ಬೆಂಗಳೂರು: ಕಾಂಗ್ರೆಸ್ 2 ನೇ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಸೋಮವಾರ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, 34 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಮೊದಲ ಪಟ್ಟಿಯಲ್ಲಿ 124 ಹೆಸರುಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಉಳಿದ 100 ಕ್ಷೇತ್ರಗಳ ಅಭ್ಯರ್ಥಿ ಅಂತಿಮಗೊಳಿಸಿವ ಪ್ರಕ್ರಿಯೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಸೋಮವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಮತ್ತಿತರರು ಭಾಗಿಯಾಗಿದ್ದರು. ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸುದೀರ್ಘ ಏಳು ಗಂಟೆಗಳ ಕಾಲ ನಡೆಸಿದ್ದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನೂರೂ ಕ್ಷೇತ್ರಗಳ ಟಿಕೆಟ್ ಬಗ್ಗೆ ಸಮಿತಿ ಸದಸ್ಯರು ಚರ್ಚೆ ನಡೆಸಿದರೂ ಎರಡು ಮೂರು ಆಕಾಂಕ್ಷಿಗಳು ಇರುವ 34 ಕ್ಷೇತ್ರಗಳಲ್ಲಿ ಓರ್ವ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದೇ ತಿಂಗಳ 30 ರಂದು ಮತ್ತೆ ಸಭೆ ನಡೆಸಲು ನಾಯಕರು ನಿರ್ಧರಿಸಿದ್ದಾರೆ. ಎಚ್ ಡಿಕೆ ವಿರುದ್ಧ ಯಾರು? ಕೋಲಾರಕ್ಕೆ ಬರ್ತಾರಾ ಸಿದ್ದು? 2ನೇ ಪಟ್ಟಿಯಲ್ಲಿ…
Author: Prajatv Kannada
ಬೆಂಗಳೂರು: ಒಳಮೀಸಲಾತಿ ಜಾರಿ ವಿರುದ್ಧ ಬಂಜಾರ ಸಮುದಾಯದವರು ನಡೆಸಿದ್ದ ಪ್ರತಿಭಟನೆ ವೇಳೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದರ ಹಿಂದೆ ‘ಸಂತೋಷ ಕೂಟ’ದ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆ ಮೂಲಕ ನೇರವಾಗಿ ಹೆಸರು ಉಲ್ಲೇಖಿಸಿದೆ ಬಿ.ಎಲ್. ಸಂತೋಷ್ ವಿರುದ್ಧ ಆರೋಪ ಮಾಡಿದೆ. ಬಿಎಸ್ವೈ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ದಾರಗಳಲ್ಲಿ ಅವರ ಪಾತ್ರವಿಲ್ಲ, ಆದರೂ ಸರ್ಕಾರದ ಅವಾಂತರಕ್ಕೆ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಅವರ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ…
ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಜಟಾಪಟಿ ನಡುವೆ ಬಿಜೆಪಿಯಲ್ಲೂ ಟಿಕೆಟ್ ಫೈಟ್ ತೀವ್ರಗೊಂಡಿದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅಸಮಾಧಾನಿತರ ರಾಜ್ಯ ಬಿಜೆಪಿ ಕಚೇರಿಯ ಮುಂದೆಯೂ ಪ್ರತಿಭಟನೆಯನ್ನು ನಡೆಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು, ಸೊರಬ, ಶಿವಮೊಗ್ಗ, ಮೂಡಿಗೆರೆಯಲ್ಲಿ ಹಾಲಿ ಶಾಸಕರ ವಿರುದ್ಧವೇ ಎರಡು ಬಣಗಳು ಸೃಷ್ಟಿಯಾಗಿ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಣೇಬೆನ್ನೂರಿನಲ್ಲಿ ಹಾಲಿ ಬಿಜೆಪಿ ಶಾಸಕ ಅರುಣ್ ಕುಮಾರ್ ಪೂಜಾರ್ ಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ್‌ಗೆ ಟಿಕೆಟ್ ನೀಡದಂತೆ ಘೋಷಣೆ ಕೂಗಿದರು. ಬದಲಾಗಿ ಸಂತೋಷ್ ಕುಮಾರ್ ಪಾಟೀಲ್ ಗೆ ಟಿಕೆಟ್ ನೀಡುವಂತೆ ಅಗ್ರಹಿಸಿದ್ದರು. ಎಂಪಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಇನ್ನು, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ. ಕ್ಷೇತ್ರದಲ್ಲಿ…
ವಾಷಿಂಗ್ಟನ್: ಭಾರತದಲ್ಲಿ 1948ರಲ್ಲೇ ಜಾತಿ ತಾರತಮ್ಯವನ್ನು ನಿಷೇಧಿಸಲಾಗಿದೆ. ಇದೀಗ ಅಮೆರಿಕದ ಸಿಯಾಟಲ್ ಇಂಥದ್ದೊಂದು ಕ್ರಮ ತೆಗೆದುಕೊಳ್ಳುವ ಮೂಲಕ ಜಗತ್ತಿನ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಯಾಟಲ್ ಪಾಲಿಕೆ ಸದಸ್ಯೆ, ಭಾರತೀಯ ಮೂಲದ ಕ್ಷಮಾ ಸಾವಂತ್ ಈ ನಿರ್ಣಯ ಮಂಡಿಸಿದ್ದು, ಅವಿರೋಧವಾಗಿ ಅನುಮೋದನೆ ಮಂಡನೆಯಾಗಿದೆ. ಉದ್ಯಮಗಳಲ್ಲಿ, ಮನೆ ಬಾಡಿಗೆ ನೀಡುವಾಗ, ಇತರೆ ಯಾವುದೇ ಸಾರ್ವಜನಿಕ ಕೇಂದ್ರಗಳಲ್ಲಿ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಅಮೆರಿಕದ ಸಿಯಾಟಲ್ ನಗರದಲ್ಲಿ ನಿಷೇಧಿಸಲಾಗಿದೆ. ಇನ್ನೊಂದು ಕಡೆ ಈ ನಿರ್ಣಯ ಅಮೆರಿಕದ ಹಿಂದೂ ಸಮುದಾಯದಲ್ಲಿ ಭೀತಿಯನ್ನೂ ಹುಟ್ಟಿಸಿದೆ.
ಚಂಡೀಗಢ: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಮೂರು ಡ್ರೋನ್‌ಗಳನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್‌ಗಳನ್ನು ಹೊಡೆದುರುಳಿಸಿದ ಸ್ಥಳಗಳಿಂದ ಸುಮಾರು 10 ಕೆ.ಜಿ ಹೆರಾಯಿನ್, ಪಿಸ್ತೂಲ್ ಮತ್ತು ಮ್ಯಾಗಜಿನ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ‘ಅಮೃತಸರದ ರಜತಾಲ್ ಗ್ರಾಮದಲ್ಲಿ ಸೋಮವಾರ ಸಂಜೆ 8.30ರ ಸುಮಾರಿಗೆ ಪಾಕಿಸ್ತಾನದ ಡ್ರೋನ್ ಹಾರಾಡುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ಬಿಎಸ್‌ಎಫ್ ಸಿಬ್ಬಂದಿ ಅದನ್ನು ಹೊಡೆದುರುಳಿಸಿದರು. ಈ ಜಾಗದಲ್ಲಿ ಶೋಧ ನಡೆಸಿದಾಗ ಕಪ್ಪು ಬಣ್ಣದ ಡ್ರೋನ್ ಪತ್ತೆಯಾಗಿತ್ತು. ಅದರೊಳಗೆ ಹೆರಾಯಿನ್ ಪ್ಯಾಕೆಟ್‌ಗಳು (2.6 ಕೆ.ಜಿ ) ಕಂಡುಬಂದವು’ ಎಂದು ವಕ್ತಾರರು ತಿಳಿಸಿದ್ದಾರೆ. ‘ಅದೇ ದಿನ ರಾತ್ರಿ ಅಮೃತಸರದ ಬಚಿವಿಂದ್ ಗ್ರಾಮದಲ್ಲಿ ಹಾರಾಡುತ್ತಿದ್ದ ಮತ್ತೊಂದು ಡ್ರೋನ್ ಅನ್ನು ಯೋಧರು ಹೊಡೆದುರುಳಿಸಿದ್ದು, ಅದರಲ್ಲೂ ಮೂರು ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ. ಹಾಗೆಯೇ, ‘ಹರ್ದೊ ರತ್ತನ್ ಗ್ರಾಮದಲ್ಲಿ ಮತ್ತೊಂದು ಡ್ರೋನ್ ಅನ್ನು ಯೋಧರು ಹೊಡೆದುರುಳಿಸಿದ್ದಾರೆ. ಬಳಿಕ ಆ ಪ್ರದೇಶದಲ್ಲಿ 2 ಕೆ.ಜಿ ಹೆರಾಯಿನ್…
ದೇಶದಲ್ಲಿ ಯಹೂದಿ ಮತ್ತು ಇಸ್ರೇಲಿ ಗುರಿಗಳ ವಿರುದ್ಧ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿ, ಆಪಾದಿತ ಸಂಚಿನ ಮೇಲೆ ಇಬ್ಬರು ಪಾಕಿಸ್ತಾನಿಗಳನ್ನು ಗ್ರೀಕ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಗ್ರೀಕ್ ಪೋಲೀಸ್ ಭಯೋತ್ಪಾದನಾ ವಿರೋಧಿ ವಿಭಾಗ ಮತ್ತು ದೇಶದ ಗುಪ್ತಚರ ಸೇವೆಗಳು ಭಯೋತ್ಪಾದಕ ಜಾಲವನ್ನು ಬೇಧಿಸಿವೆ. ಭಯೋತ್ಪಾದಕ ಜಾಲವು ಗ್ರೀಸ್‌ನಲ್ಲಿ ದಾಳಿಗಳನ್ನು ಯೋಜಿಸಿ “ಮುಗ್ಧ ನಾಗರಿಕರ ಪ್ರಾಣಹಾನಿಯನ್ನು ಉಂಟುಮಾಡುವ ಗುರಿಯನ್ನು ಹೊಂದಿತ್ತು ಜೊತೆಗೆ ದೇಶದ ಭದ್ರತೆಯ ಅರ್ಥವನ್ನು ಹಾಳುಮಾಡುತ್ತದೆ” ಎಂದು ಗ್ರೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಈ ಕಾರ್ಯಾಚರಣೆಯ ಹಿಂದಿನ ಮಾಸ್ಟರ್‌ಮೈಂಡ್ ಇರಾನ್‌ನಲ್ಲಿ ನೆಲೆಸಿರುವ ಪಾಕಿಸ್ತಾನಿ ಎಂದು ಥಿಯೋಡೋರಿಕಾಕೋಸ್ ತಿಳಿಸಿದ್ದಾರೆ. ಇಸ್ರೇಲಿ ಗುಪ್ತಚರ ಸೇವೆ ಆಪಾದಿತ ಭಯೋತ್ಪಾದಕ ಜಾಲವನ್ನು ಪತ್ತೆಹಚ್ಚಲು ಗ್ರೀಕ್ ಅಧಿಕಾರಿಗಳಿಗೆ ಸಹಾಯ ಮಾಡಿದೆ ಮತ್ತು ಇರಾನ್‌ಗೆ ಸಂಪರ್ಕವನ್ನು ಗುರುತಿಸಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇಂದು ಮುಂಜಾನೆ 5.49ರ ಸುಮಾರಿಗೆ ಕಾಬೂಲ್ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ ಅನುಭವವಾಗಿದೆ ಎಂದು ಹೇಳಲಾಗಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪವು ಇಂದು ಬೆಳಗ್ಗೆ 5:49 ಕ್ಕೆ ಅಫ್ಘಾನಿಸ್ತಾನದ ಕಾಬೂಲ್‌ನಿಂದ 85 ಕಿಮೀ ಪೂರ್ವಕ್ಕೆ ಅಪ್ಪಳಿಸಿತು ಎಂದು NCS ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಸೋಮವಾರ, ಮಾರ್ಚ್ 27 ರಂದು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದ ಫರ್ಖರ್ ಜಿಲ್ಲೆಯ ದಕ್ಷಿಣಕ್ಕೆ 25 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಎರಡು ದಿನಗಳ ಅಂತರದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ.
ಸ್ಯಾಂಡಲ್ ವುಡ್ ಸಿನಿಮಾ ರಂಗದ ಸೂಪರ್ ಸ್ಟಾರ್ ಅಂಬರೀಶ್ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಇದೀಗ ಅವರ ಸ್ಮಾರಕ ನಿರ್ಮಾಣವಾಗಿದ್ದು ಸ್ಮಾರಕವನ್ನು ಮುಖ್ಯಮಂತ್ರಿ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇತರೆ ಗಣ್ಯರು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಪತಿಯನ್ನು ನೆನೆದು ಭಾವುಕರಾಗಿ ಮಾತನಾಡಿದ ನಟಿ, ಸಂಸದೆ ಸುಮಲತಾ, ಅಂಬರೀಶ್ ತಮ್ಮ ಜೀವಿತಾವಧಿಯಲ್ಲಿ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದರು. ಇದೀಗ ಅದೇ ಮಾತನ್ನು ಮುಂದಿಟ್ಟುಕೊಂಡು ನಟ ಚೇತನ್ ಮಾತನಾಡಿದ್ದಾರೆ. ಅಂಬರೀಶ್ ಯಾರ ಬಳಿಯೂ ಕೈಚಾಚಿರಲಿಲ್ಲ ಆದರೆ ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ, ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದಿದ್ದಾರೆ. ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು…
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನೆಲೆಸಿದ್ದು ಬಾಲಿವುಡ್ ಸಿನಿಮಾಗಳಿಂದ ದೂರವಿದ್ದಾರೆ. ಹಾಲಿವುಡ್ ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿರುವ ಪಿಗ್ಗಿ ಬಾಲಿವುಡ್ ನಿಂದ ದೂರವಾಗಲು ಕರಣ್ ಜೋಹಾರ್ ಕಾರಣ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ನಟಿ ಕಂಗನಾ ರಣಾವತ್. ಸದಾ ತಮ್ಮ ನೇರಾ ನೇರಾ ಮಾತುಗಳಿಂದ ವಿವಾದಕಕ್ಕೆ ಗುರಿಯಾಗುವ ಕಂಗನಾ ಸೋಷಿಯಲ್ ಮೀಡಿಯಾದಲ್ಲೇ ಈ ಕುರಿತು ಬರೆದುಕೊಂಡಿದ್ದಾರೆ. ಕರಣ್ ಜೋಹಾರ್ ಮೇಲೆ ಮಾಡಿರುವ ಗಂಭೀರ ಆರೋಪ ಬಾಲಿವುಡ್ ನಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, ‘ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ರಾಜಕೀಯ. ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು. ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎನ್ನುವ ವಿಚಾರ ಗೊತ್ತಾಯಿತು. ಹೀಗಾಗಿ ನಾನು ಹಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದರು. ಪ್ರಿಯಾಂಕಾ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆಯೇ…
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ಮುದ್ದಾದ ಅವಳಿ ಮಕ್ಕಳ ಆರೈಕೆಯ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್‌ಗೆ ಹಾರಿರುವ ನಯನತಾರಾ ಶಾರುಖ್ ಖಾನ್ ಗಾಗಿ 16 ವರ್ಷಗಳ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸೌತ್ ಸಿನಿಮಾಗಳಲ್ಲಿ ನಟಿಸಿ ಸೈ ನಟಿ ಎನಿಸಿಕೊಂಡಿರುವ ನಯನತಾರಾ ಇದೀಗ ಹಿಂದಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಚಿತ್ರಗಳಲ್ಲಿ ಸದಾ ಟ್ರೆಡಿಷನಲ್ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುವ ನಯನತಾರಾಗೆ ಇಂದಿಗೂ ಡಿಮ್ಯಾಂಡ್‌ಯೇನು ಕಮ್ಮಿಯಾಗಿಲ್ಲ. ಸದ್ಯ ಶಾರುಖ್ ನಟನೆಯ `ಜವಾನ್’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ನಯನತಾರಾ ಈ ಸಿನಿಮಾಗಾಗಿ 16 ವರ್ಷಗಳ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಕಳೆದ 16 ವರ್ಷಗಳಿಂದ ನಯನತಾರಾ ಒಂದೇ ಒಂದು ಸಿನಿಮಾದಲ್ಲೂ ಬಿಕಿನಿ ಧರಿಸಿಲ್ಲ. ತನ್ನ ಜೊತೆ ಕೆಲಸ ಮಾಡೋಕೆ ಬರೋ ನಿರ್ಮಾಪಕರಿಗೆ, ನಿರ್ದೇಶಕರಿಗೆ `ನೋ ಬಿಕಿನಿ’ ಅನ್ನೋ ಸಂದೇಶವನ್ನು ರವಾನೆ ಮಾಡಿದ್ದರು. ಆದ್ರೀಗ ತಾನೇ ಹಾಕಿಕೊಂಡಿದ್ದ ರೂಲ್ಸ್ ಅನ್ನು ಈಗ ಬ್ರೇಕ್ ಮಾಡುತ್ತಿದ್ದಾರಂತೆ. ನಯನತಾರಾ ಬಿಕಿನಿ ಧರಿಸೋಕೆ ಗ್ರೀನ್ ಸಿಗ್ನಲ್ ನೀಡಿರೋದಕ್ಕೆ ಕಾರಣ ಶಾರುಖ್ ಖಾನ್…