Author: Prajatv Kannada

ನವದೆಹಲಿ: ಮುನ್ಸಿಪಲ್ ಕಾರ್ಪೊರೇಷನ್ (Municipal Corporation of Delhi) ನಡೆಸುತ್ತಿದ್ದ ಶಾಲೆಯ (School) ಐದನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ (Gang-rape) ನಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿ ಶಾಲಾ ಸಹಾಯಕ ಅಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನ ಮೂವರು ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ಮಾ.14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ನಂತರ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು. ಪರೀಕ್ಷೆಗೆ (exams) ಸಹ ಹಾಜರಾಗಿರಲಿಲ್ಲ. ಶಿಕ್ಷಕರು ಆಕೆಯ ಸಹೋದರನನ್ನು ಸಂಪರ್ಕಿಸಿ ಅಂತಿಮ ಪರೀಕ್ಷೆಗೆ ಹಾಜರಾಗದ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಕೆಯ ಸಹೋದರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣದ ಕ್ರಮ ಕೈಗೊಳ್ಳದಿರುವ ಕಾರಣ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತರಗತಿ ಶಿಕ್ಷಕರಿಗೆ ಶೋಕಾಸ್ ನೋಟಿಸ್ (Notice) ಜಾರಿ ಮಾಡಲಾಗಿದೆ. ಉತ್ತರ ಪ್ರದೇಶದ (Uttar Pradesh) ಜೌನ್‍ಪುರ (Jaunpur) ಮೂಲದ ಆರೋಪಿ ಕಳೆದ ಹತ್ತು ವರ್ಷಗಳಿಂದ…

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಗೆ ಇದೇ ತಿಂಗಳ ಮಾರ್ಚ್ 25ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.. ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಯಿಂದ ಮಾರ್ಚ್ 25 ಮಧ್ಯಾಹ್ನ 2 ಗಂಟೆಯ ವರೆಗೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್‌ಎಂ ನಾಗರಾಜ್ ಗುರುವಾರ ಆದೇಶ ಹೊರಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್ಪಿಜಿ ಅಧಿಕಾರಿಗಳು ಹಾಗೂ ಪ್ರಧಾನಿಯವರ ಭದ್ರತಾ ಸಿಬ್ಬಂದಿ ಈಗಾಗಲೇ ನಂದಿಗಿರಿಧಾಮದ ಅತಿಥಿ ಗೃಹದಲ್ಲಿ ತಂಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳ ತುರ್ತು ಸಂಚಾರಕ್ಕೆ ಅನುಕೂಲ ಕಲ್ಪಿಸಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ಪಿಡಬ್ಲ್ಯೂಡಿ ಅಧಿಕಾರಿಗಳ ನಂದಿಗಿರಿಧಾಮದ ರಸ್ತೆ ದುರಸ್ತಿ ಕಾರಣ ಒಡ್ಡಿದ ಕಾರಣ.. ಕುಂಟು ನೆಪ ಮುಂದಿಟ್ಟುಕೊಂಡು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.

Read More

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 53 ಲಕ್ಷ ಹಣವನ್ನು ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ವಾಹನ ತೇಗೂರು ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೆ ಪೊಲೀಸರು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿ ಹಣ ಪತ್ತೆಯಾಗಿದೆ. ಚಿಕ್ಕೋಡಿ ಮೂಲದ ಸಂಜು ಹಿರೇಮಠ ಎಂಬಾತ ಈ ಕಾರು ತೆಗೆದುಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದ್ದು, ಆತ ಹುಬ್ಬಳ್ಳಿಯ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದಾಗಿ ತಿಳಿಸಿದ್ದಾನೆ.ಸದ್ಯ ನಗದು ಹಾಗೂ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಸಂಜು ಹಿರೇಮಠನಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ದಾಖಲೆ ನೀಡುವಂತೆ ತಿಳಿಸಿದ್ದಾರೆ. ಈ ಸಂಬಂಧ ಗರಗ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಮಂಡ್ಯ: ಹಳೇ ಮೈಸೂರು (Mysuru) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ KRS ಡ್ಯಾಂನ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದೆ. ಕಳೆದ ವರ್ಷ ಉತ್ತಮ ಮಳೆಯಾದ ಪರಿಣಾಮ ಕೆಆರ್‌ಎಸ್ ಜಲಾಶಯ ಎರಡು ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಹೀಗಿದ್ದರೂ ಸಹ ಮಾರ್ಚ್ ಮೂರನೇ ವಾರಕ್ಕೆ ಕೆಆರ್‌ಎಸ್‌ನ ನೀರಿನ ಮಟ್ಟ 100 ಅಡಿಗೆ ತಲುಪಿದೆ. 4 ವರ್ಷದ ಬಳಿಕ ಬೇಗನೆ ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 100 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಡ್ಯಾಂನಲ್ಲಿ ನೀರು 100 ಅಡಿಗೆ ಕಡಿಮೆಯಾದರೂ ಸಹ ಜೂನ್‌ವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಮುಂಗಾರು ಮಳೆ ತಡವಾದ್ರೆ ಕಾವೇರಿ ನೀರಿಗೆ ಅವಲಂಬಿತವಾಗಿರುವ ಜನರಿಗೆ ನೀರಿನ ಹಾಹಾಕಾರ ಎದುರಾಗಬಹುದು. ಮೇ ತಿಂಗಳ ಅಂತ್ಯಕ್ಕೆ ಕೃಷಿಗೆ ನೀರು ಕೊಡುವುದು ಕಷ್ಟವಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಡ್ಯಾಂನ ಅಚ್ಚುಕಟ್ಟು…

Read More

ಬೆಂಗಳೂರು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಬೆಳಿಗ್ಗಿನ ಉಪಹಾರ ಸೇವಿಸಿ, ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಉಪಾಹಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಕೂಡಾ ಜತೆಗೂಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದರೂ ರಾಜ್ಯ ರಾಜಕೀಯದಲ್ಲಿ ಈಗಲೂ ಯಡಿಯೂರಪ್ಪ ಅವರಿಗಿರುವ ತಾಕತ್ತು ಬಿಜೆಪಿಯಲ್ಲಿ ಬೇರೆ ಯಾರಿಗೂ ಇಲ್ಲ ಎನ್ನುವುದನ್ನು ಪಕ್ಷ ಅರಿತುಕೊಂಡಂತಿದೆ. ಅಧಿಕಾರವೇ ಇಲ್ಲದಿದ್ದರೂ ಅವರು ನಡೆಸುತ್ತಿರುವ ಓಡಾಟ, ನಾನಾ ಕಾರಣಗಳಿಗಾಗಿ ಪಕ್ಷ ಬಿಟ್ಟು ಹೋಗುವ ಹಂತದಲ್ಲಿರುವವರನ್ನು ಸಮಾಧಾನಪಡಿಸು

Read More

ಬೆಂಗಳೂರು: ವಿಧಾನಸಭಾ ಚುನಾವಣೆಯ ಕಾವು ಏರಿರುವ ಕರ್ನಾಟಕಕ್ಕೆ ಗುರುವಾರ ರಾತ್ರಿಯೇ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶುಕ್ರವಾರ ಬೆಳಗ್ಗೆ ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದರು. ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪನವರ ಕಡೆಗೆ ನಗುಮೊಗ ಬೀರಿದರಾದರೂ ಕಾರು ಇಳಿಯುತ್ತಲೇ, ಯಡಿಯೂರಪ್ಪನವರಿಗೆ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು. ಇದನ್ನು ನಿರೀಕ್ಷಸದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲೇ ಇಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ, ಅವರಿಗೆ ಕೊಡಿ ಅಂತ ಕೈ ತೋರಿಸಿ ಹೇಳಿದರು. ಆಗ ಫಕ್ಕನೆ ಅರ್ಥವಾದಂತಾಗಿ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು. ಆಗ, ವಿಜಯೇಂದ್ರ ಅವರಿಂದ ಹೂಗುಚ್ಛವನ್ನು ಸ್ವೀಕಸಿರಿದ ಶಾ, ವಿಜಯೇಂದ್ರ ಅವರ ಬೆನ್ನು ತಟ್ಟಿದರು. ಅಷ್ಟರಲ್ಲಿ ಯಡಿಯೂರಪ್ಪನವರಿಗೆ ಅವರ ಪುತ್ರಿಯರು ತಮ್ಮಲ್ಲಿದ್ದ ಹೂಗುಚ್ಛವನ್ನು ಹಸ್ತಾಂತರಿಸಿದರು. ಆನಂತರ, ಅದನ್ನು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹಸ್ತಾಂತರಿಸಿದರು.

Read More

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಗೆ (Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ (Kolara) ಹಾಗೂ ವರುಣಾ (Varuna) ಕ್ಷೇತ್ರಗಳ ಪೈಕಿ ಎಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ ಎಂಬುದು ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದರ ಬೆನ್ನಲ್ಲೆ ಸಿದ್ದರಾಮಯ್ಯ ಈ ಎರಡೂ ಕ್ಷೇತ್ರಗಳನ್ನು ಪಕ್ಕಕ್ಕಿಟ್ಟು ಈಗ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಕೋಲಾರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಗೊಂದಲವಿರುವ ನಡುವೆಯೇ ಸಿದ್ದರಾಮಯ್ಯ ಇದೀಗ ಬಾದಾಮಿ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಶುಕ್ರವಾರ ಬಾದಾಮಿಗೆ ತೆರಳಲಿರುವ ಸಿದ್ದರಾಮಯ್ಯ ಅಲ್ಲಿ 500 ಕೋಟಿ ರೂ. ವೆಚ್ಚದ ಬಾದಾಮಿ-ಕೆರೂರು ಶಾಶ್ವತ ಕುಡಿಯವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ. ಸ್ವಕ್ಷೇತ್ರದಲ್ಲಿ ನಡೆಯಲಿರಯವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾಗಿಯಾಗುವುದರಲ್ಲಿ ಯಾವುದೇ ವಿಶೇಷ ಇಲ್ಲ. ಆದರೆ ಈ ಕಾರ್ಯಕ್ರಮದ ಬಳಿಕ ರೋಡ್ ಶೋ (Road Show) ನಡೆಸಲಿದ್ದಾರೆ. ಈ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಭರ್ಜರಿ ರೋಡ್…

Read More

ಬೆಂಗಳೂರು:ಮಾಜಿ ಸಚಿವ ಹಾಗೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿದ್ದ ರೋಷನ್ ಬೇಗ್ ಹಾಗೂ ಅವರ ಪುತ್ರ ರುಮಾನ್ ಬೇಗ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಐಎಂಎ ಹಗರಣದ ಕಾರಣದಿಂದಾಗಿ ರಾಜಕೀಯ ಭವಿಷ್ಯದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿರುವ ರೋಷನ್ ಬೇಗ್ ಇದೀಗ ಪುತ್ರನ ರಾಜಕೀಯ ಭವಿಷ್ಯದ ನಿಟ್ಟಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ರೋಷನ್ ಬೇಗ್ ಪುತ್ರ ಆರ್‌ ರುಮಾನ್ ಬೇಗ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯುಗಾದಿ ಶುಭಾಶಯವನ್ನು ಕೋರಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಎಸ್‌ವೈ ಬಲವಾದ ಅಭಿಪ್ರಾಯವನ್ನು ಹೊಂದಿದ್ದಾರೆ’ ಎಂಬ ವಿಚಾರವನ್ನೂ ಉಲ್ಲೇಖಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್‌ ಗುಂಡೂರಾವ್‌…

Read More

ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಬಾಬು ರಾವ್ ಚಿಂಚನಸೂರು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ನಿರಂತರ ಆಪರೇಷನ್ ಹಸ್ತದ ಮೂಲಕ ಬಿಜೆಪಿಗೆ ಕಾಂಗ್ರೆಸ್ ಏಟನ್ನು ನೀಡುತ್ತಿದ್ದರೆ, ಇದನ್ನು ತಡೆಯುವಲ್ಲಿ ಅಥವಾ ಪರ್ಯಾಯ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನಾಯಕತ್ವ ವಿಫಲವಾಗುತ್ತಿದೆ. ಇವರಷ್ಟೇ ಅಲ್ಲ ಸರಣಿ ಆಪರೇಷನ್ನಲ್ಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು ಕಮಲ ತೊರೆದು ಕೈ ಹಿಡಿದಿದ್ದಾರೆ. ಜೊತೆಗೆ ಕೆಸಿ ನಾರಾಯಣ ಗೌಡ ಸೇರಿದಂತೆ ಮತ್ತೆ ಕೆಲವರು ಕಾಂಗ್ರೆಸ್ ನತ್ತ ವಲಸೆ ಬರುವ ಸಾಧ್ಯತೆ ಇದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವದ ಅವಧಿಯಲ್ಲಿ 17 ಮಂದಿಯನ್ನು ಆಪರೇಷನ್ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ದೊಡ್ಡ ರೀತಿಯ ಆಘಾತವನ್ನು ನೀಡಿದ್ದರು. ಸಮ್ಮಿಶ್ರ ಸರ್ಕಾರ ಪತನ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡುವಲ್ಲಿ ಈ ಆಪರೇಷನ್ ಪ್ರಮುಖ ಪಾತ್ರವನ್ನು ವಹಿಸಿತ್ತು. ಆದರೆ,…

Read More

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್​​ ನಿರ್ದೇಶಕ ಪ್ರದೀಪ್ ಸರ್ಕಾರ್ ಅವರು ಇಂದು (ಮಾರ್ಚ್ 24) ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತ ಪ್ರದೀಪ್ ಸರ್ಕಾರ ಹಲವು ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿ ಘಳಿಸಿದ್ದರು. ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್​ಗಳನ್ನು ನಿರ್ದೇಶಿಸಿ ಫೇಮಸ್ ಆಗಿದ್ದ ಪ್ರದೀಪ್ ಸರ್ಕಾರ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರದೀಪ್ ಸರ್ಕಾರ್ ಅವರು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿದ್ದರು ಯಾವುದೇ ಪ್ರಯೋಜನ ಆಗಿರಲಿಲ್ಲ. ಮಾರ್ಚ್ 23 ರಾತ್ರಿ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮುಂಜಾನೆ 3.30 ಸುಮಾರಿಗೆ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಪ್ರದೀಪ್ ಆಪ್ತರು ತಿಳಿಸಿದ್ದಾರೆ. ಖ್ಯಾತ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಜೊತೆ ಪ್ರದೀಪ್ ಸರ್ಕಾರ್ ಕೆಲಸ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ‘ಮುನ್ನಾ ಭಾಯ್ ಎಂಬಿಬಿಎಸ್​’ ಚಿತ್ರಕ್ಕೆ ಅವರು ಕೂಡ ಎಡಿಟರ್ ಆಗಿದ್ದರು. ಪ್ರದೀಪ್ ಸರ್ಕಾರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಇದರಲ್ಲಿ ಕಂಗನಾ ರಣಾವತ್ ಅವರು…

Read More