Author: Prajatv Kannada

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 54 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇತ್ತೀಚೆಗೆ ನಿಧನರಾದ ಉದ್ಯಮಿ ರಾಕೇಶ್ ಜುಂಜನವಾಲಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಮೂವರಿಗೆ ಪದ್ಮವಿಭೂಷಣ, ನಾಲ್ವರಿಗೆ ಪದ್ಮಭೂಷಣ ಹಾಗೂ 47 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಜನವರಿ 25 ರಂದು 106 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿತ್ತು. ಉಳಿದ 52 ಗಣ್ಯರಿಗೆ ಮತ್ತೊಂದು ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಪದ್ಮವಿಭೂಷಣಕ್ಕೆ ಆರು ಮಂದಿ, ಪದ್ಮಭೂಷಣಕ್ಕೆ 9 ಸಾಧಕರು, ಪದ್ಮಶ್ರೀಗೆ 91 ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಹಿನ್ನೆಲೆ ಗಾಯಕ ಸುಮನ್ ಕಲ್ಯಾಣಪುರ ಅವರಿಗೆ ವಯಸ್ಸಾಗಿದ್ದರಿಂದ ಪದ್ಮಶ್ರೀ ಪ್ರಶ್ತಿಯನ್ನು ರಾಷ್ಟ್ರಪತಿಯವರು ವೇದಿಕೆಯಿಂದ ಮುಂದೆ ಬಂದು ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ದಿಂದ ಡಾ. ಖಾದರ್ ವಲ್ಲಿ ದುಡೆ…

Read More

ಮುಂಬೈ: 2017ರ ಆಗಸ್ಟ್‌ನಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ ₹7,500 ಕೋಟಿ ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಮೊತ್ತ ಅವರ ಬಳಿ ಇದೆ ಎಂದು ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಮೂರನೇ ಪೂರಕ ಚಾರ್ಜ್ ಶೀಟ್‌ನಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಿಳಿಸಿದೆ.  2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆಯನ್ನು ಎದುರಿಸುತ್ತಿದ್ದಾಗ ಉದ್ಯಮಿ ವಿಜಯ ಮಲ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ ₹ 330 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ. ₹ 900 ಕೋಟಿಗೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್-ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಸಿಬಿಐ ಈ ಪ್ರಕರಣದ ಆರೋಪಿಯಾಗಿದ್ದಾರೆ. ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದು, ವಿಜಯ ಮಲ್ಯ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂದು ಇದರಲ್ಲಿ…

Read More

ಕೆ.ಬಾಬು ರೆಡ್ಡಿ ಹಾಗೂ ಜಿ.ಸತೀಶ್ ಕುಮಾರ್ ನಿರ್ಮಿಸಿರುವ, ಶಿವಂ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ ‘ಲಿಲ್ಲಿ’. ಇತ್ತೀಚೆಗೆ ಈ ಚಿತ್ರದ ಹಾಡು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ನಟಿ ರಾಗಿಣಿ ದ್ವಿವೇದಿ ಡಾ.ಮೌಲಾ ಶರೀಫ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ತೆಲುಗು ಚಿತ್ರನಟ ಶಿವಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದರು. ಹಾಡು ಬಿಡುಗಡೆ‌ ಮಾಡಿದ ನಟಿ ರಾಗಿಣಿ, ಎಲ್ಲದಕ್ಕಿಂತ ಮುಖ್ಯ ಮಾನವೀಯತೆ ಎಂಬ ಉತ್ತಮ ಕಥಾಹಂದರ ಹೊಂದಿರುವ ಈ ಮಕ್ಕಳ ಚಿತ್ರ ದೊಡ್ಡಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು. ಉಮೇಶ್ ಬಣಕಾರ, ಮೌಲಾ ಶರೀಫ್ ಹಾಗೂ ನಟ ಶಿವಕೃಷ್ಣ ಸಹ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದರು. ನಾನು ಕನ್ನಡದಲ್ಲೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೀನಿ. ಆದರೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಮಾನವೀಯತೆಯ ಮೌಲ್ಯವನ್ನು ಸಾರುವ ಚಿತ್ರವಿದು. ಯಾವುದೇ ಒಂದು ವಿಷಯವನ್ನು ಮಕ್ಕಳ ಮೂಲಕ ಹೇಳಿದಾಗ ಬೇಗ ತಲುಪುತ್ತದೆ.…

Read More

ಲಂಡನ್‌: ‘ಬ್ರಿಟನ್‌ ಸರ್ಕಾರವು ಭಾರತೀಯ ಹೈಕಮಿಷನ್‌ ಕಚೇರಿಗೆ ಅಗತ್ಯ ಭದ್ರತೆ ಒದಗಿಸಿದೆ ಎಂದು ಬ್ರಿಟನ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹೈಕಮಿಷನ್‌ ಕಚೇರಿ ಎದುರು ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೈಕಮಿಷನ್‌ ಎದುರು ಬ್ಯಾರಿಕೇಡ್‌ಗಳನ್ನು ಹಾಕಿರುವುದು ಹಾಗೂ ಪೊಲೀಸ್‌ ಸಿಬ್ಬಂದಿ ಇರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಖಾಲಿಸ್ತಾನ ಪರವಾಗಿ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು ಮತ್ತೆ  ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಸರ್ಕಾರ ಈ ಅಗತ್ಯ ಕ್ರಮಕೈಗೊಂಡಿದೆ. ‘ಖಾಲಿಸ್ತಾನ ಪರವಾಗಿ ಭಾನುವಾರ ಹೋರಾಟ ನಡೆಸಿದ್ದ ಪ್ರತ್ಯೇಕತಾವಾದಿಗಳು ಭಾರತೀಯ ಹೈಕಮಿಷನ್‌ ಎದುರು ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಬ್ರಿಟನ್‌ ಸರ್ಕಾರ ಭದ್ರತೆ ನೀಡಿಲ್ಲ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೂ ಬ್ರಿಟನ್‌ನಲ್ಲಿರುವ ಭಾರತೀಯರು ಖಂಡನೆ ವ್ಯಕ್ತಪಡಿಸಿದ್ದರು. ಅದೇ ಜಾಗದಲ್ಲಿ ಮತ್ತೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಲಾಗಿದೆ. ಜೊತೆಗೆ ಹೈಕಮಿಷನ್‌ ಕಟ್ಟಡದ ಎದುರು…

Read More

ಭಾರತೀಯ ಅಮೆರಿಕನ್ ನಟಿ, ನಿರ್ಮಾಪಕಿ ಮೈಂಡಿ ಕಲಿಂಗ್ ಅವರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಬೆನ್ನು ತಟ್ಟಿದ್ದಾರೆ. ಇದು ಸರ್ಕಾರದಿಂದ ಕಲಾವಿದರು, ಕಲಾ ಪೋಷಕರು ಮತ್ತು ಗುಂಪುಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಅಮೆರಿಕಾದಲ್ಲಿ ಕಲೆ ಅಭಿವೃದ್ಧಿಗೆ ಶ್ರಮ, ವಿಶಿಷ್ಟ ಸಾಧನೆ, ಇತರರಿಗೆ ಸ್ಫೂರ್ತಿ ನೀಡಿದ ಅನುಕರಣೀಯ ಕಾರ್ಯಗಳನ್ನು ಗುರುತಿಸಿ ಕಲಾವಿದರು, ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹೊಸ ಪೀಳಿಗೆಯ ಕಥೆಗಾರರಿಗೆ ಬೆಂಬಲ ನೀಡುತ್ತಿರುವುದನ್ನು ಗುರುತಿಸಿ ಮೈಂಡಿ ಕಲಿಂಗ್ ಅವರಿಗೆ ಶ್ವೇತ ಭವನದಲ್ಲಿ ಈ ಗೌರವ ನೀಡಲಾಗಿದೆ.

Read More

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿ ಹಾಡುಗಳನ್ನು ಬರೆದು ಹಾಡಿದ್ದ 35 ವರ್ಷದ ಪಾಪ್ ತಾರೆ ಡಿಮಾ ನೋವಾ ನಿಗೂಢ ಸಾವನ್ನಪ್ಪಿದ್ದಾರೆ. ರಷ್ಯಾದ ಪಾಪ್ ತಾರೆ ದಿಮಾ ನೋವಾ ಹಠಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಡಿಮಾ ಪಾಪ್ ಗುಂಪಿನ ಸಂಸ್ಥಾಪಕರಾಗಿದ್ದು, ಹಾಡುಗಳು ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಜನಪ್ರಿಯವಾಗಿದ್ದವು. ಡಿಮಾ ನೋವಾ ತಮ್ಮ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಇದೇ “ಆಕ್ವಾ ಡಿಸ್ಕೋ” ಹಾಡಿನಲ್ಲಿ ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು. ಇದಕ್ಕೆ “ಆಕ್ವಾ ಡಿಸ್ಕೋ ಪಾರ್ಟಿ” ಎಂದೇ ಕರೆಯಲಾಗುತ್ತಿತ್ತು. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಆಗಾಗ್ಗೆ ಈ ಹಾಡನ್ನು ಹಾಡಲಾಗುತ್ತಿತ್ತು. ಯಾರೋಸ್ಲಾವ್ಲ್ ಪ್ರದೇಶದಲ್ಲಿ ರಷ್ಯಾದ ವೋಲ್ಗಾ ನದಿಯನ್ನು ದಾಟುವಾಗ ಡಿಮಾ ನೋವಾ ಹಿಮ ನದಿಯಲ್ಲಿ ಬಿದ್ದಿದ್ದಾರೆ ಎಂದು ರಷ್ಯಾದ ಸುದ್ದಿ ವೆಬ್ಸೈಟ್ ಪೀಪಲ್ಟಾಕ್ ವರದಿ ಮಾಡಿದೆ. ಅಪಘಾತದ ಸಮಯದಲ್ಲಿ…

Read More

ಯುಗಾದಿ ಸಂಭ್ರಮದಲ್ಲಿ ಸೆಲೆಬ್ರಿಟಿ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಗುಡ್ ನ್ಯೂಸ್ ನೀಡಿದ್ದಾರೆ.  ಯುಗಾದಿಯ ಸಂಭ್ರಮದಂದು ತಮ್ಮ ಮುಂದಿನ ಕೆಲಸ ಬಗ್ಗೆ  ಡಾರ್ಲಿಂಗ್ ಕೃಷ್ಣ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ʻಲವ್ ಮಾಕ್ಟೈಲ್ʼ ಸೀಕ್ವೇಲ್ ಬಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ‌ʻಲವ್ ಮಾಕ್ಟೈಲ್ʼ ಪಾರ್ಟ್ 1 ಮತ್ತು ಪಾರ್ಟ್ 2ನಲ್ಲಿ ಆದಿ-ನಿಧಿಮಾ ಸ್ಟೋರಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚೆಂದದ ಲವ್ ಸ್ಟೋರಿ ಜೊತೆ ಎಮೋಷನ್ ನೋಡಿ ಮೆಚ್ಚಿಕೊಂಡಿದ್ದರು.ಆ ಬಳಿಕ ಮತ್ತೆ ಇದರ ಮುಂದುವರೆದ ಭಾಗ ಬರುತ್ತೋ ಇಲ್ವೋ ಅಂತಾ ಎಂಬ ಸ್ಪಷ್ಟತೆ ಇರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಗೆ ಲವ್ ಮಾಕ್ಟೈಲ್ ಪಾರ್ಟ್ 3 ಮಾಡುವ ಉದ್ದೇಶ ಇದ್ದು, ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಮಾಡುತ್ತೇವೆ ಎಂದಿದ್ದರು. ಇದೀಗ ಸೂಕ್ತ ಕಥೆ ಸಿಕ್ಕಿದ್ದು ಆ ಕಾರಣದಿಂದ `ಲವ್ ಮಾಕ್ಟೇಲ್ 3′ ಬಗ್ಗೆ ಅನೌನ್ಸ್ ಮಾಡಿದ್ದಾರೆ.

Read More

ತಮಿಳಿನ ಖ್ಯಾತ, ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಕಳ್ಳತನವಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು ಇದೀಗ ಕಳ್ಳಿ ಸಿಕ್ಕಿ ಬಿದ್ದಿದ್ದಾಳೆ. ಐಶ್ವರ್ಯ ರಜನಿಕಾಂತ್ ಅವರ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಹಾಗೂ ವಜ್ರದ ಉಡುಗೊರೆಯನ್ನು ದೋಚಿದ್ದಾರೆ ಎಂದು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಕಳ್ಳರ ಬೆನ್ನು ಹತ್ತಿದ್ದು, ಕೊನೆಗೂ ಕಳ್ಳರನ್ನು ಬಂಧಿಸಿದ್ದಾರೆ. ಚಿನ್ನಾಭರಣ ಇರುವ ವಿಚಾರ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಗೊತ್ತಿತ್ತು ಎಂದು ಐಶ್ವರ್ಯ ಅನುಮಾನ ವ್ಯಕ್ತ ಪಡಿಸಿದ್ದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ವಿಚಾರಿಸಿದಾಗ ಮನೆ ಕೆಲಸದಾಕೆ, ಕಾರು ಚಾಲಕನ ಸಹಾಯ ತೆಗೆದುಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರು ಚಾಲಕ ವೆಂಕಟೇಶಂ ಸೇರಿದಂತೆ ಮನೆಗೆಲಸದಾಕೆ ಈಶ್ವರಿಯನ್ನೂ ಇದೀಗ ಪೊಲೀಸರು ಬಂಧಿಸಿದ್ದಾರೆ.

Read More

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಭಾನುವಾರದಿಂದ ಸಲ್ಲು ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಸಲ್ಮಾನ್ ಗೆ ಸೂಚನೆ ನೀಡದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ. ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ…

Read More

ಬಾಲಿವುಡ್ ಬ್ಯೂಟಿ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ಸೌಂದರ್ಯ ಹಾಗೂ ನಟನೆಯಿಂದಲೇ ಬಾಲಿವುಡ್ ಜೊತೆಗೆ ಸ್ಯಾಂಡಲ್ ವುಡ್ ಅಭಿಮಾನಿಗಳ ಮನ ಗೆದ್ದ ನಟಿ. ಇದೀಗ ಟಿ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಈಗಾಗ್ಲೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ಇದೀಗ ಮತ್ತೆ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. 17 ವರ್ಷಗಳ ಬಳಿಕ ಧೃವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಟನೆಯ ಡಿಕೆ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ನಟನೆಯ ಡಿಕೆ ಸಿನಿಮಾದ ಶಿಲ್ಪಾ ಶೆಟ್ಟಿ ಲುಕ್ ರಿವೀಲ್ ಆಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಾಮ್ರಾಜ್ಯದಲ್ಲಿ ಸತ್ಯವತಿ ಪಾತ್ರವನ್ನ ಶಿಲ್ಪಾ ಶೆಟ್ಟಿ ನಿರ್ವಹಿಸಿದ್ದಾರೆ. ಈ ಬಗ್ಗೆ ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ಕೆಡಿ ಚಿತ್ರಕ್ಕೆ ಮಹಾರಾಣಿ ಸತ್ಯವತಿ ಬರ್ತಾಳೆ ಅಂತಲೇ ಹೇಳಿದ್ದರು. ಡಿಕೆ ಸಿನಿಮಾದಲ್ಲಿ ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಈ…

Read More