ಇಂದೋರ್: ಬಾವಿಯ ಮೇಲ್ಛಾವಣಿ ಕುಸಿದು 25 ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿದ್ದು ಘಟನೆಯಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನ ಪಟೇಲ್ ನಗರದಲ್ಲಿರುವ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನಡೆದಿದೆ. ರಾಮನವಮಿಯಂದು ದೇವಸ್ಥಾನದಲ್ಲಿ ಭಕ್ತರ ದಂಡೇ ನೆರೆದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವರದಿಯ ಪ್ರಕಾರ, ರಾಮ ನವಮಿಯಂದು ಪಟೇಲ್ ನಗರದ ದೇವಸ್ಥಾನದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಂದೋರ್ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ವಿಚಾರಣೆ ನಡೆಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ವಿಡಿಯೊದಲ್ಲಿ ಪೊಲೀಸರು ಹಗ್ಗಗಳನ್ನು ಬಳಸಿ ಜನರನ್ನು ಹೊರಗೆಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಇದುವರೆಗೆ ಐವರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲ ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ದೇವಾಲಯವನ್ನು ತೆರವು ಮಾಡಲಾಗಿದ್ದು, ಜನರು ದೇವಾಲಯದ ಆವರಣಕ್ಕೆ ಪ್ರವೇಶಿಸದಂತೆ ಸ್ಥಳದಲ್ಲಿ ಪೊಲೀಸ್ ತಂಡವನ್ನು ಸಹ ನಿಯೋಜಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ…
Author: Prajatv Kannada
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ(SSLC) ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ಕನಿಷ್ಟ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದ ಜತೆಗೆ ತೆರಳಿ ಪರೀಕ್ಷಾ ಕೊಠಡಿಯನ್ನು ಹುಡಿಕಿಕೊಳ್ಳಬೇಕಿದೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ 10ನೇ ತರಗತಿಯ ಪರೀಕ್ಷೆಗಳು ನಡೆಯಲಿವೆ. 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲಿರುವ 8,42,811 ವಿದ್ಯಾರ್ಥಿಗಳ ಪೈಕಿ 4,52,732 ಬಾಲಕರು ಮತ್ತು 4,21,110 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ 15,387 ಶಾಲೆಗಳು ನೋಂದಾಯಿಸಿಕೊಂಡಿದ್ದು, 3,305 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿರ್ಬಂಧ ಆದೇಶ ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. ಈ ನಡುವೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ…
ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ನಟಿ ಆಗಮಿಸಿ ತಮ್ಮ ಜೀವನದ ಸಾಕಷ್ಟು ಘಟನೆಗಳ ಕುರಿತು ಮೆಲುಕು ಹಾಕಿದ್ದಾರೆ. ಶೋಗೆ ಬಂದಿದ್ದ ರಮ್ಯಾ ಬಹುತೇಕ ಇಂಗ್ಲಿಷ್ನಲ್ಲೇ ಮಾತನಾಡಿ ಟೀಕೆಗೆ ಒಳಗಾಗಿದ್ದಾರೆ. ಇದೀಗ ಟೀಕೆ ಮಾಡಿದವರಿಗೆ ರಮ್ಯಾ ತಿರುಗೇಟು ನೀಡಿದ್ದು, ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ವೀಕೆಂಡ್ ವಿತ್ ರಮೇಶ್’ ಸೀಸನ್ 5ರ ಮೊದಲ ಅತಿಥಿಯಾಗಿ ನಟಿ ರಮ್ಯಾ ಆಗಮಿಸಿದ್ದು ವೀಕ್ಷಕರಿಗೆ ಖುಷಿ ಇತ್ತು. ಆದರೆ ರಮ್ಯಾ ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ಈ ವಿಚಾರದಲ್ಲಿ ರಮ್ಯಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಆ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೀಮ್ ಒಂದಕ್ಕೆ ಕಮೆಂಟ್ ಮಾಡಿರುವ ರಮ್ಯಾ ‘ಶೋನ ಹೆಸರು ವೀಕೆಂಡ್ ವಿತ್ ರಮೇಶ್. ಶೋಗೆ ಬಂದ ಅತಿಥಿಗಳು ಕನ್ನಡದವರು ಆಗಿರಲಿಲ್ಲ. ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದು ಹೇಳಿದ್ದಾರೆ. ‘ಇದು…
ಇಂದು ಬಹುನಿರೀಕ್ಷಿತ ಡಾಲಿ ಧನಂಜಯ್ ಹಾಗೂ ಅಮೃತಾ ಐಯ್ಯಂಗರ್ ನಟನೆಯ ಹೊಯ್ಸಳ ಸಿನಿಮಾ ರಿಲೀಸ್ ಆಗಿದೆ. ಹೊಯ್ಸಳ ಧನಂಜಯ್ ನಟನೆಯ 25ನೇ ಸಿನಿಮಾವಾಗಿದ್ದು ಚಿತ್ರದಲ್ಲಿ ಡಾಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಐಯ್ಯಂಗರ್ ಗಂಡ ಹೆಂಡತಿಯಾಗಿ ನಟಿಸಿದ್ದು ಇಬ್ಬರ ನಟನೆ ನೋಡಿ ಪ್ರೇಕ್ಷಕರು ಜೈ ಎಂದಿದ್ದಾರೆ. ಸದ್ಯ ಸಿನಿಮಾ ನೋಡಿದ ನಟಿ ರಮ್ಯಾ ಚಿತ್ರದ ಕುರಿತು ವಿಮರ್ಶೆ ಮಾಡಿದ್ದಾರೆ. ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ. ಇಬ್ಬರ ಆನ್ಸ್ಕ್ರೀನ್ ಮತ್ತು ಆಫ್ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದೆ’ ಎಂದು ರಮ್ಯಾ ಹೇಳಿದ್ದಾರೆ. ಸದ್ಯ ರಮ್ಯಾ ಹಾಗೂ ಡಾಲಿ ಧನಂಜಯ್ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ್ಯಕ್ಷನ್ ಇಷ್ಟಪಡೋರಿಗೆ ನಿರ್ದೇಶಕ ಗುರುದೇವ್ ಹೊಯ್ಸಳ ಸಂತೃಪ್ತಗೊಳಿಸುತ್ತಾರೆ. ಸಂಗೀತ ಪ್ರಿಯರಿಗೆ ಅಜನೀಶ್ ಲೋಕನಾಥ್ ಸಂಗೀತ ಎಲ್ಲಿ ಬೇಕೋ ಅಲ್ಲಿ ಅವಶ್ಯಕವಾಗಿಯೇ ಇದೆ. ಇದರ ಹೊರತಾಗಿ ಖಡಕ್ ಡೈಲಾಗ್ ಇಷ್ಟಪಡೋರಿಗೆ ಇಲ್ಲಿ ಮಾಸ್ತಿ…
ತೇರದಾಳ: ಕರ್ನಾಟಕದ ವಿಧಾನಸಭೆಯ ಚುನಾವಣಾ ದಿನಾಂಕ ನಿಗದಿ ಆಗ್ತಾ ಇದ್ದಂಗೆ ರಾಜ್ಯಾದ್ಯಂತ ಎಲ್ಲಾ ಪಕ್ಷಗಳಲ್ಲಿ ಟಿಕೇಟ್ ಪಡೆಯಲು ಪೈಪೋಟಿ ಹೆಚ್ಚಾಗಿದೆ. ಅದೆ ರೀತಿ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಅನೇಕರು ಪೈಪೋಟಿ ನಡೆಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಸ್ಥಳಿಯ ಬಿಜೆಪಿ ಯುವ ನಾಯಕರಾದ ಕಿರಣ ಕುಮಾರ್ ದೇವಲ ದೇಸಾಯಿವರಿಗೆ ಬಿಜೆಪಿ ಹೈಕಮಾಂಡ ಟಿಕೆಟ್ ನೀಡಬೇಕೆಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಿರಣಕುಮಾರ ದೇವಲ ದೇಸಾಯಿ ಈಗಾಗಲೆ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಡವರಿಗೆ ಸಹಾಯ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ರೆ ಜ್ಯಾತ್ಯಾತಿತವಾಗಿ ಅವರನ್ನು ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ನಮ್ಮದು ಅಂತ ತೇರದಾಳ ವಿಧಾನಸಭಾ ಕ್ಷೇತ್ರದ ಜನರು ತಿಳಿಸಿದ್ದಾರೆ. ಈ ಕ್ಷೇತ್ರದ ಮತದಾರರು ಹೊರಗಿನವರಿಗೆ ಟಿಕೆಟ್ ನೀಡಬಾರದು ಸ್ಥಳೀಯರಿಗೆ ಟಿಕೆಟ್ ನೀಡಲೇಬೇಕು ಮತ್ತು ಅದರಲ್ಲಿ ಬಡವರ…
ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹಲವು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆಂದು ವರದಿಯಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀರಸ ಪ್ರದರ್ಶನ ತೋರಿತ್ತು. ಈ ಹಿನ್ನೆಲೆಯಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು. ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ 2022ರ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಕಳೆದ ಟೂರ್ನಿಯಲ್ಲಿ ಆಡಿದ್ದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು, ಇನ್ನುಳಿದ 10ರಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ಜಸ್‌ಪ್ರೀತ್ ಬುಮ್ರಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಹಲವು ಪಂದ್ಯಗಳಿಂದ…
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಪ್ರಾರಂಭವಾಗಲು 2 ದಿನ ಮಾತ್ರ ಉಳಿದಿದೆ. ಈಗಿನಿಂದಲೇ ಅಭಿಮಾನಿಗಳ ಝೇಂಕಾರ ಶುರುವಾಗಿದೆ. ಏತನ್ಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೀಸನ್ ಆರಂಭಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ಒಂದು ವಿಚಾರದಲ್ಲಿ ಖಡಕ್ ಎಚ್ಚರಿಕೆ ನೀಡಿದೆ. ಮುಂಬರುವ ಐಸಿಸಿ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ, ಐಪಿಎಲ್ನಲ್ಲಿ ಆಡುತ್ತಿರುವ ಟೀಂ ಇಂಡಿಯಾ ಬೌಲರ್‌ಗಳು (ಬಿಸಿಸಿಐನ ವಾರ್ಷಿಕ ಒಪ್ಪಂದಕ್ಕೊಳಪಟ್ಟವರು) ನೆಟ್ಸ್‌ನಲ್ಲಿ ಅಭ್ಯಾಸದ ಸಮಯದಲ್ಲಿ ಹೆಚ್ಚು ಬೌಲ್ ಮಾಡದಂತೆ ಆದೇಶ ಹೊರಡಿಸಿದೆ. ಈ ಬಾರಿಯ ಐಪಿಎಲ್ ಅಂತ್ಯದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ಪಂದ್ಯವನ್ನು ಆಡಲು ಭಾರತ ತಂಡವು ಇಂಗ್ಲೆಂಡ್‌ಗೆ ತೆರಳಲಿದೆ. ಹೀಗಾಗಿ ಆ ಸಮಯದಲ್ಲಿ ಭಾರತೀಯ ಬೌಲರ್‌ಗಳ ಸಂಪೂರ್ಣ ಫಿಟ್‌ನೆಸ್ ಬಹಳ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಈ ಸೂಚನೆ ನೀಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಫಿಸಿಯೋ ನಿತಿನ್ ಪಟೇಲ್ ಮತ್ತು ಭಾರತದ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ…
ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಎರಡೇ ದಿನ ಬಾಕಿ. ಈ ಸೀಸನ್ನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ವಿಜೇತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯವು ಗುಜರಾತ್ ಟೈಟಾನ್ಸ್‌ನ ತವರು ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ಫ್ರಾಂಚೈಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಮೈದಾನದೊಳಗೆ ಯಾವ್ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬ ಪಟ್ಟಿ ಹಾಕಿದೆ. ಅವುಗಳ ವಿವರ ಇಲ್ಲಿದೆ. ನಾಣ್ಯ coins ಹೆಲ್ಮೆಟ್ helmet ಆಹಾರ food ಶಸ್ತ್ರಾಸ್ತ್ರಗಳು (weapons) weapons camera umbrella ಬಾಟಲಿಗಳು bottles ಬ್ಯಾಕ್‌ಪ್ಯಾಕ್ backpack ಚೂಪಾದ ವಸ್ತುಗಳು knife ಮರದ ಕಡ್ಡಿ (ದೊಣ್ಣೆ) wood ಸೆಲ್ಫಿ ಸ್ಟಿಕ್ selfy stick ಪವರ್ ಬ್ಯಾಂಕ್ power bank ciger light
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಯೋಜನೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಹದಿನಾರನೇ ಆವೃತ್ತಿಯ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದೆ. ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಸೆಣಸುವ ಮೂಲಕ 2023ರ ಐಪಿಎಲ್ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಏಪ್ರಿಲ್ 2 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರಿಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತನ್ನ ಮೊದಲ ಪಂದ್ಯವಾಡಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ 14 ಪಂದ್ಯಗಳಿಂದ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ, 8ರಲ್ಲಿ ಗೆದ್ದು ಇನ್ನುಳಿದ 6 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಪ್ಲೇಆಫ್ಸ್‌ಗೆ ತಲುಪಿದ್ದ ಬೆಂಗಳೂರು ತಂಡ, ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ದ 14 ರನ್‌ಗಳಿಂದ ಗೆಲುವು ಪಡೆದಿತ್ತು. ಆದರೆ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತು…
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು ಆರಂಭವಾಗುತ್ತಿದ್ದಂತೆ ರಾಜಕಾರಣದಲ್ಲಿ ಸಕ್ರಿಯನಾಗಲು ಸಜ್ಜಾಗುತ್ತಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು (Wilson Garden Naga) ಬೆಂಗಳೂರು ಪೊಲೀಸರು (Bengaluru Police) ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಣ ನಿಂಬರಗಿ ಗಡಿಪಾರು ನಿರ್ದೇಶನ ನೀಡಿದ್ದಾರೆ. ಚುನಾವಣೆಯ ನಂತರ ಪೊಲೀಸ್ ಮೇಲ್ವಿಚಾರಣೆಯೊಂದಿಗೆ ಮಾತ್ರ ಆತ ನಗರಕ್ಕೆ ಪ್ರವೇಶಿಸಬಹುದಾಗಿದೆ. ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ರೌಡಿಶೀಟರ್‌ಗಳಿಗೆ ಪೊಲೀಸರು ಎಚ್ಚರಿಕೆ ನೀಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯ ಅಪರಾಧಿಗಳಿಂದ ಉತ್ತಮ ನಡವಳಿಕೆಗೆ ಭದ್ರತೆಯಾದ ಸಿಆರ್ಪಿಸಿ ಸೆಕ್ಷನ್ 110 ರ ಅಡಿಯಲ್ಲಿ ಬಾಂಡ್ಗಳಿಗೆ ಸಹಿ ಹಾಕುವಂತೆ ಮಾಡುತ್ತಿದ್ದಾರೆ. ನಾಗರಾಜು ವಿರುದ್ಧ ದರೋಡೆ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ. ಈತನ ವಿರುದ್ಧ ಸಿದ್ದರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 392ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. 2005ರಲ್ಲಿ ಆರ್ಆರ್ ನಗರ, ಆಡುಗೋಡಿ, ಬನಶಂಕರಿ ಪೊಲೀಸರು ಸರಣಿ ವಾಹನ ಕಳವು ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ್ದರು. 2009ರಲ್ಲಿ…