸನದಿಂದ ಸ್ಪರ್ಧಿಸುವುದಾಗಿ ಹೇಳಿದ್ದು, ದೇವೇಗೌಡರ ಕುಟುಂಬದಲ್ಲೇ ಆಂತರಿಕ ಗೊಂದಲಕ್ಕೆ ಕಾರಣವಾಗಿತ್ತು
ಬೆಂಗಳೂರು: ಜೆಡಿಎಸ್ ಗೆ ರಾಜೀನಾಮೆ ನೀಡಿರುವ ಎ.ಟಿ.ರಾಮಸ್ವಾಮಿ ಅವರು ಬಿಜೆಪಿ ಬರುತ್ತಾರೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಬರುವರು. ನಾನೇ ಖುದ್ದಾಗಿ ದೆಹಲಿಗೆ ಕರೆದೊಯ್ದು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ಮಾಹಿತಿ ನೀಡಿದರು. ಪ್ರತಿದಿನ ಮುಖಂಡರ ಜೊತೆ ಬಿಜೆಪಿಗೆ ಮತವನ್ನು ಕೇಳುತ್ತಿದ್ದೇವೆ. ಮನೆ ಮನೆಗೆ ಭೇಟಿ ನೀಡಿ ಹಾಗೂ ಬೂತ್ ಮಟ್ಟದ ಸಭೆಗಳನ್ನು ನಡೆಸುತ್ತಿದ್ದೇವೆ. ಕ್ಷೇತ್ರದ ಜನರಿಗಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೆಲಸ ಕಾರ್ಯವನ್ನು ಜನ ಗುರುತಿಸಿದ್ದಾರೆ. ನನಗೆ ಉತ್ತಮ ಮಟ್ಟದಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಇದೇ ವೇಳೆ ಸಚಿವರು ಕ್ಷೇತ್ರದ ಜನರನ್ನು ಪ್ರಶಂಸಿಸಿದರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲೂ ಕೂಡ ಗುಡುಗು ಸಹಿತ ಭಾರೀ ಮಳೆಯಾಗಬಹುದು. ಉತ್ತರ ಒಳನಾಡಿನ ಬೀದರ್, ಕಲಬುರಗಿ ಜಿಲ್ಲೆಯಲ್ಲೂ ಮಳೆ ಸಂಭವವಿದ್ದು, ತಗ್ಗುಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ನಯ ವಂಚಕನೊಬ್ಬನ ಬಂಧನವಾಗಿದೆ.ಸಿನಿಮಾ ಚಾನ್ಸ್ (Film Chance) ಕೊಡೋದಾಗಿ ಹೇಳಿ ವಂಚಿಸಿದ್ದ ಆರೋಪಿ ಧವನ್ ಸೋಹಾನನ್ನು ರಾಜಾಜಿನಗರ ಪೊಲೀಸರು (Rajajinagar Police) ಬಂಧಿಸಿದ್ದಾರೆ.ಧವನ್ ಬರೋಬ್ಬರಿ 58 ಮಂದಿಗೆ ವಂಚನೆ ಮಾಡಿದ್ದಾನೆ. ಪ್ರಖ್ಯಾತ ಸಿನಿಮಾ ನಟ-ನಟಿಯರ ಜೊತೆ ರೀಲ್ಸ್ ಮತ್ತೆ ಫೋಟೋ ತೆಗೆಸಿಕೊಳ್ತಾನೆ. ಈತನ ವಂಚನೆಗೆ ಫೋಟೋ, ವೀಡಿಯೋಸ್‍ಗಳನ್ನೆ ಬಂಡವಾಳ ಮಾಡಿಕೊಳ್ತಾ ಇದ್ದ. ಆಕ್ಟಿಂಗ್ ಕ್ಲಾಸ್ ಗಾಗಿ ಪ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಎಂಬ ಇನ್ಸ್ ಟಿಟ್ಯೂಟ್ ತೆರೆದಿದ್ದ ಆರೋಪಿ ಧವನ್, ಸಿನಿಮಾದಲ್ಲಿ ನಟಿಸಬೇಕಂಬ ಹಂಬಲ ಇರುವವರನ್ನು ಟಾರ್ಗೆಟ್ ಮಾಡುತ್ತಿದ್ದ. ಪ್ರತಿಭಾವಂತ ಯುವಕ ಯುವತಿಯರನ್ನ ನಂಬಿಸಿ ವಂಚನೆ ಮಾಡುತ್ತಿದ್ದ. ಈ ಇನ್ಸ್ ಟ್ಯೂಟ್ ನಟನೆ ಕಲಿಯಲು ಬರುವವರಿಗೆ ವಂಚನೆ ಮಾಡಿದ್ದ. ಹೀಗೆ ಒಬ್ಬೊಬ್ಬರ ಬಳಿ 30 ರಿಂದ 50 ಸಾವಿರ ಪಡೆದು ವಂಚಿಸುತ್ತಿದ್ದ. ಇದೇ ರೀತಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಬೆಂಗಳೂರು: ಶಿಕಾರಿಪುರ ಕ್ಷೇತ್ರದಿಂದಲೇ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಗೆ ವಿಜಯೇಂದ್ರ ನಿಲ್ಲಬೇಕು ಅಂತ ಬಹಳ ಒತ್ತಡ ಇದೆ. ವರುಣಾದಲ್ಲಿ ಒತ್ತಡ ಇದ್ದರೂ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು ಅಂತ ನಾನು ಈ ಹಿಂದೆಯೇ ಹೇಳಿದ್ದೇನೆ. ಹಾಗಾಗಿ ವರುಣಾದಲ್ಲಿ ವಿಜಯೇಂದ್ರ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಶಿಕಾರಿಪುರದಲ್ಲೇ ಚುನಾವಣೆಗೆ ನಿಲ್ಲುವಂತೆ ನಾನು ವಿಜಯೇಂದ್ರಗೆ ಹೇಳಿದ್ದೇನೆ. ವಿಜಯೇಂದ್ರ ವರುಣಾದಲ್ಲಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ, ಶಿಕಾರಿಪುರದಲ್ಲೇ ಸ್ಪರ್ಧೆ ಮಾಡುತ್ತಾರೆ. ಹೈಕಮಾಂಡ್ ನಾಯಕರಿಗೂ ವಿಜಯೇಂದ್ರಗೆ ಶಿಕಾರಿಪುರದಿಂದಲೇ ಟಿಕೆಟ್ ನೀಡಿ ಅಂತ ತಿಳಿಸುತ್ತೇನೆ ಎಂದರು. ಈ ಹಿಂದೆ ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಗೊಂದಲ ಕಳೆದ ಹಲವಾರು ದಿನಗಳಿಂದ ಇತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದು ಅವರ ವಿರುದ್ಧ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ…
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚಿಂತೆ ಶುರುವಾಗಿದೆ. ಅದುವೇ ಆಟಗಾರರ ಗಾಯದ ಸಮಸ್ಯೆ. ಆರ್ಸಿಬಿ ತಂಡದ ಮೂವರು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಸಂಪೂರ್ಣ ಫಿಟ್ನೆಸ್ ಹೊಂದಿಲ್ಲ. ಇದೇ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚಿಂತೆಯನ್ನು ಹೆಚ್ಚಿಸಿದೆ. ವಿಶೇಷ ಎಂದರೆ ಮೂವರು ಆಟಗಾರರು ಕೂಡ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು. ಅದರಲ್ಲೂ ಫಿಟ್ನೆಸ್ ಸಮಸ್ಯೆಯ ಕಾರಣ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ 7 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ಆರ್ಸಿಬಿ ತಂಡದ ಮೊದಲಾರ್ಧದ ಪಂದ್ಯಗಳಲ್ಲಿ ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವುದಿಲ್ಲ ಎಂಬುದು ಬಹುತೇಕ ಖಚಿತ. ಮೊಣಕಾಲಿನ ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್ವುಡ್ಗೆ ವೈದ್ಯರು ಇನ್ನೂ 2 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಎಲ್ಲವೂ ಸರಿಯಾದರೆ, ಹಾಗೆಯೇ ಸಂಪೂರ್ಣ ಫಿಟ್ನೆಸ್ ಹೊಂದಿದರೆ ನಾನು ಏಪ್ರಿಲ್ 14 ರ…