ಮಂಡ್ಯ :- ಸಮಾಜ ಸೇವೆ ಜೊತೆಗೆ ರಾಜಕೀಯ ಶಕ್ತಿಯನ್ನು ನೀಡಿದರೆ ನಿಮ್ಮ ಮನೆಯ ಸೇವಕನಾಗಿ ದುಡಿಯುತ್ತೇನೆ ಎಂದು ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಹೇಳಿದರು. ಮದ್ದೂರು ವಿಧಾನ ಸಭಾ ಕ್ಷೇತ್ರದ ಸೋಮನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ನಿಡಘಟ್ಟ, ಕೊಂಗಬೋರನದೊಡ್ಡಿ, ಮಾದಾಪುರದದೊಡ್ಡಿ, ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ತೈಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆವ ಸರ್ಕಾರ ಎಂದರೆ ಅದು ಬಿಜೆಪಿ ಪಕ್ಷ ಮಾತ್ರ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳು ಮತ್ತು ಜೆಡಿಎಸ್ ನ ಪಂಚರತ್ನ ರಥ ಯಾತ್ರೆ ಎರಡು ಮೇ.10ರಿಂದ ಮೂಲೆ ಸೇರುತ್ತವೆ. ಮೇ.13 ರಿಂದ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಲಿದ್ದು, ಹೀಗಾಗಿ ಕ್ಷೇತ್ರದ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಕಳೆದ 16 ವರ್ಷಗಳಿಂದ ಶ್ರೀನಿಧಿ…
Author: Prajatv Kannada
ಕೋಲಾರ: ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ 7 ದಿನದಲ್ಲಿ ಕ್ಷೇತ್ರದ ಬಗ್ಗೆ ಅರಿವೇ ಇಲ್ಲದ ಅಭ್ಯರ್ಥಿಯನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕೊತ್ತೂರು ಮಂಜುನಾಥ್ ಇದೀಗ ಕೋಲಾರದಲ್ಲಿ ಅಂತಹುದೇ ಸಾಹಸಕ್ಕೆ ಕೈ ಹಾಕುವ ಮೂಲಕ ತಮ್ಮ ಪ್ರಾಭಲ್ಯವನ್ನು ಮೆರೆಯಲು ಮುಂದಾಗಿದ್ದಾರೆ. ಹೌದು ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಡೆ ದಿನ ನಾಮಪತ್ರ ಸಲ್ಲಿಸಿ ಕೊತ್ತೂರು ಮಂಜುನಾಥ್ ಕಳೆದ 10 ದಿನದಿಂದ ಮಿಂಚಿನ ಸಂಚಾರ ಮಾಡಿ ಮತದಾರರನ್ನು ಗೆಲ್ಲಲ್ಲು ಮುಂದಾಗಿದ್ದಾರೆ. ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಕೊತ್ತೂರು ಮಂಜುನಾಥ್ ಅವರಿಗೆ ಅಭುತಪೂರ್ವ ಬೆಂಬಲ ದೊರೆಯುತ್ತಿದ್ದು ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕರಾಗಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿರುವ ಕೋಲಾರ ಕ್ಷೇತ್ರದ ಜನತೆ ಕೊತ್ತೂರು ಮಂಜುನಾಥ್ ಗೆ ಭಾರಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕೋಲಾರದಲ್ಲಿ ಕಾಂಗ್ರೆಸ್ ಅಧಿಕಾರ ಸಿಗದೆ ಪರಿತಪಿಸುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೋಲಾರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಕೋಲಾರ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಆಸೆಯನ್ನು ಹೊಂದಿದ್ದ ಕೊತ್ತೂರು…
ಮಹದೇವಪುರ: ಮಹದೇವಪುರ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿವಿಧ ಯೋಜನೆಗಳಡಿ 114 ಹೆಚ್ಚುವರಿ ಕೊಠಡಿಗಳನ್ನು ಶಾಸಕರಾದ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು. ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ,ಅಶ್ವಥ್ ನಗರ,ಎಇಸಿಎಸ್ ಬಡಾವಣೆ, ಕುಂದಲಹಳ್ಳಿ ಕಾಲೋನಿ, ಲಕ್ಷ್ಮೀನಾರಾಯಣಪುರ, ಚಿನ್ನಪ್ಪನಹಳ್ಳಿ,ದೊಡ್ಡನೆಕ್ಕುಂದಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು.ಜೊತೆಗೆ ಅಂಗಡಿ ಮುಗ್ಗಟ್ಟು, ಹೋಟೆಲ್, ಬಸ್ ನಿಲ್ದಾಣ ಗಳಲ್ಲಿದ್ದ ಸಾರ್ವಜನಿಕರಿಗೆ ಕರ ಪತ್ರಗಳನ್ನ ನೀಡಿ ತಮ್ಮನ್ನ ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ, ಶಿಕ್ಷಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ,ಕಂಪ್ಯೂಟರ್ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನಮ್ಮ ಕ್ಷೇತ್ರದಲ್ಲೆ ಎರಡು ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳನ್ನ ನಿರ್ಮಾಣ ಮಾಡಲಾಗಿದೆ. ಹಲವು ಶಾಲಾ ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿಗಳನ್ನ ಒದಗಿಸಲಾಗಿದೆ ಎಂದು ವಿವರಿಸಿದರು.…
ಬಿ ಎಂ ಆರ್ ಸಿಎಲ್ ಅಧಿಕಾರಿಗಳು, ಬೆಂಗಳೂರು ಮೆಟ್ರೋ (Bangalore Metro) ಅಭಿವೃದ್ಧಿಗೆ ಆಸ್ತಿ ಖರೀದಿಸಲು ಬರೋಬ್ಬರಿ 1,754 ಕೋಟಿ ರೂ ಖರ್ಚು ಮಾಡಿದ್ದಾರೆ. ಹಾಗೂ ವಿದ್ಯುತ್ ಸೌಲಭ್ಯಗಳ ಅಗತ್ಯ ಸ್ಥಳಾಂತರಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 82.89 ಕೋಟಿ ಖರ್ಚು ಮಾಡಿದ್ದಾರೆ. ಮೆಟ್ರೋ ಕಾರಿಡಾರ್‌ಗಳು, ನಿಲ್ದಾಣಗಳು ಮತ್ತು ಇತರ ಅಗತ್ಯ ಮೂಲ ಸೌಕರ್ಯಗಳನ್ನು ನಿರ್ಮಿಸಲು ಅಗತ್ಯವಾದ ಮಾರ್ಗವನ್ನು ಪಡೆಯಲು ರಸ್ತೆಗಳ ಅಗಲೀಕರಣ ಮತ್ತು ವಿದ್ಯುತ್ ಉಪಯುಕ್ತತೆಗಳ ಸ್ಥಳಾಂತರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 82.89 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. “ಹಂತ I ಮತ್ತು II ರಸ್ತೆಗಳನ್ನು ಈಗಾಗಲೇ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ, ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯನ್ನು ಸಂಪೂರ್ಣವಾಗಿ ರಸ್ತೆ ರಚನೆಗೆ ಬಳಸಿರುವುದರಿಂದ ಇದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ಟೋಲ್ ನಲ್ಲಿ 5 ರೂ. ಹೆಚ್ಚುವರಿ ವಸೂಲಿ ಮಾಡಿದ ಹಿನ್ನೆಲೆ 8000 ರೂ. ಪರಿಹಾರ ನೀಡಲು ಬೆಂಗಳೂರಿನ ಗ್ರಾಹಕ ಕೋರ್ಟ್ ಆದೇಶ (Bangalore Consumer Court order)ಹೊರಡಿಸಿದೆ. ಜೆಎಎಸ್ ಟೋಲ್ ಕಂಪನಿ 5 ರೂಪಾಯಿ ಹೆಚ್ಚುವರಿ ಟೋಲ್ ಶುಲ್ಕ ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿದಾರರಿಗೆ 5000 ರೂ. ಪರಿಹಾರ, 3,000 ರೂ. ವ್ಯಾಜ್ಯ ವೆಚ್ಚ ಸೇರಿ 8000 ರೂ. ಪರಿಹಾರ ನೀಡಲು ಆದೇಶ ನೀಡಿದೆ. ಬೆಂಗಳೂರಿನ ಗಾಂಧಿನಗರದ ಎಂ.ಬಿ. ಸಂತೋಷ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ ಮತ್ತು ಸದಸ್ಯರಾದ ಎನ್. ಜ್ಯೋತಿ, ಎಸ್.ಎಂ. ಶರಾವತಿ ಅವರನ್ನು ಒಳಗೊಂಡ ಪೀಠ ಆದೇಶ ನೀಡಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಸಂಗ್ರಹಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೆಎಎಸ್ ಟೋಲ್ ಕಂಪನಿ ಕ್ರಮಕ್ಕೆ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.…
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ (BS Yediyurappa) ಬಿಜೆಪಿ ನಾಯಕರು ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ (MB Patil) ಹೊಸ ಬಾಂಬ್ ಸಿಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ (BJP) ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹೆದರಿಸಿ ಅವರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಲಿಂಗಾಯತ ನಾಯಕರನ್ನು ಮುಗಿಸಲು ಲಿಂಗಾಯತರನ್ನೇ ಬಳಸುತ್ತಿದ್ದಾರೆ. ಲಿಂಗಾಯತರ ನಡುವೆ ಒಡಕು ಮೂಡಿಸಿದ್ದಾರೆ. ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಕೂಡ ಕೆಜೆಪಿ ಕಟ್ಟಿದರು. ಆಗಲೂ ಬಲಿಯಾದರು, ಈಗ ಬಿಜೆಪಿ ಸರ್ಕಾರ ತಂದು ಬಲಿ ಆಗಿದ್ದಾರೆ. ಬಿಜೆಪಿ ಸವದಿಗೆ ಟಿಕೆಟ್ ಭರವಸೆ ಕೊಟ್ಟಿತ್ತು. ಆದರೂ ಅವರಿಗೆ ಟಿಕೆಟ್‍ನ್ನೇ ಕೊಡಲಿಲ್ಲ, ಟಿಕೆಟ್ ತಪ್ಪಿಸಿದರು. ಲಿಂಗಾಯತ ಸಮುದಾಯವನ್ನು ಉಪಯೋಗಿಸಿ ಕೈಬಿಟ್ಟಿದ್ದಾರೆ. ಬಿಜೆಪಿ ಹಿಡನ್ ಅಜೆಂಡಾ ವರ್ಕೌಟ್ ಆಗಿದೆ. ಹಾಗಾಗಿ ಈ ಬಾರಿ ಲಿಂಗಾಯತರು ಕಾಂಗ್ರೆಸ್ ಪರ ಬರುತ್ತಾರೆ. ಮರಳಿ ಮನೆಗೆ ಅಂತ ವಾಪಸ್ಸು ಬರುತ್ತಾರೆ. ಬಿಜೆಪಿ…
ರಾಣೇಬೆನ್ನೂರ ಎನ್ ಸಿ ಪಿ ಅಭ್ಯರ್ಥಿ ಆರ್ ಶಂಕರ ಇಂದು ರಾಣೇಬೆನ್ನೂರು ತಾಲೂಕಿನ ಎಣ್ಣಿಹೊಸಳ್ಳಿ,ಚಳಗೇರಿ,ತೆರದಹಳ್ಳಿ,ಮಣಕೂರ,ನಂದಿಹಳ್ಳಿ,ಅಂತರವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡಸಿದರು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಾನು ಸಚಿವನಾಗಿದ್ದಾಗ ಸಾಕಷ್ಟು ಅಭೀವೃದ್ದಿ ಮಾಡಿದ್ದೇನೆ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿದ್ದೇನೆ ಹೀಗಾಗಿ ನನಗೆ ಮತ ನೀಡಿ ನನ್ನನ್ನು ಆಯ್ಕೆಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಹಿಂದಿನ ಶಾಸಕರು ಯಾವದೇ ಅಭಿವೃದ್ದಿ ಮಾಡಿಲ್ಲಾ ಬರಿ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರುಣಕುಮಾರ ಪುಜಾರ ವಿರುದ್ದಾ ವಾಗ್ದಾಳಿ ಮಾಡಿದರು.
ಬೆಂಗಳೂರು: ಮೋದಿ ಜೊತೆ ಇರುವುದು ಲಂಚಕ್ಕೊಬ್ಬ, ಮಂಚಕ್ಕೊಬ್ಬ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Sivakumar) ಅವರು ಗುಡುಗಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಮೋದಿ ಜೊತೆ ಇರುವುದು ಲಂಚಕ್ಕೊಬ್ಬ, ಮಂಚಕ್ಕೊಬ್ಬ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಇವರ ಸರ್ಕಾರದಲ್ಲಿರುವ ಭ್ರಷ್ಟ ಮಂತ್ರಿಗಳ (corrupt ministers)ಬಗ್ಗೆ ದೇಶ, ರಾಜ್ಯ ನೋಡುತ್ತಿದೆ. ಭ್ರಷ್ಟ ಸರ್ಕಾರ, ಮಂತ್ರಿಗಳ ಜೊತೆಯೇ ಮೋದಿ ಇರುವುದು. ಅಂತಹವರಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡಿರುವುದು ಎಂದು ಗುಡುಗಿದರು. ಸವದಿ, ಜಗದೀಶ್ ಶೆಟ್ಟರ್ ವಿರುದ್ಧ ಭ್ರಷ್ಟಾಚಾರದ ಆರೋಪ ಇತ್ತಾ? ಆದರೂ ಯಾಕೆ ಟಿಕೆಟ್ ಕೊಡಲಿಲ್ಲ? ಪಕ್ಷದಿಂದ ಹೊರ ಹೋಗುವಂತೆ ಯಾಕೆ ಮಾಡಿದ್ರು? ನಮ್ಮ ಜೊತೆ ಇರುವವರ ಮೇಲೆ ಯಾವುದೇ ಆರೋಪಗಳು ಇಲ್ಲ. ಭ್ರಷ್ಟಾಚಾರ ನಡೆಸಿರುವ ಮಂತ್ರಿಗಳ ಪರವಾಗಿಯೇ ಪ್ರಧಾನಿ ಮೋದಿ ರ್ಯಾಲಿ ನಡೆಸಿ, ಪ್ರಚಾರ ನಡೆಸುತಿದ್ದಾರೆ ಎಂದು ತಿರುಗೇಟು…
ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ (Amit shah in Bangalore) ಅವರು ಬೆಂಗಳೂರಿನ ಮೂರು ಕಡೆಗಳಲ್ಲಿ ಇಂದು ರೋಡ್ ಶೋ ನಡೆಸಲಿದ್ದಾರೆ.ಕಳೆದ ಎರಡು ದಿನ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಬೆನ್ನಲ್ಲೇ ಇಂದು ಬೆಂಗಳೂರಿಗೆ(Amit shah in Bangalore) ಆಗಮಿಸಲಿರುವ ಅಮಿತ್ ಶಾ ಅವರು, ಇಂದು ಸಂಜೆ 4.50 ರಿಂದ 5.40 ರವರೆಗೆ ಮೊದಲನೇ ರೋಡ್ ಶೋ ನಡೆಸುವರು. ಆಡುಗೋಡಿ ಸಿಗ್ನಲ್ನಿಂದ ಮಡಿವಾಳದ ಟೋಟಲ್ ಮಾಲ್ವರೆಗೂ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ. ಸಂಜೆ 5.50 ರಿಂದ 6.40 ರವರೆಗೆ ಈಸ್ಟ್ ಎಂಡ್ ಮುಖ್ಯ ರಸ್ತೆಯಿಂದ ಜಯನಗರದ ಶಾಲಿನಿ ಮೈದಾನದವರೆಗೆ ಎರಡನೇ ರೋಡ್ ಶೋ ನಡೆಸುವರು. ಬಿಟಿಎಂ ಲೇಔಟ್ ಹಾಗು ಜಯನಗರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಈ ಬಾರಿ ಮತ ತಪ್ಪಬಾರದೆಂದು ಬಿಜೆಪಿ ಪಣ ತೊಟ್ಟಿದ್ದು ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಸಂಜೆ 7.00-7.50 ರವರೆಗೆ ಬಸವೇಶ್ವರ ನಗರ…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿಯ ಪ್ರೀಮಿಯಂ ಬಸ್ ಸೇವೆಯ ವಜ್ರ ಬಸ್ಸುಗಳು(Diamond bus) ಭಾರೀ ನಷ್ಟದಲ್ಲಿದೆ. ಬೆಂಗಳೂರಿನ ಅತಿದೊಡ್ಡ ಸಾರ್ವಜನಿಕ ಸಾರಿಗೆ ಪೂರೈಕೆದಾರ ವಜ್ರ ಈಗ ತನ್ನ ಪೂರ್ವ ಕೋವಿಡ್ ಸೇವೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿದೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಬೆಲೆ ಕಡಿತಗೊಳಿಸಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಿಲ್ಲ ಎಂದು ಬಿಎಂಟಿಸಿ ಹೇಳಿದೆ. ತನ್ನ ಫ್ಲೀಟ್‌ನಲ್ಲಿರುವ 800 ವೋಲ್ವೋ ಬಸ್‌ಗಳಲ್ಲಿ, ಬಿಎಂಟಿಸಿ 600 ಕ್ಕೂ ಹೆಚ್ಚು ವಜ್ರದಲ್ಲಿ ಮತ್ತು 100 ಕ್ಕೂ ಹೆಚ್ಚು ವಾಯು ವಜ್ರದಲ್ಲಿ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ನಿಯೋಜಿಸಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆಯಿಂದಾಗಿ ವಾಯು ವಜ್ರ ರೈಡರ್‌ಶಿಪ್ ಚೇತರಿಸಿಕೊಳ್ಳುತ್ತಿದೆ ಆದರೆ ವಜ್ರ ಪ್ರಯಾಣಿಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕೋವಿಡ್‌ಗೆ ಮುನ್ನ, 600 ಕ್ಕೂ ಹೆಚ್ಚು ವಜ್ರ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದವು, BMTC ಯ ದೈನಂದಿನ ಆದಾಯ ಸುಮಾರು 4 ಕೋಟಿಗೆ ರೂಪಾಯಿಗಳಷ್ಟಿದೆ ಅದರಲ್ಲಿ ವಜ್ರದ ಪಾಲು 50 ಲಕ್ಷವಿತ್ತು. ಮೂರು ವರ್ಷಗಳ ನಂತರ, ಬಿಎಂಟಿಸಿ ಈಗ…