Author: Prajatv Kannada

ಮಡಿಕೇರಿ: ವಿವಾಹಿತೆಯ ಮೇಲೆ ತಡರಾತ್ರಿ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಬಿಳಿಗೆರೆ (Biligere)  ಗ್ರಾಮದಲ್ಲಿ ನಡೆದಿದೆ. 19 ವರ್ಷದ ವಿವಾಹಿತೆ ರಾತ್ರಿ 9:30ರ ವೇಳೆಗೆ ಮನೆ ಮುಂಭಾಗದಲ್ಲಿ ಪೋನ್‌ನಲ್ಲಿ (Phone) ಮಾತಾನಾಡುತ್ತಿದ್ದಳು. ಈ ಸಂದರ್ಭ ಆಟೋದಲ್ಲಿ (Auto Rickshaw) ಬಂದಿಳಿದ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ನಂದಿಮೊಟ್ಟೆಯ ರಾಜ, ಹಟ್ಟಿಹೊಳೆಯ ನೌಶದ್, ಇಗ್ಗೋಡ್ಲಿನ ಫಾರೂಕ್ ಎಂಬವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಬಲತ್ಕಾರವಾಗಿ ಯುವತಿಯನ್ನು ಕಾಫಿತೋಟದೊಳಗೆ ಎಳೆದೊಯ್ಯುತ್ತಿದ್ದ ಸಂದರ್ಭ ಯುವತಿ ಜೋರಾಗಿ ಕಿರುಚಲಾರಂಭಿಸಿದಳು. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು ಭಯಭೀತರಾಗಿ ಕೂಡಲೇ ಸ್ಥಳೀಯರಿಗೆ ಹಾಗೂ ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಮುಖರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಈ ದುಷ್ಕೃತ್ಯದಲ್ಲಿ…

Read More

ಕಾರವಾರ: ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಗೆ ಹಿಂದಿನಿಂದ ಬಾಕ್ಸೈಟ್ ಅದಿರು ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಏಳು ಲಕ್ಷ ಮೌಲ್ಯದ ಗೋವಾ (Goa) ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದು ನಾಶವಾದ ಘಟನೆ ಅಂಕೋಲ (Ankola) ತಾಲೂಕಿನ ತೊಡೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಗೋವಾದಿಂದ ಪಾಂಡಿಚೆರಿಗೆ (Pondicherry) ಕೊಂಡೊಯ್ಯುತಿದ್ದ ಗೋವಾ ಮದ್ಯದ ಲಾರಿಗೆ ಮಂಗಳೂರು (Mangaluru) ಕಡೆ ತೆರಳುತಿದ್ದ ಬಾಕ್ಸೈಟ್ (Bauxite) ಅದಿರು ತುಂಬಿದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ಸಹಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ: ನ್ಯೂಯಾರ್ಕ್‍ನ ಜೆಎಫ್‍ಕೆ ವಿಮಾನ ನಿಲ್ದಾಣದಿಂದ ದೆಹಲಿಗೆ (Delhi) ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಜಿರಳೆಗಳು (Cockroaches) ಕಾಣಿಸಿಕೊಂಡಿದ್ದು, ಈ ಫೋಟೋವನ್ನು ಪ್ರಯಾಣಿಕನೊಬ್ಬರು ಹಂಚಿಕೊಂಡು ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆ ಫೋಟೋವನ್ನು ಶೇರ್ ಮಾಡಿಕೊಂಡು ಕೆಟ್ಟ ಅನುಭವ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಏನಿದೆ?: ವಿಶ್ವಸಂಸ್ಥೆಯ ರಾಜತಾಂತ್ರಿಕನಾದ್ದರಿಂದ ನಾನು ವಿಶ್ವಾದ್ಯಂತ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದರೆ ಏರ್‍ಇಂಡಿಯಾದಲ್ಲಿ ದೆಹಲಿಗೆ ಬರುವಾಗ ಕೆಟ್ಟ ಅನುಭವವಾಗಿದ್ದು, ಸೀಟುಗಳು ಮುರಿದಿದ್ದು, ಯಾವುದೇ ಮನೋರಂಜನೆಯಿರಲಿಲ್ಲ, ಜೊತೆಗೆ ಜಿರಳೆಗಳು ಕಾಣಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಟ್ಟ ಅನುಭವಕ್ಕೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಬುಕಿಂಗ್ ವಿವರಗಳನ್ನು ನೀಡುವಂತೆ ಮನವಿ ಮಾಡಿದ್ದು, ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದೆ. ಈ ಪೋಸ್ಟ್‌ಗೆ ಓರ್ವ ಕಾಮೆಂಟ್ ಮಾಡಿದ್ದು, ಹೆಚ್ಚಾಗಿ ಪ್ರಯಾಣಿಕರು ತರುವ ಕ್ಯಾರಿ ಆನ್ ಬ್ಯಾಗ್‍ಗಳ ಮೂಲಕ ಜಿರಳೆಗಳನ್ನು ಬರುತ್ತದೆ. ಇದರ ಬಗ್ಗೆ ಏರ್ ಇಂಡಿಯಾ…

Read More

ನವದೆಹಲಿ: ಭಾರತದಲ್ಲಿ ಯುಗಾದಿ (Ugadi) ಎಂದರೆ ಹೊಸ ಯುಗದ ಆರಂಭ ಎಂದರ್ಥ. ಇಂದು (ಮಾ.22) ಭಾರತದೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ-ಮನಗಳಲ್ಲಿ ಸಂಭ್ರಮವೋ ಸಂಭ್ರಮ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಡಿನ ಜನತೆಗೆ ಕನ್ನಡದಲ್ಲೇ ಟ್ವೀಟ್ (Tweet) ಮಾಡಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ಜನರು ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಈ ದಿನ ಬೇವು-ಬೆಲ್ಲವನ್ನು ಎಲ್ಲರಿಗೂ ಹಂಚಲಾಗುತ್ತದೆ. ಇದು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟ ಹಂತವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು…

Read More

ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಇವುಗಳು ಗುರಿ ಇಟ್ಟು ಬೆನ್ನಟ್ಟಿದರೆ ತನ್ನ ಪ್ರಯತ್ನದಲ್ಲಿ ವಿಫಲವಾಗುವುದೇ ಅಪರೂಪ. ಅಷ್ಟರಮಟ್ಟಿಗೆ ನಿಖರವಾಗಿ ಮತ್ತು ಅಷ್ಟೇ ಶಕ್ತಿಯುತವಾಗಿ ಇವುಗಳು ವ್ಯೂಹವನ್ನು ರಚಿಸುತ್ತವೆ. ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ದೃಶ್ಯಗಳು ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಒಂದು ಕ್ಷಣ ನಮ್ಮ ಹುಬ್ಬೇರಿಸುವಂತೆಯೂ ಮಾಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಹಿಮಚಿರತೆಯೊಂದರ ಬೇಟೆಯ ದೃಶ್ಯ ನಮ್ಮನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತೆ ಮಾಡುತ್ತದೆ. ಈ ಬೇಟೆಯ ಕ್ಷಣ ಅದೆಷ್ಟು ರೋಚಕವಾಗಿದೆ ಎಂದರೆ `ಮುಂದೇನಾಗುವುದು’ ಎಂದು ಒಂದು ಕ್ಷಣ ಉಸಿರು ಬಿಗಿಹಿಡಿದು ನೋಡುವಂತೆ ಕ್ಷಣ ಸೃಷ್ಟಿಯಾಗುತ್ತದೆ.

Read More

ಹುಬ್ಬಳ್ಳಿ- ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವ ಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ. ಹೌದು! ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ. ಮಳೆ ಹೇಗಿದೆ ಹಾಗೂ ಯಾವ ಬೆಳೆಗೆ ಬೆಲೆ ಸಿಗುತ್ತದೆ ಎಂಬುದನ್ನೂ ಇವರ ನಿರ್ಧರಿಸುತ್ತಾರೆ. ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಯಾಗಬಹುದು ಎಂದು ಊಹಿಸಲಾಗಿದೆ. ಸದ್ಯ ಬಸವರಾಜ ಬೊಮ್ಮಾಯಿ…

Read More

ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಮನೆಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು. ನಗರದ ವಾರ್ಡಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಯೋಜನೆಗಳ ಗೃಹಜ್ಯೋತಿ ಪ್ರತಿ ತಿಂಗಳ 200 ಯೂನಿಟ್ ಹಾಗೂ ಗೃಹಲಕ್ಷ್ಮೀ ಪ್ರತಿ ಬಿ ಪಿ ಎಲ್ ಕುಟುಂಬಕ್ಕೆ ಪ್ರತಿ ತಿಂಗಳು 2000 ಸಾವಿರ ರೂ ಗಳು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹಗರಣಗಳಿಂದ ಜನರು ಬೇಸರಗೊಂಡಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವದು ಖಚಿತವೆಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಡಾ.ಪದ್ಮಜೀತ ನಾಡಗೌಡ ಪಾಟೀಲ. ಹೇಳಿದರು. ಬಿಜೆಪಿ ಸರ್ಕಾರ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದು ಜನರ ತೆರಿಗೆಯಲ್ಲಿ ಜನರ ಅಭಿವೃದ್ಧಿ ಬದಲಾಗಿ ತಾವೇ ಅಭಿವೃದ್ಧಿ ಹೊಂದಿ ಇಡೀ ರಾಜ್ಯವನ್ನೆ ಹಾಳು ಮಾಡುತ್ತಿದೆ.  ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆರ್ಶಿವದಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಶಂಕರ ಸೋರಗಾಂವಿ.ಮಾಳು ಹಿಪ್ಪರಗಿ. ಗಂಗಪ್ಪ ಮಂಟೂರ.ರವಿ ಬಾಡಗಿ.ಕುಮಾರ ಬಿಳ್ಳೂರ. ಸಂಜಯ ಅಮ್ಮನಿಗಿಮಠ. ಮಲ್ಲಿಕ ನದಾಫ.…

Read More

ಕಲಬುರಗಿ: ಬಿಸಿಲ ನಾಡಿನಲ್ಲಿ ಚುನಾವಣಾ ಕಾವು ತೀವ್ರಗೊಂಡಿದ್ದು, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಡಿಜಿಟಲ್ ಪ್ರಚಾರದ ಅಬ್ಬರ ಆರಂಭಿಸಿದ್ದು, ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ವಿಭಿನ್ನ ಮಾರ್ಗವನ್ನು ಅನುಸರಿಸಿ, ಜನಮನ ಸೆಳೆಯುತ್ತಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಸುಮಾರು 1,600 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೃಹತ್ ಡಿಜಿಟಲ್ ವಾಲ್ ಪೇಂಟಿಂಗ್ ಮಾಡಿಸಿದ್ದು, ತಮ್ಮ ಐದು ವರ್ಷಗಳ ರಿಪೋರ್ಟ್ ಕಾರ್ಡ್ ಜನರೆದುರು ಇಡುತ್ತಿದ್ದಾರೆ. ಇದಲ್ಲದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೈಗೊಂಡಿರುವ ಕೆಲಸಗಳನ್ನು ಜನರಿಗೆ ಡಿಜಿಟಲ್ ವಾಲ್ ಪೇಂಟಿಂಗ್ ಮೂಲಕ ಪ್ರಕಟಿಸಿ, ಅಭಿವೃದ್ಧಿಗಾಗಿ ಮತ ನೀಡಿ ಎಂದು ವಿನಂತಿಸುವ ವಿಭಿನ್ನ ಕಾರ್ಯಚಟುವಟಿಕೆ ಆರಂಭಿಸಿರುವ ಶಾಸಕ ಬಸವರಾಜ ಮತ್ತಿಮಡು ಜನಮನ ಸೆಳೆದಿದ್ದಾರೆ. ಗೆಲುವಿನತ್ತ ಸಾಗುತ್ತಿದ್ದಾರೆ.

Read More

ಆನೇಕಲ್ :ಶಾರ್ಟ್  ಸರ್ಕ್ಯೂಟ್ ನಿಂದ ಲಾರಿಗೆ ಕೆಇಬಿ ಲೈನ್ ತಗಲಿ ಸ್ಥಳದಲ್ಲೇ ಲಾರಿ ಡ್ರೈವರ್ ಮೃತಪಟ್ಟಿರುವ ಘಟನೆ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.. ತಮಿಳುನಾಡು ಮೂಲದ ರಾಜೇಂದ್ರನ್ ಸ್ಥಳದಲ್ಲಿ ಮೃತಪಟ್ಟ ದುರ್ದೈವಿ. ಬೆಳಗ್ಗೆ ಎಂ ಆರ್ ಎಫ್ ಟೈರ್  ಕಂಪನಿಗೆ  ಸಂಬಂಧಿಸಿದ ಲಾರಿಯಲ್ಲಿ ಟೈರನ್ನು ತುಂಬಿಕೊಂಡು  ಹೋಗುವಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯುತ್ ತಂತಿ ಲಾರಿ ಮೇಲೆ ಬಿದ್ದಿದೆ ಪರಿಣಾಮ ವಿದ್ಯುತ್ ಲೈನ್ ಡ್ರೈವರ್ ಗೆ ತಾಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಶೂ ಕಳ್ಳರ ಹಾವಳಿ ಹೆಚ್ಚಾಗಿದೆ. ಹತ್ತಾರು ಶೂಗಳು ಸುಲಭವಾಗಿ ಸಿಗುತ್ತೆ ಎಂಬ ಕಾರಣಕ್ಕೆ ಅಪಾರ್ಟ್ಮೆಂಟ್ ಗೆ ಲಗ್ಗೆ ಇಡುವ ಕಳ್ಳರು, ಬ್ಯಾಗ್ ಗಳಲ್ಲಿ ಬಟ್ಟೆಗಳನ್ನ ತಂದು ಶೂಗಳನ್ನ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರ ಭಾಗವಾಗಿ ನಗರದ ಹೆಚ್ ಎಸ್ ಆರ್ ಲೇಔಟ್ ನ ಅಪಾರ್ಟ್ಮೆಂಟ್ ಒಂದರಲ್ಲಿ ಘಟನೆ ಜರುಗಿದ್ದು, ದುಬಾರಿ ಶೂಗಳನ್ನೆ ಕಳ್ಳರು ಕದ್ದು ಎಸ್ಕೆಎಫ್ ಆಗಿದ್ದಾರೆ.  ಈ ಹಿನ್ನೆಲೆ ಸ್ಥಳೀಯ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ಅಪಾರ್ಟ್ಮೆಂಟ್ ನಿವಾಸಿಗಳು ದೂರು ನೀಡಿದ್ದು, ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಪತ್ತೆಗೆ  ಶೋಧ ಕಾರ್ಯ ಕೈಗೊಂಡಿದ್ದಾರೆ.

Read More