Author: Prajatv Kannada

ಚಿಕ್ಕಮಗಳೂರು: ಇಂದು ಕಾಫಿನಾಡಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ(Rahul Gandhi) ಆಗಮಿಸಲಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ರೋಡ್ ಶೋ ನಡೆಸಿ, ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ (HD Tammaiah)ಅವರ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್​ವೆರೆಗೂ ರೋಡ್ ಶೋ ನಡೆದು, ಕೊನೆಗೆ ಆಜಾದ್ ಪಾರ್ಕ್​ನಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ರೋಡ್ ಶೋ ನಲ್ಲಿ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದ್ದು, ಬಿಜೆಪಿ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ತಾರಕಕ್ಕೇರಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ ರಾಷ್ಟ್ರೀಯ ನಾಯಕರ ಶಕ್ತಿ ಪ್ರದರ್ಶನವಾಗುತ್ತಿದೆ. ನಿನ್ನೆ  ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿರುಸಿನ ಪ್ರಚಾರ ನಡೆಸಿದರು. ಇತ್ತ ಕಾಂಗ್ರೆಸ್​ನಲ್ಲಿ ನಾಯಕ ರಾಹುಲ್​ ಗಾಂಧಿಯವರ ಪ್ರಚಾರದ ಭರಾಟೆ ಜೋರಾಗಿಯೇ ಇತ್ತು. ಹಾಗೇ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಹಲವು ಮಹತ್ವದ ಘೋಷಣೆಗಳನ್ನು…

Read More

ಚಾಮರಾಜನಗರ: ಇಂದುಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ(Minister Amit Shah) ಪ್ರಚಾರ ನಡೆಸಲಿದ್ದಾರೆ. ಹನೂರು, ಕೊಳ್ಳೇಗಾಲ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಲಿದ್ದಾರೆ. ಹನೂರಿನ ಆರ್.ಎಸ್.ದೊಡ್ಡಿ ಬಳಿಯ ಮೈದಾನದಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹನೂರು ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೊಳ್ಳೇಗಾಲ ಕ್ಷೇತ್ರದ ಸಂತೇಮರಹಳ್ಳಿಯಲ್ಲಿ ಕೊಳ್ಳೇಗಾಲ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚಿಸಲಿದ್ದಾರೆ. ಹಾಗೂ ಸಿದ್ದರಾಮಯ್ಯ ಮಣಿಸಲು ಕೇಂದ್ರ ಸಚಿವ ಅಮಿತ್ ಶಾ ರಣತಂತ್ರ ಹೆಣೆದಿದ್ದು ಬೆಳಗ್ಗೆ 11 ಗಂಟೆಗೆ ವರುಣ ಕ್ಷೇತ್ರದ ಹೊಸಕೋಟೆ ಬಳಿ ಸಮಾವೇಶ ನಡೆಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ(Former CM Yeddyurappa), ಸಂಸದ ವಿ.ಶ್ರೀನಿವಾಸ್​ ಪ್ರಸಾದ್​​ ಭಾಗಿಯಾಗಲಿದ್ದಾರೆ.

Read More

ಲಕ್ನೋ: ‌ಐಪಿಎಲ್‌ (IPL 2023) ಹಬ್ಬದಲ್ಲಿ ಪ್ರತಿದಿನವೂ ಒಂದೊಂದು ವಿಶೇಷತೆಗಳು ಕಂಡುಬರ್ತಿದೆ. ಅದರಲ್ಲೂ ಆರ್‌ಸಿಬಿ (RCB) ಮ್ಯಾಚ್‌ ಇದ್ದರೆ ಅಭಿಮಾನಿಗಳಂತೂ ಸುದ್ದಿಯಲ್ಲೇ ಇರ್ತಾರೆ. ಸೋಮವಾರ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ನಡೆಯುತ್ತಿದ್ದ ಪಂದ್ಯದ ವೇಳೆ ಯುವತಿಯರಿಬ್ಬರು ʻಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡು ಸುದ್ದಿಯಾಗಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ. ಕೆಕೆಆರ್‌ (KKR) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಫ್ಯಾನ್ಸ್‌ ʻನಮ್ಮದು ಆರ್‌ಸಿಬಿ ಬ್ಲಡ್‌ ಗ್ರೂಪ್‌ʼ ಅಂತಾ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದು ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಇಬ್ಬರು ಯುವತಿಯರು ಒಂದು ಹುಡುಗನನ್ನ ಹುಡುಕಿಕೊಡುವಂತೆ ರಿಕ್ವೆಸ್ಟ್‌ ಮಾಡಿದ್ದಾರೆ. ಯುವತಿಯರ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮಾಷೆಯಾಗಿ…

Read More

ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ (RCB) ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ. ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು ಇವರಾಗಿದ್ದಾರೆ. ಪ್ರತಿ ಮ್ಯಾಚ್‌ ನಡೆದಾಗಲೂ ಆರ್‌ಸಿಬಿ ಅಭಿಮಾನಿಗಳು ಸುದ್ದಿಯಲ್ಲಿರುತ್ತಾರೆ. ಕಳೆದ 15 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲವಾದರೂ ಅಭಿಮಾನಿಗಳ ಪ್ರೀತಿ, ಬಲ, ನಂಬಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಒಂದಲ್ಲ ಒಂದು ದಿನ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ. ಅದೇ ರೀತಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಸಹ ಆರ್‌ಸಿಬಿ ಆಟಗಾರರಿಗೆ ಫ್ಯಾನ್‌ ಆಗಿದ್ದಾರೆ. ಈ ಕುರಿತು ರಶ್ಮಿಕಾ ಮಂದಣ್ಣ…

Read More

ಲಖನೌ: ಲಖನೌ ಸೂಪರ್‌ ಜಯಂಟ್ಸ್ ವಿರುದ್ಧ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ನಾವು ಮೊದಲು ಬ್ಯಾಟ್‌ ಮಾಡಿದ ನಿರ್ಧಾರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಆಯಿತು ಎಂದು ನಾಯಕ ಫಾಫ್‌ ಡು’ಪ್ಲೆಸಿಸ್‌ ತಿಳಿಸಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ನಾಯಕ ಫಾಫ್ ಡು’ಪ್ಲೆಸಿಸ್ (44 ರನ್) ಹಾಗೂ ವಿರಾಟ್ ಕೊಹ್ಲಿ (31 ರನ್) ಅವರ ಬ್ಯಾಟಿಂಗ್‌ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 126 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ 108 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆರ್‌ಸಿಬಿ ಪರ 44 ರನ್‌ ಗಳಿಸಿದ ಫಾಫ್ ಡು’ಪ್ಲೆಸಿಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಕಾರಣರಾದರು. ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಫಾಫ್ ಡು’ಪ್ಲೆಸಿಸ್‌, “ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಇಲ್ಲಿನ ಪಿಚ್ ಸಂಪೂರ್ಣ ವಿರುದ್ಧವಾಗಿದೆ. ನಾವು ಪಂದ್ಯದ ಮೊದಲ 6 ಓವರ್‌ಗಳಲ್ಲಿ…

Read More

ಲಖನೌ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ನಡುವಣ ಪಂದ್ಯದ ಬಳಿಕ ಜಗಳ ಮಾಡಿಕೊಂಡ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 100 ರಷ್ಟು ದಂಡವನ್ನು ವಿಧಿಸಲಾಗಿದೆ. ಇದರ ಜೊತೆಗೆ ಲಖನೌ ವೇಗಿ ನವೀನ್‌ ಉಲ್ ಹಕ್‌ ಅವರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡವನ್ನು ವಿಧಿಸಲಾಗಿದೆ. ಸೋಮವಾರ ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದಿದ್ದ ಲೋ ಸ್ಕೋರಿಂಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್‌ಗಳಿಂದ ಗೆಲುವು ಸಾಧಿಸಿತ್ತು. ಆದರೆ, ಐಪಿಎಲ್‌ ಕೋಡ್‌ ಆಫ್‌ ಕಂಡಕ್ಟ್‌ ಎರಡನೇ ಹಂತದ ಅಪರಾಧವೆಸಗಿದ ಕಾರಣ ಕೊಹ್ಲಿ ಹಾಗೂ ಗಂಭೀರ್‌ಗೆ ದುಬಾರಿ ದಂಡ ವಿಧಿಸಲಾಗಿದೆ. ಇದನ್ನು ಇವರಿಬ್ಬರೂ ಒಪ್ಪಿಕೊಂಡಿದ್ದಾರೆ. “ಲಖನೌದ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ನಡೆದಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಐಪಿಎಲ್‌ ನಿಯಮ ಉಲ್ಲಂಘಿಸಿದ ಕಾರಣ ಲಖನೌ ಸೂಪರ್‌ ಜಯಂಟ್ಸ್‌ ಮೆಂಟರ್‌…

Read More

ಲಕ್ನೋ: ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಉತ್ತಮ ಫೀಲ್ಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 126 ರನ್‌ ಗಳನ್ನಷ್ಟೇ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ 19.5 ಓವರ್‌ಗಳಲ್ಲಿ 108 ರನ್‌ ಗಳಿಸಿ ಸರ್ವಪತನಕಂಡಿತು. ಈ ಮೂಲಕ ತವರಿನಲ್ಲೇ ಸೋತು ಮುಖಭಂಗ ಅನುಭವಿಸಿತು ಬೌಲಿಂಗ್‌ ಪಿಚ್‌ ಎನಿಸಿಕೊಂಡಿರುವ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ರನ್‌ ಕದಿಯಲು ತಿಣುಕಾಡಿತ್ತು. ಕಳಪೆ ಬ್ಯಾಟಿಂಗ್‌ ಫಾರ್ಮ್‌ನಿಂದಾಗಿ ಈ ಆವೃತ್ತಿಯಲ್ಲಿ ಅತ್ಯಂತ ಕಡಿಮೆ ರನ್‌ ದಾಖಲಿಸಿತ್ತು. ಮೊದಲ ವಿಕೆಟ್‌ ಪತನಕ್ಕೆ 9 ಓವರ್‌ಗಳಲ್ಲಿ ಕೇವಲ 62 ರನ್‌ ಗಳನ್ನಷ್ಟೇ ದಾಖಲಿಸಿತ್ತು. ಮೊದಲ 10 ಓವರ್‌ಗಳಲ್ಲಿ 65 ರನ್‌ ಗಳಿಸಿದ್ದ ಆರ್‌ಸಿಬಿ, ಮುಂದಿನ 10 ಓವರ್‌ಗಳಲ್ಲಿ ಕೇವಲ 61 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಎಂದಿನಂತೆ…

Read More

ಹಿಟ್‌ಮ್ಯಾನ್‌ ಖ್ಯಾತಿಯ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಮುಂಬೈ ಇಂಡಿಯನ್ಸ್‌ ಮತ್ತು ಭಾರತ ತಂಡ ಕಪ್ತಾನ ರೋಹಿತ್‌ ಶರ್ಮಾ ತಮ್ಮ 36ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಏಪ್ರಿಲ್ 30 (ಭಾನುವಾರ) ರೋಹಿತ್‌ ಶರ್ಮಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿರುವ ಹೈದರಾಬಾದ್‌ ಫ್ಯಾನ್ಸ್‌ ಬಳಗ, ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಎಂಬಂತೆ 60 ಅಡಿ ಎತ್ತರದ ಬೃಹತ್‌ ಕಟೌಟ್‌ ನಿರ್ಮಾಣ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬನಿಗೆ ಇಟ್ಟು ದೊಡ್ಡ ಕಟೌಟ್‌ ನಿರ್ಮಾಣ ಮಾಡಲಾಗಿರುವುದು ಇದೇ ಮೊದಲ ಬಾರಿ ಆಗಿದೆ. ಹೀಗಾಗಿ ರೋಹಿತ್‌ ಶರ್ಮಾ ಅವರಿಗೆ ಹುಟ್ಟುಹಬ್ಬದ ದಿನದಂದು ಭರ್ಜರಿ ಗಿಫ್ಟ್‌ ಸಿಕ್ಕಿದೆ ಎನ್ನಲ್ಲಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲಿ ರೋಹಿತ್‌ ಶರ್ಮಾ ಅಭಿಮಾಣಿಗಳು ವಿಶ್ವ ವ್ಯಾಪಿ. 2007ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ರೋಹಿತ್‌ ಶರ್ಮಾ ಅವರ ಅಳಿಲು ಸೇವೆಯಿದೆ. 2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಲಭ್ಯವಾಗಿರಲಿಲ್ಲ.…

Read More

ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿ ಆವಂತಿಕಾ ಸದ್ಯ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಖತ್ ವೈರಲ್ ಆಗಿದೆ. ಈ ಮೂಲಕ ಟೀಕಾಕಾರರಿಗೆ ಆವಂತಿಕಾ ತಿರುಗೇಟು ನೀಡಿದ್ದಾರೆ. ಈ ಹಿಂದೆ ಆವಂತಿಕಾ ಸಾಕಷ್ಟು ದಪ್ಪಗಿದ್ದ ಕಾರಣದಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಇದೀಗ ಈಕೆ ಸಖತ್ ಸ್ಲೀಮ್ ಆಗಿದ್ದು ಬೋಲ್ಡ್​ ಫೋಟೋಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಖುಷ್ಬೂ ಅವರು ಸಹ ಈ ಹಿಂದೆ ದಪ್ಪಗಿದ್ದರು. ಅವರು ಕೂಡ ಸುಮಾರು 20 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಅಮ್ಮನಂತೆ ಮಗಳು ಕೂಡ ಸ್ಲಿಮ್​ ಆಗಿದ್ದಾರೆ. ಆವಂತಿಕಾ ಅವರು ಖುಸ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ. ಖುಷ್ಬೂ ಜತೆಗೆ ಆವಂತಿಕಾ ಕೂಡ ದಡೂತಿ ದೇಹದಿಂದ ಒಂದು ಕಾಲದಲ್ಲಿ ಟ್ರೋಲಿಗರಿಗೆ ದಾಳವಾಗಿದ್ದರು. ಇಗ ಅದೇ ಟೀಕಾಕಾರರು ಅಮ್ಮ-ಮಗಳ ದೇಹ ಪರಿವರ್ತನೆ ಕಂಡು ಹುಬ್ಬೇರಿಸಿದ್ದಾರೆ. ಇದೇ ಸಂದರ್ಭದಲ್ಲಿ ಖುಷ್ಬೂ ಮಗಳು ಸಿನಿಮಾ ಲೋಕಕ್ಕೆ ಎಂಟ್ರಿ…

Read More

ಸಿನಿಮಾ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಮಾಜಿ ಪೊಲೀಸ್​ ಅಧಿಕಾರಿ ವಿರುದ್ಧ ನಟಿ ದೂರು ದಾಖಲಿಸಿದ್ದಾರೆ ದಾಖಲಾಗಿದೆ. ಕೊಲ್ಲಂ ಮೂಲದ ನಟಿ ಕೇರಳದ ನಿವೃತ್ತ ಡಿವೈಎಸ್​​ಪಿ ಮಧುಸೂದನನ್​ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಬೇಕಲ್​ ಡಿವೈಎಸ್​ಪಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಸಂತ್ರಸ್ತ ನಟಿ ಪೆರಿಯಾದ ಹೋಮ್​ಸ್ಟೇನಲ್ಲಿ ಉಳಿದುಕೊಂಡಿದ್ದಾಗ ಈ ಘಟನೆ ನಡೆದಿದೆ. ಬಲವಂತವಾಗಿ ಬಿಯರ್​ ಕುಡಿಸಿ, ತನ್ನ ರೂಮಿನಲ್ಲಿ ಮಲಗಿಕೊಳ್ಳಲು ಮಧುಸೂದನ್​ ಬಲವಂತ ಮಾಡಿದ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಿರುಚಿತ್ರದಲ್ಲಿ ನಟಿಸಲು ನಟಿ ಕಾಸರಗೋಡಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ತ್ರಿಕಾರಿಪುರ್​ ನಿವಾಸಿಯಾಗಿರುವ ಆರೋಪಿ ವಿ. ಮಧುಸೂದನ್​ ಓರ್ವ ಸಿನಿಮಾ ನಟನಾಗಿದ್ದು ಸದ್ಯ ನಟಿಯು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭವಾಗಿದೆ.

Read More