ರಾಮನಗರ: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (Devegowda) ಹೇಳಿದರು. ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಬರಲು ಆಗಿಲ್ಲ. ಅವರ ಪರವಾಗಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಮೇ 10ರಂದು ಕುಮಾರಸ್ವಾಮಿ ಗೆಲ್ಲಿಸಿ, 13ಕ್ಕೆ ಅವರು ಮುಖ್ಯಮಂತ್ರಿ ಆಗುತ್ತಾರೆ. ಹಾಗಾಗಿ ಎಲ್ಲರೂ ಹೆಚ್.ಡಿ.ಕುಮಾರಸ್ವಾಮಿ ಪರ ಕೆಲಸ ಮಾಡಿ ಎಂದರು.
Author: Prajatv Kannada
ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪ್ರಚಾರಾರ್ಥ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ. ಈ ತೀರ್ಮಾನ ಪ್ರಕಟಿಸುತ್ತೇವೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ. ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಅನ್ನೋದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ರಾಹುಲ್ ಗಾಂಧಿ, ಮೋದಿ ಮತ್ತು ಅಮಿತ್ ಶಾ ಮುಂದೆ ನಿಲ್ಲುವುದಕ್ಕೆ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು.
ಹಾಸನ: ಪ್ರಿಯಾಂಕಾ -ರಾಹುಲ್ ಗಾಂಧಿ ಬಿಜೆಪಿಗೆ (BJP) ಅಡಿಷನಲ್ ಸ್ಟಾರ್ ಪ್ರಚಾರಕರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ (Narendra Modi) ಹೋದ ಕಡೆಯಲ್ಲಾ ಬಿಜೆಪಿ ಗೆಲ್ಲುತ್ತದೆ. ಅದೇ ರೀತಿ ಪ್ರಿಯಾಂಕಾ – ರಾಹುಲ್ ಗಾಂಧಿ (Rahul Gandhi) ಹೋದಲೆಲ್ಲ ಕಾಂಗ್ರೆಸ್ ಸೋಲುತ್ತದೆ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ (Congress) ಸೋಲುತ್ತೆ. ಮೋದಿ ಹೋದಲ್ಲೆಲ್ಲಾ ಬಿಜೆಪಿ ಗೆಲ್ಲುತ್ತೆ, ಹಿಂದಿನ ಫಲಿತಾಂಶ ನೋಡಿದಾಗ ಗೊತ್ತಾಗುತ್ತದೆ ಎಂದು ಹೇಳಿದರು. ಮೋದಿ ಮೊದಲ ಬಾರಿ ಹಾಸನ ಜಿಲ್ಲೆಗೆ ಬಂದಿದ್ದಾರೆ. ಈ ಬಾರಿ ಹಾಸನ (Hassan) ಜಿಲ್ಲೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಹಾಸನ, ಬೇಲೂರು, ಅರಸೀಕೆರೆ, ಸಕಲೇಶಪುರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಮೋದಿ ಆಗಮನ ಹಾಸನ ಜಿಲ್ಲೆಗೆ ಒಂದು ಸಂಚಲನ ಮೂಡಿಸಿದೆ ಎಂದು ತಿಳಿಸಿದರು.
ರಾಮನಗರ: ಜೆಡಿಎಸ್‌ಗೆ (JDS) ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್‌ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರಗಳ ನಾಟಕ ನೋಡಿದ್ದೀರಿ. ಕೇವಲ ಲೂಟಿ ಮಾಡಲು ಜಗಳಗಳಾಗಿವೆ ಹೊರತು ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು. ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾಗಿದೆ. ಹೊರಗಿನ ನೋಟಕ್ಕಷ್ಟೇ ಎರಡು, ಒಳಗಡೆ ಎರಡೂ ಒಂದೇ ಆಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತವೆ. ಜೆಡಿಎಸ್ ಅಂತೂ 15-20 ಸೀಟ್ ಸಿಕ್ಕರೂ ಕಿಂಗ್ ಮೇಕರ್ ಆಗುತ್ತೇವೆ ಎಂಬ ಕನಸು ಕಾಣುತ್ತದೆ. ಜೆಡಿಎಸ್ ಗೆದ್ದರೆ ಒಂದೇ ಕುಟುಂಬ ಉದ್ಧಾರ ಆಗುತ್ತದೆ. ಆದರೆ ಕರ್ನಾಟಕದ ಲಕ್ಷಾಂತರ ಕುಟುಂಬಕ್ಕೆ ನಷ್ಟವಾಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಬರಲಿದೆ ಎಂದರು. ನರೇಂದ್ರ ಮೋದಿ ಭಾಷಣ ಆರಂಭದಲ್ಲಿ, ತ್ರಿವಿಧ…
ರಾಮನಗರ: ನಮ್ಮ ಜೊತೆ ಮೋದಿ (Narendra Modi) ಇದ್ದಾರೆ, ಅದೇ ರೀತಿ ಕಾಂಗ್ರೆಸ್ ಜೊತೆ ಭ್ರಷ್ಟರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ಚನ್ನಪಟ್ಟಣದಲ್ಲಿ ನಡೆದ ಬಿಜೆಪಿ (BJP) ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು (Congress) ಪದೇ ಪದೇ ಮೋದಿಯವರನ್ನೇ ಯಾಕೆ ಕರೆಸ್ತೀರಿ ಅಂತಾ ಕೇಳ್ತಾರೆ. ಅದಕ್ಕೆ ನಾವು ಅವರಿಗೆ ಉತ್ತರ, ನಮ್ಮ ಜೊತೆ ಮೋದಿ ಇದ್ದಾರೆ ಎಂದಿದ್ದೇವೆ. ಆದರೆ ನಿಮ್ಮ ಜೊತೆ ಯಾರಿದ್ದಾರೆ? ನಿಮ್ಮ ಜೊತೆ ಭ್ರಷ್ಟಾಚಾರಿಗಳು ಮಾತ್ರ ಇದ್ದಾರೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮೇಲೆ 65 ಕೇಸ್ ಇದೆ. ಆದರೆ ಬೊಮ್ಮಾಯಿ ಮೇಲೆ ಒಂದೇ ಒಂದು ಕೇಸ್ ಇಲ್ಲ. ಆದರೂ ಬೊಮ್ಮಾಯಿ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ದೇಶ ಲೂಟಿ ಮಾಡಿದ್ದಾರೆ. ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರು: ರಾಮಮಂದಿರ (Ram Mandira) ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಆ ಶುಭ ಕಾರ್ಯಕ್ಕೆ ನಿಮಗೆ ಕರೆಯಲು ನಾನು ಬಂದಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದರು. ಬಿಜೆಪಿ (BJP) ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಯಚೂರಿನಲ್ಲಿ (Raichur) ಮತಬೇಟೆ ನಡೆಸಿದರು. ನಗರದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ಮತಶಿಕಾರಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ. ರಾಮಮಂದಿರ ನಿರ್ಮಾಣ ಕಾರ್ಯವು 2024ರ ಜನವರಿಯಲ್ಲಿ ಮುಗಿಯುತ್ತದೆ. ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ರಾಮನೇ ಇಲ್ಲವೆಂದು ಹೇಳುವವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಬೆಳಗಾವಿ: ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ (BJP Government) ಮೊಟ್ಟೆಯಲ್ಲೂ ಮೋಸ ಮಾಡೋದು ಬಿಟ್ಟಿಲ್ಲ. ಕೋವಿಡ್ (Covid) ಸಮಯದಿಂದಲೂ ಇವರ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಗುತ್ತಿದಾರರ ಸಂಘದವರು ಪತ್ರ ಬರೆದರೂ ಪ್ರಧಾನಿ ಮೋದಿಯಿಂದ ಉತ್ತರ ಬರಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಅಬ್ಬರದ ಪ್ರಚಾರ ಜೋರಾಗಿದೆ. ಇಂದಿನ ಸಮಾರಂಭಗಳಲ್ಲಿ ಪ್ರಧಾನಿ ಮೋದಿ (Narendra Modi) ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ರೆ, ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೊಟ್ಟೆಯಲ್ಲೂ ಮೋಸ ಮಾಡೋದು ಬಿಟ್ಟಿಲ್ಲ ಎಂದು ಲೇವಡಿ ಮಾಡಿದ್ದಾರೆ. ಮುಂದುವರಿದು, ಕರ್ನಾಟಕದಲ್ಲಿ ಅರಣ್ಯ ಸಂಪತ್ತು, ಖನಿಜ ಸಂಪತ್ತು ಎಲ್ಲವೂ ಇದೆ. ಇಲ್ಲಿನ ಯುವಕರು ಶಿಕ್ಷಿತರಿದ್ದು ಅವರ ಭವಿಷ್ಯ ಉತ್ತಮವಾಗಿದೆ. ಇಡೀ ವಿಶ್ವದಲ್ಲೇ ಬೆಂಗಳೂರು ಸುಪ್ರಸಿದ್ಧವಾಗಿದೆ, ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.…
ಚಿತ್ರದುರ್ಗ; ಕಾಂಗ್ರೆಸ್ ಪಾಳಯದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿತ್ತೂರು ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ಚುನಾವಣಾ ಅಖಾಡದಲ್ಲಿ ಭರ್ಜರಿ ಮತಶಿಕಾರಿ ನಡೆಸಿದ್ದಾರೆ. Video Player 00:00 01:41 ಅದೇ ರೀತಿ ಮಾಜಿ ಸಚಿವೆ ಉಮಾಶ್ರೀ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಆಂಜನೇಯ ಪರ ಮತ ಪ್ರಚಾರ ಮಾಡಿದ್ರು. ಹೊಳಲ್ಕೆರೆ ವಿಧಾನ ಸಭಾ ವ್ಯಾಪ್ಯಿಯ ಹೊರಕೆರೆದೇವಪುರ ಜಿಲ್ಲಾ ಪಂಚಾಯತಿ ವ್ಯಾಫ್ತಿಯ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆ ಮನೆಗೆ ತರಳಿ ಆಂಜನೇಯ ಪರ ಮತಯಾಚಿಸಿದ್ರು. ಕಾಂಗ್ರೇಸ್ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ರೈಪುರ್: ದಾಂತೇವಾಡ (Dantewada) ಸ್ಫೋಟದ ತನಿಖೆ ಕೈಗೊಂಡಿರುವ ಬಸ್ತಾರ್ ಪೊಲೀಸರು ಕೃತ್ಯದ ಮಾಸ್ಟರ್‌ಮೈಂಡ್ ( Mastermind) ಫೋಟೋ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಆತನ ಹಾಗೂ ಸಹಚರರ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ. ಸ್ಫೋಟದ ಮಾಸ್ಟರ್ ಮೈಂಡ್‍ನನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಜಗದೀಶ್‍ನ ಪತ್ನಿ ಸುಕ್ಮಾ ಜಿಲ್ಲೆಯ ಹೇಮ್ಲಾ ಕೂಡ ನಕ್ಸಲ್ ಸಂಘಟನೆಯ ದರ್ಭಾ ವಿಭಾಗದಲ್ಲಿ ಕಮಾಂಡರ್ ಆಗಿದ್ದಾಳೆ. ಅಲ್ಲದೇ ಜಗದೀಶ್‍ನ ಮಾವ ವಿನೋದ್ ಹೇಮ್ಲಾ, ಕಾಂಗೇರ್ ಘಾಟಿ ಪ್ರದೇಶದ ನಕ್ಸಲ್ ಸಮಿತಿಯ ಉಸ್ತುವಾರಿಯಾಗಿ ಸಕ್ರಿಯರಾಗಿದ್ದಾನೆ. ಗುಪ್ತಚರ ಮಾಹಿತಿಯ ಪ್ರಕಾರ ದರ್ಭಾ (Darbha) ವಿಭಾಗದ ಸಿಪಿಐ (CPI Maoist) ಸ್ಫೋಟದಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 10 ಡಿಎಫ್‍ಜಿ (District Reserve Guard) ಸಿಬ್ಬಂದಿ ಮತ್ತು ಚಾಲಕನ ಜೀವವನ್ನು ಬಲಿ ಪಡೆದ ಸುಧಾರಿತ ಸ್ಫೋಟಕವನ್ನು (IED) ಎರಡು ತಿಂಗಳ ಹಿಂದೆಯೇ ಭೂಮಿಯಲ್ಲಿ ಹುದುಗಿಸಿಟ್ಟಿರುವ ಕುರುಹುಗಳಿವೆ. ಫಾಕ್ಸ್‌ಹೋಲ್ ತಂತ್ರಜ್ಞಾನವನ್ನು (Foxhole Mechanism) ಬಳಸಿ ಸುರಂಗ ತೆಗೆದು ಇರಿಸಿದ್ದರು. ಇದರಿಂದ ಅದು…
ಜೈಪುರ: ರಾಜಸ್ಥಾನ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ರಾವಣನಿಗೆ ಹೋಲಿಸಿ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ (Gajendra Shekhawat) ಅವರ ವಿರುದ್ಧ ಕಾಂಗ್ರೆಸ್ (Congress) ಮುಖಂಡ ಸುರೇಂದ್ರ ಸಿಂಗ್ ಜಾದಾವತ್ ಚಿತ್ತೋರ್‌ಗಢದಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಇತ್ತೀಚೆಗೆ ಚಿತ್ತೋರಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ, ರಾವಣನಿಗೆ 10 ತಲೆಗಳಿದ್ದವು. ಅದೇ ರೀತಿ ಈ ರಾಜಸ್ಥಾನದ ಸರ್ಕಾರ ಹಾಗೂ ರಾಜಕೀಯದಲ್ಲಿ ಗೆಹ್ಲೋಟ್ ರಾವಣನಿದ್ದ ಹಾಗೇ. ಈ ಸರ್ಕಾರ ಭ್ರಷ್ಟಾಚಾರದ ಹರಿಕಾರವಾಗಿದ್ದು, ಓಲೈಕೆಯಲ್ಲಿ ತೊಡಗಿದೆ. ಜೊತೆಗೆ ರೈತರನ್ನು ಹಾಗೂ ಮಹಿಳೆಯರನ್ನು ದಬ್ಬಾಳಿಕೆ ಮಾಡುತ್ತದೆ. ಈ ಸರ್ಕಾರವು ಮಾಫಿಯಾ ರಾಜ್‍ನನ್ನು ಪೋಷಿಸುತ್ತಿದೆ. ಈ ರಾಜಕೀಯ ರಾವಣನನ್ನು ಮುಗಿಸುವ ಮೂಲಕ ರಾಜಸ್ಥಾನದಲ್ಲಿ ರಾಮರಾಜ್ಯವನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಚಿತ್ತೋರ್‌ಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ರಾವಣ ಹೇಳಿಕೆಗೆ ರಾಜಸ್ಥಾನ…