Author: Prajatv Kannada

ಪ್ರಯಾಗ್ ರಾಜ್: 2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರನ್ನು ಅಪರಾಧಿಗಳೆಂದು ಇಲ್ಲಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿರುದ್ಧ ವಿಚಾರಣೆ ನಡೆಸುವ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. Prayagraj court sentences ನ್ಯಾಯಾಲಯ ಅತೀಕ್‌ಗೆ ಜೀವಾವಧಿ ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿದೆ. ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯದMLA court in Prayagraj ನ್ಯಾಯಾಧೀಶ ದಿನೇಶ್ ಚಂದ್ರ ಶುಕ್ಲಾ ಅವರು ಅಹ್ಮದ್, ವಕೀಲ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ ಎಂದು ಸರ್ಕಾರದ ಪರ ವಕೀಲ ಗುಲಾಬ್ ಚಂದ್ರ ಅಗ್ರಹರಿ ತಿಳಿಸಿದ್ದಾರೆ. ಉಮೇಶ್ ಪಾಲ್ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಪರಾಧಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ…

Read More

ಬೆಂಗಳೂರು/ನವದೆಹಲಿ: ನಮ್ಮ ದೇಶವನ್ನು ಉಳಿಸಲು ಈ ದಬ್ಬಾಳಿಕೆಯಿಂದ ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ನಿಮಗೆ ಎಂದೆಂದಿಗೂ ಆತ್ಮೀಯ ಸ್ವಾಗತ ಎಂದು ಹೇಳುವ ಮೂಲಕ ಹಿರಿಯ ನಟ ಪ್ರಕಾಶ್‌ ರಾಜ್‌ (Prakash Raj), ರಾಹುಲ್‌ ಗಾಂಧಿ (Rahul Gandhi) ಅವರನ್ನು ಬೆಂಬಲಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭೆಯ ಕಾರ್ಯದರ್ಶಿ ಮೋಹಿತ್ ರಾಜನ್ ಸಂಸದರ ಅಧಿಕೃತ ನಿವಾಸ ಖಾಲಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿ ಪತ್ರ ಬರೆದಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ನಾನು ಇಲ್ಲಿ ಸಂತೋಷದ ಸಮಯ ಕಳೆದಿದ್ದೇನೆ, ಅದರ ನೆನಪುಗಳಿವೆ. ಜನರ ಆದೇಶಕ್ಕೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಈ ಕುರಿತು #justasking ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಿರುವ ನಟ ಪ್ರಕಾಶ್‌ ರಾಜ್‌, ʻಪ್ರೀತಿಯ ರಾಹುಲ್‌ ಗಾಂಧಿ,  ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ಇಡೀ ಭಾರತವೇ ನಿಮ್ಮ ಮನೆ,…

Read More

ಲಂಡನ್: ಸ್ಕಾಟ್ಲ್ಯಾಂಡ್ ಆಡಳಿತ ಪಕ್ಷದ ನೂತನ ನಾಯಕನಾಗಿ ಪಾಕ್ ಮೂಲದ ಹಂಝಾ ಯೂಸುಫ್ ಆಯ್ಕೆಯಾಗಿದ್ದಾರೆ. ಹಂಝಾ ಯೂಸುಫ್ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ 55 ಲಕ್ಷ ಜನಸಂಖ್ಯೆಯ ಅರೆಸ್ವಾಯತ್ತ ರಾಷ್ಟ್ರವಾದ ಸ್ಕಾಟ್ಲ್ಯಾಂಡ್ನ ಪ್ರಧಾನಮಂತ್ರಿ ಸ್ಥಾನವನ್ನು ಆಲಂಕರಿಸಲಿರುವ ಪ್ರಪ್ರಥಮ ಬಿಳಿಜನಾಂಗಿಯೇತರ ವ್ಯಕ್ತಿ ಹಾಗೂ ಮುಸ್ಲಿಂ ಧರ್ಮೀಯ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಆಡಳಿತಾರೂಢ ಸ್ಕಾಟಿಶ್ ನ್ಯಾಶನಲ್ ಪಾರ್ಟಿ ನಾಯಕನ ಆಯ್ಕೆಗಾಗಿ ಪಕ್ಷದ ಸದಸ್ಯರೊಳಗೆ ಮತದಾನ ನಡೆದಿತ್ತು. ಯೂಸುಫ್ ಅವರು ತನ್ನ ಎದುರಾಳಿ ಕೇಟ್ ಫೋರ್ಬ್ಸ್ ಅವರನ್ನು ಅಲ್ಪ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಪ್ರಧಾನಿ ಮಂತ್ರಿ ಪಟ್ಟ ಅಂಕರಿಸಿದರು. ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೊದಲ್ಲಿ ಪಾಕ್ ಮೂಲದ ವಲಸಿಗ ದಂಪತಿಗೆ ಜನಿಸಿದ್ದ ಯೂಸುಫ್ ಹಾಲಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾರೆ. ಹಾಲಿ ಪ್ರಧಾನಮಂತ್ರಿ ನಿಕೋಲಾ ಸ್ಟುರ್ಜಿಯೊನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯೂಸುಫ್ ಸೇರಿದಂತೆ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು. ಸ್ಕಾಟ್ಲ್ಯಾಂಡ್ ಸರಕಾರದ ಪ್ರಧಾನ ಮಂತ್ರಿಯಾಗಿ ಮತ್ತು ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ನಾಯಕಿಯಾಗಿ ಎಂಟು ವರ್ಷಗಳ ಕಾಲ…

Read More

ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಔಪಚಾರಿಕವಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ. ಸುಪ್ರಿಂಕೋರ್ಟ್‌ನಲ್ಲಿ ವಕೀಲೆಯಾಗಿರುವ ಬಾನ್ಸುರಿ ಅವರಿಗೆ ದಿಲ್ಲಿ ಬಿಜೆಪಿಯ ಕಾನೂನು ಘಟಕದಲ್ಲಿ ಮಹತ್ತರ ಹೊಣೆ ನೀಡಲಾಗಿದೆ. ಈ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಹಿರಿಯ ನಾಯಕಿಯ ಪುತ್ರಿಯನ್ನು ದಿಲ್ಲಿ ಬಿಜೆಪಿಯ ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ಕೂಡ ನೇಮಿಸಲಾಗಿದೆ. ದಿಲ್ಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ್‌ ಅವರು ಬಾನ್ಸುರಿ ಸ್ವರಾಜ್‌ ಅವರನ್ನು ಕಾನೂನು ಘಟಕದ ಸಹ ಸಂಚಾಲಕಿಯಾಗಿ ನೇಮಕಗೊಳಿಸಿದ್ದು, ಸ್ವರಾಜ್‌ ಪುತ್ರಿಯ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರಿದು ಬಾನ್ಸುರಿ? ಕಳೆದ 16 ವರ್ಷಗಳಿಂದ ಕಾನೂನು ವೃತ್ತಿಯಲ್ಲಿರುವ ಬಾನ್ಸುರಿ ಅವರು ಆಕ್ಸ್‌ಫರ್ಡ್ ವಿವಿ ಪದವೀಧರೆಯಾಗಿದ್ದಾರೆ. ಈ ಹಿಂದಿನಿಂದಲೂ ಅವರು ಪಕ್ಷಕ್ಕೆ ಅನೌಪಚಾರಿಕವಾಗಿ ಕಾನೂನು ಮತ್ತಿತರ ವಲಯಗಳಲ್ಲಿ ನೆರವಾಗುತ್ತಿದ್ದರು. ಈಗ ಅವರಿಗೆ ಸಂಘಟನೆಯಲ್ಲಿ ಹುದ್ದೆ ನೀಡಲಾಗಿದೆ. ಈ ಮೂಲಕ ಬಾನ್ಸುರಿ ಅವರನ್ನು…

Read More

ಸೂರ್ಯೋದಯ: 06.18 AM, ಸೂರ್ಯಾಸ್ತ : 06.31 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ಚೈತ್ರ ಮಾಸ, ಶುಕ್ಲ ಪಕ್ಷ,  ವಸಂತ  ಋತು,  ಉತ್ತರಾಯಣ ತಿಥಿ: ಇವತ್ತು ಅಷ್ಟಮಿ 09:07 PM ತನಕ ನಂತರ ನವಮಿ ನಕ್ಷತ್ರ: ಇವತ್ತು ಆರ್ದ್ರಾ 08:07 PM ತನಕ ನಂತರ ಪುನರ್ವಸು ಯೋಗ: ಇವತ್ತು ಪೂರ್ಣ ಶೋಭಾನ ಕರಣ: ಇವತ್ತು ವಿಷ್ಟಿ 08:01 AM ತನಕ ನಂತರ ಬವ 09:07 PM ತನಕ ನಂತರ ಬಾಲವ ರಾಹು ಕಾಲ:  12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ:  10:30 ನಿಂದ 12:00 ವರೆಗೂ ಅಮೃತಕಾಲ: 09.02 AM to 10.49 AM ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ : ಕೃಷಿ ಭೂಮಿ ಖರೀದಿಸುವ ಚಿಂತನೆ, ಭೂಮಿ ವಿಚಾರಕ್ಕಾಗಿ ವಾಗ್ವಾದ, ರಾಜೀ ಮಾಡಿಕೊಳ್ಳುವುದು ಉತ್ತಮ,ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ ಸರ್ಕಾರದಿಂದ ಸಹಾಯ,ಕಳೆದುಹೋದ ವಸ್ತುಗಳು ಮರಳಿ…

Read More

ಕೆ.ಆರ್.ಪುರ:‌ ರಾಜ್ಯ ವಿಧಾನಸಭೆ ಚುನಾವಣೆ ಅತ್ತಿರವಾಗುತ್ತಿದ್ದಂತೆ  ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ನಗರಾಭಿವೃದ್ಧಿ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಮಗಾರಿ ಕೈಗೊಳ್ಳದೇ 97 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ‌ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮಾಡಿರುವ ಆರೋಪಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಸ್ಟಷ್ಟನೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳಾಗಿವೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಲ್ಲಸಲ್ಲದ‌‌ ಆರೋಪ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ನನ್ನ‌ ಕ್ಷೇತ್ರದಲ್ಲಿ ಜವಾಬ್ದಾರಿಯುತನಾಗಿ ಕೆಲ‌ಸ ಮಾಡುತ್ತಾ ಬಂದಿದ್ದೇನೆ. ಎಲ್ಲಿಯೂ ಕೂಡ ಲೋಪವಾಗಿಲ್ಲ.‌ ಸುಖಾಸುಮ್ಮನೆ ನನ್ನ‌ ಮೇಲೆ ಆಪಾದನೆ ಮಾಡುವ ಕೆಲಸವಾಗುತ್ತಿದೆ ಎಂದು ಹೇಳಿದರು. ಲೋಕಾಯುಕ್ತ ಪೊಲೀಸರು ಹಾಗೂ‌ ನ್ಯಾಯಾಲಯದ ಮೇಲೆ ಅಪಾರ ಗೌರವವಿದೆ.‌ ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಿ‌ ಅಗತ್ಯ ದಾಖಲೆಗಳನ್ನ‌ ಒದಗಿಸುವೆ.‌ ಚುನಾವಣೆ ಹಿನ್ನೆಲೆ ನನ್ನ ಇಮೇಜ್ ಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದು ಸಚಿವ ಬೈರತಿ ಆರೋಪಿಸಿದರು. ಒಂದು ವೇಳೆ ಲೋಪವಾಗಿದ್ದರೆ ನಾನು ಹೇಗೆ…

Read More

ಕೋಲಾರ: H.D.ಕುಮಾರಸ್ವಾಮಿಯವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗದೆ‌ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಯಾಗುತ್ತೇನೆ ಎಂದು JDS ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. ಕಾಂಗ್ರೆಸ್ ಇಲ್ಲ ಬಿಜೆಪಿ ಪಕ್ಷದಲ್ಲಿ ಯಾರಾದರು ಸರಿ ಈ ಸವಾಲನ್ನು ಸ್ವೀಕರಿಸುತ್ತಾರಾ ನಾವು ನೆಲದಿಂದ ಹುಟ್ಟಿರುವವರು ನಾವು ಮೇಲೆಯಿಂದ ಬಂದವರಲ್ಲ ನಾವೆಲ್ಲರೂ ರೈತರ ಮಕ್ಕಳು ಹೊಲ ಬಿತ್ತುವವರು ನಾವು ಬೆಳೆಯುವವರು ನಾವೇ ರಾಹುಲ್ ಗಾಂಧಿ ಸಂಸತ್ ನಲ್ಲಿ ಅನರ್ಹ ವಿಚಾರ ರಾಹುಲ್ ಗಾಂಧಿ ಅವರೇ ಅಲ್ಲಿ ಸೋತು ಕೇರಳಕ್ಕೆ ಬಂದಿದ್ದಾರೆ ಸಾಹೇಬ್ರು ,ಕ್ರಿಶ್ಚಿಯನ್ ಸಮುದಾಯ ಇರುವ ಕಡೆ ಬಂದು ಗೆದ್ದಿದ್ದಾರೆ ಅಲ್ಲದೆ ಇರುವ ಊರಿನಲ್ಲಿ ಅವರಿಗೆ ಗೌರವ ಇಲ್ಲ‌ಬೇರೆ ಕಡೆ ಅವರಿಗೆ ಎಷ್ಟು ಗೌರವ ಇರುತ್ತದೆ ರಾಹುಲ್ ಗಾಂಧಿ ಅವರಿಗೆ ಅವರು ಲೀಡರ್ ಇರಬಹುದು ಆದರೆ ಕರ್ನಾಟಕದ ಜನೆತೆಗೆ ಅಲ್ಲ ಅಲ್ಪಸಂಖ್ಯಾತರ ಮೀಸಲಾತಿ ರದ್ದು ವಿಚಾರ ಒಕ್ಕಲಿಗರು ಸಾಬರು ಒಂದಾಗಿದ್ದಾರೆಂದು ಅವರಿಗೆ…

Read More

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ  ಚುನಾವಣೆ ಆಯೋಗದಿಂದ ಅಧಿಕೃತವಾಗಿ ದೊರೆತ ಫುಟ್ಬಾಲ್ ಚಿನ್ಹೆ ದೊರಕಿದ ಮೇಲೆ ಇಂದು ಪ್ರಥಮವಾಗಿ ಗಂಗಾವತಿ ಕ್ಷೇತ್ರದ ಹೆಬ್ಬಾಗಿಲು ಆನೆಗುಂದಿ ಭಾಗದ ಕಡೆಬಾಗಿಲು, ಗೂಗಿಬಂಡಿ, ಗೂಗಿಬಂಡಿ‌ ಕ್ಯಾಂಪ್, ಬಸವನದುರ್ಗ, ಕೃಷ್ಣಾಪುರ್ ಡಗ್ಗಿ  ಕ್ಯಾಂಪ್, ಬಂಡಿಬಸಪ್ಪ ಕ್ಯಾಂಪ್, ಸಾಯಿನಗರ(ವಿಪ್ರ), ರಾಯಲುನಗರ, ನಾಗರಹಳ್ಳಿ, ವಡ್ಡರಹಟ್ಟಿ ಕ್ಯಾಂಪ್ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಪ್ರಣಾಳಿಕೆ ಮತ್ತು ಅಭಿವೃದ್ಧಿಯ ವಿಚಾರಗಳನ್ನು ತಿಳಿಸಿದರು. ಈ ವೇಳೆ ಸಂಗಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್ ಮತ್ತು ಸಂಗಾಪೂರ ಗ್ರಾಮಗಳ ಗ್ರಾ. ಪಂ. ಸದಸ್ಯರು ಗಳಾದ ಲಕ್ಷ್ಮವ್ವ ಹನುಮಂತಪ್ಪ ಗುಂಟೂರು, ಬಿ ಗೋಪಿ, ಮತ್ತು ತಾಳೂರು ಸತ್ಯನಾರಾಯಣ ಪಕ್ಷದ‌ ಶಾಲು ಹಾಕಿಸಕೊಂಡು ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕರಾದ ಮನೋಹರ ಗೌಡ ಹೇರೂರು, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಪಕ್ಷದ ಮುಖಂಡರಾದ ಸೈಯದ್ ಜಿಲಾನಿ ಪಾಷ, ಜೋಗದ ದುರ್ಗಪ್ಪ ನಾಯಕ್, ಯಮನೂರು ಚೌಡ್ಕಿ ಇನ್ನೂ ಮುಂತಾದ ಪಕ್ಷದ‌ ಹಿರಿಯ ಕಿರಿಯ ಮುಖಂಡರು…

Read More

‘ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1’ ರಲ್ಲಿ ಭಾಗವಹಿಸಿದ್ದ ನಟಿ ಅಕ್ಷತಾ ಕುಕಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಕ್ಷತಾ ಕುಕಿ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವಿನಾಶ್ ಎಂಬುವವರ ಕೈ ಹಿಡಿದಿದ್ದಾರೆ. ಅಕ್ಷತಾ ಕುಕಿ ಹಾಗೂ ಅವಿನಾಶ್ ಮದುವೆ ಬೆಳಗಾವಿಯಲ್ಲಿ ನಡೆದಿದ್ದು ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಬಂಗಾರದ ಬಣ್ಣದ ಉಡುಗೆಯಲ್ಲಿ ಅಕ್ಷತಾ ಕಂಗೊಳಿಸಿದ್ದರೆ, ಅವರ ಹುಡುಗ ಅವಿನಾಶ್ ಬಿಳಿ ಬಣ್ಣದ ಶರ್ಟ್ ಪಂಚೆಯಲ್ಲಿ ಮಿಂಚಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ಅಕ್ಷತಾ ಕುಕಿ, ಅವಿನಾಶ್ ಜೋಡಿಗೆ ಕಿರುತೆರೆ ಕಲಾವಿದರು, ಸ್ನೇಹಿತರು, ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಎರಡು ತಿಂಗಳ ಹಿಂದೆ ಗುರುಹಿರಿಯರು ನಿಶ್ಚಯಿಸಿದ ಅವಿನಾಶ್ ಜೊತೆ ಅಕ್ಷತಾ  ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಕನ್ನಡ ಕೆಲ ಧಾರಾವಾಹಿಯ ಜೊತೆಗೆ ಧ್ರುವ ಸರ್ಜಾ ನಟಿಸುತ್ತಿರುವ ‘ಮಾರ್ಟಿನ್’ ಸಿನಿಮಾಗಳಲ್ಲಿ ಅಕ್ಷತಾ ಕುಕಿ ನಟಿಸಿದ್ದರು. ದಾಂಡೇಲಿ ಹುಡುಗಿ ಅಕ್ಷತಾ ಕುಕಿ ಅವರು ಅದ್ದೂರಿಯಾಗಿ Bachelorette Party ಮಾಡಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ಈ…

Read More

ಚಿತ್ರದುರ್ಗ: ಪಿಯುಸಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ. ಸಂಜೆ ಗ್ರಾಮದ ಹೊರವಲಯದಲ್ಲಿರುವ ಗುಂಡಿಕೆರೆಯಲ್ಲಿ ಗಿರೀಶ್, ಸಂಜಯ್ ಹಾಗೂ ಮನು ಎಂಬ ಮೂವರು ಈಜಲು ತೆರಳಿದ್ರು. ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಕೆರೆಗೆ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ. ಮೂವರಲ್ಲಿ ಓರ್ವನಿಗೆ ಈಜು ಬರುತ್ತಿದ್ದು, ಇನ್ನಿಬ್ಬರು ಈಜಲು ಬರುತ್ತಿರಲಿಲ್ಲ. ಆಳದ ಜಾಗದಲ್ಲಿ ಸಿಲುಕಿ ಮೂವರು ನೀರುಪಾಲಾದ ಶಂಕೆ ವ್ಯಕ್ತಪಡಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ (Chitrahalli Gate Police Station) ಯಲ್ಲಿ ಕೇಸ್ ದಾಖಲಾಗಿದೆ.

Read More