ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 4,282 ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 6,037 ಮಂದಿ ಸೋಂಕಿನಿಂತ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 47,246ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕೇರಳದಲ್ಲಿ ಆರು ಮಂದಿ ಸೇರಿದಂತೆ ಇಂದು 14 ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 5,31,547 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ 4.92ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ 4.00ರಷ್ಟಿದೆ. ದೇಶದಲ್ಲಿ ಈವರೆಗೆ 4,49,49,671 ಮಂದಿ ಸೋಂಕಿತರಾಗಿದ್ದಾರೆ. ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.11ರಷ್ಟು ಸಕ್ರಿಯ ಪ್ರಕರಣಗಳಿದ್ದರೆ, ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.71ರಷ್ಟಿದೆ. ಇದೇ ವೇಳೆ ದೇಶದಾದ್ಯಂತ ಈವರೆಗೆ 4,43,70,878 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ದೈನಂದಿನ ಮರಣ ಪ್ರಮಾಣ ಶೇ 1.18ರಷ್ಟಿದೆ. ಎಂದು ಸಚಿವಾಲಯ ತಿಳಿಸಿದೆ. ಸಚಿವಾಲಯದ ವೆಬ್‌ಸೈಟಿನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ಅಡಿಯಲ್ಲಿ…
Author: Prajatv Kannada
ಜಬಲ್ಪುರ: ಕರ್ನಾಟಕದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ. ಕರ್ನಾಟಕ ಚುನಾವಣೆ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಅಧಿಕಾರವನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂದರು. ವಿರೋಧ ಪಕ್ಷಗಳ ಮೈತ್ರಿ ಕುರಿತು ಒಂದು ಸಾಮಾನ್ಯ ಕಾರ್ಯಸೂಚಿ ಇರಬೇಕು. ಎಲ್ಲಾ ಪಕ್ಷಗಳು ಒಗ್ಗೂಡಬೇಕು ಮತ್ತು ಅಂತಹ ಮೈತ್ರಿಕೂಟ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ವೈಯಕ್ತಿಕವಾಗಿ ಪ್ರಯತ್ನಿಸುತ್ತೇನೆ ಎಂದರು. 75 ರ ವಯಸ್ಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದ ಸಿಬಲ್, ನಾನು ಕಾಂಗ್ರೆಸ್ ತೊರೆದಿದ್ದೇನೆ, ಆದರೆ ಅದರ ಸಿದ್ಧಾಂತವಲ್ಲ ಎಂದು ಹೇಳಿದರು.
ಕ್ಯಾಲಿಫೋರ್ನಿಯಾ: ತಮಾಷೆ ಮಾಡಲು ಮನೆಯ ಡೋರ್ ಬೆಲ್ ಬಾರಿಸಿದ್ದು ಮೂವರು ಹದಿಹರೆಯದ ಹುಡುಗರನ್ನು ಕೊಂದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದಿದೆ. ಭಾರತೀಯ ಮೂಲದ ಅನುರಾಗ್ ಚಂದ್ರ ಆರೋಪಿ. 2020ರಲ್ಲಿ ಅನುರಾಗ್ ಚಂದ್ರ ಮನೆಯಲ್ಲಿ ಕೆಲವು ಹುಡುಗರು ಡೋರ್ ಬೆಲ್ ಬಾರಿಸಿದರು. ಈ ವಿಚಾರವಾಗಿ ಮೂವರು ಯುವಕರನ್ನು ಅನುರಾಗ್ ಕಾರಿಗೆ ಡಿಕ್ಕಿ ಹೊಡೆದು ಸಾಯಿಸಿದ್ದನು. ಇದೇ ವೇಳೆ ಈ ಘಟನೆಯಲ್ಲಿ ಕೆಲವು ಇಬ್ಬರು ಹದಿಹರೆಯದವರೂ ಗಾಯಗೊಂಡಿದ್ದರು. ಘಟನೆಯ ದಿನ ತಾನು ಹನ್ನೆರಡು ಬಿಯರ್ ಗಳನ್ನು ಕುಡಿದಿದ್ದಾಗಿ ಸ್ವತಃ ಅನುರಾಗ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದನು. ಡಿಕ್ಕಿಯಾಗುವ ಮೊದಲು ನಾನು 159 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದೆ. ಆದರೂ ನನ್ನ ಗುರಿ ಅವರನ್ನು ಹತ್ಯೆ ಮಾಡುವುದು ಆಗಿರಲಿಲ್ಲ. ಅವರಿಗೆ ಪಾಠ ಕಲಿಸುವುದಾಗಿತ್ತು ಎಂದು ಆರೋಪಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಡೋರ್ ಬೆಲ್ ಬಾರಿಸುತ್ತಿದ್ದರಿಂದ ನನಗೆ ವಿಪರೀತ ಸಿಟ್ಟು ಬಂತು. ಇದರಿಂದಾಗಿ ಬಾಲಕರನ್ನು ಹಿಂಬಾಲಿಸಿದೆ. ಆದರೆ ಸಕಾಲಕ್ಕೆ ಕಾರಿನ…
ಆಲೂಗಡ್ಡೆಯಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಒಳ್ಳೆದು. ಆಲೂಗಡ್ಡೆ ಸೇವನೆಯಿಂದ, ಅದರ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭವೇನು? ಯಾವ ಸಮಸ್ಯೆಗೆ ಇದು ಮದ್ದು? ಎನ್ನುವುದರ ಮಾಹಿತಿ ಇಲ್ಲಿದೆ. ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ? ಅಧ್ಯಯನ ಹಾಗೂ ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆದು. ಇದನ್ನು ನಿತ್ಯವು ಮಿತವಾಗಿ ಸೇವಿಸಿದರೆ ಆರೋಗ್ಯದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಹೀಗೆ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ. ಅಲ್ಲದೆ ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಬೇಕು, ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಲೂಗಡ್ಡೆಯ ಆರೋಗ್ಯಕರ ಲಾಭವೇನು? 1.ಹೃದಯದ ಆರೋಗ್ಯಕ್ಕೆ ಒಳ್ಳೆದು ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ.…
ವರ್ಷದಲ್ಲಿ ಒಟ್ಟು 24 ಏಕಾದಶಿ ಬರುತ್ತದೆ, ಅದರಲ್ಲಿ ಪ್ರತಿಯೊಂದು ಏಕಾದಶಿ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಮೇ 1ರಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುವುದು. ಏಕಾದಶಿ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನವಾಗಿದೆ. ಈ ದಿನ ಯಾರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುವುದು, ಕಷ್ಟಗಳು ದೂರಾಗುವುದು ಎಂಬ ನಂಬಿಕೆ. ಮೋಹಿನಿ ಏಕಾದಶಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಆಚರಿಸಲಾಗುವುದು. ಮೇ 1ರಂದು ಆಚರಿಸುವ ಮೋಹಿನಿ ಏಕಾದಶಿಯ ವಿಶೇಷತೆಯೇನು? ಇದರ ಪೂಜಾವಿಧಿಗಳೇನು, ವ್ರತ ನಿಯಮಗಳೇನು ಎಂದು ನೋಡೋಣ ಬನ್ನಿ: ಮೋಹಿನಿ ಏಕಾದಶಿ ದಿನಾಂಕ ಮತ್ತು ತಿಥಿ ಮೋಹಿನಿ ಏಕಾದಶಿ ತಿಥಿ ಪ್ರಾರಂಭ: ಏಪ್ರಿಲ್ 30 ರಾತ್ರಿ 08:28ಕ್ಕೆ ಪ್ರಾರಂಭ ಮೋಹಿನಿ ಏಕಾದಶಿ ತಿಥಿ ಮುಕ್ತಾಯ: ಮೇ 01 ರಾತ್ರಿ 10:09ಕ್ಕೆ ಮುಕ್ತಾಯವಾಗುವುದು ಪಾರಣ ಸಮಯ: ಮೇ 2ರಂದು ಬೆಳಗ್ಗೆ 5:19ಕ್ಕೆ ಮೋಹಿನಿ ಏಕಾದಶಿಯ ಮಹತ್ವ- * ಈ ಏಕಾದಶಿಯ ಮಹತ್ವವೆಂದರೆ ಈ ದಿನ ಯಾರು ಉಪವಾಸವಿದ್ದು ಏಕಾದಶಿ…
2023ರ ಚುನಾವಣೆಗೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಸಾಕಷ್ಟು ಪಕ್ಷಗಳು ಸ್ಟಾರ್ ಪ್ರಚಾರಕರನ್ನು ಕರೆತಂದು ಭರ್ಜರಿ ಪ್ರಚಾರ ಮಾಡುತ್ತಿವೆ. ಇದೀಗ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದು ಸೊರಬದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಧು ಬಂಗಾರಪ್ಪ ಅವರ ಜನಪರ ಕಾಳಜಿ, ಸೇವಾ ಮನೋಭಾವ ನನಗೆ ಇಷ್ಟ. ಅವರನ್ನು ಗೆಲ್ಲಿಸಿ, ಮಧು ಗೆದ್ದರೆ ಸೊರಬಕ್ಕೆ ಬಂದು ನಿಮ್ಮೊಂದಿಗೆ ಕುಣಿದು ಕುಪ್ಪಳಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ ಮಾತನಾಡಿದ ಶಿವಣ್ಣ, ಸೊರಬ ತಾಲೂಕಿಗೆ ಹಲವು ಬಾರಿ ಬಂದಿದ್ದೇನೆ. ಆದರೆ ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ಮಧು ಬಂಗಾರಪ್ಪ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದರು. ಕೇವಲ ಸೊರಬ ಕ್ಷೇತ್ರದಲ್ಲಿ…
ಬಾಲಿವುಡ್ ನ ಎವರ್ ಗ್ರೀನ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಸಾಕಷ್ಟು ನಟಿಯರೊಂದಿಗೆ ಡೇಟಿಂಗ್ ಮಾಡಿದ್ರು ಯಾರನ್ನೂ ಕೂಡ ಕೈ ಹಿಡಿಯಲಿಲ್ಲ. ಆದರೆ ಸಲ್ಲು ಬಾಯ್ ತಂದೆಯಾಗುವ ಆಸೆ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಸೋಲಿನ ನಂತರ ಸಂದರ್ಶನವೊಂದರಲ್ಲಿ ತಾನು ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ. ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಇತ್ತೀಚೆಗೆ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಆದರೂ ಸಲ್ಮಾನ್ ಖಾನ್‌ಗೆ ಇರುವ ಬೇಡಿಕೆ ಮಾತ್ರ ಕಮ್ಮಿಯಾಗಿಲ್ಲ. ಒಂದಲ್ಲಾ ಒಂದು ವಿಭಿನ್ನ ಪ್ರಯತ್ನಗಳ ಮೂಲಕ ಸಲ್ಮಾನ್ ಪ್ರೇಕ್ಷಕರ ಮುಂದೆ ಬರುತ್ತಲೆ ಇದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ತಂದೆಯಾಗುವ ಆಸೆ ಬಗ್ಗೆ, ಲವ್ ಲೈಫ್ ಬಗ್ಗೆ ಸಲ್ಮಾನ್ ಖಾನ್ ಮುಕ್ತವಾಗಿ ಮಾತನಾಡಿದ್ದಾರೆ. ಸಲ್ಮಾನ್‌ಗೆ ಮಕ್ಕಳೆಂದರೆ ತುಂಬಾ ಇಷ್ಟ. ಸಹೋದರ- ಸಹೋದರಿಯ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಇದೀಗ…
ಟ್ರೈಲರ್ ಮೂಲಕವೇ ಸಾಕಷ್ಟು ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಚಿತ್ರ ನಿರ್ಮಾಪಕರ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. ‘ಲವ್ ಜಿಹಾದ್’ ವಿಷಯವನ್ನು ಎತ್ತುವ ಮೂಲಕ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸುವ ಸಂಘ ಪರಿವಾರದ ಕೆಲಸವನ್ನು ಸಿನಿಮಾದ ನಿರ್ಮಾಪಕರು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರ ಹರಡುವ ಉದ್ದೇಶದಿಂದ ಸಿನಿಮಾ ನಿರ್ಮಿಸಲಾಗಿದೆ ಎಂದು ಟ್ರೇಲರ್ ಮೂಲಕ ತಿಳಿಯುತ್ತದೆ. ‘ಲವ್ ಜಿಹಾದ್’ ವಿಚಾರವನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ತಿರಸ್ಕರಿಸಿದ್ದರೂ, ಕೇರಳ ರಾಜ್ಯವನ್ನು ಪ್ರಪಂಚದ ಮುಂದೆ ಅವಮಾನಿಸುವಂತೆ ಸಿನಿಮಾ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ನೋಡಿದರೆ, ಜಾತ್ಯತೀತತೆಯ ನೆಲವಾದ ಕೇರಳದಲ್ಲಿ ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಸಂಘ ಪರಿವಾರದ ಪ್ರಚಾರವನ್ನು ಹರಡಲು ಚಿತ್ರ ಪ್ರಯತ್ನಿಸುತ್ತಿದೆ. ಸಂಘ ಪರಿವಾರವು ನಕಲಿ ಕಥೆಗಳು ಮತ್ತು ಚಲನಚಿತ್ರಗಳ ಮೂಲಕ ವಿಭಜನೆಯ…
ಕಾಲಿವುಡ್ ನ ಖ್ಯಾತ ನಟ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಭಿಕ್ಷುಕ-2 ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ. ಪಿಕೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿದ್ದು, ಕನ್ನಡದಲ್ಲಿ ಭಿಕ್ಷುಕ-2 ಎಂಬ ಟೈಟಲ್ ಇಡಲಾಗಿದೆ. ಈ ಸಿನಿಮಾದ ಕನ್ನಡದ ಟ್ರೇಲರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡುವ ಮೂಲಕ ಆಂಟೋನಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಪಿಚೈಕ್ಕರನ್ ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಚಿತ್ರ ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಪಿಚೈಕ್ಕರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್ ನಡಿ ಅವರೇ ನಿರ್ಮಿಸಿದ್ದು, ಪತ್ನಿ ಫಾತೀಮಾ ವಿಜಯ್ ಆಂಟೋನಿ ಭಿಕ್ಷುಕ-2 ಚಿತ್ರವನ್ನು ತೆರೆಗೆ ತರ್ತಿದ್ದಾರೆ. ಮಲೇಷ್ಯಾದಲ್ಲಿ ಭಿಕ್ಷುಕ-2 ಶೂಟಿಂಗ್ ನಡೆಯುತ್ತಿದ್ದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅವರೀಗ ಪ್ರಮೋಷನ್ ಕಾರ್ಯಕ್ಕೆ ಸಜ್ಜಾಗಿದ್ದಾರೆ.…
ಮುಂಬೈ: ಟಿಮ್ ಡೇವಿಡ್ (Tim David ) ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್ (Rajasthan Royals ) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ. ಗೆಲ್ಲಲು 213 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಹೊಡೆದು ಪಂದ್ಯವನ್ನು ಗೆದ್ದುಕೊಂಡಿತು. ಕೊನೆಯ 24 ಎಸೆತಗಳಲ್ಲಿ ಮುಂಬೈ ಗೆಲ್ಲಲು 57 ರನ್‌ಗಳ ಅಗತ್ಯವಿತ್ತು. 17 ನೇ ಓವರ್‌ನಲ್ಲಿ 14 ರನ್, 18ನೇ ಓವರ್‌ನಲ್ಲಿ 11 ರನ್, 19ನೇ ಓವರ್‌ನಲ್ಲಿ 15 ರನ್ ಬಂದಿತ್ತು. ಕೊನೆ 6 ಎಸೆತಗಳಲ್ಲಿ 17 ರನ್ ಬೇಕಿತ್ತು. ಜೇಸನ್ ಹೋಲ್ಡರ್ ಎಸೆತ ಪ್ರಥಮ ಮೂರು ಎಸೆತವನ್ನು ಟಿಮ್ ಡೇವಿಡ್ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದುಕೊಟ್ಟರು. ಟಿಮ್ ಡೇವಿಡ್ ಮತ್ತು ತಿಲಕ್ ವರ್ಮಾ ಮುರಿಯದ 5ನೇ ವಿಕೆಟಿಗೆ 23 ಎಸೆತಗಳಲ್ಲಿ 62 ರನ್ ಜೊತೆಯಾಟವಾಡಿದ ಪರಿಣಾಮ ಮುಂಬೈ ಜಯದ ನಗೆ ಬೀರಿದೆ. ಟಿಮ್…