ಸದ್ಯ ಎಲ್ಲಿ ನೋಡಿದ್ರು ಆಸ್ಕರ್ ಸಿನಿಮಾದ್ದೇ ಸುದ್ದಿ. ರಾಜ ಮೌಳಿ ನಿರ್ದೇಶನದ ‘ನಾಟು ನಾಟು..’ ಹಾಡು ಆಸ್ಕರ್ ಅವಾರ್ಡ್ ಗೆದ್ದಿದೆ. ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಗೂ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಸದ್ಯ ನಾಟು ನಾಟು ಹಾಡು ಆಸ್ಕರ್ ಗೆದ್ದಿರುವ ಕುರಿತು ನಟ ಅಜಯ್ ದೇವಗನ್ ಹೇಳಿಕೆಯೊಂದನ್ನು ನೀಡಿದ್ದಾರೆ. ‘ನಾಟು ನಾಟು ಆಸ್ಕರ್ ಗೆದ್ದಿದ್ದು ನನ್ನಿಂದ’ ಎಂದಿದ್ದಾರೆ. ಹಾಗಂತ ಈ ಮಾತನ್ನು ಅಜಯ್ ದೇವಗನ್ ಗಂಭೀರವಾಗಿ ಹೇಳಿಲ್ಲ, ಬದಲಾಗಿ ತಮಾಷೆಯಾಗಿ ಈ ಮಾತನ್ನು ಹೇಳಿದ್ದಾರೆ. ‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ಹಲವು ವಿಚಾರ ಕಾರಣ ಆಗಿದೆ. ಸಿನಿಮಾದ ಡ್ಯಾನ್ಸ್ ಇಲ್ಲಿ ಮೋಡಿ ಮಾಡಿದೆ. ಚಿತ್ರದ ಸಂಗೀತವೂ ಕಮಾಲ್ ಮಾಡಿದೆ. ಒಟ್ಟಾರೆ ಹಾಡಿನಲ್ಲಿರುವ ಪ್ರತಿ ವಿಚಾರವೂ ಆಸ್ಕರ್ ಗೆಲ್ಲೋಕೆ ಸಹಕಾರಿ ಆಗಿದೆ. ಈಗ ಅಜಯ್ ದೇವಗನ್…
Author: Prajatv Kannada
ನಿಯಾ ವಿಜಯ್ ನಟನೆಯ ‘ಮಾಸ್ತಿಗುಡಿ’ ಸಿನಿಮಾ ಶೂಟಿಂಗ್ ವೇಳೆ ನಡೆದ ದುರ್ಘಟನೆ ಎಂದಿಗೂ ಮರೆಯುವಂಥದ್ದಲ್ಲ. ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬಿದ್ದ ಇಬ್ಬರು ಖಳನಟರು ಮೃತಪಟ್ಟಿದ್ದು ಘಟನೆ ಬಗ್ಗೆ ಥ್ರಿಲ್ಲರ್ ಮಂಜು ಮಾತನಾಡಿದ್ದಾರೆ. ‘ನಾವು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡ ಸಂಭವಿಸುತ್ತದೆ. ಚಿಕ್ಕ-ಪುಟ್ಟ ಶಾಟ್ಸ್ಗೆ ನಾವು ಹೆಚ್ಚು ಎಚ್ಚರಿಕೆ ವಹಿಸುತ್ತೇವೆ. ಹಾಗಿರುವಾಗ ದೊಡ್ಡ ಸಾಹಸ ದೃಶ್ಯಗಳ ಬಗ್ಗೆಯೂ ನಾವು ಪ್ರಿಕಾಷನ್ ತೆಗೆದುಕೊಂಡಿರುತ್ತೇವೆ. ಒಮ್ಮೊಮ್ಮೆ ನಡೆಯಬಾರದ್ದು ನಡೆದು ಹೋಗುತ್ತದೆ’ ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ರಿಲೀಸ್ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್ ಘೋಷಿಸಲಾಗಿದೆ. ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರ ಕ್ಷೇತ್ರದಿಂದ ಡಿಕೆಶಿ ಅವರು ಸ್ಪರ್ಧಿಸಲಿದ್ದಾರೆ. ದೇವನಹಳ್ಳಿ ಎಸ್ ಸಿ ಕ್ಷೇತ್ರದಿಂದ ಹೆಚ್.ಸಿ.ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಬಿಟಿಎಂ ಲೇಔಟ್ ನಿಂದ ರಾಮಲಿಂಗ ರೆಡ್ಡಿ, ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್ ಅವರಿಗೆ ಟಿಕೆಟ್ ನೀಡಲಾಗಿದೆ. ಚಾಮರಾಜಪೇಟೆ ಜಮೀರ್ ಅಹಮದ್, ಟಿ.ನರಸೀಪುರ ಹೆಚ್.ಸಿ.ಮಹದೇವಪ್ಪ, ಹೊಸಕೋಟೆ ಶರತ್ ಬಚ್ಚೇಗೌಡ, ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ನೀಡಲಾಗಿದೆ.ಮೊದಲು ಸಿದ್ದರಾಮಯ್ಯ ಸ್ಪರ್ಧಿಸಬೇಕಿದ್ದ ಕೋಲಾರ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಇನ್ನು ರಿವೀಲ್ ಮಾಡಿಲ್ಲ. ಕರಾವಳಿಯ ಪ್ರಮುಖ ಕ್ಷೇತ್ರಗಳು: ಕಾಪು ಕ್ಷೇತ್ರಕ್ಕೆ ವಿನಯ್ ಕುಮಾರ್ ಸೊರಕೆ,ಕುಂದಾಪುರ…
ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬ್ರಿಟನ್ ದೇಶದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಜಯಶ್ರೀ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಕೂಡಲೇ ಹೋಟೆಲ್ ಸಿಬ್ಬಂದಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೂಲಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರ ಚಿಕಿತ್ಸೆಗೆ ನಡೆಸಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ಸಿಯಾಗಿದೆ ಎನ್ನಲಾಗುತ್ತಿದೆ. ನಿನ್ನೆ ರಾತ್ರಿಯೇ ಸಾಕಷ್ಟು ಆಯಾಸಗೊಂಡಿದ್ದ ಜಯಶ್ರೀ ಆಪ್ತರ ಜೊತೆ ತೀವ್ರ ಕುತ್ತಿಗೆ ನೋವಿರುವುದಾಗಿ ತಿಳಿಸಿದ್ದರು. ಬಾಂಬೆ ಜಯಶ್ರೀ ಎಂದೇ ಖ್ಯಾತಿ ಘಳಿಸಿರುವ ಜಯಶ್ರೀ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿಯೇ ಬ್ರಿಟನ್ ದೇಶದ ಪ್ರವಾಸದಲ್ಲಿ ಇದ್ದರು.
ತಮಿಳು ನಟ ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣಿಯಂ ಇಂದು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ರಮಣಿಯಂ ಇಂದು (ಮಾ.24) ಮೃತಪಟ್ಟಿದ್ದಾರೆ. ಕಳೆದ ಜನವರಿಯಲ್ಲಿ ಅಜಿತ್ ನಟನೆಯ ‘ತುನಿವು’ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಫ್ಯಾಮಿಲಿಗೆ ಸಮಯ ನೀಡಿದ್ದ ಅಜಿತ್ ಪತ್ನಿ ಹಾಗೂ ಮಕ್ಕಳೊಂದಿಗೆ ಯುರೋಪ್ ಪ್ರವಾಸದಲ್ಲಿದ್ದರು. ಇದೀಗ ತಂದೆ ಸುಬ್ರಮಣಿಯಂ ನಿಧನದ ಸುದ್ದಿ ತಿಳಿದು, ಪ್ರವಾಸವನ್ನು ಮೊಟಕುಗೊಳಿಸಿ, ಚೆನ್ನೈಗೆ ವಾಪಸ್ ಆಗಿದ್ದಾರೆ. ಅಜಿತ್ ಕುಮಾರ್ ಅವರ ತಂದೆ ಸುಬ್ರಮಣಿಯಂ ಅವರು ಮೂಲತಃ ಮಲಯಾಳಿ. ಕೇರಳದ ಪಾಲಾಕ್ಕಾಡ್‌ನಲ್ಲಿ ಜನಿಸಿದ್ದ ಅವರು, ಆನಂತರ ಕುಟುಂಬದೊಂದಿಗೆ ಚೆನ್ನೈನಲ್ಲೇ ವಾಸವಾಗಿದ್ದರು. ಇನ್ನು, ಸುಬ್ರಮಣಿಯಂ ನಿಧನದ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಅನಿಲ್ ಕುಮಾರ್, ಅಜಿತ್ ಕುಮಾರ್ ಮತ್ತು ಅನೂಪ್ ಕುಮಾರ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ನಮ್ಮ ತಂದೆ ಪಿ ಎಸ್ ಮಣಿ (ಸುಬ್ರಮಣಿಯಂ) ಅವರು ಮುಂಜಾನೆ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷ…
ವಾಷಿಂಗ್ಟನ್: ಜಾಕ್ ಡೋರ್ಸಿ ಅವರ ಬ್ಲಾಕ್ ಇಂಕ್ ಪಾವತಿ ಸಂಸ್ಥೆಯು ವ್ಯಾಪಕ ಅವ್ಯವಹಾರಗಳನ್ನು ಹಿಂಡೆನ್ ಬರ್ಗ ಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ ಡೋರ್ಸಿ ಆಸ್ತಿ ಮೌಲ್ಯ 526 ಮಿಲಿಯಬ್ ಡಾಲರ್ ಕುಸಿತ ಕಂಡು ಬಂದಿದೆ. ಶೇ 11ರಷ್ಟು ಕುಸಿತಗೊಂಡಿರುವ ಡೋರ್ಸಿ ಸಂಪತ್ತು ಇದೀಗ 44 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ ಎಂದು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ಸಹಸಂಸ್ಥಾಪಕರಾಗಿರುವ ಜಾಕ್ ಡೋರ್ಸಿ ಅವರ ಹೆಚ್ಚಿನ ಸಂಪತ್ತು ಬ್ಲಾಕ್ ಸಂಸ್ಥೆಯೊಂದಿಗೆ ಜೋಡಿಕೆಯಾಗಿದೆ. ಟ್ವಿಟರ್ ಸಂಸ್ಥೆಯೊಂದಿಗೆ 3 ಬಿಲಿಯನ್ ಡಾಲರ್ ಪಾಲುದಾರಿಕೆ ಹೊಂದಿದ್ದರೆ ಇದೀಗ ಎಲಾನ್ ಮಸ್ಕ್ ಮುಖ್ಯಸ್ಥರಾಗಿರುವ ಟ್ವಿಟರ್ ನಲ್ಲಿ ಅವರ ಪಾಲುದಾರಿಕೆ ಮೊತ್ತ 388 ಮಿಲಿಯನ್ ಡಾಲರ್ ಆಗಿದೆ.
ಪ್ರತಿಯೊಬ್ಬರ ಹಣಕಾಸು ಯೋಜನೆ ಪಯಣದಲ್ಲಿ, ಅವಧಿ ವಿಮೆ ಬಹುಶಃ ಅವರ ಹೂಡಿಕೆ ಬಂಡವಾಳದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಕಾರಣಗಳು ಹಲವು-ಪ್ರಾಥಮಿಕವಾಗಿ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ನಿಯಮಿತ ವೆಚ್ಚಗಳನ್ನು ಪಾವತಿಸಲು ಮತ್ತು ದೀರ್ಘಾವಧಿಯ ಸಾಲಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಮೃತರ ಕುಟುಂಬಕ್ಕೆ ಆದಾಯದ ಮೂಲವನ್ನು ಒದಗಿಸುತ್ತದೆ. ಪಾಲಿಸಿಬಜಾರ್.ಕಾಮ್ ಅವಧಿ ವಿಮೆ ವಿಭಾಗದ ಮುಖ್ಯಸ್ಥ ರಿಷಭ್ ಗಾರ್ಗ್ ಹೇಳುವಂತೆ, “ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ತಿಳಿದುಕೊಳ್ಳುವುದು ಮಾನಸಿಕ ಶಾಂತಿಯನ್ನು ಒದಗಿಸುತ್ತದೆ. ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ ಅತ್ಯಗತ್ಯವಾಗಿದ್ದರೂ, ನೀವು ನಿಮ್ಮ ತಾಯ್ನಾಡಿನಿಂದ ದೂರವಿದ್ದರೆ ಅದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಭಾರತದಲ್ಲಿ ವಾಸಿಸುವ ಗ್ರಾಹಕರಿಗೆ ಇದು ಅತ್ಯಗತ್ಯವಾಗಿರುವಂತೆಯೇ, ಅನಿವಾಸಿ ಭಾರತೀಯರಿಗೆ (ಎನ್‍ಆರ್‍ಐ) ಟರ್ಮ್ ಇನ್ಶೂರೆನ್ಸ್ ಅಷ್ಟೇ ಮುಖ್ಯ, ಏಕೆಂದರೆ ಅನಾರೋಗ್ಯ, ಗಾಯ ಅಥವಾ ಸಾವಿನಂತಹ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ, ಇದು ಹಣಕಾಸು ಸುರಕ್ಷೆಯನ್ನು ನೀಡುತ್ತದೆ ಮತ್ತು ಅವರ ಕುಟುಂಬದ ಭವಿಷ್ಯವು ರಾಜಿಯಾಗದಂತೆ…
ಬೆಂಗಳೂರು: ಪೊಲೀಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಛಾಪು ಮೂಡಿಸಿದ್ದ ಬೆಂಗಳೂರಿನ ಪೊಲೀಸ್ ಕಾನ್ಸ್‌ಟೇಬಲ್ ಎಚ್.ಎಂ ಲೋಕೇಶ್ ಇದೀಗ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಲೋಕೇಶ್ ಕೆಲಸ ಮಾಡುತ್ತಿದ್ದರು. ಸಂವಹನ, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಕೌಶಲ್ಯ ಹೊಂದಿದ್ದ ಲೋಕೇಶ್ ಕೊರೊನಾ ಸಂದರ್ಭದಲ್ಲಿ ನಾಗರಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದ ಲೋಕೇಶ, ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗಾಗಿ ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿದ್ದರು. ಇದೀಗ ಎಲ್ಲಾ ಹಂತದ ಸಂದರ್ಶನದಲ್ಲೂಅ ತ್ಯುತ್ತಮ ಸಾರರ್ಥ ತೋರಿರುವ ಲೋಕೇಶ್ ಇದೀಗ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.
ಶ್ರೀನಗರ: ಭಗವಂತ ಶ್ರೀರಾಮ ಕೇವಲ ಹಿಂದೂಗಳಿಗಷ್ಟೇ ದೇವರಲ್ಲ. ಧರ್ಮದ ಹೊರತಾಗಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಉದಯಪುರದಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಆತನ ಮೇಲೆ ನಂಬಿಕೆ ಇಡುವ ಎಲ್ಲರಿಗೂ ದೇವರು ಎಂದು ಕಿಡಿಕಾರಿದ್ದಾರೆ. ರಾಮ ಕೇವಲ ಹಿಂದೂಗಳ ದೇವರು ಎಂಬ ಕಲ್ಪನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಮುಸ್ಲಿಂ, ಕಿಶ್ಚಿಯನ್, ಅಮೆರಿಕನ್ ಅಥವಾ ರಷ್ಯನ್ ಯಾರೇ ಆಗಿರಲಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದರು. ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇರುವುದಿಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ…
ಟಾಲಿವುಡ್ ನಟಿ ಕೀರ್ತಿ ಸುರೇಶ್ ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. 2000ನೇ ಇಸವಿಯಲ್ಲಿ ಮಲಯಾಳಂನ ಪೈಲೆಟ್ ಸಿನಿಮಾದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೀರ್ತಿ ಸುರೇಶ್ ಸದ್ಯ ಟಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚೆಲುವೆ. ಸೌಂದರ್ಯ ಮತ್ತು ಅಭಿನಯದಿಂದಲೇ ಹೈಲೈಟ್ ಆಗಿರುವ ಕೀರ್ತಿ ಸುರೇಶ್ ಈಗ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮಹಾನಟಿ ಸಿನಿಮಾ ಮೂಲಕ ಪ್ರೇಕ್ಷಕರ ಮನಸು ಗೆದ್ದಿರುವ ಕೀರ್ತಿ ಸುರೇಶ್ ತಮ್ಮ ಹೊಸ ಹೊಸ ಫೋಟೋ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಿಳಿ ಹಾಲು ಬಣ್ಣದ ಸೀರೆಗೆ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟ ಕೀರ್ತಿ ಸುರೇಶ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ನಾನಿ ಜೊತೆ ದಸರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.