ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಟಿಕೆಟ್ ಆಕಾಂಕ್ಷಿಗಳ ಬೆಂಗಲಿಗರಿಂದ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಪೈಪೋಟಿ ಹೆಚ್ಚಿದೆ. ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಗಲಾಟೆ ಮತ್ತು ಗದ್ದಲ ನಡೆಯುತ್ತಿದೆ. ಈ ವೇಳೆ ಬೆಂಬಲಿಗರು ಬಟ್ಟೆ ಬಿಚ್ಚಿ ಡೀಸೆಲ್ ಸುರಿದುಕೊಳ್ಳಲು ಯತ್ನ ನಡೆಸಿದ್ದಾರೆ. ಯೋಗೀಶ್ ಬಾಬುಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯೋಗೀಶ್ ಬಾಬು ಅವರು ಚಿತ್ರದುರ್ಗದ ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಎನ್ ವೈ . ಗೋಪಾಲಕೃಷ್ಣಗೆ ಟಿಕೆಟ್ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಗಲಾಟೆ ನಡೆಯುತ್ತಿದೆ. ಹೀಗಾಗಿ ಬೆಂಬಲಿಗರು ಯೋಗೀಶ್ ಬಾಬುಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಿದ್ದಾರೆ.
Author: Prajatv Kannada
ಅಬುಧಾಬಿ: ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ತಮ್ಮ ಹಿರಿಯ ಪುತ್ರ ಶೇಖ್ ಖಾಲಿದ್ ಅವರನ್ನು ಅಬುಧಾಬಿಯ ರಾಜಕುಮಾರನನ್ನಾಗಿ ನೇಮಕ ಮಾಡಿದ್ದಾರೆ. ಜೊತೆಗೆ ತಮ್ಮ ಸಹೋದರ ಶೇಖ್ ಮನ್ಸೂರ್ ಬಿನ್ ಝಾಯೇದ್ ಅಲ್ ನಹ್ಯಾನ್ ಹಾಗೂ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಅವರನ್ನು ಯುಎಇಯ ಉಪಾಧ್ಯಕ್ಷರನ್ನಾಗಿ ಶೇಖ್ ಮೊಹಮ್ಮದ್ ಆಯ್ಕೆ ಮಾಡಿದ್ದಾರೆ. ಸದ್ಯ ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಎಡಿಕ್ಯೂ ಸಾರ್ವಭೌಮ ಸಂಪತ್ತು ನಿಧಿಯ ಅಧ್ಯಕ್ಷರಾಗಿರುವ ತಮ್ಮೊಬ್ಬ ಸಹೋದರ ಶೇಖ್ ತಹ್ನೌನ್ ಹಾಗೂ ಹಜ್ಜಾ ಬಿನ್ ಝಾಯೇದ್ ಅವರನ್ನು ಅಬುಧಾಬಿಯ ಉಪ ಆಡಳಿತಗಾರನನ್ನಾಗಿ ನೇಮಕ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಜನ ಒಂದು ಹೊತ್ತಿನ ಕೂಳಿಗೂ ಪರದಾಡುತ್ತಿದ್ದು, ದೇಶ ದಿವಾಳಿಯಾಗುವ ಹಂತದಲ್ಲಿದೆ. ಆದರೆ ಈತ ಮಾತ್ರ ಅಂದು ಪಾತ್ರೆತೊಳೆಯುತ್ತಿದ್ದವ ಇಂದು ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಂದು ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಿದ್ದ ಶಾಹಿದ್ ಖಾನ್ ಇಂದು ಪಾಕ್ ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 1950ರ ಜುಲೈ18ರಂದು ಜನಿಸಿರುವ ಶಾಹಿದ್ ಖಾನ್ ಅವರು ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫ್ಲೆಕ್ಸ್-ಎನ್-ಗೇಟ್ ಮಾಲೀಕರಾದ ಶಾಹಿದ್ ಖಾನ್ ಕೋಟ್ಯಾಧಿಪತಿ ಉದ್ಯಮಿಯಾಗಿದ್ದಾರೆ. ಜತೆಗೆ ಅವರು ಕ್ರೀಡಾ ಉದ್ಯಮಿಯೂ ಹೌದು. ಅವರು ಫ್ಲೆಕ್ಸ್-ಎನ್-ಗೇಟ್ ವಾಹನಗಳ ಬಿಡಿಭಾಗ ಪೂರೈಕೆ ಮಾಡುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಹಿದ್ ಖಾನ್ ಅವರು ನ್ಯಾಷನಲ್ ಫುಟ್ಬಾಲ್ ಲೀಗ್ ನ ಜಾಕ್ಸನ್‌ವೆಲ್ಲೆ ಜಾಗ್ವಾರ್ಸ್ ಹಾಗೂ ಫುಲ್‌ಹಾಮ್ ಎಫ್‌ಸಿ ಪ್ರೀಮಿಯರ್ ಲೀಗ್‌ನ ಮಾಲೀಕರು ಕೂಡ ಆಗಿದ್ದಾರೆ. ಅಲ್ಲದೆ ಶಾಹಿದ್ ಅವರು ತಮ್ಮ ಪುತ್ರ ಟೋನಿ ಖಾನ್ ಜತೆಗೆ ಅಮೆರಿಕನ್ ಕುಸ್ತಿ ಪ್ರಮೋಷನ್ ಆಲ್ ಎಲೈಟ್ ವ್ರೆಸ್ಲಿಂಗ್‌ನ…
ಉತ್ತರಾಖಂಡ: ಹರಿದ್ವಾರದಲ್ಲಿ ಪತಂಜಲಿ ವಿಶ್ವವಿದ್ಯಾಲಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಉದ್ಘಾಟಿಸಿದ್ದಾರೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಯೋಗ ಗುರು ರಾಮದೇವ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆ ನಂತರ ಶಾ ಅವರು ಹವನ ನಡೆಸುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಶುಕ್ರವಾರದ ವೇಳೆಗೆ ಬೃಹತ್ ಸೌರ ಚಂಡಮಾರುತವು ಸೂರ್ಯನ ಮೇಲ್ಮೈಯಲ್ಲಿ ‘ರಂಧ್ರ’ ಕಾಣಿಸಿಕೊಂಡಿರುವುದರಿಂದ ಭೂಮಿಗೆ ಅಪ್ಪಳಿಸಬಹುದು. ಸಂಕ್ಷಿಪ್ತವಾಗಿ ಡೈಸಿ ಮೌಕ್ / 29 ಮಾರ್ಚ್ 2023 ರಂದು ರಾತ್ರಿ 10:14, ಬುಧವಾರ. ನಾಸಾದ ವಿಜ್ಞಾನಿಗಳು ಸೂರ್ಯನ ಮೇಲೆ ಬೃಹತ್ ಕಪ್ಪು ಪ್ರದೇಶವನ್ನು ಗುರುತಿಸಿದ್ದಾರೆ, ಇದು ನಮ್ಮ ಭೂಮಿಗಿಂತ 20 ಪಟ್ಟು ದೊಡ್ಡದಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನು “ಕರೋನಲ್ ಹೋಲ್” ಎಂದು ಕರೆಯಲಾಗುತ್ತದೆ, ಇದು ಸೂರ್ಯನ ಒಂದು ನಿರ್ದಿಷ್ಟ ಭಾಗವು ಕಣ್ಮರೆಯಾದಂತೆ ಕಾಣುತ್ತದೆ. ಈ ರಂಧ್ರವು ಭೂಮಿಯ ಕಡೆಗೆ ಗಂಟೆಗೆ 2.9 ಮಿಲಿಯನ್ ಕಿಮೀ ವೇಗದಲ್ಲಿ ಸೌರ ಮಾರುತಗಳನ್ನು ಬೀಸುತ್ತಿದೆ ಎಂದು ವರದಿಯಾಗಿದೆ, ಇದು ಶುಕ್ರವಾರ ನಮ್ಮ ಗ್ರಹವನ್ನು ಅಪ್ಪಳಿಸಬಹುದಾಗಿದೆ.
ಮಂಡ್ಯ:- ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳ ನಡುವೆಯೂ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು. ಮದ್ದೂರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 31ರಿಂದ ( ನಾಳೆಯಿಂದ ) ಏಪ್ರಿಲ್ 15ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 3486 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು. ಮದ್ದೂರು ತಾಲೂಕಿನಲ್ಲಿ ಒಟ್ಟು 88 ಫ್ರೌಡಶಾಲೆಗಳಿದ್ದು, 16 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1700 ಗಂಡು ಮಕ್ಕಳು, 1648 ಹೆಣ್ಣು ಮಕ್ಕಳು ಒಟ್ಟು 3486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಹೇಳಿದರು. ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ಎಲ್ಲ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ ಸ್ತಾನಿಕ ಜಾಗೃತ ದಳ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದು, ತಾಲ್ಲೂಕು ಹಂತದಲ್ಲಿ ತಹಶೀಲ್ದಾರ್, ತಾಲ್ಲೂಕು…
ಕಡಬ:ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಅದ್ವೈತ್ ಶೆಟ್ಟಿ (16) ಎಂಬ ವಿದ್ಯಾರ್ಥಿಯ ಶವ, ಕೋಡಿಂಬಾಳ ಸಮೀಪದ ಕುಮಾರಾಧಾರ ನದಿಯ ನಾಕೂರ ಗಯದಲ್ಲಿ ಗುರುವಾರ ಪತ್ತೆಯಾಗಿದೆ. ರಾಜ್ಯಾದ್ಯಂತ ಮಾ. 31ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು, ಕಲಿಕೆಯಲ್ಲಿ ಹಿಂದುಳಿದಿದ್ದ ಆತ ಪರೀಕ್ಷೆಗೆ ಹೆದರಿ, ಪರೀಕ್ಷೆ ಶುರುವಾಗುವ ಮುನ್ನಾದಿನ (ಮಾ. 30) ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ಅದ್ವೈತ್ ಶೆಟ್ಟಿ, ಕೋಡಿಂಬಾಳ ಗ್ರಾಮ ಗುಂಡಿಮಜಲು ನಿವಾಸಿ ಮಂಜುನಾಥ ಶೆಟ್ಟಿ ಅವರ ಪುತ್ರವಾಗಿದ್ದು, ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದ. ಇದೇ ಕಾರಣಕ್ಕೆ ಆತ ಕಡಬದ ಟುಟೋರಿಯಲ್ ಒಂದರಲ್ಲಿ ಟ್ಯೂಷನ್ ಪಡೆಯುತ್ತಿದ್ದ. ಇಷ್ಟಾದರೂ ಕಲಿಕೆಯಲ್ಲಿ ಅಷ್ಟೊಂದು ಸುಧಾರಣೆ ಕಂಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ, ಆತ ಪರೀಕ್ಷೆಗೆ ಹೆದರಿ ಮನೆಯಿಂದ ಬುಧವಾರ ಸಂಜೆ ನಾಪತ್ತೆಯಾಗಿದ್ದ ಎಂದು ಹೇಳಲಾಗಿದೆ. ಮನೆಯವರು ಹಾಗೂ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ತಡರಾತ್ರಿ ತನಕ ಆತನಿಗಾಗಿ ಹುಡುಕಾಡಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಸಂಜೆ ಹೊತ್ತು ಕಡಬ ಪೇಟೆಯಲ್ಲಿ…
ರಾಯಚೂರು: 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಸರ್ಕಾರಿ ಸ್ವಾಮ್ಯದ ಶಾಲೆಯೊಂದರ ಮುಖ್ಯೋಪಾಧ್ಯಾಯನನ್ನು (Headmaster) ಪೊಲೀಸರು ವಶಕ್ಕೆ ಪಡೆದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ವಿ.ಕೆ.ಅಂಗಡಿ ಈ ಪ್ರಕರಣದ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿದಿನ ಮೊಬೈಲ್ ಕರೆ ಮಾಡಿ ಹಾಗೂ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವಿದ್ಯಾರ್ಥಿನಿ ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್ ಮೆಸೇಜ್‌ಗಳಿಂದ ಕಾಮುಕ ಮುಖ್ಯೋಪಾಧ್ಯಾಯನ ಬಣ್ಣ ಬಯಲಾಗಿದೆ. ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆ ಆದ ಮೇಲೆ ಏನಾಗುತ್ತದೆ ನೋಡು ಎಂದು ಮುಖ್ಯೋಪಾಧ್ಯಾಯ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿನಗೆ ಒಳ್ಳೆಯ ಆಫರ್ (Offer) ಕೊಡುತ್ತೇನೆ. ನನ್ನ ಮನೆಗೆ ಒಂದು ಗಂಟೆ ಬಂದು ಹೋಗು ಎಂದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಮುಖ್ಯೋಪಾಧ್ಯಾಯನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾನವ ಹಕ್ಕುಗಳು (Human Rights) ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಗೂ…
ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ 1.33 ಕೋಟಿ ಜಪ್ತಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿದೆಡೆ ಚೆಕ್ ಪೋಸ್ಟ್ ಗಳಲ್ಲಿ 1.33 ಕೋಟಿ ನಗದು ಸಹಿತ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, 29,9200 ನಗದು, 19,84,366 ಮೌಲ್ಯದ ಮದ್ಯ, 23,16,950 ಮೌಲ್ಯದ ಮಾದಕ ವಸ್ತುಗಳು, 20,22,500 ಮೌಲ್ಯದ ಬೆಳ್ಳಿ ಆಭರಣ, 40,76,760 ರೂ.ಮೌಲ್ಯದ ಕುಕ್ಕರ್, ಸೀರೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳಾಗಿವೆ. ಲಾ ಅಂಡ್ ಆರ್ಡರ್ ದೃಷ್ಟಿಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ಸೂಕ್ಷ್ಮವಾಗಿದ್ದರೆ, ವೆಚ್ಚದ ವಿಚಾರದಲ್ಲಿ ದೊಡ್ಡಬಳ್ಳಾಪುರ ಸೇರಿ ಉಳಿದ ಮೂರೂ ವಿಧಾನಸಭಾ ಕ್ಷೇತ್ರ ಸೂಕ್ಷ್ಮವಾಗಿವೆ. ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ. ನೆಲಮಂಗಲದಲ್ಲಿ ಅಭ್ಯರ್ಥಿಯೊಬ್ಬರ ಪರ ಹಂಚಿಕೆ ಮಾಡುತ್ತಿದ್ದ ಕುಕ್ಕರ್, ಸೀರೆ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು. ‘ಶಸ್ತ್ರಾಸ್ತ್ರ ಠೇವಣಿಗೆ ಗಡುವು’ ಜಿಲ್ಲೆಯಲ್ಲಿ ಪರವಾನಗಿ ಪಡೆದ 2000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳಿದ್ದು, 2-3 ದಿನದಲ್ಲಿ ಹಿಂತಿರುಗಿಸುವಂತೆ ಮಾಲೀಕರಿಗೆ ಠಾಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಲ್ಲದೇ ಚುನಾವಣೆ ಸಮಯದಲ್ಲಿ…
ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ‘ದಹಿ’ ಎಂದು ಮುದ್ರಣ ಮಾಡುವುದು ಕಡ್ಡಾಯ ಎಂದು ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಆದೇಶಿಸಿರುವುದನ್ನ ಖಂಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಪ್ರಧಾನಿ ಮೋದಿ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ. ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್…