ಕಾಂಚಿಪುರಂ: ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಕುರುವಿಮಲೈ ಗ್ರಾಮದಲ್ಲಿನ ಪಟಾಕಿ ಗೋದಾಮಿನಲ್ಲಿ ಇಂದು ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ 13 ಮಂದಿ ಗಾಯಗೊಂಡಿದ್ದು ಇವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಖಾಸಗಿ ಪಟಾಕಿ ಗೋದಾಮಿನಲ್ಲಿ ಒಟ್ಟು 30 ಕಾರ್ಮಿಕರು ಕೆಲಸ ಮಾಡುತ್ತಿದ್ದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಇದುವರೆಗೂ ಸ್ಪೋಟಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಫೋಟದ ತೀವ್ರತೆಗೆ ಗೋದಾಮಿನ ಕಟ್ಟಡ ಕುಸಿದು ಬಿದ್ದಿದ್ದು, ಗೋದಾಮಿನಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಣೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋದಾಮಿನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ತನಿಖೆ ಮಾಡಲಾಗುತ್ತಿದೆ.
Author: Prajatv Kannada
ನವದೆಹಲಿ: ದೇಶದಲ್ಲಿ ಸಾಂಕ್ರಾಮಿಕ ಕೋವಿಡ್ ಪ್ರಕರಣ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದ್ದು, ಇಂದು ಸಂಜೆ 4.30ಕ್ಕೆ ಸರಿಯಾಗಿ ಉನ್ನತ ಅಧಿಕಾರಿಗಳಿಂದ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದಿದೆ. ಸಭೆಯಲ್ಲಿ ಕೋವಿಡ್ ಪ್ರಕರಣಗಳ ತಡೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪ್ರಧಾನಿ ಮೋದಿ ಅವಲೋಕನ ಮಾಡಲಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದೇಶದಲ್ಲಿ ಬುಧವಾರ ಹೊಸದಾಗಿ 1,134 ಕೋವಿಡ್ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,026ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ನವದೆಹಲಿ: ದೆಹಲಿ ಅಬಕಾರಿ ನೀತಿ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಿಂದ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನುಇಲ್ಲಿನ ವಿಶೇಷ ನ್ಯಾಯಾಲಯವು 2 ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ವಿಶೇಷ ನ್ಯಾಯಮೂರ್ತಿ ಎಂ.ಕೆ ನಾಗಪಾಲ್ ಅವರು, ಸಿಸೋಡಿಯಾ ಅವರನ್ನು ಏಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ವಿಚಾರಣೆ ವೇಳೆ ಸಿಸೋಡಿಯಾ ಪತಿ ಅನಾರೋಗ್ಯ ಪೀಡಿತೆಯಾಗಿದ್ದು, ಅವರನ್ನು ನೋಡಿಕೊಳ್ಳಬೇಕಾಗಿದೆ. ಪುತ್ರ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಸಿಸೋಡಿಯಾ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಸಿಸೋಡಿಯಾ ಅವರು ಸರ್ಕಾರ ಉನ್ನತ ಸ್ಥಾನದಲ್ಲಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ ಹೀಗಾಗಿ ಜಾಮೀನು ನೀಡಬಾರದು ಎಂದು ಆಗ್ರಹಿಸಿದರು. ಇದೀಗ ಸಿಸೋಡಿಯಾ ಅವರನ್ನು 2 ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನವದೆಹಲಿ: ಯುಗಾದಿ ಹಬ್ಬದಂದು ದೆಹಲಿ ಸರ್ಕಾರ ₹ 78,800 ಕೋಟಿ ಗಾತ್ರದ ಭಾರಿ ಬಜೆಟ್ ಮಂಡನೆ ಮಾಡಿದೆ. ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಮೂಲಸೌಕರ್ಯಕ್ಕೆ ₹22,000, ಶಿಕ್ಷಣಕ್ಕೆ ₹ 16 ಸಾವಿರ ಕೋಟಿ, ಆರೋಗ್ಯಕ್ಕೆ ₹ 9 ಸಾವಿರ ಕೋಟಿ, ಜಾಹೀರಾತುಗಳಿಗೆ ₹ 550 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಲದ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದರು. ಮಂಗಳವಾರವೇ ಬಜೆಟ್ ಮಂಡಣೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಬಜೆಟ್ ಮಂಡನೆ ಒಂದು ದಿನ ವಿಳಂಬವಾಯಿತು. ಬಜೆಟ್‌ನಲ್ಲಿನ ಮೂಲಸೌಕರ್ಯ, ಜಾಹೀರಾತು ಮತ್ತು ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯ ದೆಹಲಿ ಬಜೆಟ್‌ಗೆ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಕಳವಳಗಳನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಪರಿಹರಿಸಿದ ನಂತರ ಬಜೆಟ್ ಮಂಡಿಸುವ ದಾರಿ ಸುಲಭವಾಗಿದೆ.
ಟೋಕಿಯಾ: ಜಪಾನ್ ಪ್ರಧಾನಿ ಫೆಮಿಯೊ ಕಿಶಿದಾ ಉಕ್ರೇನ್‌ಗೆ ಭೇಟಿ ನೀಡಿದ್ದು, ಕೀವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಜಿ-7 ನಾಯಕರು ಜತೆ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಜನರು ತೋರಿದ ಧೈರ್ಯ ಮತ್ತು ಪರಿಶ್ರಮಕ್ಕೆ ಗೌರವ ಸಲ್ಲಿಸಿರುವ ಕಿಶಿದಾ, ಉಕ್ರೇನ್‌ಗೆ ಸಕಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಭರವಸೆ ನೀಡಿರುವುದಾಗಿ ಎಂದು ಜಪಾನ್‌ನ ವಿದೇಶಾಂಗ ಸಚಿವಾಲಯದ ಮಾಹಿತಿ ನೀಡಿದೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಕಿಶಿದಾ, ಮೋದಿ ಅವರನ್ನು ಭೇಟಿ ಮಾಡಿ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶವನ್ನು ಮುಕ್ತ ಹಾಗೂ ಸ್ವತಂತ್ರವಾಗಿರಿಸುವ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದರು. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿರುವ ದೇಶಗಳ ಆರ್ಥಿಕತೆಗೆ (ಕಾರ್ಖಾನೆ ಸ್ಥಾಪನೆಯಿಂದ ವಿಪತ್ತು ತಡೆವರೆಗೆ) ಸಹಾಯ ಮಾಡುವ ಉದ್ದೇಶದಿಂದ 75 ಬಿಲಿಯನ್ ಡಾಲರ್‌ನಷ್ಟು (ಅಂದಾಜು 6.15 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ತಿಳಿಸಿದ್ದ ಕಿಶಿದಾ, ನಮ್ಮ ಗುರಿಯನ್ನು ತಲುಪುವಲ್ಲಿ ಭಾರತವು ಮುಖ್ಯವಾದ ಪಾತ್ರವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ‘ಭಾರತ-ಜಪಾನ್‌ನ ಪಾಲುದಾರಿಕೆಯು…
ಇಸ್ಲಾಮಾಬಾದ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಗಳವಾರ ರಾತ್ರಿ ದೆಹಲಿ-ಎನ್ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಭೂಕಂಪದಿಂದ ಪ್ರಬಲವಾದ ಕಂಪನಗಳು ಸಂಭವಿಸಿದ್ದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಬಹುಭಾಗವನ್ನು ತಲ್ಲಣಗೊಂಡಿದೆ. ಇದರಿಂದ ಭಯಭೀತರಾದ ನಿವಾಸಿಗಳು ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಜನರನ್ನು ಆಘಾತದ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ಕರೆತರಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ಅಸೋಸಿಯೇಟೆಡ್ ಪ್ರೆಸ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಗೆ ತಮ್ಮ ಪಕ್ಷದಲ್ಲಿಯೇ ವಿರೋಧಿಗಳಿದ್ದು, ಅವರೇ ತಮ್ಮನ್ನ ಸೋಲಿಸುವ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪದ್ಮನಾಭನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ನಲ್ಲಿ ಶಾಸಕಾಂಗ ನಾಯಕ, ವಿಪಕ್ಷ ನಾಯಕರಿಗೆ ಕ್ಷೇತ್ರ ಸಿಗದ ಸ್ಥಿತಿ ನಿರ್ಮಾಣ ಆಗಿದೆ. ವಿಪಕ್ಷ ನಾಯಕರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅಂತ ಚರ್ಚೆ ಆಗುತ್ತಿದೆ. ರಾಷ್ಟ್ರೀಯ ಪಕ್ಷ, ಆ ಪಕ್ಷದ ಲೀಡರ್ ಅನ್ನು ಈ ಪರಿಸ್ಥಿತಿಗೆ ದೂಡಿದೆ ಅಂತ ಲೇವಡಿ ಮಾಡಿದ್ರು. ಸಿದ್ದರಾಮಯ್ಯ (Siddaramaiah) ಗೆ ವಿರೋಧ ಪಕ್ಷಕ್ಕಿಂತ ಅವರ ಪಕ್ಷದವರೇ ವಿರೋಧಿಗಳು ಇದ್ದಾರೆ. ಅದಕ್ಕೆ ಅವರಿಗೂ ಆತಂಕ ಆಗಿದೆ. ಸಿದ್ದರಾಮಯ್ಯಗೆ ಅವರ ಪಕ್ಷದಲ್ಲಿ ವಿರೋಧಿಗಳು ಇದ್ದಾರೆ. ಆ ವಿರೋಧಿ ಟೀಂ ಸಿದ್ದರಾಮಯ್ಯ ಅವರನ್ನು ಮುಗಿಸುವ ಭಯ ಅವರಿಗೆ ಕಾಡುತ್ತಿದೆ. ಹೀಗಾಗಿ ಕ್ಷೇತ್ರದ ಗೊಂದಲ ಇದೆ. ಆದರೆ ನಮಗೆ ಅಂತಹ ಗೊಂದಲ ಇಲ್ಲ. 123 ಗುರಿಗೆ ಬೇಕಾದ ಅಭ್ಯರ್ಥಿಗಳು ನಮಗೆ…
ಬಾಲಿವುಡ್ ಕ್ವೀನ್ ಬ್ಯೂಟಿ ನಟಿ ಕಂಗನಾ ರಣಾವತ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿದ್ದಾರೆ. ಕಂಗನಾ ತಾವು ದುಡಿದ ಹಣವೆಲ್ಲವನ್ನೂ ಎಮರ್ಜೆನ್ಸಿ ಚಿತ್ರದ ಮೇಲೆ ಹೂಡಿಕೆ ಮಾಡಿದ್ದಾರೆ. ಸದ್ಯ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನದ ಕುರಿತು ಸಿದ್ಧವಾದ ‘ತಲೈವಿ’ ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರದ ಹಂಚಿಕೆದಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 6 ಕೋಟಿ ರೂಪಾಯಿ ನೀಡುವಂತೆ ಕೇಳಿದ್ದಾರೆ. ನಟಿ ಹಾಗೂ ರಾಜಕಾರಣಿಯಾಗಿ ಯಶಸ್ಸು ಕಂಡಿದ್ದ ಜಯಲಲೀತಾ ಅವರ ಜೀವನದಲ್ಲಿ ಸಾಕಷ್ಟು ಏಳಬೀಳುಗಳು ಇದ್ದವು. ಇದನ್ನೇ ತಲೈವಿ ಹೆಸರಿನಲ್ಲಿ ಸಿನಿಮಾ ಮಾಡಲಾಗಿದ್ದು ನಟಿ ಕಂಗನಾ ರಾಣವತ್ ನಟಿಸಿದ್ದರು. 2021ರ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ಚಿತ್ರ ಹಿಂದೇಟು ಹಾಕಿತ್ತು. ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ‘ತಲೈವಿ’ ಹಂಚಿಕೆದಾರರು 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ. ಡಿಸ್ಟ್ರಿಬ್ಯೂಷನ್ ಕಂಪನಿ ‘ತಲೈವಿ’ ನಿರ್ಮಾಪಕರಿಗೆ…
ಹುಬ್ಬಳ್ಳಿ: ಯುಗ ಎಂದರೆ ಹೊಸ, ಆದಿ ಎಂದರೆ ಆರಂಭ. ಒಂದು ಹೊಸ ಪರ್ವದ ಆರಂಭ ಎಂದೂ ಈ ಹಬ್ಬವನ್ನು ಕರೆಯಲಾಗುತ್ತದೆ. ಸಂವತ್ಸರದಿ ಯುಗಾದಿ ಎಂದು ಕರೆಯಲ್ಪಡುವ ಈ ಹಬ್ಬ ರೈತರ ಪಾಲಿಗೂ ವಿಶೇಷ ದಿನ. ಹೊಸ ಬೆಳೆಯ ಖುಷಿಯಲ್ಲಿಯೂ ಈ ಹಬ್ಬದ ಸಂಭ್ರಮ ರೈತಾಪಿ ವರ್ಗದಲ್ಲಿ ಇಮ್ಮಡಿಯಾಗಿರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಲಾಗುತ್ತದೆ. ಈ ಯುಗಾದಿ ಹಬ್ಬದಂದು ಸೂರ್ಯೋದಯದ ನಂತರ ಪ್ರಾರಂಭವಾಗುವ ದಿನವನ್ನು ಭಾರತದ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ.ಯುಗಾದಿ ಹಬ್ಬವು ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ನಂತರ ಅಮಾವಾಸ್ಯೆಯ ದಿನದಂದು ಪ್ರಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ರೈತರು ಟ್ರ್ಯಾಕ್ಟರ್ ಮತ್ತು ಎತ್ತುಗಳ ತೆಗೆದುಕೊಂಡು ಹೋಗಿ ಸೂರ್ಯ ಉದಯವಾಗುವ ಸಮಯದಲ್ಲಿ ಭೂತಾಯಿಗೆ ನಮಸ್ಕರಿಸಿ ಹೊಲ ಹುಳುವುದು ವಾಡಿಕೆ ಇರುತ್ತದೆ ಅದರಂತೆ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಉಳಿಮೆ ಮಾಡುತ್ತಾನೆ. ರೈತರಿಗೆ ಇವತ್ತಿನಿಂದ ಹೊಸ ವರ್ಷದ ಯುಗಾದಿ ದಿನ ಪಾಡ್ಯದ ದಿನದಂದು…
ಯಾದಗಿರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Election) ಕಾವು ರಂಗೇರುತ್ತಿದ್ದಂತೆ, ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಕೊಂಡು, ಮತದಾರರ ಓಲೈಕೆ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಯಾದಗಿರಿಯ (Yadagiri) ಸುರಪುರದ ಬಿಜೆಪಿ (BJP) ಶಾಸಕ ರಾಜೂಗೌಡ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆಯಲ್ಲಿ ಮುಸ್ಲಿಂ ಟೋಪಿ ಧರಿಸುವ ಮೂಲಕ, ಮತಗಳ ಓಲೈಕೆ ಮಾಡಲು ಶುರುಮಾಡಿದ್ದಾರೆ. ಇಡೀ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಒಡನಾಟ ಇಟ್ಕೊಂಡಿರುವ ಶಾಸಕ ರಾಜೂಗೌಡ (Raju Gowda), ಭಾವೈಕ್ಯತೆ ಮೆರೆಯುವ ಮೂಲಕ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಲಾಲ್ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜೂಗೌಡ ಕೋಮು ಸೌಹಾರ್ದತೆಯ ಸಂದೇಶ ಸಾರಿದರು. ತಾವು ಮುಸ್ಲಿಂ ಟೋಪಿ ಧರಿಸಿ, ಮುಸ್ಲಿಂ ಸಮುದಾಯದವರಿಗೆ ಕೇಸರಿ ಶಾಲು ಹೊದಿಸಿ ಭ್ರಾತೃತ್ವ ಭಾವನೆ ಮೆರೆದ ಶಾಸಕ ರಾಜೂಗೌಡ, ನಾನೊಬ್ಬ ಹಿಂದೂ ಆಗಿ ಮುಸ್ಲಿಂ ಟೋಪಿ ಹಾಕೊಳ್ಳುತ್ತೇನೆ. ನನ್ನ ಪಕ್ಕದಲ್ಲಿರುವ ಮುಸ್ಲಿಂ ಸ್ನೇಹಿತ ಒಬ್ಬ ಮುಸ್ಲಿಂ ಆಗಿ ಕೇಸರಿ ಶಾಲು…