Author: Prajatv Kannada

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ವಿವಿಧ ಪಕ್ಷಗಳ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಕರಿಯಪ್ಪ, ಚಾಮರಾಜನಗರದ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಕೋಲಾರ ಶ್ರೀನಿವಾಸಪುರ ನಿವಾಸಿ, ಕಾಂಗ್ರೆಸ್ ಮುಖಂಡ ಮತ್ತು ಸಮಾಜಸೇವಕ ಶ್ರೀನಿವಾಸ್ ರೆಡ್ಡಿ ಅವರು, ತಮ್ಮ ಬೆಂಬಲಿಗರ ಜತೆ ಬಿಜೆಪಿ ಸೇರಿದರು. ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ, ಸಚಿವ ಭೈರತಿ ಬಸವರಾಜ್, ಡಾ ಸಿ ಎನ್ ಅಶ್ವತ್ಥನಾರಾಯಣ ಅವರು ಈ ಮುಖಂಡರು ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕೋಲಾರದಲ್ಲಿ ನೆಲೆ ಗಟ್ಟಿಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಶ್ರೀನಿವಾಸಪುರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿದ್ದು, ಶ್ರೀನಿವಾಸ ರೆಡ್ಡಿಯನ್ನು ಕರೆತಂದು ಪೈಪೋಟಿ ನೀಡಲು ಮುಂದಾಗಿದೆ. ಬಹುತೇಕ ಶ್ರೀನಿವಾಸ ರೆಡ್ಡಿಗೆ ಟಿಕೆಟ್ ನೀಡಲಾಗುತ್ತದೆ.

Read More

ಮಹದೇವಪುರ: ಚುನಾವಣಾ ಗುರುತಿನ ಚೀಟಿ ಸೇರಿದಂತೆ ಹಲವು ವಿಚಾರಗಳನ್ನು ಯುವ ಕಾಂಗ್ರೆಸ್ ಮುಖಂಡರು ಮಾಹಿತಿ ನೀಡುತ್ತಿದ್ದು ವಿನಾಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಲು ಮುಂದಾಗಿದ್ದಾರೆ ಎಂದು ಶಾಸಕ ಹೆಚ್ ನಾಗೇಶ್ ಅವರ ನೇತೃತ್ವದಲ್ಲಿ ವೈಟ್ ಫೀಲ್ಡ್ ಪೊಲೀಸ್ ಠಾಣೆ ಎದುರು ಕ್ಷೇತ್ರದ ಬ್ಲಾಕ್ ಅಧ್ಯಕ್ಷರುಗಳೊಂದಿಗೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷ ನೀಡಿರುವ ಕಾಂಗ್ರೆಸ್‌ ಗ್ಯಾರಂಟಿ ಪಾಂಪ್ಲೇಟ್‌ಗಳನ್ನು ಹಂಚಲು ಬಿಜೆಪಿಗರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಹೆಚ್ ನಾಗೇಶ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಾಯಕ ಪೊಲೀಸ್‌ ಆಯುಕ್ತ ಎಂ.ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಉದಯ್ ಕುಮಾರ್, ಬ್ಲಾಕ್‌ ಅಧ್ಯಕ್ಷರಾದ ಅನಿಲ್, ಬಾಬುಗೌಡ, ವಿಟಿಬಿ ಬಾಬುರೆಡ್ಡಿ, ಮಹಿಳಾ ಅಧ್ಯಕ್ಷರುಗಳು, ಮುಖಂಡರಾದ ಸಾದರಮಂಗಲ ಲೋಕೇಶ್ ರೆಡ್ಡಿ, ವರ್ತೂರು ರಾಜು, ಎಂಸಿಸಿ ರವಿ, ಶ್ರೀನಿವಾಸರೆಡ್ಡಿ, ಕಾಡು ಸೊಣಪ್ಪನಹಳ್ಳಿಮದು ಹಾಗೂ ನೂರಾರು ಕಾರ್ಯಕರ್ತರು  ಪಾಲ್ಗೊಂಡಿದ್ದರು.

Read More

ಆತ ಸರಗಳ್ಳತನದಲ್ಲಿ ಕುಖ್ಯಾತ.. ಈಗಾಗಲೇ ಪೊಲೀಸರ ಬಲೆಗೆ ಬಿದ್ದು, ಅನೇಕ ಬಾರಿ ಜೈಲೂಟವನ್ನೂ ಉಂಡಿದ್ದಾನೆ. ಆದ್ರೂ ಜಾಮೀನಿನ ಮೇಲೆ ಜಾಮೀನು ತೆಗೆದುಕೊಂಡು, ಮತ್ತದೆ ಕೃತ್ಯಕ್ಕೆ ಇಳಿತಾನೆ ಇದ್ದ.. ಇಂತ ಚೋರನ ಈಗ ಮತ್ತೆ ಪೊಲೀಸರ ಅತಿಥಿ ಆಗಿದ್ದಾನೆ.. ಈತನೇ ನೋಡಿ ಅಚ್ಯುತ್ ಘನಿ. ಬೆಂಗಳೂರು ಪೊಲೀಸರಿಗೆ ಮೋಸ್ಟ್ ವಾಟೆಂಡ್ ಫೆಲೋ..ನಾಯಿ ಬಾಲ ಡೊಂಕು ಅನ್ನುವಂತೆ ಈತನ ಕೆಲಸವೂ ಅಷ್ಟೆ.. ಅದೆಷ್ಟು ಬಾರಿ ಜೈಲಿಗೆ ಅಟ್ಟಿದ್ರು, ಬೇಲ್ ಪಡೆದು ಮತ್ತದೇ ಕೆಲಸಕ್ಕೆ ಇಳೀತಿದ್ದ.. ಸದ್ಯ ಕಳ್ಳತನದ ಕೇಸ್ ಒಂದ್ರಲ್ಲಿ ಶೇಷಾದ್ರಿಪುರಂ ಪೊಲೀಸರ ಬಲೆಗೆ ಬಿದ್ದಿರೋ ಅಚ್ಯುತ್ನಿಂದ 4 ಪ್ರಕಣಗಳು ಬೆಳಕಿಗೆ ಬಂದಿವೆ ಯೆಸ್.. ಶೇಷಾದ್ರಿಪುರಂ ಪೊಲೀಸ್ ರಿಂದ ಅರೆಸ್ಟ್ ಆಗಿರೋ ಅಚ್ಯುತ್ ಘನಿಯಿಂದ  ದಾವಣಗೆರೆ, ಗದಗ, ಸಿಕೆ ಅಚ್ಚುಕಟ್ಟು ವ್ಯಾಪ್ತಿಯ 4 ಕಳ್ಳತನ ಕೇಸ್ಗಳು ಕ್ಲಿಯರ್ ಆಗಿದೆ. ಹಾಗೆ 302 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನ ಮತ್ತೆ ಜೈಲಿಗಟ್ಟಿಲಾಗಿದೆ. ಆದ್ರೆ ಈತನ ಹಿಸ್ಟರಿ ಮಾತ್ರ ನಿಜಕ್ಕೂ ರೋಚಕ.. ನಿಜ.. ಮೂಲತಃ ಧಾರವಾಡ…

Read More

ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್ ಅನ್ನೋ ಕೂಗುಗಳು ಹೆಚ್ಚಾಗ್ತಾ ಇದೆ.. ಮೊನ್ನೆ ಮೊನ್ನೆಯಷ್ಟೇ ಕಾಲೇಜ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಸುದ್ದಿಯಾಗಿದ್ರು.. ಆ ಪ್ರಕರಣ ಮಾಸುವ ಮುನ್ನವೇ ಇವತ್ತು ಮತ್ತೊಂದು ಪ್ರಕರಣ ನಡೆದಿದೆ.. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಈ ಪ್ರಕರಣದಲ್ಲಿ ಫರ್ಜಿ ಸಿನಿಮಾದ ವೆಬ್ ಸಿರೀಸ್ ಇಂಪ್ಯಾಕ್ಟ್ ಆಗಿದೆ..ಅದು ಹೇಗೆ ಅಂತೀರಾ ಈ ವರದಿ ನೋಡಿ.. ಈತನ‌ ಹೆಸರು ಅಂಕುಶ್.. ವೆಸ್ಟ್ ಬೆಂಗಾಲ್ ನಿವಾಸಿ.. ಬೆಂಗಳೂರಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿಯೊಂದರಲ್ಲಿ ತನ್ನ ಸ್ನೇಹಿತರ ಜೊತೆ ವಾಸ ಮಾಡ್ತಾ ಇದಾನೆ. ಬಿಬಿಎಂ ಓದಿದ್ದ ಅಂಕುಶ್ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದ.. ಸ್ನೇಹಿತರ ಜೊತೆ ಪಿಜಿಯಲ್ಲಿ ವಾಸ ಮಾಡ್ತಿದ್ದ ಈತ ಸಂಜೆ ಸುದ್ದಿಯಾಗಿದ್ದಾನೆ..‌ಅದು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಅನ್ನೋ ವಿಚಾರಕ್ಕೆ.. ಅಕುಂಶ್ ಗೆ ಸಿನಿಮಾ ಹಾಗೂ ಸಿರೀಸ್ ನೋಡುವ ಹುಚ್ಚು ಜಾಸ್ತಿ ಇತ್ತು..ನಿನ್ನೆ ಸಂಜೆ ಕೂಡ ಅಮೇಜಾನ್ ಪ್ರೈಮ್ ನಲ್ಲಿ  ಪರ್ಜಿ ಸಿನಿಮಾ ನೋಡ್ತಾ ಇದ್ದ.. ಅದರಲ್ಲಿ ”…

Read More

ಬೆಂಗಳೂರು: ಸ್ನೇಹಿತನ ಜೊತೆ ಪಾರ್ಕ್​ನಲ್ಲಿ ಕುಳಿತಿದ್ದ ಯುವತಿಯನ್ನ ನಾಲ್ವರು ಸೇರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ(rape) ನಡೆಸಿದ ಘಟನೆ (Bangalore)ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಮಾರ್ಚ್ 25ರ ರಾತ್ರಿ 10 ಗಂಟೆಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ನೌಕರರು ಇರುವ ನ್ಯಾಷನಲ್ ಗೇಮ್ಸ್ ವಿಲೇಜ್​​​​ ಪಾರ್ಕ್​ನಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತನ ಕುಳಿತುಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವಕರು ಆಕೆಯ ಸ್ನೇಹಿತನನ್ನ ಬೆದರಿಸಿ, ಆ ಯುವತಿಯನ್ನು ಎಳೆದೊಯ್ದು ಚಲಿಸುತ್ತಿದ್ದ ಕಾರಿನಲ್ಲಿ 4 ಜನರು ಅತ್ಯಾಚಾರ ಮಾಡಿದ್ದಾರೆ. ಈ ಕುರಿತು ಯುವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.ಇನ್ನು ಈ ಕಾಮುಕರು ಕೆಎ 01 ಎಂಬಿ 6169 ಸಂಖ್ಯೆಯ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಮಹಾನಗರದ ಈ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಟ ನಡೆಸಿ ಕೃತ್ಯವೆಸಗಿದ್ದಾರೆ. ಬಳಿಕ ಮಾ.26ರ ಬೆಳಗ್ಗೆ 4 ಗಂಟೆಗೆ ಯುವತಿಯನ್ನ ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು. ನಂತರ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅದೇ ದಿನ ಪೊಲೀಸರು ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ನಾಲ್ವರು ಆರೋಪಿಗಳಾದ ಸತೀಶ್,ವಿಜಯ್,ಶ್ರೀಧರ್,ಕಿರಣ್ ಎಂಬುವವರನ್ನ ಬಂಧಿಸಿದ್ದಾರೆ.

Read More

ಸೂರ್ಯೋದಯ: 06.17 AM, ಸೂರ್ಯಾಸ್ತ : 06.31 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079 ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ಪೂರ್ಣ ದಶಮಿ ನಕ್ಷತ್ರ: ಇವತ್ತು ಪೂರ್ಣ ಪುಷ್ಯ ಯೋಗ: ಇವತ್ತು ಅತಿಗಂಡ 01:03 AM ತನಕ ನಂತರ ಸುಕರ್ಮಾ ಕರಣ: ಇವತ್ತು ತೈತಲೆ 12:44 PM ತನಕ ನಂತರ ಗರಜ ರಾಹು ಕಾಲ: 10:30 ನಿಂದ12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 06.46 PM to 08.34 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:44 ವರೆಗೂ ಮೇಷ ರಾಶಿ: ಒಂದಿಲ್ಲ ಒಂದು ಹಣಕಾಸಿನ ಸಮಸ್ಯೆ ಎದುರಿಸುವುದು,ರಸಗೊಬ್ಬರ ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ, ವೈದ್ಯಕೀಯ ಕ್ಷೇತ್ರದ ನೌಕರರಿಗೆ ಬಿಡುವಿಲ್ಲದ ಕೆಲಸದ ಒತ್ತಡ, ಸ್ವಯಂ ಉದ್ಯೋಗ ವ್ಯವಹಾರಗಳಲ್ಲಿ ಚೇತರಿಕೆ ಕಾಣುವಿರಿ, ನಿಮ್ಮ ಪ್ರಯತ್ನದಲ್ಲಿ ಧನಲಾಭವಾಗುವ ಸಾಧ್ಯತೆ, ತಪ್ಪು ತೀರ್ಮಾನಗಳಿಂದ ಪ್ರೇಮಿಗಳಲ್ಲಿ…

Read More

ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗ್ಲೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮತದಾರರಿಗೆ ಸಾಕಷ್ಟು ಆಮೀಷಗಳನ್ನು ಒಡುತ್ತಿದ್ದಾರೆ. ಇದೀಗ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ರಿಷಬ್ ಶೆಟ್ಟಿ. 2023 ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದಾರೆ. ಮೇ 10ನೇ ದಿನಾಂಕದಂದು ಎಲೆಕ್ಷನ್ ಘೋಷಣೆಯಾಗಿದೆ. ಪ್ರತಿಯೊಬ್ಬರು ತಪ್ಪದೇ ವೋಟ್ ಮಾಡಿ ಎಂದು ನಟ ರಿಷಬ್ ಶೆಟ್ಟಿ ಹೇಳಿದ್ದಾರೆ. ನಮ್ಮ ನಾಡಿನ ನೆಲ, ಜಲ ಸಂಪನ್ಮೂಲ ಅಭಿವೃದ್ಧಿಗಾಗಿ, ನಮ್ಮ ಉತ್ತಮ ಬದುಕಿಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ಎಂದು ನಟ ರಿಷಬ್ ಶೆಟ್ಟಿ ಕರೆ ಕೊಟ್ಟಿದ್ದಾರೆ. ಉತ್ತಮ ಬದುಕಿಗಾಗಿ ಮತ ಹಾಕುವುದು ತುಂಬಾ ಮುಖ್ಯ. ಯಾರು ಮತ ಹಾಕುವುದನ್ನು ಮರೆಯಬೇಡಿ. ತಪ್ಪದೇ ವೋಟ್ ಹಾಕಿ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಕಾಂತಾರ ಸಿನಿಮಾದ ಮೂಲಕ ದೇಶ, ವಿದೇಶದಲ್ಲೂ…

Read More

ಬೆಂಗಳೂರು: ಚುನಾವಣಾ (Assembly Election) ಜ್ವರದ ಮಧ್ಯೆ ಇಂದಿನಿಂದ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆಗಳು ಶುರುವಾಗುತ್ತಿವೆ. ಮೊದಲ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆ ನಡೆಯಲಿದೆ. ಸುಗಮ ಪರೀಕ್ಷೆಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 3305 ಕೇಂದ್ರಗಳಲ್ಲಿ ಏಪ್ರಿಲ್ 15 ರವರೆಗೂ ಪರೀಕ್ಷೆ ನಡೆಯಲಿದೆ. ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹಿಜಬ್ (Hijab) ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇರಲ್ಲ. ಹಿಜಬ್ ಕಾರಣಕ್ಕೆ ಎಕ್ಸಾಂ ಗೈರಾದ್ರೆ ವಿಶೇಷ ಪರೀಕ್ಷೆಗೆ ಅವಕಾಶ ಇಲ್ಲ. ಮತ್ತೆ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹೇಗಿದೆ ಎಸ್‍ಎಸ್‍ಎಲ್‍ಸಿ ಎಕ್ಸಾಂಗೆ ಸಿದ್ಧತೆ?: ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ (CCTV in Exam Centre) ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಸ್ಮಾರ್ಟ್‍ವಾಚ್, ಮೊಬೈಲ್ ಎಲೆಕ್ಟ್ರಿಕ್ ಉಪಕರಣಗಳ ನಿಷೇಧಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗೂ ಮೊಬೈಲ್, ಸ್ಮಾರ್ಟ್ ವಾಚ್ ನಿಷೇಧ ಮಾಡಲಾಗಿದೆ. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಎಕ್ಸಾಂ ಮುಗಿಯೋವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದ 200 ಮೀಟರ್…

Read More

ವಾಷಿಂಗ್ಟನ್‌: ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕ ಸೈನಿಕರ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿಯಾಗಿ ಪತನಗೊಂಡಿದ್ದು, ಘಟನೆಯಲ್ಲಿ 9 ಸೈನಿಕರು ಮೃತಪಟ್ಟಿದ್ದಾರೆ. ಪತನಗೊಂಡಿರುವ ಹೆಲಿಕಾಪ್ಟರ್‌ಗಳು 101 ನೇ ವಾಯುಗಾಮಿ ವಿಭಾಗಕ್ಕೆ ಸೇರಿದ್ದವಾಗಿವೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಫೋರ್ಟ್ ಕ್ಯಾಂಪ್‌ಬೆಲ್‌ನ ವಾಯುವ್ಯದಲ್ಲಿರುವ ಕೆಂಟುಕಿಯ ಟ್ರಿಗ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಆಂಥೋನಿ ಹೋಫ್ಲರ್ ಮಾಹಿತಿ ನೀಡಿದ್ದಾರೆ. ಎರಡೂ ಹೆಲಿಕಾಪ್ಟರ್‌ ಗಳ ಪೈಲಟ್‌ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಾಗಿದ್ದು ಆಕಾಶದಲ್ಲೇ ಸ್ಪೋಟಗೊಂಡು ನೆಲಕ್ಕಪ್ಪಳಿಸಿವೆ. ಪರಿಣಾಮ ಹೆಲಿಕಾಪ್ಟರ್‌ ನಲ್ಲಿದ್ದ 9 ಯೋಧರು ಸಜೀವ ದಹನವಾಗಿದ್ದಾರೆ.

Read More

ವಿಧಾನಸಭೆ ಚುನಾವಣೆ ಹೊತ್ತಲ್ಲಿ ನಿರೀಕ್ಷೆಯಂತೆ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಬಿಜೆಪಿಯ ಮತ್ತಿಬ್ಬರು ವಿಧಾನ ಪರಿಷತ್ ಸದಸ್ಯರು ಕೈ ಹಿಡಿಯಲು ಸಜ್ಜಾಗಿದ್ದಾರೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮೊದಲು ಬಿಜೆಪಿಯಲ್ಲಿದ್ದ ಆಯನೂರು ಮಂಜುನಾಥ್ ಜನತಾ ಪಕ್ಷ, ನಂತರ ಕಾಂಗ್ರೆಸ್ ಪಕ್ಷ ಬಳಿಕ ಬಿಜೆಪಿಗೆ ಮರಳಿದ್ದರು. ಈಗ ಮತ್ತೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಶಿವಮೊಗ್ಗ ನಗರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಕೂಡ ಕಾಂಗ್ರೆಸ್ ಸೇರಲು ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ.

Read More