Author: Prajatv Kannada

ರಾಯಚೂರು :- ಜಿಲ್ಲೆಯಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಟಕ್ಕೆ ಹೊಸ ವೈರಸ್ ಉಲ್ಬಣಿಸಿದೆ. ದಾಳಿಂಬೆ ಗಿಡಗಳಿಗೆ ದುಂಡಾಣುರೋಗ ಎನ್ನುವ ವೈರಸ್ ಬಾಧಿಸುತ್ತಿದ್ದು, ರೈತರನ್ನ ದಿಕ್ಕೇಡುವಂತೆ ಮಾಡಿದೆ. ದಾಳಿಂಬೆ ಗಿಡಗಳಿಗೆ ಬ್ಯಾಕ್ಟೀರಿಯಲ್ ಬ್ಲೈಟ್ ವೈರಸ್ ಹರಡುತ್ತಿರುವುದರಿಂದ ಜಿಲ್ಲೆಯ ಕೆಲ ರೈತರು ಕಂಗಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಡಿಗಾಳ ಎನ್ನುವ ಗ್ರಾಮದ ಈರಣ್ಣ ಎನ್ನುವ ರೈತ, ತನ್ನ ಹತ್ತು ಎಕೆರೆಯಲ್ಲಿ ಬೆಳೆದ ದಾಳಿಂಬೆ ಸಂಪೂರ್ಣ ಹಾಳಾಗಿದೆ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವುದರಿಂದ ಸೆಕೆ ಹೆಚ್ಚಾಗಿ ವಾತಾವರಣದಲ್ಲಿನ ಏರುಪೇರಿನಿಂದ ಈ ವೈರಸ್ ಉಲ್ಬಣಿಸುತ್ತಿದೆ. ಒಂದು ದಾಳಿಂಬೆಗೆ ವೈರಸ್ ಅಟ್ಯಾಕ್ ಆದರೆ ಇಡೀ ಕಾಯಿ, ಗಿಡ ಹಾಳಾಗುತ್ತದೆ. ಬಳಿಕ ಇಡೀ ತೋಟಕ್ಕೆ ತೋಟವೇ ವೈರಸ್​ಗೆ ತುತ್ತಾಗುತ್ತದೆ. ಇದೇ ರೀತಿ ರೈತ ಈರಣ್ಣನ ಇಡೀ ತೋಟ ಹಾಳಾಗಿ ಹೋಗಿದ್ದು, ಬೇರೆ ತೋಟಗಳಿಗೂ ಇದು ವ್ಯಾಪಿಸುವ ಹಿನ್ನೆಲೆ ಲೋಡ್​ಗಟ್ಟಲೇ ವೈರಸ್ ಅಟ್ಯಾಕ್ ಆದ ದಾಳಿಂಬೆ ಹಣ್ಣುಗಳನ್ನ ಮಣ್ಣಿನಲ್ಲಿ ಹೂಳಲಾಗಿದೆ. ಸದ್ಯ ರೈತ ಈರಣ್ಣಗೆ 30 ಲಕ್ಷ ದಷ್ಟು ನಷ್ಟ…

Read More

ಕೊಪ್ಪಳ:- ಶಾಲೆಯಲ್ಲಿ ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಕಿತ್ತೂರು ಚೆನ್ನಮ್ಮ ವಸತಿ ಶಾಲಾ ಆವರಣದಲ್ಲಿ ಜರುಗಿದೆ. ಘಟನೆಯಲ್ಲಿ 8 ಮಕ್ಕಳು ಗಂಭಿರವಾಗಿದ್ದು, ತಾವರಗೇರಾ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಸಂಬಂಧ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ತಿಳಿದು ಬಂದಿದೆ

Read More

ಬೆಂಗಳೂರು:- ಕಳೆದ ಸಾಕಷ್ಟು ದಿನಗಳಿಂದ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಇದ್ದು, ಇಂದು ಕೂಡ ಪವರ್ ಕಟ್ ಆಗಲಿದೆ. https://youtu.be/09vt7uQSxLc?si=P2X68wq__KQzuWTS ಇಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೂಡಿ 220 / 66 / 11 ಕೆ ವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಕೆಲ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೂ ಹೂಡಿ ಗ್ರಾಮ, ತಿಗಳರ ಪಾಳ್ಯ, ಸೀತಾರಾಮ ಪಾಳ್ಯ, ಬಸವನಗರ, ಸೊನ್ನೇನಹಳ್ಳಿ, ಎನ್‌ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಕರ‍್ಖಾನೆ, ಇಎಸ್‌ಐ ರಸ್ತೆ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್ ಮತ್ತು ಪೂರ್ವ ಮತ್ತು ಪೂರ್ವ ಪಾರ್ಕ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕ.ವಿ.ಪ್ರ.ನಿ.ನಿ ಲೈನ್‌ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ಇಂದು ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ

Read More

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತು ಇಂದು ವಿಚಾರಣೆ ನಡೆಯಲಿದೆ. ಗುರುವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಮತ್ತೆ ಶನಿವಾರಕ್ಕೆ ಮುಂದೂಡಿತ್ತು. ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ನೀಡಿರುವ ಅನುಮತಿ ಬಗ್ಗೆ ಇಂದು ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 10.30ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ. ಸಿದ್ದರಾಮಯ್ಯ ಪರವಾಗಿ ಗುರುವಾರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಇಂದು ಪ್ರತಿವಾದಿಗಳ ಪರ ವಕೀಲರು ವಾದ ಮಂಡಿಸಲಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರ ಪ್ರದೀಪ್ ಪರವಾಗಿ ಪ್ರಭುಲಿಂದ ನಾವದಗಿ, ಸ್ನೇಹಮಯಿ ಕೃಷ್ಣ ಪರವಾಗಿ ಲಕ್ಷ್ಮೀ ಐಯ್ಯಂಗಾರ್ ಮತ್ತು ಟಿ ಜೆ ಅಬ್ರಾಹಂ ಪರವಾಗಿ ರಂಗನಾಥ ರೆಡ್ಡಿ ವಾದ ಮಂಡಿಸಲಿದ್ದಾರೆ. ಆಗಸ್ಟ್ 19ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ಆಗಸ್ಟ್ 29ರ ತನಕ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು…

Read More

ಬೆಂಗಳೂರು:- ಬಿಎಂಟಿಸಿ ಪ್ರಯಾಣಿಕರೇ ಇದು ನೀವು ನೋಡಲೇಬೇಕಾದ ಸ್ಟೋರಿ. ಇನ್ನೂ ಪಾಸ್​ಗಾಗಿ ಕ್ಯೂ ನಿಲ್ಲಬೇಕಿಲ್ಲ.. ಟಿಕೆಟ್​ಗಾಗಿ ಕಾಯಬೇಕಿಲ್ಲ. ಯಾಕಂದ್ರೆ ಡಿಜಿಟಲ್​​ ಮಾದರಿಯ ಬಸ್​ಪಾಸ್​ ವ್ಯವಸ್ಥೆ ಜಾರಿಗೆ ತರಲಾಗಿದೆ. ಸ್ಮಾರ್ಟ್​ಫೋನ್​ ಮೂಲಕವೇ ಬಸ್​ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್​ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್​ಪಾಸ್​ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್​ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್​ ಮಾದರಿಯ ಟುಮೋಕ್ ಹೆಸರಿನ ಆಯಪ್​ನಲ್ಲಿ ಬಸ್​ ಪಾಸ್​ ಸಿಗಲಿದೆ. ಅದರ ಮೂಲಕ ಬಸ್​ ಪ್ರಯಾಣ ಮಾಡಬಹುದಾಗಿದೆ. ಬಿಎಂಟಿಸಿಯಲ್ಲಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅವರೆಲ್ಲರ ಪ್ರಯಾಣವನ್ನು ಸುಗಮಗೊಳಿಸಲು. ಸುಲಭವಾಗಿ ಬಸ್​​ ಪಾಸ್​ ಸಿಗುವಂತೆ ಮಾಡಲು, ನಗದು ಮತ್ತು ಕಾಗದ ರಹಿತವಹಿವಾಟಿಗಾಗಿ ಡಿಜಿಟಲ್​ ಪಾಸ್​ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ. ಬಿಎಂಟಿಸಿಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಟುಮೋಕ್​ ಆಯಪ್​​ ಡೌನ್​ಲೋಡ್​​ ಮಾಡಬೇಕಿದೆ. ಬಳಿಕ ನೋಂದಣಿ ಮಾಡಬೇಕಿದೆ. ಬಸ್​ ಪಾಸ್​ ಮಾದರಿಯನ್ನು ಆಯ್ಕೆ ಮಾಡಿ ವಿವರವನ್ನು ಭರ್ತಿ ಮಾಡಬೇಕು. ನಂತಗರ ಭಾವಚಿತ್ರವನ್ನು ಕ್ಲಿಕ್ಕಿಸಬೇಕು. ಇದಾದ ಬಳಿಕ ಪಾಸ್​​ ಮೊತ್ತವನ್ನು ಪಾವತಿಸಿದರೆ…

Read More

ಬೆಂಗಳೂರು:- ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯೋ ಕೆಲಸ ಮಾಧ್ಯಮಗಳು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. https://youtu.be/5S7FBlMyFG8?si=EP0K3JKmvyIt2YeE ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗ ಸಮಾಜದ ವೇಗ ಮಾಧ್ಯಮಕ್ಕಿಂತಲೂ ಹೆಚ್ಚಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಹಾಗಾಗಿ ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದರು. ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು. ತುಂಗಾಭದ್ರ ಅಣೆಕಟ್ಟೆ ಕ್ರಸ್ಟ್ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು…

Read More

ಬೆಂಗಳೂರು:- ಬಿಎಂಟಿಸಿ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೆ ದಾರುಣ ಸಾವನ್ನಪ್ಪಿದ ಘಟನೆ ಕೆ ಆರ್ ಪುರ ಐಟಿಐ ಗೇಟ್ ಬಳಿ ಜರುಗಿದೆ. https://youtu.be/3JYpV-fXBng?si=YWneLR5lEU51Zkzl ಮೃತ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಯ ಪ್ರಕರಣ ದಾಖಲಿಸಿದ ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ. ಮೃತ ಬೈಕ್ ಸವಾರನ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

Read More

ಸೆಕ್ಸ್ ದಾಂಪತ್ಯ ಜೀವನದಲ್ಲಿ ತುಂಬಾ ಮುಖ್ಯ. ಸಂಗಾತಿಯೊಂದಿಗೆ ಆರೋಗ್ಯಕರ ಬಂಧವನ್ನು ಬೆಳೆಸುವುದು ಮುಖ್ಯ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಸಂಗಾತಿಯೊಂದಿಗಿನ ಜೀವನದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಸಂಗಾತಿಯೊಂದಿಗೆ ಆತ್ಮೀಯ ದೈಹಿಕ ಸಂಬಂಧ ಹೊಂದುವುದು ಕೂಡ ಸಂಬಂಧದ ಪ್ರಮುಖ ಭಾಗವಾಗಿದೆ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಪುರುಷರಿಗೆ ಯಾವುದಾದರೂ ಲೈಂಗಿಕ ಸಮಸ್ಯೆಗಳು ಇದ್ದರೆ ಅದರಿಂದ ಇಬ್ಬರಿಗೂ ತೊಂದರೆಯಾಗುತ್ತದೆ ಮತ್ತು ಅಷ್ಟೇ ಬೇಸರವಾಗುತ್ತದೆ. ಆದರೆ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನಮ್ಮೆಲ್ಲರ ಅಡುಗೆಮನೆಯಲ್ಲಿ ಒಳ್ಳೆಯ ಪರಿಹಾರವಿದೆ. ಅದೇನೆಂದರೆ ನಾವು ಅಡುಗೆಯಲ್ಲಿ ಬಳಕೆ ಮಾಡುವ ಕೆಲವೊಂದು ಬೀಜಗಳು ಅಥವಾ ಕಾಳುಗಳು. ಬನ್ನಿ ಈ ಲೇಖನದಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ. ಕುಂಬಳಕಾಯಿ ಬೀಜಗಳು ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇದು ನಿಮ್ಮ ಆರೋಗ್ಯಕರವಾದ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು.ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ಅವರ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.ಇದರ ಜೊತೆಗೆ ಪ್ರೋಸ್ಟೇಟ್ ಕ್ಯಾನ್ಸರ್ ಸಮಸ್ಯೆ ಇರುವುದಿಲ್ಲ. ಜೊತೆಗೆ ಇದರಲ್ಲಿ ಒಮೆಗಾ 3…

Read More

ಬಾಳೆಹಣ್ಣಿನ ಸೇವನೆ ನಮ್ಮ ದೇಹವನ್ನು ಹಲವಾರು ಕಾಯಿಲೆಗಳಿಂದ ಕೊಡ ಕಾಪಾಡುತ್ತದೆ. ಉದಾಹರಣೆಗೆ ಅಜೀರ್ಣತೆ, ಮಲಬದ್ಧತೆ, ಎದೆಯುರಿ ಇಂತಹ ಸಮಸ್ಯೆಗಳು ದೂರವಾಗುತ್ತವೆ. ಆದರೆ ಬಾಳೆಹಣ್ಣಿನ ಸೇವನೆಯ ಜೊತೆಗೆ ಬೆರೆಸಿ ಸೇವಿಸುವ ಇನ್ನು ಕೆಲವು ಆಹಾರಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಹಾಗಾದರೆ ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ ಬನ್ನಿ. ಬಾಳೆಹಣ್ಣು ಹಲವು ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಅದರಲ್ಲಿ ಪ್ರಮುಖವಾಗಿ ಹೃದಯದ ಆರೋಗ್ಯವನ್ನು ಕಾಪಾಡುವ ಮತ್ತು ರಕ್ತದ ಒತ್ತಡವನ್ನು ನಿರ್ವಹಣೆ ಮಾಡುವ ಪೊಟಾಸಿಯಂ ಅನ್ನು ಹೇರಳವಾಗಿ ಒಳಗೊಂಡಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇದರಲ್ಲಿ ಹೇರಳವಾಗಿದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆಟಬೋಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಲ್ಲಿ ಕರಗುವ ನಾರಿನ ಅಂಶ ಇರುವ ಕಾರಣದಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ನೈಸರ್ಗಿಕವಾದ ಸಿಹಿ ಪ್ರಮಾಣ ಇದರಲ್ಲಿ ಇರುವುದರಿಂದ ತಕ್ಷಣವೇ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಬಾಳೆಹಣ್ಣುಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಈ ರೀತಿ ಹೆಚ್ಚಾಗಿರುವುದರಿಂದ ನಮ್ಮ ಸಮಗ್ರ…

Read More

ಸೂರ್ಯೋದಯ: 06:05, ಸೂರ್ಯಾಸ್ತ : 06:26 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ: ತ್ರಯೋದಶಿ ನಕ್ಷತ್ರ: ಪುಷ್ಯ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಮ.12:48 ನಿಂದ ಮ.2:30 ತನಕ ಅಭಿಜಿತ್ ಮುಹುರ್ತ: ಬೆ.11:51 ನಿಂದ ಮ.12:41 ತನಕ ಮೇಷ ರಾಶಿ: ಸಂತಾನ ಇಲ್ಲದವರಿಗೆ ಮಕ್ಕಳ ಯೋಗ, ಯುವಕ ಯುವತಿಯರಿಗೆ ಮದುವೆ ಯೋಗ,ಎರಡನೇ ಮದುವೆ ಇಷ್ಟಪಟ್ಟವರಿಗೆ ಅಡಚಣೆ, ಸರ್ಕಾರದ ಆಧೀನದಲ್ಲಿ ಮಾಡುವ ಕೆಲಸದಲ್ಲಿ ಹೆಚ್ಚಿನ ಧನ ಲಾಭ ನಿರೀಕ್ಷಣೆ, ಮನೆ ಕಟ್ಟಲು ಅಗತ್ಯ ಸಲಕರಣೆಗಳ ಮಾರಾಟಗಾರರಿಗೆ ಹಾಗೂ ಕಮಿಷನ್ ವ್ಯವಹಾರಸ್ತರಿಗೆ ಧನ ಲಾಭ ಪಡೆಯಲಿದ್ದೀರಿ, ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವ ಗೃಹಿಣಿಯರಿಗೆ ಆರ್ಥಿಕ ಚೇತರಿಕೆ, ಪುರುಷರಿಗೆ ಶ್ರವಣಶಕ್ತಿ ಕಡಿಮೆಯಾಗುವ ಸಮಸ್ಯೆ, ತಾತ್ಕಾಲಿಕ ಉದ್ಯೋಗಿಗಳಿಗೆ ಸಿಹಿ…

Read More