ಮುಂಬೈ: ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಯುಪಿ ವಾರಿಯರ್ಸ್ (UP Warriorz) ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ನೇರವಾಗಿ WPL ಫೈನಲ್ ಪ್ರವೇಶಿಸಿದೆ. ಮಂಗಳವಾರ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ನೇರವಾಗಿ ಫೈನಲ್ ಪ್ರವೇಶಿಸಿದೆ. ಕ್ರಮವಾಗಿ 2-3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತ್ತು. 139 ರನ್ ಗುರಿ ಪಡೆದ ಡೆಲ್ಲಿ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್ (Meg Lanning), ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು.…
Author: Prajatv Kannada
ಇಸ್ಲಾಮಾಬಾದ್: ಮುಂಬರುವ ಏಷ್ಯಾಕಪ್ ಕ್ರಿಕೆಟ್ (Aisa Cup 2023) ಟೂರ್ನಿಗೆ ಪಾಕಿಸ್ತಾನದಲ್ಲಿ ಭಾರತ ತಂಡ ಕ್ರಿಕೆಟ್ ಆಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವಕಾಶ ಮಾಡಿಕೊಡಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi) ಮನವಿ ಮಾಡಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ವೇಳೆ 2023ರ ಏಷ್ಯಾಕಪ್ ಟೂರ್ನಿ ಸಂಬಂಧ ಮಾತನಾಡಿದ ಅವರು, 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಕು. ಆ ಮೂಲಕ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 2023ರ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಆದರೆ ಕಳೆದ ವರ್ಷ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಅವರು, ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ನಡೆದರೆ, ಭಾರತ ತಂಡವನ್ನು ಕಳುಹಿಸುವುದಿಲ್ಲ ಎಂದಿದ್ದರು. ಆ ಮೂಲಕ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಏಷ್ಯಾ ಕ್ರಿಕೆಟ್ ಕೌನ್ಸಿಲ್…
ಚೆನ್ನೈ: ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ವಿಶಾಖಪಟ್ಟಣಂನಲ್ಲಿ ನಡೆದಿದ್ದ ಎರಡನೇ ಕಾದಾಟದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಿರುಗೇಟು ನೀಡಿತ್ತು. ಆ ಮೂಲಕ ಏಕದಿನ ಸರಣಿಯನ್ನು 1-1 ಸಮಬಲ ಕಾಯ್ದುಕೊಂಡಿತ್ತು. ಉಭಯ ತಂಡಗಳು ಬುಧವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸೆಣಸಲು ಸಜ್ಜಾಗುತ್ತಿವೆ. ಈ ಪಂದ್ಯ ಗೆದ್ದ ತಂಡ ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಡಿಮೆ ಮೊತ್ತದ ಪಂದ್ಯಗಳಾಗಿದ್ದರಿಂದ ಅಭಿಮಾನಿಗಳಿಗೆ ಹೆಚ್ಚಿನ ಮನೋರಂಜನೆ ಸಿಕ್ಕಿರಲಿಲ್ಲ. ಮುಂಬೈನಲ್ಲಿ 180ಕ್ಕೂ ಹೆಚ್ಚಿನ ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡ, ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಬಲದಿಂದ ಗೆಲುವು ಪಡೆದಿತ್ತು. ನಂತರ ವಿಶಾಖಪಟ್ಟಣಂನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದ್ದ ಆಸ್ಟ್ರೇಲಿಯಾ ತಂಡ, ಮಿಚೆಲ್ ಸ್ಟಾರ್ಕ್ (53ಕ್ಕೆ 5) ಅವರ ಮಾರಕ ಬೌಲಿಂಗ್ ದಾಳಿಯ…
ಬೆಂಗಳೂರು: ಯುಗಾದಿ (Ugadi) ಹಬ್ಬಕ್ಕೆ ರಾಜ್ಯದ ಜನರಿಗೆ ಗೋಲ್ಡ್ (Gold) ಶಾಕ್ ನೀಡಿದ್ದು, ಹತ್ತು ಗ್ರಾಂ ಚಿನ್ನದ ದರ 60 ಸಾವಿರ ಗಡಿ ದಾಟಿದೆ. ಆದರೆ ಸದ್ಯ ಹಳದಿ ಲೋಹದ ದರ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಬಂಗಾರ ಈಗ ಹತ್ತು ಗ್ರಾಂಗೆ 60 ಸಾವಿರ ಗಡಿ ದಾಟಿ ದಾಖಲೆ ಮಾಡಿದೆ. ಸದ್ಯ ಈ ದರ ಇಳಿಕೆ ಕಾಣುವ ಲಕ್ಷಣ ಕಾಣಿಸುತ್ತಿಲ್ಲ ಅನ್ನೋದು ಹಣಕಾಸು ತಜ್ಞರು ಅಂದಾಜು ಮಾಡಿದ್ದಾರೆ. ಚಿನ್ನದ ದರದ ಓಟ ನೋಡಿದ್ರೇ ಮುಂದಿನ ದಿನದಲ್ಲಿ ಶೇ 10-15ರಷ್ಟು ದರ ಏರಿಕೆ ಕಾಣುವ ಸಾಧ್ಯತೆ ಇದೆಯಂತೆ. ಅಂದರೆ ಹತ್ತು ಗ್ರಾಂ ಚಿನ್ನಕ್ಕೆ 70 ರಿಂದ 75 ಸಾವಿರಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಉಕ್ರೇನ್, ರಷ್ಯಾ ಯುದ್ಧದ ಪರಿಣಾಮ, ಹಾಗೂ ಅಮೆರಿಕಾದಲ್ಲಿ ಬ್ಯಾಕಿಂಗ್ ಬಿಕ್ಕಟ್ಟಿನಿಂದಾಗಿ ಚಿನ್ನದ ದರ ಈ ಮಟ್ಟಿಗೆ ಏರಿಕೆಯಾಗಿದೆ. ಸದ್ಯ ಯುದ್ಧ ಏನಾದ್ರೂ ಕೊನೆಗೊಂಡರೆ ಚಿನ್ನದ ದರ ಇಳಿಕೆ ಕಾಣಬಹುದು. ಇಲ್ಲದೇ ಇದ್ರೇ ಸದ್ಯಕ್ಕಂತೂ ಚೇತರಿಕೆ ಇಲ್ಲ ಎನ್ನುತ್ತಿದ್ದಾರೆ.…
ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣಬೇಕೆಂದು ಪ್ರಾರಂಭ ಮಾಡುವ ಹೊಸ ವರ್ಷವೇ ಯುಗಾದಿ. ಪ್ರಕೃತಿಯಲ್ಲೂ ಹೊಸತನ, ಹೊಸ ಚಿಗುರು ಮೊಳೆಯುವ ಈ ಕಾಲಕ್ಕೆ ದೇಹ, ಮನಸ್ಸನ್ನು ಹಗುರಗೊಳಿಸಬೇಕು. ಚೈತ್ರ ಮಾಸ ಪ್ರಾರಂಭವಾಗುತ್ತಲೇ ದೇಹಕ್ಕೆ ತಂಪು ಮಾಡಲು ವಿವಿಧ ರೀತಿಯ ಪಾನೀಯಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾನಕ, ಮಜ್ಜಿಗೆಗೆ ಬೇಡಿಕೆ ಹೆಚ್ಚು. ನಾವಿಂದು ಈ ವಿಶೇಷ ದಿನಕ್ಕೆ ತಂಪಾದ ಮಜ್ಜಿಗೆ ಹಾಗೂ ಪಾನಕದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಈ ಪಾನೀಯಗಳನ್ನು ಸವಿದು, ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಿ. ಪಾನಕ ಮಾಡಲು ಬೇಕಾಗುವ ಪದಾರ್ಥಗಳು: ಬೆಲ್ಲ – 2 ಕಪ್ ಏಲಕ್ಕಿ – 3 ಕಾಳು ಮೆಣಸು – 5 ಸಕ್ಕರೆ – ಒಂದು ಟೀಸ್ಪೂನ್ ಉಪ್ಪು – ಚಿಟಿಕೆ ಜೀರಿಗೆ ಪುಡಿ – ಅರ್ಧ ಟೀಸ್ಪೂನ್ ನಿಂಬೆಹಣ್ಣು – 1 ಪಾನಕ ಮಾಡುವ ವಿಧಾನ: * ಮೊದಲಿಗೆ ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ. * ಏಲಕ್ಕಿ, ಕಾಳು ಮೆಣಸು ಹಾಗೂ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ…
ಲಂಡನ್: ಇಂಗ್ಲಿಷ್ ಪರೀಕ್ಷಾ ಹಗರಣದ ನಂತರ ತಮ್ಮ ವೀಸಾಗಳನ್ನು ಅನ್ಯಾಯವಾಗಿ ಹಿಂತೆಗೆದುಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಾರತದ ಅನೇಕರನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಗುಂಪು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮನವಿ ಸಲ್ಲಿಸಿದೆ. ಈ ಸಂಗತಿ 2014 ರ ಹಿಂದಿನದ್ದಾಗಿದ್ದು, ಬಿಬಿಸಿಯ ‘ಪನೋರಮಾ’ ತನಿಖೆಯು ವೀಸಾಗಳಿಗೆ ಅಗತ್ಯವಿರುವ ಕಡ್ಡಾಯ ಭಾಷಾ ಪರೀಕ್ಷೆ ಹೊತ್ತಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದೆ. ಬ್ರಿಟನ್ ಸರ್ಕಾರವು ಅಂತಹ ಕೇಂದ್ರಗಳ ಮೇಲೆ ವ್ಯಾಪಕವಾದ ಶಿಸ್ತುಕ್ರಮ ಕೈಗೊಂಡಿದ್ದು ಆ ಕೇಂದ್ರಗಳೊಂದಿಗೆ ಸಂಬಂಧ ಹೊಂದಿದ್ದ ಹತ್ತಾರು ವಿದ್ಯಾರ್ಥಿಗಳ ವೀಸಾಗಳನ್ನು ಹಿಂತೆಗೆದುಕೊಂಡಿತ್ತು. ಸೋಮವಾರದಂದು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಸಲ್ಲಿಸಲಾದ ಇತ್ತೀಚಿನ ಮನವಿಯನ್ನು ಪ್ರಭಾವಿತ ವಿದ್ಯಾರ್ಥಿಗಳಿಗೆ ಮತ್ತು ಸಂಘಟಿಸಲು ಮೈಗ್ರೆಂಟ್ ವಾಯ್ಸ್ ಸ್ವಯಂಸೇವಕ ಗುಂಪು ಬೆಂಬಲಿಸುತ್ತಿದೆ. ಇದು ಸಮಕಾಲೀನ ಬ್ರಿಟಿಷ್ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಆರಂಭಿಕ ಸರ್ಕಾರದ ಪ್ರತಿಕ್ರಿಯೆಯು ಅನ್ಯಾಯವಾಗಿದೆ ಮತ್ತು ವರ್ಷಗಳವರೆಗೆ ಎಳೆಯಲು ಅನುಮತಿಸಲಾಗಿದೆ ಎಂದು ಮೈಗ್ರೆಂಟ್ ವಾಯ್ಸ್ ನಿರ್ದೇಶಕ ನಾಝೆಕ್ ರಮದಾನ್…
ಕೇರಳ: ಕೇರಳ (Kerala) ರಾಜ್ಯದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ (Transgender) ವಕೀಲರಾಗಿ (Lawyer) ಪದ್ಮಲಕ್ಷ್ಮಿ (Padma Lakshmi) ಅವರು ಆಯ್ಕೆಯಾಗಿದ್ದಾರೆ.ಈ ವಿಚಾರವನ್ನು ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ (P.Rajeev) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ ಮಂಗಳಮುಖಿಯರು ವಕೀಲ ವೃತ್ತಿಗೆ ಬರಲು ಸ್ಫೂರ್ತಿಯಾಗಲಿ ಎಂದು ಪಿ.ರಾಜೀವ್ ಆಶಯ ವ್ಯಕ್ತಪಡಿಸಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India), ಬಾರ್ ಎನ್‌ರೋಲ್‌ಮೆಂಟ್ (Bar Enrollment) ಪ್ರಮಾಣಪತ್ರವನ್ನು ಪಡೆದ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮಲಕ್ಷ್ಮಿಯವರು ಕೂಡಾ ಒಬ್ಬರು. ಇವರು ಎರ್ನಾಕುಲಂನ (Ernakulam) ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. ಭಾರತದ ಮೊದಲ…
ನಾಳೆಯಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆರಂಭವಾಗಲಿದೆ. ಬಾಹುಬಲಿ, ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಚಿತ್ರೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23 ರಿಂದ ಆರಂಭವಾಗಿ 30ನೇ ತಾರೀಖಿನವರೆಗೂ ನಡೆಯಲಿದೆ. ನೂರಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಂಬೈ: ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ಗರ್ಭ ಧರಿಸುವ ಪ್ರಕರಣಗಳು ಕಂಡುಬರುತ್ತಿವೆ. ಈ ನಡುವೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿರುವ ವರದಿ ನೋಡಿ ಜನ ಶಾಕ್ ಆಗಿದ್ದಾರೆ. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ 15,253 ಹದಿಹರೆಯದ ಹೆಣ್ಣುಮಕ್ಕಳು 18 ವರ್ಷ ಆಗುವ ಮೊದಲೇ ತಾಯಂದಿರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲಾಖೆಯು ಮೂರು ಸದಸ್ಯರನ್ನು ಒಳಗೊಂಡ ಸಮತಿ ರಚಿಸಿದ್ದು, ಸಮಿತಿ ನಡೆಸಿದ ತನಿಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು:73 ವರ್ಷದ ಮುಂಬೈನ (Mumbai) ಯೋಗೇಶ್ ಹೆಸರು ಬದಲಾಯಿಸಲಾಗಿದೆಅವರು ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಯಕೃತ್ತಿನ ಕಸಿ (Liver Transplant) ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ (Trustwell Hospitals) ಕಸಿ ಶಸ್ತ್ರಚಿಕಿತ್ಸಕರು, ಕಸಿ ಅರಿವಳಿಕೆ ತಜ್ಞರು ಮತ್ತು ತೀವ್ರತರವಾದ ತಜ್ಞರ ತಂಡವು ರೋಗಿಯನ್ನು ಬದುಕಿಸಲು ಸಂಕೀರ್ಣವಾದ ಯಕೃತ್ತಿನ ಕಸಿ ಮಾಡಿ ಇವರ ಬದುಕಿನಲ್ಲಿ ನೆಮ್ಮದಿಯ ನಗು ಮೂಡಿಸಿದರು. Liver TransplantLiver Transplant ಯೋಗೇಶ್ ಅವರನ್ನು ಮೊದಲು ಹಿರಿಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಅವರು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್ ಗೆ ಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್ ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ (Angiography) ಒಳಗಾಗಿದ್ದರು. ಈ ಎಲ್ಲಾ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು…