ಬೆಂಗಳೂರು: ಕಾಂಗ್ರೆಸ್ (Congress) ಮುಸ್ಲಿಮರ ಓಲೈಕೆಗಾಗಿ ಬಜರಂಗದಳ (Bajrang Dal) ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ (PFI) ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಟೀಕಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನೀಡಿರುವಂತಹ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಶರ್ಮಾ, ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ. ಈಗ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎನ್ನುವುದರಲ್ಲಿ ಏನು ಅರ್ಥ ಇದೆ? ಇದರ ಅರ್ಥ ಇಷ್ಟೇ. ಅವರು ಪಿಎಫ್‌ಐ ಬ್ಯಾನ್ ಮಾಡಿದ್ದಾರೆ, ನಾವು ಅದಕ್ಕೆ ಪರ್ಯಾಯವಾಗಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು.
Author: Prajatv Kannada
ಬೆಂಗಳೂರು: ತಮ್ಮ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿ ಇಂದು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಗಾಂಧಿನಗರದ ಬಿನ್ನಿಪೇಟೆಯಲ್ಲಿ ಬಿಜೆಪಿ(BJP) ನಾಯಕರಿಂದ ಪ್ರತಿಭಟನೆ ನಡೆದಿದೆ. ಕಳೆದ ಕೆಲದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಕಾಂಗ್ರೆಸ್ ಪಕ್ಷದವರೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಈ ಹಲ್ಲೆ ಖಂಡಿಸಿ ಇಂದು ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ನೇತೃತ್ವದಲ್ಲಿ ಪ್ರತಿಭಟನೆ ಜರುಗಿದೆ. ಈ ವೇಳೆ ಸಪ್ತಗಿರಿ ಗೌಡ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು. ಇನ್ನೂ ಮೌನ ಮೆರವಣಿಗೆ ಮೂಲಕ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಅಧಿಕಾರಿಗಳು, ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಹೆಲಿಕಾಪ್ಟರ್ ಟೇಕಾಫ್ ಗೆ ಅನುಮತಿ ಸಿಗದ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ರದ್ದಾಗಿದೆ. 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ಪ್ರಚಾರ ನಡೆಸಲು ಇಂದು ಗಂಗಾವತಿಗೆ ತೆರಳಲು ಜಕ್ಕೂರು ಹೆಲಿಪ್ಯಾಡ್ ಗೆ ಸಿದ್ದರಾಮಯ್ಯ ಅವರು ತೆರಳಿದರು. ಆದರೆ ಹೆಲಿಕಾಪ್ಟರ್ ಟೇಕಾಫ್ ಗೆ ಅನುಮತಿ ಸಿಗದ ಹಿನ್ನೆಲೆ ಸುಮಾರು ಒಂದು ಗಂಟೆಯಿಂದ ಜಕ್ಕೂರು ಹೆಲಿಪ್ಯಾಡ್ ನಲ್ಲಿ ಸಿದ್ದು ಕಾದು ಕುಳಿತಿದ್ದರು. ಪ್ರಧಾನಿ ಹೊಸಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನ್ನ ಗಂಗಾವತಿಯಲ್ಲಿ ಇಳಿಸಲು ಅನುಮತಿ ನಿರಾಕರಣೆ ಮಾಡಿದ ಕಾರಣದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ರದ್ದಾಗಿದೆ. ಇನ್ನೂ 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ಚುನಾವಣೆ ಪ್ರಚಾರಕ್ಕೆ ಇಂದು ಗಂಗಾವತಿಗೆ ತೆರಳಲು ಸಿದ್ದು ಸಜ್ಜಾಗಿದ್ದರು.
ಬೆಂಗಳೂರು: ಜೆಡಿಎಸ್ ಕಾಂಗ್ರೆಸ್‌ನ ‘ಬಿ’ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಯಂಗ್‌ಸ್ಟರ್. ಅವರು ಬೇಕಾದರೆ ಏನಾದರೂ ಮಾತನಾಡಲಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು. ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದು ಹೇಳಿದ್ದರು. ಈ ಬಾರಿ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಎತ್ತರಕ್ಕೆ ಬೆಳೆದ ನಾಯಕ. ಅವರು ಹಾಗೆ ಮಾತಾಡೋದು ಸರಿನಾ? ಅವರಿಗೆ ಬಿಡ್ತೀನಿ. ರಾಹುಲ್ ಗಾಂಧಿ ಯಂಗ್‌ಸ್ಟರ್, ಅವರು ಬೇಕಾದ್ರೆ ಏನಾದ್ರು ಮಾತಾಡಲಿ. ಮೋದಿ ಅವರು ಹಾಗೆ ಹೇಳಿದ್ದನ್ನು ಅವರಿಗೆ ಬಿಡ್ತೀನಿ. ನಾನೇನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಏನು ಮಾಡಿದ್ದೇನೆ ಎಂದು ಇಡೀ ರಾಷ್ಟ್ರಕ್ಕೆ ಗೊತ್ತು. ಮುಸ್ಲಿಂ ಮೀಸಲಾತಿ, ಮಹಿಳೆಯರ ಮೀಸಲಾತಿ, ವಾಲ್ಮೀಕಿ ಮೀಸಲಾತಿ, ಈದ್ಗಾ ವಿಚಾರ ಏನೇನು ಮಾಡಿದ್ದೇನೆ ನೋಡಲಿ. ದೊಡ್ಡವರ…
ಬೆಂಗಳೂರು: ನಿಮಗೆ ತಾಕತ್ ಇದ್ರೆ ಭಜರಂಗದಳ (Bajrang Dal) ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್ (Congress) ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲು ಹಾಕಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದರಲ್ಲಿ ಭಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದಾರೆ ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ನ ವಿನಾಶ ಕಾಲ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ಐ ನಿಷೇಧ ಮಾಡ್ತೀವಿ. ಜತೆಗೆ ಭಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ನವರ ಟಾರ್ಗೆಟ್ ಇರೋದು ಪಿಎಫ್ಐ ಅಲ್ಲ, ಅವರ ಟಾರ್ಗೆಟ್ ಭಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್ಎಸ್‌ನ ಒಂದು ಭಾಗ ಬಿಜೆಪಿ. ಆರ್‌ಎಸ್ಎಸ್‌ನ ಯುವಕರ ದಳ ಭಜರಂಗದಳ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟಿದೆ ಕಾಂಗ್ರೆಸ್. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ…
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ರಾಜ್ಯಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಇಂದು ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆ ಶಿವಕುಮಾರ್ ಮುಳುಬಾಗಿಲಿಗೆ ತೆರಳಲು ಹೆಚ್ಎಎಲ್( HAL) ಏರ್ಪೋರ್ಟ್ಗೆ ಬಂದಿದ್ದರು. ಇಲ್ಲಿಂದ ಮುಳುಬಾಗಿಲಿಗೆ ಡಿ.ಕೆ.ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ಹಾರಾಟ ವೇಳೆ ಹೆಲಿಕಾಪ್ಟರ್ ಮುಂಭಾಗದ ವಿಂಡೋ ಗಾಜು ಪುಡಿಪುಡಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಚ್ಎಎಲ್ನಿಂದ ಮುಳಬಾಗಿಲಿಗೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್ ವಿಂಡೋ ಗ್ಲಾಸ್ ಪುಡಿಪುಡಿಯಾಗಿದ್ದು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ಇದರಿಂದ ಡಿಕೆ ಶಿವಕುಮಾರ್ ಗಾಭರಿಯಾಗಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ. ಡಿ.ಕೆ.ಶಿವಕುಮಾರ್ ಹೆಚ್ಎಎಲ್ ಏರ್ಪೋರ್ಟ್ಗೆ ಹಿಂದಿರುಗಿದ್ದಾರೆ. SHAR
ಚಿಕ್ಕಮಗಳೂರು: ಜೆಡಿಎಸ್ (JDS) ಪಕ್ಷದ್ದು ಕಾಂಗ್ರೆಸ್ (Congress) ಜೊತೆ ಅಧಿಕೃತ ಹೊಂದಾಣಿಕೆಯೋ ಅಥವಾ ರಾಜಕೀಯ ವ್ಯಭಿಚಾರವೋ ಎಂದು ಶಾಸಕ ಹಾಗೂ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ತಾಲೂಕಿನಲ್ಲಿ ಅಧಿಕೃತ ಜೆಡಿಎಸ್ ಅಭ್ಯರ್ಥಿ ಇದ್ದರೂ ಕೂಡ ಅವರನ್ನು ಬಿಟ್ಟು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳುತ್ತಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ (S.L.Bhojegowda) ವಿರುದ್ಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ. ಹಾಗಾದರೆ, ಜೆಡಿಎಸ್ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ? ಆತ ಫ್ಲೆಕ್ಸ್ ಹಾಕೋಕೆ ಅಷ್ಟೆ ಸೀಮಿತನಾ? ಇದೇ ರೀತಿ ಮಾಡಿ ಕಳೆದ ಬಾರಿ ಹರೀಶನ ಮನೆ ಹಾಳು ಮಾಡಿದ್ದೀರಾ. ಭೋಜೇಗೌಡರು ಈ ಬಾರಿ ತಿಮ್ಮಶೆಟ್ಟಿ ಮನೆ ಹಾಳು ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬರ ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತದೆ? ಬೇರೆಯವರ ಮನೆ ಹಾಳು ಮಾಡಿದರೆ ಒಂದು ದಿನ…
ಕಂಪ್ಲಿ( ಬಳ್ಳಾರಿ): ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಶಾಸಕ ಜೆ.ಎನ್.ಗಣೇಶ ಅವರು ಪತ್ರಕರ್ತರೊಂದಿಗೆ ಮಾತನಾಡಿ ಚುನಾವಣಾಧಿಕಾರಿಗಳು ಮತ್ತು ಕಂಪ್ಲಿ ತಾಲೂಕಿನ ತಹಶೀಲ್ದಾರ ಹಾಗೂ ಪೊಲೀಸ್ ಠಾಣೆಯ ಪಿ.ಐ ಅವರು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡುವ ಮೂಲಕ ದೂರು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ವಿರುದ್ಧ ದೂರು ಬಂದಲ್ಲಿ ಅವರಿಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸುತ್ತಿದ್ದಾರೆ ಹೀಗಾಗಿ ಚುನಾವಣಾಧಿಕಾರಿ,ತಹಶೀಲ್ದಾರ, ಸಿಪಿಐ ಅವರನ್ನು ತಕ್ಷಣಕ್ಕೆ ಬದಲಾವಣೆ ಮಾಡಬೇಕು ಎಂದು ನೇರವಾಗಿ ಆರೋಪಿಸಿದರು. Video Player 00:00 00:54 ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕೇಂದು ಮನವಿ ಮಾಡಿದರು.ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶ್ರೀನಿವಾಸರಾವ(ವಾಸಪ್ಪ),ಹಬೀಬ್ ರೆಹಮಾನ್,ಕಟ್ಟೆ ವೆಂಕಟೇಶ,ಶಶಿ,ಜಾಫರ್,ಸೇರಿದಂತೆ ಅನೇಕರಿದ್ದರು.
ಯಾದಗಿರಿ: 2023ರ ಚುನಾವಣಾ ಕಾವು ಎಲ್ಲೆಡೆ ರಂಗೇರಿದ್ದು ಅಭ್ಯರ್ಥಿಗಳು ಬಿಸುರಿನ ಪ್ರಚಾರ ಕೈಗೊಂಡಿದ್ದಾರೆ ಅದೇ ರೀತಿ ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿ ಸದ್ದಿಲ್ಲದೇ ಚರಿತಾ ಕೊಂಕಲ್ ಮಿಂಚಿನ ಪ್ರಚಾರ ಕೂಡ ನಡೆಸುತ್ತಿದ್ದಾರೆ ಇವರು ಪ್ರಚಾರ ರಾಷ್ಟ್ರೀಯ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ ಹಾಗೂ ಯಾದಗಿರಿ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯೂ ಕೂಡ ಆಗಿದ್ದಾರೆ. Video Player 00:00 00:12 ಈಗಾಗಲೇ ಚರಿತಾ ಯಾದಗಿರಿಯ ಶಹಾಪೂರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶಾನಪೂರ ಪರ ಭರ್ಜರಿ ಪ್ರಚಾರ ಆರಂಭಿಸಿದ್ದು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಗೆಲ್ಲಿಸುವಂತೆ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಿಡಿದು ಮತಯಾಚನೆ ಮಾಡುತ್ತಿದ್ದು, ಮಹಿಳೆಯರ ನೆಚ್ಚಿನ ಯೋಜನೆಗಳನ್ನು ಅರ್ಥ ಮಾಡಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗ್ತಾರೆ ಎಂದು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
ಬೀದರ್ : ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ಮುಂದುವರೆಸಿದ್ದಾರೆ. ಪ್ರತಿ ನಿತ್ಯ ಹತ್ತಾರು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸುತ್ತಿರುವ ಅವರನ್ನು ಮತದಾರರು, ಅಭಿಮಾನಿಗಳು, ಕಾರ್ಯಕರ್ತರು ಹೋದಲ್ಲೆಲ್ಲಾ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ನಿಜಾಂಪುರ, ಹಜ್ಜರಗಿ, ಕಮಲಾಪೂರ, ಕೋಳಾರ ಕೆ ಸೇರಿದಂತೆ ವಿವಿಧೆಡೆ ಭಾನುವಾರ ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಗಳ ಮತದಾರರು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಾಜಾ ಭಜಂತ್ರಿಯೊಂದಿಗೆ ಭರ್ಜರಿಯಾಗಿ ಸ್ವಾಗತಿಸಿಕೊಂಡರು. ಗ್ರಾಮ ಸಂಚಾರ ನಡೆಸಿ ಮನೆಮನೆಗೆ ತೆರಳಿ ಮತಯಾಚಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಾಡಿನ ಒಳಿತಿಗಾಗಿ, ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಮತನೀಡುವಂತೆ ಮನವಿ ಮಾಡಿದರು. ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ್ದ ಜನಪರ ಕೆಲಸಗಳ ಬಗ್ಗೆ ಮತದಾರರಿಗೆ…