Author: Prajatv Kannada

ಬಳ್ಳಾರಿ: ಕಂಪ್ಲಿ ಮತದಾರರಿಗೆ ಆಮಿಷವೊಡ್ಡಲು ಸಂಗ್ರಹಿಸಿದ್ದ 102 ಸೀರೆಗಳನ್ನು ಚುನಾವಣಾ ನೀತಿ ಸಂಹಿತೆ ತಂಡದವರು ಖಚಿತ ಮಾಹಿತಿ ಮೇರೆಗೆ ವಶಪಡಿಸಿಕೊಂಡಿರುವುದು ಮಂಗಳವಾರ ಜರುಗಿದೆ. ತಾಲ್ಲೂಕಿನ ಶ್ರೀರಾಮರಂಗಾಪುರದಲ್ಲಿ 41 ಸೀರೆ ಮತ್ತು ನಂ.10 ಮುದ್ದಾಪುರ ಗ್ರಾಮದಲ್ಲಿ 61 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಸೀರೆಗಳು ಬಿಜೆಪಿ ಚಿಹ್ನೆ ಇರುವ ಚೀಲದಲ್ಲಿದ್ದ ಸಂಗ್ರಹಿಸಲಾಗಿತ್ತು. ಸೆಕ್ಟರ್ ಅಧಿಕಾರಿ ಧರ್ಮಣ್ಣ ಜಾಗೃತದಳ ಅಧಿಕಾರಿ ಶ್ರೀನಿವಾಸ್ ಅರವಿ, ಎಫ್.ಎಸ್.ಟಿ ರವಿಕುಮಾರ್, ಪಿಎಸ್ಐ ಶಾರವ್ವ ಡಿ, ದೊಡ್ಡಾಣಿ,ಹೆಡ್ ಕಾನ್‌ಸ್ಟೇಬಲ್ ದತ್ತಾತ್ರೇಯ, ಗ್ರಾಮಲೆಕ್ಕಾಧಿಕಾರಿ ವೆಂಕಟೇಶ್ ದಾಳಿಯಲ್ಲಿ ಭಾಗವಹಿಸಿದ್ದರು. ನಂ.10 ಮುದ್ದಾಪುರ ಪ್ರಕರಣ ಕಂಪ್ಲಿ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು: ದಾಖಲೆ ಇಲ್ಲದೆ ಪಿಕಪ್‌ನಲ್ಲಿ ಸಾಗಿಸುತ್ತಿದ್ದ ೨.೩೦ ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚುನಾವಣೆ (Election) ನಿಮಿತ್ತ ಜಿಲ್ಲಾದ್ಯಂತ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು (Checkpost) ನಿರ್ಮಿಸಲಾಗಿದೆ. ಅದೇ ರೀತಿ ತರೀಕೆರೆ (Tarikere) ಪಟ್ಟಣದ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಪಿಕಪ್‌ನಲ್ಲಿ ನಾಲ್ಕು ಬಾಕ್ಸ್ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಪಿಕಪ್ ವಾಹನದಲ್ಲಿ ಚಿನ್ನದ ಸರಗಳು  ಹಾಗೂ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದೆ. ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ೨ ಕೋಟಿ ೩೦ ಲಕ್ಷ ರೂ. ಬೆಲೆ ಬಾಳುವ ೯ ಕೆ.ಜಿ. ೩೦೦ ಗ್ರಾಂ ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ.

Read More

ಹಾಸನ : ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು(ಮಾ.23) ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್​ನ ಆದಿಚುಂಚನಗಿರಿ ಆಸ್ಪತ್ರೆಯಲ್ಕಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ ದಿಡೀರ್ ಅರೋಗ್ಯ ಸ್ಥಿತಿಯಲ್ಲಿ ಏರು ಪೇರು ಆಗಿದ್ದು, ಕೂಡಲೆ ಶ್ರವಣಬೆಳಗೊಳದ ಜೈನ ಮಠಕ್ಕೆ ವೈದ್ಯರು ಆಗಮಿಸಿ ಪರೀಕ್ಷೆ ನಡೆಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಕಾರಣಕ್ಕೆ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನ ಸ್ಥಳಾಂತರ ಮಾಡಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Read More

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸೂಪರ್ ಹಿಟ್ ಆಗಿದೆ .  ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರತಿಯೊಬ್ಬರಿಂದಲೂ ಮೆಚ್ಚುಗೆ ಘಳಿಸಿತ್ತು. ಕಾಂತಾರ ಸಿನಿಮಾ ಹಿಟ್ ಆದ ಬೆನ್ನಲ್ಲೆ ಕಾಂತಾರ ಪಾರ್ಟ್ 2 ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಈ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಅವರು ಕಾಂತಾರ ಸೆಕೆಂಡ್ ಪಾರ್ಟ್ ಬರಲಿದ್ದು ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆ ಎಂದು ತಿಳಿಸಿದೆ. ಯುಗಾದಿ ದಿನದಂದು ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ನಾವು ಹೊಸ ವರ್ಷ ಯುಗಾದಿಯ ಈ ಸಂಭ್ರಮದಲ್ಲಿ ಕಾಂತಾರ ಪಾರ್ಟ್ 2 ಸಿನಿಮಾಕ್ಕೆ ಬರವಣಿಗೆ ಆರಂಭವಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಪೃಕೃತಿ ಮಾನವ ಸಂಘರ್ಷದ ಕಥೆಯನ್ನು ಮತ್ತೊಂದು ರೂಪದಲ್ಲಿ ಹೊತ್ತು ತರಲಿದ್ದೇವೆ ಎಂದು ತಿಳಿಸಿದೆ. ಈ ಮಧ್ಯೆ ನಿರ್ಮಾಪಕರು ಕಾಂತಾರ ಚಿತ್ರವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು : ಪಂಚಮಸಾಲಿಗೆ 2 ಎ ಮೀಸಲಾತಿ ನೀಡುವ ಸಂಬಂಧ ಮಾ.24 ರಂದು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಮಾ.24 ರಂದು ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಸಿಗುವ ಭರವಸೆ ಇಟ್ಟುಕೊಂಡಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ನಿರ್ದೇಶನ ಮಾಡಿದರೂ ಸಿಎಂ ಬೊಮ್ಮಾಯಿ ಮೀಸಲಾತಿ ಈಡೇರಿಸಲಿಲ್ಲ, ನಾವು ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕ ಮಾಡುತ್ತಲೇ ಇದ್ದೆವು, ಇಂದು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿದೆ. ಗುಡ್ ನ್ಯೂಸ್ ಸಿಗುವ ಭರವಸೆ ಸಿಕ್ಕಿದೆ ಎಂದರು. ಚುನಾವಣೆ ಹೊತ್ತಲ್ಲೇ ಪಂಚಮಸಾಲಿಗೆ 2 ಎ ಮೀಸಲಾತಿ ನೀಡುವ ಸಂಬಂಧ ಮಾ.24 ರಂದು ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ನೀಡಲಿದ್ಯಾ ಎಂಬ ಪ್ರಶ್ನೆ ಮೂಡಿದೆ.

Read More

ಬೆಂಗಳೂರು: ಯುಗಾದಿ ಹಬ್ಬದ ಮರುದಿನವಾದ ಇಂದು ಹೊಸತೊಡಕು ನಡೆಯುತ್ತಿದ್ದು, ಕಳೆದ ವರ್ಷ ಆರಂಭವಾದ ʼಜಟ್ಕಾ ಕಟ್ʼ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ”ಹಿಂದೂ ಹಬ್ಬಕ್ಕೆ ಹಿಂದೂಗಳು ಸಿದ್ಧಪಡಿಸಿದ ಮಾಂಸವನ್ನೇ ಖರೀದಿಸುವಂತೆʼ’ ಪ್ರೇರೇಪಿಸುವ ʼಹಲಾಲ್ ಬಾಯ್ಕಾಟ್ʼ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಹಿಂದೂಪರ ಸಂಘಟನೆಗಳು ಹಲಾಲ್ ಕಟ್ ತಿರಸ್ಕರಿಸಿ ಎಂದು ಪ್ರಚಾರ ಮಾಡಿದ್ದವು. ಕೆಲ ಹಿಂದೂಪರ ಕಾರ್ಯಕರ್ತರು ಹಲಾಲ್‌ಗೆ ಸಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್‌ನಲ್ಲಿ ಮಾಂಸ ಖರೀದಿ ಮಾಡುವಂತೆ ಅಭಿಯಾನ ಶುರು ಮಾಡಿದ್ದರು. ರಾಜ್ಯದಲ್ಲಿ ಮೊದಲಿಗೆ ಹಿಂದವೀ ಮೀಟ್ ಮಾರ್ಟ್ ಅನ್ನು ಮುನೇಗೌಡ ಎಂಬ ವ್ಯಕ್ತಿ ಆರಂಭಿಸಿದ್ದರು. ಹಲಾಲ್ ಕಟ್ ಮಾಂಸದ ವಿರುದ್ಧ ಮುನೇಗೌಡ ಅಭಿಯಾನ ಆರಂಭಿಸಿದ್ದರು. ಹಿಂದವಿ ಬ್ರಾಂಡ್‌ನ ಅಡಿಯಲ್ಲಿ, ಬೆಂಗಳೂರು ಮತ್ತು ಹೊರವಲಯದಲ್ಲಿ ನಾಲ್ಕು ಅಂಗಡಿಗಳನ್ನು ತೆರೆಯಲಾಗಿತ್ತು. ಈ ವರ್ಷ ನಗರದಾದ್ಯಂತ 18 ಅಂಗಡಿಗಳನ್ನು ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿ ನಗರ ಮತ್ತಿತರ…

Read More

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಧೀರನಹಳ್ಳಿಯಲ್ಲಿರುವ ಗ್ರೂಪ್ ಡಿ ನೌಕರರ ಲೇಔಟ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಘಟನೆ ಆಕಸ್ಮಿಕವಲ್ಲ, ಇದು ಕಂಡಕ್ಟರ್ ಮಾಡಿಕೊಂಡಿರುವ ಆತ್ಮಹತ್ಯೆ ಎಂದು ಕಂಡುಬಂದಿದೆ. ಯುಪಿಐಯಲ್ಲಿ ಕಂಡಕ್ಟರ್ ಮುತ್ತಯ್ಯ ಅವರ ಖಾತೆಯಿಂದ ಸೆಂಡ್ ಆಗಿರುವ 700 ರೂಪಾಯಿ ಈ ಸುಳಿವು ನೀಡಿದೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಲ್ಲ, ನಿರ್ವಾಹಕ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ. ಮುತ್ತಯ್ಯ ಬಸ್ ನಿಲುಗಡೆಯಾದ ನಂತರ ಹೊರ ಹೋಗಿ ಮಧ್ಯರಾತ್ರಿ ಒಂದು ಗಂಟೆ ವರೆಗೂ ಫೋನಿನಲ್ಲಿ ಮಾತನಾಡಿದ್ದಾರೆ. ಡ್ರೈವರ್ ಪ್ರಕಾಶ್ ಅವರನ್ನು ರೂಮಿನಲ್ಲಿ ಮಲಗುವಂತೆ ಹೇಳಿ ಆ ದಿನದ ಕಲೆಕ್ಷನ್ ಹಣವನ್ನು ಪ್ರಕಾಶ್ ಕೈಗೆ ಕೊಟ್ಟಿದ್ದಾರೆ. ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್‌ನಿಂದ ಹೊರ ಹೋಗಿ, ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಹೋಗಿದ್ದಾರೆ. ಅಲ್ಲಿ 700 ರೂಪಾಯಿಗಳ ಪೆಟ್ರೋಲ್ ಖರೀದಿಸಿದ್ದಾರೆ. ಅವರ ಯುಪಿಐ ಪಾವತಿಯ ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ. ರಾತ್ರಿಯಲ್ಲಿ…

Read More

ಬೆಂಗಳೂರಿನಲ್ಲಿ ಇಂದಿನಿಂದ ಮಾರ್ಚ್ 30ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಫಿಲಂ ಫೆಸ್ಟಿವಲ್ ಆಯೋಜಿಸಿವೆ. ವಿಧಾನಸೌಧದ ಎದುರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಿಲಂ ಫೆಸ್ಟಿವಲ್ ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವ ಸ್ಮರಣ ಸಂಚಿಕೆಯನ್ನು ವಿಜಯೇಂದ್ರ ಪ್ರಸಾದ್ ಬಿಡುಗಡೆ ಮಾಡಲಿದ್ದಾರೆ. ಅಶೋಕ್ ಕಶ್ಯಪ್ ಉಪಸ್ಥಿತರಿರುತ್ತಾರೆ. ಮಾರ್ಚ್ 23 ರಿಂದ ಮಾರ್ಚ್ 30, 2023 ರವರೆಗೆ ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ 11 ಸ್ಕ್ರೀನ್‌ಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಚಲನಚಿತ್ರೋತ್ಸವವು ಸೆನೆಗಲ್, ಇರಾನ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಫ್ರಾನ್ಸ್‌ನಂತಹ ಅಂತರಾಷ್ಟ್ರೀಯ ಸಿನಿಮಾ ಉದ್ಯಮಗಳ ಚಲನಚಿತ್ರಗಳನ್ನು ಸಹ ಪ್ರದರ್ಶಿಸುತ್ತದೆ. ಸಿನಿಮಾ ಆಫ್ ದಿ ವರ್ಲ್ಡ್, ಭಾರತೀಯ ಸಿನಿಮಾ, ಕನ್ನಡ ಸಿನಿಮಾ ಮತ್ತು ಏಷ್ಯನ್ ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಹಬ್ಬದ ಸಂದರ್ಭದಲ್ಲಿ ನಡೆಯಲಿವೆ. 2023 ರ ಆಸ್ಕರ್‌ಗಳಲ್ಲಿ ದೊಡ್ಡ ಪ್ರಶಸ್ತಿಗಳನ್ನು ಗೆದ್ದ ಚಲನಚಿತ್ರಗಳಾದ ಡೇನಿಯಲ್ ಸ್ಕಿನೆರ್ಟ್ ಮತ್ತು ಡೇನಿಯಲ್ ಕ್ವಾನ್ ಅವರ…

Read More

ಖ್ಯಾತ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಮೊದಲ ಅತಿಥಿಯಾಗಿ ರಮ್ಯಾ ಭಾಗಿಯಾಗಿದ್ದಾರೆ. ಈ ವಾರಾಂತ್ಯದಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಸದ್ಯ ಇದರ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಕಷ್ಟು ಸಮಯ ತೆರೆಮರೆಯಲ್ಲಿದ್ದ ರಮ್ಯಾ ಮತ್ತೆ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಇದೇ ವೇಳೇ ವೀಕೆಂಡ್‌ ವಿತ್ ರಮೇಶ್ ಶೋನಲ್ಲಿ ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಈ ವೇಳೆ ಅಪ್ಪು ನೆನೆದು ರಮ್ಯಾ ಕಣ್ಣೀರಿಟ್ಟಿದ್ದಾರೆ. ರಮ್ಯಾ ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಕೂಡ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತಾ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ…

Read More

ಬೆಂಗಳೂರು: ಹೃದಯಾಘಾತದಿಂದ ಮಾಜಿ ಸಚಿವ ಅಂಜನಮೂರ್ತಿ(72) ನಿಧನರಾಗಿದ್ದಾರೆ. ಇಂದು ಮುಂಜಾನೆ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಸತಿ ಸಚಿವರಾಗಿ, ಉಪಸಭಾಪತಿಯಾಗಿ ಅಂಜನಮೂರ್ತಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಾಜಿ ಸಚಿವ ಅಂಜನಾಮೂರ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು ಕಂಬನಿ ಮಿಡಿದಿದ್ದಾರೆ.ಕುಟುಂಬಕ್ಕೆ ಶಕ್ತಿ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿರುವ ಗಣ್ಯರು.

Read More